Tag: Jackie Chan

  • ನಾನು ರಾಜಕೀಯ ಸೇರುತ್ತೇನೆ – ಆಕ್ಷನ್ ಹೀರೋ ಜಾಕಿ ಚಾನ್

    ನಾನು ರಾಜಕೀಯ ಸೇರುತ್ತೇನೆ – ಆಕ್ಷನ್ ಹೀರೋ ಜಾಕಿ ಚಾನ್

    ಬೀಜಿಂಗ್: ಹಾಲಿವುಡ್ ಖ್ಯಾತ ಆಕ್ಷನ್ ನಟ ಹಾಂಕಾಂಗ್ ಮೂಲದ ಜಾಕಿ ಚಾನ್ ರಾಜಕೀಯ ಸೇರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.

    ಕಳೆದ ವಾರ ನಡೆದ ವಿಚಾರ ಸಂಕೀರಣದಲ್ಲಿ ಮಾತನಾಡಿದ ಅವರು, ಆಡಳಿತರೂಢ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ)ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಜುಲೈ 1 ರಂದು ಪಕ್ಷದ ಶತಮಾನೋತ್ಸವ ಸಮಾರಂಭದಲ್ಲಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಮಾಡಿದ ಪ್ರಧಾನ ಭಾಷಣದ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಸಂದರ್ಭದಲ್ಲಿ ರಾಜಕೀಯ ಸೇರುವ ಬಗ್ಗೆ ಜಾಕಿ ಚಾನ್ ಮಾತನಾಡಿದರು. ಇದನ್ನೂ ಓದಿ : ರಾಜಕೀಯಕ್ಕೆ ನಾನು ಬರಲ್ಲ – ಸಂಘವನ್ನು ವಿಸರ್ಜಿಸಿದ ರಜನಿಕಾಂತ್

    ಚೀನಾ ಫಿಲ್ಮ್ ಅಸೋಸಿಯೇಷನ್‍ನ ಉಪಾಧ್ಯಕ್ಷರೂ ಆಗಿರುವ ಜಾಕಿ ಚಾನ್, ಸಿಪಿಸಿಯ ಹಿರಿಮೆಯನ್ನು ನಾನು ನೋಡಬಲ್ಲೆ. ಪಕ್ಷ ಹೇಳಿದ್ದನ್ನು ಮಾಡಿ ತೋರಿಸಿದೆ. 100 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ತಾನು ನೀಡಿದ ಭರವಸೆಯನ್ನು ಕೆಲವೇ ದಶಕಗಳಲ್ಲಿ ಈಡೇರಿಸಿದೆ. ಹೀಗಾಗಿ ನಾನು ಸಿಪಿಸಿ ಸದಸ್ಯನಾಗಬೇಕೆಂಬ ಆಸೆಯಿದೆ ಎಂದು ಹೇಳಿದರು.

    2019ರಲ್ಲಿ ಮಾತನಾಡಿದ್ದ ಜಾಕಿ ಚಾನ್, ನಾನು ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ನಾನು ಹೇಳಬಲ್ಲೆ. ನಾನು ಹೋದ ಕಡೆ ಎಲ್ಲ ನಾನು ಚೈನೀಸ್ ಎಂದು ಹೇಳಲು ಹೆಮ್ಮೆ ಆಗುತ್ತಿದೆ. ಐದು ನಕ್ಷತ್ರಗಳ ಕೆಂಪು ಧ್ವಜವನ್ನು ಜಗತ್ತಿನ ಎಲ್ಲೆಡೆ ಗೌರವಿಸಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಹಾಂಕಾಂಗ್ ಹೋರಾಟವನ್ನು ವಿರೋಧಿಸಿ ಈ ಹಿಂದೆ ಜಾಕಿ ಚಾನ್ ಮಾತನಾಡಿದ್ದರು. ಈ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಹಾಂಕಾಂಗ್ ಮತ್ತು ಚೀನಾ ನನ್ನ ಜನ್ಮಸ್ಥಳ ಮತ್ತು ನನ್ನ ಮನೆ ಇದ್ದಂತೆ. ಚೀನಾ ನನ್ನ ದೇಶ, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ನನ್ನ ಮನೆಯನ್ನು ಪ್ರೀತಿಸುತ್ತೇನೆ. ಹಾಂಕಾಂಗ್‍ನಲ್ಲಿ ಶೀಘ್ರ ಶಾಂತಿ ನೆಲಸಬಹುದು ಎಂದು ಭಾವಿಸುತ್ತೇನೆ ಎಂದು ಎಂದು ಹೇಳಿದರು.

  • ಜಾಕಿ ಚಾನ್‍ಗೆ ಕೊರೊನಾ – ನಟ ಸ್ಪಷ್ಟನೆ

    ಜಾಕಿ ಚಾನ್‍ಗೆ ಕೊರೊನಾ – ನಟ ಸ್ಪಷ್ಟನೆ

    ಬೀಜಿಂಗ್: ಹಾಲಿವುಡ್ ಆ್ಯಕ್ಷನ್ ಕಿಂಗ್, ಸೂಪರ್ ಸ್ಟಾರ್ ಜಾಕಿ ಚಾನ್ ಕೊರೊನಾ ವೈರಸ್ಸಿನಿಂದ ಬಳಲುತ್ತಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಹರಿದಾಡುತ್ತಿತ್ತು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ವತಃ ಜಾಕಿ ಚಾನ್ ಸ್ಪಷ್ಟನೆ ನೀಡಿದ್ದಾರೆ.

    ಜಾಕಿ ಚಾನ್ ಅವರಿಗೆ ಕೊರೊನಾ ವೈರಸ್ ತಗುಲಿದೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಬಗ್ಗೆ ಜಾಕಿ ಚಾನ್ ಇನ್‍ಸ್ಟಾದಲ್ಲಿ ತಮ್ಮ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ತಾವು ಕ್ಷೇಮವಾಗಿ ಇರುವುದ್ದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ತಮ್ಮ ಇನ್‍ಸ್ಟಾದಲ್ಲಿ ಜಾಕಿ, “ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. ನಾನು ಆರೋಗ್ಯವಾಗಿ ಹಾಗೂ ಕ್ಷೇಮವಾಗಿದ್ದೇನೆ. ದಯವಿಟ್ಟು ಯಾರು ನನ್ನ ಆರೋಗ್ಯದ ಬಗ್ಗೆ ಆತಂಕಪಡಬೇಡಿ. ಎಲ್ಲರೂ ಕ್ಷೇಮವಾಗಿ ಹಾಗೂ ಆರೋಗ್ಯವಾಗಿರಲಿ ಎಂದು ನಾನು ಬಯಸುತ್ತೇನೆ” ಎಂದು ಪೋಸ್ಟ್ ಹಾಕಿದ್ದಾರೆ.

    ಸದ್ಯ ವಿಶ್ವದ್ಯಂತ ಅಭಿಮಾನಿಗಳು ಜಾಕಿ ಚಾನ್ ಅವರಿಗೆ ಮಾಸ್ಕ್‍ಗಳು ಸೇರಿದಂತೆ ಹಲವು ವಿಶೇಷ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಅಭಿಮಾನಿಗಳು ನೀಡಿದ ಮಾಸ್ಕ್ ಗಳನ್ನು ಬೇರೆ ಬೇರೆ ಸಂಸ್ಥೆಗಳಿಗೆ ದಾನ ಮಾಡುವಂತೆ ಜಾಕಿ ಚಾನ್ ತಮ್ಮ ಸಿಬ್ಬಂದಿ ಬಳಿ ಹೇಳಿದ್ದಾರೆ.

    65 ವರ್ಷದ ಜಾಕಿ ಚಾನ್ ಹಾಂಗ್‍ಕಾಂಗ್‍ನಲ್ಲಿ ಜನಿಸಿದ್ದು, ಅಲ್ಲಿ ಈಗ 90ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್‍ಗೆ ತುತ್ತಾಗಿದ್ದಾರೆ. ಚೀನಾದಲ್ಲಿ ಇದುವೆರಗೂ ಕೊರೊನಾ ವೈರಸ್‍ಗೆ 2,924 ಮಂದಿ ಮೃತಪಟ್ಟಿದ್ದು, 85,469 ಮಂದಿಗೆ ಕೊರೊನಾದಿಂದ ಬಳಲುತ್ತಿದ್ದಾರೆ.

  • ಮಗಳನ್ನು ಮನೆಯಿಂದಲೇ ಹೊರ ಹಾಕಿದ ಜಾಕಿ ಚಾನ್!

    ಮಗಳನ್ನು ಮನೆಯಿಂದಲೇ ಹೊರ ಹಾಕಿದ ಜಾಕಿ ಚಾನ್!

    ಬೀಜಿಂಗ್: ಹಾಲಿವುಡ್ ಆ್ಯಕ್ಷನ್ ಕಿಂಗ್, ಸೂಪರ್ ಸ್ಟಾರ್ ಜಾಕಿ ಚಾನ್ ಮಗಳು ಎಟಾ ಎನ್‍ಜಿ ಮನೆಯಿಲ್ಲದೇ ಹಾಂಕಾಂಗ್‍ನ ಬೀದಿ ಬೀದಿಯಲ್ಲಿ ತಿರುಗುತ್ತಿದ್ದಾಳೆ.

    ಎಟಾ ಎನ್‍ಜಿ(18), ತನ್ನ ಪ್ರೇಯಸಿ ಆಂಧಿ ಆಟಮ್ ಜೊತೆಯಿರುವ ಒಂದು ಸಣ್ಣ ವಿಡಿಯೋ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾಳೆ. ಆ ವಿಡಿಯೋದಲ್ಲಿ ಎಟಾ ತನ್ನ ಪ್ರೇಯಸಿ ಜೊತೆ ಬ್ರಿಡ್ಜ್ ನ ಕೆಳಗೆ ವಾಸಿಸುತ್ತಿದ್ದು, ನನ್ನ ಹೆತ್ತವರೇ ನನ್ನ ಈ ಸ್ಥಿತಿಗೆ ಕಾರಣ ಎಂದು ಎಟಾ ಆರೋಪಿಸಿದ್ದಾಳೆ.

    ತಂದೆ ಜಾಕಿ ಚಾನ್ ಹಾಗೂ ತಾಯಿ ಮಾಜಿ ರೂಪದರ್ಶಿ ಎಲೈನ್ ಎನ್ ಜಿ ಇಬ್ಬರಿಂದ ಎಟಾ ದೂರವಾಗಿದ್ದಾಳೆ. ಎಟಾ ಸಲಿಂಗಕಾಮಿ ಎಂದು ಜಾಕಿ ಚಾನ್ ಆಕೆಯನ್ನು ಮನೆಯಿಂದ ಹೊರಹಾಕಿದ್ದು, ಎಟಾ ತನ್ನ ಪ್ರೇಯಸಿ ಜೊತೆ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾಳೆ.

    ನನ್ನ ಹೆತ್ತವರಿಂದ ನಾನು ಒಂದು ತಿಂಗಳಿನಿಂದ ನಿರಾಶ್ರಿತಳಾಗಿದ್ದೇನೆ. ನಾವು ಬ್ರಿಡ್ಜ್ ಕೆಳಗೆ ಹಾಗೂ ಬೇರೆ ಬೇರೆ ಜಾಗಗಳಲ್ಲಿ ರಾತ್ರಿಯನ್ನು ಕಳೆಯುತ್ತಿದ್ದೇವೆ. ನಾವು ಆಸ್ಪತ್ರೆ, ಪೊಲೀಸ್ ಠಾಣೆ, ಆಹಾರ ನಿಧಿ, ಲೈಂಗಿಕ ಅಲ್ಪಸಂಖ್ಯಾತರ ಸಹಾಯ ಕೇಂದ್ರಗಳಲ್ಲಿ ಸಹಾಯ ಕೇಳಿದರೂ, ಯಾರೂ ನಮ್ಮನ್ನು ಸೇರಿಸಿಕೊಳ್ಳಲಿಲ್ಲ ಎಂದು ಎಟಾ ತಿಳಿಸಿದ್ದಾಳೆ.

    ನಮಗೆ ಈಗ ಏನೂ ಮಾಡಬೇಕೆಂಬುದು ತಿಳಿಯುತ್ತಿಲ್ಲ. ನಾವು ಎಷ್ಟು ಕಷ್ಟದಲ್ಲಿ ಇದ್ದೇವೆ ಎನ್ನುವುದನ್ನು ಜನರಿಗೆ ತಿಳಿಸಲು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದೇನೆ ಎಂದಿದ್ದಾಳೆ.

    ಸದ್ಯ ಜಾಕಿ ಚಾನ್ ತನ್ನ ಮಗಳ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಆದರೆ ತನ್ನ ಮಗಳು ಸಲಿಂಗಕಾಮಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಎಟಾ ತಾಯಿ, ಆಕೆಗೆ ಕೆಲಸದ ಅವಶ್ಯಕತೆ ಇದೆ. ಹಾಗಾಗಿ ಈ ರೀತಿ ಮಾಡುತ್ತಿದ್ದಾಳೆ ಎಂದು ಹೇಳಿ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

    ಆಕೆಗೆ ದುಡ್ಡಿನ ಅವಶ್ಯಕತೆ ಇದ್ದರೆ ಕೆಲಸ ಹುಡುಕಿಕೊಂಡು ದುಡಿದು ಹಣ ಸಂಪಾದಿಸಲಿ. ಜಗತ್ತಿನಲ್ಲಿರುವ ಎಲ್ಲ ಜನರು ದುಡಿಯುತ್ತಾರೆ. ಯಾರೂ ತಮ್ಮ ಪೋಷಕರ ಖ್ಯಾತಿಯ ಮೇಲೆ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ ಎಂದು ಎಟಾ ತಾಯಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    https://www.youtube.com/watch?v=v3s4AxWIgB0