Tag: ITR

  • ವಿದೇಶಿ ಸ್ವತ್ತು, ಆದಾಯ ಘೋಷಿಸದಿದ್ರೆ 10 ಲಕ್ಷ ರೂ. ದಂಡ – ಕೊನೇ ದಿನ ಯಾವಾಗ?

    ವಿದೇಶಿ ಸ್ವತ್ತು, ಆದಾಯ ಘೋಷಿಸದಿದ್ರೆ 10 ಲಕ್ಷ ರೂ. ದಂಡ – ಕೊನೇ ದಿನ ಯಾವಾಗ?

    ನವದೆಹಲಿ: ತೆರಿಗೆದಾರರು ವಿದೇಶದಲ್ಲಿ ಹೊಂದಿರುವ ಆಸ್ತಿ (Foreign Aassets) ಅಥವಾ ವಿದೇಶದಿಂದ ಗಳಿಸಿದ ಆದಾಯದ ವಿವರ ಘೋಷಿಸದಿದ್ದರೇ ಅಂತಹವರಿಗೆ ಕಪ್ಪುಹಣ ತಡೆ ಕಾಯ್ದೆ ಅಡಿಯಲ್ಲಿ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ (Income Tax Department) ಎಚ್ಚರಿಕೆ ನೀಡಿದೆ.

    2024-25ನೇ ಐಟಿ ರಿಟರ್ನ್ಸ್‌ (ITR) ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸಿರುವ ಐಟಿಆರ್‌ಗಳಲ್ಲಿ ವಿದೇಶಿ ಸ್ವತ್ತು ಅಥವಾ ಆದಾಯ ಕುರಿತು ಘೋಷಣೆ ಮಾಡದಿರುವ ತೆರಿಗೆದಾರರಿಗೆ ಸಂದೇಶ ರವಾನಿಸಲು ಅಭಿಯಾನ ಆರಂಭಿಸಲಾಗಿದೆ. ಇದರ ಭಾಗವಾಗಿ ಇಲಾಖೆಯು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಮಾಹಿತಿ ಪ್ರಕಟಿಸಿದೆ. ಇದನ್ನೂ ಓದಿ: Pushpa 2 The Rule Trailer: ಪುಷ್ಪ ಅಂದ್ರೆ ಫೈಯರ್‌ ಅಲ್ಲ, ವೈಲ್ಡ್‌ ಫೈಯರ್‌ – ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್‌ ಖದರ್‌

    ವಿದೇಶಿ ಆಸ್ತಿ ಎಂದರೇನು?
    ಐ-ಟಿ ಇಲಾಖೆಯ ಸಲಹೆಯ ಪ್ರಕಾರ, ವಿದೇಶದಲ್ಲಿ ಬ್ಯಾಂಕ್ ಖಾತೆ, ವಿಮಾ ಒಪ್ಪಂದ, ಕಂಪನಿ ಅಥವಾ ವ್ಯವಹಾರದಲ್ಲಿನ ಬಡ್ಡಿ. ಸ್ಥಿರಾಸ್ತಿ, ಕಸ್ಟೋಡಿಯಲ್ ಖಾತೆ, ಟ್ರಸ್ಟಿ, ಷೇರು ಮತ್ತು ಸಾಲಪತ್ರಕ್ಕೆ ಲಭಿಸಿರುವ ಬಡ್ಡಿ ಇತ್ಯಾದಿಯನ್ನು ವಿದೇಶಿ ಸ್ವತ್ತು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ರಾತ್ರೋ ರಾತ್ರಿ ಬದಲಾಗ್ತಿದ್ಯಾ ಎಪಿಎಲ್, ಬಿಪಿಎಲ್ ಕಾರ್ಡ್? – ಅರ್ಹರಿಗೆ ಮಾತ್ರ ಸಿಗತ್ತೆ ಅಂತ ಸಿಎಂ ಸ್ಪಷ್ಟನೆ

    2024-25ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ವಿಳಂಬ ಹಾಗೂ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರಂದು ಅಂತಿಮ ದಿನವಾಗಿದೆ. ಹಾಗಾಗಿ ಎಲ್ಲಾ ಅರ್ಹ ತೆರಿಗೆದಾರರು ತಮ್ಮ ಐಟಿ ರಿಟರ್ನ್ಸ್‌ನಲ್ಲಿ ವಿದೇಶಿ ಆಸ್ತಿ (ಎಫ್‌ಎ) ಅಥವಾ ವಿದೇಶಿ ಮೂಲ ಆದಾಯ (ಎಫ್‌ಎಸ್‌ಐ) ವೇಳಾಪಟ್ಟಿಯನ್ನು ʻಕಡ್ಡಾಯವಾಗಿʼ ಭರ್ತಿ ಮಾಡಬೇಕು ಎಂದು ಎಂದು ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ಮಣಿಪುರದ ಭದ್ರತಾ ವ್ಯವಸ್ಥೆ ಕುರಿತು ಅಮಿತ್ ಶಾ ಸಭೆ – ಸೋಮವಾರವೂ ಹೈವೋಲ್ಟೇಜ್‌ ಮೀಟಿಂಗ್‌ 

  • ಇಂದಿನಿಂದ ಹೊಸ ದುಬಾರಿ ಜೀವನ – ಎಲ್‍ಪಿಜಿ ಸಿಲಿಂಡರ್, ಹಾಲು, ಬ್ಯಾಂಕಿಂಗ್ ಚಾರ್ಜ್ ಹೆಚ್ಚಳ

    ಇಂದಿನಿಂದ ಹೊಸ ದುಬಾರಿ ಜೀವನ – ಎಲ್‍ಪಿಜಿ ಸಿಲಿಂಡರ್, ಹಾಲು, ಬ್ಯಾಂಕಿಂಗ್ ಚಾರ್ಜ್ ಹೆಚ್ಚಳ

    ನವದೆಹಲಿ: ಇಂದಿನಿಂದ ಹೊಸ ದುಬಾರಿ ಜೀವನಕ್ಕೆ ಜನರು ಹೊಂದಿಕೊಳ್ಳಬೇಕಿದೆ. ಕೊರೊನಾ ಲಾಕ್‍ಡೌನ್ ವೇಳೆ ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಸಂಕಷ್ಟದ ನಡುವೆ ಬೆಲೆ ಏರಿಕೆ ಹೊಡೆತ ಸಾರ್ವಜನಿಕರ ಮೇಲೆ ಬೀಳಲಿದೆ. ಹಾಲು, ಎಲ್‍ಪಿಜಿ ಸಿಲಿಂಡರ್ ಮತ್ತು ಬ್ಯಾಂಕ್ ಸೇವೆಗಳ ಶುಲ್ಕ ಇಂದಿನಿಂದ ಏರಿಕೆಯಾಗಲಿದೆ.

    ದುಬಾರಿ ಆಯ್ತು ಅಮೂಲ್ ಹಾಲು:
    ಅಮೂಲ್ ಹಾಲು ಇಂದಿನಿಂದ ತನ್ನ ಬೆಲೆಯನ್ನ ಹೆಚ್ಚಿಸಿಕೊಂಡಿದೆ. ದೆಹಲಿ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಅಮೂಲ್ ಉತ್ಪನ್ನಗಳು ತುಟ್ಟಿಯಾಗಲಿವೆ. ಪ್ರತಿ ಲೀಟರ್ ಹಾಲಿನ ಮೇಲೆ ಎರಡು ರೂಪಾಯಿಯನ್ನ ಅಮೂಲ್ ಹೆಚ್ಚಳ ಮಾಡಿಕೊಂಡಿದೆ. ಅಮೂಲ್ ಒಂದೂವರೆ ವರ್ಷದ ಬಳಿಕ ತನ್ನ ಉತ್ಪನ್ನಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಿಕೊಂಡಿದೆ. ಬುಧವಾರವೇ ಅಮೂಲ್ ತನ್ನ ಬೆಲೆ ಏರಿಕೆಯ ಮಾಹಿತಿಯನ್ನು ನೀಡಿತ್ತು.

    ಇಂದಿನಿಂದ ಅಮೂಲ್ ಗೋಲ್ಡ್ 58 ರೂ. ಪ್ರತಿ ಲೀಟರ್, ಅಮೂಕ್ ತಾಜಾ 46 ರೂ. ಪ್ರತಿ ಲೀ., ಅಮೂಲ್ ಶಕ್ತಿ 52 ರೂ.ಪ್ರತಿ ಲೀಟರ್ ಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಅಮೂಲ್ ಬಳಿಕ ಇನ್ನುಳಿದ ಹಾಲು ಉತ್ಪಾದಕ ಕಂಪನಿಗಳು ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

    ಬ್ಯಾಂಕ್ ಚಾರ್ಜ್ ಹೆಚ್ಚಳ:
    ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‍ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ತನ್ನ ಸೇವಾ ಶುಲ್ಕವನ್ನು ಹೆಚ್ಚಿಸಿಕೊಂಡಿದೆ. ಈಗ ಗ್ರಾಹಕರು ಎಟಿಎಂನಿಂದ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಉಚಿತವಾಗಿ ಹಣ ಡ್ರಾ ಮಾಡಬಹುದು. ನಾಲ್ಕಕ್ಕಿಂತ ಹೆಚ್ಚಿನ ವಹಿವಾಟು ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಪ್ರತಿ ವಹಿವಾಟಿನ ಮೇಲೆ 15 ರೂ.ಶುಲ್ಕವನ್ನು ಗ್ರಾಹಕರು ಪಾವತಿಸಬೇಕು.

    ಚೆಕ್ ಬಳಕೆ ಮೇಲೆಯೂ ಶುಲ್ಕ: ಎಟಿಎಂ ಮಾತ್ರ ಅಲ್ಲದೇ ಚೆಕ್ ಬಳಕೆಯ ಮೇಲೆಯೂ ಎಸ್‍ಬಿಐ ಶುಲ್ಕ ವಿಧಿಸುತ್ತಿದೆ. ವಿತ್ತಿಯ ವರ್ಷದಲ್ಲಿ ಒಬ್ಬ ಗ್ರಾಹಕ 10 ಚೆಕ್ ಗಳ ಬಳಕೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. 10ಕ್ಕಿಂತ ಹೆಚ್ಚಾದ್ರೆ ಬ್ಯಾಂಕಿನ ಶುಲ್ಕ ಪಾವತಿಸಬೇಕು. ಎಸ್‍ಬಿಐ ಜೊತೆ ಆಕ್ಸಿಸ್, ಐಡಿಬಿಐ ಬ್ಯಾಂಕ್ ಸಹ ಎಸ್‍ಎಂಎಸ್, ಲಾಕರ್ ಚಾರ್ಜ್ ಹೆಚ್ಚಿಸಿಕೊಂಡಿವೆ. ಇಂದಿನಿಂದಲೇ ಈ ಹೊಸ ಶುಲ್ಕಗಳು ಅನ್ವಯವಾಗಲಿವೆ.

    ಟಿಡಿಎಸ್ ಕಟ್: ಕಳೆದ ಎರಡು ವರ್ಷಗಳಿಂದ ಐಟಿಆರ್ ಪಾವತಿಸದ ಜನರ ಟಿಡಿಎಸ್ ಜುಲೈನಿಂದ ಹೆಚ್ಚು ಕಟ್ ಆಗಲಿದೆ. 50 ಸಾವಿರ ರೂ.ಕ್ಕಿಂತ ಹೆಚ್ಚು ಟಿಡಿಎಸ್ ಕಟ್ ಆಗುವರಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ.

    ಎಲ್‍ಪಿಜಿಯೂ ತುಟ್ಟಿಯಾಯ್ತು:
    ಇದೆಲ್ಲದರ ಜೊತೆ ಎಲ್‍ಪಿಜಿ ಸಿಲಿಂಡರ್ ಬೆಲೆಯೂ ಇಂದಿನಿಂದ ಹೆಚ್ಚಳವಾಗುತ್ತಿದೆ. ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ಮೇಲೆ 25 ರೂ. ಹೆಚ್ಚು ನೀಡಬೇಕು. ಗೃಹ ಬಳಕೆಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 834 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ 861 ರೂಪಾಯಿ, ಬೆಂಗಳೂರಿನಲ್ಲಿ 812 ರೂ.ಇದೆ. ಇನ್ನೂ 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ದೆಹಲಿಯಲ್ಲಿ 1,550 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ‘ಸಾಲ’ ರೂಪದ ಸಹಾಯ

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಜೊತೆ ಸದ್ಯ ಹೊಸ ಹೊಸ ಶುಲ್ಕಗಳು ಜನ ಸಾಮನ್ಯರ ಜೇಬಿಗೆ ಹಂತ ಹಂತವಾಗಿ ಕತ್ತರಿ ಹಾಕಲಿವೆ. ಕಳೆದ ತಿಂಗಳಿನಲ್ಲಿ ಒಟ್ಟು 16 ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕಂಡಿದೆ. ಇದನ್ನೂ ಓದಿ: ಮೊದಲು ಲಸಿಕೆ, ನಂತರ ಮನ್ ಕೀ ಬಾತ್: ರಾಹುಲ್ ಕಿಡಿ

  • ಐಟಿಆರ್ ಸಲ್ಲಿಕೆ ಅವಧಿ ಡಿ.31ರವರೆಗೆ ವಿಸ್ತರಣೆ

    ಐಟಿಆರ್ ಸಲ್ಲಿಕೆ ಅವಧಿ ಡಿ.31ರವರೆಗೆ ವಿಸ್ತರಣೆ

    ನವದೆಹಲಿ: ಕೇಂದ್ರ ವಿತ್ತ ಸಚಿವಾಲಯ ಐಟಿಆರ್ ಸಲ್ಲಿಕೆಯ ಅವಧಿಯನ್ನ ಡಿಸೆಂಬರ್ 31, 2020ರವರೆಗೆ ವಿಸ್ತರಣೆ ಮಾಡಿದೆ. 2019-20 ಹಣಕಾಸಿನ ವರ್ಷದ ಇನ್‍ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯ ಸಮಯವನ್ನ ವಿಸ್ತರಣೆ ಮಾಡಲಾಗಿದೆ.

    ಈ ಮೊದಲು ನವೆಂಬರ್ 30 ಐಟಿಆರ್ ಸಲ್ಲಿಕೆಯ ಅಂತಿಮ ದಿನವಾಗಿತ್ತು. ಈ ಹಿಂದೆ ಜುಲೈ 31ಕ್ಕೆ ಅಂತಿಮ ಗಡುವನ್ನ ಸರ್ಕಾರ ನವೆಂಬರ್ 30ಕ್ಕೂ ಮುಂದೂಡಿತ್ತು. ಕೊರೊನಾ ವೈರಸ್ ಸಂಕಷ್ಟ ಮತ್ತು ತೆರಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅವಧಿ ವಿಸ್ತರಣೆ ಮಾಡಲಾಗುತ್ತಿದೆ ಎಂದು ವಿತ್ತ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.

    ನಾಲ್ಕನೇ ಬಾರಿಗೆ ಸರ್ಕಾರ ಐಟಿಆರ್ ಸಲ್ಲಿಕೆಯ ಅಂತಿಮ ದಿನಾಂಕವನ್ನ ಮುಂದೂಡುತ್ತಾ ಬಂದಿದೆ.