Tag: Jabalpur

  • ಟಿಕೆಟ್ ಸಿಕ್ಕಿಲ್ಲ ಎಂದು ಬೋಗಿಯ ಕೆಳಗೆ ಅವಿತು 290 ಕಿಮೀ ಪಯಣಿಸಿದ ಭೂಪ

    ಟಿಕೆಟ್ ಸಿಕ್ಕಿಲ್ಲ ಎಂದು ಬೋಗಿಯ ಕೆಳಗೆ ಅವಿತು 290 ಕಿಮೀ ಪಯಣಿಸಿದ ಭೂಪ

    – ಜಬಲ್ಪುರದಲ್ಲಿ ಗಾಲಿಗಳನ್ನು ಪರಿಶೀಲಿಸುವಾಗ ಯುವಕನನ್ನು ವಶಕ್ಕೆ ರೈಲ್ವೇ ಪೊಲೀಸರು

    ಭೋಪಾಲ್: ಟಿಕೆಟ್ ಸಿಕ್ಕಿಲ್ಲ ಎಂದು ಬೋಗಿಯ ಕೆಳಗೆ ಅವಿತುಕೊಂಡು ಕುಳಿತು ಯುವಕನೊಬ್ಬ 290 ಕಿ.ಮೀ ಪ್ರಯಾಣಿಸಿದ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

    ಇಟಾರ್ಸಿಯಿಂದ (Itarsi) ಪ್ರಯಾಣಿಸಲು ಟಿಕೆಟ್ ಸಿಗದಿರುವ ಕಾರಣ ತನ್ನ ಪ್ರಾಣವನ್ನೇ ಪಣಕ್ಕಿಟ್ಟು 290 ಕಿ.ಮೀ ಪ್ರಯಾಣಿಸಿದ್ದಾನೆ.ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ – ಮೃತರ ಸಂಖ್ಯೆ 4ಕ್ಕೆ ಏರಿಕೆ

    ದಾನಪುರ್ ಎಕ್ಸಪ್ರೆಸ್‌ (Danapur Express) ರೈಲಿನಲ್ಲಿ ಇಟಾರ್ಸಿಯಿಂದ ಪ್ರಯಾಣಿಸಲು ಟಿಕೆಟ್ ಸಿಗದ ಕಾರಣ ಬೋಗಿಯ ಕೆಳಗೆ ಅವಿತುಕೊಂಡು ಕುಳಿತಿದ್ದಾನೆ. ಜಬಲ್ಪುರ (Jabalapur) ರೈಲು ನಿಲ್ದಾಣದ ಬಳಿ ಕ್ಯಾರೇಜ್ ಮತ್ತು ವ್ಯಾಗನ್ ಇಲಾಖೆ ಸಿಬ್ಬಂದಿ ನಡೆಸಿದ ರೋಲಿಂಗ್ ಪರೀಕ್ಷೆ ವೇಳೆ ವ್ಯಕ್ತಿಯೊಬ್ಬ ಅಡಗಿಕೊಂಡಿರುವುದು ಪತ್ತೆಯಾಗಿದೆ.

    ಬಳಿಕ ಆತನನ್ನು ವಿಚಾರಣೆಗೊಳಪಡಿಸಿದಾಗ ಇಟಾರ್ಸಿಯಲ್ಲಿ ತಾನು ರೈಲು ಹತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಟಿಕೆಟ್ ಖರೀದಿಸಲು ಹಣವಿಲ್ಲದ ಕಾರಣ, ರೈಲಿನ ಚಕ್ರಗಳ ನಡುವೆ ಪ್ರಯಾಣಿಸುವುದು ಸೂಕ್ತವೆನಿಸಿತು ಎಂದು ತಿಳಿಸಿದ್ದಾನೆ. ತಕ್ಷಣವೇ ಸ್ಥಳಕ್ಕೆ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿಯನ್ನು ಕರೆಸಲಾಯಿತು. ಆದರೆ ಆ ವ್ಯಕ್ತಿ ರೈಲಿನ ಕೆಳಗೆ ಹೇಗೆ ಅಡಗಿ ಕುಳಿತನು ಎನ್ನುವ ಕುರಿತು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತಿ ಬೋಗಿಯಿಂದ ಕೆಳಗಿನಿಂದ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ – ರಾತ್ರಿ 11 ಗಂಟೆ ಬಳಿಕ ಎಂ.ಜಿ ರಸ್ತೆಯಿಂದ ಸಂಚಾರ ಬಂದ್‌

  • Madhya Pradesh| ಹುಲಿಸಂರಕ್ಷಿತ ಪ್ರದೇಶದಲ್ಲಿ 7 ಆನೆಗಳ ನಿಗೂಢ ಸಾವು

    Madhya Pradesh| ಹುಲಿಸಂರಕ್ಷಿತ ಪ್ರದೇಶದಲ್ಲಿ 7 ಆನೆಗಳ ನಿಗೂಢ ಸಾವು

    ಭೋಪಾಲ್: ಹುಲಿಸಂರಕ್ಷಿತ ಪ್ರದೇಶದಲ್ಲಿ 7 ಆನೆಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

    ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Bandhavgarh Tiger Reserve) ಏಳು ಆನೆಗಳು ಸಾವನ್ನಪ್ಪಿದ್ದು, ಮೂರು ಆನೆಗಳು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿವೆ ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ: ಪರಮೇಶ್ವರ್

    ಏಳು ಆನೆಗಳ ದಿಢೀರ್ ಸಾವಿಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಜಬಲ್‌ಪುರದ (Jabalpur) ವನ್ಯಜೀವಿ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಆರೋಗ್ಯ ಕೇಂದ್ರದಲ್ಲಿ ಏಳು ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ. ಇದನ್ನೂ ಓದಿ: ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ

    ರೈತರು ತಮ್ಮ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಿದ್ದು, ಅದನ್ನು ತಿಂದ ಪರಿಣಾಮ ಆನೆಗಳು ಸಾವನ್ನಪ್ಪಿರುವ ಸಾಧ್ಯತೆ ಇರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಇದನ್ನೂ ಓದಿ: ಉಪಚುನಾವಣೆಗೆ ಸಮಸ್ಯೆ ಮಾಡೋಕೆ ಬಿಜೆಪಿಯಿಂದ ಪ್ರತಿಭಟನೆ: ಸಿಎಂ

    ಆನೆಗಳ ಸಾವಿಗೆ ಸಂಬಂಧಪಟ್ಟಂತೆ ದೆಹಲಿ ಮೂಲದ ವನ್ಯಜೀವಿ ಅಪರಾಧ ನಿಯಂತ್ರಣ ದಳ ತನಿಖೆ ನಡೆಸಲು ಸಮಿತಿಯನ್ನು ರಚಿಸಿದ್ದು, ಅದರ ಜೊತೆಗೆ ರಾಜ್ಯ ಸರ್ಕಾರ ಕೂಡಾ ತನಿಖೆಗೆ ಆದೇಶ ನೀಡಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಜೈಲಿನಿಂದ ರಿಲೀಸ್

    ಘಟನಾ ಸ್ಥಳಕ್ಕೆ ನ್ಯಾಶನಲ್ ಟೈಗರ್ ಕನ್ಸರ್‌ವೇಷನ್ ಅಥಾರಿಟಿಯ ಸೆಂಟ್ರಲ್ ವಲಯದ ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ನಂದಕಿಶೋರ್ ಕಾಳೆ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಶಿಗ್ಗಾಂವಿಯ ಕಾಂಗ್ರೆಸ್ ಬಂಡಾಯ ಶಮನ- ಕೊನೆಗೂ ನಾಮಪತ್ರ ವಾಪಸ್ ಪಡೆದ ಅಜ್ಜಂಪೀರ್ ಖಾದ್ರಿ

  • ಹಳಿತಪ್ಪಿದ ಎಲ್‌ಪಿಜಿ ಸಾಗಿಸ್ತಿದ್ದ ಗೂಡ್ಸ್ ರೈಲು – ದುರಂತದಿಂದ ಪಾರು

    ಹಳಿತಪ್ಪಿದ ಎಲ್‌ಪಿಜಿ ಸಾಗಿಸ್ತಿದ್ದ ಗೂಡ್ಸ್ ರೈಲು – ದುರಂತದಿಂದ ಪಾರು

    ಭೋಪಾಲ್: ಎಲ್‌ಪಿಜಿ (LPG) ಸಾಗಿಸಲಾಗುತ್ತಿದ್ದ ಗೂಡ್ಸ್ ರೈಲಿನ (Goods Train) 2 ವ್ಯಾಗನ್‌ಗಳು ಹಳಿ ತಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಜಬಲ್‌ಪುರದ (Jabalpur) ಶಹಪುರದಲ್ಲಿ ನಡೆದಿದೆ ಎಂದು ಬುಧವಾರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಭಾರೀ ದುರಂತ ತಪ್ಪಿದೆ.

    ಗೂಡ್ಸ್ ರೈಲಿನಿಂದ ಅನ್‌ಲೋಡ್ ಮಾಡಲು ಇರಿಸಿದ್ದಾಗ ಘಟನೆ ನಡೆದಿದೆ ಎಂದು ಪಶ್ಚಿಮ ಸೆಂಟ್ರಲ್ ರೈಲ್ವೆ ಸಿಪಿಆರ್‌ಒ ಮಾಹಿತಿ ನೀಡಿದೆ.

    ಕಳೆದ ರಾತ್ರಿ ಗೂಡ್ಸ್ ರೈಲಿನ ಎಲ್‌ಪಿಜಿ ರೇಕ್‌ನ ಎರಡು ವ್ಯಾಗನ್‌ಗಳನ್ನು ಇಳಿಸಲು ಮುಂದಾದಾಗ ಹಳಿತಪ್ಪಿದೆ. ಸದ್ಯ ರೈಲುಗಳ ಯಾವುದೇ ಮುಖ್ಯ ಸಂಚಾರಕ್ಕೆ ತೊಂದರೆಯಾಗಿಲ್ಲ. ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸಾಮಾನ್ಯವಾಗಿದೆ. ಬೆಳಗ್ಗೆ ಸೈಡಿಂಗ್ ಅಧಿಕಾರಿಗಳ ಸಮ್ಮುಖದಲ್ಲಿ ಹಳಿತಪ್ಪಿದ ರೈಲನ್ನು ಮರುಸ್ಥಾಪಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ. ಇದನ್ನೂ ಓದಿ: ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಜಾರ್ಖಂಡ್‍ನಲ್ಲಿ ತಪ್ಪಿತ್ತು ರೈಲು ದುರಂತ!

    ಕಳೆದ ವಾರ ಒಡಿಶಾದ ಬಾಲಸೋರ್‌ನಲ್ಲಿ 3 ರೈಲುಗಳು ಅಪಘಾತಕ್ಕೀಡಾಗಿದ್ದು, 275 ಜನರು ಸಾವನ್ನಪ್ಪಿದ್ದಾರೆ. 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆ ದೇಶದಲ್ಲೇ ಸಂಭವಿಸಿದ ಅತ್ಯಂತ ಭೀಕರ ರೈಲ್ವೆ ದುರಂತಗಳಲ್ಲಿ ಒಂದು ಎನಿಸಿಕೊಂಡಿದೆ.

    ಈ ಕಹಿ ಘಟನೆ ಮಾಸುವ ಮುನ್ನವೇ ಮಂಗಳವಾರ ಜಾರ್ಖಂಡ್‌ನಲ್ಲಿ ರೈಲು ದುರಂತವೊಂದು ತಪ್ಪಿದೆ. ಜಾರ್ಖಂಡ್‌ನ ಬೊಕಾರೊದಲ್ಲಿ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಗೇಟ್‌ಗೆ ಟ್ರ್ಯಾಕ್ಟರ್ ಸಿಲುಕಿಕೊಂಡಿತ್ತು. ದೂರದಿಂದಲೇ ಇದನ್ನು ಗಮನಿಸಿದ ಲೋಕೋ ಪೈಲಟ್ ಕೂಡಲೆ ರೈಲಿನ ವೇಗವನ್ನು ಕಡಿಮೆ ಮಾಡಿ ಅನಾಹುತವನ್ನು ತಪ್ಪಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ಸಚಿವರು ದಣಿವರಿಯದಂತೆ ಕೆಲಸ ಮಾಡುತ್ತಿದ್ದು, ರಾಜೀನಾಮೆಗೆ ಆಗ್ರಹ ಸರಿಯಲ್ಲ: ಹೆಚ್‌ಡಿಡಿ

  • ಚಿಕಿತ್ಸೆಗೆ ಕೇವಲ 20 ರೂ. ಫೀಸ್ ಪಡೆಯುತ್ತಿದ್ದ ಡಾಕ್ಟರ್‌ಗೆ ಪದ್ಮಶ್ರೀ

    ಚಿಕಿತ್ಸೆಗೆ ಕೇವಲ 20 ರೂ. ಫೀಸ್ ಪಡೆಯುತ್ತಿದ್ದ ಡಾಕ್ಟರ್‌ಗೆ ಪದ್ಮಶ್ರೀ

    ನವದೆಹಲಿ: ಚಿಕಿತ್ಸೆಗಾಗಿ ಜನರಿಂದ ಕೇವಲ 20 ರೂ. ಫೀಸ್ ಪಡೆಯುತ್ತಾ ಬಡವರಿಗೆ ನೆರವಾಗುತ್ತಿರುವ ಮಧ್ಯಪ್ರದೇಶದ ಡಾಕ್ಟರ್‍ರೊಬ್ಬರಿಗೆ (Doctor) 2023ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ (Padma Shri Award) ಒಲಿದಿದೆ.

    ಹೌದು. ಬುಧವಾರ ಸಂಜೆ ಕೇಂದ್ರ ಸರ್ಕಾರವು ಪದ್ಮಶ್ರೀ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮಧ್ಯಪ್ರದೇಶದ (Madhya Pradesh) ಜಬಲ್‍ಪುರ (Jabalpur) ಜಿಲ್ಲೆಯ 77 ವರ್ಷದ ವೈದ್ಯ ಡಾ.ಎಂ.ಸಿ. ದಾವರ್ (Dr M C Dawar) ಅವರ ಹೆಸರಿದೆ.

    ಡಾ.ದಾವರ್ ಅವರು 1946ರ ಜ. 16ರಂದು ಪಾಕಿಸ್ತಾನದ ಪಂಜಾಬ್‍ನಲ್ಲಿ ಜನಿಸಿದರು. ದೇಶ ವಿಭಜನೆಯ ನಂತರ ದಾವರ್ ಕುಟುಂದವರೊಂದಿಗೆ ಭಾರತಕ್ಕೆ ಸ್ಥಳಾಂತರಗೊಂಡರು. 1967ರಲ್ಲಿ ತಮ್ಮ ಎಂಬಿಬಿಎಸ್ ಪದವಿಯನ್ನು ಜಬಲ್‌ಪುರದಲ್ಲಿ ಪೂರ್ಣಗೊಳಿಸಿದರು. ನಂತರ 1971ರಲ್ಲಿ ಇಂಡೋ ಪಾಕ್ ಯುದ್ಧದ ಸಮಯದಲ್ಲಿ ಸುಮಾರು ಒಂದು ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು.

    1972ರಿಂದ ಜಬಲ್ಪುರದಲ್ಲಿ ಆಸ್ಪತ್ರೆಯನ್ನು ತೆರೆದು, ಅಲ್ಲಿಂದ ಜನರಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ವಿಶೇಷವೆಂದರೆ ಅವರು ಆಸ್ಪತ್ರೆಯನ್ನು ಪ್ರಾರಂಭಿಸಿದಾಗ ಕೇವಲ 2 ರೂ. ಪಡೆಯುತ್ತಿದ್ದರು. ಎಲ್ಲ ಸೌಲಭ್ಯಗಳು ದುಬಾರಿಯಾಗುತ್ತಿರುವ ಈ ಸಮಯದಲ್ಲೂ ಕೇವಲ 20 ರೂ. ಅನ್ನು ಫೀಸ್ ಆಗಿ ಪಡೆಯುತ್ತಿದ್ದಾರೆ. ಇದರಿಂದಾಗಿ ಅನೇಕ ಬಡವರಿಗೆ ಅನೇಕ ಸಹಾಯವಾಗುತ್ತಿದೆ.

    ಈ ಬಗ್ಗೆ ಮಾತನಾಡಿದ ಅವರು, ಇಷ್ಟು ಕಡಿಮೆ ಶುಲ್ಕ ವಿಧಿಸುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆದಿತ್ತು. ಆದರೆ ಅದರ ಬಗ್ಗೆ ಯಾವುದೇ ತಕರಾರು ಇರಲಿಲ್ಲ, ನಮ್ಮ ಏಕೈಕ ಗುರಿ ಜನರ ಸೇವೆಯಾಗಿದೆ. ಆದ್ದರಿಂದ ಶುಲ್ಕವನ್ನು ಹೆಚ್ಚಿಸಲಿಲ್ಲ. ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ ಮತ್ತು ಸಾಧನೆಯನ್ನು ಗೌರವಿಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ನೂರು ಬಾರಿ ಮೋದಿ, ಶಾ ರಾಜ್ಯಕ್ಕೆ ಬಂದ್ರೂ, ಕಾಂಗ್ರೆಸ್ ನೂರಕ್ಕೆ ನೂರು ಗೆಲ್ಲುತ್ತೆ: ಸಿದ್ದರಾಮಯ್ಯ

    ದಾವರ್ ಅವರ ಮಗ ರಿಶಿ ಮಾತನಾಡಿ, ರಾಜಕೀಯದ ಉದ್ದೇಶದಿಂದ ಮಾತ್ರ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಸರ್ಕಾರವು ದೇಶಕ್ಕಾಗಿ ದುಡಿಯುವ ಜನರನ್ನು ಹುಡುಕಿ ಗೌರವಿಸುತ್ತಿರುವ ರೀತಿ ತುಂಬಾ ಒಳ್ಳೆಯದು. ನಮ್ಮ ತಂದೆಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು. ಇದನ್ನೂ ಓದಿ: ಟಿಕೆಟ್ ಘೋಷಣೆ ವೇಳೆ ಸಮಸ್ಯೆ, ಸವಾಲು ನಿರ್ವಹಣೆಗೆ ಬಿಜೆಪಿ ಹೈಕಮಾಂಡ್ ಪ್ರೀಪ್ಲಾನ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k