Tag: J C Madhuswamy

  • ಕೇಂದ್ರ, ರಾಜ್ಯ ಸರ್ಕಾರಗಳ ಕಾಯ್ದೆ-ಕಾನೂನು ಕನ್ನಡ ಭಾಷೆಯಲ್ಲೇ ಲಭ್ಯ; 74 ಅಧಿನಿಯಮಗಳ ಕನ್ನಡ ಆವೃತ್ತಿ ಲೋಕಾರ್ಪಣೆ

    ಕೇಂದ್ರ, ರಾಜ್ಯ ಸರ್ಕಾರಗಳ ಕಾಯ್ದೆ-ಕಾನೂನು ಕನ್ನಡ ಭಾಷೆಯಲ್ಲೇ ಲಭ್ಯ; 74 ಅಧಿನಿಯಮಗಳ ಕನ್ನಡ ಆವೃತ್ತಿ ಲೋಕಾರ್ಪಣೆ

    ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆ ಮತ್ತು ಕಾನೂನುಗಳು ಜನಸಾಮಾನ್ಯರಿಗೆ ಸ್ಥಳೀಯ ಭಾಷೆಯಲ್ಲಿ ಒದಗಿಸುವ ಮೂಲಕ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾದ 42 ಕೇಂದ್ರ ಅಧಿನಿಯಮಗಳು ಹಾಗೂ 32 ರಾಜ್ಯ ಅಧಿನಿಯಮಗಳ ಕನ್ನಡ ಆವೃತ್ತಿಗಳನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (J.C.Madhuswamy) ಲೋಕಾರ್ಪಣೆ ಮಾಡಿದರು.

    ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ರಾಜಭಾಷಾ (ವಿಧಾಯೀ) ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯದಿಂದ ಈ ಅಧಿನಿಯಮಗಳ ಕನ್ನಡ ಆವೃತ್ತಿ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯಗೆ ವರುಣಾ ಟಿಕೆಟ್‌ – ಡಿಕೆಶಿ ಘೋಷಣೆ

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನಿನ ಅನುಷ್ಠಾನ ಮತ್ತು ಪಾಲನೆ ಮಾಡಬೇಕಾದರೇ ಅದರ ಅರಿವು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಸ್ಥಳೀಯ ಭಾಷೆಯಲ್ಲಿ ಒದಗಿಸಿ ಅರ್ಥೈಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿನಿಯಮಗಳನ್ನು ಕನ್ನಡಕ್ಕೆ ಭಾಷಾಂತರಗೊಳಿಸಲಾಗಿದೆ ಎಂದರು.

    ಜನಸಾಮಾನ್ಯರಿಗೆ ತಮ್ಮ ಸ್ಥಳೀಯ ಭಾಷೆಗಳಲ್ಲಿ ಕಾನೂನುಗಳನ್ನು ತಿಳಿದುಕೊಳ್ಳಲು ಹಾಗೂ ನ್ಯಾಯಾಲಯಗಳಲ್ಲಿ, ನ್ಯಾಯಾಧೀಕರಣಗಳಲ್ಲಿ ಸರ್ಕಾರದ ಕಚೇರಿಗಳಲ್ಲಿ ಕನ್ನಡದ ಬಳಕೆಯನ್ನು ಸುಗಮಗೊಳಿಸಲು ಈ ಅಧಿನಿಯಮಗಳು ತುಂಬಾ ಸಹಕಾರಿಯಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿನಿಯಮಗಳನ್ನು ಭಾಷಾಂತರಿಸುವ ಕೆಲಸ ವ್ಯಾಪಕವಾಗಿ ಆಗಬೇಕಿದೆ ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ ಅನ್ನೋದಕ್ಕೆ ಅಧಿಕಾರಿಗಳ ಬೀದಿ ರಂಪ ಸಾಕ್ಷಿ – ಸುರ್ಜೆವಾಲಾ

    ಕೇಂದ್ರ ಮತ್ತು ರಾಜ್ಯದ ಅಧಿನಿಯಮಗಳನ್ನು ಭಾಷಾಂತರಿಸುವುದಕ್ಕೆ ಕರ್ನಾಟಕದಲ್ಲಿ ವಿಶೇಷ ಒತ್ತು ನೀಡಲಾಗಿದ್ದು, ಕೇಂದ್ರ ಸರ್ಕಾರವೇ ಶ್ಲಾಘಿಸಿದೆ. ಜನರು ಕಾಯ್ದೆ, ಕಾನೂನುಗಳನ್ನು ಹೆಚ್ಚೆಚ್ಚು ತಿಳಿದುಕೊಂಡಲ್ಲಿ ಅವುಗಳ ಪರಿಣಾಮಕಾರಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಕರ್ನಾಟಕದ ನ್ಯಾಯಾಲಯಗಳಲ್ಲಿ ಕನ್ನಡದ ತೀರ್ಪುಗಳು ಹೊರಬರಲು ಹಾಗೂ ಆಡಳಿತ ವ್ಯವಹಾರಗಳಲ್ಲಿ ಮತ್ತು ಮೊಕದ್ದಮೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲೂ ಕೂಡ ಕನ್ನಡದ ಬಳಕೆ ಸಮರ್ಪಕವಾಗಿ ಆಗಬೇಕಾಗಿದೆ ಎಂದರು. ಇದನ್ನೂ ಓದಿ: ಸೈಬರ್ ಪ್ರಕರಣ ತಡೆಯಲು ಕಠಿಣ ಕ್ರಮ: ಆರಗ ಜ್ಞಾನೇಂದ್ರ

    ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ರಾಜಭಾಷಾ(ವಿಧಾಯೀ) ಆಯೋಗದ ಅಧ್ಯಕ್ಷರಾದ ಜಿ.ಶ್ರೀಧರ್ ಮಾತನಾಡಿ, ರಾಜಭಾಷಾ ಆಯೋಗವು ಇಲ್ಲಿಯವರೆಗೆ 371 ಕೇಂದ್ರ ಮತ್ತು 219 ರಾಜ್ಯ ಅಧಿನಿಯಮಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ಪ್ರಕಟಿಸಿದೆ. ಭಾರತ ಸಂವಿಧಾನವನ್ನು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸ್ಥಳೀಯ ಭಾಷೆಯಲ್ಲಿ ಭಾಷಾಂತರಿಸಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ನಮ್ಮ ಆಯೋಗಕ್ಕೆ ಸಲ್ಲುತ್ತದೆ ಎಂದು ಹೇಳಿದರು.

    ದೇಶದ ಪ್ರಮುಖ ಕಾನೂನುಗಳಾದ ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಹಾಗೂ ಭಾರತ ಸಾಕ್ಷ್ಯ ಅಧಿನಿಯಮಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ದ್ವಿಭಾಷೆಯಲ್ಲಿ ಪ್ರಕಟಿಸಲಾಗಿದೆ. ಪರಿಷ್ಕೃತ ಇಂಗ್ಲಿಷ್ ಕನ್ನಡ ಕಾನೂನು ಪದಕೋಶ ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತರಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕೆಲಸ ಎಲ್ಲ ರಾಜ್ಯಗಳಲ್ಲಾಗಿದ್ದರೆ ಸ್ಥಳೀಯ ಭಾಷೆಯಲ್ಲಿ ನ್ಯಾಯಾಲಯ ತೀರ್ಪುಗಳನ್ನು ಪ್ರಕಟಿಸಲು ಸಹಾಯಕವಾಗುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದನ್ನು ಇದೇ ಸಂದರ್ಭದಲ್ಲಿ ತಿಳಿಸಿದರು.

    ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ ನಾರಾಯಣ, ಶಾಸಕ ದಿನಕರಶೆಟ್ಟಿ, ಭಾಷಾಂತರ ನಿರ್ದೇಶನಾಲಯದ ನಿರ್ದೇಶಕ ಎಂ.ವೆಂಕಟೇಶ, ರಾಜಭಾಷಾ(ವಿಧಾಯೀ) ಆಯೋಗದ ಸದಸ್ಯರು ಇದ್ದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಲ್ಲಾ ಹಗರಣವನ್ನು ಬಿಚ್ಚಿಡುತ್ತೇನೆ – ಮಾಧುಸ್ವಾಮಿ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಸುರೇಶ್ ಬಾಬು

    ಎಲ್ಲಾ ಹಗರಣವನ್ನು ಬಿಚ್ಚಿಡುತ್ತೇನೆ – ಮಾಧುಸ್ವಾಮಿ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಸುರೇಶ್ ಬಾಬು

    ತುಮಕೂರು: ವಿಧಾನಸಭಾ ಚುನಾವಣಾ (Karnataka Assembly Election 2023) ಕಾವು ತುಮಕೂರಿನಲ್ಲೂ (Tumakuru) ಜೋರಾಗಿದೆ. ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ (J.C Madhuswamy) ಮತ್ತು ಮಾಜಿ ಶಾಸಕ ಸುರೇಶ್ ಬಾಬು (Suresh Babu) ಪರಸ್ಪರ ವಾಕ್ಸಮರಕ್ಕೆ ಇಳಿದಿದ್ದಾರೆ.

    ಮಾಧುಸ್ವಾಮಿ ನನ್ನನ್ನು ವೈಯಕ್ತಿಕವಾಗಿ ನಿಂದನೆ ಮಾಡುತಿದ್ದು ಅದು ಅವರ ಸಂಸ್ಕೃತಿ ತೋರಿಸುತ್ತಿದೆ. ಇದೇ ರೀತಿ ವೈಯಕ್ತಿಕ ನಿಂದನೆ ಮಾಡುತ್ತಿದ್ದರೆ ಮಾಧುಸ್ವಾಮಿ ಅವರ ಒಂದೊಂದು ಹಗರಣವನ್ನು ಬಿಚ್ಚಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಒಕ್ಕಲಿಗರ ಭದ್ರಕೋಟೆಯಲ್ಲಿ ಮತ್ತೆ ಡಿಕೆಶಿ ಸಿಎಂ ಜಪ- ಬಸವನ ಕಿವಿಯಲ್ಲಿ ತಮ್ಮ ಕೋರಿಕೆ ಹೇಳಿದ್ರಾ ಶಿವಕುಮಾರ್?

    ನೀವು ಕೆಎಂಎಫ್‍ನಲ್ಲಿ (KMF) ಇದ್ದಾಗಿನಿಂದ ಹಿಡಿದು, ಏನೇನಾಯ್ತು ಎಲ್ಲಾ ಮಾಹಿತಿ ಇದೆ. ನಿಮ್ಮನ್ನು ಯಾರು ರಾಜಕೀಯಕ್ಕೆ ತಂದ್ರು, ನೀವೇನು ಹುಟ್ಟುತ್ತಲೇ ಬೃಹಸ್ಪತಿ ಅಲ್ಲ. ನಾಗಮಂಗಲದ ಒಬ್ಬ ಮುಖಂಡ ಇದ್ರು, ಅವರ ಹೆಸರು ಕೂಡ ಗೊತ್ತು. ಅವರು ನಿಮಗೆ ಏನೇನು ಧಾರೆ ಎರೆದ್ರು ಎಲ್ಲವೂ ಕೂಡ ನನಗೆ ಗೊತ್ತಿದ್ದು ನೀವು ಇದೇ ರೀತಿ ವೈಯಕ್ತಿಕ ನಿಂದನೆ ಮುಂದುವರಿಸಿದರೆ ಎಲ್ಲಾ ರಹಸ್ಯವನ್ನೂ ಬಿಚ್ಚಿಡಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎಲ್ಲಾ ನಾನೇ ನಿರ್ಧಾರ ಮಾಡ್ತೀನಿ- ದೊಡ್ಡಗೌಡ್ರ ಗುಟುರಿಗೆ ಎಲ್ಲರೂ ಗಪ್ ಚಿಪ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾವೆಲ್ಲಾ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ – ಬಿಜೆಪಿಯ ದೌರ್ಬಲ್ಯ ಹೇಳಿಕೊಂಡ ಮಾಧುಸ್ವಾಮಿ

    ನಾವೆಲ್ಲಾ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ – ಬಿಜೆಪಿಯ ದೌರ್ಬಲ್ಯ ಹೇಳಿಕೊಂಡ ಮಾಧುಸ್ವಾಮಿ

    – ನಾವು ಕಾಂಗ್ರೆಸ್‍ನವರ ರೀತಿ ಅಗ್ರೇಸಿವ್ ಆಗಿ ಮಾತನಾಡುತ್ತಿಲ್ಲ
    – ಎದುರಾಳಿ ಸಿ.ಬಿ. ಸುರೇಶ್ ಬಾಬು ತನ್ನ ಸರಿಸಮಾನನಲ್ಲ

    ತುಮಕೂರು: ನಾವು ರಾಜ್ಯದಲ್ಲಿ ಮತ್ತೇ ಬಿಜೆಪಿ (BJP) ಸರ್ಕಾರ ತರಲೇಬೇಕು. ನಾವೆಲ್ಲ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ. ಸರ್ಕಾರದ ವಿರುದ್ಧ ಮಾತನಾಡಿದಾಗ ನಾವೇ ಜಿಜ್ಞಾಸೆಗೆ ಒಳಗಾಗುತಿದ್ದೇವೆ. ನೀವೇನು ಎಂದು ನಾವು ವಾಪಸ್ ಕೇಳುತ್ತಿಲ್ಲ. ವಿರುದ್ಧ ಮಾತನಾಡಿದವರಿಗೆ ನಾವು ಮರು ಪ್ರಶ್ನೆ ಹಾಕಲ್ಲ. ನಾವು ಕಾಂಗ್ರೆಸ್‍ನವರ (Congress) ರೀತಿ ಅಗ್ರೇಸಿವ್ ಆಗಿ ಮಾತನಾಡುತ್ತಿಲ್ಲ ಎಂದು ತಮ್ಮ ಪಕ್ಷದ ದೌರ್ಬಲ್ಯವನ್ನು ಸಚಿವ ಮಾಧುಸ್ವಾಮಿ (Madhuswamy) ಹೊರಹಾಕಿದ್ದಾರೆ.

    ಚಿಕ್ಕನಾಯಕನಹಳ್ಳಿ ತಾಲೂಕಿನ ಮತ್ತಿಘಟ್ಟದಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ತಮ್ಮ ಪಕ್ಷದ ದೌರ್ಬಲ್ಯವನ್ನು ಮಾಧುಸ್ವಾಮಿ ಹೇಳಿಕೊಂಡಿದ್ದಾರೆ. ನಾವು ಮತ್ತೇ ಸರ್ಕಾರ ತರಲೇ ಬೇಕು. ನಾವೆಲ್ಲ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ. ಯಾರೋ ಬಾಯಿಗೆ ಬಂದಹಾಗೆ ಸರ್ಕಾರದ ವಿರುದ್ಧ ಮಾತನಾಡಿದಾಗ ನಾವೇ ಜಿಜ್ಞಾಸೆಗೆ ಒಳಗಾಗುತಿದ್ದೇವೆ. ನೀವೇನು ಎಂದು ನಾವು ವಾಪಸ್ ಕೇಳುತ್ತಿಲ್ಲ. ವಿರುದ್ಧ ಮಾತನಾಡಿದವರಿಗೆ ಮರು ಪ್ರಶ್ನೆ ಹಾಕಲ್ಲ. ನಾವು ಕಾಂಗ್ರೆಸ್‍ನವರ ರೀತಿ ಅಗ್ರೇಸಿವ್ ಆಗಿ ಮಾತನಾಡುತ್ತಿಲ್ಲ. ನಾವು ಗಟ್ಟಿ ಧ್ವನಿಯಲ್ಲಿ ನಮ್ಮ ಸಾಧನೆಯನ್ನು ಹೇಳಿಕೊಳ್ಳಬೇಕಾಗಿದೆ. ಆಗ ಅವರು ಬಾಯಿ ಮುಚ್ಚಿಕೊಳ್ತಾರೆ. ವಿರೋಧಿಗಳನ್ನು ಆಡೋಕೆ ಬಿಟ್ಟರೆ ಅವರು ಆಡ್ತಾನೆ ಇರುತ್ತಾರೆ. ಅಮಾಯಕ ಜನರಿಗೆ ವಿರೋಧಿಗಳು ಹೇಳೋದೆ ಸತ್ಯ ಎನಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಅಜ್ಮೀರ್ ದರ್ಗಾಗೆ ರೆಡ್ಡಿ ಭೇಟಿ – ಕಾಂಗ್ರೆಸ್ ಪಾಳಯಕ್ಕೆ ಮರ್ಮಾಘಾತ

    ಕೋರ್ಟ್‍ನಲ್ಲಿ ಎದುರು ಪಾರ್ಟಿ ವಿಚಾರಣೆಗೆ ಹಾಜರಾಗದೇ ಇದ್ರೆ ಇನ್ನೊಂದು ಪಾರ್ಟಿ ಪರ ಆದೇಶ ಆಗುತ್ತದೆ. ನಮ್ಮ ಪಕ್ಷದಲ್ಲಿ ಎಕ್ಸ್ ಪಾರ್ಟಿ ಡಿಸಿಷನ್ ಆಗಬಾರದು. ಹಗಲು ಕಳ್ಳರು, ಬೆಳಗ್ಗೆ ಕನ್ನ ಹಾಕಿದವರು ರಾತ್ರಿ ಕಳ್ಳನ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‍ನವರೇ ಹಗಲು ಗಳ್ಳರು ಇವರು ನಮ್ಮ ಸುದ್ದಿ ಮಾತಾಡೋ ಸ್ಥಿತಿ ನಿರ್ಮಾಣ ಆಗಿದೆ. ಚಿಕ್ಕನಾಯಕನಹಳ್ಳಿಯಲ್ಲಿ ಅಭಿವೃದ್ಧಿ ಪದದ ಕಾಗುಣಿತ ಗೊತ್ತಿಲ್ಲದ ವ್ಯಕ್ತಿ ನನ್ನ ಎದುರಾಳಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಹೊನ್ನಾ ನಾಯಕ ಮಾತಿಗೆ ತೀವ್ರ ಅಸಮಾಧಾನ- ಸಭೆ ಮಧ್ಯದಲ್ಲೇ ಹೊರಟು ಹೋದ ಶಾಸಕ

    ಹಾಗಾಗಿ ನಾನು ಸಿದ್ದರಾಮಯ್ಯನವರ (Siddaramaiah) ಬಳಿ ಕೇಳಿದ್ದೇನೆ. ನಿವೇ ಚಿಕ್ಕನಾಯಕನಹಳ್ಳಿಯಿಂದ ಬಂದು ಸ್ಪರ್ಧೆ ಮಾಡಿ ಎಂದು ಆಗ ಸಮಬಲದ ಹೋರಾಟ ನಡೆಯುತ್ತದೆ. ಇಬ್ಬರೂ ಸೆಣಸಾಡಲು ಗೌರವ ಇರುತ್ತದೆ. ಇಬ್ಬರು ಸರಿಯಾಗಿ ಕುಸ್ತಿ ಆಡಬಹುದು. ಏನೂ ಗೊತ್ತಿಲ್ಲದವರ ಜೊತೆ ನಾನು ಸ್ಪರ್ಧೆ ಮಾಡೋಕೆ ನಿಂತಿದ್ದು ಯಾವ ಜನ್ಮದ ಪಾಪನೋ ಇಂತಹ ಕೆಟ್ಟ ಸ್ಥಿತಿ ನನಗೆ ಬರಬಾರದಿತ್ತು. ಎದುರಾಳಿ ಮಾಜಿ ಶಾಸಕ ಸಿ.ಬಿ. ಸುರೇಶ್ ಬಾಬು ತನ್ನ ಸರಿಸಮಾನನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಜೆಡಿಎಸ್ (JDS) ವಿರುದ್ಧವೂ ಗುಡುಗಿದ ಮಾಧುಸ್ವಾಮಿ, ದೇವೇಗೌಡರು (H.D DeveGowda) ತುಮಕೂರಿಗೆ ಹೇಮಾವತಿ ನೀರನ್ನು ಕೊಡದೇ ಮೋಸ ಮಾಡಿದವರು. ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಹೇಳಿಕೆಯ ಹಳೆಯ ಪೇಪರ್ ಕಟ್ಟಿಂಗ್ ತೋರಿಸಿದ್ದೆ. ಹಾಗಾಗಿಯೇ ಜಿಲ್ಲೆಯ ಜನರು ದೇವೇಗೌಡರನ್ನು ಸೋಲಿಸಿದರು. ಇಷ್ಟೆಲ್ಲಾ ಮಾಡಿಯೂ ಕುಮಾರಸ್ವಾಮಿಯವರು ಚಿಕ್ಕನಾಯಕನಹಳ್ಳಿಗೆ ಟೂರ್ ಹಾಕ್ತಾರೆ. ಮಾನ ಮರ್ಯಾದೆ ಇದ್ದವರು ಯಾರಾದರೂ ಚಿಕ್ಕನಾಯಕನಹಳ್ಳಿಗೆ ಬರಬಹುದಾ? ಇಲ್ಲಿಗೆ ಬಂದು ನನ್ನ ವಿರುದ್ಧ ಮಾತನಾಡುತ್ತಾರೆ. ಪಂಚರತ್ನ ಯಾತ್ರೆಯಲ್ಲಿ ನನ್ನ ವಿರುದ್ಧ ಭಾಷಣ ಮಾಡುತ್ತಾರೆ. ತಾಲೂಕು ಅಭಿವೃದ್ಧಿ ಆಗಿಲ್ಲ ಅಂತೆ, ನಾನು ಅಭಿವೃದ್ಧಿ ಆಗಿದ್ದೇನೆ ಅಂತೆ. ನಮ್ಮದು ಇವ್ರಂಗೆ ದೋಚಿದ್ದು ಬಾಚಿದ್ದು ಪ್ರಕರಣಗಳಿಲ್ಲ. ಅಪ್ಪ, ಮಕ್ಕಳು, ಮೊಮ್ಮಕ್ಕಳು ಎಲ್ಲಾ ದೋಚೋಕೆ ಶುರುಮಾಡಿದವರು ಚಿಕ್ಕನಾಯಕನಹಳ್ಳಿಗೆ ಬಂದು ಭಾಷಣ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೆ.17ಕ್ಕೆ ರಾಜ್ಯ ಬಜೆಟ್‌ ಮಂಡನೆ – ಜೆ.ಸಿ.ಮಾಧುಸ್ವಾಮಿ

    ಫೆ.17ಕ್ಕೆ ರಾಜ್ಯ ಬಜೆಟ್‌ ಮಂಡನೆ – ಜೆ.ಸಿ.ಮಾಧುಸ್ವಾಮಿ

    ಬೆಂಗಳೂರು: 2023-24ನೇ ಸಾಲಿನ ಬಜೆಟ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರವರಿ 17 ರಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ರಾಜ್ಯ ಬಜೆಟ್ (Karnataka Budget 2023) ಮಂಡನೆ ಮಾಡಲಿದ್ದಾರೆ.

    ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆಗೆ ದಿನಾಂಕ ನಿಗದಿ ಮಾಡಲಾಯ್ತು. ಕ್ಯಾಬಿನೆಟ್ ಬಳಿಕ ಸುದ್ದಿಗೋಷ್ಟಿ ನಡೆಸಿದ ಮಾಧುಸ್ವಾಮಿ (J.C.Madhuswamy) ಅಧಿವೇಶನದ ಬಗ್ಗೆ ಮಾಹಿತಿ ನೀಡಿದರು. ಚುನಾವಣೆ ವರ್ಷ ಅಗಿರುವುದರಿಂದ ಈ ಬಾರಿ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನವನ್ನ ಏಕಕಾಲದಲ್ಲಿ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

    ಫೆಬ್ರವರಿ 10 ರಂದು ಜಂಟಿ ಅಧಿವೇಶನ ಪ್ರಾರಂಭವಾಗಲಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ‌ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆಬ್ರವರಿ 17 ರಂದು ಸಿಎಂ ಬೊಮ್ಮಾಯಿ‌ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: 200 ಯೂನಿಟ್‌ ವಿದ್ಯುತ್‌, ಗೃಹಿಣಿಗೆ 2 ಸಾವಿರ ರೂ.: ಗ್ಯಾರಂಟಿ ಯೋಜನೆಗೆ ಷರತ್ತು ಪ್ರಕಟಿಸಿದ ಕಾಂಗ್ರೆಸ್‌

    ಎಷ್ಟು ದಿನ ಅಧಿವೇಶನ ನಡೆಸಬೇಕು ಅಂತ ತೀರ್ಮಾನ ಮಾಡಿಲ್ಲ. ಬಿಎಸಿ ಸಭೆಯಲ್ಲಿ ಸಮಯ ನಿಗದಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಸದ ಬಸವರಾಜ್ ನಮ್ಮವರಲ್ಲ: ಮಾಧುಸ್ವಾಮಿ

    ಸಂಸದ ಬಸವರಾಜ್ ನಮ್ಮವರಲ್ಲ: ಮಾಧುಸ್ವಾಮಿ

    ತುಮಕೂರು: ಯಾರೋ ಹುಚ್ಚುಚ್ಚಾಗಿ ಮಾತನಾಡಿದರೆ ಅದಕ್ಕೆ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಅಷ್ಟಕ್ಕೂ ಸಂಸದ ಬಸವರಾಜ್ ನಮ್ಮವರಲ್ಲ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಸಚಿವ ಬೈರತಿ ಬಸವರಾಜ್ ಹಾಗೂ ಸಂಸದ ಜಿ.ಎಸ್. ಬಸವರಾಜ್ ಅವರು ಸುದ್ದಿಗೋಷ್ಠಿ ಸಂದರ್ಭದಲ್ಲಿ ಮಾಧುಸ್ವಾಮಿ ವಿರುದ್ಧ ಮಾತನಾಡಿರುವುದರ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾನು ಆ ಸುದ್ದಿಗೋಷ್ಠಿಗೆ ಹೋಗಿದ್ದೆ. ಆದರೆ 12 ಗಂಟೆಗೆ ಕ್ಯಾಬಿನೆಟ್ ಇರುವುದರಿಂದ ಸಮಯವಾಗುತ್ತದೆ. 9.30ಗೆ ಹೊರಡಬೇಕು ಎಂದು ಮೊದಲೇ ಹೇಳಿದ್ದೆ. ಆದರೂ ಕಾರ್ಯಕ್ರಮದ ನಿರ್ವಾಹಕರು 10 ಗಂಟೆಯಾದರೂ ಸಭೆ ಮುಗಿಸಲಿಲ್ಲ. ಇದರಿಂದಾಗಿ ನಾನು ಅಲ್ಲಿಂದ ಎದ್ದು ಬಂದಿದ್ದೇನೆ. ನನಗೆ ಬೇರೆಯವರ ವಿಚಾರ ತಿಳಿದಿಲ್ಲ ಎಂದು ಹೇಳಿದರು.

    ಎಲ್ಲರಿಗೂ ತಿಳಿದಂತೆ ರೋಡ್ ಬ್ಲಾಕ್ ಆಗಿರುವುದರಿಂದ ಕ್ಯಾಬಿನೆಟ್ ಮೀಟಿಂಗ್‌ಗೆ ತಡವಾಗುತ್ತದೆ ಎಂದು ಮುಂಚೆನೇ ತಿಳಿಸಿದ್ದೆ. 12 ಗಂಟೆಗೆ ಕ್ಯಾಬಿನೆಟ್ ಇದ್ದರೂ ಅರ್ಧ ಗಂಟೆ ಮುಂಚೆ ಅಲ್ಲಿ ಹೋಗಿರಬೇಕು. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಸಿಎಂ ಜೊತೆ ಮಾತನಾಡಬೇಕಿತ್ತು ಎಂದ ಅವರು, ಸಭೆಯಲ್ಲಿರುವಾಗಲೇ 2 ಬಾರಿ ಮುಖ್ಯಮಂತ್ರಿ ಅವರು ಕರೆ ಮಾಡಿದ್ದರು. ಆದ್ದರಿಂದ ಅರ್ಧಕ್ಕೆ ಎದ್ದು ಬಂದೆ. ಈ ಬಗ್ಗೆ ನನಗೆ ಹೆಚ್ಚು ಪ್ರತಿಕ್ರಿಯೆ ನೀಡಲು ಇಷ್ಟವಿಲ್ಲ ಎಂದರು. ಇದನ್ನೂ ಓದಿ:  ನಮ್ಮ ಜಿಲ್ಲೆಯನ್ನೇ ಹಾಳ್ ಮಾಡಿಬಿಟ್ಟಿದ್ದಾನೆ – ಮಾಧುಸ್ವಾಮಿ ವಿರುದ್ಧ ಬಸವರಾಜ್, ಬೈರತಿ ಗುಸು ಗುಸು

    ತುಮಕೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಸಂಸದ ಜಿ.ಎಸ್ ಬಸವರಾಜ್ ಹಾಗೂ ಸಚಿವ ಬೈರತಿ ಬಸವರಾಜ್ ಅವರು ಸಚಿವ ಮಾಧುಸ್ವಾಮಿ ಗುಸು, ಗುಸು ಎಂದು ಮಾತನಾಡಿಕೊಂಡಿದ್ದರು. ಈ ವೇಳೆ ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜು ಆರೋಪಗಳ ಸುರಿಮಳೆಯೇ ಹರಿಸಿದ್ದರು. ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದ್ದಾನಲ್ಲ ಅವನ ತರ ಮಾಧುಸ್ವಾಮಿ ಆಡುತ್ತಿದ್ದಾನೆ. ಇದರಿಂದಾಗಿ ನಮ್ಮ ಜಿಲ್ಲೆಯನ್ನೇ ಹಾಳು ಮಾಡಿಬಿಟ್ಟಿದ್ದಾನೆ ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಜಿ.ಎಸ್ ಬಸವರಾಜ್ ಹರಿಹಾಯ್ದಿದ್ದರು. ಇದನ್ನೂ ಓದಿ: ತರಕಾರಿ, ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಅಧಿಕಾರಿಗಳು!

  • ಕೇರಳದಿಂದ ಬಂದವರ ಮೇಲೆ ತೀವ್ರ ನಿಗಾ: ಮಾಧುಸ್ವಾಮಿ

    ಕೇರಳದಿಂದ ಬಂದವರ ಮೇಲೆ ತೀವ್ರ ನಿಗಾ: ಮಾಧುಸ್ವಾಮಿ

    ತುಮಕೂರು: ಓಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ಜಿಲ್ಲೆಗೆ ಕೇರಳದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಿಂದ ಬಂದವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ. ಹೆಚ್ಚು ಪ್ರಕರಣಗಳು ಕಂಡು ಬಂದರೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿ ತಾಲೂಕಾಸ್ಪತ್ರೆಯಲ್ಲೂ 500-600 ಆಕ್ಸಿಜನ್ ಸಾಂದ್ರಕಗಳಿವೆ. ಜೊತೆಗೆ ಪ್ರತಿ ತಾಲೂಕಿನಲ್ಲಿ 5-6 ಐಸಿಯು ಬೆಡ್ ಇದೆ ಎಂದರು.

    ಈ ಬಾರಿ ಮಕ್ಕಳ ಪ್ರಕರಣ ಹೆಚ್ಚು ಕಂಡುಬರುವ ಸಾಧ್ಯತೆ ಇದೆ. ಹಾಗಾಗಿ 200 ಮಕ್ಕಳ ವೈದ್ಯರನ್ನು ಕರೆಸಿ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ. ಐಸಿಯು ಬೆಡ್ ಸೇರಿದಂತೆ ಎಲ್ಲ ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಪ್ರಕರಣದಲ್ಲಿ ಡೆತ್ ರೇಟ್ ಕಡಿಮೆ ಇದೆ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಸೂಚಿಸಿದರು.

    ಈ ಬಗ್ಗೆ ಡಿ. 9 ರಂದು ಸಚಿವ ಸಂಪುಟ ತುರ್ತು ಸಭೆ ನಡೆಸಲಾಗುವುದು. ನೀತಿ ಸಂಹಿತೆ ಇರುವುದರಿಂದ ಜಿಲ್ಲೆಯಲ್ಲಿ ಸಚಿವರಿಂದ ಸಭೆ ನಡೆಸಲು ಆಗುತ್ತಿಲ್ಲ. ಹಾಗಾಗಿ ಕೋವಿಡ್ ಸಂಬಂಧಿಸಿದಂತೆ ಉಸ್ತುವಾರಿ ನೋಡಿಕೊಳ್ಳಲು ಕಷ್ಟವಾಗುತ್ತಿದೆ. ಇದರಿಂದಾಗಿ ಡಿ. 9ರಂದು ಸಚಿವ ಸಂಪುಟ ಸಭೆ ಕರೆದು ನಂತರ ನಾವು ಕಾರ್ಯೋನ್ಮುಖರಾಗುತ್ತೇವೆ ಎಂದರು.

    ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕಷ್ಟ. ಆದರೆ ಉಳಿದ ಜಿಲ್ಲೆಗಳಲ್ಲಿ ದೇವೇಗೌಡರಲ್ಲಿ ಸಹಕಾರಕ್ಕಾಗಿ ಮನವಿ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್

    ತುಮಕೂರಿನಲ್ಲಿ ಮೈತ್ರಿ ಇಲ್ಲ. ಬಿಜೆಪಿ -ಜೆಡಿಎಸ್ ಎರಡೂ ಕಡೆಯ ಅಭ್ಯರ್ಥಿಗಳು ಆಳವಾಗಿ ಪ್ರಚಾರ ಮಾಡಿದ್ದಾರೆ. ಈ ಹಂತದಲ್ಲಿ ಯಾರೂ ಕಣದಿಂದ ನಿವೃತ್ತಿಯಾಗೋದು ಕಷ್ಟ. ಇದರಿಂದಾಗಿ ತುಮಕೂರು ಮೈತ್ರಿ ಚರ್ಚೆಯಾಗಿಲ್ಲ. ಆದರೂ ವರಿಷ್ಠರು ಚರ್ಚೆ ಮಾಡಿದರೆ ಅದು ಅವರಿಗೆ ಬಿಟ್ಟ ತೀರ್ಮಾನ. ಅದರ ಬಗ್ಗೆ ನಾನು ಮಾತನಾಡೋಕೆ ಹೋಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್

  • ಕ್ಯಾನ್ಸರ್ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಶಂಕು ಸ್ಥಾಪನೆ

    ಕ್ಯಾನ್ಸರ್ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಶಂಕು ಸ್ಥಾಪನೆ

    ತುಮಕೂರು: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು. ಆರೋಗ್ಯ ಸಚಿವ ಡಾ.ಸುಧಾಕರ್, ಸಚಿವರುಗಳಾದ ಮಾಧುಸ್ವಾಮಿ, ಬಿ.ಸಿ.ನಾಗೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.

    ಇದೇ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಕೋವಿಡ್ ವೇಳೆಯಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ನಿರ್ವಹಿಸಿದೆ. ಪ್ರಾಣದ ಹಂಗು ತೊರೆದು ವೈದ್ಯರು, ನರ್ಸ್‍ಗಳು ಕೆಲಸ ಮಾಡಿದ್ದಾರೆ. ಒಂದೇ ವರ್ಷದಲ್ಲಿ 40 ಸಾವಿರ ಬೆಡ್‍ಗಳು ಮತ್ತು 4 ಸಾವಿರ ಐಸಿಯು ಬೆಡ್‍ಗಳನ್ನು ಒದಗಿಸಿಕೊಟ್ಟು ಜನರ ಜೀವ ಕಾಪಾಡಿದ ಕೀರ್ತಿ ರಾಜ್ಯ ಸರ್ಕಾರಕ್ಕಿದೆ ಎಂದರು. ಇದನ್ನೂ ಓದಿ: ಉಡುಪಿಯಲ್ಲಿ ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆ ಉದ್ಘಾಟನೆ

    ಈ ರೀತಿ ಸಮರೋಪಾದಿಯಲ್ಲಿ ಕೆಲಸ ನಡೆದರೂ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆಯಿಂದ ಜೊತೆಯಾಗಿ ಕೆಲಸ ಮಾಡಬೇಕಾದವರು ಸರ್ಕಾರವನ್ನು ಟೀಕೆ ಮಾಡುತ್ತಾರೆ. ಟೀಕೆ ಮಾಡುವುದನ್ನೇ ಕೆಲಸ ಎಂದುಕೊಂಡಿದ್ದಾರೆ ಎಂದು ಪರೋಕ್ಷವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಇದನ್ನೂ ಓದಿ: ದೇಶಕ್ಕೆ 600 ವೈದ್ಯಕೀಯ ಕಾಲೇಜು, ಏಮ್ಸ್‌ನಂಥ 50 ಸಂಸ್ಥೆ ಬೇಕು: ನಿತಿನ್ ಗಡ್ಕರಿ

    ನಂತರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಭಾನುವಾರವೂ ವ್ಯಾಕ್ಸಿನ್ ಕೊಡಬೇಕು ಎಂಬ ಮನವಿ ಇದೆ. ಜನರು ಭಾನುವಾರ ಮನೆಯಲ್ಲಿ ಇರೋದರಿಂದ ಅವರಿಗೆ ಸಹಕಾರಿಯಾಗಲಿದೆ. ಈ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು. ಚಾಣಕ್ಯ ವಿವಿಗೆ ಜಾಗ ಮಂಜೂರು ವಿಚಾರಕ್ಕೆ ಪ್ರತಿಕ್ರಿಸಿದ ಸಿಎಂ, ವಿವಿಗೆ ಜಾಗ ಮಂಜೂರು ಮಾಡಿದನ್ನು ವಿರೋಧಿಸುವ ಕಾಂಗ್ರೆಸ್ ತಮ್ಮ ಕಾಲದಲ್ಲಿ ಯಾರಿಗೆಲ್ಲ ಜಮೀನು ಮಂಜೂರು ಮಾಡಿದೆ ಎಂಬ ವಿವರ ನಮ್ಮಲ್ಲಿ ಕೂಡ ಇದೆ. ನಾವು ಕೂಡ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

  • ಜೆ.ಸಿ ಮಾಧುಸ್ವಾಮಿಗೆ ಸಚಿವ ಸ್ಥಾನ – ಹರಕೆ ತೀರಿಸಿದ ಅಭಿಮಾನಿಗಳು

    ಜೆ.ಸಿ ಮಾಧುಸ್ವಾಮಿಗೆ ಸಚಿವ ಸ್ಥಾನ – ಹರಕೆ ತೀರಿಸಿದ ಅಭಿಮಾನಿಗಳು

    ತುಮಕೂರು: ಜೆ.ಸಿ ಮಾಧುಸ್ವಾಮಿ ಅವರು ಎರಡನೇ ಬಾರಿ ಸಚಿವರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಳೆಯೂರು ಆಂಜನೇಯಸ್ವಾಮಿಗೆ 101 ತೆಂಗಿನಕಾಯಿ ಒಡೆಯುವ ಮೂಲಕ ಸಚಿವರ ಸಮ್ಮುಖದಲ್ಲಿ ಹರಕೆ ತೀರಿಸಿದರು.

    ಮುಖ್ಯಮಂತ್ರಿ ಬದಲಾವಣೆ ಹಿನ್ನೆಲೆಯಲ್ಲಿ ಮಂತ್ರಿಮಂಡಲ ವಿಸರ್ಜನೆಯಾಗಿದ್ದು ಮಾಧುಸ್ವಾಮಿಗೆ ಸಚಿವ ಸ್ಥಾನ ಕೈತಪ್ಪುವ ಭೀತಿ ಬಿಜೆಪಿ ಕಾರ್ಯಕರ್ತರಲ್ಲಿ ಮನೆಮಾಡಿತ್ತು. ಸಚಿವ ಸ್ಥಾನ ಕೈತಪ್ಪಿದರೆ ತಾಲೂಕಿನಲ್ಲಿ ನಡೆಯುವ ಅಭಿವೃದ್ಧಿ ಕಾರ್ಯ ಕುಂಠಿತವಾಗುವ ಭಯ ಅವರ ಅಭಿಮಾನಿಗಳಲ್ಲಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಯೋಧ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿಲಿಟರಿ ಶಿವಣ್ಣನವರು ಮಧುಸ್ವಾಮಿ ಅವರಿಗೆ ಸಚಿವ ಸ್ಥಾನ ಲಭಿಸಿದರೆ ಆಂಜನೇಯಸ್ವಾಮಿ 101 ತೆಂಗಿನಕಾಯಿ ಪಡೆಯುವುದಾಗಿ ಹರಕೆ ಹೊತ್ತಿದ್ದರು. ಅದರಂತೆ ಸಚಿವರಿಗೆ ಮಂತ್ರಿಸ್ಥಾನ ಸಿಕ್ಕಿದ ಖುಷಿಯಲ್ಲಿ ಮಾಧುಸ್ವಾಮಿ ಅವರನ್ನು ದೇವಾಲಯಕ್ಕೆ ಬರಮಾಡಿಕೊಂಡು ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ದೇವರಿಗೆ 101 ತೆಂಗಿನಕಾಯಿ ಪಡೆಯಲಾಯಿತು.

    ಈ ಸಂದರ್ಭದಲ್ಲಿ ಸಚಿವರು ಮತ ಹಾಕಿದ ತಾಲೂಕಿನ ಜನರ ಋಣ ತೀರಿಸಲು ಅಭಿವೃದ್ಧಿ ಕೆಲಸ ಮಾಡುತ್ತೇನೆ. ರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ ಎಂಬ ಭರವಸೆ ನೀಡಿದರು. ಮಿಲಿಟರಿ ಶಿವಣ್ಣ, ಪುರಸಭೆ ಸದಸ್ಯ ರೇಣುಕಾ ಪ್ರಸಾದ್, ನಿರಂಜನ್ ಕೇಶವಮೂರ್ತಿ ನಾಮಿನಿ ಸದಸ್ಯರಾದ ಗೋವಿಂದರಾಜ್ ದೇವರಾಜ್ ಬಿಜೆಪಿ ಮುಖಂಡ ರಾಮು ಶೆಟ್ಟಿಕೆರೆ ವಿನಯ್ ಸೇರಿದಂತೆ ಹಲವರು ಮುಖಂಡರುಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಯಕ್ಷಗಾನ ರಂಗಸ್ಥಳದಲ್ಲೇ ಕುಸಿದು ಬಿದ್ದ ಅಮ್ಮುಂಜೆ ಮೋಹನ್ ಕುಮಾರ್

  • ಶಾಸಕರು ಸೂಚಿಸುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು: ಜೆ.ಸಿ ಮಾಧುಸ್ವಾಮಿ

    ಶಾಸಕರು ಸೂಚಿಸುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು: ಜೆ.ಸಿ ಮಾಧುಸ್ವಾಮಿ

    ಮಂಗಳೂರು: ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳ ಮಾಸ್ಟರ್ ಪ್ಲಾನ್ ಅನ್ನು ಸಂಬಂಧಿಸಿದ ಶಾಸಕರ ಗಮನಕ್ಕೆ ತರಲಾಗುವುದು, ಶಾಸಕರು ಸೂಚಿಸುವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಸಿ. ಮಧುಸ್ವಾಮಿ ಅವರು ಹೇಳಿದರು. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಇರಲ್ಲ, ಸಭೆ ಸಮಾರಂಭಕ್ಕೆ ಅವಕಾಶವಿಲ್ಲ – ಲಾಕ್‍ಡೌನ್ ಇನ್ನಷ್ಟು ಸಡಿಲ

    ಅವರು ನಗರದ ಸಕ್ರ್ಯೂಟ್ ಹೌಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕೈಗೊಳ್ಳಲಾದ ವಿವಿಧ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪಶ್ಚಿಮವಾಹಿನಿ ಯೋಜನೆಯಡಿ 35ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟು ನಿರ್ಮಾಣದ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಆ ಯೋಜನೆಯಿಂದ ಕುಡಿಯುವ ನೀರು ಹಾಗೂ ಕೃಷಿಗೆ ನೀರು ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.

    ಇಲಾಖೆಯಡಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕರೆಯಲಾದ ಟೆಂಡರುಗಳನ್ನು ಬೇಗ ಅನುಮತಿ ನೀಡಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಉಮಾನಾಥ್ ಕೋಟ್ಯಾನ್, ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ಯು.ಟಿ. ಖಾದರ್, ಸಂಜೀವ ಮಠಂದೂರು, ಭರತ್ ಶೆಟ್ಟಿ, ಇಲಾಖೆಯ ಕಾರ್ಯದರ್ಶಿಗಳಾದ ಮೃತ್ಯುಂಜಯ ಸ್ವಾಮಿ, ಇಲಾಖೆಯ ಮೈಸೂರು ವೃತ್ತದ ಎಸ್ ಸಿ ರಾಜಶೇಖರ ಯಡಳ್ಳಿ, ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಗೋಕುಲದಾಸ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಷ್ಣು ಕಾಮತ್, ಸಿಬ್ಬಂದಿಗಳಾದ ಶಿವ ಪ್ರಸನ್ನ, ರಾಕೇಶ್, ಆನಂದ್, ಲವೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ರಮೇಶ್ ಜಾರಕಿಹೊಳಿ ಸಿಡಿ ಕೇಸ್‍ನಿಂದ ಮುಕ್ತರಾದ್ರೆ ಸಚಿವರಾಗ್ತಾರೆ: ಜೆ.ಸಿ.ಮಾಧುಸ್ವಾಮಿ

    ರಮೇಶ್ ಜಾರಕಿಹೊಳಿ ಸಿಡಿ ಕೇಸ್‍ನಿಂದ ಮುಕ್ತರಾದ್ರೆ ಸಚಿವರಾಗ್ತಾರೆ: ಜೆ.ಸಿ.ಮಾಧುಸ್ವಾಮಿ

    ಚಿತ್ರದುರ್ಗ: ಸಿಡಿ ಪ್ರಕರಣದಿಂದ ರಮೇಶ್ ಜಾರಕಿಹೊಳಿ ಮುಕ್ತರಾದರೆ ಮತ್ತೆ ಮಂತ್ರಿ ಆಗುತ್ತಾರೆ, ಇದರಲ್ಲಿ ಗೊಂದಲ ಇಲ್ಲ. ಕೇಸ್ ನಿಂದ ಮುಕ್ತರಾದರೆ ಮುಗಿಯಿತು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

    ಚಿತ್ರದುರ್ಗ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಕೇಸ್ ತನಿಖೆಯಲ್ಲಿದ್ದು, ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ತಿಳಿಸಿದರು. ಮಹಾರಾಷ್ಟ್ರ ಮಾಜಿ ಸಿಎಂ ಫಡ್ನವೀಸ್ ಭೇಟಿ ಮಾಡುವುದರಿಂದ ತಪ್ಪೇನು ಇಲ್ಲ. ಬೆಳಗಾವಿ ಹಾಗೂ ಮುಂಬೈ ನಿಕಟವಾಗಿರುವ ಜಾಗಗಳು, ಹಾಗಾಗಿ ಭೇಟಿ ಮಾಡಿರುತ್ತಾರೆ ಎಂದು ತಿಳಿಸಿದರು.

    ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ವಿಷಯದ ಕಚ್ಚಾಟದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅವರ ಪಕ್ಷ ಗೆದ್ದು ಬಂದರೆ ಸಿಎಂ ಆಗೋದು? ಈಗ ಹೇಗೆ ಸಿಎಂ ಆಗ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಮಾಧುಸ್ವಾಮಿ ವ್ಯಂಗ್ಯವಾಡಿದರು. ಅವರು ಯಾವಾಗ ಸಿಎಂ ಆಗ್ತಾರೆ. ಚುನಾವಣೆ ಆಗಬೇಕು, ಚುನಾಯಿತ ಎಂಎಲ್‍ಎ ಗಳು ಆಯ್ಕೆ ಮಾಡಬೇಕು. ಆಗ ಸಿಎಂ ಅಭ್ಯರ್ಥಿ ವಿಚಾರ ಬರುತ್ತದೆ ಎಂದರು. ಅಲ್ಲದೇ ಕಳೆದ ಬಾರಿ ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂತ ಯಾರಿಗೆ ಗೊತ್ತಿತ್ತು? ರಾಜಕಾರಣ ಹೇಗೆ ತಿರುಗುತ್ತದೆ ಯಾರಿಗೆ ಗೊತ್ತು ಎಂದು ಹೇಳಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವಂತದ್ದು ಏನೂ ಆಗಿಲ್ಲ: ಸಚಿವ ಬಿ.ಸಿ.ಪಾಟೀಲ್

    ವಿದ್ಯಾಗಮದಿಂದಲೇ ಶಿಕ್ಷಕರು ಸಾವು ಅಂತ ಪ್ರಚಾರ ಬೇಡ. ರಾಜ್ಯದಲ್ಲಿ ಮೂರನೇ ಅಲೆ ಹೇಗೆ ರಿಯಾಕ್ಟ್ ಮಾಡುತ್ತದೆ ಅಂತ ನೋಡುತ್ತಿದ್ದೇವೆ. ಡೆಲ್ಟಾ ವೈರಸ್ ಹರಡುವ ಸಾಧ್ಯತೆ ಇದೆ. ಇದನ್ನು ನೋಡಿಕೊಂಡು ಇನ್ನೊಂದು ತಿಂಗಳು ನೋಡಿ ವಾಚ್ ಮಾಡಲಾಗುತ್ತದೆ ಎಂದು ತಿಳಿಸಿದರು. ಇದೇ ವೇಳೆ ಸರ್ಕಾರ ಡೆತ್ ರೇಟ್ ಮೆರೆಮಾಡಚುತ್ತಿದೆ ಅಂತ ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಸಚಿವರು, ಕೊವಿಡ್ ಡೆತ್ ರಿಪೋರ್ಟ್ ಮರೆ ಮಾಚುವ ಸ್ಥಿತಿ ನಮಗೆ ಬಂದಿಲ್ಲ. ಕೊಮಾರ್ಬಿಡ್ ಡೆತ್, ಕ್ರಾನಿಕ್ ಡಿಸೇಸ್ ಡೆತ್ ಆಗ್ತಿದೆ. ಅಕಾಸ್ಮಾತ್ ರಿಪೋರ್ಟ್ ಆಗದೆ ಡೆತ್ ಆಗಿದ್ದರೆ ನಾವೇನು ಮಾಡೋಕಾಗದಿಲ್ಲ ಎಂದು ಕೈ ನಾಯಕರ ವಿರುದ್ಧ ಕಿಡಿ ಕಾರಿದರು. ಇದನ್ನೂ ಓದಿ: ಹತ್ತು ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಣಯ: ರಮೇಶ್ ಜಾರಕಿಹೊಳಿ

    ಕೊರೊನಾ 3ನೇ ಅಲೆ, ಡೆಲ್ಟಾ ಪ್ಲಸ್ ಬಗ್ಗೆ ಪರಿಶೀಲಿಸಿ ವಿದ್ಯಾಗಮ ಸಾಧ್ಯತೆ ಇದ್ದು, ಇನ್ನೊಂದು ತಿಂಗಳು ಕಾದು ನೋಡಿ ವಿದ್ಯಾಗಮ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಕಳೆದ ಸಲ ವಿದ್ಯಾಗಮ ವೇಳೆ ಶಿಕ್ಷಕರ ಸಾವು ವಿಚಾರವಾಗಿ ಸಾವಿಗೆ ಬೇಕಾದಷ್ಟು ಕಾರಣ ಇರುತ್ತವೆ. ಡೆತ್ ಆಡಿಟ್ ನಿಂದ ಗೊತ್ತಾಗುತ್ತದೆ. ದೈಹಿಕ ಅಂತರ ಕಾಯ್ದುಕೊಂಡು ವಿದ್ಯಾಗಮ ಮಾಡಿದ್ರೆ ತೊಂದರೆ ಇಲ್ಲ, ಸಾವಿಗೆ ವಿದ್ಯಾಗಮವೇ ಕಾರಣ ಎಂಬ ಪ್ರಚಾರ ಬೇಡ ಎಂದು ಸಚಿವರು ಮನವಿ ಮಾಡಿದರು. ಇದನ್ನೂ ಓದಿ:  ಸರ್ಕಾರ ಬೀಳಿಸಿ, ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ: ರಮೇಶ್ ಜಾರಕಿಹೊಳಿ