Tag: IUML

  • ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

    ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

    ತಿರುವನಂತಪುರಂ: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಬ್ಯಾನ್‌ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇರಳದ (Kerala) ಕಾಂಗ್ರೆಸ್‌ (Congress) ಹಾಗೂ ಅದರ ಮಿತ್ರ ಪಕ್ಷ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (IUML) ಸ್ವಾಗತಿಸಿದೆ. ಅಲ್ಲದೇ ಪಿಎಫ್‌ಐನಂತೆಯೇ ಆರ್‌ಎಸ್‌ಎಸ್‌ (RSS) ಕೂಡ ಬ್ಯಾನ್‌ ಮಾಡಬೇಕು ಎಂದು ಒತ್ತಾಯಿಸಿವೆ.

    PFIನ ಚಟುವಟಿಕೆಗಳನ್ನು ತೀವ್ರವಾಗಿ ಖಂಡಿಸಿದ IUML (ಮುಸ್ಲಿಂ ಲೀಗ್) ನ ಹಿರಿಯ ನಾಯಕ ಎಂ.ಕೆ.ಮುನೀರ್, ಈ ಸಂಘಟನೆಯು ಕುರಾನ್ ಅನ್ನು ತಪ್ಪಾಗಿ ಅರ್ಥೈಸಿದೆ. ಹಿಂಸಾಚಾರದ ಮಾರ್ಗವನ್ನು ಅಳವಡಿಸಿಕೊಳ್ಳಲು ಸಮುದಾಯದವರನ್ನು ಪ್ರೇರಿಪಿಸಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್‌ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್‌

    ಪಿಎಫ್‌ಐ ಯುವ ಪೀಳಿಗೆಯನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ. ಅಲ್ಲದೇ ಸಮಾಜದಲ್ಲಿ ಒಡಕು ಮತ್ತು ದ್ವೇಷ ಸೃಷ್ಟಿಸಲು ಪ್ರಯತ್ನಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಪಿಎಫ್‌ಐನಂತೆಯೇ ಆರ್‌ಎಸ್‌ಎಸ್ ಅನ್ನು ಕೂಡ ನಿಷೇಧಿಸಬೇಕು. ಕೇರಳದಲ್ಲಿ ಬಹುಸಂಖ್ಯಾತ ಕೋಮುವಾದ ಮತ್ತು ಅಲ್ಪಸಂಖ್ಯಾತ ಕೋಮುವಾದ ಎರಡನ್ನೂ ಸಮಾನವಾಗಿ ವಿರೋಧಿಸಬೇಕು. ಎರಡೂ ಸಂಘಟನೆಗಳು ಕೋಮು ದ್ವೇಷವನ್ನು ಕೆರಳಿಸಿ ಸಮಾಜದಲ್ಲಿ ಒಡಕು ಮೂಡಿಸಲು ಯತ್ನಿಸಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಣ್ಣ ಮಕ್ಕಳ ಬಾಯಲ್ಲೂ ಅವಹೇಳನಕಾರಿ ಘೋಷಣೆ ಹಾಕಿಸಿತ್ತು – PFI ನಿಷೇಧವನ್ನು ಸ್ವಾಗತಿಸಿದ ಮುಸ್ಲಿಮ್‌ ಲೀಗ್‌

    ಮಂಗಳವಾರ ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಅನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರವು ಇಸ್ಲಾಮಿ ಸಂಘಟನೆ ಮತ್ತು ಅದರ ಅಂಗಸಂಸ್ಥೆಗಳು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಸಣ್ಣ ಮಕ್ಕಳ ಬಾಯಲ್ಲೂ ಅವಹೇಳನಕಾರಿ ಘೋಷಣೆ ಹಾಕಿಸಿತ್ತು – PFI ನಿಷೇಧವನ್ನು ಸ್ವಾಗತಿಸಿದ ಮುಸ್ಲಿಮ್‌ ಲೀಗ್‌

    ಸಣ್ಣ ಮಕ್ಕಳ ಬಾಯಲ್ಲೂ ಅವಹೇಳನಕಾರಿ ಘೋಷಣೆ ಹಾಕಿಸಿತ್ತು – PFI ನಿಷೇಧವನ್ನು ಸ್ವಾಗತಿಸಿದ ಮುಸ್ಲಿಮ್‌ ಲೀಗ್‌

    ತಿರುವನಂತಪುರಂ: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾವನ್ನು(PFI) ನಿಷೇಧ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(IUML)ಸ್ವಾಗತಿಸಿದೆ.

    ಪಿಎಫ್‌ಐ ಚಟುವಟಿಕೆಗಳನ್ನು ಖಂಡಿಸಿದ ಮುಸ್ಲಿಂ ಲೀಗ್‌ನ ಹಿರಿಯ ನಾಯಕ ಎಂ.ಕೆ.ಮುನೀರ್(MK Muneer), ಈ ಸಂಘಟನೆಯೂ ಕುರಾನ್ ಅನ್ನು ತಪ್ಪಾಗಿ ಅರ್ಥೈಸಿದೆ ಮತ್ತು ಹಿಂಸಾಚಾರದ ಮಾರ್ಗವನ್ನು ಅಳವಡಿಸಿಕೊಳ್ಳಲು ಸಮುದಾಯದವರನ್ನು ಮನವೊಲಿಸಿತ್ತು ಎಂದು ಹೇಳಿದರು. ಇದನ್ನೂ ಓದಿ: ದೇಶಪ್ರೇಮಿ ಮುಸ್ಲಿಮರು ಯೋಚನೆ ಮಾಡಬೇಕಾದ ಅಗತ್ಯವಿದೆ: ಸಿ.ಟಿ ರವಿ


    ಕೋಝಿಕ್ಕೋಡ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ಪಿಎಫ್‌ಐ ಯುವ ಪೀಳಿಗೆಯನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದು ಮಾತ್ರವಲ್ಲದೆ ಸಮಾಜದಲ್ಲಿ ಒಡಕು ಮತ್ತು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸಿತ್ತು ಎಂದು ಕಿಡಿಕಾರಿದರು.

    ರಾಜ್ಯದಲ್ಲಿರುವ ಎಲ್ಲಾ ಇಸ್ಲಾಮಿಕ್ ವಿದ್ವಾಂಸರು ಉಗ್ರಗಾಮಿ ಸಿದ್ಧಾಂತಗಳನ್ನು ಬಲವಾಗಿ ಖಂಡಿಸಿದ್ದಾರೆ. ಆದರೆ ಪಿಎಫ್‌ಐ ಸಣ್ಣ ಮಕ್ಕಳ ಬಾಯಲ್ಲೂ ಅವಹೇಳನಕಾರಿ ಘೋಷಣೆಗಳನ್ನು ಕೂಗುವಂತೆ ಮಾಡಿತ್ತು. ಯಾವ ಇಸ್ಲಾಂ ಅವರನ್ನು ಹಾಗೆ ಮಾಡಲು ಹೇಳಿದೆ ಎಂದು ಪ್ರಶ್ನಿಸಿದರು.

    ಆರ್‌ಎಸ್‌ಎಸ್ ಮತ್ತು ಪಿಎಫ್‌ಐ-ಎಸ್‌ಡಿಪಿಐ ಎರಡರ ಕಾರ್ಯಗಳನ್ನು ಮುಸ್ಲಿಮ್‌ ಲೀಗ್‌ ಯಾವಾಗಲೂ ವಿರೋಧಿಸುತ್ತದೆ ಎಂದು ಹೇಳಿದ ಮುನೀರ್, ಆಯಾ ಸಮುದಾಯಗಳು ಅಂತಹ ಸಂಘಟನೆಗಳ ಕೋಮು ಸಿದ್ಧಾಂತಗಳನ್ನು ತಿರಸ್ಕರಿಸಬೇಕು ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ತರಗತಿಗಳಲ್ಲಿ ಹುಡುಗ-ಹುಡುಗಿ ಒಟ್ಟಿಗೇ ಕೂರೋದು ಅಪಾಯಕಾರಿ: ಮುಸ್ಲಿಂ ಮುಖಂಡ ಹೇಳಿಕೆ

    ತರಗತಿಗಳಲ್ಲಿ ಹುಡುಗ-ಹುಡುಗಿ ಒಟ್ಟಿಗೇ ಕೂರೋದು ಅಪಾಯಕಾರಿ: ಮುಸ್ಲಿಂ ಮುಖಂಡ ಹೇಳಿಕೆ

    ತಿರುವನಂತಪುರಂ: ಶಾಲಾ ತರಗತಿಗಳಲ್ಲಿ ಹುಡುಗ-ಹುಡುಗಿಯರು ಒಟ್ಟಿಗೇ ಕೂರೋದು ಅಪಾಯಕಾರಿ ಎಂದು ಕೇರಳ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಮ್ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ.

    ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಕುರಿತು ಅವರು ಮಾತನಾಡಿದ್ದು, ಇಂತಹ ಬೆಳವಣಿಗೆ ಅಪಾಯಕಾರಿ. ಅಷ್ಟಕ್ಕೂ ಹುಡುಗ ಹುಡುಗಿಯರು ತರಗತಿಯಲ್ಲಿ ಒಟ್ಟಿಗೆ ಕುಳಿತುಕೊಳ್ಳುವ ಅವಶ್ಯಕತೆ ಏನು? ನೀವು ಅವರನ್ನು ಏಕೆ ಒತ್ತಾಯಿಸುತ್ತಿದ್ದೀರಿ ಅಥವಾ ಅಂತಹ ಅವಕಾಶಗಳನ್ನು ಏಕೆ ಸೃಷ್ಟಿಸುತ್ತಿದ್ದೀರಿ? ಇದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಅಧ್ಯಯನದಿಂದ ವಿಮುಖರಾಗುತ್ತಾರೆ ಎಂದು ಸಲಾಮ್ ಕೇರಳ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮನೆಯ ಸಾಮಾನ್ಯ ವಸ್ತುಗಳ ಮೇಲೂ ಉಳಿಯಬಹುದು ಮಂಕಿಪಾಕ್ಸ್ ವೈರಸ್ – ವರದಿ

    ಲಿಂಗ ತಟಸ್ಥತೆಯು ಧಾರ್ಮಿಕ ವಿಷಯವಲ್ಲ, ನೈತಿಕ ಸಮಸ್ಯೆಯಾಗಿದೆ. ಈ ಲಿಂಗ ತಟಸ್ಥತೆಯು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತದೆ. ಹಾಗಾಗಿ ಈ ನೀತಿಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜೊತೆ ಜೊತೆಯಲಿ ಗಲಾಟೆ: ಮಕ್ಕಳ ಮೇಲೆ ಆಣೆ ಪ್ರಮಾಣಕ್ಕೆ ಮುಂದಾದ ನಟ ಅನಿರುದ್ಧ

    ಈ ಹಿಂದೆಯೂ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ ತಟಸ್ಥತೆಯ ವಿಚಾರದಲ್ಲಿ ಹಿಂದೆ ಸರಿಯುವಂತೆ ಮುಸ್ಲಿಂ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದವು.

    Live Tv
    [brid partner=56869869 player=32851 video=960834 autoplay=true]

  • ಪೋಸ್ಟರ್ ಹರಿದಿದ್ದಕ್ಕೆ DYFI ಕಾರ್ಯಕರ್ತನ ಮೇಲೆ ಹಲ್ಲೆ – 25 ಮಂದಿ ವಿರುದ್ಧ ಕೇಸ್, ಐವರು ವಶಕ್ಕೆ

    ಪೋಸ್ಟರ್ ಹರಿದಿದ್ದಕ್ಕೆ DYFI ಕಾರ್ಯಕರ್ತನ ಮೇಲೆ ಹಲ್ಲೆ – 25 ಮಂದಿ ವಿರುದ್ಧ ಕೇಸ್, ಐವರು ವಶಕ್ಕೆ

    ತಿರುವನಂತಪುರಂ: ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‍ಐ) ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್)ನ 29 ಕಾರ್ಯಕರ್ತರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ಎಸ್‍ಡಿಪಿಐನ ಐವರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

    ಬುಧವಾರ ರಾತ್ರಿ ಕೇರಳದ ಕೋಝಿಕ್ಕೋಡ್‍ನಲ್ಲಿ ಸುಮಾರು 30 ಐಯುಎಂಎಲ್ ಮತ್ತು ಎಸ್‍ಡಿಪಿಐ ಕಾರ್ಯಕರ್ತರು ಡಿವೈಎಫ್‍ಐ ಕಾರ್ಯಕರ್ತರಾಗಿರುವ ಜಿಷ್ಣು ರಾಜ್ ಮೇಲೆ ಹಲ್ಲೆ ನಡೆಸಿದ್ದರು. ಎಸ್‍ಡಿಪಿಐ ಪೋಸ್ಟರ್ ಹರಿದ ಹಿನ್ನೆಲೆ ಜಿಷ್ಣು ರಾಜ್ ಮೇಲೆ ಹಲ್ಲೆ ನಡೆಸಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ದ್ರೌಪದಿ ಮುರ್ಮು

    ಘಟನೆಯಲ್ಲಿ ಗಾಯಗೊಂಡ ಜಿಷ್ಣು ರಾಜ್ ಸದ್ಯ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಕಣ್ಣು ಮತ್ತು ಮುಖಕ್ಕೆ ಗಂಭೀರವಾಗಿ ಪೆಟ್ಟಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕರ ಸೂಚನೆಯ ಮೇರೆಗೆ ಫ್ಲೆಕ್ಸ್ ಹರಿದು ಹಾಕಿರುವುದಾಗಿ ಜಿಷ್ಣು ರಾಜ್ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ:  ಪ್ರಧಾನಿ ಮೋದಿ ಭೇಟಿ ಮಾಡಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು – ನಾಳೆ ನಾಮಪತ್ರ ಸಲ್ಲಿಕೆ

    ಘಟನೆಯ ನಂತರ ಡಿವೈಎಫ್‍ಐ ಕಾರ್ಯಕರ್ತರು ಕೋಝಿಕ್ಕೋಡ್‍ನ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ಎಸ್‍ಡಿಪಿಐ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಹಿನ್ನೆಲೆ ಐವರು ಎಸ್‍ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಯತ್ನಿಸಿದ ಆರೋಪದಡಿ ಜಿಷ್ಣುವಿನ ವಿರುದ್ಧ ಕೂಡ ಪ್ರಕರಣ ದಾಖಲಿಸಿದ್ದಾರೆ.

    Live Tv