Tag: Iti Acharya

  • ಬಾಲಿವುಡ್‌ಗೆ ಹಾರಿದ ಕನ್ನಡತಿ ಇತಿ ಆಚಾರ್ಯ

    ಬಾಲಿವುಡ್‌ಗೆ ಹಾರಿದ ಕನ್ನಡತಿ ಇತಿ ಆಚಾರ್ಯ

    ನ್ನಡತಿ ಇತಿ ಆಚಾರ್ಯ (Iti Acharya) ನಟನೆ ಜೊತೆಗೆ ಮಾಡೆಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ. 2016ರ ಮಿಸ್ ಸೌತ್ ಇಂಡಿಯಾ ವಿನ್ನರ್ ಕಿರೀಟ ಮುಡಿಗೇರಿಸಿಕೊಂಡಿರುವ ಈ ಕನ್ನಡತಿ ಆರ್.ವಿ.ಎಸ್.ಪಿ. ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿ ಆಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್‌ನ ಹೊಸ ಸಿನಿಮಾ ವಿಚಾರವಾಗಿ ಗುರುತಿಸಿಕೊಂಡಿದ್ದಾರೆ.

    ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋರ್ಡಿಂಗ್ಸ್‌ನಲ್ಲಿ ಕಾಣಿಸಿಕೊಂಡ ಹಿರಿಮೆ ಅವರದ್ದು. ಅಮೇರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಇತಿ ಆಚಾರ್ಯ ಅವರು ಜನಪ್ರಿಯತೆ ಪಡೆದಿದ್ದಾರೆ. ಇದನ್ನೂ ಓದಿ:ಸೆಟ್ಟೇರಿತು ‘ಅರಸು’ ಡೈರೆಕ್ಟರ್ ಹೊಸ ಸಿನಿಮಾ- ಸ್ಮೈಲ್ ಗುರು ರಕ್ಷಿತ್ ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಸಾಥ್

    ಇತಿ ಆಚಾರ್ಯ ತಮ್ಮ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ದಿ ಶೂಸ್ ಐ ವೋರ್’ ಎಂಬ ಹೊಸ ಹಿಂದಿ ಚಿತ್ರದಲ್ಲಿ ಇತಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಯುವ ಪ್ರತಿಭೆ ಸಂಜಯ್ ಚರಣ್ ನಿರ್ದೇಶನದ ಈ ಸಿನಿಮಾದಲ್ಲಿ ಇನ್ನಮುಲ್ಕ್ ಮತ್ತು ಸ್ಕ್ಯಾಮ್ ಖ್ಯಾತಿಯ ಫೈಸಲ್ ರಶೀದ್‌ಗೆ ಜೋಡಿಯಾಗಿ ಕನ್ನಡತಿ ಅಭಿನಯಿಸಲಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇತಿ ಆಚಾರ್ಯ, ನಾನು ಈ ಸಿನಿಮಾದ ಭಾಗವಾಗಿರುವುದಕ್ಕೆ ಖುಷಿ ಇದೆ. ತುಂಬಾ ಉತ್ಸುಕಳಾಗಿದ್ದೇನೆ. ಈ ಪಯಣದಲ್ಲಿ ಸಾಕಷ್ಟು ಕಲಿಯುವುದು ಇದೆ. ವಿಭಿನ್ನ ಕಥೆಯಾಗಿದ್ದು, ಇದೊಂದು ಟೆಕ್ನಿಕಲ್ ಸಿನಿಮಾ ಎಂದಿದ್ದಾರೆ.

    ಇತಿ ಆಚಾರ್ಯ, ಕನ್ನಡದಲ್ಲಿ ಕವಚ (Kavacha), ಧ್ವನಿ, ಡೀಲ್ ರಾಜಾ, ಪಂಗನಾಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

  • ಹಾಲಿವುಡ್ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ ಇತಿ ಆಚಾರ್ಯ

    ಹಾಲಿವುಡ್ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ ಇತಿ ಆಚಾರ್ಯ

    ‘ಕವಚ’ ಸಿನಿಮಾ ಖ್ಯಾತಿಯ ನಟಿ ಹಾಗೂ ನಿರ್ಮಾಪಕಿ ಇತಿ ಆಚಾರ್ಯ (Iti Acharya) ಅಮೆರಿಕನ್ (American) ಮ್ಯೂಸಿಕ್ ವೀಡಿಯೋದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೆರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ (Music) ನಿರ್ದೇಶಕ ಕಂಪೋಸ್ ಮಾಡಿರುವ ಆಲ್ಬಂ ಸಾಂಗ್ ನಲ್ಲಿ ಕನ್ನಡತಿ ಇತಿ ಆಚಾರ್ಯ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಮೆರ್ಲಿನ್ ಬಾಬಾಜಿ (Merlin Babaji) ಅಮೆರಿಕದಲ್ಲಿ ಖ್ಯಾತಿ ಗಳಿಸಿರುವ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ. ಕಳೆದ ವರ್ಷ ಇವರ ‘ವೈಬ್ಸ್’ ಸಾಂಗ್ ಬಿಡುಗಡೆಯಾಗಿ ಪ್ರಪಂಚದಾದ್ಯಂತ ಜನಪ್ರಿಯ ಗೊಂಡಿತ್ತು. ಸೋಶಿಯಲ್ ಮೀಡಿಯಾ ಸೆನ್ಸೇಶನ್ ಆಗಿದ್ದ ‘ವೈಬ್ಸ್’ ಸಾಂಗ್ ಹತ್ತು ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಇದೀಗ ಮತ್ತೊಂದು ವೀಡಿಯೋ ಸಾಂಗ್ ಮೂಲಕ ಮೆರ್ಲಿನ್ ಸೆನ್ಸೇಶನ್ ಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ. ತಮ್ಮ ಹೊಸ ವೀಡಿಯೋ ಹಾಡಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವ ನಟಿ ಹಾಗೂ ಮಾಡೆಲ್ ಇತಿ ಆಚಾರ್ಯ ಅವರ ಜೊತೆ ಕೈ ಜೋಡಿಸಿರೋದು ವಿಶೇಷ. ಇದನ್ನೂ ಓದಿ: 14ನೇ ಬೆಂಗಳೂರು ಅಂತಾರಾಷ್ಟೀಯ ಚಿತ್ರೋತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ

    ಮೆರ್ಲಿನ್ ಬಾಬಾಜಿ ಕಳೆದ ಒಂದು ವರ್ಷದಿಂದ ನನಗೆ ಪರಿಚಿತರು. ಅವರ ಸಂಗೀತದ ದೊಡ್ಡ ಅಭಿಮಾನಿ ನಾನು. ‘ಲವ್ ಹರ್ ಟೂ ಮಚ್’ ಸಾಂಗ್ ಕೇಳಿದ ಮೇಲೆ ತುಂಬಾ ಇಷ್ಟವಾಯ್ತು. ನಾನು ಈ ಹಾಡಿನಲ್ಲಿ ನಟಿಸುವೆ ಎಂದು ಹೇಳಿದೆ ಎಂದು ಇತಿ ಆಚಾರ್ಯ ಸಂತಸ ಹಂಚಿಕೊಂಡಿದ್ದಾರೆ.

    ಇತಿ ಆಚಾರ್ಯ ಸಹೋದರ ಅಭಿ ಆಚಾರ್ಯ ಕೂಡ ಅಮೇರಿಕಾದಲ್ಲಿ ಸಂಗೀತ ಕಲಾವಿದರಾಗಿದ್ದು, 2023ರ ಗ್ರ್ಯಾಮ್ಮಿ ಅವಾರ್ಡ್ ನಲ್ಲಿ ಇವರ ಹೆಸರು ನಾಮ ನಿರ್ದೇಶನವಾಗಿತ್ತು. ಅಮೇರಿಕಾದಲ್ಲಿ ನನ್ನ ಸಹೋದರ ನೆಲೆಸಿರೋದು ಅಲ್ಲಿನ ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯವಾಗಿದೆ ಎನ್ನುತ್ತಾರೆ ಇತಿ ಆಚಾರ್ಯ.

    ನಟಿ ಹಾಗೂ ಮಾಡೆಲ್ ಆಗಿರುವ ಇತಿ ಆಚಾರ್ಯ 2016ರ ಮಿಸ್ ಸೌತ್ ಇಂಡಿಯಾ ವಿನ್ನರ್. ಆರ್ ವಿ ಎಸ್ ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಒಳಗೊಂಡಂತೆ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ. ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್ ನಲ್ಲಿ ಕಾಣಿಸಿಕೊಂಡ ಹಿರಿಮೆ ಇವರದ್ದು, 2022ರ ಕ್ಯಾನಿಸ್ ಫಿಲ್ಮಂ ಫೆಸ್ಟ್ ರೆಡ್ ಕಾರ್ಪೆಟ್ ನಲ್ಲೂ ಇತಿ ಹೆಜ್ಜೆ ಹಾಕಿದ್ದಾರೆ. ಇದೀಗ ಅಮೇರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದ್ದಾರೆ.

  • ಸ್ಯಾಂಡಲ್ ವುಡ್  ನಟಿ ಇತಿ ಆಚಾರ್ಯಗೆ ನ್ಯೂಯಾರ್ಕ್ ನಲ್ಲಿ ವಿಶೇಷ ಗೌರವ

    ಸ್ಯಾಂಡಲ್ ವುಡ್ ನಟಿ ಇತಿ ಆಚಾರ್ಯಗೆ ನ್ಯೂಯಾರ್ಕ್ ನಲ್ಲಿ ವಿಶೇಷ ಗೌರವ

    ತ್ತೀಚೆಗೆ ನ್ಯೂಯಾರ್ಕ್ ನಲ್ಲಿ ನಡೆದ ನ್ಯೂಯಾರ್ಕ್ (New York) ಫ್ಯಾಶನ್ ವೀಕ್ ನಲ್ಲಿ ಭಾರತ ಮೂಲದ ಫ್ಯಾಶನ್ ಡಿಸೈನರ್ ಡಿಸೈನ್ ಮಾಡಿದ ಡ್ರೆಸ್ ಇತಿ (Iti Acharya) ಶೋ ಕೇಸ್ ಮಾಡಿದ್ದಾರೆ. ಇದನ್ನು ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ತನ್ನ ಹೋಲ್ಡಿಂಗ್ಸ್ ನಲ್ಲಿ ಹಾಕುವ ಮೂಲಕ ಮೊದಲ ಬಾರಿಗೆ ಕನ್ನಡದ (Sandalwood)ನಟಿಯನ್ನು ಗುರುತಿಸಿದೆ.

    ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ (Times Square Billboard)  ಅಂತರಾಷ್ಟ್ರೀಯ ವೇದಿಕೆಯಾಗಿದ್ದು ಸಾಮಾನ್ಯವಾಗಿ ಬಾಲಿವುಡ್ ನಟಿಮಣಿಯರೇ ಈ ಹೋಲ್ಡಿಂಗ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ರು. ಕನ್ನಡದ ನಟಿಮಣಿ ಈ ಹೋಲ್ಡಿಂಗ್ಸ್ ನಲ್ಲಿ ಮಿಂಚಿದ್ದು ಇದೇ ಮೊದಲು ಅನ್ನೋದೇ ವಿಶೇಷ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಚಿತ್ರರಂಗ ಹಾಗೂ ದೇಶವನ್ನು ಪ್ರತಿನಿಧಿಸಿದ್ದು ಹರುಷ ತಂದಿದೆ ಎನ್ನುತ್ತಾರೆ ಇತಿ ಆಚಾರ್ಯ.

    ಈ ಬಾರಿಯ ಕ್ಯಾನ್ (Can Film) ಫಿಲ್ಮಂ ಫೆಸ್ಟ್ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ರು ಈ ಕನ್ನಡತಿ. ಇದೀಗ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.  ಈ ಮೂಲಕ ಇತಿ ಒಂದೇ ವರ್ಷದಲ್ಲಿ ಎರೆಡೆರಡು ಅಂತರಾಷ್ಟ್ರೀಯ ವೇದಿಕೆ ಹಂಚಿಕೊಂಡ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ:ಜೈಲಿನಿಂದ ಬಿಡುಗಡೆಯಾಗಿ ಒಂದು ವರ್ಷ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ ಪತಿ

    ನಟಿ ಹಾಗೂ ಮಾಡೆಲ್ ಆಗಿರುವ ಇತಿ 2016ರ ಮಿಸ್ ಸೌತ್ ಇಂಡಿಯಾ ವಿನ್ನರ್ ಕೂಡ ಹೌದು. ಆರ್ ವಿ ಎಸ್ ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ನಟನೆಯಲ್ಲೂ ಫುಲ್ ಬ್ಯುಸಿಯಾಗಿದ್ದಾರೆ. ಇತಿ ನಾಯಕಿಯಾಗಿ ನಟಿಸಿರುವ ಕನ್ನಡದ ಲಕ್ಷ್ಮೀಪುತ್ರ ಚಿತ್ರ ಬಿಡುಗಡೆಯಾಗಬೇಕಿದೆ. ಕೇವಲ ಕನ್ನಡವಲ್ಲದೇ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]