Tag: Jadeja

  • ಧೋನಿಯ 9 ವರ್ಷದ ಹಿಂದಿನ ಟ್ವೀಟ್ ವೈರಲ್

    ಧೋನಿಯ 9 ವರ್ಷದ ಹಿಂದಿನ ಟ್ವೀಟ್ ವೈರಲ್

    ನವದೆಹಲಿ: ರಾಜಸ್ಥಾನದ (Rajasthan Royals) ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ನಾಯಕ ಧೋನಿಯ ಅಬ್ಬರದ ಬ್ಯಾಟಿಂಗ್ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಮೂರು ರನ್‍ಗಳ ಅಂತರದಲ್ಲಿ ಸೋಲು ಕಂಡಿತು. ಇದರ ಬೆನ್ನಲ್ಲೇ ಒಂಬತ್ತು ವರ್ಷಗಳ ಹಿಂದೆ ಧೋನಿ (MS Dhoni) ಪ್ರಕಟಿಸಿದ್ದ ಟ್ವೀಟ್ ವೃರಲ್ ಆಗುತ್ತಿದೆ.

    ಟ್ವೀಟ್‍ನಲ್ಲಿ ಧೋನಿ ಯಾವ ತಂಡ ಗೆದ್ದರೂ ಪರವಾಗಿಲ್ಲ. ನಾನಿಲ್ಲಿ ಮನರಂಜನೆಗಾಗಿ ಇದ್ದೇನೆ ಎಂದು ಬರೆದಿದ್ದರು. ಇದನ್ನೂ ಓದಿ: IPL 2023: ಕೊನೆಯವರೆಗೂ ಹೋರಾಡಿ ಸೋತ ಚೆನ್ನೈ – ರಾಜಸ್ಥಾನ್‌ ರಾಯಲ್ಸ್‌ಗೆ 3 ರನ್‌ಗಳ ರೋಚಕ ಜಯ

    ಕಳೆದ ಪಂದ್ಯಕ್ಕೂ ಈ ಟ್ವೀಟ್‍ಗೂ ಹೊಂದಿಕೊಳ್ಳುತ್ತದೆ. ಏಕೆಂದರೆ ಧೋನಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸಿದ್ದರು.

    ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 175 ರನ್ ಹೊಡೆದಿತ್ತು. ನಂತರ ಬ್ಯಾಟ್ ಮಾಡಿದ ಚೆನ್ನೈಗೆ ಕೊನೆಯ 18 ಎಸೆತಗಳಲ್ಲಿ 54 ರನ್ ಬೇಕಿತ್ತು. ಧೋನಿ ಮತ್ತು ಜಡೇಜಾ (Jadeja) ಕ್ರೀಸ್‍ನಲ್ಲಿದ್ದರು. 18ನೇ ಓವರ್‍ನಲ್ಲಿ 14 ರನ್ ಬಂದಿದ್ದರೆ 19ನೇ ಓವರ್‌ನಲ್ಲಿ 19 ರನ್ ಬಂದಿತ್ತು. ಈ ಓವರ್‍ನಲ್ಲಿ ಜಡೇಜಾ 2 ಸಿಕ್ಸ್ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್ ನೀಡಿದರು.

    ಕೊನೆಯ ಓವರ್‍ನಲ್ಲಿ 21 ರನ್ ಬೇಕಿತ್ತು. ಸಂದೀಪ್ ಶರ್ಮಾ ಎಸೆದ ಮೊದಲ ಎರಡು ಎಸೆತ ವೈಡ್ ಆಗಿತ್ತು. ಎರಡು ಮತ್ತು ಮೂರನೇ ಎಸೆತವನ್ನು ಧೋನಿ ಸಿಕ್ಸರ್‍ಗೆ ಅಟ್ಟಿದ ಹಿನ್ನೆಲೆಯಲ್ಲಿ ಕೊನೆಯ ಮೂರು ಎಸೆತಗಳಲ್ಲಿ 7 ರನ್ ಬೇಕಿತ್ತು. ನಂತರದ ಮೂರು ಎಸೆತಗಳಲ್ಲಿ ಸಿಂಗಲ್ ರನ್ ಬಂದ ಹಿನ್ನೆಲೆಯಲ್ಲಿ ಚೆನ್ನೈ ತಂಡ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಧೋನಿ ಸಿಕ್ಸ್‌ – ಜಿಯೋ ಸಿನಿಮಾದಲ್ಲಿ ದಾಖಲೆ ಫಿಕ್ಸ್‌

  • ಒಂದೇ ಕೈಯಲ್ಲಿ ಜಡೇಜಾ ಕ್ಯಾಚ್‌ – 10 ವರ್ಷದ ಹಿಂದೆ ʼಸರ್‌ ಜಡೇಜಾʼ ಎಂದಿದ್ದ ಧೋನಿ ಟ್ವೀಟ್‌ ವೈರಲ್‌

    ಒಂದೇ ಕೈಯಲ್ಲಿ ಜಡೇಜಾ ಕ್ಯಾಚ್‌ – 10 ವರ್ಷದ ಹಿಂದೆ ʼಸರ್‌ ಜಡೇಜಾʼ ಎಂದಿದ್ದ ಧೋನಿ ಟ್ವೀಟ್‌ ವೈರಲ್‌

    ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ (MS Dhoni) ಅವರು 10 ವರ್ಷದ ಹಿಂದೆ ಆಲ್‌ರೌಂಡರ್‌ ಆಟಗಾರ ಜಡೇಜಾ (Jadeja) ಅವರನ್ನು ಹೊಗಳಿ ಮಾಡಿದ ಟ್ವೀಟ್‌ (Tweet) ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಶನಿವಾರ ನಡೆದ ಪಂದ್ಯದಲ್ಲಿ ಜಡೇಜಾ ಮುಂಬೈ (Mumbai Indians) ತಂಡದ ಬ್ಯಾಟ್ಸ್‌ಮನ್‌ ಕ್ಯಾಮರೂನ್‌ ಗ್ರೀನ್‌ ಅವರನ್ನು ಕ್ಯಾಚ್‌ ಹಿಡಿದು ಔಟ್‌ ಮಾಡಿದ್ದರು.

    ಜಡೇಜಾ ಎಸೆದ ಇನ್ನಿಂಗ್ಸ್‌ನ 9ನೇ ಓವರ್‌ನ ಎರಡನೇ ಎಸೆತವನ್ನು ಬಲವಾಗಿ ಬೌಲರ್‌ ತಲೆಯ ಮೇಲೆ ಬೌಂಡರಿ ಹೊಡೆಯಲು ಗ್ರೀನ್‌ ಯತ್ನಿಸಿದರು.  ಈ ಚೆಂಡಿನಿಂದ ತಪ್ಪಿಸಿಕೊಳ್ಳಲು ಅಂಪೈರ್‌ ಕೆಳಗಡೆ ಬಾಗಿದ್ದರು. ಆದರೆ ಚೆಂಡನ್ನು ಜಡೇಜಾ ಒಂದೇ ಕೈಯಲ್ಲಿ ಹಿಡಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಇದನ್ನೂ ಓದಿ: IPL 2023: ವೇಗದ ಅರ್ಧಶತಕ ಸಿಡಿಸಿ ಧೂಳೆಬ್ಬಿಸಿದ ರಹಾನೆ

    ತಮ್ಮದೇ ಬೌಲಿಂಗ್‌ನಲ್ಲಿ ಅಸಾಧ್ಯವಾದ ಕ್ಯಾಚ್‌ ಅನ್ನು ಜಡೇಜಾ ಹಿಡಿದ ಬೆನ್ನಲ್ಲೇ ಧೋನಿ ಹಳೇಯ ಟ್ವೀಟ್‌ ವೈರಲ್‌ ಆಗಿದೆ.

    “ಸರ್‌ ಜಡೇಜಾ ಕ್ಯಾಚ್ ತೆಗೆದುಕೊಳ್ಳಲು ಓಡುವುದಿಲ್ಲ. ಆದರೆ ಚೆಂಡು ಅವರನ್ನೇ ಹುಡುಕುತ್ತದೆ ಮತ್ತು ಅವರ ಕೈಗೆ ಬೀಳುತ್ತದೆ” ಎಂದು ಧೋನಿ 2013ರ ಏಪ್ರಿಲ್‌ 9 ರಂದು ಟ್ವೀಟ್‌ ಮಾಡಿದ್ದರು.

    ಮೊದಲು ಬ್ಯಾಟ್‌ ಮಾಡಿದ ಮುಂಬೈ 8 ವಿಕೆಟ್‌ ನಷ್ಟಕ್ಕೆ 157ರನ್‌ ಗಳಿಸಿತ್ತು. ಚೆನ್ನೈ ಅಜಿಂಕ್ಯಾ ರೆಹಾನೆ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 18.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 159 ರನ್‌ ಹೊಡೆದು 7 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಜಡೇಜಾ 20 ರನ್‌ ನೀಡಿ 3 ವಿಕೆಟ್‌ ಪಡೆದಿದ್ದರು.

  • ಸಿಎಸ್‌ಕೆ ನಾಯಕತ್ವ ಮರಳಿ ಪಡೆಯುತ್ತಿದ್ದಂತೆ ಧೋನಿ ಅಭಿಮಾನಿಗಳಿಂದ ಮೀಮ್ಸ್ ಸುರಿಮಳೆ

    ಸಿಎಸ್‌ಕೆ ನಾಯಕತ್ವ ಮರಳಿ ಪಡೆಯುತ್ತಿದ್ದಂತೆ ಧೋನಿ ಅಭಿಮಾನಿಗಳಿಂದ ಮೀಮ್ಸ್ ಸುರಿಮಳೆ

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ನಿಸ್ಸಂಶಯವಾಗಿ ಧೋನಿ ಹೆಸರನ್ನೇ ಹೇಳುತ್ತಾರೆ. ಆದರೆ 2022ರ ಐಪಿಎಲ್ ಆರಂಭಕ್ಕೂ ಮೊದಲು ಎಂಎಸ್ ಧೋನಿ ಸಿಎಸ್‌ಕೆ ನಾಯಕತ್ವವನ್ನು ತೊರೆದು, ಅಭಿಮಾನಿಗಳಿಗೆ ಭಾರೀ ಆಘಾತ ನೀಡಿದ್ದರು.

    ಧೋನಿ ಬಳಿಕ ಸಿಎಸ್‌ಕೆ ನಾಯಕತ್ವವನ್ನು ವಹಿಸಿಕೊಂಡಿದ್ದ ರವೀಂದ್ರ ಜಡೇಜಾ ಶನಿವಾರ ತಮ್ಮ ಸ್ಥಾನವನ್ನು ಧೋನಿಗೆ ಮರಳಿ ನೀಡುತ್ತಿರುವುದರ ಬಗ್ಗೆ ಘೋಷಿಸಿದ್ದಾರೆ. ಈ ವಿಚಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹುಚ್ಚೆದ್ದಿರುವ ಧೋನಿ ಅಭಿಮಾನಿಗಳು ಮೀಮ್ಸ್ ಸುರಿಮಳೆಯನ್ನೇ ಹರಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ನಾಯಕತ್ವ ತೊರೆದ ರವೀಂದ್ರ ಜಡೇಜಾ – ಧೋನಿಗೆ ಮತ್ತೆ ಪಟ್ಟ

    ಕಳೆದ ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದ ಸಿಎಸ್‌ಕೆ ತಂಡ, ಈ ಬಾರಿ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತಿದೆ. ಈ ಹಿನ್ನೆಲೆಯಲ್ಲಿ ಜಡೇಜಾ ತಮ್ಮ ಆಟದ ಮೇಲೆ ಕೆಂದ್ರೀಕರಿಸುವ ಸಲುವಾಗಿ ಸಿಎಸ್‌ಕೆ ನಾಯಕತ್ವವನ್ನು ಧೋನಿಗೆ ವಾಪಾಸ್ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನಕ್ಕೆ ಸೋಲಿನ ಶಾಕ್ – ಕಡೆಗೂ ಗೆದ್ದು ಬೀಗಿದ ಮುಂಬೈ

    ಈ ಬಾರಿಯ ಐಪಿಎಲ್ ಮ್ಯಾಚ್‌ನಲ್ಲಿ ಸಿಎಸ್‌ಕೆ ತಂಡ ಕೇವಲ 2 ಪಂದ್ಯಗಳನ್ನು ಗೆದ್ದಿದೆ. 15ನೇ ಆವೃತ್ತಿ ಐಪಿಎಲ್ ಪ್ರಾರಂಭದಲ್ಲಿ ಸತತ 4 ಪಂದ್ಯಗಳನ್ನು ಸೋತ ಬಳಿಕ 5ನೇ ಪಂದ್ಯದಲ್ಲಿ ಸಿಎಸ್‌ಕೆ ಮೊದಲ ಬಾರಿ ಗೆಲುವು ಸಾಧಿಸಿತು. ಆ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಸಿಎಸ್‌ಕೆ ನಂತರ ಮತ್ತೆ ಸೋಲಿನತ್ತ ಮುಖ ಮಾಡಿದೆ. ಇದೀಗ ಜಡೇಜಾ ಬದಲು ಧೋನಿ ನಾಯಕತ್ವ ನಿರ್ವಹಿಸಲು ಮುಂದಾಗಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

  • ಕೊನೆಯವರೆಗೆ ಹೋರಾಡಿ ಸೋತ ಚೆನ್ನೈ – ಪಂಜಾಬ್‌ಗೆ 11 ರನ್‌ಗಳ ಜಯ

    ಕೊನೆಯವರೆಗೆ ಹೋರಾಡಿ ಸೋತ ಚೆನ್ನೈ – ಪಂಜಾಬ್‌ಗೆ 11 ರನ್‌ಗಳ ಜಯ

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 187 ರನ್‌ಗಳಿಸಿದ ಕಿಂಗ್ಸ್ ಪಂಜಾಬ್ ತಂಡವು ಶಿಖರ್ ಧವನ್(88) ಹಾಗೂ ಬನುಕಾ ರಾಜಪಕ್ಸ ಅವರ ಅಬ್ಬರ ಆಟದಿಂದ 11 ರನ್‌ಗಳ ಗೆಲುವು ದಾಖಲಿಸಿದೆ.

    ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಕಿಂಗ್ಸ್, 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 187 ರನ್‌ಗಳ ಮೊತ್ತಗಳಿಸಿತು. 187 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ 176 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಇದನ್ನೂ ಓದಿ: ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    Dhavan

    ಚೆನ್ನೈ ಮೊದಲ 6 ಎಸೆತಗಳಲ್ಲಿ 10 ರನ್‌ಗಳನ್ನು ಗಳಿಸಿತು. ನಂತರದಲ್ಲಿ ರಾಬಿನ್ ಉತ್ತಪ್ಪ. ಶಿವಂ ದುಬೆ ಬಹುಬೇಗನೇ ನಿರ್ಗಮಿಸಿದರು. ಆದರೆ 2ನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ ಆಗಿ ಕ್ರೀಸ್‌ಗಿಳಿದ ಅಂಬಟಿ ರಾಯುಡು 78ರನ್ (39 ಎಸೆತ, 7 ಬೌಂಡರಿ, 6 ಸಿಕ್ಸರ್) ಗಳನ್ನು ಚಚ್ಚುವ ಮೂಲಕ ಪಂಜಾಬ್ ಬೌಲರ್‌ಗಳ ಬೆವರಳಿಸಿದ್ದರು. ಇದರಿಂದಾಗಿ ಚೆನ್ನೈ ತಂಡಕ್ಕೆ ಗೆಲುವಿನ ಕನಸು ಚಿಗುರಿತ್ತು. ಇದನ್ನೂ ಓದಿ: 3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

    RAYUDU CSK.png IPl

    ರಾಯುಡು ಆಟಕ್ಕೆ ಬ್ರೇಕ್ ಹಾಕುವಲ್ಲಿ ರಬಾಡಾ ಯಶಸ್ವಿಯಾದರು. 39ನೇ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿ ಹೊರನಡೆದರು. 5ನೇ ಕ್ರಮಾಂಕದಲ್ಲಿ ಬಂದ ಮಹೇಂದ್ರ ಸಿಂಗ್ ಧೋನಿ ಅವರು ಬಿರುಸಿನ ಆಟವನ್ನೇ ಆಡಿದರು. ಕೊನೆಯ 7ನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಧೋನಿ ಕೊನೆಯ ಓವರ್‌ನಲ್ಲಿ ತಮ್ಮಲ್ಲೇ ಸ್ಟ್ರೈಕ್‌ ಉಳಿಸಿಕೊಂಡರು. 6 ಎತೆಗಳಿಗೆ 28 ರನ್‌ಗಳಷ್ಟೇ ಬೇಕಿತ್ತು. ಮೊದಲ ಬಾಲ್‌ಗೆ ಸಿಕ್ಸರ್ ಬಾರಿಸಿದರು. ಆದರೆ, 2ನೇ ಎಸೆತ ಬೌನ್ಸ್ ಆದ ಹಿನ್ನೆಲೆ ಮತ್ತೊಂದು ಸಿಕ್ಸ್ ಹೊಡೆಯುವ ಪ್ರಯತ್ನವೂ ಕೈತಪ್ಪಿತು. 3ನೇ ಎಸೆತವೂ ವಿಫಲವಾಯಿತು. ನಾಲ್ಕನೆ ಎಸೆತದಲ್ಲಿ ಸಿಕ್ಸ್ ಎತ್ತುವ ಪ್ರಯತ್ನದಲ್ಲಿದ್ದ ಧೋನಿ ಕ್ಯಾಚ್ ನೀಡಿ ನಿರ್ಗಮಿಸಿದರು. ಚೆನ್ನೈ ಅನಿವಾರ್ಯವಾಗಿ ಸೋಲಿನ ಹೊಣೆ ಹೊರಬೇಕಾಯಿತು. ಋತುರಾಜ್ ಗಾಯಕ್ವಾಡ್ 30(27), ರಾಬಿನ್ ಉತ್ತಪ್ಪ 1 (7), ಮಿಚೆಲ್ ಸ್ಯಾಟ್ನರ್ 9 (15), ಶಿವಂ ದುಬೆ 8 (7) ರನ್‌ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ(2/42) ಹಾಗೂ ಮಹೀಶ್ ತೀಕ್ಷಣ(1/32) ವಿಕೆಟ್ ಪಡೆದರು.

    CSK

    ಟಾಸ್ ಸೋತು ಬ್ಯಾಂಟಿಂಗ್ ಇಳಿದ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್(88) ಹಾಗೂ ಬನುಕಾ ರಾಜಪಕ್ಸ(42) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 187 ರನ್‌ಗಳ ಪೈಪೋಟಿಯ ಮೊತ್ತ ಕಲೆಹಾಕಿತು.

    ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಪರ ನಾಯಕ ಮಯಾಂಕ್ ಅಗರ್ವಾಲ್(18) ಬಹುಬೇಗನೆ ನಿರ್ಗಮಿಸಿದರು. ಆದರೆ 2ನೇ ಜೊತೆಯಾದ ಶಿಖರ್ ಧವನ್ 88 ರನ್(59 ಬಾಲ್, 9 ಬೌಂಡರಿ, 2 ಸಿಕ್ಸ್) ಐಪಿಎಲ್‌ನಲ್ಲಿ ಮತ್ತೊಂದು ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇವರಿಗೆ ಸಾಥ್ ನೀಡಿದ ಬನುಕಾ ರಾಜಪಕ್ಸ 42 ರನ್(32 ಬಾಲ್, 2 ಬೌಂಡರಿ, 2 ಸಿಕ್ಸ್) ಬ್ಯಾಟಿಂಗ್ ಪ್ರದರ್ಶಿಸಿದರು. ಸಿಎಸ್‌ಕೆ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ 2ನೇ ವಿಕೆಟ್‌ಗೆ 110(71) ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

    panjab

    ರಾಜಪಕ್ಸ ವಿಕೆಟ್ ಪತನದ ನಂತರ ಬಂದ ಲಿಯಮ್ ಲಿವಿಂಗ್‌ಸ್ಟೋನ್ 19 ರನ್ (7 ಬಾಲ್, 1 ಬೌಂಡರಿ, 2 ಸಿಕ್ಸ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೇ ಧವನ್ ಹಾಗೂ ಲಿವಿಂಗ್‌ಸ್ಟೋನ್ 3ನೇ ವಿಕೆಟ್‌ಗೆ 27(11 ಎಸೆತ) ಜೊತೆಯಾಟದ ಕಾಣಿಕೆ ನೀಡಿದರು. ನಂತರ ಬಂದ ಇಂಗ್ಲೆಂಡ್ ಟೀಂನ ಆರಂಭಿಕ ಆಟಗಾರ ಜಾನಿ ಬ್ರೈಸ್ಟೋ 3 ಎಸೆತಗಳಲ್ಲಿ ಕೇವಲ 6 ರನ್‌ಗಳನ್ನು ಗಳಿಸಿ ರನೌಟ್‌ನಲ್ಲಿ ತಮ್ಮ ವಿಕೆಟ್ ಒಪ್ಪಿಸಿ ನಡೆದರು. ಬೌಲಿಂಗ್‌ನಲ್ಲಿ ಕಾಗಿಸೋ ರಬಾಡಾ ಹಾಗೂ ರಿಶಿ ಧವನ್ ತಲಾ 2 ವಿಕೆಟ್‌ಗಳನ್ನು ಪಡೆದುಕೊಳ್ಳುವ ಮೂಲಕ ತಂಡದ ಗೆಲುವಿಗೆ ನೆರವಾದರು.

    IPL 2022 PBKS VS CSK

    ರನ್ ಏರಿಕೆಯಾಗಿದ್ದು ಹೇಗೆ?
    74 ಎಸೆತಗಳಲ್ಲಿ 50 ರನ್
    75 ಎಸೆತಗಳಲ್ಲಿ 100 ರನ್
    108 ಎಸೆತಗಳಲ್ಲಿ 150 ರನ್
    120 ಎಸೆತಗಳಲ್ಲಿ 187 ರಬ್

  • ಪಾರ್ಟಿ ಮೂಡ್‌ನಲ್ಲಿ ಸಿಎಸ್‌ಕೆ ಅಂಡ್ ಟೀಂ – ಸಾಂಪ್ರದಾಯಿಕ ಉಡುಗೆಯ ಸಂಭ್ರಮ

    ಪಾರ್ಟಿ ಮೂಡ್‌ನಲ್ಲಿ ಸಿಎಸ್‌ಕೆ ಅಂಡ್ ಟೀಂ – ಸಾಂಪ್ರದಾಯಿಕ ಉಡುಗೆಯ ಸಂಭ್ರಮ

    ಮುಂಬೈ: ಐಪಿಎಲ್ ಬ್ಯೂಸಿ ಶೆಡ್ಯೂಲ್ ನಡುವೆಯು ಚೆನ್ನೈ ಸೂಪರ್‌ಕಿಂಗ್ಸ್ (CSK) ತಂಡವು ಫ್ರೀವೆಡ್ಡಿಂಗ್ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ

    CSK TEAM SPIRIT (2)

    ನ್ಯೂಜಿಲೆಂಡ್ ಹಾಗೂ ಚೆನ್ನೈಸೂಪರ್‌ಕಿಂಗ್ಸ್ ತಂಡದ ಕ್ರಿಕೆಟಿಗ ಡಿವೈನ್ ಕಾನ್ವೇ ಹಾಗೂ ಕಿಮ್ ವಾಟ್ಸನ್ ಅವರ ಫ್ರೀವೆಡ್ಡಿಂಗ್ (ವಿವಾಹಪೂರ್ವ) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸಿಎಸ್‌ಕೆ ಅಂಡ್ ಟೀಂ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಸಂಭ್ರಮಿಸಿದ್ದಾರೆ. ಭಾರತೀಯ ಸಂಪ್ರದಾಯಿಕ ಶೈಲಿಯ ಉಡುಗೆಗಳನ್ನೇ ಧರಿಸಿದ್ದ ಪ್ರಮುಖ ಕ್ರಿಕೆಟಿಗರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಮಹೇಂದ್ರಸಿಂಗ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಿವಂ ದುಬೆ, ಮೊಯಿನ್ ಅಲಿ, ಕೋಚ್ ಸ್ಟೀಫನ್ ಫ್ಲೆಮಿಂಗ್, ಋತುರಾಜ್ ಗಾಯಕ್ವಾಡ್ ಸೇರಿದಂತೆ ಹಲವರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

    15ನೇ ಆವೃತ್ತಿಯಲ್ಲಿ 1 ಕೋಟಿ ರೂ.ಗೆ ಖರೀದಿಯಾಗಿ ಚೆನ್ನೈ ತಂಡದ ಮೂಲಕ ಐಪಿಎಲ್ ಪ್ರವೇಶಿಸಿದ ಕಾನ್ವೇ ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 3 ರನ್‌ಗಳಿಸಿ ನಿರ್ಗಮಿಸಿದ್ದರು. ಅದಾದ ಬಳಿಕ ಯಾವುದೇ ಮ್ಯಾಚ್‌ನಲ್ಲೂ ಅವರು ಆಟವಾಡಲಿಲ್ಲ. ಇದೀಗ ತಮ್ಮ ವಿವಾಹ ಮುಗಿದಿದ್ದು, ನಾಳೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಸಿಎಸ್‌ಕೆ ತಂಡದಿಂದ ಕಣಕ್ಕಿಳಿಯಲಿದ್ದಾರೆ.

  • 1 ಓವರ್‌ನಲ್ಲಿ  5 ಸಿಕ್ಸ್, 1 ಮೇಡನ್ 3 ವಿಕೆಟ್ – ಜಡೇಜಾ ಜಾದೂ, ಚೆನ್ನೈಗೆ 69 ರನ್‍ಗಳ ಭರ್ಜರಿ ಜಯ

    1 ಓವರ್‌ನಲ್ಲಿ  5 ಸಿಕ್ಸ್, 1 ಮೇಡನ್ 3 ವಿಕೆಟ್ – ಜಡೇಜಾ ಜಾದೂ, ಚೆನ್ನೈಗೆ 69 ರನ್‍ಗಳ ಭರ್ಜರಿ ಜಯ

    ಮುಂಬೈ: ರವೀಂದ್ರ ಜಡೇಜಾ ಅವರ ಆಲ್‍ರೌಂಡರ್ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 69 ರನ್‍ಗಳಿಂದ ಗೆದ್ದುಕೊಂಡಿದೆ.

    ಗೆಲ್ಲಲು 192 ರನ್‍ಗಳ ಕಠಿಣ ಗುರಿಯನ್ನು ಪಡೆದ ಆರ್‍ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್‍ಗಳಿಸಿತು. ಈ ಮೂಲಕ ಸತತ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಬೆಂಗಳೂರು ಈಗ ಎರಡನೇ ಸ್ಥಾನಕ್ಕೆ ಜಾರಿದೆ. ಚೆನ್ನೈ ಮೊದಲ ಸ್ಥಾನಕ್ಕೆ ಏರಿದೆ.

    ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಜಡೇಜಾ ಇಂದು ವಾಷಿಂಗ್ಟನ್ ಸುಂದರ್ ಅವರನ್ನು ಕ್ಯಾಚ್ ಔಟ್ ಮಾಡಿದ್ದರೆ ಮ್ಯಾಕ್ಸ್ ವೆಲ್ ಮತ್ತು ಎಬಿಡಿ ವಿಲಿಯರ್ಸ್ ಅವರನ್ನು ಬೌಲ್ಡ್ ಮಾಡಿದರು. ಅಷ್ಟೇ ಅಲ್ಲದೇ ಡೇನಿಯಲ್ ಕ್ರಿಸ್ಟಿಯನ್ ಅವರನ್ನು ರನೌಟ್ ಮಾಡಿದರು. ಅಂತಿಮವಾಗಿ ಜಡೇಜಾ 4 ಓವರ್‌ಗಳ ಕೋಟಾದಲ್ಲಿ 1 ಮೇಡನ್ ಮಾಡಿ 13 ರನ್ ನೀಡಿ 4 ವಿಕೆಟ್ ಕಿತ್ತರು.

    ಆರ್‍ಸಿಬಿ ಪರ ದೇವದತ್ ಪಡಿಕ್ಕಲ್ 34 ರನ್(15 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದರೆ ಗ್ಲೇನ್ ಮ್ಯಾಕ್ಸ್ ವೆಲ್ 22 ರನ್(15 ಎಸೆತ, 3 ಬೌಂಡರಿ), ಕೈಲೆ ಜೆಮಿಸನ್ 16 ರನ್(13 ಎಸೆತ, 1 ಬೌಂಡರಿ, 1 ಸಿಕ್ಸರ್) ಮೊಹಮ್ಮದ್ ಸಿರಾಜ್ ಔಟಾಗದೇ 12 ರನ್(14 ಎಸೆತ, 1 ಬೌಂಡರಿ) ಹೊಡೆದರು.

    ಇಮ್ರಾನ್ ತಾಹಿರ್ 2 ವಿಕೆಟ್ ಕಿತ್ತರೆ, ಸ್ಯಾಮ್ ಕರ್ರನ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.

    1 ಓವರಿನಲ್ಲಿ 37 ರನ್: ರವೀಂದ್ರ ಜಡೇಜಾ ಇಂದು ಒಂದೇ ಓವರ್‌ನಲ್ಲಿ 5 ಸಿಕ್ಸರ್ ಚಚ್ಚಿದರೆ, ಆರ್‍ಸಿಬಿಯ ಹರ್ಷಲ್ ಪಟೇಲ್ ದುಬಾರಿ ರನ್ ನೀಡಿದ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾದರು.

    19ನೇ ಓವರ್ ಅಂತ್ಯಕ್ಕೆ ಚೆನ್ನೈ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು. ಜಡೇಜಾ 26 ರನ್ ಗಳಿಸಿದ್ದರೆ ಧೋನಿ 2 ರನ್ ಹೊಡೆದಿದ್ದರು. ಕೊನೆಯ ಓವರ್ ಎಸೆಯಲು ಹರ್ಷಲ್ ಪಟೇಲ್ ಬಂದಿದ್ದರೆ ಜಡೇಜಾ ಸ್ಟ್ರೈಕ್‍ನಲ್ಲಿದ್ದರು.

    ಮೊದಲ ಮೂರು ಎಸೆತವನ್ನು ಜಡೇಜಾ ಸಿಕ್ಸ್ ಗೆ  ಅಟ್ಟಿದರು. ಮೂರನೇ ಎಸೆತ ನೋಬಾಲ್ ಆಗಿದ್ದ ಕಾರಣ ಫ್ರಿ ಹಿಟ್ ಸಿಕ್ಕಿತು. ಈ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರೆ 4ನೇ ಎಸೆತದಲ್ಲಿ 2 ರನ್ ಬಂತು. 5ನೇ ಎಸೆತದಲ್ಲಿ ಸಿಕ್ಸರ್ ಬಂದರೆ 6ನೇ ಎಸೆತದಲ್ಲಿ 4 ರನ್ ಬಂತು.

    5 ಸಿಕ್ಸ್, 1 ಬೌಂಡರಿ, 2 ರನ್ ಹೊಡೆಯುವ ಮೂಲಕ ಜಡೇಜಾ 36 ರನ್ ಹೊಡೆದರೆ ಒಂದು ನೋಬಾಲ್ ಹಾಕಿದ ಕಾರಣ 37 ರನ್ ಬಂತು. ಈ ಹಿಂದೆ 2011ರಲ್ಲಿ ಕೊಚ್ಚಿನ್ ಟಸ್ಕರ್ಸ್ ತಂಡದ ಪರಮೇಶ್ವರನ್ ಆರ್‍ಸಿಬಿ ವಿರುದ್ಧದ ಪಂದ್ಯದಲ್ಲಿ 37 ರನ್ ನೀಡಿದ್ದರು.

    ಹರ್ಷಲ್ ಪಟೇಲ್ 4 ಓವರ್ ಎಸೆದು 3 ವಿಕೆಟ್ ಕಿತ್ತು 51 ರನ್ ನೀಡಿದರೆ ಚಹಲ್ 24 ರನ್ ನೀಡಿ 1 ವಿಕೆಟ್ ಕಿತ್ತರು. ಜಡೇಜಾ ಔಟಾಗದೇ 62 ರನ್(28 ಎಸೆತ, 4 ಬೌಂಡರಿ, 5 ಸಿಕ್ಸರ್) ಹೊಡೆದರೆ ಡು ಪ್ಲೆಸಿಸ್ 50 ರನ್(41 ಎಸೆತ, 5 ಬೌಂಡರಿ, 1 ಸಿಕ್ಸರ್, ಋತುರಾಜ್ ಗಾಯಕ್ವಾಡ್ 33 ರನ್(25 ಎಸೆತ, 4 ಬೌಂಡರಿ, 1ಸಿಕ್ಸರ್) ಹೊಡೆದು ಔಟಾದರು. ಅಂತಿಮವಾಗಿ ಚೆನ್ನೈ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.

     

  • 1 ಓವರ್‌ನಲ್ಲಿ 5 ಸಿಕ್ಸ್ ಸಿಡಿಸಿ 36 ರನ್ ಚಚ್ಚಿದ ಜಡೇಜಾ

    1 ಓವರ್‌ನಲ್ಲಿ 5 ಸಿಕ್ಸ್ ಸಿಡಿಸಿ 36 ರನ್ ಚಚ್ಚಿದ ಜಡೇಜಾ

    ಮುಂಬೈ: ರವೀಂದ್ರ ಜಡೇಜಾ ಇಂದು ಒಂದೇ ಓವರ್‌ನಲ್ಲಿ  5 ಸಿಕ್ಸರ್ ಚಚ್ಚಿದರೆ, ಆರ್‌ಸಿಬಿಯ ಹರ್ಷಲ್ ಪಟೇಲ್ ದುಬಾರಿ ರನ್ ನೀಡಿದ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾದರು.

    19ನೇ ಓವರ್ ಅಂತ್ಯಕ್ಕೆ ಚೆನ್ನೈ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು. ಜಡೇಜಾ 26 ರನ್ ಗಳಿಸಿದ್ದರೆ ಧೋನಿ 2 ರನ್ ಹೊಡೆದಿದ್ದರು. ಕೊನೆಯ ಓವರ್ ಎಸೆಯಲು ಹರ್ಷಲ್ ಪಟೇಲ್ ಬಂದಿದ್ದರೆ ಜಡೇಜಾ ಸ್ಟ್ರೈಕ್‍ನಲ್ಲಿದ್ದರು.

    ಮೊದಲ ಮೂರು ಎಸೆತವನ್ನು ಜಡೇಜಾ ಸಿಕ್ಸರ್‍ಗೆ ಅಟ್ಟಿದರು. ಮೂರನೇ ಎಸೆತ ನೋಬಾಲ್ ಆಗಿದ್ದ ಕಾರಣ ಫ್ರಿ ಹಿಟ್ ಸಿಕ್ಕಿತು. ಈ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರೆ 4ನೇ ಎಸೆತದಲ್ಲಿ 2 ರನ್ ಬಂತು. 5ನೇ ಎಸೆತದಲ್ಲಿ ಸಿಕ್ಸರ್ ಬಂದರೆ 6ನೇ ಎಸೆತದಲ್ಲಿ 4 ರನ್ ಬಂತು.

    5 ಸಿಕ್ಸ್, 1 ಬೌಂಡರಿ, 2 ರನ್ ಹೊಡೆಯುವ ಮೂಲಕ ಜಡೇಜಾ 36 ರನ್ ಹೊಡೆದರೆ ಒಂದು ನೋಬಾಲ್ ಹಾಕಿದ ಕಾರಣ 37 ರನ್ ಬಂತು. ಈ ಹಿಂದೆ 2011ರಲ್ಲಿ ಕೊಚ್ಚಿನ್ ಟಸ್ಕರ್ಸ್ ತಂಡದ ಪರಮೇಶ್ವರನ್ ಆರ್‍ಸಿಬಿ ವಿರುದ್ಧದ ಪಂದ್ಯದಲ್ಲಿ 37 ರನ್ ನೀಡಿದ್ದರು.

    ಹರ್ಷಲ್ ಪಟೇಲ್ 4 ಓವರ್ ಎಸೆದು 3 ವಿಕೆಟ್ ಕಿತ್ತು 51 ರನ್ ನೀಡಿದರೆ ಚಹಲ್ 24 ರನ್ ನೀಡಿ 1 ವಿಕೆಟ್ ಕಿತ್ತರು. ಜಡೇಜಾ ಔಟಾಗದೇ 62 ರನ್(28 ಎಸೆತ, 4 ಬೌಂಡರಿ, 5 ಸಿಕ್ಸರ್) ಹೊಡೆದರೆ ಡು ಪ್ಲೆಸಿಸ್ 50 ರನ್(41 ಎಸೆತ, 5 ಬೌಂಡರಿ, 1 ಸಿಕ್ಸರ್, ಋತುರಾಜ್ ಗಾಯಕ್ವಾಡ್ 33 ರನ್(25 ಎಸೆತ, 4 ಬೌಂಡರಿ, 1ಸಿಕ್ಸರ್) ಹೊಡೆದು ಔಟಾದರು.

  • ಕೊನೆಯಲ್ಲಿ ಬೌಂಡರಿ , ಸಿಕ್ಸರ್‌ ಸುರಿಮಳೆಗೈದ ಜಡೇಜಾ – ಲಾಸ್ಟ್‌ ಬಾಲಿನಲ್ಲಿ ಚೆನ್ನೈಗೆ ರೋಚಕ ಜಯ

    ಕೊನೆಯಲ್ಲಿ ಬೌಂಡರಿ , ಸಿಕ್ಸರ್‌ ಸುರಿಮಳೆಗೈದ ಜಡೇಜಾ – ಲಾಸ್ಟ್‌ ಬಾಲಿನಲ್ಲಿ ಚೆನ್ನೈಗೆ ರೋಚಕ ಜಯ

    ದುಬೈ: ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರ ಸ್ಫೋಟಕ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಗೆಲ್ಲಲು 173 ರನ್‌ಗಳ ಸವಾಲನ್ನು ಪಡೆದ ಚೆನ್ನೈ ಅಂತಿಮವಾಗಿ 20 ಓವರ್‌ಗಳಲ್ಲಿ 178 ರನ್‌ ಹೊಡೆಯಿತು. ಈ ಪಂದ್ಯವನ್ನು ಕೋಲ್ಕತ್ತಾ ಸೋತಿರುವ ಕಾರಣ ಪ್ಲೇ ಆಫ್‌ ಹಾದಿ ಕಠಿಣವಾಗಿದ್ದು ಉಳಿದ ತಂಡಗಳ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.

    ಚೆನ್ನೈ ಗೆದ್ದಿದ್ದು ಹೇಗೆ?
    17. 2 ಓವರ್‌ ಆದಾಗ ಉತ್ತಮವಾಗಿ ಆಡುತ್ತಿದ್ದ ಋತುರಾಜ್‌ ಗಾಯಕ್‌ವಾಡ್‌ 72 ರನ್‌(53 ಎಸೆತ, 6 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದರು. ಈ ವೇಳೆ ಕ್ರೀಸಿಗೆ ಬಂದ ಜಡೇಜಾ ಮೇಲೆ ದೊಡ್ಡ ಸವಾಲಿತ್ತು. ಕೊನೆಯ 12 ಎಸೆತಕ್ಕೆ 30 ರನ್‌ ಬೇಕಿತ್ತು. ಫರ್ಗ್ಯೂಸನ್‌ ಎಸೆದ 19ನೇ ಓವರ್‌ನಲ್ಲಿ ಜಡೇಜಾ ಎರಡು ಬೌಂಡರಿ, 1 ಸಿಕ್ಸರ್‌ ಹೊಡೆದರು. ಈ ಓವರಿನಲ್ಲಿ 20 ರನ್‌ ಬಂತು.

    ಕೊನೆಯ ಓವರ್‌ ಎಸೆಯಲು ಬಂದಿದ್ದು ನಾಗರಕೋಟಿ. ಮೊದಲ ಬಾಲಿನಲ್ಲಿ ಯಾವುದೇ ರನ್‌ ಬರಲಿಲ್ಲ. ಎರಡನೇ ಎಸೆತದಲ್ಲಿ 2 ರನ್‌ ಬಂದರೆ ಮೂರನೇ ಎಸೆತದಲ್ಲಿ ಕರ್ರನ್‌ ಒಂದು ರನ್‌ ತೆಗೆದು ಜಡೇಜಾಗೆ ಸ್ಟ್ರೈಕ್‌ ನೀಡಿದರು. 4ನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. ಹೀಗಾಗಿ ಕೊನೆಯ 2 ಎಸೆತದಲ್ಲಿ 7 ರನ್‌ ಬೇಕಿತ್ತು. 5ನೇ ಎಸೆತದಲ್ಲಿ ಸಿಕ್ಸ್‌ ಬಂತು ಪಂದ್ಯ ಟೈ ಆಯಿತು. ಕೊನೆಯ ಎಸೆತವನ್ನೂ ಜಡೇಜಾ ಸಿಕ್ಸರ್‌ಗೆ ಅಟ್ಟಿ ಜಯವನ್ನು ತಂದಿಟ್ಟರು.

    11 ಎಸೆತದಲ್ಲಿ 3 ಸಿಕ್ಸರ್‌, 2 ಬೌಂಡರಿಯೊದಿಗೆ ಜಡೇಜಾ 31 ರನ್‌ ಹೊಡೆದರು. ಸ್ಯಾಮ್‌ ಕರ್ರನ್‌ 13 ರನ್‌ ಹೊಡೆದರು. ಅಂಬಾಟಿ ರಾಯಡು 38 ರನ್‌(20 ಎಸೆತ, 5 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರೆ ಧೋನಿ 1 ರನ್‌ ಹೊಡೆದು ಪೆವಿಲಿಯನ್‌ ಸೇರಿದರು. ಫರ್ಗ್ಯೂಸನ್‌ 4 ಓವರ್‌ ಎಸೆದು 54 ರನ್‌ ನೀಡಿ ದುಬಾರಿಯಾದರು.

    ಕೋಲ್ಕತ್ತಾ ಪರ ನಿತೀಶ್‌ ರಾಣಾ 87 ರನ್‌(61 ಎಸೆತ, 10 ಬೌಂಡರಿ, 4 ಸಿಕ್ಸರ್)‌ ಹೊಡೆದರೆ ಶುಭಮನ್‌ ಗಿಲ್‌ 26 ರನ್‌ ಹೊಡೆದು ಔಟಾದರು. ಅಂತಿಮವಾಗಿ ಕೋಲ್ಕತ್ತಾ 20 ಓವರ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು 172 ರನ್‌ ಹೊಡೆಯಿತು.

  • ‘ನಾನೇಕೆ ಡೈವ್ ಮಾಡಲಿಲ್ಲ?’- ವಿಶ್ವಕಪ್ ರನೌಟ್ ಕುರಿತು ಮೌನ ಮುರಿದ ಧೋನಿ

    ‘ನಾನೇಕೆ ಡೈವ್ ಮಾಡಲಿಲ್ಲ?’- ವಿಶ್ವಕಪ್ ರನೌಟ್ ಕುರಿತು ಮೌನ ಮುರಿದ ಧೋನಿ

    ಮುಂಬೈ: 2019 ಏಕದಿನ ವಿಶ್ವಕಪ್ ಕ್ರಿಕೆಟಿನಲ್ಲಿ ಟೀಂ ಇಂಡಿಯಾ ಸೆಮಿಫೈನಲ್‍ನಲ್ಲಿ ಸೋತು ಹಿಂದಿರುಗಿತ್ತು. ನ್ಯೂಜಿಲೆಂಡ್ ವಿರುದ್ಧದ ಸೆಮಿಸ್‍ನಲ್ಲಿ ನಡೆದ ಪಂದ್ಯದಲ್ಲಿ ಧೋನಿ ರನೌಟ್ ಆಗುವ ಮೂಲಕ ಹೊರ ನಡೆದಿದ್ದರು. ಧೋನಿಯವರ ರನೌಟ್ ತಂಡವನ್ನು ಜಯದಿಂದ ದೂರ ಮಾಡಿತ್ತು. ಈ ರನೌಟ್ ಕುರಿತು ಇತ್ತೀಚೆಗಷ್ಟೇ ಧೋನಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ವೃತ್ತಿ ಜೀವನ ಮೊದಲ ಮ್ಯಾಚ್‍ನಲ್ಲಿ ರನೌಟ್ ಆದ ರೀತಿಯಲ್ಲೇ ಸೆಮಿಸ್‍ನಲ್ಲೂ ರನೌಟ್ ಆಗಿರುವುದಾಗಿ ನೆನಪಿಸಿಕೊಂಡಿದ್ದಾರೆ.

    ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಸೆಮಿಫೈನಲ್ ಸೋಲುಂಡಿತ್ತು. ಪಂದ್ಯದಲ್ಲಿ ಟೀಂ ಇಂಡಿಯಾ 241 ರನ್ ಗುರಿ ತಲುಪಲು ವಿಫಲವಾಗಿತ್ತು. ತಂಡದ ಆರಂಭಿಕ ಆಟಗಾರರು ವಿಫಲರಾದ ಬಳಿಕ ಜಡೇಜಾ (77 ರನ್), ಧೋನಿ (50 ರನ್) ಗಳಿಸಿ ಆಸೆಯಾಗಿದ್ದರು. ಈ ಹಂತದಲ್ಲಿ ಧೋನಿ ರನೌಟ್ ಆಗಿದ್ದರು. ಸದ್ಯ ರನೌಟ್ ಕುರಿತು ಧೋನಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

    ಪಂದ್ಯದ ಸೋಲಿನ ಬಳಿಕ ನಾನು ಹಲವು ಬಾರಿ ಏಕೆ ಡೈವ್ ಮಾಡಲಿಲ್ಲ ಎಂದು ಪ್ರಶ್ನೆ ಮಾಡುಕೊಂಡಿದ್ದೇನೆ. ಕೇವಲ 2 ಇಂಚಿನ ಅಂತರದಲ್ಲಿ ರನೌಟ್ ಆಯ್ತು, ನಾನು ಡೈವ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.

    ಪಂದ್ಯದಲ್ಲಿ ಧೋನಿ-ಜಡೇಜಾ ಜೋಡಿ 116 ರನ್ ಗಳಿಸಿದ ಸಂದರ್ಭದಲ್ಲಿ ಟೀಂ ಇಂಡಿಯಾ ಗೆಲ್ಲುವ ವಿಶ್ವಾಸವಿತ್ತು. ಅಂತಿಮ 2 ಓವರ್ ಗಳಲ್ಲಿ 31 ರನ್ ಅಗತ್ಯವಿತ್ತು. ಓವರಿನ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಧೋನಿ ಅರ್ಧ ಶತಕ ಪೂರ್ಣಗೊಳಿಸಿದ್ದರು. 2ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 3ನೇ ಎಸೆತದಲ್ಲಿ ಇಲ್ಲದ 2 ರನ್‍ಗೆ ಓಡಲು ಧೋನಿ ಮುಂದಾಗಿ ಮಾರ್ಟಿನ್ ಗಪ್ಟಿಲ್ ಅದ್ಭುತ ಥ್ರೋನಿಂದ ರನೌಟ್ ಆಗಿದ್ದರು. ಆ ಬಳಿಕ ಚಹಲ್, ಭುವನೇಶ್ವರ್ 5 ರನ್ ಗಳಿಸಿ ಔಟಾಗಿದ ಪರಿಣಾಮ 221 ರನ್ ಗಳಿಗೆ ಆಲೌಟ್ ಆಗುವ ಮೂಲಕ 18 ರನ್ ಅಂತರದಲ್ಲಿ ತಂಡ ಸೋಲುಂಡಿತ್ತು.

    ಸೆಮಿಫೈನಲ್ ಪಂದ್ಯದ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರವೇ ಉಳಿದಿದ್ದಾರೆ. ಕೆಲ ಸಮಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದ ಧೋನಿ, ಆ ಬಳಿಕ ನಡೆದ ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ತಂಡಗಳ ವಿರುದ್ಧದ ಸರಣಿಯಿಂದ ದೂರವುಳಿದಿದ್ದಾರೆ. ಇತ್ತ ಮಂಗಳವಾರದಿಂದ ಆರಂಭವಾಗುತ್ತಿರುವ ಆಸೀಸ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭಾಗವಹಿಸುತ್ತಿದ್ದು, ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಪ್ರವಾಸ ಬೆಳೆಸಲಿದೆ.

    ಇತ್ತೀಚೆಗಷ್ಟೇ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದು, ಧೋನಿ ಶೀಘ್ರದಲ್ಲೇ ಏಕದಿನ ಕ್ರಿಕೆಟ್‍ನಿಂದ ದೂರವಾಗಲಿದ್ದಾರೆ ಎಂದು ಹೇಳಿದ್ದು, ಫಿಟ್ನೆಸ್, ಫೇಮ್ ಉತ್ತಮವಾಗಿದ್ದರೆ ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ಅವಕಾಶವಿದೆ ಎಂದಿದ್ದಾರೆ.

  • ಓಡಿ ಬಂದು ಒಂದೇ ಕೈಯಲ್ಲಿ ಬಾಲ್ ಹಿಡಿದು ಡೈರೆಕ್ಟ್ ಥ್ರೋ – ಜಡೇಜಾ ಫೀಲ್ಡಿಂಗ್ ಸೂಪರ್

    ಓಡಿ ಬಂದು ಒಂದೇ ಕೈಯಲ್ಲಿ ಬಾಲ್ ಹಿಡಿದು ಡೈರೆಕ್ಟ್ ಥ್ರೋ – ಜಡೇಜಾ ಫೀಲ್ಡಿಂಗ್ ಸೂಪರ್

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅತ್ಯುತ್ತಮವಾಗಿ ಫೀಲ್ಡಿಂಗ್ ಮಾಡಿ ಉಸ್ಮಾನ್ ಖವಾಜ ಅವರನ್ನು ರನೌಟ್ ಮಾಡಿದ್ದಾರೆ.

    19ನೇ ಓವರ್ 21 ರನ್ ಗಳಿಸಿದ್ದ ಕುಲ್ ದೀಪ್ ಯಾದವ್ ಎಸೆದ 3ನೇ ಎಸೆತವನ್ನು ಖವಜಾ ಬಲಗಡೆ ಹೊಡೆದು ರನ್ ಕದಿಯಲು ಯತ್ನಿಸಿದ್ದರು. ಈ ವೇಳೆ ಕವರ್ ಪಾಯಿಂಟ್ ನಲ್ಲಿದ್ದ ಜಡೇಜಾ ಒಂದೇ ಕೈಯಲ್ಲಿ ಬಾಲನ್ನು ತಡೆದು ನೇರವಾಗಿ ವಿಕೆಟ್ ಗೆ ಗುರಿಯಿಟ್ಟು ಹೊಡೆದರು.

    ಜಡೇಜಾ ಎಸೆದ ಬಾಲ್ ವಿಕೆಟ್ ತಾಗುತ್ತಿದ್ದಂತೆ ಆಟಗಾರರು ಸಂಭ್ರಮಿಸಲು ತೊಡಗಿದರು. ಈ ವೇಳೆ ಅಂಪೈರ್ ಮೂರನೇ ಅಂಪೈರ್ ಗೆ ತೀರ್ಪನ್ನು ವರ್ಗಾಯಿಸಿದರು. ಟಿವಿ ರಿಪ್ಲೈಯಲ್ಲಿ ಸ್ಟಂಪ್ ಹಾರಿದ ಬಳಿಕ ಬ್ಯಾಟ್ ಅನ್ನು ಕ್ರೀಸ್ ಗೆ ಇಡುವುದು ಸ್ಪಷ್ಟವಾಗುತ್ತಿದ್ದಂತೆ ಖವಜಾ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

    ಮೊದಲು ಬ್ಯಾಟಿಂಗ್ ಮಾಡಿರುವ ಆಸ್ಟ್ರೇಲಿಯಾ ಶೇನ್ ಮಾರ್ಶ್ ಅವರ ಶತಕದಿಂದಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದೆ. ಮಾರ್ಶ್ 131 ರನ್(123 ಎಸೆತ, 11 ಬೌಂಡರಿ, 3 ಸಿಕ್ಸರ್) ಹೊಡೆದರೆ ಮ್ಯಾಕ್ಸ್ ವೆಲ್ 48 ರನ್(37 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದರು.

    ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 3, ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv