Tag: Jacqueline Fernandez

  • ನಟಿ ಜಾಕ್ವೆಲಿನ್‌ಗೆ ED ಗ್ರಿಲ್ – ವಂಚಕನನ್ನೇ ಮದುವೆ ಆಗಲು ತಯಾರಾಗಿದ್ದರಂತೆ ‘ರಾ ರಾ ರಕ್ಕಮ್ಮ’

    ನಟಿ ಜಾಕ್ವೆಲಿನ್‌ಗೆ ED ಗ್ರಿಲ್ – ವಂಚಕನನ್ನೇ ಮದುವೆ ಆಗಲು ತಯಾರಾಗಿದ್ದರಂತೆ ‘ರಾ ರಾ ರಕ್ಕಮ್ಮ’

    ಹುಕೋಟಿ ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ ಕೊಡುವ ಗಿಫ್ಟ್ ಆಸೆಗೆ ಆತನನ್ನೇ ಮದುವೆ ಆಗಲು ಒಪ್ಪಿದ್ದರಂತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez). ಹಾಗಂತ ದೆಹಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ ಎಂದು ಬಾಲಿವುಡ್ ವೆಬ್‌ಸೈಟ್‌ಗಳು ವರದಿ ಮಾಡಿವೆ. ಸುಕೇಶ್ ನೀಡುತ್ತಿದ್ದ ಕೋಟಿ ಕೋಟಿ ಮೌಲ್ಯದ ಉಡುಗೊರೆಗೆ ಜಾಕ್ವೆಲಿನ್ ಮಾರು ಹೋಗಿದ್ದರಿಂದ, ಆತನನ್ನೇ ಮದುವೆ ಆಗುವ ಕನಸು ಕಂಡಿದ್ದರಂತೆ.

    ಸೆ.14ರಂದು ಜಾಕ್ವೆಲಿನ್ ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದಾಗ ಈ ವಿಷಯ ಬೆಳಕಿಗೆ ಬಂದಿದೆ. ಸುಕೇಶ್ (Sukesh Chandrasekhar) ಕೊಡುತ್ತಿದ್ದ ದುಬಾರಿ ಉಡುಗೊರೆಗೆ ನಟಿ ನೋರಾ ಫತೇಹಿ (Nora Fatehi) ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಇಬ್ಬರೂ ಮಾರು ಹೋಗಿದ್ದರಂತೆ. ಆಗಾಗ್ಗೆ ಒಟ್ಟಿಗೆ ಸೇರುತ್ತಿದ್ದರಂತೆ. ಸುಕೇಶ್ ಮೇಲೆ ಅನುಮಾನ ಬಂದ ಕಾರಣಕ್ಕಾಗಿ ನೋರಾ ಅಂತರವನ್ನು ಕಾಪಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ, ಜಾಕ್ವೆಲಿನ್ ಮಾತ್ರ ಗೆಳೆತನವನ್ನು ಮುಂದುವರೆಸಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ

    ಸುಕೇಶ್ ತಾನು ವಂಚಿಸಿದ್ದ ಹಣದಲ್ಲೇ ಹಲವಾರು ನಟಿಯರಿಗೆ ಮತ್ತು ಮಾಡೆಲ್ ಗಳಿಗೆ ಹಣ ಮತ್ತು ಗಿಫ್ಟ್ ಗಳನ್ನು ನೀಡಿರುವುದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಅದರಲ್ಲೂ ಜಾಕ್ವೆಲಿನ್ ಗೆ ದುಬಾರಿ ಉಡುಗೊರೆಗಳನ್ನೇ ಸುಕೇಶ್ ನೀಡಿದ್ದಾನೆ. ಅದರಲ್ಲಿ ಕುದುರೆ, ದುಬಾರಿ ವಾಚು, ಡೈಮೆಂಟ್ ನೆಕ್ಲೆಸ್, ಬ್ಯಾಗ್ ಸೇರಿದಂತೆ ಹಲವು ಉಡುಗೊರೆಗಳು ಇವೆ ಎಂದು ಹೇಳಿದ್ದಾರೆ. ಆದರೆ ಇದನ್ನು ಜಾಕ್ವೆಲಿನ್ ನಿರಾಕರಿಸಿದ್ದರು. ನಾನು ಗಳಿಸಿದ ಹಣದಲ್ಲಿ ಇವುಗಳನ್ನು ಖರೀದಿಸಿರುವುದಾಗಿ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ರಾ..ರಾ.. ರಕ್ಕಮ್ಮಗೆ ಶುರುವಾಯ್ತು ಸಂಕಷ್ಟ – ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ

    ರಾ..ರಾ.. ರಕ್ಕಮ್ಮಗೆ ಶುರುವಾಯ್ತು ಸಂಕಷ್ಟ – ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ

    ನವದೆಹಲಿ: ಸುಕೇಶ್ ಚಂದ್ರಶೇಖರ್ (Sukesh Chandrashekar) ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರನ್ನು ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್‌ಗೆ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಎರಡು ಬಾರಿ ಸಮನ್ಸ್ ಜಾರಿ ಮಾಡಲಾಗಿತ್ತು. ಸಮನ್ಸ್ ಹಿನ್ನೆಲೆ ಅವರು ಇಂದು ವಿಚಾರಣೆಗೆ ಹಾಜರಾಗಿದ್ದರು.

    ಬೆಳಗ್ಗೆ 11:30 ರಿಂದ ವಿಚಾರಣೆ ಆರಂಭವಾಗಿದ್ದು, ರಾತ್ರಿ 8:30 ವರೆಗೆ ವಿಚಾರಣೆ ನಡೆಯುವ ಸಾಧ್ಯತೆಗಳಿದೆ. ಒಟ್ಟು ಮೂರು ಹಂತಗಳಲ್ಲಿ ವಿಚಾರಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ನಿಂದ ಬೆಲೆ ಬಾಳುವ ಗಿಫ್ಟ್ ಪಡೆದಿರುವ ಹಿನ್ನೆಲೆಯಲ್ಲಿ ನಟಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: 200 ಕೋಟಿ ವಂಚನೆ ಕೇಸ್ : ಸುಕೇಶ್ ಬಗ್ಗೆ ಎಲ್ಲವೂ ಗೊತ್ತಿದ್ದೂ ಸ್ನೇಹ ಬೆಳೆಸಿ ಇಕ್ಕಟ್ಟಿಗೆ ಸಿಲುಕಿಕೊಂಡ್ರಾ ನಟಿ ಜಾಕ್ವೆಲಿನ್

    ಜಾಕ್ವೆಲಿನ್, ಸುಕೇಶ್ ಚಂದ್ರಶೇಖರ್‌ರಿಂದ 2.5 ಕೋಟಿ ಮೌಲ್ಯದ ಮೂರು ಕಾರುಗಳನ್ನು, ಮೂಬೈಲ್ ಫೋನ್‍ಗಳನ್ನು, ನಾಲ್ಕು ಪರ್ಷಿಯನ್ ಬೆಕ್ಕುಗಳು, ಗುಸ್ಸಿ ಮತ್ತು ಶನೆಲ್‍ನಿಂದ ಡಿಸೈನರ್ ಬ್ಯಾಗ್‍ಗಳು ಮತ್ತು ಒಂದು ಜೋಡಿ ಲೂಯಿ ವಿಟಾನ್ ಶೂಗಳನ್ನು ಸೇರಿ ಹಲವು ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಇದನ್ನೂ ಓದಿ: ಹುಡುಗರ ಸಾಮರ್ಥ್ಯನ 2 ನಿಮಿಷದ ಮ್ಯಾಗಿಗೆ ಹೋಲಿಸಿದ್ದ ನಟಿಗೆ, ತೆಲುಗು ನಟ ಅಡಿವಿ ಶೇಷ್ ಕೊಟ್ಟ ಟಾಂಗ್ ಇನ್ನೂ ಭಯಂಕರ

    ಪ್ರಸ್ತುತ ಜೈಲಿನಲ್ಲಿರುವ ಚಂದ್ರಶೇಖರ್ ಫೋರ್ಟಿಸ್ ಹೆಲ್ತ್‌ಕೇರ್‌ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಪತ್ನಿ ಅದಿತಿ ಸಿಂಗ್ ಅವರಂತಹ ಉನ್ನತ ವ್ಯಕ್ತಿಗಳು ಸೇರಿದಂತೆ ಹಲವು ಶ್ರೀಮಂತ ಜನರನ್ನು ವಂಚಿಸಿದ ಆರೋಪ ಹೊತ್ತಿದ್ದಾರೆ. ಆಗಸ್ಟ್ 17 ರಂದು ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಹೆಸರಿಸಿ ಇಡಿ (ED) ಚಾರ್ಜ್ ಶೀಟ್ ಸಲ್ಲಿಸಿತು. ಕರ್ನಾಟಕದ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಪ್ರಸ್ತುತ ದೆಹಲಿ ಜೈಲಿನಲ್ಲಿದ್ದು 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 200 ಕೋಟಿ ವಂಚನೆ ಕೇಸ್ : ಸುಕೇಶ್ ಬಗ್ಗೆ ಎಲ್ಲವೂ ಗೊತ್ತಿದ್ದೂ ಸ್ನೇಹ ಬೆಳೆಸಿ ಇಕ್ಕಟ್ಟಿಗೆ ಸಿಲುಕಿಕೊಂಡ್ರಾ ನಟಿ ಜಾಕ್ವೆಲಿನ್

    200 ಕೋಟಿ ವಂಚನೆ ಕೇಸ್ : ಸುಕೇಶ್ ಬಗ್ಗೆ ಎಲ್ಲವೂ ಗೊತ್ತಿದ್ದೂ ಸ್ನೇಹ ಬೆಳೆಸಿ ಇಕ್ಕಟ್ಟಿಗೆ ಸಿಲುಕಿಕೊಂಡ್ರಾ ನಟಿ ಜಾಕ್ವೆಲಿನ್

    ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ 200 ಕೋಟಿ ವಂಚನೆ ಪ್ರಕರಣದಲ್ಲಿ ಅತೀ ಹೆಚ್ಚು ಸುದ್ದಿ ಆಗುತ್ತಿರುವುದು ನಟಿ ಜಾಕ್ವೆಲಿನ್ ಫರ್ನಾಂಡಿಸ್.  ದಂಪತಿಯೊಬ್ಬರಿಗೆ ಮೋಸ ಮಾಡಿ ಅವರಿಗೆ 200 ಕೋಟಿ ವಂಚನೆ ಮಾಡಿದ್ದಾರೆ ಅನ್ನುವ ಆರೋಪದಲ್ಲಿ ಜೈಲು ಪಾಲಾಗಿರುವ ಸುಕೇಶ್ ಜೊತೆ ಜಾಕ್ವೆಲಿನ್ ಸಂಬಂಧ ಇಟ್ಟುಕೊಂಡಿದ್ದರು. ಈ ಕಾರಣಕ್ಕಾಗಿಯೇ ಜಾಕ್ವೆಲಿನ್ ಗೆ ದುಬಾರಿ ಗಿಫ್ಟ್ ಗಳನ್ನು ಸುಕೇಶ್ ನೀಡಿದ್ದಾನೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

    ಹಣಕ್ಕಾಗಿಯೇ ಸುಕೇಶ್ ಸ್ನೇಹ ಬೆಳೆಸಿದ್ದು, ಇಲ್ಲದೇ ಹೋದರೆ ಈ ಪ್ರಮಾಣದ ದುಬಾರಿ ಗಿಫ್ಟ್ ಗಳನ್ನು ಕೊಡುವುದಕ್ಕೆ ಹೇಗೆ ಸಾಧ್ಯ? ಸುಕೇಶ್ ಬಗ್ಗೆ ಎಲ್ಲವೂ ತಿಳಿದಿದ್ದರೂ, ಗಿಫ್ಟ್ ಗಳನ್ನು ನಿರಾಕರಿಸದೇ ಪಡೆದಿದ್ದಾರೆ ಎಂದು ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಜಾಕ್ವೆಲಿನ್ ಬಗ್ಗೆ ಉಲ್ಲೇಖಿಸಲಾಗಿದೆ. ಇದೊಂದು ದುಡ್ಡಿಗಾಗಿ ನಡೆದಿರುವ ಸ್ನೇಹ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಕೋರ್ಟಿಗೆ ಹಾಜರಾಗುವಂತೆ ಜಾಕ್ವೆಲಿನ್ ಗೆ ಕೋರ್ಟ್ ಸಮನ್ಸ್ ನೀಡಿದ್ದು, ಈ ತಿಂಗಳು ಕೊನೆಯ ವಾರದಲ್ಲಿ ದಿನಾಂಕವನ್ನೂ ನಿಗಧಿ ಮಾಡಲಾಗಿದೆ. ಹಾಗಾಗಿ ಜಾಕ್ವೆಲಿನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುತಿಸಿದ ಅಷ್ಟೂ ವಸ್ತುಗಳನ್ನು ನಾನು ನನ್ನ ಸ್ವಂತ ದುಡಿಮೆಯಿಂದ ತಂದಿದ್ದು ಎಂದು ಜಾಕ್ವೆಲಿನ್ ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಸುಕೇಶ್ ತಮಗೆ ಯಾವುದೇ ಗಿಫ್ಟ್ ನೀಡಿಲ್ಲವೆಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ವಿಕ್ರಾಂತ ರೋಣ’ ಬೆಡಗಿ ಜಾಕ್ವೆಲಿನ್  ಫರ್ನಾಂಡಿಸ್ ಗೆ ಕೋರ್ಟಿನಿಂದಲೂ ಸಮನ್ಸ್: ತಪ್ಪದ ಸಂಕಷ್ಟ

    ‘ವಿಕ್ರಾಂತ ರೋಣ’ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಕೋರ್ಟಿನಿಂದಲೂ ಸಮನ್ಸ್: ತಪ್ಪದ ಸಂಕಷ್ಟ

    ಬಾಲಿವುಡ್ ಬೆಡಗಿ, ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿರುವ ಜಾಕ್ವೆಲಿನ್ ಫರ್ನಾಂಡಿಸ್ ಗೆ ದೆಹಲಿ ಪಟಿಯಾಲ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಜಾಕ್ವೆಲಿನ್ ಸ್ನೇಹಿತ ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಕೇಳಿ ಬಂದಿದೆ. ವಂಚನೆ ಹಣದಲ್ಲಿ ಜಾಕ್ವೆಲಿನ್ ಗೆ ಸುಕೇಶ್ ಭಾರೀ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ ಎನ್ನುವ ಕಾರಣಕ್ಕಾ ಇಡಿ ನಟಿಯ ಮೇಲೂ ಚಾರ್ಜ್ ಶೀಟ್ ಸಲ್ಲಿಸಿತ್ತು.

    ತನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಈಗಾಗಲೇ ಹಲವಾರಿ ಬಾರಿ ಜಾಕ್ವೆಲಿನ್ ಹೇಳಿಕೊಂಡಿದ್ದಾರೆ. ಆದರೂ, ಜಾರಿ ನಿರ್ದೇಶನಾಲಯ ಜಾಕ್ವೆಲಿನ್ ಹೆಸರು ಸೇರಿಸಿಯೇ ಚಾರ್ಜ್ ಶೀಟ್ ಸಲ್ಲಿಸಿತ್ತು. ಹಾಗಾಗಿ ಸೆಪ್ಟಂಬರ್ 26ರಂದು ಕೋರ್ಟಿಗೆ ಹಾಜರಾಗುವಂತೆ ದೆಹಲಿಯ ಪಟಿಯಾಲ ಕೋರ್ಟ್ ಜಾಕ್ವೆಲಿನ್ ಗೆ ಸಮನ್ಸ್ ಜಾರಿ ಮಾಡಿದೆ. ಇದನ್ನೂ ಓದಿ:ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

    ವ್ಯಕ್ತಿಯೊಬ್ಬರಿಗೆ ಸುಕೇಶ್ 200 ಕೋಟಿ ವಂಚಿಸಿದ್ದರು. ಈ ಹಣದಲ್ಲಿ ಜಾಕ್ವೆಲಿನ್ ಗೆ ದುಬಾರಿ ಕಾರು, ಕುದುರೆ, ಡೈಮೆಂಡ್ ನಕ್ಲೆಸ್ ಮತ್ತು ದುಬಾರಿ ಬ್ಯಾಗ್ ಗಳನ್ನು ಸುಕೇಶ್ ಉಡುಗೊರೆಯಾಗಿ ನೀಡಿದ್ದರು. ಅದು ವಂಚನೆ ಹಣದಿಂದ ಕೊಟ್ಟಿರುವ ಉಡುಗೊರೆಯಾಗಿದೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಾಗಿ ಜಾಕ್ವೆಲಿನ್ ಗೆ ಸಂಕಷ್ಟ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮುಂಬೈ ಸಿನಿಮಾವಾಲಾಗಳು ಸತ್ಯವನ್ನು ಸುಳ್ಳು ಮಾಡುವ ಕೆಟ್ಟ ಚಾಳಿ ಕಲ್ತಿದ್ದಾರೆ: ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಗರಂ

    ಮುಂಬೈ ಸಿನಿಮಾವಾಲಾಗಳು ಸತ್ಯವನ್ನು ಸುಳ್ಳು ಮಾಡುವ ಕೆಟ್ಟ ಚಾಳಿ ಕಲ್ತಿದ್ದಾರೆ: ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಗರಂ

    ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ವಕೀಲರೂ ಆಗಿರುವ ಸುಬ್ರಮಣಿಯನ್‌ ಸ್ವಾಮಿ ಬಾಲಿವುಡ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ಮುಂಬೈ ಸಿನಿಮಾವಾಲಾಗಳು ಸತ್ಯವನ್ನು ಸುಳ್ಳುವ ಮಾಡುವ ಕೆಟ್ಟ ಚಾಳಿಯನ್ನು ಹೊಂದಿದ್ದಾರೆ. ಅವರಿಗೆ ಸತ್ಯವನ್ನು ಹೇಳುವುದಕ್ಕೆ ಬರುವುದಿಲ್ಲ. ಹಾಗಾಗಿ ಅಕ್ಷಯ್ ಕುಮಾರ್ ಸೇರಿದಂತೆ ಎಂಟು ಜನರಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದ್ದಾರೆ. ಕಥೆ ತಿರುಚಿದ ಆರೋಪವನ್ನೂ ಅವರು ಮಾಡಿದ್ದಾರೆ.

    ಸದ್ಯ ಸತತ ಸೋಲಿನಿಂದ ಕಂಗೆಟ್ಟಿರುವ ಅಕ್ಷಯ್ ಕುಮಾರ್ ರಾಮ್ ಸೇತು ಸಿನಿಮಾದ ಬಿಡುಗಡೆಯ ಕನಸು ಕಾಣುತ್ತಿದ್ದಾರೆ. ಈ ಸಿನಿಮಾವಾದರೂ ಗೆಲುವು ತಂದು ಕೊಡುತ್ತಾ ಎಂಬ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ ಈ ಸಿನಿಮಾ ಗೆಲುವಾಗಲಿದೆ ಎಂದು ಕನಸು ಕಂಡ ಅಕ್ಷಯ್ ಕುಮಾರ್ ಗೆ ಶಾಕ್ ನೀಡಿದ್ದಾರೆ ಸುಬ್ರಮಣಿಯನ್‌ ಸ್ವಾಮಿ. ರಾಮ್ ಸೇತು ವಿಚಾರವಾಗಿ ಸಿನಿಮಾದಲ್ಲಿ ತಿರುಚಿದ ಮಾಹಿತಿಯನ್ನು ಸೇರಿಸಲಾಗಿದೆ ಎನ್ನುವ ಕಾರಣಕ್ಕೆ ನೋಟಿಸ್ ನೀಡಿದ್ದಾರೆ.

    ಅಕ್ಷಯ್ ಕುಮಾರ್, ನುಶ್ರತ್ ಬರೂಚಾ, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಎಂಟು ಮಂದಿಗೆ ಈಗಾಗಲೇ ನೋಟಿಸ್ ನೀಡಿದ್ದು, ಬೌದ್ಧಿಕ ಆಸ್ತಿ ಹಕ್ಕಿನ ಮಹತ್ವ ತಿಳಿಸುವುದಕ್ಕಾಗಿ ಈ ರೀತಿ ನೋಟಿಸ್ ಕೊಟ್ಟಿರುವುದಾಗಿ ಸ್ವಾಮಿ ತಿಳಿಸಿದ್ದಾರೆ. ಆ ನೋಟಿಸ್ ಅನ್ನು ಸ್ವಾಮಿ ಸಹವೃತ್ತಿಕರ್ಮಿ ಆಗಿರುವ ಸತ್ಯ ಸಬರ್ವಾಲ್ ಅವರ ಮೂಲಕ ಜಾರಿಗೊಳಿಸಿದ್ದಾರೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಸೀರಿಯಲ್ ಗೆ ನಟ ಹರೀಶ್ ರಾಜ್ ಅಧಿಕೃತ ಎಂಟ್ರಿ: ಪ್ರೊಮೋ ರಿಲೀಸ್

    ರಾಮಸೇತುವನ್ನು ಹಾಳು ಮಾಡುವ ಉದ್ದೇಶದಿಂದ ಆಗಿನ ಕೇಂದ್ರ ಸರಕಾರವು ಸೇತು ಸಮುದ್ರಂ ಶಿಪ್ ಚಾನೆಲ್ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಅದನ್ನು ವಿರೋಧಿಸಿ ಸುಪ್ರೀಂಕೋರ್ಟ್ ನಲ್ಲಿ ತಡೆಯಾಜ್ಞೆ ತರುವಲ್ಲಿ ಸ್ವಾಮಿ ಸಾಕಷ್ಟು ಶ್ರಮ ವಹಿಸಿದ್ದರು. ಇದೀಗ ಅದೇ ಹೆಸರಿನಲ್ಲಿ ಸಿನಿಮಾ ಮೂಡಿ ಬರುತ್ತಿರುವುದರಿಂದ, ಈ ವಿಷಯ ಸಿನಿಮಾದಲ್ಲಿ ಇದೆಯಾ? ಇದ್ದರೆ ಪ್ರಮುಖ ಪಾತ್ರ ವಹಿಸಿದ್ದ ಸ್ವಾಮಿ ಅವರ ಪಾತ್ರವೂ ಇರಬೇಕಲ್ಲ? ಹೀಗೆ ನಾನಾ ಪ್ರಶ್ನೆಗಳನ್ನು ಹಾಕಿ, ಸಿನಿಮಾ ರಿಲೀಸ್ ಗೂ ಮುನ್ನ ಸ್ವಾಮಿಗಳಿಗೆ ಈ ಸಿನಿಮಾ ತೋರಿಸ್ಬೇಕು ಎಂದು ವಕೀಲರು ನೋಟಿಸ್ ನಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 200 ಕೋಟಿ ವಂಚನೆ ಪ್ರಕರಣ: ಯಾವುದೇ ಗಿಫ್ಟ್ ಪಡೆದಿಲ್ಲ ಎಂದ ‘ವಿಕ್ರಾಂತ್ ರೋಣ’ ಬೆಡಗಿ ಜಾಕ್ವೆಲಿನ್

    200 ಕೋಟಿ ವಂಚನೆ ಪ್ರಕರಣ: ಯಾವುದೇ ಗಿಫ್ಟ್ ಪಡೆದಿಲ್ಲ ಎಂದ ‘ವಿಕ್ರಾಂತ್ ರೋಣ’ ಬೆಡಗಿ ಜಾಕ್ವೆಲಿನ್

    ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್, ತಾವು ವಂಚಿಸಿ ಪಡೆದಿದ್ದ 200 ಕೋಟಿ ರೂಪಾಯಿ ಹಣದಲ್ಲಿ ಗೆಳತಿ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ 5.71 ಕೋಟಿ ಹಣದಲ್ಲಿ ಉಡುಗೊರೆಯಾಗಿ ನೀಡಿದ್ದ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಕೂಡ ಆರೋಪಿ ಎಂದು ನಮೂದಿಸಿದ್ದರು. ಈ ಕುರಿತು ಜಾಕ್ವೆಲಿನ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಸುಕೇಶ್ ಚಂದ್ರಶೇಖರ್ ನನಗೆ ಯಾವುದೇ ರೀತಿಯಲ್ಲಿ ಉಡುಗೊರೆಯನ್ನು ಕೊಟ್ಟಿಲ್ಲ. ನಾನು ಸಂಪಾದನೆ ಮಾಡಿರುವ ಹಣದಿಂದಲೇ ಕೆಲ ವಸ್ತುಗಳನ್ನು ಖರೀದಿಸಿದ್ದೇನೆ. ನಾನು ಎಫ್.ಡಿ ಆಗಿ ಇಟ್ಟಿದ್ದ ಹಣದಲ್ಲೇ ಅವುಗಳನ್ನು ಖರೀದಿಸಿದ್ದು, ಅದಕ್ಕೆ ಬೇಕಾದ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ನಾನು ಆ ಹಣಕ್ಕೆ ಟ್ಯಾಕ್ಸ್ ಕೂಡ ಕಟ್ಟಿದ್ದೇನೆ ಎಂದು ಜಾಕ್ವೆಲಿನ್ ಹೇಳಿದ್ದಾರೆ. ಇದನ್ನೂ ಓದಿ:ಅಕ್ಷತಾ‌ ಜೊತೆ ರಾಕೇಶ್ ಅಡಿಗ ರೊಮ್ಯಾನ್ಸ್: ಸೋನು ಫುಲ್ ಗರಂ

    ಇಡಿ ಅಧಿಕಾರಿಗಳು ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಸುಕೇಶ್ ಚಂದ್ರಶೇಖರ್ ವಂಚಿಸಿದ್ದ 200 ಕೋಟಿ ಹಣದಲ್ಲಿ ನಟಿ ಜಾಕ್ವೆಲಿನ್ ಗೆ ದುಬಾರಿ ಕಾರು, ವಾಚು, ಕುದುರೆ, ಬ್ಯಾಗ್ ಸೇರಿದಂತೆ ಹಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂದು ದಾಖಲಾಗಿದೆ. ಅಲ್ಲದೇ, ಜಾಕ್ವೆಲಿನ್ ಸಂಗ ಬಯಸಲು ಅವನು ತನ್ನ ದೀರ್ಘಕಾಲದ ಗೆಳತಿ ಪಿಂಕಿ ಇರಾನಿಯನ್ನು ಬಳಸಿಕೊಂಡಿದ್ದ ಎಂದೂ ಚಾರ್ಜ್ ಶೀಟ್ ನಲ್ಲಿ ಬರೆಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 200 ಕೋಟಿ ವಂಚನೆ ಪ್ರಕರಣ: ದೇವರ ಮೊರೆ ಹೋದ ರಾ ರಾ ರಕ್ಕಮ್ಮ ನಟಿ ಜಾಕ್ವೆಲಿನ್

    200 ಕೋಟಿ ವಂಚನೆ ಪ್ರಕರಣ: ದೇವರ ಮೊರೆ ಹೋದ ರಾ ರಾ ರಕ್ಕಮ್ಮ ನಟಿ ಜಾಕ್ವೆಲಿನ್

    ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸಂಕಷ್ಟ ಎದುರಾಗಿದೆ. ಬೆಂಗಳೂರು ಮೂಲದ ಸುಖೇಶ್ ಚಂದ್ರಶೇಖರ್ ಮಾಡಿರುವ 200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿದೆ. ವಂಚನೆ ಹಣದಲ್ಲಿ ಜಾಕ್ವೆಲಿನ್ ಗೆ ಹತ್ತು ಕೋಟಿಗೂ ಅಧಿಕ ಮೊತ್ತದ ಉಡುಗೊರೆಯನ್ನು ಜಾಕ್ವೆಲಿನ್ ಪಡೆದಿದ್ದಾಳೆ ಎಂದು ಇಡಿ ಆರೋಪ ಪಟ್ಟಿ ಸಲ್ಲಿಸಿದೆ.

    ಜಾರಿ ನಿರ್ದೇಶನಾಲಯವು ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಹೆಸರನ್ನೂ ಆರೋಪ ಪಟ್ಟಿಯಲ್ಲಿ ಸೇರಿಸಿರುವುದರಿಂದ ಜಾಕ್ವೆಲಿನ್ ಸಂಕಷ್ಟ ಎದುರಿಸಬೇಕಾಗಿದೆ. ಹಾಗಾಗಿ ಅವರು ಜುಹುವಿನಲ್ಲಿರುವ ಮುಕ್ತೇಶ್ವರ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದಿದ್ದಾರೆ. ಆ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದು, ಅದಕ್ಕೆ ನಾನಾ ರೀತಿಯ ಕಾಮೆಂಟ್ ಬರುತ್ತಿವೆ. ಕಷ್ಟ ಬಂದಾಗಲೇ ದೇವರ ಮುಂದೆ ನಿಲ್ಲೋದು ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    200 ಕೋಟಿ ವಂಚಿಸಿರುವ ಸುಕೇಶ್ ಚಂದ್ರಶೇಖರ್, ಕೆಲವು ತಿಂಗಳ ಕಾಲ ಜಾಕ್ವೆಲಿನ್ ಜೊತೆ ಸ್ನೇಹ ಬೆಳೆಸಿದ್ದರಂತೆ. ಸ್ನೇಹಕ್ಕಾಗಿ ಅವರು ದುಬಾರಿ ಬೆಲೆಯ ಕಾರು, ಡೈಮೆಂಡ್ ನೆಕ್ಲೆಸ್, ಕುದುರೆ ಮತ್ತು ಬ್ಯಾಗ್ ಗಳನ್ನು ಉಡುಗೊರೆಯಾಗಿ ನೀಡಿದ್ದರಂತೆ. ಈ ಉಡುಗೊರೆಯೇ ಜಾಕ್ವೆಲಿನ್ ಗೆ ಮುಳುವಾಗಿವೆ. ಹೀಗಾಗಿ ಆರೋಪ ಪಟ್ಟಿಯಲ್ಲೂ ಅವರ ಹೆಸರು ಸೇರುವಂತಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾ..ರಾ. ರಕ್ಕಮ್ಮ ಬೆಡಗಿ ಜಾಕ್ವೆಲಿನ್ ಇದೀಗ 215 ಕೋಟಿ ಹಣದ ಪ್ರಕರಣದಲ್ಲಿ ಆರೋಪಿ

    ರಾ..ರಾ. ರಕ್ಕಮ್ಮ ಬೆಡಗಿ ಜಾಕ್ವೆಲಿನ್ ಇದೀಗ 215 ಕೋಟಿ ಹಣದ ಪ್ರಕರಣದಲ್ಲಿ ಆರೋಪಿ

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ‘ರಾ ರಾ ರಕಮ್ಮ’ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿ ಕೋಟಿ ಹೃದಯ ಕದ್ದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಕೋರ್ಟ್ ಮೆಟ್ಟಿಲು ಹತ್ತುವಂತಾಗಿದೆ. ಬರೋಬ್ಬರಿ 215 ಕೋಟಿ ರೂಪಾಯಿ ಹಣ ವಸೂಲಿ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಆರೋಪಿಯನ್ನಾಗಿ ಇಡಿ ಅಧಿಕಾರಿಗಳು ಇಂದು ದೆಹಲಿ ಇಡಿ ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತಿದ್ದಾರೆ.

    ಬೆಂಗಳೂರು ಮೂಲದ ಸುಖೇಶ್ ಚಂದ್ರಶೇಖರ್ ಗೂ ಮತ್ತು ಜಾಕ್ವೆಲಿನ್ ಇಬ್ಬರೂ ಸ್ನೇಹಿತರು ಎಂದು ಹೇಳಲಾಗುತ್ತಿದ್ದು, ಈ ಸುಖೇಶ್ ಬರೋಬ್ಬರಿ 215 ಕೋಟಿ ರೂಪಾಯಿಯನ್ನು ವಂಚಿಸಿದ್ದಾರೆ ಎನ್ನಲಾಗುತ್ತಿದೆ. ಜೈಲಿನಲ್ಲಿರುವ ಖೈದಿಯೊಬ್ಬರನ್ನು ಬಿಡುಗಡೆ ಮಾಡಿಸಲು ಈ ಪ್ರಮಾಣದ ಹಣವನ್ನು ಉದ್ಯಮಿಯ ಪತ್ನಿಗೆ ಕೇಳಿದ್ದರು. ನಂಬಿಸಿ ವಸೂಲಿ ಕೂಡ ಮಾಡಿದ್ದರು. ಆನಂತರ ಉದ್ಯಮಿ ಪತ್ನಿಗೆ ಇದು ಮೋಸ ಎಂದು ಗೊತ್ತಾಗಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ:ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

    215 ಕೋಟಿ ಹಣದಲ್ಲಿ ಸುಖೇಶ್, ಬಾಲಿವುಡ್ ನಟಿ ಜಾಕ್ವೆಲಿನ್ ಗೆ ದುಬಾರಿ ಕಾರು, ಡೈಮೆಂಡ್, ವಾಚ್, ಬ್ಯಾಗ್ ಗಳು ಮತ್ತು ದುಬಾರಿ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು ಎನ್ನುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಇಡಿ ತನಿಖೆ ಆರಂಭಿಸಿತ್ತು. ಇದೀಗ ಅದು ನಿಜವಾಗಿದೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಾಗುತ್ತಿದೆ. ಹಾಗಾಗಿ ಜಾರಿ ನಿರ್ದೇಶನಾಲಯವು ಕೋರ್ಟ್ ಗೆ ಜಾಕ್ವೆಲಿನ್ ಹೆಸರೂ ಸೇರಿಸಿದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸುಖೇಶ್ ಮಾಡಿದ ತಪ್ಪಿಗೆ ಇದೀಗ ಈ ನಟಿ ಕೋರ್ಟ್ ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜಾಕ್ವೆಲಿನ್-ಸುಕೇಶ್‌ ಕುರಿತು ಈ ವಿಚಾರ ಕೇಳಿದ್ರೆ ನಿಜಕ್ಕೂ ಶಾಕ್‌ ಆಗುತ್ತೀರಾ!

    ಜಾಕ್ವೆಲಿನ್-ಸುಕೇಶ್‌ ಕುರಿತು ಈ ವಿಚಾರ ಕೇಳಿದ್ರೆ ನಿಜಕ್ಕೂ ಶಾಕ್‌ ಆಗುತ್ತೀರಾ!

    ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಹಾಲಿವುಡ್ ರಂಗಕ್ಕೂ ಹೆಜ್ಜೆ ಇಡ್ತಿದ್ದಾರೆ. ಸದ್ಯ ಸುಖೇಶ್ ವಿಚಾರವಾಗಿ ಜಾಕ್ವೆಲಿನ್ ಕೂಡ ಸುದ್ದಿಯಲ್ಲಿದ್ದಾರೆ. 200 ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಜತೆ ಜಾಕ್ವೆಲಿನ್ ಪ್ರೀತಿ ಹೇಗೆ ಶುರುವಾಯಿತು ಎಂಬುದರ ಕುರಿತು ಶಾಕಿಂಗ್ ವಿಚಾರವೊಂದು ಹೊರ ಬಿದ್ದಿದೆ.

    ಸುಖೇಶ್ ಚಂದ್ರಶೇಖರ್ ಸದ್ಯ 200 ಕೋಟಿ ಹಗರಣ ವಿಚಾರವಾಗಿ ಜೈಲು ಸೇರಿದ್ದಾರೆ. ವಂಚಕ ಸುಖೇಶ್‌ಗೂ ಬಾಲಿವುಡ್ ಚೆಲುವೆ ಜಾಕ್ವೆಲಿನ್‌ಗೂ ಎಲ್ಲಿಂದ ನಂಟು, ಇವರಿಬ್ಬರಿಗೂ ಪರಿಚಯವಾಗಿದ್ದು ಹೇಗೆ ಎಂಬುದರ ಶಾಕಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. 20 ಪ್ರತ್ಯೇಕ ಕ್ರಿಮಿನಲ್ ಕೇಸ್ ಎದುರಿಸುತ್ತಿರು ಸುಖೆಶ್ 2017ರಿಂದ ತಿಹಾರ್ ಜೈಲಿನಲ್ಲಿದ್ದಾರೆ. ಜೈಲಿನಲ್ಲಿದ್ದುಕೊಂಡೆ ಜಾಕ್ವೆಲಿನ್‌ಗೆ ಕರೆ ಮಾಡಿದ್ದಾರೆ. ಇದನ್ನೂ ಓದಿ: ಸುದೀಪ್ ಜ್ವರದಿಂದ ಬಳಲುತ್ತಿದ್ದಾರೆ, ಕೋವಿಡ್ ಪಾಸಿಟಿವ್ ಆಗಿಲ್ಲ: ಜಾಕ್ ಮಂಜು

    ಮೊದಲು ಸುಖೇಶ್ ಕರೆ ಬಂದಾಗ ಯಾವುದೇ ಪ್ರತಿಕ್ರಿಯೇ ನೀಡದ ಜಾಕ್ವೆಲಿನ್‌ಗೆ, ನಟಿಯ ಕೇಶ ವಿನ್ಯಾಸಕಿಯ ಮೂಲಕ ಸಂಪರ್ಕ ಮಾಡಿದ್ದಾರೆ. ಸನ್ ಟಿವಿ ನೆಟ್‌ವರ್ಕ್, ಆಭರಣ ಮಳಿಗೆಯ ಮಾಲಿಕ ಜತೆಗೆ ಗೃಹ ಸಚಿವ ಅಮಿತ್ ಶಾಗೆ ಆಪ್ತ ಎಂದು ಜಾಕ್ವೆಲಿನ್ ಬಳಿ ಸುಖೇಶ್ ಪರಿಚಯ ಮಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರು ಮಾತನಾಡಲು ಆರಂಭಿಸಿದ್ದರು ಎಂಬ ಶಾಕಿಂಗ್ ವಿಚಾರ ಹೊರ ಬಿದ್ದಿದೆ.

    ಆದರೆ ಈ ವೇಳೆ ಸುಖೇಶ್ ಜೈಲಿನಲ್ಲಿರುವ ವಿಚಾರ, ಅಲ್ಲಿಂದಲೇ ತನಗೆ ಕರೆ ಮಾಡುತ್ತಿದ್ದರು ಎಂಬುದು ನಟಿಗೆ ತಿಳಿದಿರಲಿಲ್ಲ ಎಂಬ ವಿಚಾರ ರಿವೀಲ್ ಆಗಿದೆ. ನಂತರ ಪೆರೋಲ್ ವೇಳೆ ಹೊರಬಂದಾಗ ನಟಿಯನ್ನ ಭೇಟಿಯಾಗಿ, ದುಬಾರಿ ಗಿಫ್ಟ್ ಅನ್ನು ಕೊಟ್ಟಿದ್ದರು. ಈ ಮೂಲಕ ಸುಖೇಶ್, ಜಾಕ್ವೆಲಿನ್ ಪ್ರೇಮ ಕಹಾನಿ ರಿವೀಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಇಡಿ ವಿಚಾರಣೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್: ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಗೈರಾದ ನಟಿ

    ಇಡಿ ವಿಚಾರಣೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್: ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಗೈರಾದ ನಟಿ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮತ್ತೆ ಇಡಿ ವಿಚಾರಣೆಗೆ ಕರೆದಿದೆಯಂತೆ. ಹಾಗಾಗಿ ಇತ್ತೀಚೆಗೆ ಅವರು ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿಲ್ಲ ಎನ್ನುವ ಸುದ್ದಿ ಹರಡಿದೆ. ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದ ಸಿನಿಮಾದ ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಜಾಕ್ವೆಲಿನ್, ನಂತರ ಇಡಿ ವಿಚಾರಣೆಗೆ ಅವರು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.

    200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಆಪ್ತರಾಗಿದ್ದರು ಅನ್ನುವ ಕಾರಣಕ್ಕಾಗಿ ಅವರಿಗೂ ನೋಟಿಸ್ ನೀಡಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಜಾಕ್ವೆಲಿನ್ ಗೆ ಸಾಕಷ್ಟು ಗಿಫ್ಟ್ ಗಳನ್ನು ಸುಕೇಶ್ ನೀಡಿದ್ದನ್ನು ಒಪ್ಪಿಕೊಂಡಿದ್ದರು. ಅಲ್ಲದೇ, ಆ ಎಲ್ಲ ಉಡುಗೊರೆಯನ್ನೂ ವಶಕ ಪಡೆಯಲಾಗಿದೆ. ಈಗಾಗಲೇ ಅನೇಕ ಬಾರಿ ಇಡಿ ವಿಚಾರಣೆ ಎದುರಿಸಿರುವ ಜಾಕ್ವೆಲಿನ್, ಎಲ್ಲವನ್ನೂ ಮರೆತು ವಿಕ್ರಾಂತ್ ರೋಣ ಪ್ರಚಾರದಲ್ಲಿ ತೊಡಗಿದ್ದರು. ಈ ಮಧ್ಯೆ ಮೊನ್ನೆಯೂ ಅವರು ವಿಚಾರಣೆಗೆ ಹೋಗಿ ಬಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಅಸ್ಸಾಂ ಪ್ರವಾಹ ಪೀಡಿತರ ಸಂಕಷ್ಟಕ್ಕೆ ಮಿಡಿದ ಆಮೀರ್ ಖಾನ್

    ಇಡಿ ವಿಚಾರಣೆಗಾಗಿಯೇ ಅವರು ಪ್ರಚಾರದಿಂದ ದೂರ ಉಳಿದಿದ್ದಾರೆ ಎನ್ನುವ ಸುದ್ದಿ ಒಂದು ಕಡೆ ಕೇಳಿ ಬರುತ್ತಿದ್ದರೆ, ಮತ್ತೊಂದು ಕಡೆ ಅವರು ಬೇರೆ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರಿಂದ ಚೆನ್ನೈ, ಹೈದರಾಬಾದ್ ಪತ್ರಿಕಾಗೋಷ್ಠಿಗಳಲ್ಲಿ ಭಾಗಿ ಆಗಲು ಆಗಿಲ್ಲ ಎಂದು ವಿಕ್ರಾಂತ್ ರೋಣ ಚಿತ್ರತಂಡ ಹೇಳಿಕೊಂಡಿದೆ. ಇಡಿ ಕಾರಣದಿಂದಾಗಿ ಅವರು ಪ್ರಚಾರದಿಂದ ದೂರ ಉಳಿಯುತ್ತಿಲ್ಲ ಎಂದು ಸ್ಪಷ್ಟನೆ ಕೂಡ ಕೊಟ್ಟಿದೆ.

    Live Tv