Tag: J.Jayalalithaa

  • ಅಮಿತ್ ಶಾ ನಂಬರ್ ನಕಲು ಮಾಡಿ ಜಾಕ್ವೆಲಿನ್ ಸ್ನೇಹ ಮಾಡಿದ್ದ ವಂಚಕ ಸುಕೇಶ್

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇ.ಡಿ) ವಂಚಕ ಸುಕೇಶ್ ಚಂದ್ರಶೇಖರ್ ಅವರ ಮುಖವಾಡಗಳನ್ನು ಒಂದೊಂದಾಗಿಯೇ ಬಯಲಿಗೆಳೆಯುತ್ತಿದೆ.

    ಜಾಕ್ವೆಲಿನ್ ಫರ್ನಾಂಡಿಸ್ ಅವರಿಂದ ಇ.ಡಿ ಈ ವರ್ಷ ಎರಡು ಬಾರಿ ಹೇಳಿಕೆ ದಾಖಲಿಸಿಕೊಂಡಿತ್ತು. ಅ ಸಂದರ್ಭದಲ್ಲಿ ಅವರು ಸುಕೇಶ್ ಚಂದ್ರಶೇಖರ್ ತನ್ನನ್ನು ಶೇಖಾರ್ ರತ್ನ ವೇಲ ಎಂದು ಪರಿಚಯಿಸಿಕೊಂಡಿದ್ದಾಗಿ ತಿಳಿಸಿದ್ದರು. ಅಲ್ಲದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ರಾಜಕೀಯ ಕುಟುಂಬದಿಂದ ಬಂದವನು ಎಂದು ಹೇಳಿಕೊಂಡಿದ್ದ. ಆತ, ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಸ್ನೇಹ ಬಳಸಲು ಅಮಿತ್ ಶಾ ಅವರ ಕಚೇರಿ ಸಂಖ್ಯೆಯನ್ನೇ ಹೋಲುವಂತಹ ಸಂಖ್ಯೆಯಿಂದ ವಂಚನೆಯ ಕರೆಗಳನ್ನು ಮಾಡುತ್ತಿದ್ದ ಎಂದು ಇ.ಡಿ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿದೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್

    ವಂಚಕ ತನ್ನೊಂದಿಗೆ ಸನ್ ಟಿವಿ ಮಾಲೀಕ ಎಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ತಾನು ಜಯಲಲಿಲತಾ ಅವರ ರಾಜಕೀಯ ಕುಟುಂಬದವನಾಗಿದ್ದು, ಚೈನೈ ಮೂಲದವನಾಗಿರುವುದಾಗಿ ಹೇಳಿಕೊಂಡಿದ್ದು ತನಗೆ ಅಮಿತ್ ಶಾ ಅವರ ಕಚೇರಿಯಿಂದ ಫೋನ್ ಕರೆ ಬಂದಿದ್ದಾಗಿ ಮೇಕಪ್ ಕಲಾವಿದ ತಿಳಿಸಿದ್ದಾರೆ. ಈ ಫೋನ್ ಸಂಖ್ಯೆ ಗೃಹ ಸಚಿವಾಲಯದ ಫೋನ್ ನಂಬರ್‌ಗೆ ಹೋಲುತ್ತಿದ್ದರಿಂದ ಅವರು ಅದನ್ನು ನಂಬಿ ಸುಕೇಶ್‌ನ ಮೊಬೈಲ್ ಸಂಖ್ಯೆಯನ್ನು ಜಾಕ್ವೆಲಿನ್ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಲಿಯಾ ವಿರುದ್ಧ FIR ದಾಖಲಿಸಲು ಮುಂದಾದ ಮುಂಬೈ ಪಾಲಿಕೆ

    ಫೆಬ್ರವರಿಯಿಂದ ಆಗಸ್ಟ್ 7 ರಂದು ಸುಕೇಶ್‌ನ ಬಂಧನವಾಗುವ ತನಕವೂ ಜಾಕ್ವೆಲಿನ್ ಮತ್ತು ಸುಕೇಶ್ ಸಂಪರ್ಕದಲ್ಲಿ ಇದ್ದರು. ಜಾಕ್ವೆಲಿನ್‌ಗೆ ದುಬಾರಿ ಕೈ ಚೀಲಗಳು, ಪರ್ಷಿಯನ್ ಬೆಕ್ಕು (9 ಲಕ್ಷ ಮೌಲ್ಯ), ಬ್ರೇಸ್‌ಲೇಟ್‌ಗಳು ಉಡುಗೊರೆಯಾಗಿ ಸಿಕ್ಕಿದ್ದವು. ಅದಲ್ಲದೇ ಒಂದು ಬಿಎಂಡಬ್ಲೂ ಕಾರನ್ನು ಅಮೆರಿಕಾದಲ್ಲಿರುವ ಜಾಕ್ವೆಲಿನ್ ತಂಗಿ ಗೆರಾಲ್ಡಿನ್ ಫೆರ್ನಾಂಡಿಸ್‌ಗೆ ಉಡುಗೊರೆಯಾಗಿ ನೀಡಿರುವುದಾಗಿ ಇ.ಡಿ ತಿಳಿಸಿದೆ.

  • ಕಂಗನಾಗೆ ಅಕ್ಟೋಬರ್ 1 ವಿಶೇಷ ದಿನವಂತೆ

    ಕಂಗನಾಗೆ ಅಕ್ಟೋಬರ್ 1 ವಿಶೇಷ ದಿನವಂತೆ

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಖಡಕ್ ಪ್ರತಿಕ್ರಿಯೆಗಳ ಮೂಲಕವೇ ಚಿರಪರಿಚಿತ. ಅದರಲ್ಲೂ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಅವರು ಸಿಡಿದೆದ್ದಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ನಟಿ ಬಾಲಿವುಡ್‍ನಲ್ಲಿನ ಸ್ವಜನಪಕ್ಷಪಾತದ ಕುರಿತು ಧ್ವನಿ ಎತ್ತಿದ್ದರು. ಇದೆಲ್ಲ ಗದ್ದಲ ನಂತರ ಇದೀಗ ಅವರು ಅಕ್ಟೋಬರ್ 1 ವಿಶೇಷ ದಿನ ಎಂದು ಹೇಳಿಕೊಂಡಿದ್ದಾರೆ.

    ಮಣಿಕರ್ಣಿಕಾ ಸಿನಿಮಾದಲ್ಲಿ ಮಿಂಚಿದ್ದ ನಟಿ ಕಂಗನಾ ಬಳಿಕ ಹಲವು ಸಿನಿಮಾಗಳನ್ನು ಮಾಡಿದರೂ ಅಷ್ಟೇನು ಯಶಸ್ಸು ಕಾಣಲಿಲ್ಲ. ಆದರೆ ಇದೀಗ ಅವರು ವಿಶಿಷ್ಟ ಸಿನಿಮಾ ಮಾಡುತ್ತಿದ್ದು, ಈ ಚಿತ್ರದ ಕುರಿತು ಇಡೀ ದಕ್ಷಿಣ ಭಾರತದ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಚಿತ್ರ ಶೂಟಿಂಗ್ ಆರಂಭವಾಗುತ್ತಿದ್ದಂತೆ ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ವಿಧಿಸಲಾಯಿತು. ಹೀಗಾಗಿ ಚಿತ್ರೀಕರಣಕ್ಕೂ ಬ್ರೇಕ್ ಬಿತ್ತು. ಇದೀಗ ಕೇಂದ್ರ ಸರ್ಕಾರ ಅನ್‍ಲಾಕ್-5 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಚಿತ್ರೀಕರಣಕ್ಕೆ ಹಾಗೂ ಚಿತ್ರ ಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

    ಸ್ಯಾಂಡಲ್‍ವುಡ್, ಬಾಲಿವುಡ್ ಸೇರಿದಂತೆ ಎಲ್ಲ ಭಾಷೆಗಳ ಚಿತ್ರೀಕರಣಗಳು ಗರಿಗೆದರಿವೆ. ಬಹುತೇಕ ನಟನರು ಇದೀಗ ಶೂಟಿಂಗ್‍ನಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೀಗ ಕಂಗನಾ ಸಹ ತಮ್ಮ ವಿಶಿಷ್ಟ ಸಿನಿಮಾದ ಚಿತ್ರೀಕರಣವನ್ನು ಏಳು ತಿಂಗಳ ಬಳಿಕ ಮತ್ತೆ ಆರಂಭಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಕಂಗನಾ ಶೂಟಿಂಗ್‍ಗೆ ತೆರಳುತ್ತಿರುವ ಸಂತಸವನ್ನು ಹಂಚಿಕೊಂಡಿದ್ದಾರೆ.

    ಆತ್ಮೀಯ ಸ್ನೇಹಿತರೇ ಇಂದು ನನಗೆ ತುಂಬಾ ವಿಶೇಷವಾದ ದಿನ, 7 ತಿಂಗಳ ಬಳಿಕ ಮತ್ತೆ ಕೆಲಸ ಆರಂಭಿಸುತ್ತಿದ್ದೇನೆ. ನನ್ನ ಅತ್ಯಂತ ಮಹತ್ವಾಂಕ್ಷೆಯ ದ್ವಿಭಾಷಾ ಚಿತ್ರ ತಲೈವಿಗಾಗಿ ದಕ್ಷಿಣ ಭಾರತದತ್ತ ಪ್ರಯಾಣ ಬೆಳೆಸಿದ್ದೇನೆ. ಸಾಂಕ್ರಾಮಿಕ ರೋಗದ ಈ ಪರೀಕ್ಷೆ ಸಮಯದಲ್ಲಿ ನಿಮ್ಮ ಆಶೀರ್ವಾದ ಇರಲಿ. ಪ್ರಯಾಣ ಬೆಳೆಸುವುದಕ್ಕೂ ಮುನ್ನ ಬೆಳಗ್ಗೆ ಹಾಗೆ ತೆಗೆದ ಸೆಲ್ಫಿಗಳಿವು. ಇವುಗಳನ್ನು ನೀವು ಇಷ್ಟಪಡುತ್ತೀರೆಂದು ಭಾವಿಸುತ್ತೇನೆ ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಚಿತ್ರೀಕರಣಕ್ಕೆ ತೆರಳುತ್ತಿರುವ ಸಂತಸ ಹಂಚಿಕೊಂಡಿದ್ದಾರೆ.

    ಕೇವಲ ಕಂಗನಾ ರಣಾವತ್ ಅವರಿಗೆ ಮಾತ್ರವಲ್ಲ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜೀವನಾಧಾರಿತ ಚಿತ್ರವಾಗಿರುವ ‘ತಲೈವಿ’ಗಾಗಿ ಇಡೀ ದಕ್ಷಿಣ ಭಾರತ ಕಾತರದಿಂದ ಕಾಯುತ್ತಿದೆ. ಸಿನಿಮಾದಲ್ಲಿ ಕಂಗನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹೇಗೆ ಮೂಡಿ ಬರಲಿದೆ ಕಾದು ನೋಡಬೇಕಿದೆ.

    ‘ತಲೈವಿ’ ಸಿನಿಮಾವನ್ನು ಎ.ಎಲ್.ವಿಜಯ್ ನಿರ್ದೇಶಿಸುತ್ತಿದ್ದು, ಬಾಹುಬಲಿ ಖ್ಯಾತಿಯ ಕೆ.ವಿ.ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಬರೆದಿದ್ದಾರೆ. ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ವಿಷ್ಣು ಇಂಧೂರಿ ಮತ್ತು ಶೈಲೇಶ್ ಆರ್.ಸಿಂಗ್ ನಿರ್ಮಿಸುತ್ತಿದ್ದಾರೆ. ಜಯಲಲಿತಾ ಪಾತ್ರವನ್ನು ಕಂಗನಾ ಮಾಡಿದರೆ, ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಕಾಣಿಸಿಕೊಳ್ಳುತ್ತಿದ್ದಾರೆ. ಕರುಣಾನಿಧಿ ಪಾತ್ರವನ್ನು ಪ್ರಕಾಶ್ ರೈ ನಿಭಾಯಿಸುತ್ತಿದ್ದಾರೆ. ಜಯಲಲಿತಾ ತಾಯಿ ಸಂಧ್ಯಾ ಪಾತ್ರವನ್ನು ಬಾಲಿವುಡ್ ನಟಿ ಭಾಗ್ಯಶ್ರೀ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬಹುತಾರಾಗಣವಿದ್ದು, ಜಯಲಲಿತಾ ಅವರ ಜೀವನವನ್ನು ಯಾವ ರೀತಿ ತೆರೆಯ ಮೇಲೆ ತರುತ್ತಾರೆ ಎಂಬ ಕುತೂಹಲ ಅಭಿಮಾನಿಗಳದ್ದು.

  • ಜೂ.ಜಯಲಲಿತಾರಂತೆ ಕಾಣಿಸಿಕೊಂಡ ಕಂಗನಾ ರಣಾವತ್

    ಜೂ.ಜಯಲಲಿತಾರಂತೆ ಕಾಣಿಸಿಕೊಂಡ ಕಂಗನಾ ರಣಾವತ್

    ಬೆಂಗಳೂರು: ತಮಿಳು ನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಜೀವನಾಧಾರಿತ ಚಿತ್ರ ಮಾಡುತ್ತಿರುವುದು ತಿಳಿದೇ ಇದೆ. ಅಲ್ಲದೆ ಅವರ ಬಯೋಪಿಕ್ ‘ತಲೈವಿ’ ಚಿತ್ರ ಘೋಷಣೆಯಾದಾಗಿನಿಂದ ಭಾರೀ ಚರ್ಚೆ ನಡೆಯುತ್ತಿದೆ. ಆರಂಭದಲ್ಲಿ ಜಯಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ನಡೆದರೆ. ನಂತರ ಚಿತ್ರ ಯಾವ ರೀತಿ ಇರುತ್ತೆ, ಪಾತ್ರವಾರ್ಗದಲ್ಲಿ ಯಾರಿರುತ್ತಾರೆ ಎಂಬೆಲ್ಲದರ ಕುರಿತು ತುಂಬಾ ಕುತೂಹಲ ಮೂಡಿತ್ತು. ಇದೀಗ ಚಿತ್ರ ತಂಡ ಮತ್ತೊಂದು ಫೋಟೊ ಬಿಡುಗಡೆ ಮಾಡಿದ್ದು, ಕ್ಯೂರಿಯಾಸಿಟಿ ಇನ್ನೂ ಹೆಚ್ಚಾಗಿದೆ.

    ಫೆಬ್ರವರಿ 24ರಂದು ಜಯಲಲಿತಾ ಜನ್ಮದಿನವಾಗಿದ್ದು, ಹೀಗಾಗಿ ‘ತಲೈವಿ’ ಚಿತ್ರತಂಡ ಅವರು ರಾಜಕೀಯ ಪ್ರವೇಶಿಸಿದ ಸಂದರ್ಭದ ಫೋಟೋ ರೀತಿಯಲ್ಲೇ ಕಂಗನಾ ಕಾಣಿಸಿಕೊಂಡಿರುವ ಫೋಟೋ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಕಂಗನಾ ಸಹೋದರಿ ರಂಗೊಲಿ ಚಾಂಡೆಲ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದು ಜಯಾ ಅಭಿಮಾನಿಗಳಲ್ಲಿನ ಕುತೂಹಲವನ್ನು ಇನ್ನೂ ಹೆಚ್ಚಿಸಿದೆ. ಜಯಲಲಿತಾ ಅವರು ಹರೆಯ ವಯಸ್ಸಿನಲ್ಲಿ ಯಾವ ರೀತಿ ಇದ್ದರೋ ಅದೇ ರೀತಿ ಕಂಗನಾ ರಣಾವತ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಜಯಾ ಅವರ ಹಳೆ ಫೋಟೋದಲ್ಲಿರುವಂತೆ ಕಪ್ಪು ಕೆಂಪು ಅಂಚಿನ ಬಿಳಿ ಸೀರೆ ಉಟ್ಟಿರುವ ಕಂಗನಾ, ತಲೆಗೂದಲನ್ನೂ ಅದೇ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಅಲ್ಲದೆ ಹಣೆಯ ಮೇಲೆ ಅಗಲವಾಗಿ ಕುಂಕುಮ ಹಚ್ಚಿಕೊಂಡು, ಅವರಂತೆಯೇ ಅಡಿಯಲ್ಲಿ ಕೆಂಪು ಅಡ್ಡಗೆರೆಯನ್ನೂ ಇಟ್ಟುಕೊಂಡಿದ್ದಾರೆ. ಜೊತೆಗೆ ಕಿವಿಯೋಲೆಯನ್ನೂ ಅದೇ ರೀತಿ ಧರಿಸಿದ್ದಾರೆ. ಅವರ ಹಳೆಯ ಫೋಟೋದಲ್ಲಿರುವಂತೆ ಕೆಳತುಟಿಯನ್ನು ಎಡಕ್ಕೆ ಓರೆಯಾಗಿಸಿ ಡಿಟ್ ಟೂ ಜಯಲಲಿತಾ ಅವರಂತೆಯೇ ಪೋಸ್ ಕೊಟ್ಟಿದ್ದಾರೆ. ಅವರ ಸ್ಮೈಲ್‍ನ್ನು ಸಹ ಅದೇ ರೀತಿ ನಿರ್ವಹಿಸಿದ್ದಾರೆ.

    ರಂಗೊಲಿಯವರು ತಮ್ಮ ಪೋಸ್ಟ್‍ನಲ್ಲಿ ಈ ಕುರಿತು ಬರೆದುಕೊಂಡಿದ್ದು, ಯಾವುದೇ ಎಫೆಕ್ಟ್ಸ್ ಇಲ್ಲದಿದ್ದರೂ ಜಯಾ ಅಮ್ಮನಂತೆ ಕಾಣುತ್ತಿದ್ದಾರೆ. ಆಘಾತಕಾರಿ, ದೃಢನಿರ್ಧಾರದಿಂದ ಎಲ್ಲವೂ ಸಾಧ್ಯ ಎಂದು ಹ್ಯಾಶ್ ಟ್ಯಾಗ್ ಮೂಲಕ ತಲೈವಿ ಎಂದು ಬರೆದುಕೊಂಡಿದ್ದಾರೆ.

    https://twitter.com/Rangoli_A/status/1231755826269868032

    ಸುಮಾರು 30ರ ಹರೆಯದ ಜಯಲಲಿತಾರ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದು, ಜಯಲಲಿತಾ ರಾಜಕೀಯ ಪ್ರವೇಶಿಸಿದ ಅವಧಿಯನ್ನು ಕಟ್ಟಿಕೊಡಲಿದ್ದಾರೆ. ನಟಿ, ಖ್ಯಾತ ನರ್ತಕಿಯೂ ಆಗಿದ್ದ ಜಯಲಲಿತಾರ ಸಿನಿಮಾ, ರಾಜಕೀಯ, ನೃತ್ಯ ಸೇರಿದಂತೆ ಅವರ ವೈವಿಧ್ಯಮಯ ಬದುಕನ್ನು ‘ತಲೈವಿ’ ಸಿನಿಮಾ ಕಟ್ಟಿಕೊಡಲಿದೆ. ಈ ಚಿತ್ರವನ್ನು ಎ.ಎಲ್.ವಿಜಯ್ ನಿರ್ದೇಶಿಸಿದ್ದು, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

    ಅಲ್ಲದೆ ಕೇವಲ ಫೋಟೋಗೆ ಪೋಸ್ ಕೊಟ್ಟಿದ್ದಲ್ಲ, ಈ ಚಿತ್ರಕ್ಕಾಗಿ ಕಂಗನಾ ರಣಾವತ್ ಹಾರ್ಡ್ ವರ್ಕ್ ಕೂಡ ಮಾಡಿದ್ದಾರೆ. ತಮಿಳು ಕಲಿತಿದ್ದಾರೆ, ಮಾತ್ರವಲ್ಲದೆ ಭರತನಾಟ್ಯ ತರಗತಿಗೂ ಸೇರಿ, ನೃತ್ಯ ಕಲಿತಿದ್ದಾರೆ. ಅಲ್ಲದೆ ಜಯಲಲಿತಾರಂತೆ ಕಾಣಿಸಲು ಗಂಟೆಗಟ್ಟಲೆ ಮೇಕಪ್ ಸೆಷನ್‍ಗಳಲ್ಲಿ ಪಾಲ್ಗೊಂಡಿದ್ದಾರಂತೆ. ಬಾಹುಬಲಿ ಹಾಗೂ ಮಣಿಕರ್ಣಿಕಾ ಸಿನಿಮಾಗಳಿಗೆ ಕಥೆ ಬರೆದಿರುವ ವಿಜಯೇಂದರ್ ಪ್ರಸಾದ್, ತಲೈವಿಗೂ ಕಥೆ ಬರೆದಿದ್ದಾರೆ. ವಿಷ್ಣುವರ್ದನ್ ಇಂದೂರಿ ಮತ್ತು ಶೈಲೇಶ್ ಸಿಂಗ್ ತಲೈವಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.