ಐವಿಎಫ್ ಮೂಲಕ 40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಖುಷಿಯಲ್ಲಿದ್ದ ನಟಿ ಭಾವನಾ ರಾಮಣ್ಣಗೆ (Bhavana Ramanna) ಆಘಾತವೂ ಆಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿ ನಟಿ ಆರೋಗ್ಯವಾಗಿದ್ದರೆ, ಮತ್ತೊಂದು ಮಗು ಹುಟ್ಟಿದಾಗಲೇ ತೀರಿಕೊಂಡಿದೆ.
ನಟಿ ಭಾವನ ರಾಮಣ್ಣಗೆ ಎರಡು ವಾರಗಳ ಹಿಂದೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ತಾಯಿಯದ ನಟಿ ಭಾವನಾ ಅವರು ಸದ್ಯ ಆರೋಗ್ಯವಾಗಿದ್ದಾರೆ. ಆದ್ರೆ ಒಂದು ಮಗು ನಿಧನವಾಗಿದೆ.
ಐವಿಎಫ್ (IVF) ಮೂಲಕ ತಾಯಿ ಆದ ನಟಿ ಭಾವನ ಅವರು ಇತ್ತೀಚೆಗೆ ಸೀಮಂತ ಮಾಡಿಸಿಕೊಂಡಿದ್ದರು. ವೈದ್ಯರ ಸೂಚನೆಯಂತೆ ಹೆರಿಗೆ ಮಾಡಲಾಗಿದ್ದು, ಒಂದು ಮಗುವಿನಲ್ಲಿ 7 ತಿಂಗಳ ನಂತರ ಸಮಸ್ಯೆ ಕಾಣಿಸಿಕೊಂಡ ಕಾರಣ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಸದ್ಯ ಒಂದು ಮಗು, ತಾಯಿ ಇಬ್ಬರು ಕ್ಷೇಮವಾಗಿದ್ದು, ಮತ್ತೊಂದು ಮಗು ಹುಟ್ಟಿದಾಗಲೇ ತೀರಿಕೊಂಡಿದೆ.
40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದ ನಟಿ
ನಟಿ ಭಾವನಾ ರಾಮಣ್ಣ, ತಮ್ಮ ಬಾಲ್ಯದಿಂದಲೂ ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದರು. ಆದರೆ, ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿ ತಟ್ಟಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. “ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40 ತಲುಪಿದಾಗ ತಾಯಿಯಾಗಬೇಕೆಂಬ ಕರೆಯನ್ನು ತಡೆಯಲಾಗಲಿಲ್ಲ” ಎಂದು ಹೇಳಿಕೊಂಡಿದ್ದರು.
ಭಾವನಾ ರಾಮಣ್ಣ ಸಿನಿ ಜರ್ನಿ
ನಂದಿನಿ ರಾಮಣ್ಣ ಎಂಬ ಮೂಲ ಹೆಸರಿನ ಭಾವನಾ, ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯ ಮತ್ತು ಭರನಾಟ್ಯ ಕೌಶಲ್ಯಕ್ಕೆ ಹೆಸರಾಗಿದ್ದಾರೆ. ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಭಾವನಾ, ʻಚಂದ್ರಮುಖಿ ಪ್ರಾಣಸಖಿʼ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದರು. ಭಾವನಾ ʻನೀ ಮುಡಿದ ಮಲ್ಲಿಗೆʼ, ʻಕ್ಷಾಮʼ, ʻಭಾಗೀರಥಿʼ ಸಿನಿಮಾಗಾಗಿ ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಟಿಯಾಗಿ ಮಾತ್ರವಲ್ಲ, ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ಸದ್ಯ ಭಾವನಾ ರಾಮಣ್ಣ ಅವರ ಈ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ನಟಿ/ರಾಜಕಾರಣಿ ಭಾವನಾ ತಾಯಿಯಾಗುತ್ತಿರುವ ಸುದ್ದಿ ಈಗ ವ್ಯಾಪಕವಾಗಿ ಹಬ್ಬಿದೆ. ಅವರೀಗ ಆರು ತಿಂಗಳ ಗರ್ಭಿಣಿಯಾಗಿದ್ದು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. IVF (ಐವಿಎಫ್) ಮೂಲಕ ಭಾವನಾ (Bhavana Ramanna) ಗರ್ಭ ಧರಿಸಿದ್ದು ಸೋಶಿಯಲ್ ಮೀಡಿಯಾಡಲ್ಲಿ (Social Media) ಪರ ವಿರೋಧದ ಟೀಕೆ ಹೆಚ್ಚಾಗುತ್ತಿದೆ.
ಈ ಕುರಿತು ಆಫಿಷಿಯಲ್ ಆಗಿ ಮೊದಲ ಮಾತನ್ನ ಇನ್‌ಸ್ಟಾ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ. 40ರ ಆಸುಪಾಸಿನಲ್ಲಿ ತಾವು ಗರ್ಭಿಣಿಯಾಗಲು (Bhavana Ramanna Pregnant) ನಿರ್ಧರಿಸಿದ್ದು ಯಾಕೆ..? ಆ ದಾರಿ ಹೇಗಿತ್ತು..? ತಂದೆ ಇಲ್ಲದೆ ಮಕ್ಕಳು ಹೇಗೆ ಬೆಳೆಯಬಹುದು..? ಯಾಕೆ ಸೂಕ್ತ ವಯಸ್ಸಿದ್ದಾಗಲೇ ತಾಯ್ತನದ ಬಗ್ಗೆ ಆಸಕ್ತಿ ಇರಲಿಲ್ಲ, ಅನ್ನೋ ವಿಷಯಗಳ ಕುರಿತು ಅವರು ಬಹಿರಂಗವಾಗಿ ಮನದ ಮಾತನ್ನ ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ
ತಾಯಿ ಆಗುತ್ತಿರುವ ಕುರಿತು ಭಾವನಾ ಹೇಳಿದ್ದೇನು..?
ಇದು ನನ್ನ ಹೊಸ ಅಧ್ಯಾಯ, ಹೊಸ ಲಯ, ನಾನು ಇದನ್ನು ಹೇಳುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ, ಆದರೆ ಇಲ್ಲಿ ನಾನು ಅವಳಿ ಮಕ್ಕಳೊಂದಿಗೆ ಆರು ತಿಂಗಳ ಗರ್ಭಿಣಿಯಾಗಿದ್ದೇನೆ. ನನಗೆ 20-30 ವರ್ಷ ಇದ್ದಾಗ ತಾಯ್ತನದ ಆಸೆ ನನ್ನ ಮನಸ್ಸಿನಲ್ಲಿ ಇರಲಿಲ್ಲ. 40 ವರ್ಷ ತುಂಬಿದಾಗ, ಆ ಆಸೆಯನ್ನು ನಿರಾಕರಿಸಲಾಗಲಿಲ್ಲ. ಒಂಟಿ ಮಹಿಳೆಯಾಗಿ, ದಾರಿ ಸುಲಭವಾಗಿರಲಿಲ್ಲ. ಅನೇಕ ಐವಿಎಫ್ ಸೆಂಟರ್‌ಗಳು ನನ್ನನ್ನು ತಿರಸ್ಕಾರ ಮಾಡಿದ್ದವು. ಬಳಿಕ ನಾನು ಡಾ. ಸುಷ್ಮಾರನ್ನು ಭೇಟಿಯಾದೆ. ಅವರು ನನ್ನ ಮೇಲೆ ಯಾವುದೇ ಯಾವುದೇ ಕೀಳು ಭಾವನೆ ಪಡದೇ ಸ್ವಾಗತಿಸಿದ್ರು. ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೇನೆ. ಇದನ್ನೂ ಓದಿ: ಪ್ರಜ್ವಲ್ ಹುಟ್ಟುಹಬ್ಬಕ್ಕೆ `ಮಾಫಿಯಾ’ ಟೀಮ್ ಗಿಫ್ಟ್
ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಪಕ್ಕದಲ್ಲಿ ನಿಂತರು. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು, ಆದರೆ ನನ್ನ ಮನಸ್ಸಿನಲ್ಲಿ ನಾನು ಎಲ್ಲದಕ್ಕೂ ಸಿದ್ಧಳಾಗಿದ್ದೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು, ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಬೇಷರತ್ತಾದ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ದಯೆ, ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಬೆಳಯುತ್ತಾರೆ. ನಾನು ರೆಬೆಲ್ ಆಗಲು ಈ ಮಾರ್ಗವನ್ನು ಆರಿಸಿಕೊಂಡಿಲ್ಲ, ನನ್ನ ಸತ್ಯವನ್ನು ಗೌರವಿಸಲು ನಾನು ಈ ಮಾರ್ಗವನ್ನ ಆಯ್ಕೆ ಮಾಡಿಕೊಂಡೆ. ನನ್ನ ಕಥೆ, ಒಬ್ಬಳೇ ಒಬ್ಬಳು ಮಹಿಳೆಯಾದರೂ ತನ್ನನ್ನು ತಾನು ನಂಬುವಂತೆ ಪ್ರೇರೇಪಿಸಿದರೆ ಸಾಕು. ಶೀಘ್ರದಲ್ಲೇ, ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ ಹಾಗೂ ಅದೇ ಎಲ್ಲವೂ ಆಗಿರುತ್ತದೆ. ಇದನ್ನೂ ಓದಿ: ಜಾನಿ ಮಾಸ್ಟರ್ ಜೊತೆಗಿನ ಫೋಟೋ: ಟೀಕೆಗೆ ಒಳಗಾದ ನಯನತಾರಾ-ವಿಘ್ನೇಶ್
ಐವಿಎಫ್ ಮೂಲಕ 40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಖುಷಿಯಲ್ಲಿದ್ದ ನಟಿ ಭಾವನಾ ರಾಮಣ್ಣಗೆ (Bhavana Ramanna) ಆಘಾತವೂ ಆಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿ ನಟಿ ಆರೋಗ್ಯವಾಗಿದ್ದರೆ, ಮತ್ತೊಂದು ಮಗು ಹುಟ್ಟಿದಾಗಲೇ ತೀರಿಕೊಂಡಿದೆ.
ನಟಿ ಭಾವನ ರಾಮಣ್ಣಗೆ ಎರಡು ವಾರಗಳ ಹಿಂದೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ತಾಯಿಯದ ನಟಿ ಭಾವನಾ ಅವರು ಸದ್ಯ ಆರೋಗ್ಯವಾಗಿದ್ದಾರೆ. ಆದ್ರೆ ಒಂದು ಮಗು ನಿಧನವಾಗಿದೆ. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ
ಐವಿಎಫ್ (IVF) ಮೂಲಕ ತಾಯಿ ಆದ ನಟಿ ಭಾವನಾ ಅವರು ಇತ್ತೀಚೆಗೆ ಸೀಮಂತ ಮಾಡಿಸಿಕೊಂಡಿದ್ದರು. ವೈದ್ಯರ ಸೂಚನೆಯಂತೆ ಹೆರಿಗೆ ಮಾಡಲಾಗಿದ್ದು, ಒಂದು ಮಗುವಿನಲ್ಲಿ 7 ತಿಂಗಳ ನಂತರ ಸಮಸ್ಯೆ ಕಾಣಿಸಿಕೊಂಡ ಕಾರಣ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಸದ್ಯ ಒಂದು ಮಗು, ತಾಯಿ ಇಬ್ಬರು ಕ್ಷೇಮವಾಗಿದ್ದು, ಮತ್ತೊಂದು ಮಗು ಹುಟ್ಟಿದಾಗಲೇ ತೀರಿಕೊಂಡಿದೆ. ಇದನ್ನೂ ಓದಿ: ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ
40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದ ನಟಿ
ನಟಿ ಭಾವನಾ ರಾಮಣ್ಣ, ತಮ್ಮ ಬಾಲ್ಯದಿಂದಲೂ ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದರು. ಆದರೆ, ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿ ತಟ್ಟಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. “ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40 ತಲುಪಿದಾಗ ತಾಯಿಯಾಗಬೇಕೆಂಬ ಕರೆಯನ್ನು ತಡೆಯಲಾಗಲಿಲ್ಲ” ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು
ಭಾವನಾ ರಾಮಣ್ಣ ಸಿನಿ ಜರ್ನಿ
ನಂದಿನಿ ರಾಮಣ್ಣ ಎಂಬ ಮೂಲ ಹೆಸರಿನ ಭಾವನಾ, ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯ ಮತ್ತು ಭರನಾಟ್ಯ ಕೌಶಲ್ಯಕ್ಕೆ ಹೆಸರಾಗಿದ್ದಾರೆ. ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಭಾವನಾ, ʻಚಂದ್ರಮುಖಿ ಪ್ರಾಣಸಖಿʼ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದರು. ಭಾವನಾ ʻನೀ ಮುಡಿದ ಮಲ್ಲಿಗೆʼ, ʻಕ್ಷಾಮʼ, ʻಭಾಗೀರಥಿʼ ಸಿನಿಮಾಗಾಗಿ ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಟಿಯಾಗಿ ಮಾತ್ರವಲ್ಲ, ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ಸದ್ಯ ಭಾವನಾ ರಾಮಣ್ಣ ಅವರ ಈ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಚಂಡೀಗಢ: ಕೆಲ ದಿನಗಳ ಹಿಂದೆಯಷ್ಟೇ ಗಾಯಕ ದಿ. ಸಿಧು ಮೂಸೇವಲಾ ತಾಯಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ಅವರಿಗೆ ಸಂಕಷ್ಟ ಎದುರಾಗಿದೆ.
ಹೌದು. 21 ರಿಂದ 50 ವರ್ಷದೊಳಗಿನ ಮಹಿಳೆ ಮಾತ್ರ ಐವಿಎಫ್ ಸಹಾಯದಿಂದ ಮಗುವಿಗೆ ಜನ್ಮ ನೀಡಬಹುದಾಗಿದೆ. ಆದರೆ ಚರಣ್ ಕೌರ್ ಅವರಿಗೆ 58 ವರ್ಷ ವರ್ಷ ವಯಸ್ಸಾಗಿತ್ತು. ಹೀಗಾಗಿ ಮಾರ್ಚ್ 14ರಂದು ಪಂಜಾಬ್ ಸರ್ಕಾರಕ್ಕೆ (Punjab Govt) ಕೇಂದ್ರ ಸರ್ಕಾರ ಪತ್ರ ಕಳುಹಿಸಿದ್ದು, ಚರಣ್ ಕೌರ್ ಅವರ ಐವಿಎಫ್ ಚಿಕಿತ್ಸೆ (Charan Kaur’s IVF Treatment) ಕುರಿತು ವರದಿ ಕೇಳಿದೆ.
ಚರಣ್ ಕೌರ್ ಅವರು ಮಗುವಿಗೆ ಜನ್ಮ ನೀಡಲು IVF ಚಿಕಿತ್ಸೆಯ ಮೊರೆ ಹೋಗಿರುವ ಬಗ್ಗೆ ಫೆಬ್ರವರಿ 27ರ ಪತ್ರಿಕಾ ವರದಿಯನ್ನು ಪರಿಶೀಲಿಸಲಾಗಿದೆ. ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ (ತಡೆ) ಕಾಯ್ದೆ, 2021ರ ಸೆಕ್ಷನ್ 21 (g) (i) ಅಡಿ, ಎಆರ್‌ಟಿ ಸೇವೆಗೆ ಒಳಪಡಲಿರುವ ಮಹಿಳೆಯ ವಯಸ್ಸಿನ ಸೂಚಿತ ಮಿತಿಯು 21- 50 ವರ್ಷಗಳಾಗಿರುತ್ತದೆ ಎಂದು ಆರೋಗ್ಯ ಸಚಿವಾಲಯ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ.
2022ರ ಮೇ 29 ರಂದು ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೇವಾಲಾ (Sidhu Moose Wala) ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಇತ್ತ ಇದ್ದ ತಮ್ಮ ಏಕೈಕ ಮಗನನ್ನು ಕಳೆದುಕೊಂಡ ಸುಮಾರು ಎರಡು ವರ್ಷಗಳ ನಂತರ ದಂಪತಿ ಎರಡನೇ ಮಗುವನು ಪಡೆಯುವ ಸಲುವಾಗಿ IVF ಮೊರೆ ಹೋಗಿದ್ದರು. ಇದನ್ನೂ ಓದಿ: ಸದಾನಂದಗೌಡರು ಬಿಜೆಪಿ ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು: ಶೋಭಾ ಕರಂದ್ಲಾಜೆ
ಈ ಸಂಬಂಧ ಎಎಪಿ ನೇತೃತ್ವದ ಸರ್ಕಾರವು ಬುಧವಾರ ಟ್ವೀಟ್ ಮಾಡಿದ್ದು, ಚರಣ್ ಕೌರ್ ಅವರೇ ಸಿಎಂ ಭಗವಂತ್ ಮಾನ್ ಅವರು ಯಾವಾಗಲೂ ಪಂಜಾಬಿಗಳ ಭಾವನೆಗಳು ಮತ್ತು ಘನತೆಯನ್ನು ಗೌರವಿಸುತ್ತಾರೆ. ಆದರೆ ದೇಶದ ಆಡಳಿತದಲ್ಲಿರುವ ಕೇಂದ್ರ ಸರ್ಕಾರವು ಪಂಜಾಬ್ ಸರ್ಕಾರದಿಂದ ವರದಿಯನ್ನು ಕೇಳಿದೆ. ಸತ್ಯಾಸತ್ಯತೆಗಳನ್ನು ನೋಡುವಂತೆ ಜನರನ್ನು ಒತ್ತಾಯಿಸಿ ಮತ್ತು ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಬರೆದುಕೊಂಡಿದೆ.
ಮಹಿಳೆಯರು ಗರ್ಭಿಣಿಯಾಗುವ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವರು ಆರೋಗ್ಯವಂತರಾಗಿದ್ದರೂ ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ. ಇದರಿಂದ ಅವರು ಮಾನಸಿಕ, ದೈಹಿಕ ನೋವು ಅನುಭವಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅದಕ್ಕೆಲ್ಲ ಕೊರಗುವ ಅವಶ್ಯಕತೆ ಇಲ್ಲ, ಯಾಕೆಂದರೆ ವೈದ್ಯ ಲೋಕದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ನಾನಾ ವಿಧಾನಗಳಲ್ಲಿ ಗರ್ಭಧಾರಣೆಗೆ ಪ್ರಯತ್ನ ನಡೆಯುತ್ತದೆ. ಅಂಥವುಗಳಲ್ಲಿ ಐವಿಎಫ್ (IVF Treatment) ಕೂಡ ಒಂದು.
ಏನಿದು ಐವಿಎಫ್?: ಮದುವೆಯಾಗಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಯ ನಂತರವೂ ಗರ್ಭಧರಿಸಲು ಸಾಧ್ಯವಾಗದ ದಂಪತಿ ಈ ಚಿಕಿತ್ಸೆ ತೆಗೆದುಕೊಳ್ಳಲು ಮುಂದಾಗುತ್ತಾರೆ. ಕೃತಕವಾಗಿ ಇನ್ ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಮೂಲಕ ಗರ್ಭಧಾರಣೆ ಮಾಡಬಹುದು. ಅಂದರೆ ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಐವಿಎಫ್ ಎಂದು ಕರೆಯುತ್ತಾರೆ. ವಾಸ್ತವವಾಗಿ ಈ ಐವಿಎಫ್‍ನ ಚಕ್ರವು ಪೂರ್ಣಗೊಳ್ಳಲು 2 ರಿಂದ 3 ವಾರಗಳ ಸಮಯ ಬೇಕಾಗುತ್ತದೆ. ಈ ಅವಧಿ ಕೆಲವೊಮ್ಮೆ ಹೆಚ್ಚು ಕಡಿಮೆಯಾಗಬಹುದು.
ಸಂತಾನೋತ್ಪತ್ತಿ ತಂತ್ರಜ್ಞಾನ: ಐವಿಎಫ್ ಚಿಕಿತ್ಸೆ ಇತ್ತೀಚೆಗೆ ಸಾಕಷ್ಟು ಜನಪ್ರಿಯ ಹಾಗೂ ಪರಿಣಾಮಕಾರಿಯಾಗಿದೆ. ಇದು ಅಂಡಾಣು ಅಥವಾ ಭ್ರೂಣಗಳು ಮತ್ತು ವೀರ್ಯಾಣುಗಳ ನಿರ್ವಹಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತದೆ. ಈ ಕಾರಣದಿಂದಲೇ ಇದನ್ನು `ಸಹಾಯಕ ಸಂತಾನೋತ್ತತ್ತಿ ತಂತ್ರಜ್ಞಾನ’ ಎಂದು ಕರೆಯಲಾಗುತ್ತದೆ.
ದಂಪತಿ ಸ್ವಂತ ಮೊಟ್ಟೆಗಳನ್ನು ಬಳಕೆ ಮಾಡಬಹುದು: ಐವಿಎಫ್ ಚಿಕಿತ್ಸೆಗೆ ಒಳಗಾಗುವ ದಂಪತಿ ತಮ್ಮದೇ ಆದ ಸ್ವಂತ ಮೊಟ್ಟೆಗಳು ಮತ್ತು ವೀರ್ಯವನ್ನು ಬಳಸಿಕೊಂಡು ಚಿಕಿತ್ಸೆ ಪಡೆಯಬಹುದಾಗಿದೆ. ಇದರ ಹೊರತಾಗಿ ಅಪರಿಚಿತ ದಾನಿಗಳ ಮೊಟ್ಟೆ, ವೀರ್ಯ ಅಥವಾ ಭ್ರೂಣಗಳಿಂದಲೂ ಈ ಚಿಕಿತ್ಸೆ ಮಾಡಬಹುದು.
ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ?: ಆರೋಗ್ಯಕರ ಮಗುವನ್ನು ಹೊಂದುವ ನಿಮ್ಮ ಸಾಧ್ಯತೆಗಳು ನಿಮ್ಮ ವಯಸ್ಸು ಮತ್ತು ಬಂಜೆತನದ ಕಾರಣದಂತಹ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.
ಚಿಕಿತ್ಸೆಗೆ ತಯಾರಿ: ಐವಿಎಫ್ ಚಿಕಿತ್ಸೆಗೆ ಒಳಗಾಗುವ ದಂಪತಿ ಮೊದಲು ಅನೇಕ ಮೌಲ್ಯಮಾಪನಗಳಿಗೆ ಒಳಗಾಗುತ್ತಾರೆ. ಮಹಿಳೆಯ ಅಂಡಾಶಯದ ಮೀಸಲು ಸೈಕಲ್ ದಿನದ ಮೂರು ಕೋಶಕ-ಉತ್ತೇಜಿಸುವ ಹಾರ್ಮೋನ್ (FSH) ಮತ್ತು ಎಸ್ಟ್ರಾಡಿಯೋಲ್ (E2), ಆಂಟಿ-ಮುಲ್ಲೆರಿಯನ್ ಹಾರ್ಮೋನ್ (AMH) ಅಥವಾ ಆಂಟ್ರಲ್ ಕೋಶಕ ಎಣಿಕೆಯನ್ನು ಬಳಸಿಕೊಂಡು ಮೌಲ್ಯಮಾಪನ ಮಾಡಲಾಗುತ್ತದೆ. ಈ ಮೌಲ್ಯ ಮಾಪನದಲ್ಲಿ ಮಹಿಳೆಯು ಕಳಪೆ ಅಂಡಾಶಯವನ್ನು ಹೊಂದಿದ್ದರೆ, ಅಂಥವರು ಐವಿಎಫ್ ಚಿಕಿತ್ಸೆ ಪಡೆಯಬಹುದು. ಹಾಗೆಯೇ ವೀರ್ಯ ರೂಪವಿಜ್ಞಾನ, ಎಣಿಕೆ ಮತ್ತು ಚಲನಶೀಲತೆಯ ಆಧಾರದ ಮೇಲೆ ಐಸಿಎಸ್‍ಐ ಅನ್ನು ಸೂಚಿಸಲಾಗಿದೆಯೇ ಎಂದು ಪುರುಷ ಪಾಲುದಾರ ವೀರ್ಯವನ್ನು ಪರೀಕ್ಷಿಸಲಾಗುತ್ತದೆ. ಇವುಗಳ ಜೊತೆಗೆ ದಂಪತಿ ಹೆಚ್‍ಐವಿ, ಹೆಪಟೈಟಿಸ್ ಬಿ, ಮತ್ತು ಅ ಮತ್ತು ಸಿಫಿಲಿಸ್‍ಗಾಗಿ ಸಾಂಕ್ರಾಮಿಕ ರೋಗ ತಪಾಸಣೆಯನ್ನು ಪಾಲುದಾರರಿಗೆ ಶಿಫಾರಸು ಮಾಡಲಾಗಿದೆ.
ಐವಿಎಫ್ ಸಾಧಕ-ಬಾಧಕಗಳನ್ನು ಕೂಡ ಹೊಂದಿದೆ. ಕಾರ್ಯವಿಧಾನದ ಮೂಲಕ ಒಂದಕ್ಕಿಂತ ಹೆಚ್ಚು ಭ್ರೂಣಗಳನ್ನು ಗರ್ಭಾಶಯದಲ್ಲಿ ಇರಿಸಿದರೆ ಅದು ಒಂದಕ್ಕಿಂತ ಹೆಚ್ಚು ಮಗುವಿನ ಗರ್ಭಧಾರಣೆಗೆ ಕಾರಣವಾಗುತ್ತದೆ. ಇದನ್ನು ಸಾಮಾನ್ಯವಾಗಿ `ಬಹು ಗರ್ಭಧಾರಣೆ’ ಎಂದೇ ಕರೆಯುತ್ತಾರೆ.
ಚಿಕಿತ್ಸೆ ತೀರಾ ದುಬಾರಿಯಲ್ಲ ಸಾಮಾನ್ಯವಾಗಿ ಐಯುಐ (Intrauterine insemination) ಮತ್ತು ಐವಿಎಫ್ ಚಿಕಿತ್ಸೆ ಮೂಲಕ ಮಕ್ಕಳನ್ನು ಮಾಡಿಕೊಳ್ಳಲು ತುಂಬಾ ದುಬಾರಿ ಹಣ ತೆರಬೇಕಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಆದರೆ ಆ ತಂತ್ರಜ್ಞಾನದ ಚಿಕಿತ್ಸೆ ತೀರಾ ದುಬಾರಿಯಲ್ಲ. ಉತ್ತಮ ಲ್ಯಾಬ್ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸ್ವಲ್ಪ ಹೆಚ್ಚು ಹಣ ಖರ್ಚಾಗಲಿದೆ. ಅಗತ್ಯ ಪರೀಕ್ಷೆಗಳ ನಂತರ ಐಯುಐಗೆ ಸುಮಾರು 10 ಸಾವಿರ ಮತ್ತು ಐವಿಎಫ್‍ಗೆ ಸುಮಾರು 1.75 ರೂ. ವೆಚ್ಚ ತಗಲಬಹುದು.
ಐವಿಎಫ್ ಮೂಲಕ ಮಕ್ಕಳನ್ನು ಮಾಡಿಕೊಂಡರೆ ಮುಂದೆ ತೊಂದರೆ ಆಗಲಿದೆಯೇ?: ಹಾಗೇನೂ ಇಲ್ಲ, ಅವೂ ಮಾಮೂಲಿ ಮಕ್ಕಳಂತೆ ಇರುತ್ತವೆ. ಅದರಲ್ಲಿಪತ್ನಿಯ ಅಂಡಾಣುವಿನಲ್ಲಿಪತಿಯ ವೀರ್ಯಾಣು ಸೇರಿಸಿ ಭ್ರೂಣ ಬೆಳೆಸುತ್ತೇವೆ. ಅಂಥ ವ್ಯತ್ಯಾಸವೇನೂ ಇಲ್ಲ. ಐವಿಎಫ್ ತಂತ್ರಜ್ಞಾನದ ಮೂಲಕ ಪಡೆಯುವ ಮಕ್ಕಳು ಮಾಮೂಲಿಯಂತೆ ಇರಲಿವೆ, ಅವರಿಗೆ ಭವಿಷ್ಯದಲ್ಲಿಯಾವುದೇ ಆರೋಗ್ಯ ಸಮಸ್ಯೆ ಆಗದು, ಅಡ್ಡ ಪರಿಣಾಮಗಳೇನೂ ಇರುವುದಿಲ್ಲ. ಆ ಮಕ್ಕಳು ಕೂಡ ಸಾಮಾನ್ಯ ಮಕ್ಕಳಂತಿರುತ್ತವೆ. ಯಾವುದೇ ನ್ಯೂನತೆ ಕಾಣುವುದಿಲ್ಲ.
ಹೈದರಾಬಾದ್: ಆಂಧ್ರಪ್ರದೇಶದ ಗುಂಟೂರು ನಗರದಲ್ಲಿ 74 ವರ್ಷದ ವೃದ್ಧೆಯೊಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿ ದಾಖಲೆ ನಿರ್ಮಿಸಿದ್ದಾರೆ. ಇಳಿ ವಯಸ್ಸಿನಲ್ಲಿ 2 ಮಕ್ಕಳಿಗೆ ಜನ್ಮನೀಡಿ ತಾವು ತಾಯಿಯಾಗುವ ಬಯಕೆಯನ್ನು ತೀರಿಸಿಕೊಂಡಿದ್ದಾರೆ.
ಹೌದು, ಈ ವಯಸ್ಸಿನಲ್ಲೂ ಮಗುವಿಗೆ ಜನ್ಮ ನೀಡೋದಾ ಎಂದು ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪಾರ್ತಿಪಾಡು ಗ್ರಾಮದ ನಿವಾಸಿ ಎರ್ರಮಟ್ಟಿ ಮಂಗಯಮ್ಮ(74) ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರ್ರಾಮಟಿ ರಾಜ ರಾವ್(80) ಹಾಗೂ ಮಂಗಯಮ್ಮ ಅವರು ಮಾರ್ಚ್ 22, 1962 ರಂದು ಮದುವೆಯಾಗಿದ್ದರು. ಆದರೆ ರಾಜ ರಾವ್ ಮತ್ತು ಮಂಗಯಮ್ಮ ದಂಪತಿಗೆ ಮಕ್ಕಳಿರಲಿಲ್ಲ. ಬಹುವರ್ಷದಿಂದ ಮಕ್ಕಳನ್ನು ಪಡೆಯುವ ಆಸೆ ಹೊತ್ತಿದ್ದ ದಂಪತಿಯ ಕನಸು ಈಗ ನನಸಾಗಿದೆ. ಈ ಮೂಲಕ ಮಂಗಯಮ್ಮ ಹೊಸ ದಾಖಲೆ ಬರೆದಿದ್ದಾರೆ.
ಸುಮಾರು 30 ದಶಕಗಳಿಂದ ಮಕ್ಕಳು ಪಡೆಯಲು ದಂಪತಿ ಸಾಕಷ್ಟು ವೈದ್ಯರ ಮೊರೆಹೋಗುತ್ತಲೇ ಇದ್ದರು. ಆದರೆ 2018ರ ನವೆಂಬರ್ ತಿಂಗಳಲ್ಲಿ ಅವರು ಗುಂಟೂರಿನ ಅಹಲ್ಯಾ ನರ್ಸಿಂಗ್ ಹೋಂಗೆ ತಮ್ಮ ಸಮಸ್ಯೆಗೆ ಪರಿಹಾರ ಪಡೆಯಲು ಹೋಗಿದ್ದರು. ಅಲ್ಲಿ ಡಾ. ಶಾನಕ್ಯಾಲ ಉಮಾಶಂಕರ್ ಅವರು ದಂಪತಿಯ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಸವಾಲಿನ ಪ್ರಕರಣವನ್ನು ತಮ್ಮ ಕೈಗೆ ತೆಗೆದುಕೊಂಡು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಡಾ. ಶಾನಕ್ಯಾಲ ಉಮಾಶಂಕರ್ ಅವರು, ಮಂಗಯಮ್ಮ ಅವರಿಗೆ ಬಿಪಿ, ಸಕ್ಕರೆ ಕಾಯಿಲೆ ಅಥವಾ ಯಾವುದೇ ಆರೋಗ್ಯದ ತೊಂದರೆ ಇಲ್ಲ. ಅವರ ಆನುವಂಶಿಕ ರೇಖೆಯು ತುಂಬಾ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಹೃದ್ರೋಗ ತಜ್ಞರು, ಶ್ವಾಸಕೋಶಶಾಸ್ತ್ರಜ್ಞರು ಸೇರಿದಂತೆ ಇತರೆ ವಿಶೇಷ ವೈದ್ಯರೊಂದಿಗೆ ಚರ್ಚಿಸಿದ ಬಳಿಕ ಮಂಗಮ್ಮ ಅವರಿಗೆ ಎಲ್ಲಾ ರೀತಿಯ ಪರೀಕ್ಷೆ ನಡೆಸಿ, ನಂತರ ನಾವು ಅವರ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಿದೆವು. ಬಹಳ ವರ್ಷಗಳ ಹಿಂದೆಯೇ ಅವರು ಋತುಬಂಧದ ಹಂತವನ್ನು ತಲುಪಿದ್ದರು. ಆದರೆ ಐವಿಎಫ್(ವಿಟ್ರೊ ಫಲೀಕರಣ ಅಥವಾ ವಿಟ್ರೋ ಫರ್ಟಿಲೈಸೇಷನ್) ಮೂಲಕ ನಾವು ಕೇವಲ ಒಂದು ತಿಂಗಳಲ್ಲಿ ಅವರು ಮತ್ತೆ ಋತುಮತಿಯಾಗುವಂತೆ ಚಿಕಿತ್ಸೆ ಕೊಟ್ಟೆವು ಎಂದು ತಿಳಿಸಿದರು.
ನಂತರ ಐವಿಎಫ್ ವಿಧಾನದಿಂದ ಮಂಗಯಮ್ಮ ಅವರು ಗರ್ಭ ಧರಿಸುವಂತೆ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಜಾಗೃತೆಯಿಂದ ನೋಡಿಕೊಳ್ಳುವುದು ಅವಶ್ಯವಾಗಿದ್ದ ಕಾರಣಕ್ಕೆ ದಂಪತಿಯನ್ನು ಆಸ್ಪತ್ರೆಯಲ್ಲಿಯೇ ಉಳಿಯಲು ಸೂಚಿಸಿದೆವು. ಮಂಗಯಮ್ಮ ಅವರಿಗೆ ಅಗತ್ಯ ಪೋಷ್ಠಿಕಾಂಶ, ಆರೈಕೆ, ಚಿಕಿತ್ಸೆ ನೀಡಿ ಆಸ್ಪತ್ರೆಯಲ್ಲಿಯೇ ನೋಡಿಕೊಳ್ಳಲಾಗುತ್ತಿತ್ತು. ಅವರ ವಯಸ್ಸಿಗೆ ನಾರ್ಮಲ್ ಡೆಲಿವರಿ ಆಗುವುದು ಕಷ್ಟದ ವಿಚಾರವಾಗಿದ್ದ ಕಾರಣಕ್ಕೆ ಸಿಸೇರಿಯನ್ ಮಾಡಬೇಕಾಯಿತು. ಸದ್ಯ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ತಾಯಿಯಾದ ಖುಷಿಯನ್ನು ಮಂಗಯಮ್ಮ ಅವರು ಹಂಚಿಕೊಂಡು, ನಾವು ಮಕ್ಕಳಿಲ್ಲದೆ ಕೊನೆಯುಸಿರು ಎಳೆಯುತ್ತೇವೆ ಎಂದು ಅಂದುಕೊಂಡಿದ್ದೆ. ಆದರೆ ನಮ್ಮ ಮನೆಯ ಪಕ್ಕದಲ್ಲಿದ್ದ ಮಹಿಳೆಯೊಬ್ಬರು 55ರ ವಯಸ್ಸಿನಲ್ಲಿ ತಾಯಿಯಾಗಿದ್ದರು. ಅವರು ಐವಿಎಫ್ ತಂತ್ರಜ್ಞಾನದ ಮೂಲಕ ಮಕ್ಕಳು ಪಡೆಯುವ ವಯಸ್ಸು ಮೀರಿದ್ದರೂ ಮಕ್ಕಳು ಪಡೆಯಬಹುದು ಎಂದು ಹೇಳಿದ್ದರು. ಆಗ ನಾನು ಪತಿಗೆ ಈ ಬಗ್ಗೆ ತಿಳಿಸಿದೆ, ಅವರೂ ಕೂಡ ಇದಕ್ಕೆ ಒಪ್ಪಿಕೊಂಡರು. ನಾನು ಈಗ ಬಹಳ ಖುಷಿಯಾಗಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದರು.
ಇತ್ತೀಚೆಗೆ ರಾಜಸ್ತಾನ ಮೂಲದ ದಲ್ಜಿಂಧರ್ ಕೌರ್ ಅವರು ತಮ್ಮ 70ರ ವಯಸ್ಸಿನಲ್ಲಿ ತಾಯಿಯಾಗಿ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಮಂಗಯಮ್ಮ ಅವರು ಮುರಿದು, ಹೊಸ ದಾಖಲೆ ಸೃಷ್ಟಿಸಿದ್ದಾರೆ.