Tag: Jackfruit Ice Cream

  • ಮನೆಯಲ್ಲೇ ಮಾಡಿ ಹಲಸಿನ ಹಣ್ಣಿನ ಐಸ್‌ಕ್ರೀಮ್!

    ಮನೆಯಲ್ಲೇ ಮಾಡಿ ಹಲಸಿನ ಹಣ್ಣಿನ ಐಸ್‌ಕ್ರೀಮ್!

    ಲಸಿನ ಹಣ್ಣಿನ ಸೀಸನ್ ಶುರುವಾಗಿದೆ. ಕೆಲವರು ಮನೆಯಲ್ಲೇ ಹಲಸಿನ ಹಣ್ಣು ಬೆಳೆದರೆ ಇನ್ನೂ ಕೆಲವು ಹಲಸಿನ ಹಣ್ಣು ಪ್ರಿಯರು ಮಾರ್ಕೆಟ್‌ನಿಂದ ಹಲಸಿನ ಹಣ್ಣು ಖರೀದಿಸಿ ತಮ್ಮ ಆಸೆ ಪೂರೈಸಿಕೊಳ್ಳುತ್ತಾರೆ. ಹಲಸಿನ ಹಣ್ಣಿನಲ್ಲಿ ನಾನಾರೀತಿಯ ತಿಂಡಿ ತಿನಿಸುಗಳನ್ನು ಮಾಡಬಹುದು. ಈ ಪೈಕಿ ಬೇಸಿಗೆಯಲ್ಲಿ ದಾಹ ನೀಗಿಸುವ, ಹೊಟ್ಟೆ ತಂಪಾಗಿಸುವ ಹಲಸಿನ ಹಣ್ಣಿನ ಐಸ್‌ಕ್ರೀಮ್ ಯಾವ ರೀತಿ ಮಾಡುವುದು ಎಂಬುದನ್ನು ನಾವು ಇಂದು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ತಡಮಾಡದೇ ನೀವೂ ಕೂಡ ಈ ರೆಸಿಪಿಯನ್ನೊಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    ಹಣ್ಣಾದ ಹಲಸಿನ ತೊಳೆಗಳು – 1 ಕಪ್
    ಸಕ್ಕರೆ – ಅರ್ಧ ಕಪ್
    ಕೆನೆ/ಫ್ರೆಶ್ ಕ್ರೀಮ್ – 1 ಕಪ್
    ಕಂಡೆನ್ಸ್ಡ್ ಮಿಲ್ಕ್ – ಅರ್ಧ ಕಪ್
    ಹಾಲು – ಕಾಲು ಕಪ್

    ಮಾಡುವ ವಿಧಾನ:
    * ಮೊದಲಿಗೆ ಹಲಸಿನ ತೊಳೆಗಳನ್ನು ಹಾಗೂ ಸಕ್ಕರೆಯನ್ನು ಮಿಕ್ಸರ್ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಲು ಹಾಲು ಅಥವಾ ನೀರನ್ನು ಬೆರೆಸಿಕೊಳ್ಳಬಹುದು.
    * ಈಗ ಒಂದು ಬಟ್ಟಲಿನಲ್ಲಿ ಕೆನೆ ಹಾಕಿ ಗಟ್ಟಿಯಾಗುವವರೆಗೆ ಕಡೆಯಿರಿ.
    * ಬಳಿಕ ಕಡೆದ ಕೆನೆಗೆ ರುಬ್ಬಿದ ಹಲಸಿನ ಹಣ್ಣಿನ ಮಿಶ್ರಣ ಹಾಗೂ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಈ ಮಿಶ್ರಣವನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರೀಜರ್‌ನಲ್ಲಿ 6-8 ಗಂಟೆಗಳ ಕಾಲ ಇಡಿ.
    * ಐಸ್‌ಕ್ರೀಮ್ ಗಟ್ಟಿಯಾದ ಬಳಿಕ ಸ್ಕೂಪ್ ಸಹಾಯದಿಂದ ಬೌಲ್‌ಗೆ ಹಾಕಿ ಸವಿಯಲು ಕೊಡಿ.