Tag: J Baby

  • ಪಾ ರಂಜಿತ್ ನಿರ್ದೇಶನದ ಹೊಸ ಚಿತ್ರದ ಟೈಟಲ್ ಪೋಸ್ಟರ್ ಲುಕ್ ಅನಾವರಣ

    ಪಾ ರಂಜಿತ್ ನಿರ್ದೇಶನದ ಹೊಸ ಚಿತ್ರದ ಟೈಟಲ್ ಪೋಸ್ಟರ್ ಲುಕ್ ಅನಾವರಣ

    ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಪಾ ರಂಜಿತ್ ಅವರ ಮುಂಬರುವ ‘ಜೆ ಬೇಬಿ’ ಚಿತ್ರದ ಟೈಟಲ್ ಪೋಸ್ಟರ್ ಇಂದು ಅನಾವರಣಗೊಂಡಿದೆ.

    ಕಳೆದ ವರ್ಷ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಬ್ಲಾಕ್‍ಬಸ್ಟರ್ ಹಿಟ್ ‘ಸರ್ಪಟ್ಟ ಪರಂಬರೈ’ ಚಿತ್ರವನ್ನು ನೀಡಿದ ರಂಜಿತ್ ಅವರು ತಮ್ಮ ಮುಂದಿನ ‘ನಚ್ಚತಿರಂ ನಗರಗಿರತ್ತು’ ಕಾಳಿದಾಸ್ ಜಯರಾಮ್ ಮತ್ತು ದುಶಾರಾ ವಿಜಯನ್ ಅಭಿನಯದ ಪ್ರಣಯ ಚಿತ್ರವನ್ನು ಕೂಡಾ ಪೂರ್ಣಗೊಳಿಸಿದ್ದಾರೆ. ಈ ವರ್ಷ ಬೇಸಿಗೆಯಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

    ಇದರ ಮಧ್ಯೆ, ರಂಜಿತ್ ನಿರ್ಮಾಪಕರಾಗಿಯೂ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ‘ಜೆ ಬೇಬಿ’ ಎಂಬ ಚಮತ್ಕಾರಿ ಟೈಟಲ್‍ನ ಫಸ್ಟ್ ಲುಕ್ ಪೋಸ್ಟರ್ ಇದೀಗ ಅನಾವರಣಗೊಂಡಿದೆ.

    ‘ಜೆ ಬೇಬಿ’ ಚಿತ್ರದಲ್ಲಿ ಅಟ್ಟಕತಿ ದಿನೇಶ್ ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಊರ್ವಶಿ ಮತ್ತು ‘ಲೊಲ್ಲು ಸಭೆ’ ಖ್ಯಾತಿಯ ಮಾರನ್ ಅವರು ಅಭಿನಯಿಸಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಸೂಚಿಸುವಂತೆ ಮೂವರು ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಸುರೇಶ್ ಮಾರಿ ನಿರ್ದೇಶನದ ಈ ಚಿತ್ರಕ್ಕೆ ಟೋನಿ ಬ್ರಿಟ್ಟೋ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.