Tag: jackfruit kabab

  • ಹಲಸಿನ ಕಾಯಿ ಕಬಾಬ್ ಮಾಡಿ ಸಖತ್ ಟೇಸ್ಟ್ ಆಗಿರುತ್ತೆ

    ಹಲಸಿನ ಕಾಯಿ ಕಬಾಬ್ ಮಾಡಿ ಸಖತ್ ಟೇಸ್ಟ್ ಆಗಿರುತ್ತೆ

    ಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ಹಲಸಿನ ಕಾಯಿ ಕಬಾಬ್ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಹಲಸಿನ ಕಾಯಿ ಕಬಾಬ್ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ.  ಗರಿಗರಿಯಾದ ಹಲಸಿನ ಕಾಯಿ ಕಬಾಬ್ ಸಂಜೆ ಸಮಯ ಟೀ ಅಥವಾ ಊಟದ ಜೊತೆಗೆ ಸೇವಿಸಬಹುದು. ಹಾಗಾದ್ರೆ ಇನ್ನೇಕೆ ತಡ, ಬೇಕಾಗಿರುವ ಸಾಮಗ್ರಿಗಳ ಪಟ್ಟಿ, ಮಾಡುವ ವಿಧಾನವು ಈ ಕೆಳಗಿನಂತಿದೆ. ಇಂದು ನಾವು ಗರಿ ಗರಿಯಾದ ಹಲಸಿನ ಕಾಯಿ ಕಬಾಬ್ ಮಾಡುವ ಬನ್ನಿ.

    ಬೇಕಾಗುವ ಸಾಮಗ್ರಿಗಳು:
    * ಹಲಸಿನ ಕಾಯಿ- 1
    * ಬ್ಯಾಡಗಿ ಮೆಣಸಿನಕಾಯಿ ಪೇಸ್ಟ್- 4 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಕಬಾಬ್ ಪೌಡರ್- ಅರ್ಧ ಕಪ್
    * ಕಾಳು ಮೆಣಸಿನ ಪೌಡರ್- 1 ಚಮಚ
    * ಕಾನ್‍ಪ್ಲೋರ್- 4 ಚಮಚ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಖಾರದ ಪುಡಿ- 1 ಚಮಚ


    ಮಾಡುವ ವಿಧಾನ:
    * ಮೊದಲು ಒಂದು ಪಾತ್ರೆಯಲ್ಲಿ ನೀರು, ಉಪ್ಪು ಹಾಗೂ ಈಗಾಲೇ ಕಟ್ ಮಾಡಿಟ್ಟಿರುವ ಎಳೆ ಹಲಸಿನ ಕಾಯಿಯನ್ನು ಹಾಕಿ ಬೇಯಿಸಲು ಇಡಬೇಕು. ಹಲಸಿನ ಕಾಯಿ ಬಿರಿಯಾನಿ ಮಾಡುವುದು ಹೇಗೆ ಗೊತ್ತಾ?

    * ನಂತರ ಒಂದು ಬೌಲ್‍ಗೆ ಕಬಾಬ್ ಪೌಡರ್, ಖಾರದ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಕಾನ್‍ಪ್ಲೋರ್, ಕಾಳು ಮೆಣಸಿನ ಪೌಡರ್, ಬ್ಯಾಡಗಿ ಮೆಣಸಿನಕಾಯಿ ಪೇಸ್ಟ್, ಉಪ್ಪು ಹಾಕಿ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

    * ನಂತರ ಈ ಮಿಶ್ರಣದಲ್ಲಿ ಈಗಾಗಲೇ ಬೇಯಿಸಿದ ಹಲಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅರ್ಧ ಗಂಟೆ ಹಾಗೆ ಇಟ್ಟಿರಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
    * ನಂತರ ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಮಸಾಲೆಯಲ್ಲಿ ಮಿಶ್ರ ಮಾಡಿದ ಹಲಸಿನ ಕಾಯಿ ಹಾಕಿ ಬೇಯಿಸಿದರೆ ರುಚಿಯಾದ ಹಲಸಿನ ಕಾಯಿ ಕಬಾಬ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಫಟ್​ ಅಂತ ಮಾಡಬಹುದು ಮೈದಾ ದೋಸೆ