Tag: jaguar

  • ‘ಸೀರೆ ಬಿಚ್ಚಿ ಹೊಡಿತೀನಿ’ ಎಂದು ಮಹಿಳೆಗೆ ಅವಾಜ್: ಸೌಂದರ್ಯ ಜಗದೀಶ್ ಪುತ್ರ, ನಟ ಸ್ನೇಹಿತ್ ಮೇಲೆ ಕೇಸ್

    ‘ಸೀರೆ ಬಿಚ್ಚಿ ಹೊಡಿತೀನಿ’ ಎಂದು ಮಹಿಳೆಗೆ ಅವಾಜ್: ಸೌಂದರ್ಯ ಜಗದೀಶ್ ಪುತ್ರ, ನಟ ಸ್ನೇಹಿತ್ ಮೇಲೆ ಕೇಸ್

    ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish) ಅವರ ಪುತ್ರ, ಅಪ್ಪು ಪಪ್ಪು ಸಿನಿಮಾ ಖ್ಯಾತಿಯ ನಟ ಸ್ನೇಹಿತ್ (Snehith) ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ.  ಈ ಹಿಂದೆ ಎದುರು ಮನೆ ನಿವಾಸಿ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು ಎನ್ನುವ ಕಾರಣಕ್ಕಾಗಿ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಹೊತ್ತು ಸ್ಟೇಶನ್ ಮೆಟ್ಟಿಲು ಹತ್ತಿದ್ದರು. ಇದೀಗ ಮತ್ತೆ ಮಹಿಳೆಯೊಬ್ಬರಿಗೆ ನಿಂದಿಸಿದ ಕಾರಣಕ್ಕಾಗಿ ಎಫ್.ಐ.ಆರ್ ದಾಖಲಾಗಿದೆ.

    ಸೆಪ್ಟಂಬರ್ 24 ರಂದು ಸ್ನೇಹಿತ್ ನ ಎದುರು ಮನೆಯ ಮಹಿಳೆ ಅನ್ನಪೂರ್ಣ (Annapurna)  ತನ್ನ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ತನ್ನ ಜಾಗ್ವಾರ್ (Jaguar) ಕಾರಿನಲ್ಲಿ  ಬಂದ ಸ್ನೇಹಿತ್, ಮಹಿಳೆಯ ಕಾರಿಗೆ ಡಿಕ್ಕಿ ಹೊಡೆಯುವಂತೆ ಬಂದು ಚಮಕ್ ಕೊಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಅನ್ನಪೂರ್ಣ ಮತ್ತು ಅವರ ಪತಿ ಈ ವಿಚಾರಕ್ಕೆ ಪ್ರಶ್ನಿಸಿದ್ದಾರೆ. ತನ್ನನ್ನು ಪ್ರಶ್ನಿಸಿದರು ಎನ್ನುವ ಕಾರಣಕ್ಕಾಗಿ ಕೋಪಗೊಂಡ ಸ್ನೇಹಿತ್ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:`ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದು, ಅನ್ನಪೂರ್ಣ ಗೆ ಸೀರೆ ಬಿಚ್ಚಿ ಹೊಡಿತಿನಿ, ಇಲ್ಲಿಂದ ಹೋಗ್ತಾ ಇರು ಅಂತಾ ಸ್ನೇಹಿತ್ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಮಹಿಳೆಯರ ಪತಿಗೆ ಕಾರಿನಲ್ಲೇ ಹಲ್ಲೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಈ‌ ಹಿಂದೆ ಕೂಡ ಮನೆ ಬಳಿ‌ ಕಾರು ಪಾರ್ಕಿಂಗ್ ಮಾಡುವ ವಿಚಾರಕ್ಕೆ ಗಲಾಟೆ ನಡೆದು ಸ್ನೇಹಿತ್ ಮೇಲೆ ಎಫ್.ಐಆರ್ (FIR) ದಾಖಲಾಗಿತ್ತು. ನಿರ್ಮಾಪಕರೊಬ್ಬರ ಮಧ್ಯಸ್ಥಿಕೆಯಲ್ಲಿ ಪ್ರಕರಣ ರಾಜಿಯಾಗಿತ್ತು.  ಮನೆಯ ಮುಂಭಾಗ ಕಾರು ಕ್ಲೀನ್ ಮಾಡುವ ವೇಳೆ ಜಾತಿ ನಿಂದೆ ಮಾಡಿ ಅವಾಚ್ಯವಾಗಿ ನಿಂದನೆ ಮಾಡಿದ್ದಾರೆ ಅಂತಾ ಪ್ರತಿ ದೂರು ದಾಖಲಿಸಿದ್ದರು. ಮಹಾಲಕ್ಷ್ಮಿ ಲೇಔಟ್ ನಲ್ಲಿ ಎರಡು ಕಡೆಯವರಿಂದ ದೂರು ದಾಖಲಾಗಿ ಆನಂತರ ರಾಜಿ ಮಾಡಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • `ಜಾಗ್ವಾರ್’ ಒಡತಿಯಾದ ನಟಿ ಹರಿಪ್ರಿಯಾ!

    `ಜಾಗ್ವಾರ್’ ಒಡತಿಯಾದ ನಟಿ ಹರಿಪ್ರಿಯಾ!

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಂಗದಲ್ಲಿ ಕಾರುಗಳದ್ದೇ ಸುದ್ದಿ. ಮೊನ್ನೆ ಮೊನ್ನೆಯಷ್ಟೇ ನಟ ಯಶ್ ಮೂರು ಬೆಂಜ್ ಕಾರು ಖರೀದಿ ಮಾಡೋ ಮೂಲಕ ಸುದ್ದಿಯಾಗಿದ್ದು, ಇದೀಗ ನಟಿ ಹರಿಪ್ರಿಯಾ ಕೂಡ ಹೊಸ ಕಾರೊಂದರ ಒಡತಿಯಾಗಿದ್ದಾರೆ.

    ಹೌದು. ತನ್ನ ಹೊಸ ಜಾಗ್ವಾರ್ ಕಾರ್ ಜೊತೆ ತೆಗೆದುಕೊಂಡ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಂದು ನಾನು ಜಾಗ್ವಾರ್ ಕಾರಿನ ಒಡತಿಯಾಗಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಅಂತ ಬರೆದುಕೊಂಡಿದ್ದಾರೆ.

    ನಟ ಯಶ್ ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವಕ್ಕೆ ಮುದ್ದಿನ ಮಡದಿ ರಾಧಿಕಾ ಪಂಡಿತ್ ಹಾಗೂ ಹೆತ್ತವರಿಗೆ ಅಂತ ಒಟ್ಟು ಮೂರು ಬೆನ್ಜ್ ಕಾರ್ ಖರೀದಿ ಮಾಡೋ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದು ಅಚ್ಚರಿ ಮೂಡಿಸಿದ್ದರು. ಈ ಬೆನ್ನಲ್ಲೇ ನಟಿ ಹರಿಪ್ರಿಯಾ ಕೂಡ ಕಾರು ಖರೀದಿಸಿದ್ದಾರೆ.

    ಈ ಹಿಂದೆ ನಟ ಚೇತನ್ ಚಂದ್ರ ಕೂಡ ಹೊಸ ಕಾರಿನೊಂದಿಗೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಮ್ಮ ತಾಳ್ಮೆ ಹಾಗೂ ಪರಿಶ್ರಮಕ್ಕೆ ಸಿಕ್ಕ ಫಲ. ತಾವು ಕಷ್ಟಪಟ್ಟು ದುಡಿದ ಹಣದಲ್ಲಿ ಆಡಿ ಕಾರ್ ಕೊಂಡುಕೊಂಡಿರುವುದಾಗಿ ಸ್ಟೇಟಸ್ ಕೂಡ ಹಾಕಿದ್ದರು. ಇದನ್ನೂ ಓದಿ: ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಭರ್ಜರಿ ಗಿಫ್ಟ್- 3 ಬೆಂಜ್ ಕಾರುಗಳನ್ನು ಖರೀದಿಸಿದ ಯಶ್