Tag: jacinda ardern

  • ಕಾರ್ಯನಿರ್ವಹಿಸುವ ಸಾಮರ್ಥ್ಯ ನಾನು ಹೊಂದಿಲ್ಲ – ನ್ಯೂಜಿಲೆಂಡ್ ಪ್ರಧಾನಿ ಹಠಾತ್ ರಾಜೀನಾಮೆ ಘೋಷಣೆ

    ಕಾರ್ಯನಿರ್ವಹಿಸುವ ಸಾಮರ್ಥ್ಯ ನಾನು ಹೊಂದಿಲ್ಲ – ನ್ಯೂಜಿಲೆಂಡ್ ಪ್ರಧಾನಿ ಹಠಾತ್ ರಾಜೀನಾಮೆ ಘೋಷಣೆ

    ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಪ್ರಧಾನಿ (New Zealand PM) ಜಸಿಂಡಾ ಅರ್ಡೆರ್ನ್ (Jacinda Ardern) ಅವರು ಮುಂದಿನ ತಿಂಗಳು ರಾಜೀನಾಮೆ (Resignation) ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ.

    ನಾನು ಅಧಿಕಾರ ನಿರ್ವಹಿಸುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿಲ್ಲ. ರಾಜೀನಾಮೆ ನಿರ್ಧಾರ ನನ್ನದೇ ಆಗಿದೆ. ದೇಶವನ್ನು ಮುನ್ನಡೆಸುವುದು ಅತ್ಯಂತ ವಿಷೇಷವಾದ ಕೆಲಸ. ಹೀಗಾಗಿ ರಾಜೀನಾಮೆ ನೀಡಲು ಇದು ಉತ್ತಮ ಸಮಯವಾಗಿದೆ ಎಂದು ಅರ್ಡೆರ್ನ್ ತಿಳಿಸಿದ್ದಾರೆ.

    ಮುಂದಿನ ಫೆಬ್ರವರಿ 2 ರಂದು ತಾವು ರಾಜೀನಾಮೆ ನೀಡುವುದಾಗಿ ಅರ್ಡೆರ್ನ್ ತಿಳಿಸಿದ್ದಾರೆ. ಅಕ್ಟೋಬರ್ 14 ರಂದು ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ತಾವು ಚುನಾವಣಾ ಸಂಸದರಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು, ಕೊಡಗನ್ನು ಸ್ವಿಜರ್ಲ್ಯಾಂಡ್ ರೀತಿ ಬೆಳೆಸಿ – ಎಷ್ಟು ಬೇಕಾದ್ರೂ ಹಣ ಕೊಡ್ತೀವಿ: ಬೊಮ್ಮಾಯಿ

    2017 ರಲ್ಲಿ ಸಮ್ಮಿಶ್ರ ಸರ್ಕಾರದಿಂದ ಪ್ರಧಾನ ಮಂತ್ರಿಯಾದ ಅರ್ಡೆರ್ನ್ ಬಳಿಕ 3 ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ತಮ್ಮ ಕೇಂದ್ರ-ಲೆಫ್ಟ್ ಲೇಬರ್ ಪಕ್ಷವನ್ನು ಗೆಲ್ಲಿಸಿದ್ದರು. ಇತ್ತೀಚಿನ ಸಮೀಕ್ಷೆಗಳಲ್ಲಿ ಅವರ ಪಕ್ಷ ಹಾಗೂ ವೈಯಕ್ತಿಕ ಜನಪ್ರಿಯತೆ ಕುಸಿತ ಕಂಡಿದೆ.

    52 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನ್ಯೂಜಿಲೆಂಡ್ ಕೋವಿಡ್ ಬಂದಾಗ ಶೂನ್ಯ ಕೋವಿಡ್ ನೀತಿಯನ್ನು ಅನುಸರಿಸಿತ್ತು. ಸಣ್ಣ ಜನ ಸಂಖ್ಯೆ ಹೊಂದಿದ ದೇಶವಾಗಿದ್ದರೂ ದೇಶವನ್ನು ಲಾಕ್‌ಡೌನ್ ಮಾಡಿದ್ದಕ್ಕೆ ಬಹಳ ಟೀಕೆಗೆ ಗುರಿಯಾಗಿತ್ತು. 1 ಪ್ರಕರಣ ದಾಖಲಾದ ಕೂಡಲೇ ದೇಶವನ್ನು ಸಂಪೂರ್ಣ ಲಾಕ್‌ಡೌನ್ ಮಾಡಿದ್ದಕ್ಕೆ ಜಸಿಂಡಾ ಅರ್ಡೆರ್ನ್ ವಿರುದ್ಧ ಕಟು ಟೀಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ರಾಜ್ಯಕ್ಕೆ ತಟ್ಟಲಿದೆ ಇನ್ನೂ 10 ದಿನ ಕೊರೆಯುವ ಚಳಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಮೆರಿಕದಲ್ಲಿ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ನ್ಯೂಜಿಲೆಂಡ್‍ನ ಸಹಕಾರ ಕೇಳಿದ ಬೈಡನ್

    ಅಮೆರಿಕದಲ್ಲಿ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ನ್ಯೂಜಿಲೆಂಡ್‍ನ ಸಹಕಾರ ಕೇಳಿದ ಬೈಡನ್

    ವಾಷಿಂಗ್ಟನ್: ಉವಾಲ್ಡೆ, ಟೆಕ್ಸಾಸ್ ಮತ್ತು ನ್ಯೂಯಾರ್ಕ್‍ನ ಬಫಲೋದಲ್ಲಿ ನಡೆದ ಭೀಕರ ಗುಂಡಿನ ದಾಳಿಯ ಬೆನ್ನಲ್ಲೆ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಅವರ ಸಹಕಾರ ಕೇಳಿದ್ದಾರೆ.

    ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಹಾಗೂ ಜೋ ಬೈಡನ್ ನಡುವಿನ ಮಾತುಕತೆಗಳು ಇಂಡೋ-ಪೆಸಿಫಿಕ್‍ನಲ್ಲಿ ವ್ಯಾಪಾರ, ಹವಾಮಾನ ಮತ್ತು ಭದ್ರತೆಯ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ ಈ ವೇಳೆ ಬಂದೂಕು ನಿಯಂತ್ರಣಕ್ಕೆ ಕಡಿವಾಣ ಹಾಕಲು ಇಬ್ಬರು ನಾಯಕರು ವಿಭಿನ್ನ ಅನುಭವಗಳನ್ನು ತಿಳಿಸಿದ್ದಾರೆ.

    Joe Biden

    2019ರಲ್ಲಿ ಎರಡು ಚರ್ಚ್, ಮಸೀದಿಗಳಲ್ಲಿ 51 ಮಂದಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅರ್ಡೆನ್ ಅವರು ನ್ಯೂಜಿಲೆಂಡ್‍ನಲ್ಲಿ ಬಂದೂಕು ನಿಯಂತ್ರಣ ಕ್ರಮಕ್ಕೆ ಅಂಗೀಕಾರವನ್ನು ಮಾಡುವಲ್ಲಿ ಯಶಸ್ಸು ಪಡೆದಿದ್ದರು. ಇದಕ್ಕೆ ದೇಶದ 120 ಶಾಸಕರಲ್ಲಿ ಒಬ್ಬರನ್ನು ಹೊರತುಪಡಿಸಿ ಇದಕ್ಕೆ ಪರವಾಗಿ ಮತ ಹಾಕಿದ್ದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಎಲ್ಲ ನಾಮಪತ್ರಗಳು ಕ್ರಮಬದ್ಧ

    ಈ ಕ್ರಮವನ್ನು ಶ್ಲಾಘಿಸಿದ ಜೋ ಬೈಡನ್ ಅಮೆರಿಕದಲ್ಲಿ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ಸಹಕಾರ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯೂಜಿಲೆಂಡ್‍ನ ಪ್ರಧಾನಿ ಎಲ್ಲಾ ರೀತಿಯ ರೀತಿಯ ಸಹಕಾರವನ್ನು ನೀಡಲು ಸಿದ್ಧ ಎಂದು ತಿಳಿಸಿದರು. ಇದನ್ನೂ ಓದಿ: ಉಕ್ರೇನ್‌ಗೆ ಸುಧಾರಿತ ಲಾಂಗ್ ರೇಂಜ್ ರಾಕೆಟ್ ಸಿಸ್ಟಮ್ ಕಳುಹಿಸುತ್ತೇವೆ: ಬೈಡನ್

    ವಾರಾಂತ್ಯದಲ್ಲಿ ಬೈಡೆನ್ ಟೆಕ್ಸಾಸ್‍ನ ಉವಾಲ್ಡೆಗೆ ಭೇಟಿ ನೀಡಿ, ಗುಂಡಿನ ದಾಳಿಗೆ ಬಲಿಯಾಗಿದ್ದ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದರು. ನಂತರ ವಾಷಿಂಗ್ಟನ್‍ನಲ್ಲಿ ಗನ್ ಕಾನೂನುಗಳನ್ನು ಬಿಗಿಗೊಳಿಸಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

  • ಕೊರೊನಾದಿಂದ ತಮ್ಮ ಮದುವೆಯನ್ನೇ ರದ್ದುಗೊಳಿಸಿದ ನ್ಯೂಜಿಲೆಂಡ್ ಪ್ರಧಾನಿ

    ಕೊರೊನಾದಿಂದ ತಮ್ಮ ಮದುವೆಯನ್ನೇ ರದ್ದುಗೊಳಿಸಿದ ನ್ಯೂಜಿಲೆಂಡ್ ಪ್ರಧಾನಿ

    ವೆಲ್ಲಿಂಗ್ಟನ್: ಕೊರೊನಾ ಸೋಂಕಿನ ಕಠಿಣ ನಿಯಮ ಪಾಲನೆಗಾಗಿ ನ್ಯೂಜಿಲೆಂಡ್ ಪ್ರಧಾನಿ ಸ್ವಂತ ಮದುವೆಯನ್ನೇ ರದ್ದುಗೊಳಿಸುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

    ನ್ಯೂಜಿಲೆಂಡ್‍ನ ಪ್ರಧಾನಿ ಜೆಸಿಂದಾ ಆರ್ಡೆನ್ ಅವರು ದೀರ್ಘಕಾಲದ ಜೊತೆಗಾರ ಕ್ಲಾರ್ಕ್ ಗೆಫಾರ್ಡ್ ಜೊತೆ ಆರ್ಡೆನ್ ಜೊತೆಗೆ ಮದುವೆ ನಿಶ್ಚಯವಾಗಿತ್ತು. ಈ ವಿವಾಹವನ್ನು ಮುಂದಿನ ವಾರಗಳಲ್ಲಿ ನಿಶ್ಚಯಿಸಲಾಗಿತ್ತು. ಆದರೆ ದಿನಾಂಕವನ್ನು ಘೋಷಿಸಲಾಗಿರಲಿಲ್ಲ. ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜೆಸಿಂದಾ ಆರ್ಡೆನ್ ಅವರು ಸ್ವಂತ ಮದುವೆಯನ್ನೇ ರದ್ದು ಗೊಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಮತ್ತೊಂದು ಶಾಕ್‌ – ಗೋವಾ ಮಾಜಿ ಸಿಎಂ ಪರ್ಸೇಕರ್‌ ರಾಜೀನಾಮೆ

    ಕೋವಿಡ್ ಕಠಿಣ ನಿಯಮಗಳ ಹೇರಿಕೆಯಿಂದ ತಮ್ಮ ಮದುವೆ ರದ್ದುಗೊಂಡ ಬಗೆಗಿನ ಪ್ರಶ್ನೆಗೆ ಜೀವನ ಎಂದರೆ ಹೀಗೆ ಇರುತ್ತದೆ. ನನ್ನ ವಿವಾಹವು ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ ಎಂದು ಜೆಸಿಂದಾ ಉತ್ತರಿಸಿದ್ದಾರೆ. ಇದನ್ನೂ ಓದಿ:   UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

    ಸೋಂಕಿನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾದ ನ್ಯೂಜಿಲೆಂಡ್ ಸಾವಿರಾರು ಮಂದಿಯಲ್ಲಿ ನಾನೂ ಒಬ್ಬಳು. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಪ್ರೀತಿ ಪಾತ್ರರ ಜೊತೆಗೆ ಇರಲಾಗದೆ ಇರುವ ಸ್ಥಿತಿ ಕರುಳು ಹಿಂಡುವಂತದ್ದಾಗಿದೆ ಎಂದು ಸೋಂಕು ಹಬ್ಬಿರುವ ಕುರಿತಾಗಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಂಚರಾಜ್ಯಗಳಲ್ಲಿ ಚುನಾವಣಾ ರ‍್ಯಾಲಿ, ರೋಡ್ ಶೋ ಗಳಿಗೆ ಜ.31ರ ವರೆಗೆ ನಿರ್ಬಂಧ

    ನ್ಯೂಜಿಲೆಂಡ್‍ನಲ್ಲಿ ಕೋವಿಡ್ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ವಿವಾಹ ಸಮಾರಂಭಕ್ಕೆ ಪೂರ್ಣವಾಗಿ ಲಸಿಕೆ ಪಡೆದ 100 ಮಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ನ್ಯೂಜಿಲೆಂಡ್‍ನಲ್ಲಿ ಇದುವರೆಗೆ 15,104 ಕೋವಿಡ್ 19 ಪ್ರಕರಣಗಳು ವರದಿ ಆಗಿವೆ. 52 ಮಂದಿ ಕೋವಿಡ್ ಕಾರಣದಿಂದ ಮೃತರಾಗಿದ್ದಾರೆ. ಕಳೆದ 2 ವರ್ಷಗಳಿಂದ ಗಡಿಯಲ್ಲಿ ಕಠಿಣ ನಿಯಮಗಳನ್ನು ಪಾಲಿಸಲಾಗುತ್ತಿದೆ.

  • ರೂಪಾಂತರಿ ಕೊರೊನಾ ಅಬ್ಬರ – ನ್ಯೂಜಿಲ್ಯಾಂಡ್ ಪ್ರಮುಖ ನಗರಗಳು ಲಾಕ್‍ಡೌನ್

    ರೂಪಾಂತರಿ ಕೊರೊನಾ ಅಬ್ಬರ – ನ್ಯೂಜಿಲ್ಯಾಂಡ್ ಪ್ರಮುಖ ನಗರಗಳು ಲಾಕ್‍ಡೌನ್

    ವಿಲ್ಲಿಂಗ್‍ಟನ್: ರೂಪಾಂತರಿ ಕೊರೊನಾ ಅಬ್ಬರದ ಹಿನ್ನೆಲೆ ನ್ಯೂಜಿಲ್ಯಾಂಡ್ ನ ಪ್ರಮುಖ ನಗರಗಳು ಲಾಕ್‍ಡೌನ್ ಗೆ ಒಳಪಡಲಿವೆ. ಇಂದು ಮಧ್ಯರಾತ್ರಿಯಿಂದಲೇ ಪ್ರಮುಖ ನಗರಗಳಲ್ಲಿ ಲಾಕ್‍ಡೌನ್ ನಿಯಮಗಳ ಜಾರಿಯಾಗಲಿವೆ ಎಂದು ಸರ್ಕಾರ ಪ್ರಕಟನೆ ಹೊರಡಿಸಿದೆ.

    ಪ್ರಧಾನ ಮಂತ್ರಿ ಜೆಸಿಂಡಾ ಅರ್ಡರ್ನ್ ತಜ್ಞರು ಮತ್ತು ಸಂಪುಟ ಸದಸ್ಯರನ್ನೊಳಗೊಂಡ ಸಮಿತಿ ಜೊತೆಗಿನ ಸಭೆ ಬಳಿಕ ಮೂರು ದಿನದ ಲಾಕ್‍ಡೌನ್ ಘೋಷಣೆ ಮಾಡಿದ್ದಾರೆ. ನಾವು ಜಾಗೂರಕರಾಗುವರೆಗೂ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರೋದು ಅಸಾಧ್ಯ. ಹಾಗಾಗಿ ಲಾಕ್‍ಡೌನ್ ಘೋಷಣೆ ಮಾಡಲಾಗಿದ್ದು, ಈ ವೇಳೆ ಕೊರೊನಾ ಸೋಂಕಿತರ ಪತ್ತೆಗಾಗಿ ಕೆಲಸ ಮಾಡಲಿದ್ದೇವೆ. ಇದರಿಂದ ಹೊಸ ಕೊರೊನಾ ವೈರಸ್ ಸಂಪರ್ಕಿತರನ್ನ ಪತ್ತೆ ಹಚ್ಚೋದು ಸುಲಭವಾಗಲಿದೆ ಎಂದು ಜೆಸಿಂಡಾ ಹೇಳಿದ್ದಾರೆ.

    ದೇಶದಲ್ಲಿ ಕಠಿಣ ನಿಯಮಗಳನ್ನ ಜಾರಿಗೆ ತರಲಾಗುತ್ತಿದ್ದು, ಆಕಲೆಂಡ್ ನಗರದಲ್ಲಿ ಟಫ್ ಲಾಕ್‍ಡೌನ್ ಜಾರಿಯಾಗಲಿದೆ. ಆಕಲೆಂಡ್ ನಗರದಲ್ಲಿ ಒಂದೇ ಕುಟುಂಬ ಮೂವರಿಗೆ ಹೊಸ ತಳಿಯ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದ್ದರಿಂದ ನಗರದಲ್ಲಿ ಹೊಸ ತಳಿಯ ಸೋಂಕಿನ ನಿಯಂತ್ರಣಕ್ಕಾಗಿ ಲಾಕ್‍ಡೌನ್ ತರಲಾಗುತ್ತಿದೆ ಪ್ರಧಾನಿಗಳು ಸ್ಪಷ್ಟಪಡಿಸಿದ್ದಾರೆ.

    ಹೊಸ ತಳಿ ಕಾಣಿಸಿಕೊಂಡ ಬೆನ್ನಲ್ಲೇ ಪ್ರಧಾನಿ ಜೆಸಿಂಡಾ ತಮ್ಮ ಎಲ್ಲ ಕಾರ್ಯಕ್ರಮಗಳನ್ನ ರದ್ದುಗೊಳಿಸಿ ರಾಜಧಾನಿಗೆ ಹಿಂದಿರುಗುತ್ತಿದ್ದಾರೆ. ಮೂರು ದಿನಗಳ ಕಾಲ ತಜ್ಞರ ಜೊತೆ ಕೊರೊನಾಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಈ ಮೂರು ದಿನದಲ್ಲಿ ದೇಶಕ್ಕೆ ಆಗಮಿಸುವ ವಿದೇಶಿಯರು ಕಡ್ಡಾಯ ಎರಡು ವಾರ ಕ್ವಾರಂಟೈನ್ ನಲ್ಲಿರುವಂತೆ ಸರ್ಕಾರ ಆದೇಶ ಹೊರಡಿಸಿದೆ.