Tag: Jagadeesh Shetter

  • ಲಿಂಗಾಯತರ ಬಗ್ಗೆ ಕಾಳಜಿ ಇದ್ದವರು ಜನಾಂದೋಲನ ಕೈಗೊಳ್ಳಲಿ: ಜಗದೀಶ್ ಶೆಟ್ಟರ್ ಸವಾಲು

    ಲಿಂಗಾಯತರ ಬಗ್ಗೆ ಕಾಳಜಿ ಇದ್ದವರು ಜನಾಂದೋಲನ ಕೈಗೊಳ್ಳಲಿ: ಜಗದೀಶ್ ಶೆಟ್ಟರ್ ಸವಾಲು

    ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಕಾಳಜಿ ಇರುವವರು ಈಗ ಜನಾಂದೋಲನ ಹೋರಾಟಕ್ಕೆ ಮುಂದಾಗಲಿ. ರಾಜಕೀಯ ಉದ್ದೇಶಕ್ಕಾಗಿ ಹೋರಾಟ ಮಾಡಿ ಸಮಾಜದಲ್ಲಿ ಒಡಕು ತಂದಿಟ್ಟರು ಎಂದು ಶಾಸಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲಿಂಗಾಯತ ಹಾಗೂ ವೀರಶೈವ ಲಿಂಗಾಯತ ಒಂದೇ. ಚುನಾವಣೆ ಹಿನ್ನೆಲೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಕೆಲವರು ಮುಂದಾದರು. ಅಂತವರಿಗೆ ಜನರು ಚುನಾವಣೆಯ ಫಲಿತಾಂಶದಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಲಿಂಗಾಯತರ ಬಗ್ಗೆ ಕಾಳಜಿ ಇದ್ದವರು ಈಗ ಹೋರಾಟಕ್ಕೆ ಇಳಿಯಲಿ ಎಂದು ಸವಾಲು ಹಾಕಿದರು.

    ಪ್ರತ್ಯೇಕ ಲಿಂಗಾಯತ ಧರ್ಮದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಯಾವ ಕಾರಣಕ್ಕೆ ವಾಪಸ್ ಕಳುಹಿಸಿದೆ ಎಂದು ರಾಜ್ಯ ಸರ್ಕಾರ ಬಹಿರಂಗ ಪಡಿಸಲಿ. ಇದೊಂದು ಸ್ವಾರ್ಥ ಸಾಧನೆಗಾಗಿ ಮಾಡಿದ ಹೋರಾಟ ಅಷ್ಟೇ. ಕೆಲವೇ ಕೆಲವು ನಾಯಕರು, ಸ್ವಾಮೀಜಿಗಳು ಮುಂಚೂಣಿಯಲ್ಲಿದ್ದರು, ಸ್ವಹಿತಾಸಕ್ತಿಗೋಸ್ಕರ ನಡೆಸಿದ ಹೋರಾಟಕ್ಕೆ ಮಹತ್ವ ನೀಡುವುದು ಬೇಡ ಎಂದು ಹೇಳಿದರು.

  • ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇಲ್ಲ, ಬಿಜೆಪಿ ವರ್ಸಸ್ ಆಲ್ ಅದರ್ಸ್: ಶೆಟ್ಟರ್

    ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇಲ್ಲ, ಬಿಜೆಪಿ ವರ್ಸಸ್ ಆಲ್ ಅದರ್ಸ್: ಶೆಟ್ಟರ್

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಸೋಲಿನ ಪರಾಮರ್ಶೆ ಸಭೆ ನಡೆಸಿದ್ದಾರೆ.

    ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಚರ್ಚೆ ನಡೆಸಿದ್ದು ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ಸಿ.ಟಿ.ರವಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಗೆ ಅಸ್ತಿತ್ವವೇ ಇಲ್ಲ. ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಕ್ಕೆ ಬೇಷರತ್ ಬೆಂಬಲ ನೀಡುತ್ತಿದೆ. ಇಂತಹ ರಾಜಕಾರಣವನ್ನು ಎಲ್ಲೂ ನೋಡಿಲ್ಲ. ಕಾಂಗ್ರೆಸ್ ಹಂತ ಹಂತವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಕ್ಕೆ ಇದೇ ಉದಾಹರಣೆ ಎಂದು ಹೇಳಿದರು.

    ಜಯನಗರ, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ದೇಶದಲ್ಲಿ ಮೋದಿ ವರ್ಸಸ್ ಆಲ್ ಅದರ್ಸ್, ಬಿಜೆಪಿ ವರ್ಸಸ್ ಆಲ್ ಅದರ್ಸ್ ಎನ್ನುವ ರೀತಿಯಾಗಿದೆ. ಕರ್ನಾಟಕದಲ್ಲಿ ಕೂಡ ಅದೇ ವಾತಾವರಣ ಇದೆ ಎಂದರು.

    ಕಾಂಗ್ರೆಸ್ ಜೆಡಿಎಸ್ ಅದೇ ರೀತಿ ಇಲ್ಲೂ ಕುತಂತ್ರ ನಡೆಸುವುದಕ್ಕೆ ಹೊರಟಿದ್ದಾರೆ. ಜನ ಇಂತಹ ಕುತಂತ್ರಗಳಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

  • ಸಿಎಂ ಗೆಲುವಿಗೆ ಬಾದಾಮಿಯಲ್ಲಿ 11 ನಾಮಪತ್ರ ವಾಪಸ್

    ಸಿಎಂ ಗೆಲುವಿಗೆ ಬಾದಾಮಿಯಲ್ಲಿ 11 ನಾಮಪತ್ರ ವಾಪಸ್

    ಬಾಗಲಕೋಟೆ: ರೆಸಾರ್ಟ್ ನಲ್ಲಿ ಸಿ.ಎಂ ಇಬ್ರಾಹಿಂ, ಎಸ್.ಆರ್ ಪಾಟೀಲ್, ಆರ್.ಬಿ ತಿಮ್ಮಾಪುರ ನಡೆಸಿದ ಸಂಧಾನದ ಸಭೆ ಯಶಸ್ವಿಯಾಗಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಬಾದಾಮಿಯಲ್ಲಿ 24 ಪಕ್ಷೇತರರ ಪೈಕಿ 11 ಮಂದಿ ನಾಮಪತ್ರ ಹಿಂಪಡೆದಿದ್ದಾರೆ.

    ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಬಾದಾಮಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಬೆಂಬಲಿಸಿ 11 ಮಂದಿ ನಾಮಪತ್ರ ವಾಪಾಸ್ ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆದ ಎಲ್ಲರಿಗೂ ಧನ್ಯವಾದ ತಿಳಿಸಿದರು.

    ನಾಳೆಯಿಂದ ಯುದ್ದೋಪಾದಿಯಲ್ಲಿ ಪ್ರಚಾರ ಮಾಡಲಿದ್ದೇವೆ. ಸಿಎಂ ಸಿದ್ದರಾಮಯ್ಯ ಅಭೂತಪೂರ್ವ ಗೆಲವು ಸಾಧಿಸಲಿದ್ದಾರೆ. ಹಳ್ಳಿಗಳಲ್ಲಿ ಸಿದ್ದರಾಮಯ್ಯ ನವರ ಪರ ಒಲವು ವ್ಯಕ್ತವಾಗಿದೆ. ಎಲ್ಲ ಸಮುದಾಯದ ಜನರ ಬೆಂಬಲ ಸಿಗಲಿದೆ. ನಮ್ಮ ಎದುರಾಳಿಗಳು ಶಕ್ತಿಶಾಲಿಗಳಾಗಿದ್ರು ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿಎಂ ಗೆ ಬಾದಾಮಿಯಲ್ಲಿ ಗೋಡಂಬಿ, ದ್ರಾಕ್ಷಿನೂ ಸಿಗಲ್ಲ ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಶೆಟ್ಟರ್ ಹುಬ್ಬಳ್ಳಿಯಲ್ಲಿ ಗೆಲ್ಲುವುದೇ ಕಷ್ಟವಾಗಿದೆ. ಮೊದಲು ಅವರು ಗೆಲ್ಲುವುದನ್ನು ನೋಡಿಕೊಳ್ಳಲಿ. ಬಾದಾಮಿ ಚಿಂತೆ ಬಿಡಲಿ. ನಾವು ಬಾದಾಮಿ ಗೋಡಂಬಿ ತಿನ್ನಲು ಇಲ್ಲಿಗೆ ಬಂದಿಲ್ಲ ಜನರಿಂದ ಮತ ಪ್ರಸಾದವನ್ನು ಬೇಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

    ಬಿಜೆಪಿ ಆಡಳಿತ ದಲ್ಲಿ ಯಾರೂ ಬಳ್ಳಾರಿಗೆ ಕಾಲಿಡದ ಪರಿಸ್ಥಿತಿ ಬಂದಿತ್ತು. ಯಡಿಯೂರಪ್ಪ ಬಳ್ಳಾರಿಗೆ ಹೋಗಬೇಕಾದ್ರು ಗಣಿಧಣಿಗಳ ಸಮ್ಮತಿ ಬೇಕಿತ್ತು. ಸಿದ್ದರಾಮಯ್ಯ ಪಾದ ಯಾತ್ರೆ ಯಿಂದ ಗಣಿಧಣಿಗಳ ಆರ್ಭಟ ನಿಂತಿದೆ. ನಿರ್ಭಯವಾಗಿ ಬಳ್ಳಾರಿಗೆ ಹೋಗಿ ಬರಬಹುದಾಗಿದೆ. ಅದಕ್ಕಾಗಿ ಬಿಎಸ್‍ವೈ ಸಿದ್ದರಾಮಯ್ಯನವರಿಗೆ ಧನ್ಯವಾದ ಹೇಳಬೇಕು ಎಂದು ಟಾಂಗ್ ನೀಡಿದರು.

    ಬಿಜೆಪಿಯ ಮಹಾಂತೇಶ್ ಮಮದಾಪೂರ್, ಎಂ.ಕೆ. ಪಟ್ಟಣಶೆಟ್ಟಿ ನಾಮಪತ್ರವನ್ನು ಹಿಂಪಡೆದಿದ್ದಾರೆ.

  • ಇಡೀ ದೇಶ ಬಿಜೆಪಿ ಮಯವಾಗುತ್ತದೆ: ಜಗದೀಶ್ ಶೆಟ್ಟರ್

    ಇಡೀ ದೇಶ ಬಿಜೆಪಿ ಮಯವಾಗುತ್ತದೆ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ಈಗಾಗಲೇ ನಾವು ಎರಡೂ ರಾಜ್ಯಗಳಲ್ಲಿ ಗೆಲುವಿನತ್ತ ಮುಂದುವರೆದಿದ್ದೇವೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

    ನಾವು ಎರಡೂ ರಾಜ್ಯಗಳಲ್ಲಿ ಬಹುಮತ ಸಾಧಿಸುತ್ತೇವೆ. ಅದು ಮೋದಿಯವರ ಸಾಧನೆ ನೋಡಿ ಜನರು ಮನ್ನಣೆ ಹಾಕಿದ್ದಾರೆ. ಕಾಂಗ್ರೆಸ್ ನಲ್ಲಿ ತಳಮಳ ಶುರುವಾಗಿದೆ ಹಾಗೂ ಇಡೀ ದೇಶ ಬಿಜೆಪಿ ಮಯವಾಗುತ್ತದೆ. ಕೆಲವು ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಇರಬಹುದು. ಮುಂದಿನ ದಿನಗಳಲ್ಲಿ ಅಲ್ಲೂ ಕಮಲ ಅರಳಲಿದೆ. ಈ ಚುನಾವಣೆ ರಾಜ್ಯದ ಮೇಲೆ ಸಾಕಷ್ಟು ಪರಿಣಾಮ ಬಿರುತ್ತೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ನಾವು ಕಳೆದ ಬಾರಿಗಿಂತ ಹೆಚ್ಚಿನ ಸೀಟುಗಳಿಸುತ್ತವೋ ಬಿಡುತ್ತೆವೋ ಗೊತ್ತಿಲ್ಲ. ಆದರೆ ಗುಜರಾತ್ ನಲ್ಲಿ ನಾವು ಸರಳ ಬಹುಮತ ಪಡೆಯುತ್ತೇವೆ. ಗುಜರಾತ್ ನಲ್ಲಿ ಮೋದಿ ವಿರುದ್ಧ ಕೆಟ್ಟ ಅಪಪ್ರಚಾರ ಮಾಡಿದರು. ಆದರೂ ಏನು ವರ್ಕೌಟ್ ಆಗಲಿಲ್ಲ. ಜಿಎಸ್ ಟಿ, ನೋಟ್ ಬ್ಯಾನ್ ಗೆ ಜನ ವಿರೋಧಿಸಿಲ್ಲ. ವಿರೋಧಿಸಿದರೆ ಗುಜರಾತ್ ನಲ್ಲಿ ನಮಗೆ ಇಷ್ಟೊಂದು ಸೀಟುಗಳು ಬರುತ್ತಿರಲಿಲ್ಲ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.