Tag: Jagan

  • ಆಂಧ್ರ ಸಿಎಂ ವಿಲನ್ ಎನ್ನುವಂತೆ ಬಿಂಬಿಸಿದ್ದ ಚಿತ್ರಕ್ಕೆ ಬಿಡುಗಡೆ ಭಾಗ್ಯ

    ಆಂಧ್ರ ಸಿಎಂ ವಿಲನ್ ಎನ್ನುವಂತೆ ಬಿಂಬಿಸಿದ್ದ ಚಿತ್ರಕ್ಕೆ ಬಿಡುಗಡೆ ಭಾಗ್ಯ

    ರಾಜಧಾನಿ ಫೈಲ್ಸ್ ಚಿತ್ರ ತಂಡಕ್ಕೆ ನಿಟ್ಟುಸಿರಿಡುವಂತಹ ಸುದ್ದಿ ಸಿಕ್ಕಿದೆ. ಅಂದುಕೊಂಡಂತೆ ಆಗಿದ್ದರೆ ಇಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ರಿಲೀಸ್ ಮಾಡದಂತೆ ಕೋರ್ಟ್ ಮೆಟ್ಟಿಲು ಏರಿದ್ದರಿಂದ ಬಿಡುಗಡೆಗೆ ಹಿನ್ನೆಡೆ ಆಗಿತ್ತು. ಇದೀಗ ಸಿನಿಮಾ ರಿಲೀಸ್ ಮಾಡುವಂತಹ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ ಈ ವಾರ ರಾಜಧಾನಿ ಫೈಲ್ಸ್ ಸಿನಿಮಾ ರಿಲೀಸ್ ಆಗುತ್ತಿದೆ.

    ರಾಜ್ಯ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಆಂಧ್ರ ಪ್ರದೇಶದಲ್ಲಿ ಸಿನಿಮಾ ರಾಜಕಾರಣ ಕೂಡ ಅಷ್ಟೇ ವೇಗವನ್ನು ಪಡೆದುಕೊಳ್ಳುತ್ತಿದೆ. ಅಲ್ಲಿನ ರಾಜಕೀಯ ಮುಖಂಡರನ್ನು ಹೀರೋ, ವಿಲನ್ ರೀತಿಯಲ್ಲಿ ತೋರಿಸುವ ಮೂಲಕ ಸಿನಿ ರಾಜಕಾರಣಕ್ಕೆ ಮುಂದಾಗುತ್ತಿದ್ದಾರೆ ನಿರ್ದೇಶಕರು. ಈ ನಡೆಯನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲು ಕೂಡ ಹತ್ತಿದ್ದಾರೆ.

    ಇತ್ತೀಚೆಗಷ್ಟೇ ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರನ್ನು ಹೀರೋ ಆಗಿ ತೋರಿಸಿದ್ದ ಯಾತ್ರ 2 ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಜಗನ್ ವಿರೋಧಿಗಳನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗಿದೆ. ಚಂದ್ರ ಬಾಬು ನಾಯ್ಡು ವಿರುದ್ಧ ವ್ಯೂಹಂ ಚಿತ್ರ ರೆಡಿಯಾಗಿದೆ. ಅದು ಇನ್ನಷ್ಟೇ ಬಿಡುಗಡೆ ಆಗಬೇಕು. ಈ ನಡುವೆ ರಾಜಧಾನಿ ಫೈಲ್ಸ್ (Rajdhani Files) ಚಿತ್ರ ಸದ್ದು ಮಾಡಿತ್ತು.

    ರಾಜಧಾನಿ ಫೈಲ್ಸ್ ಸಿನಿಮಾದಲ್ಲಿ ನೇರವಾಗಿ ಜಗನ್ ಬಗ್ಗೆಯೇ ಮಾತನಾಡದೇ, ಜಗನ್ ಪಾತ್ರದ ಹೆಸರನ್ನು ಕೊಡಲಿ ನಾನಿ ಪಾತ್ರವಾಗಿಸಿದ್ದಾರೆ. ಸಚಿವೆ ರೋಜಾ ಪಾತ್ರವನ್ನೂ ಈ ಸಿನಿಮಾದಲ್ಲಿ ತರಲಾಗಿದೆ. ನಾನಿ ಮತ್ತು ಸಚಿವೆ ಕ್ಲಬ್ ಡಾನ್ಸ್ ಮಾಡುವಂತಹ ದೃಶ್ಯಗಳು ಇದರಲ್ಲಿ ಇವೆ ಎನ್ನುವುದು ಜಗನ್ ಪಕ್ಷದ ಆರೋಪ. ಹಾಗಾಗಿ ಈ ಸಿನಿಮಾವನ್ನು ರಿಲೀಸ್ ಮಾಡದಂತೆ ಜಗನ್ ಪಕ್ಷ ಕೋರ್ಟ್ ಮೆಟ್ಟಿಲು ಏರಿತ್ತು.

     

    ಜಗನ್, ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ರಾಜಕೀಯ ನಾಯಕರನ್ನು ಗುರಿಯಾಗಿರಿಸಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಇದರ ಉದ್ದೇಶ ರಾಜಕಾರಣ ಎನ್ನುವುದು ಸ್ಪಷ್ಟವಾಗಿದ್ದರೂ, ಸಿನಿಮಾ ಮೂಲಕ ರಾಜಕೀಯ ಕೆಸರೆರಿಚಾಟಕ್ಕೆ ತೊಡಗಿದ್ದು ದುರಂತ ಎನ್ನುತ್ತಾರೆ ಸಿನಿಮಾ ಮೇಕರ್ಸ್.

  • ಬಾಲಯ್ಯನ ಸಿನಿಮಾ ಪ್ರೀರಿಲೀಸ್ ಇವೆಂಟ್‌ಗೆ ಬ್ರೇಕ್ ಹಾಕಿದ ಸರ್ಕಾರ

    ಬಾಲಯ್ಯನ ಸಿನಿಮಾ ಪ್ರೀರಿಲೀಸ್ ಇವೆಂಟ್‌ಗೆ ಬ್ರೇಕ್ ಹಾಕಿದ ಸರ್ಕಾರ

    `ಅಖಂಡ’ (Akanda) ಸಿನಿಮಾದ ಸಕ್ಸಸ್ ನಂತರ `ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರದ ಮೂಲಕ ಬಾಲಯ್ಯ ಸದ್ದು ಮಾಡ್ತಿದ್ದಾರೆ. ಈ ಸಿನಿಮಾ ರಿಲೀಸ್ ಬೆನ್ನಲ್ಲೇ ಬಾಲಯ್ಯ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಈ ಚಿತ್ರದ ಪ್ರೀರಿಲೀಸ್‌ ಕಾರ್ಯಕ್ರಮಕ್ಕೆ ಸರ್ಕಾರ ಬ್ರೇಕ್‌ ಹಾಕಿದೆ.

    ಆಂಧ್ರ ಪ್ರದೇಶದಲ್ಲಿ ಸಿನಿಮಾ ಮತ್ತು ರಾಜಕೀಯ ಎರಡು ಒಟ್ಟಿಗೆ ಬೆರೆತು ಹೋಗಿದೆ. ಈಗ ರಾಜಕೀಯದವರು ಸಿನಿಮಾದವರ ವಿರುದ್ಧ ರಾಜಕೀಯ ಮಾಡ್ತಿದ್ದಾರೆ. ಸಿಎಂ ಜಗನ್ (Chief Minister Jagan) ಸರ್ಕಾರಕ್ಕೆ ಸಿನಿಮಾ ರಂಗದವರ ಮೇಲೆ ಅದೇನೋ ಸಿಟ್ಟಿದ್ದಂತಿದೆ. ಈ ಹಿಂದೆ ಪವನ್ ಕಲ್ಯಾಣ್ (Pawan Kalyan) ಅವರ ಸಿನಿಮಾಗಳ ವಿರುದ್ಧ ಸಮರ ನಡೆಸಿದ ಜಗನ್, ಈಗ ನಂದಮೂರಿ ಬಾಲಕೃಷ್ಣ ಚಿತ್ರದ ವಿರುದ್ಧ ತಮ್ಮ ರಾಜಕೀಯ ವರಸೆಗಳನ್ನು ಪ್ರಯೋಗಿಸುತ್ತಿದ್ದಾರೆ. ಟಿಡಿಪಿ ಪಕ್ಷದ ಶಾಸಕರೂ ಆಗಿರುವ ಬಾಲಯ್ಯ ಅವರ ಹೊಸ ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆ ರೆಡಿಯಾಗಿದೆ. `ಅಖಂಡ’ ಸೂಪರ್ ಸಕ್ಸಸ್ ನಂತರ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಂಧ್ರದಲ್ಲಿ ಜಗನ್ ಸರ್ಕಾರ ಅನುಮತಿ ನಿರಾಕರಿಸಿದೆ.

    ನಂದಮೂರಿ ಬಾಲಕೃಷ್ಣ ನಟನೆಯ `ವೀರ ಸಿಂಹ ರೆಡ್ಡಿ’  (Veera Simha Reddy) ಸಿನಿಮಾವು ಜನವರಿ 12ರಂದು ತೆರೆಗೆ ಬರಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಆಂಧ್ರದ ಒಂಗೋಲು ಪಟ್ಟಣದ ಎಬಿಎಂ ಗ್ರೌಂಡ್‌ನಲ್ಲಿ ಆಯೋಜಿಸಲು ಸಿನಿಮಾದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ (Mytri Movie Makers) ಸಿದ್ಧರಾಗಿದ್ದರು. ಕಳೆದ ಎರಡು ದಿನಗಳಿಂದ ಪ್ರೀರಿಲೀಸ್‌ಗಾಗಿ ಸಿದ್ಧತೆಯೂ ಭರದಿಂದ ಸಾಗಿತ್ತು. ಮೈದಾನವನ್ನು ಸಜ್ಜು ಮಾಡಲಾಗುತ್ತಿತ್ತು. ಭಾರಿ ಸಂಖ್ಯೆಯಲ್ಲಿ ಪಾಸುಗಳನ್ನು ಪ್ರಿಂಟ್ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ. ಇದನ್ನೂ ಓದಿ:ರೆಸಾರ್ಟ್‌ನಲ್ಲಿ ರೂಪೇಶ್- ಸಾನ್ಯ ಸಂಬಂಧ ಸ್ಟ್ರಾಂಗ್ ಆಯ್ತು: ರಾಕೇಶ್ ಅಡಿಗ

    ಸಿನಿಮಾ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯ ಅಭಿಮಾನಿಗಳು ಜಮಾಯಿಸುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಲಿದೆ ಎಂಬ ಕಾರಣ ನೀಡಿ, ಕಾರ್ಯಕ್ರಮಕ್ಕೆ ತಡೆ ನೀಡಲಾಗಿದೆ. ಇವೆಂಟ್ ಮಾಡಲು ಅಧಿಕಾರಿಗಳು ಬೇರೇ ಜಾಗವನ್ನು ಸೂಚಿಸಿದ್ದಾರೆ. ಈ ಎಲ್ಲಾ ಅಡೆತಡೆ ಮೀರಿ ಬಾಲಯ್ಯ ಸಿನಿಮಾ ಕಾರ್ಯಕ್ರಮ ನಡೆಯುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪವನ್ ಕಲ್ಯಾಣ್ ಒಂದು ಕೂದಲು ಸಹ ಕೀಳಲಾರ: ನಟಿ ರೋಜಾ ವಿವಾದಿತ ಮಾತು

    ಪವನ್ ಕಲ್ಯಾಣ್ ಒಂದು ಕೂದಲು ಸಹ ಕೀಳಲಾರ: ನಟಿ ರೋಜಾ ವಿವಾದಿತ ಮಾತು

    ಟ ಪವನ್ ಕಲ್ಯಾಣ್ ಬಗ್ಗೆ ಆಡಿದ ಮಾತಿನಿಂದಾಗಿ ನಟಿ ರೋಜಾ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದಾರೆ. ಇದು ಸಿನಿಮಾ ಸಂಬಂಧಿ ವಿಚಾರವಲ್ಲವಾದರೂ, ರೋಜಾ ಆ ರೀತಿಯಲ್ಲಿ ಮಾತನಾಡಬಾರದಿತ್ತು ಎನ್ನುವ ಮಾತು ತೆಲುಗು ಸಿನಿಮಾ ರಂಗದಲ್ಲಿ ಕೇಳಿ ಬಂದಿದೆ. ಅಷ್ಟಕ್ಕೂ ರಾಜಕಾರಣಿಯಾಗಿ ರೋಜಾ ಮಾತನಾಡಿದ್ದರೂ, ಕೀಳುಮಟ್ಟದ ಭಾಷೆಯಲ್ಲಿ ಒಬ್ಬ ಹೆಸರಾಂತ ನಟನನ್ನು ಜರಿಯುವುದು ಸರಿ ಅಲ್ಲ ಎಂದು ಹಲವರು ಕಿವಿ ಮಾತು ಕೂಡ ಹೇಳಿದ್ದಾರೆ.

    ಜಗನ್ ಸರಕಾರದ ವಿರುದ್ಧ ಪವನ್ ಕಲ್ಯಾಣ್ ತೊಡೆತಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರೋಜಾ, ‘ಜಗನ್ ವಿಚಾರದಲ್ಲಿ ಪವನ್ ಕಲ್ಯಾಣ್ ಒಂದು ಕೂದಲನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘ಏನೇ ಅರಚಾಡಿದರೂ ಜಗನ್ ಅವರನ್ನು ಏನೂ ಮಾಡಲು ಆಗುವುದಿಲ್ಲ. ಪವನ್ ಕಲ್ಯಾಣ್ ಅವರು ನಾಲಿಗೆಯನ್ನು ಹಿಡಿದಿಟ್ಟುಕೊಂಡು ಮಾತನಾಡಬೇಕು. ಜಗನ್ ಅವರನ್ನು ಮುಟ್ಟುವುದಲ್ಲ, ಅವರ ಕಾಲಿನ ಕಿರುಬೆರಳಿನಲ್ಲಿರುವ ಕೂದಲನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ ರೋಜಾ. ಇದನ್ನೂ ಓದಿ: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್

    ಇಪ್ಪಟಂ ಗ್ರಾಮದಲ್ಲಿ ಹಾದು ಹೋಗಿರುವ ಹೈವೆ ಸಂಬಂಧಿಸಿದ ವಿಚಾರವಾಗಿ ಪವನ್ ಗರಂ ಆಗಿದ್ದಾರೆ. ಆ ಗ್ರಾಮದ ರೈತರ ಪರವಾಗಿ ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ. ಈ ಹೋರಾಟ ಜಗನ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಶಾಸಕಿ ಆಗಿರುವ ರೋಜಾ, ತಮ್ಮ ಸರಕಾರದ ಬಗ್ಗೆ ಸಲ್ಲದ ಆರೋಪವನ್ನು ಪವನ್ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅಂತಹ ಮಾತುಗಳನ್ನು ಆಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಲಿಂದ ಕುಡಿಕೆಯೊದ್ದ ರಾಣಾ: ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಿರುದ್ಧ ದೂರು ದಾಖಲು

    ಕಾಲಿಂದ ಕುಡಿಕೆಯೊದ್ದ ರಾಣಾ: ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಿರುದ್ಧ ದೂರು ದಾಖಲು

    ವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ರಾಣಾ ದುಗ್ಗುಬಾಟಿ ಕಾಂಬಿನೇಷನ್ ನ ‘ಭೀಮ್ಲಾ ನಾಯಕ್’ ಸಿನಿಮಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಧೂಳ್ ಎಬ್ಬಿಸಿದೆ. ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ಇದೀಗ ವಿವಾದಕ್ಕೆ ಕಾರಣವಾಗಿದೆ. ಕೂಡಲೇ ಸಿನಿಮಾದ ಕೆಲ ಭಾಗಗಳನ್ನು ಕತ್ತರಿಸಿ, ನಾಯಕ ನಟ ಪವನ್ ಕಲ್ಯಾಣ್ ಅವರನ್ನು ಬಂಧಿಸಬೇಕು ಎಂದು ಕುಮ್ಮರಿ ಹಾಗೂ ಶಾಲಿವಾಹನ ಕಾರ್ಪೋರೇಷನ್ ಚೇರ್ಮನ್ ಪುರುಷೋತ್ತಮ ಎನ್ನುವವರು ಗುಂಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ : ಮಾಜಿ ಪತಿಯ ಬಗ್ಗೆ ಬೆಂಕಿಯುಗುಳಿದ ಪೂನಂ ಪಾಂಡೆ : ಟಾಪ್ ನಟಿಯ ದಾಂಪತ್ಯ ಹೀಗೂ ಇತ್ತಾ?

    ದೂರಿನಲ್ಲೇನಿದೆ?

    ಕುಂಬಾರಿಕೆ ಎನ್ನುವುದು ನಮ್ಮ ವೃತ್ತಿ, ಬದುಕಿನ ಭಾಗವೇ ಆಗಿ ಹೋಗಿದೆ. ನಾವು ಕುಂಬಾರಿಕೆಯನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ನೋಡಿಲ್ಲ. ಅದನ್ನು ದೇವರಂತೆ ಪೂಜಿಸುತ್ತೇವೆ. ಸಾಕಷ್ಟು ಧಾರ್ಮಿಕ ಕಾರ್ಯಗಳಲ್ಲಿ ನಾವು ತಯಾರಿಸಿದ ಮಡಿಕೆಯನ್ನು ಪೂಜಿಸುತ್ತಾರೆ. ಇಂತಹ ಪೂಜ್ಯನೀಯ ಮಡಿಕೆಯನ್ನು ನಟ ರಾಣಾ ದಗ್ಗುಬಾಟಿ ಅವರು ಕಾಲಿನಿಂದ ಒದೆಯುತ್ತಾರೆ. ಈ ದೃಶ್ಯವು ನಮಗೆ ನೋವನ್ನುಂಟು ಮಾಡಿದೆ. ಹಾಗಾಗಿ ಆ ದೃಶ್ಯವನ್ನು ಕೂಡಲೇ ತೆಗೆಯುವಂತೆ ಪುರುಷೋತ್ತಮ್ ದೂರಿನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ : ನಟ ಚೇತನ್ ಅಮೆರಿಕಾಗೆ ಗಡಿಪಾರು? : ಆತಂಕದಲ್ಲಿ ಚಿತ್ರ ನಿರ್ಮಾಪಕರು

    ಕತ್ತರಿಸಬೇಕೆಂದಿರುವ ದೃಶ್ಯ ಯಾವುದು?

    ಭೀಮ್ಲಾ ನಾಯಕ್ ವಿರುದ್ಧದ ಸಾಹಸಮಯ ದೃಶ್ಯದಲ್ಲಿ ಭೀಮ್ಲಾ ಮತ್ತು ರಾಣಾ ದುಗ್ಗುಬಾಟಿ ಎದುರಾಗುತ್ತಾರೆ. ಅಲ್ಲಿ ಫೈಟ್ ಸನ್ನಿವೇಶವಿದೆ. ಅದೇ ಸ್ಥಳದಲ್ಲಿ ಮಡಿಕೆ ತುಂಬಿರುವ ಗಾಡಿಯನ್ನು ನಿಲ್ಲಿಸಲಾಗಿದೆ. ರಾಣಾ ಆ ಮಡಿಕೆಯನ್ನು ಒದೆಯುವ ಮೂಲಕ ಬಿಲ್ಡ್‍ಅಪ್ ತೋರಿಸುವ ದೃಶ್ಯ ಅದಾಗಿದೆ. ಈ ದೃಶ್ಯವನ್ನೇ ಚಿತ್ರದಿಂದ ಕೈ ಬಿಡಬೇಕು ಎನ್ನುವುದು ಪುರುಷೋತ್ತಮ್ ವಾದ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ

    ಭೀಮ್ಲಾ ನಾಯಕ್ ಸಿನಿಮಾಗೆ ತೊಂದರೆ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಸಿಎಂ ಜಗನ್ ಸರಕಾರಕ್ಕೂ ಭೀಮ್ಲಾ ಸಿನಿಮಾಗೂ ಸಂಬಂಧವಿದೆ ಎನ್ನುವ ಕಾರಣಕ್ಕಾಗಿ ಚಿತ್ರಕ್ಕೆ ಏನೆಲ್ಲ ತೊಂದರೆ ಕೊಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಪವನ್ ಕಲ್ಯಾಣ್ ಅಭಿಮಾನಿಗಳು ಅಲ್ಲಲ್ಲಿ ಸರಕಾರದ ವಿರುದ್ಧ ಪ್ರತಿಭಟನೆಯನ್ನೂ ಮಾಡುತ್ತಿದ್ದಾರೆ.

  • ವೈಷ್ಣವಿಗೆ ದೆವ್ವದ ಕಥೆ ಹೇಳಿದ ಅಕುಲ್ ಬಾಲಾಜಿ

    ವೈಷ್ಣವಿಗೆ ದೆವ್ವದ ಕಥೆ ಹೇಳಿದ ಅಕುಲ್ ಬಾಲಾಜಿ

    ಬಿಗ್‍ಬಾಸ್ ಮಿನಿ ಸೀಸನ್ ಆರಂಭವಾಗಿದ್ದು, ದೊಡ್ಮನೆಯಲ್ಲಿ 16 ಮಂದಿ ಸ್ಪರ್ಧಿಗಳು ತುಂಬಿ ತುಳುಕುತ್ತಿದ್ದಾರೆ. ಈ ಮಧ್ಯೆ ಅಕುಲ್ ಬಾಲಾಜಿ ವೈಷ್ಣವಿಗೆ ದೆವ್ವದ ವಿಚಾರವೊಂದನ್ನು ಹೇಳಿ ಹೆದರಿಸಿದ್ದಾರೆ.

    ಬಿಗ್‍ಬಾಸ್ ಮಿನಿ ಸೀಸನ್ ಮೊದಲನೇ ದಿನ ವೈಷ್ಣವಿ ಹಾಗೂ ಅಕುಲ್ ಬಾಲಾಜಿ ಬೆಡ್ ರೂಂನಲ್ಲಿ ಕುಳಿತುಕೊಂಡಿರುತ್ತಾರೆ. ಈ ವೇಳೆ ಅಕುಲ್ ಬಾಲಾಜಿ ಒಮ್ಮೆ ವಾಶ್ ರೂಂ ಬಳಿ ರಾತ್ರಿ 12 ಗಂಟೆಗೆ ಹೋಗಿ ನೋಡು ನಿನಗೆ ಏನಿದೆ ಅಂತ ಗೊತ್ತಾಗುತ್ತದೆ ಎಂದಿದ್ದಾರೆ. ಆಗ ವೈಷ್ಣವಿ ಕುತೂಹಲದಿಂದ ನೀವೇ ಹೇಳಿ ನಾನು ಹೆದರಿಕೊಳ್ಳುವುದಿಲ್ಲ ಅಂತ ಕೇಳುತ್ತಾರೆ. ಇದಕ್ಕೆ ಅಕುಲ್ ನಿಮ್ಮ ಪೋಷಕರು ಬೇರೆ ಇಲ್ಲಿ ಇಲ್ಲ, ನಿನಗೆ ಮೊದಲೇ ದೆವ್ವ ಅಂದರೆ ಭಯ, ಆಮೇಲೆ ನಿನಗೆ ಅದರತ್ತ ಗಮನ ಸೆಳೆಯುತ್ತದೆ. ಹಾಗಾಗಿ ನಾನು ಹೇಳುವುದಿಲ್ಲ ಎನ್ನುತ್ತಾರೆ.

    ನಿನಗೆ ಯಾವತ್ತಾದರೂ ನೀನು ಮಲಗಿಕೊಂಡಾಗ ಬೆಡ್ ಶೀಟ್ ಎಳೆದ ಅನುಭವ ಆಗಿದ್ಯಾ? ಅಂದಾಗ ವೈಷ್ಣವಿ ಇಲ್ಲ ಅಂದಿದ್ದಾರೆ. ಅಲ್ಲದೇ ನಾನು ನಿನ್ನೆ ಹೋಟೆಲ್‍ನಲ್ಲಿ ಇದ್ದಾಗ ಬಾಗಿಲು ಅಲ್ಲಡುತ್ತಿದ್ದ ಶಬ್ಧ ಆಗುತ್ತಿತ್ತು. ಆಗ ನಾನು ಯಾಕೆ ಹೀಗೆ ಸದ್ದು ಮಾಡುತ್ತಿದ್ಯಾ, ಇಲ್ಲೆ ಇದ್ಯಾ, ಸರಿ ನಾನು ಮಲಗುವುದಕ್ಕೆ ಬಿಡು ಅಂತ ಆತ್ಮ ಜೊತೆ ಮಾತನಾಡಿರುವುದಾಗಿ ಹೇಳಿದ್ದಾರೆ.

    ನಂತರ ಇದನ್ನು ಕೇಳಿ ನಿಮ್ಮ ಮೈ ಮೇಲೆ ಒಂದು ರೀತಿ ರೋಮಾಂಚನ ಆಗಿದೆ ಎಂದರೆ ಆತ್ಮ ಬಂದು ನಿಮ್ಮನ್ನು ಟಚ್ ಮಾಡಿ ಹೋಗಿದೆ ಎಂದರ್ಥ. ಆತ್ಮಗಳಿಗೆ ನನ್ನ ಜೊತೆ ಯಾರಾದರೂ ಮಾತನಾಡಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಅವು ನಮ್ಮ ಬಳಿ ಮಾತನಾಡಲು ಬರುತ್ತದೆ ಎಂದು ಹೇಳುತ್ತಾರೆ. ಈ ಮಧ್ಯೆ ಜಗನ್ ಹಾಸ್ಯಮಯವಾಗಿ ನನ್ನ ಫೋನ್ ನಂಬರ್ ಕೊಡಿ ನಾನು ಮಾತನಾಡುತ್ತೇನೆ ಅಂತ ಹಾಸ್ಯ ಮಾಡುತ್ತಾರೆ. ಇದನ್ನೂ ಓದಿ:ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ಜೂ.ಚಿರು ವಿಶ್

  • ಗೆಳತಿಯನ್ನ ವರಿಸಿದ ಬಿಗ್‍ಬಾಸ್ ಜಗನ್

    ಗೆಳತಿಯನ್ನ ವರಿಸಿದ ಬಿಗ್‍ಬಾಸ್ ಜಗನ್

    ಬೆಂಗಳೂರು: ಕಿರುತೆರೆ ನಟ ಮತ್ತು ಬಿಗ್‍ಬಾಸ್ ಸ್ಪರ್ಧಿಯಾಗಿದ್ದ ಜಗನ್ನಾಥ್ ಚಂದ್ರಶೇಖರ್ ಅವರು ತಮ್ಮ ಬಹುಕಾಲದ ಗೆಳತಿಯನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಜಗನ್ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಆತ್ಮೀಯ ಗೆಳತಿ ರಕ್ಷಿತಾ ಮುನಿಯಪ್ಪ ಅವರ ಜೊತೆ ಇಂದು ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಕನ್ವೆಂಷನ್ ಹಾಲ್‍ನಲ್ಲಿ ಈ ಜೋಡಿಯ ಮದುವೆ ನಡೆದಿದೆ. ಗುರುಹಿರಿಯರು ನಿಶ್ಚಯಿಸಿದ್ದ ಮುಹೂರ್ತದಲ್ಲಿ ಜಗನ್ ಅವರು ಹಿಂದೂ ಸಂಪ್ರಯದಾಯದ ಪ್ರಕಾರ ಮಾಂಗಲ್ಯಧಾರಣೆ ಮಾಡಿದ್ದಾರೆ.

    ಈ ಜೋಡಿಯ ಮದುವೆಗೆ ಸ್ನೇಹಿತರು, ಸಂಬಂಧಿಗಳು, ಕಿರುತೆರೆ ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದಾರೆ. ಇತ್ತೀಚೆಗಷ್ಟೆ ಜಗನ್ ಅರಿಶಿಣ ಶಾಸ್ತ್ರದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಇತ್ತ ರಕ್ಷಿತಾ ಅವರು ಕೂಡ ಮೆಹಂದಿ ಸಂಭ್ರಮದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಹಂಚಿಕೊಂಡಿದ್ದರು.

    ದುಬೈನ ಕಾಲೇಜೊಂದರಲ್ಲಿ ರಕ್ಷಿತಾ ಮುನಿಯಪ್ಪ ವ್ಯಾಸಂಗ ಮುಗಿಸಿದ್ದು, ರಕ್ಷಿತಾ ಮತ್ತು ಜಗನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ತಾವು ಪ್ರೀತಿ ಮಾಡುತ್ತಿದ್ದ ಬಗ್ಗೆ ಮನೆಯಲ್ಲಿ ತಿಳಿಸಿದ್ದಾರೆ. ಇವರಿಬ್ಬರ ಪ್ರೀತಿಗೆ ಕುಟುಂಬದವರು ಸಮ್ಮತಿಸಿ ಈಗ ಎರಡು ಕುಟುಂಬದವರು ಒಪ್ಪಿ ಜಗನ್-ರಕ್ಷಿತಾ ಮದುವೆ ಮಾಡಿದ್ದಾರೆ.

    ನಟ ಜಗನ್ ‘ಜೋಶ್’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ದು, ಅನೇಕ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ‘ಬಿಗ್‍ಬಾಸ್ ಸೀಸನ್ 5’ರ ಸ್ಪರ್ಧಿಯಾಗಿ ಖ್ಯಾತಿ ಪಡೆದಿದ್ಧಾರೆ. ಮೇ 26 ರಂದು ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

  • ಶೀಘ್ರವೇ ಪ್ರತಿಪಕ್ಷಗಳ 100 ಸಂಸದರು ರಾಜೀನಾಮೆ!

    ಶೀಘ್ರವೇ ಪ್ರತಿಪಕ್ಷಗಳ 100 ಸಂಸದರು ರಾಜೀನಾಮೆ!

    ನವದೆಹಲಿ: ಕೇಂದ್ರದ ವೈಫಲ್ಯವನ್ನು ಖಂಡಿಸಿ ದೇಶದಲ್ಲಿ ಶೀಘ್ರವೇ ಲೋಕಸಭೆ ಚುನಾವಣೆಗೆ ಆಗ್ರಹಿಸಿ 100 ಮಂದಿ ಸಂಸದರು ರಾಜೀನಾಮೆ ನೀಡುವ ಸಾಧ್ಯತೆಯಿದೆ.

    ಹೌದು. 2019ರ ಲೋಕಸಭಾ ಚುನಾವಣೆ ಸಂಬಂಧ ಮೋದಿ ಅವರನ್ನು ಮಣಿಸಲು ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿರುವುದು ಹಳೇ ಸುದ್ದಿ. ಆದರೆ ಈಗ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು 100 ಮಂದಿ ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ರಾಷ್ಟ್ರೀಯ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.

    ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಸುಪ್ರೀಂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಸೇರಿದಂತೆ ಇನ್ನಿತರ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಸದಸ್ಯರು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.

    ಈ ಪ್ರತಿಭಟನೆಯ ಅಂಗವಾಗಿ ಇಂದು ವೈಎಸ್‍ಆರ್ ಕಾಂಗ್ರೆಸ್ 5 ಮಂದಿ ಸಂಸದರು ರಾಜೀನಾಮೆ ನೀಡಿದ್ದು ಮುಂದಿನ ದಿನದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ನೇತೃತ್ವದಲ್ಲಿ ವಿಪಕ್ಷಗಳು ಈ ತಂತ್ರವನ್ನು ಹೆಣೆದಿವೆ ಎನ್ನಲಾಗಿದೆ.

    ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗುತ್ತಿರುವ ವಿಚಾರವನ್ನು ಕಾಂಗ್ರೆಸ್ ಮೂಲಗಳು ಖಚಿತ ಪಡಿಸಿದೆ ಎಂದು ವಾಹಿನಿ ಹೇಳಿದೆ. ಎನ್‍ಡಿಎ ಒಕ್ಕೂಟದಿಂದ ಹೊರಬಂದಿರುವ ಚಂದ್ರಬಾಬು ನಾಯ್ಡು ಈ ವಾರ ದೆಹಲಿಯಲ್ಲಿ ಶರದ್ ಪವಾರ್ ಮತ್ತು ಇತರೇ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದು ಈ ವೇಳೆ ಸಾಮೂಹಿಕ ರಾಜೀನಾಮೆ ನೀಡುವ ವಿಚಾರವನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.

    ಪ್ರತಿಪಕ್ಷಗಳ ಪ್ಲಾನ್ ಏನು?
    2019ಕ್ಕೂ ಮೊದಲೇ ಚುನಾವಣೆ ನಡೆಸಲು ಪ್ರತಿಪಕ್ಷಗಳು ಮುಂದಾಗಿದ್ದು, ಇದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿವೆ. ಈಗ ಈ ತಂತ್ರವನ್ನು ಅನುಸರಿಸಿದರೆ ಜನರನ್ನು ತಲುಪಲು ಸುಲಭವಾಗುತ್ತದೆ. ಅಷ್ಟೇ ಅಲ್ಲದೇ ಮೋದಿ ವಿರೋಧಿ ಅಲೆಯನ್ನು ದೇಶದೆಲ್ಲೆಡೆ ಪಸರಿಸಲು ಈ ನಿರ್ಧಾರ ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿದೆ.

    ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಈಗ ಒಂದಾಗಿದ್ದರೂ ಚುನಾವಣೆಯ ಸಂದರ್ಭದಲ್ಲಿ ಆರ್ ಜೆಡಿ, ಕಾಂಗ್ರೆಸ್, ಜೆಡಿಯು ಮಹಾಘಟಬಂಧನ್ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಈ ತಂತ್ರದ ಮುಂದುವರಿದ ಭಾಗವಾಗಿ ದೇಶದೆಲ್ಲೆಡೆ ಮೈತ್ರಿ ಮಾಡಿಕೊಂಡರೆ ಹಂಚಿಕೆಯಾಗಲಿರುವ ಮತಗಳು ಓರ್ವ ಅಭ್ಯರ್ಥಿಗೆ ಬೀಳಬಹುದು. ಮೈತ್ರಿಯ ಪೂರ್ವಭಾವಿಯಾಗಿ ಈ ರಾಜೀನಾಮೆ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ ಎಂದು ಹೇಳಲಾಗುತ್ತಿದೆ.

    ಈ ಬಾರಿಯ ಕಲಾಪ ಸರಿಯಾಗಿ ನಡೆಯದೇ ಇದ್ದ ಕಾರಣ ಎನ್‍ಡಿಎ ಸಂಸದರು ಸಂಬಳವನ್ನು ಪಡೆಯದೇ ಇರುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ ವಿಪಕ್ಷಗಳಿಂದಾಗಿ ಕಲಾಪ ಹಾಳಾಗಿದೆ ಎನ್ನುವುದನ್ನು ತೋರಿಸಲು ಜನರ ತೆರಿಗೆ ಹಣವನ್ನು ಪಡೆಯುವುದು ಸಮಂಜಸ ಅಲ್ಲ ಎನ್ನುವ ನಿರ್ಧಾರಕ್ಕೆ ಎನ್‍ಡಿಎ ಬಂದಿದೆ. ನಮ್ಮ ಮೇಲೆ ಬಂದಿರುವ ಈ ಆರೋಪಕ್ಕೆ ತಿರುಗೇಟು ನೀಡಲು ಸದನ ಸರಿಯಾಗಿ ನಡೆಯದೇ ಇರಲು ನಾವು ಕಾರಣವಲ್ಲ. ಸರ್ಕಾರದ ನೀತಿಯಿಂದಲೇ ಕಲಾಪ ವ್ಯರ್ಥವಾಗಿದೆ ಎನ್ನುವುದನ್ನು ಜನರಿಗೆ ವಿವರಿಸಲು ಸಾಮೂಹಿಕ ರಾಜೀನಾಮೆಯ ನಿರ್ಧಾರಕ್ಕೆ ವಿಪಕ್ಷಗಳು ಬಂದಿವೆ ಎನ್ನಲಾಗಿದೆ.

    ಆಂಧ್ರದ ಪ್ರತ್ಯೇಕ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲು ಟಿಡಿಪಿ, ವೈಎಸ್ ಆರ್ ಕಾಂಗ್ರೆಸ್, ಕಾಂಗ್ರೆಸ್ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಕೊನೆಯ ಅಸ್ತ್ರ ಎಂಬಂತೆ ಕೇಂದ್ರ ವಿರುದ್ಧ ಹೋರಾಟ ನಡೆಸಲು ವಿಪಕ್ಷಗಳು ಸಾಮೂಹಿಕ ರಾಜೀನಾಮೆಯ ತಂತ್ರಕ್ಕೆ ಬಂದಿದೆ ಎಂದು ಹೇಳಲಾಗುತ್ತದೆ.

    ಸಾಮೂಹಿಕ ರಾಜೀನಾಮೆ ಯಶಸ್ವಿಯಾಗುತ್ತಾ?
    ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರವನ್ನು ಚಂದ್ರಬಾಬು ನಾಯ್ಡು, ರಾಹುಲ್ ಗಾಂಧಿ, ಶರದ್ ಪವಾರ್ ತೆಗೆದುಕೊಂಡಿದ್ದರೂ ಉಳಿದ ನಾಯಕರು ಒಪ್ಪಿಗೆ ಸೂಚಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಹಿರಂಗವಾಗಿಯೇ ರಾಹುಲ್ ಗಾಂಧಿ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಹೊರತಾಗಿರುವ ಮೂರನೇ ಮೈತ್ರಿಕೂಟ ರಚನೆಯಾಗಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಡಿಶಾದಲ್ಲಿ ಬಿಜೆಡಿ ಬೆಂಬಲಿಸುತ್ತಾ ಎನ್ನುವ ಪ್ರಶ್ನೆಯೂ ಎದ್ದಿದೆ.

    ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತಲೂ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರವಹಿಸುತ್ತದೆ. ಹೀಗಾಗಿ ಶಿವಸೇನೆ, ಡಿಎಂಕೆ, ಎಐಡಿಎಂಕೆ, ಬಿಜೆಡಿ, ಟಿಎಂಸಿ ನಾಯಕರ ನಿರ್ಧಾರದ ಮೇಲೆ ಸಾಮೂಹಿಕ ರಾಜೀನಾಮೆ ತಂತ್ರ ನಿಂತಿದೆ ಎನ್ನುವ ವಿಶ್ಲೇಷಣೆ ಈಗ ಕೇಳಿಬಂದಿದೆ.

  • ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲೂ ಲಿವಿಂಗ್ ಏರಿಯಾ-ಗಾರ್ಡನ್ ಏರಿಯಾ ಗಲಾಟೆ ಸದ್ದು

    ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲೂ ಲಿವಿಂಗ್ ಏರಿಯಾ-ಗಾರ್ಡನ್ ಏರಿಯಾ ಗಲಾಟೆ ಸದ್ದು

    ಬೆಂಗಳೂರು: ಕಾಮನ್ ಮ್ಯಾನ್ ಮತ್ತು ಸೆಲೆಬ್ರಿಟಿಗಳಿಂದ ಶುರವಾದ ಬಿಗ್‍ಬಾಸ್ 5ನೇ ಆವೃತ್ತಿ ಹೆಚ್ಚು ಕಡಿಮೆ ಜಗಳದಿಂದಲೇ ಸುದ್ದಿ ಆಗಿತ್ತು. ಲಿವಿಂಗ್ ಏರಿಯಾ-ಗಾರ್ಡನ್ ಏರಿಯಾ ಅಂಥ ಸೆಲೆಬ್ರಿಟಿ ಹಾಗೂ ಕಾಮನ್‍ಮ್ಯಾನ್ ಸ್ಪರ್ಧಿಗಳು ಗುಂಪು ಮಾಡಿಕೊಂಡು ಗೇಮ್ ಆಡಿದ್ರು ಅಂತ ಮಾತು ಕೇಳಿ ಬರುತ್ತಿತ್ತು.

    ಬಿಗ್ ಬಾಸ್ ಮನೆಯ ಈ ಎರಡು ಗುಂಪುಗಳ ಬಗ್ಗೆ ಯಾರು ಉತ್ತರಿಸಿರಲಿಲ್ಲ. ಈ ಸಣ್ಣ ಇರಿಸು ಮುರುಸು ಫಿನಾಲೆ ವೇದಿಕೆಯಲ್ಲಿಯೂ ಕಂಡು ಬಂತು. ಅಂತಿಮ ಸ್ಪರ್ಧಿಗಳಾಗಿ ಚಂದನ್ ಶೆಟ್ಟಿ ಮತ್ತು ದಿವಾಕರ್ ಇಬ್ಬರು ವೇದಿಕೆಯ ಮೇಲೆ ಬರುತ್ತಿದ್ದಂತೆ ಜನರೆಲ್ಲಾ ಚಪ್ಪಾಳೆಗಳ ಮೂಲಕ ಸ್ವಾಗತಿಸಿಕೊಂಡರು. ಈ ವೇಳೆ ಪಕ್ಕದ ಗ್ಯಾಲರಿಯಲ್ಲಿ ಕುಳಿತಿದ್ದ ಜಗನ್ ಕಾಮನ್‍ಮ್ಯಾನ್ ಮತ್ತು ಸೆಲಿಬ್ರಿಟಿಗೂ ಯಾವುದೇ ವ್ಯತ್ಯಾಸವಿಲ್ಲ. ಚಂದನ್ ಬಂದಾಗ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಬಂತೋ, ದಿವಾಕರ್ ಬಂದಾಗಲೂ ಅದೇ ರೀತಿಯ ಪ್ರತಿಕ್ರಿಯೆ ಕಂಡು ಬಂತು ಅಂತಾ ಅಂದ್ರು.

    ನಾವು ಕೆಲವರು ಯಾವಗಲೂ ಗಾರ್ಡನ್ ಏರಿಯಾದಲ್ಲಿ ಹೆಚ್ಚು ಸಮಯವನ್ನು ವ್ಯಯ ಮಾಡುತ್ತಿದ್ದೇವೆ. ಹೀಗಾಗಿ ನೋಡುಗರಿಗೆ ನಮ್ಮನ್ನು ಗುರುತಿಸಲು ಸಹಾಯ ಆಗಲಿ ಎಂಬ ದೃಷ್ಠಿಯಿಂದ ಗಾರ್ಡನ್ ಏರಿಯಾ ಎಂಬ ಕೋಡ್ ವರ್ಡ್ ಬಳಸಲಾಗುತ್ತಿತ್ತು. ಗಾರ್ಡನ್ ಏರಿಯಾ ಎಂಬ ಪದವನ್ನು ನಮ್ಮ ಸ್ನೇಹಿತರ ಟೀಂ ಅಂತಾ ನಾನು ಹೇಳುತ್ತಿದ್ದೆ ಎಂದು ಜಗನ್ ಪ್ರಶ್ನೆಗೆ ರಿಯಾಜ್ ಭಾಷಾ ಉತ್ತರಿಸಿದರು.

    ನಾವು ಎಲ್ಲ ಹೋದ್ರೂ ಸೆಲಿಬ್ರಿಟಿಗಳು ಕಾಮನ್ ಮ್ಯಾನ್ ಗಳ ಮೇಲೆ ದಬ್ಬಾಳಿಕೆ ಮಾಡ್ತಾಯಿದ್ದಾರೆ ಎಂಬ ಮಾತುಗಳು ಎಲ್ಲಡೆ ಕೇಳಿ ಬರುತ್ತಿವೆ. ಇಂದು ರಿಯಾಜ್ ಗಾರ್ಡನ್ ಏರಿಯಾ ಎಂಬ ಪದವನ್ನು ಬಳುಸುತ್ತಿರುವುದರಿಂದ ನೋಡುಗರಿಗೆ ಉತ್ತರ ಸಿಕ್ಕದೆ ಅಂತಾ ತಿಳಿದುಕೊಳ್ಳುತ್ತೇನೆ ಎಂದು ಸಿಹಿ ಕಹಿ ಚಂದ್ರು ಹೇಳಿದರು.

    ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಮಧ್ಯೆ ಉಂಟಾಗಿದ್ದ ಎಲ್ಲ ಅಸಮಧಾನಗಳಿಗೂ ಎಲ್ಲರೂ ಸ್ಪಷ್ಟಣೆ ನೀಡುವ ಎಲ್ಲದಕ್ಕೂ ತೆರೆ ಎಳೆದರು. ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‍ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದರು.

    ಬಿಗ್‍ಬಾಸ್ ಮನೆಯೊಳಗೆ ಪ್ರವೇಶ ಪಡೆದವರು: ಜಯ ಶ್ರೀನಿವಾಸನ್ (ಸಂಖ್ಯಾ ಜ್ಯೋತಿಷಿ), ಮೇಘಾ, ದಯಾಳ್ ಪದ್ಮನಾಭ (ನಿರ್ದೇಶಕ) ಸಿಹಿ ಕಹಿ ಚಂದ್ರು (ಹಿರಿಯ ನಟ), ಶ್ರುತಿ, ಅನುಪಮಾ ಗೌಡ (ನಟಿ), ರಿಯಾಜ್ ಭಾಷಾ, ನಿವೇದಿತಾ ಗೌಡ, ಸಮೀರ್ ಆಚಾರ್ಯ (ಜ್ಯೋತಿಷಿ), ಕಾರ್ತಿಕ್ ಜಯರಾಮ್ (ನಟ), ಆಶಿತಾ ಚಂದ್ರಪ್ಪ, ದೀವಾಕರ್ (ಸೆಲ್ಸ್‍ಮನ್ ), ತೇಜಸ್ವಿನಿ ಪ್ರಕಾಶ್ (ನಟಿ), ಚಂದನ್ ಶೆಟ್ಟಿ (ಹಾಡುಗಾರ), ಸುಮಾ , ಕೃಷಿ, ಜಗನ್ (ನಟ).

    ಫೈನಲ್ ವೇಳೆಗೆ ಚಂದನ್‍ಗೆ ಕಾಂಪಿಟೇಟರ್ ಆಗಿದ್ದ ಆಪ್ತ ಸ್ನೇಹಿತ ದಿವಾಕರ್ ಅವರಿಗೆ ರನ್ನರ್ ಅಪ್ ಪಟ್ಟ ದಕ್ಕಿತು. ನೂರೈದು ದಿನಗಳ ಕಾಲ ಭರ್ಜರಿ ಮನರಂಜನೆ ನೀಡಿದ್ದ ಕನ್ನಡ ರ್ಯಾಪರ್ ಚಂದನ್‍ಶೆಟ್ಟಿ ಗೆಲುವಿನ ಮಾಲೆಯನ್ನು ಧರಿಸಿದ್ದಾರೆ.