Tag: Jagaluru

  • ದಾವಣಗೆರೆ | ಕತ್ತು ಕೊಯ್ದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ – ಪತಿ ವಶಕ್ಕೆ

    ದಾವಣಗೆರೆ | ಕತ್ತು ಕೊಯ್ದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ – ಪತಿ ವಶಕ್ಕೆ

    ದಾವಣಗೆರೆ: ಜಗಳೂರು (Jagaluru) ತಾಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ.

    ಕೊಲೆಯಾದ ಮಹಿಳೆಯನ್ನು ಜ್ಯೋತಿ (35) ಎಂದು ಗುರುತಿಸಲಾಗಿದೆ. ಭಾನುವಾರ (ಆ.31) ರಾತ್ರಿ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಶವ ಪತ್ತೆಯಾಗಿದ್ದರಿಂದ ಆಕೆಯ ಪತಿಯೇ (Husband) ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ. ಇದನ್ನೂ ಓದಿ: ಭದ್ರಾವತಿಯಲ್ಲಿ ಮನೆಗಳ್ಳತನ – ಬೆಂಗಳೂರಿನ ಮಹಿಳೆ ಸೇರಿ ಇಬ್ಬರು ಅರೆಸ್ಟ್

    ಜಗಳೂರು ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಮಹಿಳೆಯ ಪತಿ ಬಾಲರಾಜ್‍ನನ್ನು ವಶಕ್ಕೆ ಪಡೆದು ಜಗಳೂರು ಪೊಲೀಸರು ವಿಚಾರಣೆ ನಡಸುತ್ತಿದ್ದಾರೆ.

    ಸ್ಥಳಕ್ಕೆ ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪೆಟ್ರೋಲ್ ಸುರಿದು 26ರ ಲಿವ್ ಇನ್ ಗೆಳತಿಯ ಹತ್ಯೆಗೈದ 52ರ ವ್ಯಕ್ತಿ

  • ಮರದ ಕೊಂಬೆ ಕಡಿಯಲು ಹೋಗಿ ವಿದ್ಯುತ್ ಸ್ಪರ್ಶ – ಯುವಕ ಸಾವು

    ಮರದ ಕೊಂಬೆ ಕಡಿಯಲು ಹೋಗಿ ವಿದ್ಯುತ್ ಸ್ಪರ್ಶ – ಯುವಕ ಸಾವು

    ದಾವಣಗೆರೆ: ಮರದ ಕೊಂಬೆ ಕಡಿಯಲು ಹೋಗಿ ವಿದ್ಯುತ್ ಸ್ಪರ್ಶಿಸಿ (Electric Shock) ಯುವಕ ಸಾವನ್ನಪ್ಪಿದ ಘಟನೆ ದಾವಣಗೆರೆ (Davangere) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಜಗಳೂರು (Jagaluru) ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಶಿವಕುಮಾರ್ (18) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಳೆ ಬರುತ್ತಿದ್ದ ಸಂದರ್ಭದಲ್ಲಿ ಈತ ಮೇಕೆಗಳಿಗೆ ಮೇವು ತರಲು ಹೋಗಿದ್ದರು. ಮರವನ್ನೇರಿ ಸೊಪ್ಪು ಕಡಿಯುತ್ತಿರುವಾಗ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಕೊಂಬೆಯಿಂದ ವಿದ್ಯುತ್ ಪ್ರವಹಿಸಿದ ಹಿನ್ನೆಲೆ ಈ ಅವಘಡ ನಡೆದಿದೆ. ಇದನ್ನೂ ಓದಿ: ಶಾಲೆಗೆ ಬಾಂಬ್ ಬೆದರಿಕೆ – ಸ್ಥಳಕ್ಕೆ ಪೊಲೀಸರ ದೌಡು

    ಗ್ರಾಮಸ್ಥರು ಯುವಕನ ದೇಹವನ್ನು ಮುಟ್ಟಲು ಭಯಪಡುತ್ತಿದ್ದರು. ಅವಘಡ ನಡೆದು 30 ನಿಮಿಷಗಳಾದರೂ ಬೆಸ್ಕಾಂ ಸಿಬ್ಬಂದಿ ಬಾರದ ಕಾರಣ ಶಿವಕುಮಾರ್ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಳೆಯ ಅವಾಂತರ – 5 ಮನೆಗಳು ಕುಸಿದು ಕಾರುಗಳು ಸಂಪೂರ್ಣ ಜಖಂ

  • ಕಿಚ್ಚನಿಗೆ ಬೆದರಿಕೆ ಪತ್ರ: ಸುದೀಪ್ ನೀಡಿದ ಅಚ್ಚರಿಕೆ ಪ್ರತಿಕ್ರಿಯೆ

    ಕಿಚ್ಚನಿಗೆ ಬೆದರಿಕೆ ಪತ್ರ: ಸುದೀಪ್ ನೀಡಿದ ಅಚ್ಚರಿಕೆ ಪ್ರತಿಕ್ರಿಯೆ

    ಟ ಸುದೀಪ್ (Sudeep) ಅವರಿಗೆ ಬೆದರಿಕೆ ಪತ್ರ ಬಂದು ಒಂದು ತಿಂಗಳು ಕಳೆದಿದೆ. ಅವರು ದೂರು ದಾಖಲಿಸಿ 25 ದಿನಕ್ಕೂ ಹೆಚ್ಚು ದಿನಗಳು ಉರುಳಿವೆ. ಪತ್ರ ಬರೆದವರ ಬೆನ್ನತ್ತಿರುವ ಸಿಸಿಬಿಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೂ, ತಮ್ಮ ಪ್ರಯತ್ನವನ್ನು ಅವರು ನಿಲ್ಲಿಸಿಲ್ಲ. ಈ ಕುರಿತು ಇದೇ ಮೊದಲ ಬಾರಿಗೆ ಕಿಚ್ಚು ಸುದೀಪ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಚುನಾವಣಾ ಪ್ರಚಾರಕ್ಕೆ ಹೊರಡುತ್ತಿರುವ ಸಂದರ್ಭದಲ್ಲಿ ಬೆದರಿಕೆ ಪತ್ರದ ಬಗ್ಗೆ ಮಾತನಾಡಿದ್ದಾರೆ.

    ಬೆದರಿಕೆಯ ಪತ್ರದ (Threat letter) ಬಗ್ಗೆ ಮಾತನಾಡಿದ ಸುದೀಪ್, ‘ನಂಗೆ ತುಂಬಾ ಲವ್ ಲೇಟರ್ ಗಳು ಬರ್ತಾ ಇರ್ತಾವೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳೋಕೆ ಆಗಲ್ಲ’ ಎಂದು ಚುಟುಕಾಗಿ ಉತ್ತರಿಸಿದ್ದಾರೆ. ಈ ಮೂಲಕ ಪತ್ರ ಬರೆದವರ ಬಗ್ಗೆ ಕೇರ್ ಮಾಡುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ‘ಆ ವಿಚಾರದಲ್ಲಿ ತನಿಖೆ ನಡೆಯುತ್ತಿದೆ. ನನ್ನ ಪಾಡಿಗೆ ನಾನು ಇವತ್ತಿನಿಂದ ಪ್ರಚಾರಕ್ಕೆ ಹೋಗ್ತಾ ಇದೀನಿ’ ಎಂದಿದ್ದಾರೆ.

    ಇಂದಿನಿಂದ ಸುದೀಪ್ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಮತಯಾಚನೆ (Campaign) ಮಾಡುತ್ತಿದ್ದಾರೆ.  ಬೆಂಗಳೂರಿನಿಂದ ಹೊರಡುವ ಇವರ ಪಯಣ ಮೊದಲು ಮೊಳಕಾಲ್ಮೂರು (Molakalmuru) ಕ್ಷೇತ್ರದಿಂದ ಪ್ರಚಾರ ಆರಂಭಿಸಲಿದೆ. ಬೆಳಗ್ಗೆ 10.15ಕ್ಕೆ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಪರವಾಗಿ ಕಿಚ್ಚ ಮತಯಾಚನೆ ಮಾಡಲಿದ್ದಾರೆ. ಇದನ್ನೂ ಓದಿ: ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

    ಮೊಳಕಾಲ್ಮೂರು ಕ್ಷೇತ್ರದಿಂದ ನೇರವಾಗಿ ಜಗಳೂರು ಕ್ಷೇತ್ರದತ್ತ ಹೆಲಿಕಾಪ್ಟರ್ ನಲ್ಲೇ ಪ್ರಯಾಣ ಮುಂದುವರೆಸುವ ಸುದೀಪ್ 12.30ಕ್ಕೆ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರ ಪರವಾಗಿ ರೋಡ್ ಶೋ ನಡೆಸಲಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ಅವರು ರೋಡ್ ಶೋ ಮಾಡಲಿದ್ದಾರೆ.

    ಜಗಳೂರು (Jagaluru) ರೋಡ್ ಶೋ ಮುಗಿಸಿಕೊಂಡು ಊಟದ ನಂತರ ಸುದೀಪ್, ಮಾಯಕೊಂಡ (Mayakonda) ಕ್ಷೇತ್ರದತ್ತ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 3.10ಕ್ಕೆ ಮಾಯಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯ್ಕ ಪರವಾಗಿ ಸುದೀಪ್ ಮತಯಾಚನೆ ಮಾಡಲಿದ್ದಾರೆ. ಅಲ್ಲದೇ, ಸರಕಾರಿ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಲಿದ್ದಾರೆ.

    ಮಾಯಕೊಂಡದಿಂದ ಸುದೀಪ್ ದಾವಣಗೆರೆಗೆ (Davangere) ತೆರಳಲಿದ್ದು, ದಾವಣಗೆರೆಯ ಸೌತ್ ಮತ್ತು ನಾರ್ತ್ ಕ್ಷೇತ್ರಗಳ ಅಭ್ಯರ್ಥಿಗಳಾದ ಲೊಕ್ಕಿಕೆರೆ ನಾಗರಾಜ ಹಾಗೂ ಬಿ.ಜಿ. ಅಜಯ್ ಕುಮಾರ್ ಪರವಾಗಿ ಸಂಜೆ 4.20ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ. ಅಲ್ಲಿಂದ ನೇರವಾಗಿ ಸಂಡೂರಿಗೆ ತೆರಳಿ ಸಂಡೂರು (Sandur) ಬಿಜೆಪಿ ಅಭ್ಯರ್ಥಿ ಶಿಲ್ಪಾ ನಾಗೇಂದ್ರ ಪರವಾಗಿ ಸಂಜೆ 6.10ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.

  • ನಾಳೆ ಸುದೀಪ್ ಎಲ್ಲೆಲ್ಲಿ ಸಿಗ್ತಾರೆ? ಪ್ರಚಾರದ ರೂಟ್ ಮ್ಯಾಪ್ ರಿಲೀಸ್

    ನಾಳೆ ಸುದೀಪ್ ಎಲ್ಲೆಲ್ಲಿ ಸಿಗ್ತಾರೆ? ಪ್ರಚಾರದ ರೂಟ್ ಮ್ಯಾಪ್ ರಿಲೀಸ್

    ಳೆದ ವಾರವಷ್ಟೇ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರಕ್ಕಾಗಿ ಶಿಗ್ಗಾಂವಿಗೆ ತೆರಳಿದ್ದ ನಟ ಕಿಚ್ಚ ಸುದೀಪ್ (Sudeep) ನಾಳೆ ಹಲವು ಊರುಗಳಲ್ಲಿ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಬೊಮ್ಮಾಯಿ ಮಾಮ ಸೂಚಿಸಿದ ಊರುಗಳಿಗೆ ಹೋಗಿ ಪ್ರಚಾರ ಮಾಡುತ್ತೇನೆ ಎಂದಿದ್ದ ಕಿಚ್ಚ ಕೊಟ್ಟ ಮಾತಿನಂತೆ ನಾಳೆಯಿಂದ ಭರ್ಜರಿ ಪ್ರಚಾರ (campaign) ಮಾಡಲಿದ್ದಾರೆ. ಕಿಚ್ಚನಿಗಾಗಿಯೇ ಹೆಲಿಕಾಪ್ಟರ್ ಸಿದ್ಧಗೊಂಡಿದೆ.

    ನಾಳೆ ಸುದೀಪ್ ಯಾವೆಲ್ಲ ಊರಿಗೆ ಹೋಗಬೇಕು ಮತ್ತು ಯಾರ ಪರವಾಗಿ ಪ್ರಚಾರ ಮಾಡಬೇಕು ಎನ್ನುವುದರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಬೆಂಗಳೂರಿನಿಂದ ಹೊರಡುವ ಕಿಚ್ಚ, ನಾಳೆಯೇ ಐದು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಮಾಡಲಿದ್ದಾರೆ. ಬೆಂಗಳೂರಿನಿಂದ ಹೊರಡುವ ಇವರ ಪಯಣ ಮೊದಲು ಮೊಳಕಾಲ್ಮೂರು ಕ್ಷೇತ್ರದಿಂದ ಪ್ರಚಾರ ಆರಂಭಿಸಲಿದೆ. ಬೆಳಗ್ಗೆ 10.15ಕ್ಕೆ ಮೊಳಕಾಲ್ಮೂರು (Molakalmuru) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಪರವಾಗಿ ಕಿಚ್ಚ ಮತಯಾಚನೆ ಮಾಡಲಿದ್ದಾರೆ.

    ಮೊಳಕಾಲ್ಮೂರು ಕ್ಷೇತ್ರದಿಂದ ನೇರವಾಗಿ ಜಗಳೂರು (Jagaluru) ಕ್ಷೇತ್ರದತ್ತ ಹೆಲಿಕಾಪ್ಟರ್ ನಲ್ಲೇ ಪ್ರಯಾಣ ಮುಂದುವರೆಸುವ ಸುದೀಪ್ 12.30ಕ್ಕೆ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರ ಪರವಾಗಿ ರೋಡ್ ಶೋ ನಡೆಸಲಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ಅವರು ರೋಡ್ ಶೋ ಮಾಡಲಿದ್ದಾರೆ. ಇದನ್ನೂ ಓದಿ:ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

    ಜಗಳೂರು ರೋಡ್ ಶೋ ಮುಗಿಸಿಕೊಂಡು ಊಟದ ನಂತರ ಸುದೀಪ್, ಮಾಯಕೊಂಡ (Mayakonda) ಕ್ಷೇತ್ರದತ್ತ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 3.10ಕ್ಕೆ ಮಾಯಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯ್ಕ ಪರವಾಗಿ ಸುದೀಪ್ ಮತಯಾಚನೆ ಮಾಡಲಿದ್ದಾರೆ. ಅಲ್ಲದೇ, ಸರಕಾರಿ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಲಿದ್ದಾರೆ.

    ಮಾಯಕೊಂಡದಿಂದ ಸುದೀಪ್ ದಾವಣಗೆರೆಗೆ (Davangere) ತೆರಳಲಿದ್ದು, ದಾವಣಗೆರೆಯ ಸೌತ್ ಮತ್ತು ನಾರ್ತ್ ಕ್ಷೇತ್ರಗಳ ಅಭ್ಯರ್ಥಿಗಳಾದ ಲೊಕ್ಕಿಕೆರೆ ನಾಗರಾಜ ಹಾಗೂ ಬಿ.ಜಿ. ಅಜಯ್ ಕುಮಾರ್ ಪರವಾಗಿ ಸಂಜೆ 4.20ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ. ಅಲ್ಲಿಂದ ನೇರವಾಗಿ ಸಂಡೂರಿಗೆ ತೆರಳಿ ಸಂಡೂರು (Sandur) ಬಿಜೆಪಿ ಅಭ್ಯರ್ಥಿ ಶಿಲ್ಪಾ ನಾಗೇಂದ್ರ ಪರವಾಗಿ ಸಂಜೆ 6.10ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.

  • ಈಜಲು ಹೋಗಿ ನೀರುಪಾಲಾದ ಯುವಕ

    ಈಜಲು ಹೋಗಿ ನೀರುಪಾಲಾದ ಯುವಕ

    -ಶವಕ್ಕಾಗಿ ಹುಡುಕಾಟ

    ದಾವಣಗೆರೆ: ಈಜಲು ಹೋದ ಯುವಕ ನೀರುಪಾಲಾದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತಮಲೇಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ.

    21 ವರ್ಷದ ವೆಂಕಟೇಶ್ ನೀರು ಪಾಲಾದ ಯುವಕ. ಭಾನುವಾರ ವೆಂಕಟೇಶ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಗ್ರಾಮದ ಚೌಡೇಶ್ವರಿ ಕೆರೆಯಲ್ಲಿ ಈಜಲು ಹೋಗಿದ್ದನು. ಕೆರೆ ಮಧ್ಯ ಭಾಗಕ್ಕೆ ಹೋಗಿ ವಾಪಸ್ಸು ಬರಲಾಗದೇ ವೆಂಕಟೇಶ್ ನೀರಿನಲ್ಲಿ ಮುಳುಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕದ ದಳದ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿ ಭಾನುವಾರ ರಾತ್ರಿ 10 ಗಂಟೆಯವರೆಗು ಶವಕ್ಕಾಗಿ ಹುಡುಕಾಟ ನಡೆಸಿದ್ದರು.

    ಇಂದು ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನಾ ಸ್ಥಳದಲ್ಲಿ ವೆಂಕಟೇಶ್ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿಕಿತ್ಸೆ ನೀಡುತ್ತಿದ್ದಂತೆ ಬಾಯಿಯಲ್ಲಿ ನೊರೆ ಬಂದು ಬಾಲಕಿ ಸಾವು

    ಚಿಕಿತ್ಸೆ ನೀಡುತ್ತಿದ್ದಂತೆ ಬಾಯಿಯಲ್ಲಿ ನೊರೆ ಬಂದು ಬಾಲಕಿ ಸಾವು

    ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಮಗುವಿನ ಪೋಷಕರು ವೈದ್ಯರ ಮನೆ ಗಾಜು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಗಳೂರು ಪಟ್ಟಣದಲ್ಲಿ ನಡೆದಿದೆ.

    ಜಗಳೂರು ತಾಲೂಕಿನ ಗುಡ್ಡದಲಿಂಗನಹಳ್ಳಿ ಹನಮಂತಪ್ಪ, ಕರಿಬಸಮ್ಮ ದಂಪತಿಯ ಪುತ್ರಿ ಸಹನಾ (3) ಮೃತ ಬಾಲಕಿ. ವೈದ್ಯ ಕೆ.ವಿ. ಶಿವಪ್ರಕಾಶ್ ನಿರ್ಲಕ್ಷ್ಯವೇ ಸಹನಾ ಸಾವಿಗೆ ಕಾರಣ ಎಂದು ಬಾಲಕಿ ಪೋಷಕರು ಆರೋಪಿಸಿದ್ದಾರೆ. ಘಟನೆಯು ಶುಕ್ರವಾರ ಸಂಜೆ ನಡೆದಿದ್ದು, ಶಿವಪ್ರಕಾಶ್ ಅವರ ಮನೆಯ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಸಹನಾಗೆ ಶುಕ್ರವಾರ ಬೆಳಗ್ಗೆ ಜ್ವರ ಬಂದಿತ್ತು. ಹೀಗಾಗಿ ಹನಮಂತಪ್ಪ ಅವರು ಮಗಳನ್ನು ಕರೆದುಕೊಂಡು ಜಗಳೂರು ಪಟ್ಟಣದಲ್ಲಿರುವ ವೈದ್ಯ ಶಿವಪ್ರಕಾಶ್ ಅವರ ಬಳಿಗೆ ಬಂದಿದ್ದರು. ಶಿವಪ್ರಕಾಶ್ ಸಹನಾಗೆ ಚಿಕಿತ್ಸೆ ನೀಡುತ್ತಿದ್ದಂತೆ ಆಕೆಯ ಬಾಯಿಯಲ್ಲಿ ನೊರೆ ಬಂದು ಕುಸಿದು ಬಿದ್ದಿದ್ದಾಳೆ. ಇದರಿಂದ ಗಾಬರಿಗೊಂಡ ವೈದ್ಯ ಶಿವಪ್ರಸಾದ್, ತಕ್ಷಣವೇ ಮಗುವನ್ನು ದಾವಣಗೆರೆಗೆ ಕರೆದುಕೊಂಡು ಹೋಗಿ ಎಂದು ಹನಮಂತಪ್ಪ ಅವರಿಗೆ ಹೇಳಿದ್ದಾರೆ.

    ವಾಹನ ವ್ಯವಸ್ಥೆ ಮಾಡಿಕೊಂಡು ದಾವಣಗೆರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಸಹನಾ ಸಾವನ್ನಪ್ಪಿದ್ದಾಳೆ. ಇದರಿಂದ ಕೋಪಕೊಂಡ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು, ಸಹನಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ವೈದ್ಯ ಶಿವಪ್ರಕಾಶ್ ಅವರ ಮನೆ ಮುಂಭಾಗದಲ್ಲಿ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿ, ಮನೆಗೆ ಕಲ್ಲು ಎಸೆದು ಕಿಡಕಿಯ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ 60 ಮಕ್ಕಳು ಸೇರಿ 100ಕ್ಕೂ ಹೆಚ್ಚು ಜನ ಅಸ್ವಸ್ಥ!

    ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ 60 ಮಕ್ಕಳು ಸೇರಿ 100ಕ್ಕೂ ಹೆಚ್ಚು ಜನ ಅಸ್ವಸ್ಥ!

    ದಾವಣಗೆರೆ: ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ್ದ 60 ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ನಡೆದಿದೆ.

    ಬಿಳಿಚೋಡ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನಕ್ಕೆ ಬಂದಿದ್ದ ಮಕ್ಕಳು, ಭಕ್ತರು ಸೇರಿದಂತೆ ಸ್ಥಳೀಯರು ಪ್ರಸಾದ ಸೇವಿಸಿದ್ದು, ಸ್ವಲ್ಪ ಸಮಯ ಕಳೆಯುತ್ತಿದ್ದಂತೆ ಊಟ ಮಾಡಿದ್ದವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ.

    ತಕ್ಷಣವೇ ಅಸ್ವಸ್ಥಗೊಂಡವರನ್ನು ಬಿಳಿಚೋಡ ಸರ್ಕಾರಿ ಆಸ್ಪತ್ರೆಗೆ ಹಾಗೂ ಹತ್ತಕ್ಕೂ ಹೆಚ್ಚು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv