Tag: J.J. Perry

  • ಟಾಕ್ಸಿಕ್ ಭರ್ಜರಿ ಆ್ಯಕ್ಷನ್ ಶುರು, ಹಾಲಿವುಡ್‌ನಿಂದ ಬಂದ್ರು ಜೆಜೆ ಪೆರ‍್ರಿ

    ಟಾಕ್ಸಿಕ್ ಭರ್ಜರಿ ಆ್ಯಕ್ಷನ್ ಶುರು, ಹಾಲಿವುಡ್‌ನಿಂದ ಬಂದ್ರು ಜೆಜೆ ಪೆರ‍್ರಿ

    ಶ್ (Yash) ನಟಿಸಿ ನಿರ್ಮಿಸುತ್ತಿರುವ ಗ್ಲೋಬಲ್ ಚಿತ್ರ ಟಾಕ್ಸಿಕ್ (Toxic Cinema) ತಂಡ ಸಾಹಸ ಚಿತ್ರೀಕರಣವನ್ನು ಪ್ರಾರಂಭಿಸಿದೆ. ವಿಶೇಷ ಅಂದ್ರೆ ವಿಶ್ವಶ್ರೇಷ್ಠ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಜೆಜೆ ಪೆರ‍್ರಿ (JJ Perry) ಈ ಚಿತ್ರಕ್ಕಾಗಿ ಮೊದಲ ಬಾರಿ ಭಾರತಕ್ಕೆ ಬಂದಿದ್ದಾರೆ.

    ಮುಂಬೈನಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಏಕಕಾಲದಲ್ಲಿ ತಯಾರಾಗ್ತಿರುವ ಚಿತ್ರವಿದು. ನಟ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಜೆಜೆ ಪೆರ‍್ರಿ ವರ್ಕಿಂಗ್‌ಸ್ಕಿಲ್‌  ರಿವೀಲ್ ಆಗಿದೆ.

    ಲೆಜೆಂಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ‍್ರಿ ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ಸ್ ಟೀಮ್ ಜೊತೆಗೂಡಿ ಕೆಲಸ ಮಾಡ್ತಿರೋದೇ ಇಲ್ಲಿನ ವಿಶೇಷ. ಭಾರತೀಯರನ್ನೇ ಬಳಸಿಕೊಂಡು ಹಿಂದಿನ ಸ್ಟಂಟ್ಸ್‌ಗಳಿಗಿಂತ ವಿಭಿನ್ನ ಪ್ರಯೋಗ ಮಾಡಲಿದ್ದಾರಂತೆ ಜೆಜೆ ಪೆರ‍್ರಿ. ಭರ್ತಿ 45 ದಿನಗಳ ಕಾಲ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ನೂತನ ದಾಖಲೆ ಬರೆಯಲಿದೆ ಟಾಕ್ಸಿಕ್. ಹಾಲಿವುಡ್‌ಗೆ ಸೆಡ್ಡು ಹೊಡೆಯುವಂತಹ ಸ್ಟಂಟ್ಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ ರಾಕಿಂಗ್ ಸ್ಟಾರ್ ಹಾಗೂ ಯಶ್ ಗೀತು ಮೋಹನ್ ದಾಸ್ ತಂಡ. ಯಶ್ ಒಡೆತನದ ಮಾನ್‌ಸ್ಟರ್ ಮೈಂಡ್ ಹಾಗೂ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಬಿಗ್ ಬಜೆಟ್ ಸಿನಿಮಾ ಟಾಕ್ಸಿಕ್.

  • ಬಾಲಿವುಡ್ ಆಳಿ, ಹಾಲಿವುಡ್ ಅಂಗಳಕ್ಕೂ ಕಾಲಿಟ್ರಾ ರಾಕಿಭಾಯ್ ಯಶ್

    ಬಾಲಿವುಡ್ ಆಳಿ, ಹಾಲಿವುಡ್ ಅಂಗಳಕ್ಕೂ ಕಾಲಿಟ್ರಾ ರಾಕಿಭಾಯ್ ಯಶ್

    ಕೆಜಿಎಫ್ (KGF) ಸಿನಿಮಾದ ಮೂಲಕ ಭಾರತೀಯ ಸಿನಿಮಾ ರಂಗವನ್ನೇ ತನ್ನತ್ತ ಸೆಳೆದುಕೊಂಡಿರುವ ನಟ ಯಶ್, ಮುಂದಿನ ಹೆಜ್ಜೆಯನ್ನು ಜಾಣ್ಮೆಯಿಂದ ಇಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಕೆಜಿಎಫ್ ಸಿನಿಮಾಗಿಂತಲೂ ಒಂದು ಹೆಜ್ಜೆ ಮುಂದಿಡುವ ಜಾಣ್ಮೆ ನಡೆಯದು ಎಂದು ಅವರ ಆಪ್ತರು ಮಾತನಾಡಿಕೊಳ್ಳುತ್ತಿದ್ದರು. ಈ ಮಾತುಗಳಿಗೆ ಪುಷ್ಠಿ ಅನ್ನುವಂತೆ ಯಶ್ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಹಾಲಿವುಡ್ (Hollywood)ನ ಖ್ಯಾತ ಸಾಹಸ ನಿರ್ದೇಶಕ ಹಾಗೂ ಸಿನಿಮಾ ನಿರ್ದೇಶಕ ಜೆ.ಜೆ. ಪೆರ್ರಿಯನ್ನು (J.J. Perry) ಭೇಟಿ ಮಾಡಿದ್ದಾರೆ.

    ಹಾಲಿವುಡ್ ಸಿನಿಮಾ ರಂಗದಲ್ಲಿ ಜೆಜೆ ಪೆರ್ರಿ ಅವರದ್ದು ಬಹುದೊಡ್ಡ ಹೆಸರು. ಸಾವಿರಾರು ಕೋಟಿ ಬಜೆಟ್ ಸಿನಿಮಾಗಳಿಗೆ ಸ್ಟಂಟ್ ನಿರ್ದೇಶಕರಾಗಿ ಹಾಗೂ ಇತ್ತೀಚಿನ ದಿನಗಳಲ್ಲಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಆ್ಯಕ್ಷನ್ ದೃಶ್ಯಗಳಿಗೆ ಹೇಳಿ ಮಾಡಿಸಿದ ನಿರ್ದೇಶಕ ಜೆಜೆ. ಸದ್ದಿಲ್ಲದೇ ಯಶ್ (Yash) ಅವರು ಜೆಜೆ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಭೇಟಿ ಅಮೆರಿಕಾದಲ್ಲಿ ನಡೆದದ್ದು, ಕೆಲ ದಿನಗಳ ಹಿಂದೆಯಷ್ಟೇ ಈ ಭೇಟಿ ನಡೆದಿದೆ. ಅವರನ್ನು ಖುದ್ದಾಗಿ ಭೇಟಿ ಆಗಲೆಂದು ಯಶ್ ಅಮೆರಿಕಾಗೆ ತೆರಳಿದ್ದರು. ಇದನ್ನೂ ಓದಿ:ಗನ್ ಹಿಡಿದು ಫೀಲ್ಡಿಗಿಳಿದ ರಾಕಿಭಾಯ್: ಮುಂದಿನ ಸಿನಿಮಾಗೆ ಯಶ್ ತಯಾರಿ

    ಅಂದುಕೊಂಡಂತೆ ಆಗಿದ್ದರೆ ನರ್ತನ್ (Narthan) ನಿರ್ದೇಶನದಲ್ಲಿ ಯಶ್ ನಟಿಸಬೇಕಿತ್ತು. ಇನ್ನೇನು ಈ ಸಿನಿಮಾ ಸೆಟ್ಟೇರಲಿದೆ ಎನ್ನುವ ಹೊತ್ತಿನಲ್ಲಿ ಯಶ್ ಮನಸು ಬದಲಾಯಿಸಿದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಸದ್ಯಕ್ಕೆ ಈ ಕಾಂಬಿನೇಷನ್ ನಲ್ಲಿ ಸಿನಿಮಾ ಅನುಮಾನ. ಈ ನಡುವೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಅವರ ಹೆಸರೂ ಕೇಳಿ ಬಂತು. ಶಂಕರ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಹಾಗಾದರೆ, ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ.

    ಅಮೆರಿಕಾಗೆ (America) ಹೋಗಿ ಜೆಜೆ ಅವರನ್ನು ಯಶ್ ಭೇಟಿ ಮಾಡಿ ಬಂದಿದ್ದಾರೆ. ಜೆಜೆ ಎದುರು ಗನ್ ಶೂಟ್ ಮಾಡಿ, ತಾನೆಷ್ಟು ಶಾರ್ಪ್ ಎನ್ನುವುದನ್ನು ತೋರಿಸಿದ್ದಾರೆ. ಜೆಜೆ ಭೇಟಿಯ ಹಿಂದೆ ಹೊಸ ಸಿನಿಮಾದ ಮಾತುಕತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಯಶ್ ಹಾಲಿವುಡ್ ಗೆ ಹೋಗುತ್ತಾರಾ ಅಥವಾ ಭಾರತೀಯ ಸಿನಿಮಾ ರಂಗಕ್ಕೆ ಅವರನ್ನೇ ಕರೆತರುತ್ತಾರಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]