Tag: Jacqueline Fernandez

  • ಸಾವಿರಾರು ಜನರಿಗೆ ಅನ್ನದಾತೆಯಾಗಿರುವ ಜಾಕ್ವೆಲಿನ್ ಫರ್ನಾಂಡಿಸ್

    ಸಾವಿರಾರು ಜನರಿಗೆ ಅನ್ನದಾತೆಯಾಗಿರುವ ಜಾಕ್ವೆಲಿನ್ ಫರ್ನಾಂಡಿಸ್

    ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ದಿನಗೂಲಿ ಕಾರ್ಮಿಕರಿಗೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಹೊಟ್ಟೆ ತುಂಬ ಊಟ ಹಂಚುತ್ತಿದ್ದಾರೆ.

    ಬಿಟೌನ್ ಬ್ಯೂಟಿ ಜಾಕ್ವೆಲಿನ್ ಕೊರೊನಾ ಸಂಕಷ್ಟದ ಸಮಯದಲ್ಲಿ ತೊಂದರೆಗೆ ಸಿಲುಕಿರುವ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪೌಂಡೆಶನ್‍ವೊಂದನ್ನು ಶುರು ಮಾಡಿದ್ದಾರೆ. ಹಲವು ಎನ್‍ಜಿಒಗಳ ಜೊತೆಗೆ ಕೈ ಜೋಡಿಸಿದೆ. ಈ ಪೌಂಡೆಶನ್ ಮೂಲಕ ಹಣ ಸಂಗ್ರಹಿಸಿ, ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದಾರೆ.

    ಮುಂಬೈನ್ ರೋಟಿ ಬ್ಯಾಂಕ್ ಹೆಸರಿನ ಎನ್‍ಜಿಒ ಕಚೇರಿಗೆ ಬೇಟಿ ನೀಡಿದ್ದೇನು. ರೋಟಿ ಬ್ಯಾಂಕ್ ಎನ್‍ಜಿಒ ನಿವೃತ್ತ ಪೊಲೀಸ್ ಅಧಿಕಾರಿ ಡಿ ಶಿವಾನಂದನ್ ಅವರು ಹಸಿದ ಸಾವಿರಾರು ಹೊಟ್ಟೆಗಳಿಗೆ ಅನ್ನ ನೀಡುತ್ತಿದ್ದಾರೆ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಜಾಕ್ವೆಲಿನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಸಿನಿಮಾ ತಾರೆಯರು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯದ ಹಸ್ತ ಚಾಚಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರತಿ ನಿತ್ಯ 5000 ಜನರಿಗೆ ಊಟ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ವತಃ ತಾವೇ ಮುಂದೆ ನಿಂತು ಆಹಾರವನ್ನು ಪರಿಶೀಲಿಸಿ ಪ್ಯಾಕ್ ಮಾಡಿಸುತ್ತಿದ್ದಾರೆ. ಸೋನು ಸೂದ್ ಅವರು ಕಳೆದವರ್ಷದಿಂದ ಹಲವಾರು ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ಆಕ್ಸಿಜನ್ ಪೂರೈಕೆಯನ್ನು ಮಾಡುತ್ತಿದ್ದಾರೆ. ಹೀಗೆ ಹಲವು ಸೆಲೆಬ್ರಿಟಿಗಳು ಕೊರೊನಾ ಜಾಗೃತಿ ಮೂಡಿಸುವುದರ ಜೊತೆಗೆ ಸಹಾಯವನ್ನು ಮಾಡುತ್ತಿದ್ದಾರೆ.

  • ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಕ್ವೆಲಿನ್ ಟಾಪ್‍ಲೆಸ್ ಫೋಟೋ

    ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಕ್ವೆಲಿನ್ ಟಾಪ್‍ಲೆಸ್ ಫೋಟೋ

    ಮುಂಬೈ: ನಟಿ ಮಣಿಯರಿಗೆ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಒಂಥರಾ ಕ್ರೇಜ್, ಅದೇ ರೀತಿ ಇದೀಗ ಜಾಕ್ವೆಲಿನ್ ಫರ್ನಾಂಡಿಸ್ ಅವರ ಲೆಟೆಸ್ಟ್ ಫೋಟೋ ಶೂಟ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಟಾಪ್‍ಲೆಸ್ ಫೋಟೋ ಶೂಟ್ ಮಾಡಿಸುವ ಮೂಲಕ ನಟಿ ಗಮನ ಸೆಳೆದಿದ್ದಾರೆ.

    ಫೋಟೋಶೂಟ್‍ನ ಕೆಲ ಚಿತ್ರಗಳನ್ನು ಜಾಕ್ವೆಲಿನ್ ಇನ್‍ಸ್ಟಾಗ್ರಾಂನಲ್ಲಿ ಅಪ್‍ಲೋಡ್ ಮಾಡಿದ್ದು, ಅವರ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಚರ್ಚೆಯಲ್ಲಿ ಬ್ಯುಸಿಯಾಗಿದ್ದಾರೆ. ಟಾಪ್‍ಲೆಸ್ ಆಗಿ ಸೋಫಾ ಮೇಲೆ ಮಲಗಿ ಪೋಸ್ ನೀಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಬ್ಲಾಕ್ ಆ್ಯಂಡ್ ವೈಟ್ ಫೋಟೋ ಹಾಕಿ ಸಾಲುಗಳನ್ನು ಬರೆದಿರುವ ಅವರು, ವಾವಾ ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೇವಲ ಒಂದು ಗಂಟೆಯೊಳಗೆ ಬರೋಬ್ಬರಿ 4 ಲಕ್ಷ ಲೈಕ್ಸ್ ಪಡೆದಿದೆ. ಕಮೆಂಟ್ ಸೆಕ್ಷನ್‍ನಲ್ಲಿ ಹಾಟ್ ಹಾಗೂ ಹಾರ್ಟ್ ಎಮೋಜಿಗಳೇ ಕಾಣುತ್ತಿವೆ. ಅಬ್ಸಲ್ಯೂಟ್ಲಿ ಸ್ಟನ್ನಿಂಗ್ ಎಂದು ಒಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಯೂ ಪರ್ಫೆಕ್ಟ್ ಎಂದು ಹೇಳಿದ್ದಾನೆ. ಹೀಗೆ ಹಲವರು ಕಮೆಂಟ್ ಮಾಡುವ ಮೂಲಕ ನೆಚ್ಚಿನ ನಟಿಯ ಫೋಟೋ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಜಾಕ್ವೆಲಿನ್ ಫರ್ನಾಂಡಿಸ್ ಸದ್ಯ ಭೂತ್ ಪೊಲೀಸ್ ಚಿತ್ರದಲ್ಲಿ ನಟಿಸುತ್ತಿದ್ದು, ಸೈಫ್ ಅಲಿ ಖಾನ್, ಅರ್ಜುನ್ ಕಪೂರ್ ಹಾಗೂ ಯಮಿ ಗೌತಮ್ ಸಹ ಈ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.

  • ಮೆಕಪ್‍ಮೆನ್ ಬಳಿಕ ಮತ್ತೊಬ್ಬ ಸಿಬ್ಬಂದಿಗೆ ಕಾರು ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್

    ಮೆಕಪ್‍ಮೆನ್ ಬಳಿಕ ಮತ್ತೊಬ್ಬ ಸಿಬ್ಬಂದಿಗೆ ಕಾರು ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್

    – ದಸರಾ ಪ್ರಯುಕ್ತ ವಿಶೇಷ ಉಡುಗೊರೆ
    – ಗಿಫ್ಟ್ ವೀಡಿಯೋ ಸಖತ್ ವೈರಲ್

    ನವದೆಹಲಿ: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ, ಬಾಲಿವುಡ್ ನಟಿ ಅಲಿಯಾ ಭಟ್ ನಂತರ ಇದೀಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಮನೆಯ ಸಿಬ್ಬಂದಿಯೊಬ್ಬರಿಗೆ ಕಾರು ಗಿಫ್ಟ್ ಮಾಡುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ.

    ಹೌದು. ಜಾಕ್ವೆಲಿನ್ ಅವರು ಮುಂಬೈಗೆ ಭೇಟಿ ನೀಡಿ, ತಮ್ಮ ಸಿಬ್ಬಂದಿಗೆ ಕಾರು ಕೀ ನೀಡುವ ಮೂಲಕ ದಸರಾ ಹಬ್ಬಕ್ಕೆ ಸರ್ಪ್ರೈಸ್ ಆಗಿ ಉಡುಗೊರೆ ನೀಡಿದ್ದಾರೆ. ಅಲ್ಲದೆ ಇದೇ ವೇಳೆ ಸಿಬ್ಬಂದಿ ಜೊತೆ ಸೇರಿ ಕಾರಿಗೆ ಆಯುಧ ಪೂಜೆ ಕೂಡ ನೆರವೇರಿಸಿದ್ದಾರೆ.

    ಜಾಕ್ವೆಲಿನ್ ಕಾರಿನ ಕೀ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದಸರಾ ಹಬ್ಬದ ಸಮಯದಲ್ಲಿ ವಿಶೇಷ ಉಡುಗೊರೆ ನೀಡಿ ಸಿಬ್ಬಂದಿಯ ಸಂತಸ, ಸಂಭ್ರಮ ಮತ್ತಷ್ಟು ಹೆಚ್ಚಿಸಿದ್ದಾರೆ. ವಿಶೇಷ ಅಂದರೆ ಇದೇ ಸಂದರ್ಭದಲ್ಲಿ ಜಾಕ್ವೆಲಿನ್ ಟ್ರಾಫಿಕ್ ಪೊಲೀಸ್ ಯೂನಿಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

    ವೀಡಿಯೋದಲ್ಲಿ ಊದಿನ ಕಡ್ಡಿ ಹಾಗೂ ಸ್ವೀಟ್ ಹಿಡಿದುಕೊಂಡು ನಿಂತಿರುತ್ತಾರೆ. ಈ ವೇಳೆ ಸಿಬ್ಬಂದಿಗೆ ಒಡೆಯಲು ತೆಂಗಿನ ಕಾಯಿ ಹಿಡಿದುಕೊಂಡು ಬರುತ್ತಾರೆ. ಅಲ್ಲದೆ ನಟಿಯನ್ನು ಹಿಂದೆ ಸರಿಯುವಂತೆ ಹೇಳಿ ಕುಳಿತುಕೊಂಡು ತೆಂಗಿನ ಕಾಯಿ ಒಡೆಯುವ ಮೂಲಕ ಕಾರಿಗೆ ಆಯುಧ ಪೂಜೆ ಮಾಡಿರುವುದನ್ನು ಕಾಣಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಜಾಕ್ವೆಲಿನ್ ಮೂವಿ ಸೆಟ್ ನಲ್ಲಿರುವ ಒಂದು ಫೋಟೋ ಕೂಡ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಎಲ್ಲರ ಭಾನುವಾರ ಹೇಗಿತ್ತು? ಶೀಘ್ರವೇ ತಮಾಷೆಯ ಪ್ರಾಜೆಕ್ಟ್ ಒಂದು ಬರಲಿದೆ. ಮೈ ಹ್ಯಾಪಿ ಪ್ಲೇಸ್ ಎಂದು ಬರೆದುಕೊಂಡು ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

    ಜಾಕ್ವೆಲಿನ್ ಅವರು ಸಿಬ್ಬಂದಿಗೆ ಗಿಫ್ಟ್ ಕೊಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಜಾಕ್ವೆಲಿನ್ ತನ್ನ ಮೆಕಪ್‍ಮೆನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದರು. ನಟಿ ತನ್ನ ಜೊತೆ ಕೆಲಸ ಮಾಡುವ ಸಿಬ್ಬಂದಿಯನ್ನು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಜಾಕ್ವೆಲಿನ್ ಅವರು ಮೆಕಪ್‍ಮೆನ್ ಶಾನ್ ಮುತಾತಿಲ್‍ನ 34ನೇ ವರ್ಷದ ಹುಟ್ಟುಹಬ್ಬಕ್ಕೆ ಬ್ರ್ಯಾಂಡ್ ನ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

     

    View this post on Instagram

     

    How was everyone’s Sunday?? Fun project coming up soon! #myhappyplace❤️

    A post shared by Jacqueline Fernandez (@jacquelinef143) on

    ಜಾಕ್ವೆಲಿನ್ ಸಪ್ರ್ರೈಸ್ ನೀಡುತ್ತಿರುವ ವಿಡಿಯೋವನ್ನು ಶಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. “ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕೆಲಸದಿಂದಲ್ಲೇ ನನ್ನ ಹುಟ್ಟುಹಬ್ಬದ ದಿನ ಶುರುವಾಗಿದೆ. ಈ ವರ್ಷ ಜಾಕ್ವೆಲಿನ್ ನನಗೆ ಅದ್ಭುತವಾದ ಸರ್ಪ್ರೈಸ್ ನೀಡಿದ್ದಾರೆ. ಅಪಾರ್ಟ್ ಮೆಂಟ್ ಕೆಳಗೆ ಕಾರಿನವರೆಗೂ ಹೋಗುವುದನ್ನು ವಿಡಿಯೋ ಮಾಡು ಎಂದು ಹೇಳಿದ್ರಿ. ಆದರೆ ನನಗೆ ಈ ಸರ್ಪ್ರೈಸ್ ನೀಡುತ್ತೀರಿ ಎಂದು ಯಾವುದೇ ಸುಳಿವು ಸಹ ಇರಲಿಲ್ಲ. ನನಗೆ ತುಂಬಾ ಖುಷಿಯಾಗಿದೆ” ಎಂದು ಶಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

  • ನಿಖಿಲ್ ಕುಮಾರಸ್ವಾಮಿ ಜೊತೆ ಬಿಟೌನ್ ನಟಿ ಸ್ಟೆಪ್

    ನಿಖಿಲ್ ಕುಮಾರಸ್ವಾಮಿ ಜೊತೆ ಬಿಟೌನ್ ನಟಿ ಸ್ಟೆಪ್

    ಬೆಂಗಳೂರು: ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರ್ ಸದ್ಯಕ್ಕೆ `ಸೀತಾ ರಾಮ ಕಲ್ಯಾಣ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಕೊನೆಯ ಹಂತ ತಲುಪಿದೆ.

    ಈ ಹಿಂದೆ ನಿಖಿಲ್ ಅಭಿನಯದ `ಜಾಗ್ವಾರ್’ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ತಮನ್ನಾ ಭಾಟಿಯಾ, ನಿಖಿಲ್ ಜೊತೆ ಹಾಡೊಂದರಲ್ಲಿ ಅಭಿನಯಿಸಿದ್ದರು. ಇದೀಗ `ಸೀತಾ ರಾಮ ಕಲ್ಯಾಣ’ ಸಿನಿಮಾದಲ್ಲಿ ನಿಖಿಲ್ ಜೊತೆ ಬಿಟೌನ್ ನಟಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಬಿಟೌನ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಸ್ಯಾಂಡಲ್ ವುಡ್ ಗೆ ಬರುವ ಸಾಧ್ಯತೆಗಳಿವೆ. `ಸೀತಾ ರಾಮ ಕಲ್ಯಾಣ’ ಚಿತ್ರತಂಡ ಸಿನಿಮಾದಲ್ಲಿ ಒಂದು ಸ್ಪೆಷಲ್ ಹಾಡಿಗೆ ನಿಖಿಲ್ ಜೊತೆ ಸ್ಟೆಪ್ ಹಾಕಿಸಲು ತಯಾರಿ ಮಾಡಿಕೊಂಡಿದೆ. ಆದ್ದರಿಂದ ಈಗಾಗಲೇ ಜಾಕ್ವೆಲಿನ್ ಅವರಿಗೆ ಕರೆ ಮಾಡಿ ಮಾತುಕತೆ ನಡೆದಿದ್ದು, ಡೇಟ್ ಬಗ್ಗೆ ಮಾತ್ರ ಮಾತುಕತೆ ಆಗಬೇಕು ಎಂದು ತಿಳಿದು ಬಂದಿದೆ.

    ಜಾಕ್ವೆಲಿನ್ ಬಾಲಿವುಡ್ ನಲ್ಲಿ ಬೇಡಿಕೆಯ ನಟಿಯಾಗಿದ್ದು, `ಆಪ್ ಕಾ ಕ್ಯಾ ಹೋಗಯಾ’, `ಜಾದು ಕೀ ಜಪ್ಪಿ’ ಮತ್ತು `ಬಾಗಿ -2′ ಸಿನಿಮಾದ ಏಕ್ ದೋ ತೀನ್ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಇತ್ತೀಚಿಗಷ್ಟೆ ರೇಸ್ -3 ಸಿನಿಮಾದಲ್ಲೂ ಕೂಡ ನಟ ಸಲ್ಮಾನ್ ಖಾನ್ ಜೊತೆ ನಟಿಸಿದ್ದಾರೆ. ಸದ್ಯಕ್ಕೆ ಜಾಕ್ವೆಲಿನ್ ಸುಶಾಂತ್ ಸಿಂಗ್ ರಜಪೂತ್ ಜೊತೆ ಅಭಿನಯಿಸುತ್ತಿದ್ದಾರೆ.

    `ಸೀತಾ ರಾಮ ಕಲ್ಯಾಣ’ ಸಿನಿಮಾ ಚೆನ್ನಾಂಭಿಕ ಕಂಬೈನ್ಸ್ ನಲ್ಲಿ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ಈಗಾಗಲೇ ಬಹುಭಾಷಾ ತಾರೆಯರು ಅಭಿನಯಿಸಿದ್ದಾರೆ. ಈ ಸಿನಿಮಾಗೆ ಎ. ಹರ್ಷ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು ನಿಖಿಲ್‍ ಗೆ ನಾಯಕಿಯಾಗಿ ಇದೇ ಮೊದಲ ಬಾರಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

  • ಸ್ಟಂಟ್ ಮಾಡಲು ಹೋಗಿ ಶಾಶ್ವತವಾಗಿ ಕಣ್ಣಿಗೆ ಗಾಯಮಾಡಿಕೊಂಡ ಜಾಕ್ವೇಲಿನ್!

    ಸ್ಟಂಟ್ ಮಾಡಲು ಹೋಗಿ ಶಾಶ್ವತವಾಗಿ ಕಣ್ಣಿಗೆ ಗಾಯಮಾಡಿಕೊಂಡ ಜಾಕ್ವೇಲಿನ್!

    ಮುಂಬೈ: ಬಾಲಿವುಡ್ ಬೆಡಗಿ ಜಾಕ್ವೇಲಿನ್ ಫರ್ನಾಂಡಿಸ್ ರೇಸ್- 3 ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈಗ ತಮ್ಮ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

    ಜಾಕ್ವೇಲಿನ್ ರೇಸ್-3 ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರು ಸಾಕಷ್ಟು ಆ್ಯಕ್ಷನ್ ಸ್ಟಂಟ್ ಮಾಡಿದ್ದಾರೆ. ಹೀಗೆ ಮಾರ್ಚ್ ತಿಂಗಳಲ್ಲಿ ಜಾಕ್ವೇಲಿನ್ ಚಿತ್ರಕ್ಕಾಗಿ ಸಾಹಸ ದೃಶ್ಯ ಮಾಡುವಾಗ ತಮ್ಮ ಕಣ್ಣಿಗೆ ಗಾಯ ಮಾಡಿಕೊಂಡಿದ್ದರು. ಆದರೆ ಈ ಗಾಯ ಈಗ ಶಾಶ್ವತವಾಗಿರುತ್ತದೆ ಎಂದು ಹೇಳುವ ಮೂಲಕ ಜಾಕ್ವೇಲಿನ್ ತಮ್ಮ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

    ಜಾಕ್ವೇಲಿನ್ ತಮ್ಮ ಕಣ್ಣಿನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ “ಈ ಗಾಯ ಈಗ ಶಾಶ್ವತವಾಗಿ ಇರುತ್ತದೆ. ನನ್ನ ಐರಿಸ್ ಎಂದಿಗೂ ವೃತ್ತಾಕಾರ ಆಗುವುದಿಲ್ಲ. ಆದರೆ ನನಗೆ ಸರಿಯಾಗಿ ಕಣ್ಣು ಕಾಣಿಸುತ್ತಿರುವುದು ಸಂತೋಷವಾಗಿದೆ. ಇದು ರೇಸ್-3 ಚಿತ್ರದ ನೆನಪು” ಎಂದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

    ರೇಸ್-3 ಚಿತ್ರ ಅಬುಧಾಬಿಯಲ್ಲಿ ಚಿತ್ರೀಕರಿಸುವಾಗ ಜಾಕ್ವೇಲಿನ್ ಸ್ಕ್ವಾಶ್ ಆಡುತ್ತಿದ್ದರು. ಆ ವೇಳೆ ತಮ್ಮ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದರು. ಆಗ ತಕ್ಷಣ ಜಾಕ್ವೇಲಿನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡಿದ್ದರು.

    ಜಾಕ್ವೇಲಿನ್ ಅವರ ಕಣ್ಣಿಗೆ ಗಾಯವಾಗಿದೆ. ಇದು ಒಂದು ಸಾಮಾನ್ಯವಾದ ಗಾಯ. ಸ್ಕ್ವಾಶ್ ಆಡುವಾಗ ಜಾಕ್ವೇಲಿನ್ ಕಣ್ಣಿನ ಮೇಲ್ಭಾಗಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ಈಗ ಜಾಕ್ವೇಲಿನ್ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ರೇಸ್-3 ಚಿತ್ರದ ನಿರ್ಮಾಪಕ ರಮೇಶ್ ತೌರಾಣಿ ಹೇಳಿದ್ದರು.

    ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್, ಬಾಬಿ ಡಿಯೋಲ್, ಅನಿಲ್ ಕಪೂರ್, ಡೈಸಿ ಷಾ ಹಾಗೂ ಸಾಕಿಬ್ ಸಲೀಮ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಜೂನ್ 15ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

  • ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಕಾರು ಅಪಘಾತ!

    ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಕಾರು ಅಪಘಾತ!

    ಮುಂಬೈ: ಕಳೆದ ರಾತ್ರಿ ಬಾಲಿವುಡ್ ಬೆಡಗಿ ಜಾಕ್ವೇಲಿನ್ ಫರ್ನಾಂಡಿಸ್ ಪ್ರಯಾಣಿಸುತ್ತಿದ್ದ ಕಾರು ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಸಲ್ಮಾನ್ ಖಾನ್ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು ಜಾಕ್ವೇಲಿನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರೇಸ್- 3 ಚಿತ್ರದ ಶೂಟಿಂಗ್ ಮುಗಿದು, ಬಿಡುಗಡೆಗೆ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಸಲ್ಮಾನ್ ಖಾನ್ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಜಾಕ್ವೇಲಿನ್ ಕೂಡ ಭಾಗಿಯಾಗಿದ್ದರು.

    ವರದಿಗಳ ಪ್ರಕಾರ ಗುರುವಾರ ರಾತ್ರಿ 10.30ಕ್ಕೆ ಪಾರ್ಟಿ ಆರಂಭವಾಗಿತ್ತು. ಜಾಕ್ವೇಲಿನ್ ಪಾರ್ಟಿ ಮುಗಿಸಿ ಮಧ್ಯರಾತ್ರಿ 2.00 ಗಂಟೆಗೆ ಸಲ್ಮಾನ್ ಖಾನ್ ಮನೆಯಿಂದ ಕಾರಿನಲ್ಲಿ ಹೊರಟಿದ್ದು, ಮಧ್ಯರಾತ್ರಿ ಸುಮಾರು 2.45ಕ್ಕೆ ಬಾಂದ್ರಾದ ಕಾರ್ಟರ್ ರೋಡ್‍ನಲ್ಲಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ.

    ಸದ್ಯ ಈ ಅಪಘಾತದಲ್ಲಿ ಜಾಕ್ವೇಲಿನ್ ಕಾರಿನ ಹೆಡ್‍ಲೈಟ್ಸ್ ಹೊಡೆದು ಹೋಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

    ರೆಮೋ ಡಿಸೋಜಾ ನಿರ್ದೇಶನದಲ್ಲಿ ರೇಸ್-3 ಚಿತ್ರ ಮೂಡಿ ಬರುತ್ತಿದ್ದು, ರಮೇಶ್ ಎಸ್.ತೌರಾನಿ ಮತ್ತು ಸಲ್ಮಾನ್ ಖಾನ್ ಬಂಡವಾಳ ಹಾಕಿದ್ದಾರೆ. ಸಲ್ಮಾನ್ ಖಾನ್, ಅನಿಲ್ ಕಪೂರ್, ಸನ್ನಿ ಡಿಯೋಲ್, ಜಾಕ್ವೇಲಿನ್ ಫರ್ನಾಂಡೀಸ್, ಡೈಸಿ ಶಾ ಮತ್ತು ಸಖೀಬ್ ಸಲೀಂ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ಸಿನಿಮಾ ಈ ಬಾರಿ ಈದ್ ಗೆ ರಿಲೀಸ್ ಆಗಲಿದೆ.

  • ಮೇಕಪ್‍ಮೆನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ನೀಡಿದ ಜಾಕ್ವೆಲಿನ್!- ವಿಡಿಯೋ

    ಮೇಕಪ್‍ಮೆನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ನೀಡಿದ ಜಾಕ್ವೆಲಿನ್!- ವಿಡಿಯೋ

    ಮುಂಬೈ: ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಜೊತೆ ಕೆಲಸ ಮಾಡುವ ಸಿಬ್ಬಂದಿಯನು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಜಾಕ್ವೆಲಿನ್ ತನ್ನ ಮೆಕಪ್‍ಮೆನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದಾರೆ.

    ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಮೆಕಪ್‍ಮೆನ್ ಶಾನ್ ಮುತಾತಿಲ್‍ನ 34ನೇ ವರ್ಷದ ಹುಟ್ಟುಹಬ್ಬಕ್ಕೆ ಬ್ರ್ಯಾಂಡ್ ನ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಶಾನ್ ಮುತಾತಿಲ್ ಜಾಕ್ವೆಲಿನ್ ಜೊತೆ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

    ಜಾಕ್ವೆಲಿನ್ ಸರ್ಪ್ರೈಸ್ ನೀಡುತ್ತಿರುವ ವಿಡಿಯೋವನ್ನು ಶಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕೆಲಸದಿಂದಲ್ಲೇ ನನ್ನ ಹುಟ್ಟುಹಬ್ಬದ ದಿನ ಶುರುವಾಗಿದೆ. ಈ ವರ್ಷ ಜಾಕ್ವೆಲಿನ್ ನೀನು ನನಗೆ ಅದ್ಭುತವಾದ ಸರ್ಪ್ರೈಸ್ ನೀಡಿದೆ. ನೀನು ಅಪಾರ್ಟ್ ಮೆಂಟ್ ಕೆಳಗೆ ಕಾರಿನವರೆಗೂ ಹೋಗುವುದನ್ನು ವಿಡಿಯೋ ಮಾಡು ಎಂದು ಹೇಳಿದೆ. ನನಗಾಗಿ ಈ ಸರ್ಪ್ರೈಸ್ ನೀಡುತ್ತೀಯ ಎಂದು ನನಗೆ ಯಾವುದೇ ಸುಳಿವು ಸಹ ಇರಲಿಲ್ಲ. ನನಗೆ ತುಂಬಾ ಖುಷಿಯಾಗಿದೆ ಎಂದು ಶಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಸದ್ಯ ಜಾಕ್ವೆಲಿನ್ ಫರ್ನಾಂಡಿಸ್ ರೇಸ್-3 ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರದಲ್ಲಿ ಸಲ್ಮಾನ್ ಖಾನ್‍ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಸಾಕೀಬ್ ಸಲೀಮ್, ಅನಿಲ್ ಕಪೂರ್, ಬಾಬಿ ಡಿಯೋಲ್ ಹಾಗೂ ಡೈಸಿ ಶಾ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

    https://www.instagram.com/p/BhgS3cEDnLi/?utm_source=ig_embed

  • ಇದೇ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ ಬಾಗಿ-2!

    ಇದೇ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ ಬಾಗಿ-2!

    ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಈ ಹಿಂದೆ ನಟಿಸಿದ ಬಾಗಿ ಚಿತ್ರ ಸಾಕಷ್ಟು ಯಶಸ್ಸು ಕಂಡು 100 ಕೋಟಿ ಬಾಕ್ಸ್ ಆಫೀಸ್ ಕ್ಲಬ್ ಸೇರಿತ್ತು. ಈಗ ಮತ್ತೆ ತಮ್ಮ ಹವಾ ಎಬ್ಬಿಸಲು ಬಾಗಿ-2 ಚಿತ್ರ ಇದೇ ಶುಕ್ರವಾರ ವಿಶ್ವಾದ್ಯಂತ ತೆರೆ ಕಾಣಲಿದೆ.

    2016ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ ‘ಕ್ಷಣಂ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗಿದ್ದು, ಅದ್ದಕ್ಕೆ ಬಾಗಿ-2 ಎಂದು ಟೈಟಲ್ ಇಡಲಾಗಿದೆ. ಚಿತ್ರದಲ್ಲಿ ನಟ ಟೈಗರ್ ಶ್ರಾಫ್ ರೋನಿ ಪಾತ್ರದಲ್ಲಿ ಮಿಂಚಿದ್ದು, ನಟಿ ದಿಶಾ ಪಠಾಣಿ ನೇಹಾ ಪಾತ್ರದಲ್ಲಿ ಮಿಂಚಿದ್ದಾರೆ.

    ಈ ಚಿತ್ರದಲ್ಲಿ ಟೈಗರ್ ಕಮಾಂಡೋ ಪಾತ್ರ ನಿರ್ವಹಿಸಿದ್ದು, ಕಳೆದು ಹೋದ ಮಗುವಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಅಷ್ಟೇ ಅಲ್ಲದೇ ಸಾಕಷ್ಟು ಆಕ್ಷನ್ ಹಾಗೂ ಥ್ರಿಲ್ಲರ್ ವನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾವನ್ನು ಅಹ್ಮದ್ ಖಾನ್ ನಿರ್ದೇಶನ ಮಾಡಿದ್ದು, ಸಾಜಿದ್ ನದಿಯಾವಾಲಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.

    ಈ ಹಿಂದೆ ಬಿಡುಗಡೆಯಾಗಿದ್ದ ಬಾಗಿ ಸಿನಿಮಾದಲ್ಲಿ ಟೈಗರ್ ಮಾರ್ಷಲ್ ಆರ್ಟ್ಸ್ ಪಾತ್ರದಲ್ಲಿ ಮಿಂಚಿದ್ದು, ಈಗ ಬಾಗಿ-2 ಚಿತ್ರದಲ್ಲಿ ಕಮಾಂಡೋ ಆಗಿ ಮಿಂಚಿದ್ದಾರೆ. ಬಾಗಿ ಸಿನಿಮಾದಲ್ಲಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹಾಗೂ ತನ್ನ ಗುರುವಿನ ಸಾವಿಗೆ ಕಾರಣವಾದವರ ಮೇಲೆ ಸೇಡು ತಿರಿಸಿಕೊಳ್ಳುವ ಸಿನಿಮಾವಾಗಿತ್ತು.

    ಬಾಗಿ ಚಿತ್ರದಲ್ಲಿ ಟೈಗರ್ ಶ್ರಾಫ್‍ಗೆ ಜೋಡಿಯಾಗಿ ಶ್ರದ್ಧಾ ಕಪೂರ್ ನಟಿಸಿದ್ದರು. ಆದರೆ ಈಗ ಬಾಗಿ-2 ಚಿತ್ರದಲ್ಲಿ ನಟಿ ದಿಶಾ ಪಠಾಣಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಾಕ್ವೇಲಿನ್ ಫೆರ್ನಂಡಿಸ್ ಕೂಡ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಂದು ತೇಜಬ್ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಹೆಜ್ಜೆ ಹಾಕಿದ ‘ಏಕ್ ದೋ ತಿನ್’ ಹಾಡಿಗೆ ಇಂದು ಜಾಕ್ವೇಲಿನ್ ಹೆಜ್ಜೆ ಹಾಕಿದ್ದಾರೆ.

    ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಟ್ರೇಲರ್ ಯೂ ಟ್ಯೂಬ್ ನಲ್ಲಿ 5 ಕೋಟಿಗೂ ಅಧಿಕ ವ್ಯೂ ಕಂಡಿದೆ.

  • ರೇಸ್-3 ಚಿತ್ರದಲ್ಲಿ ಈ ಎರಡೂ ಸೀನ್ ಮಾಡಲ್ಲ ಎಂದ ಸಲ್ಮಾನ್!

    ರೇಸ್-3 ಚಿತ್ರದಲ್ಲಿ ಈ ಎರಡೂ ಸೀನ್ ಮಾಡಲ್ಲ ಎಂದ ಸಲ್ಮಾನ್!

    ಮುಂಬೈ: ಸಲ್ಮಾನ್ ಖಾನ್ ಚಿತ್ರದಲ್ಲಿ ನಟಿಸುವಾಗ ಅವರು ತಮ್ಮ ಕೆಲವು ತತ್ವಗಳನ್ನು ಪಾಲಿಸುತ್ತಾರೆ. ಫ್ಯಾಮಿಲಿ ಆಡಿಯನ್ಸ್ ಗಳನ್ನು ಹೆಚ್ಚು ಸೆಳೆಯುವ ಸಲ್ಮಾನ್ ಈಗ ರೇಸ್-3 ಚಿತ್ರದಲ್ಲಿ ಡ್ರಗ್ಸ್ ಡೀಲರ್ ಹಾಗೂ ಹಾಟ್ ಸೀನ್‍ಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.

    ಈ ಮೊದಲು ಸಲ್ಮಾನ್ ಖಾನ್ ತಮ್ಮ ಚಿತ್ರದಲ್ಲಿ ಖಳ ನಟನ ಪಾತ್ರ ಹಾಗೂ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ ಎಂದು ತಿಳಿಸಿದ್ದರು. ಆದರೆ ಈಗ ಸಲ್ಮಾನ್ ಚಿತ್ರತಂಡ ಜೊತೆ ಮಾತನಾಡಿ ರೇಸ್-3 ಚಿತ್ರದಲ್ಲಿ ಡ್ರಗ್ಸ್ ಡೀಲರ್ ಪಾತ್ರದಲ್ಲಿ ಹಾಗೂ ಹಾಟ್ ಸೀನ್‍ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ.

    ರೇಸ್ ಮತ್ತು 2 ಚಿತ್ರದಲ್ಲಿ ಅನಿಲ್ ಕಪೂರ್ ನಟಿಸಿದ್ದರು. ಆದರೆ ಈ ಬಾರಿ ಅವರಿಲ್ಲದ ಕಾರಣ ಚಿತ್ರದ ನಿರ್ದೇಶಕ ರೆಮೋ ಡಿ ಸೋಜಾ ಹಾಗೂ ನಿರ್ಮಾಪಕ ರಮೇಶ್ ಟೌರಾನಿಗೆ ಚಿತ್ರದಲ್ಲಿ ಕೆಲವು ಹಾಸ್ಯ ದೃಶ್ಯಗಳನ್ನು ಸೇರಿಸುವುದಾಗಿ ಸಲ್ಮಾನ್ ಹೇಳಿದ್ದಾರೆ.

    ರೇಸ್ ಹಾಗೂ ರೇಸ್-2 ಚಿತ್ರದಲ್ಲಿ ಸಾಕಷ್ಟು ಹಾಟ್ ಸೀನ್‍ಗಳಿದ್ದವು. ಆದರೆ ಸಲ್ಮಾನ್ ರೇಸ್-3ಯಲ್ಲಿ ಒಂದೇ ಒಂದು ಹಾಟ್ ಸೀನ್ ಇರಬಾರದು. ಈ ಸಿನಿಮಾ ಕೌಟುಂಬಿಕ ಸಿನಿಮಾ ರೀತಿ ಇರಬೇಕು. ಫ್ಯಾಮಿಲಿ ಆಡಿಯನ್ಸ್ ನೋಡುವ ಹಾಗೇ ಇರಬೇಕು ಎಂದು ತಿಳಿಸಿದ್ದಾರೆ.

    ಸಲ್ಮಾನ್ ಡ್ರಗ್ಸ್ ಡೀಲರ್ ಮಾಡುವ ಪಾತ್ರ ಸಿನಿಮಾದಲ್ಲಿ ಇತ್ತು. ಆದರೆ ಈ ಸೀನ್ ಮಾಡಲು ಸಲ್ಮಾನ್ ನಿರಾಕರಿಸಿದ್ದಾರೆ. ಅಭಿಮಾನಿಗಳಿಗೆ ಚಿತ್ರದಿಂದ ಕೆಟ್ಟ ಸಂದೇಶ ರವಾನೆಯಾಗಬಹುದು ಎನ್ನುವ ಭಯದಿಂದಾಗಿ ಸಲ್ಮಾನ್ ತಿಳಿಸಿದ ಕಾರಣ ಈ ದೃಶ್ಯಗಳನ್ನು ಚಿತ್ರದಿಂದ ತೆಗೆದು ಹಾಕಲಾಗಿದೆ ಎನ್ನಲಾಗಿದೆ.

    ಚಿತ್ರದಲ್ಲಿ ಜಾಕ್ವೇಲಿನ್ ಫರ್ನಾಂಡಿಸ್ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ನಾನು ಪೊಲೀಸ್ ಪಾತ್ರ ನಿರ್ವಹಿಸುತ್ತಿಲ್ಲ. ನನ್ನ ಪಾತ್ರದ ಬಗ್ಗೆ ಹೆಚ್ಚು ಹೇಳಲಾರೆ ಎಂದು ಜಾಕ್ವೇಲಿನ್ ತಿಳಿಸಿದ್ದಾರೆ.

  • ಅನಿಲ್ ಕಪೂರ್ ಪಾತ್ರ ಮಾಡಲಿದ್ದಾರೆ ಜಾಕ್ವೆಲಿನ್ ಫರ್ನಾಂಡಿಸ್!

    ಅನಿಲ್ ಕಪೂರ್ ಪಾತ್ರ ಮಾಡಲಿದ್ದಾರೆ ಜಾಕ್ವೆಲಿನ್ ಫರ್ನಾಂಡಿಸ್!

    ಮುಂಬೈ: ಸೈಫ್ ಅಲಿ ಖಾನ್ ಅಭಿನಯದ ರೇಸ್ ಚಿತ್ರದ ಮೂರನೇ ಭಾಗದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಹಿಂದಿನ ರೇಸ್ ಸಿನಿಮಾದ ಎರಡು ಭಾಗಗಳಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಕಪೂರ್ ಪಾತ್ರವನ್ನು ರೇಸ್-3 ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಲಿದ್ದಾರೆ.

    ಇದುವರೆಗೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಜಾಕ್ವೇಲಿನ್ ನಟಿಸುತ್ತಿದ್ದು, ಧೂಮ್ ಚಿತ್ರಗಳಲ್ಲಿ ಅಭಿಷೇಕ್ ಬಚ್ಚನ್ ನಿರ್ವಹಿಸಿದ ಪಾತ್ರವನ್ನು ಜಾಕ್ವೆಲಿನ್ ನಟಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

    ರೇಸ್ ಮೊದಲ ಮತ್ತು ಎರಡನೇಯ ಭಾಗದಲ್ಲಿ ಅನಿಲ್ ಕಪೂರ್ ನಟಿಸಿದ್ದರು. ಆದರೆ ಚಿತ್ರದ ನಿರ್ಮಾಪಕರು ಈ ಚಿತ್ರದಲ್ಲಿ ಏನಾದರೂ ಹೊಸದಾಗಿ ಇರಲಿ ಎಂದು ಜಾಕ್ವೆಲಿನ್ ಅವರಿಗೆ ಪೊಲೀಸ್ ಅಧಿಕಾರಿಯ ಪಾತ್ರವನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಚಿತ್ರದಲ್ಲಿ ಸ್ಟಂಟ್‍ಗಳು ತುಂಬಾ ಇದೆ ಹಾಗೂ ಅದನ್ನೆಲ್ಲ ಸ್ವತಃ ಜಾಕ್ವೆಲಿನ್ ಮಾಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಈ ಹಿಂದೆ ರೇಸ್-2 ಸಿನಿಮಾದಲ್ಲಿ ತಮ್ಮ ಗ್ಲಾಮರ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಜಾಕ್ವೆಲಿನ್ ಈಗ ಪೊಲೀಸ್ ಅಧಿಕಾರಿಯಾಗಿ ರಂಜಿಸಲಿದ್ದಾರೆ.