Tag: Jacqueline Fernandez

  • ಕನ್ನಡದಲ್ಲೇ ಖುಷಿ ಹಂಚಿಕೊಂಡ ರಾ.. ರಾ.. ರಕ್ಕಮ್ಮ ಬೆಡಗಿ ಜಾಕ್ವಲಿನ್

    ಕನ್ನಡದಲ್ಲೇ ಖುಷಿ ಹಂಚಿಕೊಂಡ ರಾ.. ರಾ.. ರಕ್ಕಮ್ಮ ಬೆಡಗಿ ಜಾಕ್ವಲಿನ್

    ಬಾಲಿವುಡ್ ಖ್ಯಾತ ನಟಿ ಜಾಕ್ವಲಿನ್ ಫರ್ನಾಂಡಿಸ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ಲಿರಿಕಲ್ ವಿಡಿಯೋ ರಿಲೀಸ್ ಆಗಿ ಭಾರೀ ಮಟ್ಟದಲ್ಲಿ ವೈರಲ್ ಆಗಿದೆ. ಅದರಲ್ಲೂ ಈ ಹಾಡಿಗೆ ಸೆಲೆಬ್ರಿಟಿಗಳು ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಈ ಹಾಡಿ ಬಿಡುಗಡೆ ಆಗಿ, ಅಲ್ಲಿಯೂ ಟ್ರೆಂಡ್ ‍ಕ್ರಿಯೇಟ್ ಮಾಡಿದೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಈ ಹಾಡಿನಲ್ಲಿ ಸುದೀಪ್ ಜೊತೆ ಜಾಕ್ವಲಿನ್ ಫರ್ನಾಂಡಿಸ್ ಕೂಡ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ಈ ಖುಷಿಯನ್ನು ಅವರು ಕನ್ನಡದಲ್ಲೇ ಹಂಚಿಕೊಂಡಿದ್ದಾರೆ. ಹಾಡನ್ನು ಹಿಟ್ ಮಾಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾಳೆ. ಎಲ್ಲಲ್ಲೂ ರಕ್ಕಮ್ಮನದ್ದೇ ಹವಾ ಎನ್ನುವ ಹೆಮ್ಮೆಯನ್ನೂ ಕೂಡ ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

    ಮೊನ್ನೆಯಷ್ಟೇ ಸುದೀಪ್ ಅವರು ಜಾಕ್ವಲಿನ್ ಅವರಿಗೆ ಕನ್ನಡ ಕಲಿಸಿದ್ದರು. ಅಷ್ಟೇ ಸೊಗಸಾಗಿ ಜಾಕ್ವಲಿನ್ ಕನ್ನಡ ಮಾತನಾಡಿದ್ದರು. ಈ ಬಾರಿ ಅವರೇ ಕನ್ನಡ ಕಲಿತುಕೊಂಡು ಕೆಲ ಮಾತುಗಳನ್ನು ಆಡಿದ್ದಾರೆ. ಅಷ್ಟರ ಮಟ್ಟಿಗೆ ಕನ್ನಡದ ಮೇಲಿನ ಪ್ರೀತಿಯನ್ನು ಅವರು ತೋರಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಬಹುಭಾಷೆಯಲ್ಲಿ ರಿಲೀಸ್ ಆಗಲಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

  • ‘ವಿಕ್ರಾಂತ್ ರೋಣ’ ಸಿನಿಮಾ ನಟಿ ಜಾಕ್ವೆಲಿನ್ ಗೆ ವಿದೇಶಕ್ಕೆ ತೆರಳಲು ಅನುಮತಿ

    ‘ವಿಕ್ರಾಂತ್ ರೋಣ’ ಸಿನಿಮಾ ನಟಿ ಜಾಕ್ವೆಲಿನ್ ಗೆ ವಿದೇಶಕ್ಕೆ ತೆರಳಲು ಅನುಮತಿ

    ಬಾಲಿವುಡ್ ನಟಿ, ಕನ್ನಡದಲ್ಲಿ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮೇ 31ರಿಂದ ಜೂನ್ 06ರವರೆಗೆ ವಿದೇಶಕ್ಕೆ ತೆರಳಲು ದೆಹಲಿ ನ್ಯಾಯಾಲಯ ಅನುಮತಿ ನೀಡಿದೆ. ಸುಖೇಶ್ ಚಂದ್ರಶೇಖರ್ ವಿರುದ್ಧದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ಜಾಕ್ವೆಲಿನ್ ಎದುರಿಸುತ್ತಿದ್ದರು. ಹಾಗಾಗಿ ವಿದೇಶಕ್ಕೆ ತೆರಳದಂತೆ ಇವರಿಗೆ ನಿರ್ಬಂಧ ಹೇರಲಾಗಿತ್ತು. ಇದನ್ನೂ ಓದಿ : ‘ಮುದುಕನ ಲವ್ ಸ್ಟೋರಿ’ಗೆ ಕೆಜಿಎಫ್ ತಾತ ಕೃಷ್ಣರಾವ್ ಹೀರೋ

    ಅಬುಧಾಬಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ತಾವು ಭಾಗಿ ಆಗಬೇಕಾಗಿದ್ದರಿಂದ, ಅನುಮತಿ ಕೋರಿ ನ್ಯಾಯಾಲಯಕ್ಕೆ ಜಾಕ್ವೆಲಿನ್ ಅರ್ಜಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಗಣಿಸಿರುವ ದೆಹಲಿ ಪಟಿಯಾಲ್ ಹೌಸ್ ಕೋರ್ಟ್ ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ. ಇದನ್ನೂ ಓದಿ : ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ

    200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸುಖೇಶ್ ಚಂದ್ರಶೇಖರ್ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸುಖೇಶ್ ಜತೆ ಸ್ನೇಹ ಹೊಂದಿದೆ ಜಾಕ್ವೆಲಿನ್ ಗೆ ಸುಖೇಶ್ 7 ಕೋಟಿ ಮೌಲ್ಯದ ಉಡುಗೊರೆಯನ್ನು ನೀಡಿದ್ದಾನೆ ಎಂದು ಆರೋಪವಿದೆ. ಹೀಗಾಗಿ ಉಡುಗೊರೆಯನ್ನು ಈಗಾಗಲೇ ಇಡಿ ಜಪ್ತಿ ಮಾಡಿದೆ. ಈ ಪ್ರಕರಣವೇ ನಟಿಗೆ ದೇಶಬಿಟ್ಟು ಹೋಗದಂತೆ ಮಾಡಿತ್ತು. ಇದನ್ನೂ ಓದಿ : ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್

    ಜಾಕ್ವೆಲಿನ್  ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದಲ್ಲಿ ಇವರು ವಿಶೇಷ ಪಾತ್ರ ಮಾಡಿದ್ದಾರಂತೆ. ಈಗಷ್ಟೇ ಬಿಡುಗಡೆ ಆಗಿರುವ ‘ರಾ..ರಾ.. ರಕ್ಕಮ್ಮ’ ಹಾಡಿನಲ್ಲಿ ಜಾಕ್ವೆಲಿನ್ ಕಾಣಿಸಿಕೊಂಡಿದ್ದು, ಈ ಹಾಡು ಸದ್ಯ ಟ್ರೆಂಡಿಂಗ್ ನಲ್ಲಿದೆ. ಅಲ್ಲದೇ, ಜಾಕ್ವೆಲಿನ್ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  • ಜೈಲಿನಲ್ಲಿರುವ ಸುಕೇಶ್‌ನಿಂದ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಡೆದ ಗಿಫ್ಟ್ ಏನು? ಬೆಚ್ಚಿ ಬೀಳಿಸುತ್ತೆ ವರದಿ

    ಜೈಲಿನಲ್ಲಿರುವ ಸುಕೇಶ್‌ನಿಂದ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಡೆದ ಗಿಫ್ಟ್ ಏನು? ಬೆಚ್ಚಿ ಬೀಳಿಸುತ್ತೆ ವರದಿ

    ನೂರಾರು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜೈಲಿನ ಕಂಬಿ ಎಣಿಸುತ್ತಿರುವ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿ ಇದ್ದುಕೊಂಡೆ ರಂಪಾಟ ಮಾಡುತ್ತಿದ್ದಾನಂತೆ. ಪದೇ ಪದೇ ಪತ್ನಿಯ ಜೊತೆ ಮಾತಾಡಬೇಕೆಂದು ಹಠ ಹಿಡಿದಿದ್ದಾನಂತೆ. ಜೊತೆಗೆ ಉಪವಾಸ ಕೂಡ ಮಾಡುತ್ತಿದ್ದಾನಂತೆ. ಸುಕೇಶ್ ಈ ನಡೆ ಜೈಲು ಅಧಿಕಾರಿಗಳಿಗೆ ತಲೆನೋವು ತಂದಿದೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ : ಶ್ರೀಮುರುಳಿ ನಾಯಕ

    ಅನಾರೋಗ್ಯದ ಕಾರಣಕ್ಕಾಗಿ ಸುಕೇಶ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಇವನಿಗೆ ಚಿಕಿತ್ಸೆ ನೀಡಲು ವೈದ್ಯ ತಂಡ ಹರಸಾಹಸಪಡುತ್ತಿದೆ. ಕೆಲ ದಿನಗಳಿಂದ ಉಪವಾಸವಿದ್ದ ಕಾರಣಕ್ಕಾಗಿ ತೂಕ ಕೂಡ ಕಡಿಮೆ ಆಗಿದೆಯಂತೆ. ಹೀಗಾಗಿ ಚಿಕಿತ್ಸೆ ನೀಡುವುದು ಕಷ್ಟವಾಗಿದೆ ಎಂದು ವರದಿಯಾಗಿದೆ. ಜೈಲು ನಿಯಮದ ಪ್ರಕಾರ ತಿಂಗಳಿಗೆ ಎರಡೇ ಬಾರಿ ಒಳ ಜೈಲಿನ ಕೈದಿಗಳಿಗೆ ಭೇಟಿಗೆ ಅವಕಾಶ ನೀಡಲಾಗುತ್ತದೆ. ಸುಕೇಶ್ ಹೆಂಡತಿ ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಇರುವುದರಿಂದ ಈಗಾಗಲೇ ಹಲವು ಬಾರಿ ಪತ್ನಿಯನ್ನು ಭೇಟಿ ಆಗಿದ್ದಾನಂತೆ. ಹೀಗಾಗಿ ಮತ್ತೆ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ವಿಚಾರಣೆಯ ನಂತರ ಅಧಿಕಾರಿಗಳಿಗೆ ಬೆಚ್ಚಿ ಬೀಳಿಸುವಂತಹ ಮಾಹಿತಿ ಸಿಕ್ಕಿದೆ ಎನ್ನಲಾಗುತ್ತಿದೆ. ಜಾಕ್ವೆಲಿನ್ ಸ್ನೇಹ ಬೆಳೆಸುವುದಕ್ಕಾಗಿ ಸುಕೇಶ್ ಸಾಕಷ್ಟು ದುಬಾರಿಯ ಗಿಫ್ಟ್‌ಗಳನ್ನು ನೀಡಿದ್ದಾನಂತೆ. ಇದನ್ನೂ ಓದಿ : ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ದುಬಾರಿ ವಾಚ್, ಕಿವಿಯೋಲೆಗಳು, ಜಿಮ್ ಉಡುಗೆ, ಶೂಗಳು, ಐಷಾರಾಮಿ ಹೋಟೆಲ್ ಬುಕ್, ಬಳೆಗಳು, ಪರ್ಷಿಯನ್ ಬೆಕ್ಕು, ರತ್ನ ಖಚಿತ ಓಲೆಗಳು, ಬ್ರೇಸ್ಲೆಟ್, ಅರ್ಧ ಕೋಟಿ ಬೆಲೆಬಾಳುವ ಕುದುರೆ, ಹೆಸರಾಂತ ಬ್ರ್ಯಾಂಡ್‌ಗಳ ವಸ್ತುಗಳನ್ನೇ ಸುಕೇಶ್ ನೀಡಿದ್ದಾನೆ ಅಂತ ಸ್ವತಃ ಜಾಕ್ವೆಲಿನ್ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  • ಸುಲಿಗೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸೇರಿದ 7 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಸುಲಿಗೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸೇರಿದ 7 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಸುಕೇಶ್ ಚಂದ್ರಶೇಖರ್ ವಿರುದ್ಧದ ಸುಲಿಗೆ ಪ್ರಕರಣದಲ್ಲಿ ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡೀಸ್ ಅವರ 7.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಜಪ್ತಿ ಮಾಡಿದೆ. ಜಾಕ್ವೆಲಿನ್ ಕನ್ನಡದಲ್ಲೂ ನಟಿಸಿದ್ದು, ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ  ನಟಿಸಿದ್ದಾರೆ. ಇನ್ನಷ್ಟೇ ಈ ಸಿನಿಮಾ ರಿಲೀಸ್ ಆಗಬೇಕಿದೆ.

    ಜಾಕ್ವೆಲಿನ್ ಹೆಸರಿನಲ್ಲಿ 7.12 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಠೇವಣಿಗಳನ್ನು ಲಗತ್ತಿಸಲಾದ ಆಸ್ತಿಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಜಾಕ್ವೆಲಿನ್ ಫೆರ್ನಾಂಡಿಸ್ ಸುಲಿಗೆ ಮಾಡಿದ ಹಣದ ಫಲಾನುಭವಿಯಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಸುಕೇಶ್ ಚಂದ್ರಶೇಖರ್ ಸುಲಿಗೆ ಮಾಡಿದ ಹಣವನ್ನು ಬಳಸಿಕೊಂಡು ಜಾಕ್ವೆಲಿನ್ ಫರ್ನಾಂಡೀಸ್‌ಗೆ 5.71 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ನೀಡಿದ್ದ ಎಂಬ ಪುರಾವೆಗಳು ಅಧಿಕಾರಿಗಳಿಗೆ ಸಿಕ್ಕಿವೆ. ಉಡುಗೊರೆಗಳ ಹೊರತಾಗಿ, ಅವನು ಜಾಕ್ವೆಲಿನ್ ಅವರ ಕುಟುಂಬ ಸದಸ್ಯರಿಗೆ 173,000 ಯುಎಸ್ ಡಾಲರ್ ಮತ್ತು ಸುಮಾರು 27,000 ಆಸ್ಟ್ರೇಲಿಯನ್ ಡಾಲರ್‌ಗಳನ್ನು ನೀಡಿದ್ದನು.

    ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಸುಕೇಶ್ ಚಂದ್ರಶೇಖರ್ ಜೊತೆಗಿನ ಸಂಪರ್ಕಕ್ಕಾಗಿ ಇಡಿ ಹಲವು ಬಾರಿ ಪ್ರಶ್ನಿಸಿತ್ತು. ಜಾಕ್ವೆಲಿನ್ ಸದ್ಯಕ್ಕೆ ಆರೋಪಿಯಲ್ಲ. ಆದರೆ ತನಿಖಾಧಿಕಾರಿಗಳು ಇನ್ನೂ ಜಾಕ್ವೆಲಿನ್‌ಗೆ ಕ್ಲೀನ್ ಚಿಟ್ ನೀಡಿಲ್ಲ. ಶ್ರೀಲಂಕಾ ಮೂಲದ ನಟಿಗೆ ದೇಶ ತೊರೆಯದಂತೆ ನಿಷೇಧ ಹೇರಲಾಗಿತ್ತು.

    ದೆಹಲಿಯ ಉದ್ಯಮಿಯೊಬ್ಬರ ಪತ್ನಿಯಿಂದ ಸ್ಪೂಫ್ ಕರೆಗಳ ಮೂಲಕ ಸುಕೇಶ್ ಚಂದ್ರಶೇಖರ್ 215 ಕೋಟಿ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಸುಕೇಶ್ ದೆಹಲಿಯ ಜೈಲಿನಲ್ಲಿದ್ದಾಗ, ಪ್ರಧಾನಿ ಕಚೇರಿ, ಕಾನೂನು ಸಚಿವಾಲಯ ಮತ್ತು ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸಿ ಸಂತ್ರಸ್ತ ಮಹಿಳೆಯಿಂದ ಹಣ ವಸೂಲಿ ಮಾಡಿದ್ದಾನೆ. ಸಂತ್ರಸ್ತೆಯ ಪತಿಗೆ ಜಾಮೀನು ದೊರಕಿಸಿಕೊಡುವುದಾಗಿ ಮತ್ತು ಅವರ ಔಷಧ ವ್ಯಾಪಾರವನ್ನು ನಡೆಸುವುದಾಗಿ ಸುಕೇಶ್ ದೂರವಾಣಿ ಕರೆಗಳಲ್ಲಿ ಹೇಳಿಕೊಂಡಿದ್ದನು.

    ರಾಜಕಾರಣಿ ಟಿಟಿವಿ ದಿನಕರನ್ ಒಳಗೊಂಡ ಐದು ವರ್ಷಗಳ ಹಿಂದಿನ ವಂಚನೆ ಪ್ರಕರಣದಲ್ಲಿ ಸುಕೇಶ್ ಕೂಡ ಭಾಗಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 4 ರಂದು ಇಡಿ ಅವರನ್ನು ಬಂಧಿಸಿತ್ತು.

  • ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ

    ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್’ ರೋಣ ಸಿನಿಮಾದ ತಂಡ ದಿನಕ್ಕೊಂದು ಕುತೂಹಲದ ಸುದ್ದಿ ಕೊಡುತ್ತಿದೆ. ನೆನ್ನೆಯಷ್ಟೇ ಚಿತ್ರದ ಕುರಿತು ಸಾಕಷ್ಟು ಅಪ್ ಡೇಟ್ ಕೊಟ್ಟಿತ್ತು. ಈಗ ಮತ್ತೊಂದು ಸರ್ ಪ್ರೈಸ್ ವಿಷಯ ಹಂಚಿಕೊಂಡಿದೆ. ಈ ಸಿನಿಮಾ ಬರೋಬ್ಬರಿ ಒಂಬತ್ತು ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಅದರಲ್ಲಿ ಇಂಗ್ಲಿಷ್ ಕೂಡ ಸೇರಿದೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್ ಗೆ ಡಬ್ ಆಗಿ ಬಿಡುಗಡೆ ಆಗುತ್ತಿರುವುದು ವಿಶೇಷ. ಅಲ್ಲದೇ, ಸ್ವತಃ ಸುದೀಪ್ ಅವರೇ ತಮ್ಮ ಪಾತ್ರಕ್ಕೆ ಇಂಗ್ಲಿಷ್ ನಲ್ಲೂ ಡಬ್ ಮಾಡಿದ್ದಾರೆ. ಇದನ್ನೂ ಓದಿ : ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ

    ವಿಕ್ರಾಂತ್ ರೋಣ ಸಿನಿಮಾ 2 ಡಿ ಮತ್ತು 3 ಡಿ ಯಲ್ಲಿ ಸಿದ್ಧವಾಗಿದೆ. ಒಂದು ಅಂದಾಜಿನ ಪ್ರಕಾರ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದನ್ನೂ ಓದಿ : ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

    ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಮೋಷನ್ ಶುರು ಮಾಡಲಿರುವ ಚಿತ್ರತಂಡ, ಆ ನಂತರ ‘ಹೇ ಫಕೀರಾ’ ಹಾಡು ರಿಲೀಸ್ ಆಗಲಿದೆ. ಈಗಾಗಲೇ ಟ್ರೇಲರ್ ಗೆ ಬಳಸಿಕೊಂಡಿರುವ ಮತ್ತು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದ ‘ಗುಮ್ಮ ಬಂದ ಗುಮ್ಮ’ ಹಾಡು ಬಿಡುಗಡೆ ಆಗಲಿದೆ. ಇದಾದ ಕೆಲ ದಿನಗಳ ನಂತರ ‘ಚಿಕ್ಕಿ ಬೊಂಬೆ’ ಗೀತೆಯನ್ನು ರಿಲೀಸ್ ಮಾಡಲಿದ್ದಾರಂತೆ. ಬ್ಯಾಕ್ ಟು ಬ್ಯಾಕ್ ಎರಡು ಹಾಡುಗಳು ರಿಲೀಸ್ ಆದ ನಂತರ ಅಭಿಮಾನಿಗಳಿಗೆ ಒಂದ್ ಸರ್ ಪ್ರೈಸ್ ಕಾದಿದೆ. ಆ ಸರ್ ಪ್ರೈಸ್ ಏನು ಎನ್ನುವುದನ್ನು ಚಿತ್ರತಂಡ ಹೇಳಿಲ್ಲ. ಇದನ್ನೂ ಓದಿ : ಖ್ಯಾತ ಗಾಯಕ ಮಿಕಾ ಸಿಂಗ್ ಸ್ವಯಂವರ : ನೀವೂ ಭಾಗಿಯಾಗಬಹುದು

    ಸರ್ ಪ್ರೈಸ್ ಮುಗಿಯುತ್ತಿದ್ದಂತೆಯೇ ಮತ್ತೊಂದು ಗೀತೆಯನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಚಿತ್ರತಂಡ ಮಾಡಿಕೊಂಡಿದ್ದು, ಈ ಗೀತೆ ರಿಲೀಸ್ ಆಗುತ್ತಿದ್ದಂತೆಯೇ ಮತ್ತೊಂದು ಸರ್ ಪ್ರೈಸ್ ಕಾದಿದೆ. ಅದು ಕೂಡ ಸಸ್ಪನ್ಸ್. ಎರಡು ಸರ್ ಪ್ರೈಸ್ ಮುಗಿಯುತ್ತಿದ್ದಂತೆಯೇ ‘ದ ಕ್ವೀನ್ ಆಫ್ ಗುಡ್ ಟೈಮ್ಸ್’ ಸಾಂಗ್ ರಿಲೀಸ್ ಆಗಲಿದೆ. ಆನಂತರ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಬಿಡುಗಡೆ. ಟ್ರೇಲರ್ ನೋಡಿದವರಿಗೂ ಮತ್ತೊಂದು ಸರ್ ಪ್ರೈಸ್ ಕಾದಿದೆ. ಇಷ್ಟೊಂದು ಸರ್ ಪ್ರೈಸ್ ಗಳನ್ನು ದಾಟಿಕೊಂಡು ಬಂದರೆ ಚಿತ್ರ ಬಿಡುಗಡೆ. ಇದನ್ನೂ ಓದಿ : EXCLUSIVE: ಸ್ಯಾಂಡಲ್‌ವುಡ್‌ಗೆ ವಾಪಸ್ಸಾದ ಮೀಟೂ ಪರ ಧ್ವನಿ ಎತ್ತಿದ್ದ ನಟಿ ಸಂಗೀತಾ

    ಮೂಲಗಳ ಪ್ರಕಾರ ಸರ್ ಪ್ರೈಸ್ ಅಂದರೆ, ದೇಶದ ನಾನಾ ರಾಜ್ಯಗಳಲ್ಲಿ ಇವೆಂಟ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ, ಆಯಾ ಭಾಷೆಯ ಚಿತ್ರರಂಗದ ಗಣ್ಯರ ಮಧ್ಯೆ ಇವೆಂಟ್ ಮಾಡುವ ಯೋಜನೆ ಸಿದ್ಧವಾಗಿದೆಯಂತೆ.

  • ಜಾಕ್ವೆಲಿನ್ ಫರ್ನಾಂಡೀಸ್‍ರನ್ನು ಕೆಟ್ಟದಾಗಿ ಬಿಂಬಿಸಬೇಡಿ: ಸುಕೇಶ್ ಚಂದ್ರಶೇಖರ್

    ಜಾಕ್ವೆಲಿನ್ ಫರ್ನಾಂಡೀಸ್‍ರನ್ನು ಕೆಟ್ಟದಾಗಿ ಬಿಂಬಿಸಬೇಡಿ: ಸುಕೇಶ್ ಚಂದ್ರಶೇಖರ್

    ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಸುಕೇಶ್ ಚಂದ್ರಶೇಖರ್ ಅವರು ಕ್ಲೋಸ್ ಆಗಿರುವ ಫೋಟೋವೊಂದು ಒಂದೆರಡು ವಾರಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ಸುಕೇಶ್ ಚಂದ್ರಶೇಖರ್ ವಕೀಲರಿಗೆ ಪತ್ರ ಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    200 ಕೋಟಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಹೆಸರು ಕೇಳಿ ಬಂದಾಗಲಿಂದ ಇವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ ಈ ಕುರಿತಂತೆ ಸುಕೇಶ್ ತಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ತಿಳಿಸುವ ಮೂಲಕ ವಕೀಲರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಜಾಕ್ವೆಲಿನ್ ಜೊತೆಗೆ ರಿಲೇಶನ್ ಶಿಪ್‍ನಲ್ಲಿದ್ದು, ಆಕೆಗೆ ಪ್ರೀತಿಯಿಂದ ಉಡುಗೊರೆಗಳನ್ನು ನೀಡಲಾಗಿದೆ ಎಂದು ಸುಕೇಶ್ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಜೊತೆ ಪ್ರವಾಸಕ್ಕೆ ಬಂದ ನಟ ಶಿವಣ್ಣ

    ಕಳೆದ ವಾರ ವೈರಲ್ ಆದ ಫೋಟೋಗಳ ಬಗ್ಗೆ ನನಗೆ ತಿಳಿಯಿತು. ಇದು ನಿಜವಾಗಿಯೂ ದುಃಖ ಹಾಗೂ ಗೊಂದಲದ ಸಂಗತಿಯಾಗಿದೆ. ಇದು ಒಬ್ಬರ ಖಾಸಗಿತನ ಹಾಗೂ ವೈಯಕ್ತಿಕತೆಗೆ ಧಕ್ಕೆ ಉಂಟಾಗಿದೆ. ನಾನು ಮತ್ತು ಜಾಕ್ವೆಲಿನ್ ರಿಲೇಶನ್ ಶಿಪ್‍ನಲ್ಲಿದ್ದೇವೆ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಒಬ್ಬರನ್ನೊಬ್ಬರು ಭೇಟಿಯಾಗುವುದು ಮತ್ತು ನಮ್ಮ ಸಂಬಂಧ ಯಾವುದೇ ರೀತಿಯ ಪ್ರಯೋಜನದ ಮೇಲೆ ಆಧರಿತವಾಗಿಲ್ಲ. ಆದರೆ ಕೆಟ್ಟ ರೀತಿ ಕಾಮೆಂಟ್ ಮತ್ತು ಟ್ರೋಲ್ ಮಾಡಲಾಗುತ್ತಿದೆ. ನಮ್ಮ ಪ್ರೀತಿಯು ಯಾವುದೇ ನಿರೀಕ್ಷೆಗಳ ಅವಲಂಬಿತವಾಗದೇ ಪ್ರೀತಿ ಹಾಗೂ ಗೌರವದ ಮೇಲೆ ಆಧಾರಿತವಾಗಿದೆ. ಏನನ್ನು ಅಪೇಕ್ಷಿಸದೇ ಪ್ರೀತಿಸಿದ ಅವಳನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವುದನ್ನು ದಯವಿಟ್ಟು ನಿಲ್ಲಿಸಿ ಎಂದು ಎಲ್ಲರಿಗೂ ವಿನಂತಿಸುತ್ತೇನೆ. ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಮೊದಲೇ ತಿಳಿಸಿದ್ದೇನೆ ಎಂದಿದ್ದಾರೆ.

    ನಾನು ಜಾಕ್ವೆಲಿನ್‍ಗೆ ಗಿಫ್ಟ್‌ಗಳನ್ನು ನೀಡಿದ್ದೇನೆ ಮತ್ತು ಅವಳ ಕುಟುಂಬಕ್ಕೆ ಸಹಾಯ ಮಾಡಿದ್ದೇನೆ. ರಿಲೇಶನ್ ಶಿಪ್‍ನಲ್ಲಿ ಪ್ರೀತಿ ಪಾತ್ರರಿಗೆ ಏನಾದರೂ ನೀಡುವುದು ಸಾಮಾನ್ಯ. ಆದರೆ ವೈಯಕ್ತಿಕವಾಗಿ ದೊಡ್ಡ ವ್ಯವಹಾರದಲ್ಲಿ ಅವರ ಹೆಸರನ್ನು ಏಕೆ ತರುತ್ತಿದ್ದೀರಾ ಎಂದು ನನಗೆ ಅರ್ಥವಾಗುತ್ತಿಲ್ಲ. ಎಲ್ಲವೂ ಕಾನೂನಿನ ಪ್ರಕಾರ ನಡೆಯುತ್ತಿದೆ ಮತ್ತು ಶೀಘ್ರವೇ ನ್ಯಾಯಾಲಯದಲ್ಲಿ ಸಾಬೀತಾಗಲಿದೆ.

    ಎಲ್ಲರೂ ಇದನ್ನು ತಪ್ಪಾಗಿ ನೋಡುವುದನ್ನು ನಿಲ್ಲಿಸಬೇಕೆಂದು ನಾನು ವಿನಂತಿಸುತ್ತೇನೆ ಮತ್ತು ದಯವಿಟ್ಟು ಜಾಕ್ವೆಲಿನ್‍ಗೆ ಪ್ರೀತಿ ಬೆಂಬಲ ನೀಡಿ ಪ್ರೋತ್ಸಾಹಿಸಿ ಏಕೆಂದರೆ ಅವಳು ಏನನ್ನು ನಿರೀಕ್ಷಿಸದೇ ಪ್ರೀತಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೋಗಿದ್ದು, ನನ್ನ ಜೀವನದ ಮರೆಯಲಾಗದ ಕ್ಷಣ: ಅಲ್ಲು ಅರ್ಜುನ್

  • ಕುತ್ತಿಗೆ ಮೇಲೆ ಮೂಡಿರುವ ಲವ್ ಬೈಟ್ ಫೋಟೋ ಬಗ್ಗೆ ಜಾಕ್ವೆಲಿನ್ ಹೇಳಿದ್ದೇನು?

    ಕುತ್ತಿಗೆ ಮೇಲೆ ಮೂಡಿರುವ ಲವ್ ಬೈಟ್ ಫೋಟೋ ಬಗ್ಗೆ ಜಾಕ್ವೆಲಿನ್ ಹೇಳಿದ್ದೇನು?

    ಮುಂಬೈ: ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ವಿವಾದಾತ್ಮಕ ವಿಚಾರಗಳಿಂದ ಬಾಲಿವುಡ್ ಅಂಗಳದಲ್ಲಿ ಸದಾ ಸುದ್ದಿಯಲ್ಲಿದ್ದಾರೆ. ಸುಕೇಶ್ ಚಂದ್ರಶೇಖರ್ ಜೊತೆಗಿನ ಜಾಕ್ವೆಲಿನ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ವೈರಲ್ ಆಗಿದ್ದವು. ಈಗ ಸುಕೇಶ್ ಜೊತೆಗಿನ ಮತ್ತೊಂದು ಫೋಟೋ ವೈರಲ್ ಆಗಿದೆ. ಈ ಕುರಿತಾಗಿ ಜಾಕ್ವೆಲಿನ್ ಮಾತನಾಡಿದ್ದಾರೆ.

    ಈ ಫೋಟೋದಲ್ಲಿ ಜಾಕ್ವೆಲಿನ್ ಕುತ್ತಿಗೆ ಮೇಲೆ ಲವ್ ಬೈಟ್ ಇದೆ. ಸುಕೇಶ್ ಕೂಡ ಆಕೆಗೆ ಮುತ್ತು ನೀಡುತ್ತಿರುವಾಗಲೇ ಫೋಟೋವನ್ನು ಕ್ಲಿಕ್ ಮಾಡಲಾಗಿದೆ. ಈ ಕುರಿತಾಗಿ ಜಾಕ್ವೆಲಿನ್ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ಈ ದೇಶ ಮತ್ತು ಇಲ್ಲಿನ ಜನರು ಯಾವಾಗಲೂ ನನಗೆ ಅಪಾರ ಪ್ರೀತಿ ಮತ್ತು ಗೌರವವನ್ನು ತೋರಿದ್ದಾರೆ. ಇದರಲ್ಲಿ ಮಾಧ್ಯಮದ ಸ್ನೇಹಿತರೂ ಸೇರಿದ್ದಾರೆ. ಅವರಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಪ್ರಸ್ತುತ ಕಷ್ಟದ ದಿನಗಳನ್ನು ನೋಡುತ್ತಿದ್ದೇನೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಗೂ ಇದು ಅರ್ಥವಾಗುತ್ತದೆ ಎಂದು ಕೊಂಡಿದ್ದೇನೆ. ನನ್ನ ವೈಯಕ್ತಿಕ ಫೋಟೋಗಳನ್ನು ಪ್ರಸಾರ ಮಾಡದಂತೆ ನಾನು ಕೋರುತ್ತಿದ್ದೇನೆ. ನ್ಯಾಯ ಮತ್ತು ಒಳ್ಳೆಯ ಪ್ರಜ್ಞೆ ಮೇಲುಗೈ ಸಾಧಿಸುತ್ತದೆ ಎಂದು ಆಶಿಸುತ್ತೇವೆ. ಧನ್ಯವಾದಗಳು ಎಂದು ಜಾಕ್ವೆಲಿನ್ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜಾಕ್ವೆಲಿನ್ ಕುತ್ತಿಗೆ ಮೇಲೆ ಲವ್ ಬೈಟ್ – ಫೋಟೋ ವೈರಲ್

    ಈ ಫೋಟೋ ನೋಡಿದ ನೆಟ್ಟಿಗರು ಇವರಿಬ್ಬರ ಮಧ್ಯೆ ಸಂಬಂಧವಿರುವುದು ಪಕ್ಕಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ, ಸುಕೇಶ್ ಚಂದ್ರಶೇಖರ್‌ನನ್ನು  ಬಂಧಿಸಿದೆ. ಸುಕೇಶ್ ಜೊತೆ ಜಾಕ್ವೆಲಿನ್ ಫೆರ್ನಾಂಡಿಸ್ ಹಣಕಾಸಿನ ವಹಿವಾಟು ನಡೆಸಿರುವ ಪುರಾವೆಗಳನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಇಡಿ, ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್‍ಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಅಭಿಮಾನಿ ಕೈಯಲ್ಲಿದ್ದ ಟ್ಯಾಟೂಗೆ ರಾಮ್ ಚರಣ್ ಬೌಲ್ಡ್

    ಸುಕೇಶ್ ಬಂಧನವಾಗುವ ತನಕವೂ ಜಾಕ್ವೆಲಿನ್ ಮತ್ತು ಸುಕೇಶ್ ಸಂಪರ್ಕದಲ್ಲಿ ಇದ್ದರು. ಜಾಕ್ವೆಲಿನ್‍ಗೆ ಉಡುಗೊರೆಯಾಗಿ ಅರೇಬಿಯನ್ ಕುದುರೆ, ವಜ್ರದ ಕಿವಿಯೋಲೆಗಳು, ಐಷಾರಾಮಿ ಕಾರುಗಳು, ಒಂದು ಜೋಡಿ ಲೂಯಿ ವಿಟಾನ್ ಶೂಅನ್ನು ಸುಕೇಶ್ ನೀಡಿದ್ದ.

    ಈ ಕುರಿತು ಪ್ರತಿಕ್ರಿಯಿಸಿದ ಸುಕೇಶ್, ನಾನು ಜಾಕ್ವೆಲಿನ್ ನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ಅದಕ್ಕಾಗಿಯೇ ನಾನು ಅವರಿಗೆ ಉಡುಗೊರೆಗಳನ್ನು ನೀಡಿದ್ದೇನೆ. ಅದು ನನ್ನ ವೈಯಕ್ತಿಕ ವಿಚಾರ. ಈ ಪ್ರಕರಣಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಈ ಹಿಂದೆ ಹೇಳಿದ್ದನು. ಆದರೆ ಈ ವಿಚಾರವಾಗಿ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದ ಜಾಕ್ವಲಿನ್ ಖಾಸಗಿ ಫೋಟೋವೊಂದು ವೈರಲ್ ಆಗಿರುವ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

  • ಜಾಕ್ವೆಲಿನ್ ಕುತ್ತಿಗೆ ಮೇಲೆ ಲವ್ ಬೈಟ್ – ಫೋಟೋ ವೈರಲ್

    ಜಾಕ್ವೆಲಿನ್ ಕುತ್ತಿಗೆ ಮೇಲೆ ಲವ್ ಬೈಟ್ – ಫೋಟೋ ವೈರಲ್

    ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಇತ್ತೀಚೆಗೆ ಹಲವು ವಿವಾದಗಳಲ್ಲಿ ಸಿಲುಕುತ್ತಿದ್ದಾರೆ. ಈಗ ಜಾಕ್ವೆಲಿನ್ ಕುತ್ತಿಗೆ ಮೇಲೆ ಲವ್ ಬೈಟ್ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಮತ್ತೆ ಸುದ್ದಿಯಾಗಿದ್ದಾರೆ.

    ಈ ಹಿಂದೆ, ಸುಕೇಶ್ ಚಂದ್ರಶೇಖರ್ ಜೊತೆಗಿನ ಜಾಕ್ವೆಲಿನ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈಗ ಸುಕೇಶ್ ಜೊತೆಗಿನ ಮತ್ತೊಂದು ಫೋಟೋ ವೈರಲ್ ಆಗಿದ್ದು, ಈ ಫೋಟೋದಲ್ಲಿ ಜಾಕ್ವೆಲಿನ್ ಕುತ್ತಿಗೆ ಮೇಲೆ ಲವ್ ಬೈಟ್ ಇದೆ. ಸುಕೇಶ್ ಕೂಡ ಆಕೆಗೆ ಮುತ್ತು ನೀಡುತ್ತಿರುವಾಗಲೇ ಫೋಟೋವನ್ನು ಕ್ಲಿಕ್ ಮಾಡಲಾಗಿದೆ. ಇದನ್ನೂ ಓದಿ: ಅಭಿಮಾನಿ ಕೈಯಲ್ಲಿದ್ದ ಟ್ಯಾಟೂಗೆ ರಾಮ್ ಚರಣ್ ಬೌಲ್ಡ್

    ಈ ಫೋಟೋ ನೋಡಿದ ನೆಟ್ಟಿಗರು ಇವರಿಬ್ಬರ ಮಧ್ಯೆ ಸಂಬಂಧವಿರುವುದು ಪಕ್ಕಾ ಎಂದು ಕಮೆಂಟ್ ಮಾಡುತ್ತಿದ್ದಾರೆ. 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸುಕೇಶ್ ಚಂದ್ರಶೇಖರ್‌ನನ್ನು ಬಂಧಿಸಿದೆ. ಸುಕೇಶ್ ಜೊತೆ ಜಾಕ್ವೆಲಿನ್ ಫೆರ್ನಾಂಡಿಸ್ ಹಣಕಾಸಿನ ವಹಿವಾಟುಗಳನ್ನು ನಡೆಸಿರುವ ಪುರಾವೆಗಳನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್ ಗೆ ಸಮನ್ಸ್ ಜಾರಿ ಮಾಡಿತ್ತು.

    ಈ ವೇಳೆ ಆಕೆ, ನಾನು ಸುಕೇಶ್ ಜೊತೆ ಡೇಟಿಂಗ್ ಮಾಡುತ್ತಿಲ್ಲ. ಸುಕೇಶ್ ಚಂದ್ರಶೇಖರ್ ತನ್ನನ್ನು ಶೇಖರ್ ರತ್ನ ವೇಲ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೆ ತಮಿಳುನಾಡಿನ ಮಾಜಿ ಸಿಎಂ ದಿ.ಜೆ.ಜಯಲಲಿತಾ ಅವರ ರಾಜಕೀಯ ಕುಟುಂಬದಿಂದ ಬಂದವನು ಎಂದು ಹೇಳಿಕೊಂಡಿದ್ದ ಎಂದು ವಿವರಿಸಿದ್ದರು.

    ನಟಿ ಜಾಕ್ವೆಲಿನ್ ಫೆನಾರ್ಂಡಿಸ್ ಸ್ನೇಹ ಬಳಸಲು ಅಮಿತ್ ಶಾ ಅವರ ಕಚೇರಿ ಸಂಖ್ಯೆಯನ್ನೇ ಹೋಲುವಂತಹ ಸಂಖ್ಯೆಯಿಂದ ಸುಕೇಶ್ ವಂಚನೆಯ ಕರೆಗಳನ್ನು ಮಾಡುತ್ತಿದ್ದ ಎಂದು ಇಡಿ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ರೂಲ್ಸ್ ಬ್ರೇಕ್ – ರಥೋತ್ಸವದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಭಾಗಿ

    ಫೆಬ್ರವರಿಯಿಂದ ಆಗಸ್ಟ್ 7 ರಂದು ಸುಕೇಶ್‍ನ ಬಂಧನವಾಗುವ ತನಕವೂ ಜಾಕ್ವೆಲಿನ್ ಮತ್ತು ಸುಕೇಶ್ ಸಂಪರ್ಕದಲ್ಲಿ ಇದ್ದರು. ಜಾಕ್ವೆಲಿನ್‍ಗೆ ಉಡುಗೊರೆಗಳಾಗಿ ಅರೇಬಿಯನ್ ಕುದುರೆ, ವಜ್ರದ ಕಿವಿಯೋಲೆಗಳು, ಐಷಾರಾಮಿ ಕಾರುಗಳು, ಒಂದು ಜೋಡಿ ಲೂಯಿ ವಿಟಾನ್ ಶೂಗಳು ಸುಕೇಶ್ ನೀಡಿದ್ದ.

    ಈ ಕುರಿತು ಪ್ರತಿಕ್ರಿಯಿಸಿದ ಸುಕೇಶ್, ನಾನು ಜಾಕ್ವೆಲಿನ್ ನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ಅದಕ್ಕಾಗಿಯೇ ನಾನು ಅವರಿಗೆ ಉಡುಗೊರೆಗಳನ್ನು ನೀಡಿದ್ದೇನೆ. ಅದು ನನ್ನ ವೈಯಕ್ತಿಕ ವಿಚಾರ. ಈ ಪ್ರಕರಣಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದ.

  • ಅಮಿತ್ ಶಾ ನಂಬರ್ ನಕಲು ಮಾಡಿ ಜಾಕ್ವೆಲಿನ್ ಸ್ನೇಹ ಮಾಡಿದ್ದ ವಂಚಕ ಸುಕೇಶ್

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇ.ಡಿ) ವಂಚಕ ಸುಕೇಶ್ ಚಂದ್ರಶೇಖರ್ ಅವರ ಮುಖವಾಡಗಳನ್ನು ಒಂದೊಂದಾಗಿಯೇ ಬಯಲಿಗೆಳೆಯುತ್ತಿದೆ.

    ಜಾಕ್ವೆಲಿನ್ ಫರ್ನಾಂಡಿಸ್ ಅವರಿಂದ ಇ.ಡಿ ಈ ವರ್ಷ ಎರಡು ಬಾರಿ ಹೇಳಿಕೆ ದಾಖಲಿಸಿಕೊಂಡಿತ್ತು. ಅ ಸಂದರ್ಭದಲ್ಲಿ ಅವರು ಸುಕೇಶ್ ಚಂದ್ರಶೇಖರ್ ತನ್ನನ್ನು ಶೇಖಾರ್ ರತ್ನ ವೇಲ ಎಂದು ಪರಿಚಯಿಸಿಕೊಂಡಿದ್ದಾಗಿ ತಿಳಿಸಿದ್ದರು. ಅಲ್ಲದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ರಾಜಕೀಯ ಕುಟುಂಬದಿಂದ ಬಂದವನು ಎಂದು ಹೇಳಿಕೊಂಡಿದ್ದ. ಆತ, ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಸ್ನೇಹ ಬಳಸಲು ಅಮಿತ್ ಶಾ ಅವರ ಕಚೇರಿ ಸಂಖ್ಯೆಯನ್ನೇ ಹೋಲುವಂತಹ ಸಂಖ್ಯೆಯಿಂದ ವಂಚನೆಯ ಕರೆಗಳನ್ನು ಮಾಡುತ್ತಿದ್ದ ಎಂದು ಇ.ಡಿ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿದೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್

    ವಂಚಕ ತನ್ನೊಂದಿಗೆ ಸನ್ ಟಿವಿ ಮಾಲೀಕ ಎಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ತಾನು ಜಯಲಲಿಲತಾ ಅವರ ರಾಜಕೀಯ ಕುಟುಂಬದವನಾಗಿದ್ದು, ಚೈನೈ ಮೂಲದವನಾಗಿರುವುದಾಗಿ ಹೇಳಿಕೊಂಡಿದ್ದು ತನಗೆ ಅಮಿತ್ ಶಾ ಅವರ ಕಚೇರಿಯಿಂದ ಫೋನ್ ಕರೆ ಬಂದಿದ್ದಾಗಿ ಮೇಕಪ್ ಕಲಾವಿದ ತಿಳಿಸಿದ್ದಾರೆ. ಈ ಫೋನ್ ಸಂಖ್ಯೆ ಗೃಹ ಸಚಿವಾಲಯದ ಫೋನ್ ನಂಬರ್‌ಗೆ ಹೋಲುತ್ತಿದ್ದರಿಂದ ಅವರು ಅದನ್ನು ನಂಬಿ ಸುಕೇಶ್‌ನ ಮೊಬೈಲ್ ಸಂಖ್ಯೆಯನ್ನು ಜಾಕ್ವೆಲಿನ್ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಲಿಯಾ ವಿರುದ್ಧ FIR ದಾಖಲಿಸಲು ಮುಂದಾದ ಮುಂಬೈ ಪಾಲಿಕೆ

    ಫೆಬ್ರವರಿಯಿಂದ ಆಗಸ್ಟ್ 7 ರಂದು ಸುಕೇಶ್‌ನ ಬಂಧನವಾಗುವ ತನಕವೂ ಜಾಕ್ವೆಲಿನ್ ಮತ್ತು ಸುಕೇಶ್ ಸಂಪರ್ಕದಲ್ಲಿ ಇದ್ದರು. ಜಾಕ್ವೆಲಿನ್‌ಗೆ ದುಬಾರಿ ಕೈ ಚೀಲಗಳು, ಪರ್ಷಿಯನ್ ಬೆಕ್ಕು (9 ಲಕ್ಷ ಮೌಲ್ಯ), ಬ್ರೇಸ್‌ಲೇಟ್‌ಗಳು ಉಡುಗೊರೆಯಾಗಿ ಸಿಕ್ಕಿದ್ದವು. ಅದಲ್ಲದೇ ಒಂದು ಬಿಎಂಡಬ್ಲೂ ಕಾರನ್ನು ಅಮೆರಿಕಾದಲ್ಲಿರುವ ಜಾಕ್ವೆಲಿನ್ ತಂಗಿ ಗೆರಾಲ್ಡಿನ್ ಫೆರ್ನಾಂಡಿಸ್‌ಗೆ ಉಡುಗೊರೆಯಾಗಿ ನೀಡಿರುವುದಾಗಿ ಇ.ಡಿ ತಿಳಿಸಿದೆ.

  • 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್

    200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್

    ಮುಂಬೈ: ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇಂದು ಜಾರಿ ನಿರ್ದೇಶನಾಲಾಯದ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

    200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್ ವಿರುದ್ಧ ಇಡಿ ಸಮನ್ಸ್ ನೀಡಿತ್ತು. ಹೀಗಾಗಿ ಜಾಕ್ವೆಲಿನ್ ಬುಧವಾರ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ದೇಶ ತೊರೆಯದಂತೆ ಜಾಕ್ವೆಲಿನ್ ಗೆ ತಡೆ

    ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಾಯದಿಂದ ಸಮನ್ಸ್ ಪಡೆದಿದ್ದ ಜಾಕ್ವೆಲಿನ್ ಫನಾರ್ಂಡಿಸ್ ಕಾರ್ಯಕ್ರಮವೊಂದಕ್ಕೆ ದುಬೈಗೆ ತೆರಳುತ್ತಿದ್ದ ವೇಳೆ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದು ಅಧಿಕಾರಿಗಳು ಬಂಧಿಸಿ, ಸಂಪೂರ್ಣ ವಿಚಾರಣೆ ನಡೆಸಿ ಬಳಿಕ ಬಿಟ್ಟಿದ್ದರು. ಅಲ್ಲದೇ ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗುವಂತೆ ದೆಹಲಿ ತನಿಖಾ ಸಂಸ್ಥೆ ತಿಳಿಸಿತ್ತು.

    ಸುಕೇಶ್ ಚಂದ್ರಶೇಖರ್, ಉದ್ಯಮಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿ ನೂರಾರು ಕೋಟಿ ಹಣ ಸುಲಿಗೆ ಮಾಡುತ್ತಿದ್ದ. ಅಲ್ಲದೇ ತಿಹಾರ್ ಜೈಲಿನಲ್ಲಿಯೇ ಇದ್ದುಕೊಂಡು ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ಸುಲಿಗೆ ಹಣ ಸುಲಿಗೆ ಮಾಡಿರುವ ಆರೋಪ ಕೂಡ ಈತನ ಮೇಲಿದೆ. ಇನ್ನೂ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಫನಾರ್ಂಡಿಸ್ ಹಣಕಾಸಿನ ವಹಿವಾಟುಗಳನ್ನು ನಡೆಸಿರುವ ಪುರಾವೆಗಳನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿತ್ತು. ಇದನ್ನೂ ಓದಿ: ಜಾಕ್ವೆಲಿನ್‌ಗೆ ಕಿಸ್ ಮಾಡುತ್ತಿರುವ ಸುಕೇಶ್ ಚಂದ್ರಶೇಖರ್ – ರೋಮ್ಯಾಂಟಿಕ್ ಫೋಟೋ ವೈರಲ್

    ಸುಕೇಶ್ ಜೈಲಿನಿಂದಲೇ ಜಾಕ್ವೆಲಿನ್‍ಗೆ 10 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಕಳುಹಿಸಿದ್ದ ಎನ್ನಲಾಗುತ್ತದೆ. 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಆರೋಪಿ ಸುಕೇಶ್ ಚಂದ್ರಶೇಖರ್ ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ.