Tag: jagadeep dhankar

  • ನ್ಯಾ. ವರ್ಮಾ ಪ್ರಕರಣದ ತನಿಖೆ ನಡೆಸಿದ ಆಂತರಿಕ ಸಮಿತಿಗೆ ಕಾನೂನು ಮಾನ್ಯತೆ ಇಲ್ಲ: ಜಗದೀಪ್ ಧನಕರ್

    ನ್ಯಾ. ವರ್ಮಾ ಪ್ರಕರಣದ ತನಿಖೆ ನಡೆಸಿದ ಆಂತರಿಕ ಸಮಿತಿಗೆ ಕಾನೂನು ಮಾನ್ಯತೆ ಇಲ್ಲ: ಜಗದೀಪ್ ಧನಕರ್

    ನವದೆಹಲಿ: ನ್ಯಾಯಮೂರ್ತಿ ಯಶವಂತ್ ವರ್ಮಾ (Yashwant Varma) ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸಿದ ಮೂವರು ನ್ಯಾಯಮೂರ್ತಿಗಳ ಆಂತರಿಕ ಸಮಿತಿಗೆ ಕಾನೂನು ಮಾನ್ಯತೆ ಇಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankar) ತಿಳಿಸಿದ್ದಾರೆ.

    ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರು ಸಂಪಾದಿಸಿರುವ `ದಿ ಕಾನ್‌ಸ್ಟಿಟ್ಯೂಷನ್ ವಿ ಅಡಾಪ್ಟೆಡ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ವಿಚಾರಣಾ ಸಮಿತಿಗೆ ಯಾವುದೇ ಸಾಂವಿಧಾನಿಕ ವ್ಯಾಪ್ತಿಯಾಗಲಿ ಅಥವಾ ಕಾನೂನಿನ ಮಾನ್ಯತೆಯಾಗಲಿ ಇಲ್ಲ. ಆಂತರಿಕ ವಿಚಾರಣಾ ಸಮಿತಿಯಲ್ಲಿದ್ದ ಎರಡು ಹೈಕೋರ್ಟ್ಗಳ ನ್ಯಾಯಮೂರ್ತಿಗಳಿಗೆ ಸಾಕಷ್ಟು ಕಷ್ಟವಾಗಿದೆ. ಅದರಲ್ಲಿ ಒಂದು ಹೈಕೋರ್ಟ್ನ ವ್ಯಾಪ್ತಿ, ಎರಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ ಎಂದರು.ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ | ನಟಿ ರನ್ಯಾರಾವ್‌ಗೆ ಜಾಮೀನು ಮಂಜೂರು

    ಸಮಿತಿಯ ನ್ಯಾಯಮೂರ್ತಿಗಳು ಯಾವುದೇ ಸಾಂವಿಧಾನಿಕ ಆಧಾರ ಅಥವಾ ಕಾನೂನು ಮಾನ್ಯತೆಯಾಗಲಿ ಇಲ್ಲದ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಇದು ಅಪ್ರಸ್ತುತವಾಗಿತ್ತು. ನ್ಯಾಯಾಲಯದ ಆಡಳಿತಾತ್ಮಕ ವಿಭಾಗದಲ್ಲಿ ವಿಕಸಿತವಾಗಿರುವ ಕಾರ್ಯ ವಿಧಾನದ ಮೂಲಕ ತನಿಖಾ ವರದಿಯನ್ನು ಯಾರಿಗಾದರೂ ಕಳುಹಿಸಬಹುದಾಗಿದೆ. ತನಿಖಾ ಸಮಿತಿ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಂಡಿದೆಯೇ ಎಂಬುದು ಜನರಿಗೆ ತಿಳಿದಿಲ್ಲ. ನ್ಯಾ. ವರ್ಮಾ ನಿವಾಸಕ್ಕೆ ಹಣ ಬಂದಿದ್ದು ಹೇಗೆ? ಅದರ ಹಿಂದಿನ ಉದ್ದೇಶ ಏನು? ಹಾಗೂ ಘಟನೆಯ ಹಿಂದಿರುವ ದೊಡ್ಡ ತಿಮಿಂಗಿಲಗಳ ಬಗ್ಗೆ ಅರಿಯಲು ದೇಶ ಕಾಯುತ್ತಿದೆ. ಘಟನೆ ನಡೆದು ಒಂದು ವಾರ ಕಳೆದರೂ 140 ಕೋಟಿ ಜನರಿರುವ ದೇಶಕ್ಕೆ ಆ ಬಗ್ಗೆ ಹೆಚ್ಚಿನ ವಿಷಯ ತಿಳಿಯಲಿಲ್ಲ. ಇಂತಹ ಎಷ್ಟು ಘಟನೆಗಳು ನಡೆದಿರಬಹುದು ಎಂದು ಊಹಿಸಿ. ಅಂತಹ ಪ್ರತಿಯೊಂದು ಘಟನೆಯೂ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

    ಪ್ರಕರಣದ ಆರಂಭಿಕ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಕಾರ್ಯ ಶ್ಲಾಘನೀಯ. ಇದು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಸ್ವಲ್ಪಮಟ್ಟಿಗೆ ಮರುಸ್ಥಾಪಿಸಿದೆ. ನ್ಯಾ.ವರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕಾರ್ಯಾಂಗದ ಕೈಗಳನ್ನು ಕಟ್ಟಿಹಾಕಿದ 1991ರ ಕೆ ವೀರಸ್ವಾಮಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ. ಸಮಗ್ರ ಮತ್ತು ವೈಜ್ಞಾನಿಕ ತನಿಖೆ ಮಾತ್ರ ಇಂತಹ ವಿವಾದವನ್ನು ಕೊನೆಗಾಣಿಸಲು ಸಾಧ್ಯ ಎಂದರು.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಸ್ಕೀಂ ನಿಲ್ಲೋದಿಲ್ಲ: ಡಿಕೆಶಿ ಸ್ಪಷ್ಟನೆ

  • ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಸಕ್ತಿ ಒಂದು ಆಯ್ಕೆಯಲ್ಲ, ಅನಿವಾರ್ಯ – ಜಗದೀಪ್ ಧನಕರ್

    ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಸಕ್ತಿ ಒಂದು ಆಯ್ಕೆಯಲ್ಲ, ಅನಿವಾರ್ಯ – ಜಗದೀಪ್ ಧನಕರ್

    ಗಾಂಧಿನಗರ: ಹವಾಮಾನ ವೈಪರೀತ್ಯದ ಸಮಸ್ಯೆ ಭೂಮಿಯ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಹೀಗಾಗೀ ನವೀಕರಿಸಬಹುದಾದ ಇಂಧನದಲ್ಲಿ (Renewable Energy) ಆಸಕ್ತಿ ತೋರಿಸುವುದು ಒಂದು ಆಯ್ಕೆಯಲ್ಲ ಅದು ಪ್ರಪಂಚದ ಅನಿವಾರ್ಯವಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagadeep Dhankar) ಹೇಳಿದರು.

    ನಾಲ್ಕನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಭೂಮಿಯನ್ನು ಉಳಿಸಲು, ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆ ಮಾಡದೆ ನಮಗೆ ಬೇರೆ ದಾರಿಯಿಲ್ಲ ಮತ್ತು ಹವಾಮಾನ ಬದಲಾವಣೆಯ ಬೆದರಿಕೆಯನ್ನು ಎದುರಿಸಲು ನಾವು ಹಗಲಿರುಳು ಶ್ರಮಿಸಬೇಕಾಗಿದೆ ಎಂದರು. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ಗೆ ಡಿಸಿಎಂ ಪಟ್ಟ – ಶೀಘ್ರವೇ ಘೋಷಣೆ ಸಾಧ್ಯತೆ

    ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವಕ್ಕೆ ಮುಂಚೂಣಿಯಲ್ಲಿದೆ, ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಎದುರಿಸಲು, ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಭಾರತದ ಉಪಕ್ರಮದ ಮೇಲೆ ಸೌರ ಒಕ್ಕೂಟವನ್ನು ರಚಿಸಲಾಯಿತು. ಜಗತ್ತನ್ನು ಉಳಿಸಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿ ಜಗತ್ತಿನ ಎಲ್ಲಾ ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ನಾವು ಶಕ್ತಿಯನ್ನು ಬಳಸುವಾಗ ನಮ್ಮ ಅಗತ್ಯಕ್ಕೆ ಮಾತ್ರ ಬಳಸಬೇಕು. ಭಾರತದಲ್ಲಿ ಆಗುತ್ತಿರುವ ಅಭಿವೃದ್ಧಿಯು ಇಡೀ ಜಗತ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ

    ಈ ಸಂದರ್ಭದಲ್ಲಿ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಮಾತನಾಡಿ, ಇಂದು ಇಡೀ ವಿಶ್ವವೇ ನವೀಕರಿಸಬಹುದಾದ ಇಂಧನಕ್ಕಾಗಿ ಭಾರತದತ್ತ ನೋಡುತ್ತಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಮುಂದಿಟ್ಟಿರುವ ದೂರದೃಷ್ಟಿ. ಗುಜರಾತಿನ ಮುಖ್ಯಮಂತ್ರಿಯಾಗಿ ಮತ್ತು ದೇಶದ ಪ್ರಧಾನಿಯಾಗಿ ಅವರು ಇದರಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಜ್ಯಗಳು 2030 ರ ವೇಳೆಗೆ 540 ಜಿಡಬ್ಲ್ಯೂ ನವೀಕರಿಸಬಹುದಾದ ಶಕ್ತಿಯ ಗುರಿಯನ್ನು ಹೊಂದಿವೆ. 2030 ರ ವೇಳೆಗೆ ಹಸಿರು ಶಕ್ತಿ ಪರಿವರ್ತನೆಗಾಗಿ ಹಣಕಾಸು ಸಂಸ್ಥೆಗಳು 386 ಶತಕೋಟಿ ಡಾಲರ್ ವಾಗ್ದಾನ ಮಾಡಿವೆ. ಇದರಿಂದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 82 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು. ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ – ಯುವಕ ಪೊಲೀಸ್ ವಶಕ್ಕೆ

  • ಮಿಮಿಕ್ರಿ ಮಾಡೋದು ಕಲೆ ಆಗಿದ್ದು, ಬೇಕಿದ್ರೆ ಸಾವಿರ ಬಾರಿ ಮಾಡ್ತೀನಿ: ಟಿಎಂಸಿ ಸಂಸದ

    ಮಿಮಿಕ್ರಿ ಮಾಡೋದು ಕಲೆ ಆಗಿದ್ದು, ಬೇಕಿದ್ರೆ ಸಾವಿರ ಬಾರಿ ಮಾಡ್ತೀನಿ: ಟಿಎಂಸಿ ಸಂಸದ

    ನವದೆಹಲಿ: ಮಿಮಿಕ್ರಿ ಮಾಡುವುದು ಒಂದು ಕಲೆಯಾಗಿದ್ದು, ಬೇಕಿದ್ರೆ ನಾನು ಸಾವಿರ ಬಾರಿ ಅದನ್ನು ಮಾಡುತ್ತೇನೆ. ಹೀಗೆ ಮಾಡಲು ನನಗೆ ಹಕ್ಕಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ (Kalyan Banerjee) ಮತ್ತೆ ಉದ್ಧಟತನ ಮೆರೆದಿದ್ದಾರೆ. ‌

    ಪಶ್ಚಿಮ ಬಂಗಾಳದ (West Bengal) ಶ್ರೀರಾಮ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ , ಕ್ಷುಲ್ಲಕ ವಿಚಾರದಲ್ಲಿ ಅಸಮಾಧಾನಗೊಂಡಿದ್ದಕ್ಕಾಗಿ ಧನ್ಕರ್ ಅವರನ್ನು ಟೀಕಿಸಿದರು. ನಾನು ಮಿಮಿಕ್ರಿ ಮಾಡುತ್ತಲೇ ಇರುತ್ತೇನೆ. ಅದೊಂದು ಕಲೆ. ಬೇಕಾದರೆ ಸಾವಿರ ಬಾರಿ ಮಾಡುತ್ತೇನೆ. ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನನಗೆ ಎಲ್ಲಾ ಹಕ್ಕುಗಳಿವೆ. ನೀವು ನನ್ನನ್ನು ಜೈಲಿಗೆ ಹಾಕಬಹುದು. ಆದರೆ ನಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

    ಬ್ಯಾನರ್ಜಿಯವರ ಮಿಮಿಕ್ರಿಯಿಂದ ರೈತ ಸಮುದಾಯಕ್ಕೆ ಅವಮಾನವಾಗಿದೆ ಎಂಬ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagadeep Dhankar) ಹೇಳಿಕೆಯನ್ನು ಉಲ್ಲೇಖಿಸಿದ ಟಿಎಂಸಿ ಸಂಸದರು, ಧನ್ಕರ್‌ ಅವರು‌ ಜೋಧ್‌ಪುರದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಮತ್ತು ದೆಹಲಿಯಲ್ಲಿ ಐಷಾರಾಮಿ ಫ್ಲ್ಯಾಟ್ ಹೊಂದಿದ್ದಾರೆ. ಅಲ್ಲದೇ ಅವರು ಲಕ್ಷ ರೂಪಾಯಿ ಮೌಲ್ಯದ ಸೂಟ್ ಧರಿಸುತ್ತಾರೆ ಎಂದು ಆರೋಪಿಸಿದರು. ಇದನ್ನೂ ಓದಿ: 20 ವರ್ಷದಿಂದ ನಾನೂ ಅವಮಾನಗಳನ್ನು ಎದುರಿಸಿದ್ದೇನೆ: ಧನ್ಕರ್‌ಗೆ ಕರೆ ಮಾಡಿ ಕಹಿ ಅನುಭವ ಹಂಚಿಕೊಂಡ ಮೋದಿ

    ಇದೇ ವೇಳೆ ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪದ (Security breach in Lok Sabha) ಕುರಿತು ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನೂ ಟೀಕಿಸಿದರು. ಬಿಜೆಪಿ ಸಂಸದರೊಬ್ಬರು ಇಬ್ಬರು ಒಳನುಗ್ಗುವವರಿಗೆ ಸಂದರ್ಶಕರ ಪಾಸ್‌ಗಳನ್ನು ನೀಡಿದ್ದರು. ಬಳಿಕ ಅವರನ್ನು ಉಳಿಸುವ ಸಲುವಾಗಿ 146 ಮಂದಿ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಬ್ಯಾನರ್ಜಿ ಟಾಂಗ್‌ ನೀಡಿದರು.

    ಮಿಮಿಕ್ರಿ ಮಾಡಿರುವ ಪ್ರಕರಣ ಸಂಬಂಧ ಜಕಲ್ಯಾಣ್‌ ಬ್ಯಾನರ್ಜಿ ವಿರುದ್ಧ ನವದೆಹಲಿಯ ಪೊಲೀಸ್‌ ಠಾಣೆಯೊಂದರಲ್ಲಿ ದೂರು ದಾಖಲಾಗಿದೆ. ದಕ್ಷಿಣ ದೆಹಲಿಯ ಪೊಲೀಸ್ ಉಪ ಕಮಿಷನರ್ ಪ್ರಕಾರ, ನಗರದ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಅಭಿಷೇಕ್ ಗೌತಮ್ ಎಂಬ ವಕೀಲರು ಬ್ಯಾನರ್ಜಿ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: 20 ವರ್ಷದಿಂದ ನಾನೂ ಅವಮಾನಗಳನ್ನು ಎದುರಿಸಿದ್ದೇನೆ: ಧನ್ಕರ್‌ಗೆ ಕರೆ ಮಾಡಿ ಕಹಿ ಅನುಭವ ಹಂಚಿಕೊಂಡ ಮೋದಿ