Tag: Jacqueline Fernandez

  • ಬಿಜೆಪಿ ಮುಖಂಡನ ಮಗನ ಮದುವೆಯಲ್ಲಿ ಜಾಕ್ವೆಲಿನ್‌ ಡ್ಯಾನ್ಸ್- ನೆಟ್ಟಿಗರಿಂದ ಟೀಕೆ

    ಬಿಜೆಪಿ ಮುಖಂಡನ ಮಗನ ಮದುವೆಯಲ್ಲಿ ಜಾಕ್ವೆಲಿನ್‌ ಡ್ಯಾನ್ಸ್- ನೆಟ್ಟಿಗರಿಂದ ಟೀಕೆ

    ಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ನರೇಂದ್ರ ಸಿಂಗ್ ತೋಮರ್ (Narendra Singh Tomar) ಪುತ್ರ ಪ್ರಬಲ್ ಪ್ರತಾಪ್ ತೋಮರ್ ಮದುವೆ ಅದ್ಧೂರಿಯಾಗಿ ಜರುಗಿದೆ. ಈ ಮದುವೆಯಲ್ಲಿ ‘ವಿಕ್ರಾಂತ್ ರೋಣ’ ನಟಿ ಜಾಕ್ವೆಲಿನ್ (Jacqueline Fernandez) ಡ್ಯಾನ್ಸ್ ಮಾಡಿರೋದು ಸಖತ್‌ ವೈರಲ್‌ ಆಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.‌ ಇದನ್ನೂ ಓದಿ:ಪ್ರತಿ ಜನ್ಮಕೂ ನೀನೇ ಬೇಕು – ಚಿರು ಜೊತೆಗಿನ ಸ್ಪೆಷಲ್‌ ಫೋಟೋ ಹಂಚಿಕೊಂಡ ಮೇಘನಾ

    ಜೈಪುರನ ಜೈಮಹಲ್ ಅರಮನೆಯಲ್ಲಿ ಅರುಂಧತಿ ಸಿಂಗ್ ರಾಜಾವತ್ ಜೊತೆ ಪ್ರಬಲ್ (Prabal Pratap Tomar) ಮದುವೆ ಗ್ರ್ಯಾಂಡ್‌ ಆಗಿ ನಡೆದಿದೆ. ಹಾಗಾಗಿ ಬಿಜೆಪಿ ಮುಖಂಡ ನರೇಂದ್ರ ತೋಮರ್ ಮಗನ ಮದುವೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಸೊಂಟ ಬಳುಕಿಸಿರೋದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ದೇಶವು ದಾಳಿಯ ಬಗ್ಗೆ ಶೋಕಿಸುತ್ತಿರುವಾಗ ನರೇಂದ್ರ ತೋಮರ್ ಪುತ್ರನ ಮದುವೆಯಲ್ಲಿ ಜಾಕ್ವೆಲಿನ್ ಅವರನ್ನು ಕರೆಸಿ ಡ್ಯಾನ್ಸ್ ಮಾಡಿಸೋದು ಬೇಕಿತ್ತಾ? ಎಂದು ನೆಟ್ಟಿಗರು ಕೆಂಡಕಾರಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಟೀಕಿಸಿದ್ದಾರೆ. ಇದನ್ನೂ ಓದಿ:ಯಶ್ ತಾಯಿ ನಿರ್ಮಾಣದ ಸಿನಿಮಾದಲ್ಲಿ ಪೃಥ್ವಿ ಅಂಬರ್- ‌’ಕೊತ್ತಲವಾಡಿ’ ಚಿತ್ರದ ಪೋಸ್ಟರ್‌ ಔಟ್

    ಈ ಮದುವೆಯಲ್ಲಿ ರಾಜಕೀಯ ಗಣ್ಯರಾದ ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗ್ಡೆ, ಸಿಕ್ಕಿಂ ರಾಜ್ಯಪಾಲ ಓಂ ಮಾಥೂರ್, ರಾಜಸ್ಥಾನ ಸಿಎಂ ಭಜನ್‌ಲಾಲ್ ಶರ್ಮಾ, ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

  • ಎಲಾನ್ ಮಸ್ಕ್ ತಾಯಿಯೊಂದಿಗೆ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಜಾಕ್ವೆಲಿನ್ ಭೇಟಿ

    ಎಲಾನ್ ಮಸ್ಕ್ ತಾಯಿಯೊಂದಿಗೆ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಜಾಕ್ವೆಲಿನ್ ಭೇಟಿ

    ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ (Elon Musk) ತಾಯಿ ಮಾಯೆ ಮಸ್ಕ್ (Maye Musk) ಜೊತೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಏ.20ರಂದು ಮಾಯೆ ಮಾಸ್ಕ್ ಅವರೊಂದಿಗೆ ನಟಿ ಜಾಕ್ವೆಲಿನ್ (Jacqueline Fernandez) ಮುಂಬೈನ ಸಿದ್ಧಿವಿನಾಯಕ ದೇವಾಲಯಕ್ಕೆ (Siddhi Vinayak Temple) ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ನಟಿ ಗೋಲ್ಡನ್ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ರೆ, ಹಳದಿ ಬಣ್ಣದ ಉಡುಗೆಯನ್ನು ಎಲಾನ್ ಮಸ್ಕ್ ತಾಯಿ ಧರಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಭೇಟಿಯಾದ ರಾಕಿಂಗ್ ಸ್ಟಾರ್ ಯಶ್

    ತಮ್ಮ ಬರವಣಿಗೆಯ ʻಎ ವುಮೆನ್‌ ಮೇಕ್ಸ್‌ ಎ ಪ್ಲ್ಯಾನ್‌ʼ ಎಂಬ ಪುಸ್ತಕವನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಿದ್ದಾರೆ. ಹೀಗಾಗಿ ಪುಸ್ತಕ ಲಾಂಚ್‌ ಮಾಡುವ ಮುನ್ನ ಮಾಯೆ ಮಸ್ಕ್‌ ಅವರು ಸಿದ್ಧಿ ವಿನಾಯಕನ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಜಾಕ್ವೆಲಿನ್ ಕೂಡ ಸಾಥ್‌ ನೀಡಿದ್ದಾರೆ.

    ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾಕ್ವೆಲಿನ್ ಅವರ ತಾಯಿ ಕಿಮ್ ಫರ್ನಾಂಡಿಸ್ ಏ.6ರಂದು ನಿಧನರಾದರು. ಅಮ್ಮನ ಅಗಲಿಕೆಯ ನೋವಿನ ನಡುವೆ ಮತ್ತೆ ಸಿನಿಮಾ ಕೆಲಸದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

  • ಪಾರ್ಶ್ವವಾಯುವಿಗೆ ತುತ್ತಾಗಿ ‘ವಿಕ್ರಾಂತ್ ರೋಣ’ ನಟಿ ಜಾಕ್ವೆಲಿನ್ ತಾಯಿ ನಿಧನ

    ಪಾರ್ಶ್ವವಾಯುವಿಗೆ ತುತ್ತಾಗಿ ‘ವಿಕ್ರಾಂತ್ ರೋಣ’ ನಟಿ ಜಾಕ್ವೆಲಿನ್ ತಾಯಿ ನಿಧನ

    ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ತಾಯಿ ಕಿಮ್ (Kim) ಇಂದು (ಏ.6) ಪಾರ್ಶ್ವವಾಯುವಿಗೆ ತುತ್ತಾಗಿ ನಿಧನರಾಗಿದ್ದಾರೆ. ನಟಿಯ ತಾಯಿಯ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಸಂತಾಪ ಸೂಚಿಸಿದೆ. ಇದನ್ನೂ ಓದಿ:ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ ‘ಕಿರಾತಕ’ ನಟಿಗೆ ಫ್ಯಾನ್ಸ್‌ ತರಾಟೆ

    ಹಲವು ದಿನಗಳಿಂದ ಜಾಕ್ವೆಲಿನ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಮಾ.24ರಂದೇ ಕಿಮ್ ಫರ್ನಾಂಡಿಸ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ಐಸಿಯುಗೆ ದಾಖಲಿಸಲಾಗಿತ್ತು. ಆ ವೇಳೆ, ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ ನಟಿಯ ಆಪ್ತರು ಆಸ್ಪತ್ರೆಗೆ ಆಗಮಿಸಿ ಕಿಮ್ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಇದನ್ನೂ ಓದಿ:ರಾಮ್ ಚರಣ್ ‘ಪೆದ್ದಿ’ ಚಿತ್ರದ ಗ್ಲಿಂಪ್ಸ್ ಔಟ್‌- ನಟನ ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಫಿದಾ

    ಆದರೆ ಇಂದು ಪಾರ್ಶ್ವವಾಯುವಿಗೆ ತುತ್ತಾಗಿ ಜಾಕ್ವೆಲಿನ್ ತಾಯಿ ಕಿಮ್ ವಿಧಿವಶರಾಗಿದ್ದಾರೆ.

  • ಬಾಲಿವುಡ್ ನಟಿ ಜಾಕ್ವೆಲಿನ್ ತಾಯಿ ಆಸ್ಪತ್ರೆಗೆ ದಾಖಲು

    ಬಾಲಿವುಡ್ ನಟಿ ಜಾಕ್ವೆಲಿನ್ ತಾಯಿ ಆಸ್ಪತ್ರೆಗೆ ದಾಖಲು

    ಬಾಲಿವುಡ್ ಬೆಡಗಿ ಜಾಕ್ವೆಲಿನ್ (Jacqueline Fernandez) ತಾಯಿ ಕಿಮ್ ಫರ್ನಾಂಡಿಸ್‌ (Kim Fernandez) ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:‌’ಸಿಕಂದರ್‌’ ಚಿತ್ರದ ಟ್ರೈಲರ್‌ನಲ್ಲಿ ಮಿಂಚಿದ ಕನ್ನಡಿಗ ಕಿಶೋರ್

     

    View this post on Instagram

     

    A post shared by Viral Bhayani (@viralbhayani)

    ‘ವಿಕ್ರಾಂತ್ ರೋಣ’ ನಟಿ ಜಾಕ್ವೆಲಿನ್ ತಾಯಿ ಕಿಮ್‌ರನ್ನು ಐಸಿಯುಗೆ ದಾಖಲಿಸಲಾಗಿದೆ. ಆದರೆ ಅವರ ವೈದ್ಯಕೀಯ ಸ್ಥಿತಿಯ ಬಗ್ಗೆ ಯಾವುದೇ ವಿಚಾರ ಬಹಿರಂಗ ಆಗಿಲ್ಲ. ಇನ್ನೂ ಈ ಸುದ್ದಿ ತಿಳಿದ ಕೂಡಲೇ ಜಾಕ್ವೆಲಿನ್ ಕೂಡ ತಾಯಿಯನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅವರ ತಾಯಿಗೆ ಏನಾಗಿದೆ ಎಂಬುದರ ಬಗ್ಗೆ ಜಾಕ್ವೆಲಿನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

     

    View this post on Instagram

     

    A post shared by Viral Bhayani (@viralbhayani)

    ಇನ್ನೂ ಜಾಕ್ವೆಲಿನ್ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿರುವ ವಿಚಾರವನ್ನು ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿಯ ತಾಯಿಯನ್ನು ಐಸಿಯುನಲ್ಲಿ ದಾಖಲಿಸಿರೋದಾಗಿ ತಿಳಿಸಿದ್ದಾರೆ.

  • ಹಾಟ್ ಅವತಾರ ತಾಳಿದ ಜಾಕ್ವೆಲಿನ್- ನಟಿಯ ಲುಕ್‌ಗೆ ಪಡ್ಡೆಹುಡುಗರು ಫಿದಾ

    ಹಾಟ್ ಅವತಾರ ತಾಳಿದ ಜಾಕ್ವೆಲಿನ್- ನಟಿಯ ಲುಕ್‌ಗೆ ಪಡ್ಡೆಹುಡುಗರು ಫಿದಾ

    ಬಾಲಿವುಡ್ (Bollywood) ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಹಾಟ್ ಫೋಟೋಶೂಟ್‌ವೊಂದನ್ನು ಹಂಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮಾದಕವಾಗಿ ಕಾಣಿಸಿಕೊಂಡಿರುವ ನಟಿಯ ಬ್ಯೂಟಿಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

    ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿಯೋ ಜಾಕ್ವೆಲಿನ್ ಇದೀಗ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್

    ಕಪ್ಪು ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ಕ್ಯಾಮೆರಾ ಮುಂದೆ ಜಾಕ್ವೆಲಿನ್ ಮಿಂಚಿದ್ದಾರೆ. ನಟಿಯ ಹಾಟ್ ಅವತಾರಕ್ಕೆ ಪಡ್ಡೆಹುಡುಗರು ಬೋಲ್ಡ್‌ ಆಗಿದ್ದಾರೆ.

    ಬಾಲಿವುಡ್‌ನ ಬಹುನಿರೀಕ್ಷಿತ ‘ಹೌಸ್‌ಫುಲ್ 5’, ‘ವೆಲ್‌ಕಮ್ ಟು ದಿ ಜಂಗಲ್’ ಸಿನಿಮಾಗಳಲ್ಲಿ ಜಾಕ್ವೆಲಿನ್ ನಟಿಸಿದ್ದಾರೆ. ಇದರ ರಿಲೀಸ್‌ಗಾಗಿ ಅವರು ಎದುರು ನೋಡ್ತಿದ್ದಾರೆ.

    ಸದ್ಯ ಜಾಕ್ವೆಲಿನ್ ಕೆರಿಯರ್‌ನಲ್ಲಿ ಯಾವ ಸಿನಿಮಾ ಕೂಡ ಹಿಟ್ ಆಗ್ತಿಲ್ಲ. ಸಿನಿಮಾ ಸಕ್ಸಸ್ ಆಗದೇ ಇದ್ದರೂ ಅವರಿಗೆ ಅವಕಾಶಗಳ ಕೊರತೆಯಿಲ್ಲ. ಆದರೆ ಅವರು ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ.

    ಇನ್ನೂ ಕನ್ನಡದ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ರಕ್ಕಮ್ಮ ಹಾಡಿಗೆ ಸುದೀಪ್ ಜೊತೆ ಜಾಕ್ವೆಲಿನ್ ಸೊಂಟ ಬಳುಕಿಸಿದ್ದರು. ಈ ಸಾಂಗ್ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದರು.

  • ಹಾಲಿವುಡ್‌ನತ್ತ ರಕ್ಕಮ್ಮ- ಆ್ಯಕ್ಷನ್ ಅವತಾರ ತಾಳಿದ ಜಾಕ್ವೆಲಿನ್

    ಹಾಲಿವುಡ್‌ನತ್ತ ರಕ್ಕಮ್ಮ- ಆ್ಯಕ್ಷನ್ ಅವತಾರ ತಾಳಿದ ಜಾಕ್ವೆಲಿನ್

    ನ್ನಡದ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾದಲ್ಲಿ ರಾರಾ ರಕ್ಕಮ್ಮ ಎಂದು ಪಡ್ಡೆಹುಡುಗುರ ನಿದ್ದೆಗೆಡಿಸಿದ ಬಾಲಿವುಡ್ ನಟಿ ಜಾಕ್ವೆಲಿನ್ (Jacqueline Fernandez) ಇದೀಗ ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ‘ಕಿಲ್ ದೆಮ್ ಆಲ್ 2’ ಎನ್ನುತ್ತಾ ನಟಿ ಆ್ಯಕ್ಷನ್ ಅವತಾರ ತಾಳಿದ್ದಾರೆ. ಇದನ್ನೂ ಓದಿ:ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ!

    ಜಾಕ್ವೆಲಿನ್ ನಟಿಸಿದ ಮೊದಲ ಹಾಲಿವುಡ್ ಸಿನಿಮಾ ‘ಕಿಲ್ ದೆಮ್ ಆಲ್ 2’ ಚಿತ್ರದ ಟ್ರೈಲರ್‌ಗೆ ರಿಲೀಸ್ ಆಗಿ ಸಿನಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹೀರೋ ಜೀನ್ ಕ್ಲೌಡ್ ವ್ಯಾನ್ ಡೆಮೆಗೆ (Jean Claude Van Damme) ನಾಯಕಿಯಾಗಿ ಜಾಕ್ವೆಲಿನ್ ಕಾಣಿಸಿಕೊಂಡಿದ್ದಾರೆ. ಗನ್ ಹಿಡಿದು ನಟಿ ಅಖಾಡಕ್ಕೆ ಕೂಡ ಇಳಿದಿದ್ದಾರೆ. ಈ ಸಿನಿಮಾದ ಮೊದಲ ಸರಣಿ 2017ರಲ್ಲಿ ಸೂಪರ್ ಹಿಟ್ ಆಗಿತ್ತು.

     

    View this post on Instagram

     

    A post shared by Jean-Claude Van Damme (@jcvd)

    ನಟಿಯ ಮೊದಲ ಹಾಲಿವುಡ್ ಚಿತ್ರವಾಗಿದ್ರೂ ಆತ್ಮವಿಶ್ವಾಸದಿಂದ ನಟಿಸಿದ್ದಾರೆ. ಬಿಟ್ಟಿರುವ ಟ್ರೈಲರ್‌ ನೋಡುಗರಿಗೆ ಇಂಟರೆಸ್ಟಿಂಗ್ ಎನಿಸಿದೆ. ಎಂದೂ ನಟಿಸಿರದ ವಿಭಿನ್ನ ಗೆಟಪ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

    ಅಂದಹಾಗೆ, ಶ್ರೀಲಂಕಾ ಸುಂದರಿಗೆ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುತ್ತಿರುವ ವೇಳೆಯಲ್ಲಿ ಹಾಲಿವುಡ್‌ಗೆ ನಟಿ ಹಾರಿದ್ದಾರೆ. ಮೊದಲ ಸಿನಿಮಾದಲ್ಲೇ ಯಶಸ್ಸು ಸಿಗುತ್ತಾ? ಕಾಯಬೇಕಿದೆ.

  • ‘ಹೌಸ್‌ಫುಲ್-5’ ಸಿನಿಮಾಗೆ ಐದು ಜನ ನಾಯಕಿಯರು

    ‘ಹೌಸ್‌ಫುಲ್-5’ ಸಿನಿಮಾಗೆ ಐದು ಜನ ನಾಯಕಿಯರು

    ಬಾಲಿವುಡ್‌ನಲ್ಲಿ ಹೌಸ್‌ಫುಲ್ ಸಿರೀಸ್ ಕಾಮಿಡಿ ಹಾಗೂ ಫ್ಯಾಮಿಲಿ ಎಂಟರ್‌ಟೈನ್ ಮೂಲಕವೇ ಧೂಳೆಬ್ಬಿಸಿವೆ. ಈಗಾಗಲೇ ನಾಲ್ಕು ಪಾರ್ಟ್ನಲ್ಲಿ ಮಾಡಿದ ಮೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಾಲಿವುಡ್ ಆ್ಯಕ್ಷನ್‌ಕಿಂಗ್ ಅಕ್ಷಯ್‌ಕುಮಾರ್ ಹಾಗೂ ನಿರ್ಮಾಪಕ ಸಾಜಿದ್ ನಡಿಯಾವಾಲಾ ಲೆಗೆಸ್ಸಿ ಮತ್ತೆ ಕಂಟಿನ್ಯೂ ಆಗಿದೆ. ಇದೇ ಸೆಪ್ಟಂಬರ್ 15ರಿಂದ ಸಿನಿಮಾ ಶೂಟಿಂಗ್‌ಗೂ ಪ್ಲಾನ್ ಮಾಡಲಾಗಿದೆಯಂತೆ. ಹೌಸ್‌ಫುಲ್-5 (Housefull 5) ಚಿತ್ರದ ಮೊದಲ ಹಂತದ ಶೂಟಿಂಗ್‌ನ್ನ ಲಂಡನ್‌ನಲ್ಲಿ ಮಾಡುವ ಯೋಜನೆಯನ್ನ ಹಮ್ಮಿಕೊಂಡಿದೆಯಂತೆ ಚಿತ್ರತಂಡ.

    ಹೌಸ್‌ಫುಲ್ ಪಾರ್ಟ್-5 ಸಿನಿಮಾ ಹೆಸರಿಗೆ ತಕ್ಕಂತೆ ಕಲಾವಿದರಿಂದ ತುಂಬಿ ತುಳುಕುತ್ತಿದೆ. ಅಕ್ಷಯ್‌ಕುಮಾರ್ ಜೊತೆ ರಿತೇಶ್ ದೇಶ್‌ಮುಖ್, ಸಂಜಯ್ ದತ್, ಜಾಕಿ ಶ್ರಾಫ್, ಫರ್ದೀನ್ ಖಾನ್, ನಾನಾ ಪಾಟೇಕರ್ ಸೇರಿದಂತೆ ಅನೇಕರು ಪಾತ್ರವರ್ಗದಲ್ಲಿದ್ದಾರೆ. ಇದ್ರ ಜೊತೆಗೆ ಫೀಮೇಲ್ ಲೀಡ್‌ನಲ್ಲಿ ಐದು ಜನ ನಾಯಕಿಯರು ಈ ಸಿನಿಮಾದ ಸೆಂಟ್ರಾಫ್ ಅಟ್ರಾö್ಯಕ್ಷನ್. ಜಾಕ್ವೇಲಿನ್ ಫರ್ನಾಂಡಿಸ್, ನರ್ಗಿಸ್ ಫಕ್ರಿ, ಸೋನಮ್ ಬಾಜ್ವಾ, ಚಿತ್ರಾಂಗದಾ ಸಿಂಗ್ ಹಾಗೂ ಸೌಂದರ್ಯ ಶರ್ಮಾ ಫೀಮೇಲ್ ಲೀಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಅಂದಹಾಗೆ ಕಲಾವಿದರಿಂದ ತುಂಬಿ ತುಳುಕುತ್ತಿರುವ ಹೌಸ್‌ಫುಲ್-5 ಸಿನಿಮಾಗೆ ತರುಣ್ ಮಾನ್ಸುಖನಿ ನಿರ್ದೇಶನ ಮಾಡ್ತಿದ್ದಾರೆ. ಈಗಾಗಲೇ ನಾಲ್ಕು ಸಿರೀಸ್ ಮೂಲಕ ನಗಿಸಿ ನಗಿಸಿ ಹೊಟ್ಟೆ ಹುಣ್ಣು ಮಾಡಿಯಾಗಿದೆ. ಇನ್ನು ಹೌಸ್‌ಫುಲ್-5 ರಸದೌತಣ ಹೇಗಿರುತ್ತೆ ಅನ್ನೋ ಕುತೂಹಲ ಇನ್ನು ಜಾಸ್ತಿ ಆಗ್ತಿದೆ. ಸದ್ಯ ಸಿನಿಮಾ ಹಾಗೂ ಪಾತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ.

    ಸುಮಾರು 45 ದಿನಗಳ ಶೆಡ್ಯೂಲ್ ಹಾಕಿಕೊಂಡಿರುವ ಚಿತ್ರತಂಡ, ಮೊದಲು ಲಂಡನ್‌ನ ಸುಂದರ ತಾಣಗಳಲ್ಲಿ ಸಿನಿಮಾದ ಶೂಟಿಂಗ್ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಕಾಮಿಡಿ ಜೊತೆಗೆ ಬ್ಯೂಟಿಫುಲ್ ಹಾಡುಗಳು ಸಿನಿಮಾದಲ್ಲಿ ಇರಲಿದ್ದು, ಫ್ಯಾಮಿಲಿ ಆಡಿಯೆನ್ಸ್ ಅಟ್ರ್ಯಾಕ್ಟ್ ಮಾಡುವ ನಿಟ್ಟಿನಲ್ಲಿ ಕಥೆಯನ್ನ ಈ ಬಾರಿ ವಿಭಿನ್ನವಾಗಿ ನರೇಟ್ ಮಾಡಿಕೊಂಡಿದ್ದಾರೆ ನಿರ್ದೇಶಕರು.

    ಒಟ್ಟಿನಲ್ಲಿ ಹೌಸ್‌ಫುಲ್ ನಾಲ್ಕೂ ಸಿರೀಸ್ ಮನಸೂರೆ ಮಾಡಿದಂತೆ, ಹೌಸ್‌ಫುಲ್-5 ಸಿನಿಮಾ ಕೂಡಾ ಪ್ರೇಕ್ಷಕರಿಗೆ ಎಂಟರ್‌ಟೈನ್ ನೀಡಲು ಭರ್ಜರಿ ತಯಾರಿ ಮಾಡಿಕೊಂಡಿದೆಯಂತೆ. ಇನ್ನು ಈ ತಂಡಕ್ಕೆ ಯಾರೆಲ್ಲ ಸೇರಿಕೊಳ್ಳಲಿದ್ದಾರೆ. ಸಿನಿಮಾದ ಕಂಟೆಂಟ್ ಹೇಗಿರಲಿದೆ ಅನ್ನೋದನ್ನ ತಿಳ್ಕೋಬೇಕಂದ್ರೆ ಕೆಲ ದಿನಗಳವರೆಗೆ ಕಾಯಲೇಬೇಕು.

  • ಜಾಕ್ವೆಲಿನ್‌ ಮನೆಗೆ ಬೆಂಕಿ- ಆತಂಕದಲ್ಲಿ ಫ್ಯಾನ್ಸ್

    ಜಾಕ್ವೆಲಿನ್‌ ಮನೆಗೆ ಬೆಂಕಿ- ಆತಂಕದಲ್ಲಿ ಫ್ಯಾನ್ಸ್

    ಸುಕೇಶ್ ಚಂದ್ರಶೇಖರ್ ಕೇಸ್ ವಿಚಾರಕ್ಕೆ ಕೋರ್ಟ್‌ಗೆ ನಟಿ ಜಾಕ್ವೆಲಿನ್  (Jacqueline Fernandez) ಅಲೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಇದು ಜಾಕ್ವೆಲಿನ್ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ‘ವಿಕ್ರಾಂತ್ ರೋಣ’ ((Vikrant Rona) ಬೆಡಗಿ ಜಾಕ್ವೆಲಿನ್ ಮನೆಗೆ ಬೆಂಕಿ ಬಿದ್ದಿದೆ. ಸದ್ಯ ಬೆಂಕಿ ಅವಘಡ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಮುಂಬೈನಲ್ಲಿರುವ ಜಾಕ್ವೆಲಿನ್ ಮನೆಗೆ ಬೆಂಕಿ ಬಿದ್ದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಮೂಲಗಳ ಪ್ರಕಾರ, ಜಾಕ್ವೆಲಿನ್ ಉಳಿದುಕೊಂಡಿರುವ ಅಪಾರ್ಟ್‌ಮೆಂಟ್‌ನ 14ನೇ ಮಹಡಿಗೆ ಬೆಂಕಿ ಬಿದ್ದಿದೆ. ಜಾಕ್ವೆಲಿನ್ ಮನೆ 15ನೇ ಮಹಡಿಯಲ್ಲಿದೆ. ಈ ವೇಳೆ, ನಟಿ ಶೂಟಿಂಗ್‌ವೊಂದಕ್ಕಾಗಿ ದುಬೈಗೆ ಹೋಗಿದ್ದಾರೆ ಎನ್ನಲಾಗಿದೆ. ಸದ್ಯ ನಟಿ ಸೇಫ್ ಆಗಿದ್ದಾರೆ ಎಂದು ತಿಳಿದು ಫ್ಯಾನ್ಸ್ ನಿರಾಳವಾಗಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಅಷ್ಟಕ್ಕೂ ಈ ಬೆಂಕಿ ಅವಘಡ ನಡೆದಿದ್ದು ಹೇಗೆ? ಏಕಾಎಕಿ ಅಲ್ಲಿ ಆಗಿದಾದ್ರೂ ಎನು? ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಸದ್ಯ ರಕ್ಕಮ್ಮ ಸೇಫ್ ಆಗಿರುವ ವಿಷ್ಯ ತಿಳಿದು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಅಭಿಮಾನಿಯ ಅಸಭ್ಯ ವರ್ತನೆಗೆ ‘ಮಗಧೀರ’ ನಟಿ ಶಾಕ್

    ಕೇಸ್, ಕಾಂಟ್ರವರ್ಸಿಗಳಿಂದ ಸುಸ್ತಾಗಿರುವ ಜಾಕ್ವೆಲಿನ್ ಮತ್ತೆ ಸಿನಿಮಾದಲ್ಲಿ ನಟಿಸಲು ಆ್ಯಕ್ಟಿವ್ ಆಗಿದ್ದಾರೆ. ಹೊಸ ಬಗೆಯ ಕಥೆಗಳನ್ನು ಕೇಳ್ತಿದ್ದಾರೆ.

  • ಜಾಕ್ವೆಲಿನ್ ಜೊತೆಗಿನ ಖಾಸಗಿ ವಿಡಿಯೋ ಲೀಕ್ ಮಾಡ್ತೀನಿ: ಸುಕೇಶ್ ಬೆದರಿಕೆ

    ಜಾಕ್ವೆಲಿನ್ ಜೊತೆಗಿನ ಖಾಸಗಿ ವಿಡಿಯೋ ಲೀಕ್ ಮಾಡ್ತೀನಿ: ಸುಕೇಶ್ ಬೆದರಿಕೆ

    ಹುಕೋಟಿ ವಂಚನೆ ಆರೋಪಿ ಸುಕೇಶ್ ಚಂದ್ರಶೇಖರ್ ಕುರಿತಾಗಿ ತಿಂಗಳಿಗೆ ಎರಡ್ಮೂರಾದರೂ ಸುದ್ದಿ ಹೊರ ಬರುತ್ತಿವೆ. ಅವು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೂ, ಸುದ್ದಿ ಆಗುತ್ತಲೇ ಇವೆ. ಈ ಬಾರಿ ಸುಕೇಶ್ ಚಂದ್ರಶೇಖರ್, ಗೆಳತಿ ಜಾಕ್ವೆಲಿನ್ ಜೊತೆಗಿನ ಖಾಸಗಿ ವಿಡಿಯೋ (Video) ರಿಲೀಸ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳಿಂದ ಜಾಕ್ವೆಲಿನ್ ಮತ್ತು ಸುಕೇಶ್ ನಡುವೆ ಮಾತಿನ ಸಮರ ನಡೆಯುತ್ತಲೇ ಇದೆ.

    ಈ ಹಿಂದೆ ಸುಕೇಶ್ ಚಂದ್ರಶೇಖರ್ ತಮಗೆ ಜೈಲಿನಿಂದ ಪತ್ರ ಹಾಗೂ ವಾಟ್ಸಪ್ ಸಂದೇಶ ಕಳುಹಿಸುತ್ತಿದ್ದಾನೆ ಎಂದು ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆರೋಪ ಮಾಡಿದ್ದರು. ಈ ಕುರಿತಂತೆ ಕೋರ್ಟಿಗೆ ಮೊರೆ ಹೋಗುವುದಾಗಿ ತಿಳಿಸಿದ್ದರು. ಈ ಘಟನೆಯ ಬೆನ್ನಲ್ಲೇ ಸುಕೇಶ್ ಅಚ್ಚರಿಯ ಹೇಳಿಕೆ ನೀಡಿದ್ದರು. ತಾವು ಯಾವುದೇ ಕಾರಣಕ್ಕೂ ಪತ್ರವನ್ನು ಮತ್ತು ಸಂದೇಶವನ್ನು ಕಳುಹಿಸಿಲ್ಲ. ಯಾರೂ ಈ ಕೃತ್ಯ ಮಾಡುತ್ತಿದ್ದಾರೆ. ನಾನು ಈ ಕುರಿತಂತೆ ಯಾವುದೇ ತನಿಖೆಗೆ ಸಿದ್ಧ ಎಂದು ಹೇಳಿದ್ದರು.

    ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ (Jail) ತಮಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಜಾಕ್ವೆಲಿನ್ ಆರೋಪ ಮಾಡಿದ್ದರು. ಜೈಲಿನಿಂದ ಪ್ರೇಮ ಪತ್ರ ಕಳುಹಿಸುತ್ತಿದ್ದರು, ಇದೀಗ ಬೆದರಿಕೆಯ ಪತ್ರ ಬರೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಕುರಿತಂತೆ ಸುಕೇಶ್ ತನ್ನ ವಿರುದ್ಧ ಕ್ರಮಕ್ಕೆ ಮುಂದಾದರೆ, ನಿನ್ನ ಬಣ್ಣ ಬಯಲು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದರು.

    ಅಷ್ಟಕ್ಕೂ ಸುಕೇಶ್ ಇಷ್ಟೊಂದು ಗರಂ ಆಗೋಕೆ ಕಾರಣ, ಜಾಕ್ವೆಲಿನ್ ಕಾನೂನು ಕ್ರಮಕ್ಕೆ ಮುಂದಾಗಿರೋದು. ಮೊನ್ನೆಯಷ್ಟೇ ಬಹುಕೋಟಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಕೋರ್ಟ್ ಮೆಟ್ಟಿಲು ಏರಿದ್ದರು. ಸುಕೇಶ್ ಚಂದ್ರಶೇಖರ್ (Sukesh Chandrasekhar) ಮಾಡಿದ್ದಾರೆ ಎನ್ನಲಾದ ಬಹುಕೋಟಿ ವಂಚನೆ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಇದೀಗ ಸುಕೇಶ್ ವಿರುದ್ಧ ಮತ್ತೆ ಜಾಕ್ವೆಲಿನ್ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ.

    ಜಾಕ್ವೆಲಿನ್ ಗೆ ಸಂಬಂಧಿಸಿದಂತೆ ಸುಕೇಶ್ ತಿಂಗಳಿಗೊಂದಾದರೂ ಮಾಧ್ಯಮ ಹೇಳಿಕೆಯನ್ನು ನೀಡುತ್ತಿದ್ದಾನೆ. ಇನ್ನೂ ಜಾಕ್ವೆಲಿನ್ ಅನ್ನು ಪ್ರೀತಿಸುತ್ತಿರುವುದಾಗಿ ಸುಕೇಶ್ ಹೇಳಿಕೊಂಡಿದ್ದಾರೆ. ಹುಟ್ಟು ಹಬ್ಬಕ್ಕೆ, ಹಬ್ಬ ಹರಿದಿನಗಳಿಗೆ ಪ್ರೇಮ ಸಂದೇಶವನ್ನು ಕಳುಹಿಸುತ್ತಲೇ ಇದ್ದಾನೆ. ಇದನ್ನು ತಡೆಗಟ್ಟಬೇಕು ಎಂದು ನಟಿ ಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ.

     

    ಮಾಧ್ಯಮಗಳಿಗೆ ತಮ್ಮ ಬಗ್ಗೆ ಯಾವುದೇ ಹೇಳಿಕೆಯನ್ನು ಸುಕೇಶ್ ನೀಡದಂತೆ ಆದೇಶ ನೀಡಬೇಕು ಎಂದು ಜಾಕ್ವೆಲಿನ್ ಮನವಿ ಮಾಡಿದ್ದಾರೆ. ಈ ಮೂಲಕ ಸುಕೇಶ್ ಗೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಸಾಬೀತು ಪಡಿಸುವ ಯತ್ನಕ್ಕೆ ಜಾಕ್ವೆಲಿನ್ ಕೈ ಹಾಕಿದ್ದಾರೆ.

  • ಜೈಲಿನಿಂದಲೇ ಸುಕೇಶ್ ಬೆದರಿಕೆ: ಜಾಕ್ವೆಲಿನ್ ಆರೋಪ

    ಜೈಲಿನಿಂದಲೇ ಸುಕೇಶ್ ಬೆದರಿಕೆ: ಜಾಕ್ವೆಲಿನ್ ಆರೋಪ

    ವಂಚನೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸುಕೇಶ್ ಚಂದ್ರಶೇಖರ್, ಜೈಲಿನಿಂದಲೇ (Jail) ತಮಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಜಾಕ್ವೆಲಿನ್ ಆರೋಪ ಮಾಡಿದ್ದಾರೆ. ಜೈಲಿನಿಂದ ಜಾಕ್ವೆಲಿನ್ ಗೆ ಪ್ರೇಮ ಪತ್ರ ಕಳುಹಿಸುತ್ತಿದ್ದರು. ಇದೀಗ ಬೆದರಿಕೆಯ ಪತ್ರ ಬರೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ತನ್ನ ವಿರುದ್ಧ ಕ್ರಮಕ್ಕೆ ಮುಂದಾದರೆ, ನಿನ್ನ ಬಣ್ಣ ಬಯಲು ಮಾಡುವುದಾಗಿ ತಿಳಿಸಿರುವುದಾಗಿ ಹೇಳಿಕೊಂಡಿದ್ದಾರೆ.

    ಅಷ್ಟಕ್ಕೂ ಸುಕೇಶ್ ಇಷ್ಟೊಂದು ಗರಂ ಆಗೋಕೆ ಕಾರಣ, ಜಾಕ್ವೆಲಿನ್ ಕಾನೂನು ಕ್ರಮಕ್ಕೆ ಮುಂದಾಗಿರೋದು. ಮೊನ್ನೆಯಷ್ಟೇ ಬಹುಕೋಟಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಕೋರ್ಟ್ ಮೆಟ್ಟಿಲು ಏರಿದ್ದರು. ಸುಕೇಶ್ ಚಂದ್ರಶೇಖರ್ (Sukesh Chandrasekhar) ಮಾಡಿದ್ದಾರೆ ಎನ್ನಲಾದ ಬಹುಕೋಟಿ ವಂಚನೆ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಇದೀಗ ಸುಕೇಶ್ ವಿರುದ್ಧ ಮತ್ತೆ ಜಾಕ್ವೆಲಿನ್ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ.

    ಜಾಕ್ವೆಲಿನ್ ಗೆ ಸಂಬಂಧಿಸಿದಂತೆ ಸುಕೇಶ್ ತಿಂಗಳಿಗೊಂದಾದರೂ ಮಾಧ್ಯಮ ಹೇಳಿಕೆಯನ್ನು ನೀಡುತ್ತಿದ್ದಾನೆ. ಇನ್ನೂ ಜಾಕ್ವೆಲಿನ್ ಅನ್ನು ಪ್ರೀತಿಸುತ್ತಿರುವುದಾಗಿ ಸುಕೇಶ್ ಹೇಳಿಕೊಂಡಿದ್ದಾರೆ. ಹುಟ್ಟು ಹಬ್ಬಕ್ಕೆ, ಹಬ್ಬ ಹರಿದಿನಗಳಿಗೆ ಪ್ರೇಮ ಸಂದೇಶವನ್ನು ಕಳುಹಿಸುತ್ತಲೇ ಇದ್ದಾನೆ. ಇದನ್ನು ತಡೆಗಟ್ಟಬೇಕು ಎಂದು ನಟಿ ಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ.

     

    ಮಾಧ್ಯಮಗಳಿಗೆ ತಮ್ಮ ಬಗ್ಗೆ ಯಾವುದೇ ಹೇಳಿಕೆಯನ್ನು ಸುಕೇಶ್ ನೀಡದಂತೆ ಆದೇಶ ನೀಡಬೇಕು ಎಂದು ಜಾಕ್ವೆಲಿನ್ ಮನವಿ ಮಾಡಿದ್ದಾರೆ. ಈ ಮೂಲಕ ಸುಕೇಶ್ ಗೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಸಾಬೀತು ಪಡಿಸುವ ಯತ್ನಕ್ಕೆ ಜಾಕ್ವೆಲಿನ್ ಕೈ ಹಾಕಿದ್ದಾರೆ.