Tag: Jacqueline Fernandez

  • ಕಿಕ್-2 ನಲ್ಲಿ ಜೊತೆಯಾಗಲಿದ್ದಾರೆ ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ!

    ಕಿಕ್-2 ನಲ್ಲಿ ಜೊತೆಯಾಗಲಿದ್ದಾರೆ ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ!

    ಮುಂಬೈ: ಸಲ್ಮಾನ್ ಖಾನ್ ನಟಿಸುತ್ತಿರುವ ‘ಟೈಗರ್ ಜಿಂದಾ ಹೇ’ ಚಿತ್ರ ಈ ವರ್ಷದ ಕ್ರಿಸ್‍ಮಸ್ ದಿನದಂದು ಬಿಡುಗಡೆಯಾಗಲಿದೆ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‍ನ ಬಿಗ್ ಬಜೆಟ್ ಸಿನಿಮಾಗಳು ಮುಂದಿನ ವರ್ಷ ಸಾಲುಸಾಲಾಗಿ ಬರಲಿದೆ. ಮುಂದಿನ ವರ್ಷ ಸಲ್ಮಾನ್ ಅಭಿನಯಿಸುತ್ತಿರುವ ‘ರೇಸ್-3’ ಮತ್ತು ‘ಕಿಕ್-2’ ಚಿತ್ರ ತೆರೆ ಮೇಲೆ ಬರಲಿದೆ.

    ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಜಾಕ್ವೇಲಿನ್ ಫೆರ್ನಾಂಡಿಸ್ ಅಭಿನಯಿಸುತ್ತಿರುವುದು ನಿಮಗೆಲ್ಲ ಗೊತ್ತೆಯಿದೆ. ಆದರೆ ಈಗ ಕಿಕ್-2 ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವ ಚರ್ಚೆ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ. 2014ರಲ್ಲಿ ಬಿಡುಗಡೆಗೊಂಡ ಕಿಕ್ ಚಿತ್ರದ ಮೊದಲನೇ ಭಾಗದಲ್ಲಿ ಜಾಕ್ವೇಲಿನ್ ನಟಿಸಿ ಸಾಕಷ್ಟು ಜನಪ್ರಿಯರಾದರು.

    ಕಿಕ್-2 ಚಿತ್ರಕ್ಕೆ ಎಲ್ಲಾ ತಯಾರಿಗಳು ನಡೆಸಿಕೊಂಡಿದ್ದು ಶೀಘ್ರದಲ್ಲೇ ಚಿತ್ರೀಕರಣ ಶುರು ಆಗಲಿದೆ. ಈ ಚಿತ್ರದಲ್ಲಿ ಸಲ್ಮಾನ್ ಜೊತೆ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೀಪಿಕಾ ಪಡುಕೋಣೆ ಕಿಕ್-2 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಹಾಗೂ ಈ ಚಿತ್ರ ಮುಂದಿನ ವರ್ಷ ಸೆಟ್ಟೆರಲಿದೆ ಎಂದು ಹೇಳಲಾಗುತ್ತಿದೆ.

  • ಸಲ್ಮಾನ್ ಜೊತೆ ರೇಸ್ ನಲ್ಲಿ ಭಾಗವಹಿಸಲಿದ್ದಾರೆ ಸಿದ್ಧಾರ್ಥ್ ಮಲ್ಹೋತ್ರ?

    ಸಲ್ಮಾನ್ ಜೊತೆ ರೇಸ್ ನಲ್ಲಿ ಭಾಗವಹಿಸಲಿದ್ದಾರೆ ಸಿದ್ಧಾರ್ಥ್ ಮಲ್ಹೋತ್ರ?

    ಮುಂಬೈ: ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಜಾಕ್ವೇಲಿನ್ ಫೆರ್ನಾಂಡಿಸ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ನಿಮಗೆಲ್ಲಾ ಗೊತ್ತೆಯಿದೆ. ಆದರೆ ಈಗ ಸಿದ್ಧಾರ್ಥ್ ಮಲ್ಹೋತ್ರ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

    ಸಲ್ಮಾನ್ ರೇಸ್-3 ಚಿತ್ರಕ್ಕಾಗಿ ಸಿದ್ಧ್ ಅವರ ಹೆಸರನ್ನು ಸೂಚಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಲ್ಮಾನ್ ಖಾನ್ ಯುವ ನಟ ಸಿದ್ದಾರ್ಥ್ ನಟನೆಯನ್ನು ಮೆಚ್ಚಿಕೊಂಡಿದ್ದು, ಹಾಗಾಗಿ ಚಿತ್ರತಂಡಕ್ಕೆ ಸಿದ್ದಾರ್ಥ್ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಸಿದ್ದಾರ್ಥ್ ನಟಿಸಿದ್ರೆ ಇದು ಅವರ ಸಿನಿಮಾ ಜೀವನದಲ್ಲಿ ಮತ್ತಷ್ಟು ಹೆಸರನ್ನು ತಂದುಕೊಡಲಿದೆ.

    ಸಿದ್ಧಾರ್ಥ್ ಈ ಹಿಂದೆ `ಜೆಂಟಲ್ ಮೆನ್’ ಚಿತ್ರದಲ್ಲಿ ಜಾಕ್ವೇಲಿನ್ ಜೊತೆ ನಟಿಸಿದ್ದರು. ರೇಸ್-3 ಚಿತ್ರದಲ್ಲಿ ನಟಿಸಲು ಸಿದ್ದಾರ್ಥ್ ಒಪ್ಪಿದ್ದರೆ ಜಾಕ್ವೇಲಿನ್ ಅವರ ಜೊತೆ ಮತ್ತೊಮ್ಮೆ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಸಲ್ಮಾನ್ ಜೊತೆ ಮೊದಲನೇ ಬಾರಿಗೆ ತೆರೆಯನ್ನು ಹಂಚಿಕೊಳ್ಳಲಿದ್ದಾರೆ.

    ಸಿದ್ದಾರ್ಥ ಈ ಮೊದಲು ಅಕ್ಷಯ್ ಕುಮಾರ್ ಅವರ ಜೊತೆ ‘ಬ್ರದರ್ಸ್’ ಚಿತ್ರದಲ್ಲಿ ನಟಿಸಿದ್ದರು. ಶಾರುಖ್ ಖಾನ್ ನಟಿಸಿದ್ದ ‘ಮೈ ನೇಮ್ ಈಸ್ ಖಾನ್’ ಚಿತ್ರದಲ್ಲಿ ಕರಣ್ ಜೋಹರ್ ಜೊತೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದರು.