Tag: Itanagar

  • ಆಕಸ್ಮಿಕ ಅಗ್ನಿ ಅವಘಡ – 700 ಮಳಿಗೆಗಳು ಭಸ್ಮ

    ಆಕಸ್ಮಿಕ ಅಗ್ನಿ ಅವಘಡ – 700 ಮಳಿಗೆಗಳು ಭಸ್ಮ

    ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ನಹರ್ಲಗುನ್ ಪ್ರದೇಶದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡದಿಂದ 700ಕ್ಕೂ ಹೆಚ್ಚು ಮಳಿಗೆಗಳು ಸುಟ್ಟು ಭಸ್ಮವಾಗಿವೆ.

    ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ (Fire) ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್ ಕಿಟಕಿಗಳಿಗೆ ರಾಕೆಟ್ ಬಿಟ್ಟ ಕಿಡಿಗೇಡಿ – ವೀಡಿಯೋ ವೈರಲ್

    ಮೂಲಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡ ಎರಡು ಗಂಟೆಗಳವರೆಗೆ ಕೇವಲ 2 ಮಳಿಗೆಗಳಿಗೆ ಮಾತ್ರ ಆವರಿಸಿತ್ತು. ಆದರೆ ಅಗ್ನಿಶಾಮಕ ದಳ (Fire Department) ಬೆಂಕಿ ನಿಯಂತ್ರಿಸುವಲ್ಲಿ ವಿಫಲವಾದ್ದರಿಂದ ಗಾಢವಾಗಿ ವ್ಯಾಪಿಸಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರುಣಾಚಲ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಥುಪ್ಟೆನ್ ಟೆಂಪಾ ನಿಧನ

    ಅರುಣಾಚಲ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಥುಪ್ಟೆನ್ ಟೆಂಪಾ ನಿಧನ

    ಇಟಾನಗರ: ಅರುಣಾಚಲ ಪ್ರದೇಶದ ತವಾಂಗ್‍ನ (Tawang) ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಥುಪ್ಟೆನ್ ಟೆಂಪಾ(63) (Thupten Tempa) ಅವರು ಇಟಾನಗರದ (Itanagar) ರಾಮಕೃಷ್ಣ ಮಿಷನ್ ಆಸ್ಪತ್ರೆಯಲ್ಲಿ (Ramakrishna Mission Hospital) ನಿಧನರಾಗಿದ್ದಾರೆ.

    ಥುಪ್ಟೆನ್ ಟೆಂಪಾ ಅವರ ನಿಧನಕ್ಕೆ ಅರುಣಾಚಲ ಪ್ರದೇಶದ (Arunachal Pradesh) ಮುಖ್ಯಮಂತ್ರಿ ಪ್ರೇಮಾ ಖಂಡು (Prema Khandu) ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಅರುಣಾಚಲ ಪ್ರದೇಶದ ಹಿರಿಯ ನಾಯಕ ಥುಪ್ಟೆನ್ ಟೆಂಪಾ ಅವರ ನಿಧನದಿಂದ ದುಃಖವಾಗಿದೆ. ಭಗವಾನ್ ಬುದ್ಧ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಓಂ ಮಣಿ ಪದ್ಮೇ ಹಮ್ ಎಂದು ಥುಪ್ಟೆನ್ ಟೆಂಪಾ ಅವರ ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಥುಪ್ಟೆನ್ ಟೆಂಪಾ ಅವರಿಗೆ ಗುರುವಾರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಶುಕ್ರವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಡಿಮೆ ರಕ್ತದೊತ್ತಡ ಹಿನ್ನೆಲೆ ಥುಪ್ಟೆನ್ ಟೆಂಪಾ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ದಿನಗಳ ಅಂತರದಲ್ಲಿ ಎಮ್ಮೆ ಬಳಿಕ ಹಸುವಿಗೆ ಗುದ್ದಿದ ವಂದೇ ಭಾರತ್ ಎಕ್ಸ್‌ಪ್ರೆಸ್

    ರಾಜಕಾರಣಕ್ಕೆ ಸೇರುವ ಮುನ್ನ ಥುಪ್ಟೆನ್ ಟೆಂಪಾ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಹೊಸ ದೆಹಲಿಯ ಜೆಎನ್‍ಯುವಿನಲ್ಲಿ ಇಂಟರ್ ನ್ಯಾಷನಲ್ ರಿಲೇಶನ್ಸ್‌ನಲ್ಲಿ ಎಂಎ ಪದವಿ ಮತ್ತು ರಾಜತಾಂತ್ರಿಕತೆಯಲ್ಲಿ ಎಂಫಿಲ್ ಪಡೆದರು. 2019ರಲ್ಲಿ ಟೆಂಪಾ 2-ತವಾಂಗ್ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು ಬಿಜೆಪಿಯ ತ್ಸೆರಿಂಗ್ ತಾಶಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: ಟ್ರಕ್‍ಗೆ ಬಸ್ ಡಿಕ್ಕಿ – ಬೆಂಕಿ ಹೊತ್ತಿ 11 ಸಾವು, 38 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • 2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

    2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

    ಇಟಾನಗರ: ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿರುವ ಇಬ್ಬರು ಭಾರತೀಯ ಸೇನಾ ಸಿಬ್ಬಂದಿಯ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

    ಹರೇಂದ್ರ ನೇಗಿ ಮತ್ತು ಪ್ರಕಾಶ್ ಸಿಂಗ್ ರಾಣಾ ಮೇ 28 ರಂದು ನಾಪತ್ತೆಯಾಗಿದ್ದರು. ಉತ್ತರಾಖಂಡದ 7ನೇ ಗರ್ವಾಲ್ ರೈಫಲ್ಸ್ ಸೈನಿಕರಾದ ಇವರನ್ನು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಮುಂಚೂಣಿ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

    2 Soldiers Missing For Two Weeks In Arunachal, Search Ops On, Says Army

    ನಡೆದಿದ್ದೇನು?
    ನಾಯಕ್ ಪ್ರಕಾಶ್ ಸಿಂಗ್ ಮತ್ತು ಲ್ಯಾನ್ಸ್ ನಾಯಕ್ ಹರೇಂದರ್ ಸಿಂಗ್ ಅವರು ತಮ್ಮ ಪೋಸ್ಟ್‌ಗೆ ಸಮೀಪದಲ್ಲಿ ವೇಗವಾಗಿ ಹರಿಯುತ್ತಿದ್ದ ನದಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ವ್ಯಾಪಕವಾದ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ ಎಷ್ಟೇ ಹುಡುಕಿದರು ಸೈನಿಕರನ್ನು ಪತ್ತೆ ಮಾಡುವಲ್ಲಿ ಯಾವುದೇ ಯಶಸ್ಸು ಕಂಡುಬಂದಿಲ್ಲ. ಕಳೆದ ಎರಡು ವಾರಗಳಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ED ನಿಯಂತ್ರಣವನ್ನ ನಮಗೆ ಕೊಟ್ರೆ ಫಡ್ನವಿಸ್ ಕೂಡ ನಮ್ಮ ಸೇನೆಗೆ ಮತ ಹಾಕ್ತಾರೆ: ಸಂಜಯ್ 

    ಜೂನ್ 11(ಶನಿವಾರ) ರಂದು, ಹರೇಂದ್ರ ನೇಗಿ ಅವರ ಪತ್ನಿ ಪೂನಂ ನೇಗಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇಬ್ಬರೂ ಸೈನಿಕರು ನದಿಯ ಬಳಿ ಹೋಗಿರುವುದು ಯಾರಿಗೂ ತಿಳಿದಿಲ್ಲ. ಇದನ್ನು ನಂಬಲು ನನಗೆ ಕಷ್ಟವಾಗುತ್ತದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

  • ಅರುಣಾಚಲ ಪ್ರದೇಶ ಈಗ ಕೊರೊನಾ ವೈರಸ್ ಮುಕ್ತ ರಾಜ್ಯ

    ಅರುಣಾಚಲ ಪ್ರದೇಶ ಈಗ ಕೊರೊನಾ ವೈರಸ್ ಮುಕ್ತ ರಾಜ್ಯ

    ಇಟಾನಗರ: ಅರುಣಾಚಲ ಪ್ರದೇಶವು ಭಾನುವಾರ ಕೊರೊನಾ ವೈರಸ್ ಮುಕ್ತ ರಾಜ್ಯವಾಗಿದೆ. ಕಳೆದ 24 ಗಂಟೆಯಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

    ರಾಜ್ಯದಲ್ಲಿ ಒಟ್ಟು 16,836 ರಷ್ಟು ಸೋಂಕಿತರಿದ್ದರು. ಈ ಪೈಕಿ 16,780 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 56 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.99.66 ರಷ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ 312 ಮಂದಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದೆ.

    ಇಲ್ಲಿಯವರೆಗೆ ಒಟ್ಟು 4,05,647 ಜನರನ್ನು ಪರೀಕ್ಷಿಸಲಾಗಿದೆ. ರಾಜ್ಯದಲ್ಲಿ 32,325 ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಲಸಿಕೆಯನ್ನು ನೀಡಲಾಗಿದೆ. ವಾರದಲ್ಲಿ ನಾಲ್ಕುದಿನ ಲಸಿಕೆ ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ.

  • ಅಪ್ರಾಪ್ತೆಯನ್ನ ಅತ್ಯಾಚಾರಗೈದ ಪ್ರಾಂಶುಪಾಲ ಅರೆಸ್ಟ್

    ಅಪ್ರಾಪ್ತೆಯನ್ನ ಅತ್ಯಾಚಾರಗೈದ ಪ್ರಾಂಶುಪಾಲ ಅರೆಸ್ಟ್

    ಇಟಾನಗರ: 14 ವರ್ಷದ ವಿಧ್ಯಾರ್ಥಿಯ ಮೇಲೆ ಪ್ರಾಂಶುಪಾಲ ಅತ್ಯಾಚಾರ ಎಸಗಿರುವ ಘಟನೆ ಅರುಣಾಚಲ ಪ್ರದೇಶದ ಕಮ್ಲೆ ಜಿಲ್ಲೆಯ ರಾಗದಲ್ಲಿ ನಡೆದಿದೆ.

    ಸಂತ್ರಸ್ತೆಯ ಕುಟುಂಬ ಅತ್ಯಾಚಾರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ರಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೋ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿ ಪ್ರಾಂಶುಪಾಲನನ್ನು ಶಾಲೆಯಿಂದ ಹೊರ ಹಾಕಲಾಗುವುದು. ಆರೋಪಿ ವ್ಯಕ್ತಿಗೆ ಕಾನೂನಿನ ನಿಬಂಧನೆಗಳ ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ ಎಂದು ಕಮ್ಲೆ ಡಿಸಿ ಹೆಂಗೊ ಬಸರ್ ತಿಳಿಸಿದ್ದಾರೆ.

    ಈ ತಿಂಗಳಿನಲ್ಲಿ ಅಪ್ರಾಪ್ತೆಯರ ನಡೆಯುತ್ತಿರುವ 2 ನೇ ಪ್ರಕರಣ ಇದಾಗಿದೆ. ಡಿಸೆಂಬರ್ 6 ರಂದು ಲಾಗ್ಡಿಂಗ್‍ನಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಇದೀಗ ಈ ಪ್ರಕರಣ ಬೆಳಕಿಗೆ ಬಂದಿದೆ.

  • 50 ಜನರ ಸಮಸ್ಯೆ ಆಲಿಸಲು 24 ಕಿ.ಮೀ. ನಡೆದ ಅರುಣಾಚಲ ಸಿಎಂ

    50 ಜನರ ಸಮಸ್ಯೆ ಆಲಿಸಲು 24 ಕಿ.ಮೀ. ನಡೆದ ಅರುಣಾಚಲ ಸಿಎಂ

    – ರಸ್ತೆಯಿಲ್ಲದ ಕಾರಣ 11 ಗಂಟೆಗಳ ಕಾಲ ಕಾಲ್ನಡಿಗೆ
    – ಜನರ ಜೊತೆ 2 ದಿನ ಕಳೆದು, ಸಮಸ್ಯೆ ಅರಿತ ಸಿಎಂ

    ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ತಮ್ಮ ಜನರನ್ನು ಭೇಟಿ ಮಾಡಲು ಸುಮಾರು 11 ಗಂಟೆಗಳ ಕಾಲ 24 ಕಿ.ಮೀ ದೂರ ನಡೆದುಕೊಂಡು ಹೋಗುವ ಮೂಲಕ ಮಾದರಿಯಾಗಿದ್ದಾರೆ.

    ಸಿಎಂ ಪೆಮಾ ಖಂಡು ತವಾಂಗ್ ಜಿಲ್ಲೆಯ ಮುಕ್ತೋ ಕ್ಷೇತ್ರದ ಹಳ್ಳಿಯ ಜನರನ್ನು ಭೇಟಿ ಮಾಡಲು 24 ಕಿ.ಮೀ ದೂರ ಪ್ರಯಾಣ ಮಾಡಿದ್ದಾರೆ. 41 ವರ್ಷದ ಮುಖ್ಯಮಂತ್ರಿ ಪರ್ವತ ಭೂ ಪ್ರದೇಶಗಳು ಮತ್ತು ಕಾಡುಗಳ ಮೂಲಕ ನಡೆದು ತವಾಂಗ್‍ನಿಂದ 97 ಕಿ.ಮೀ ದೂರದಲ್ಲಿರುವ ಲುಗುಥಾಂಗ್ ಗ್ರಾಮಕ್ಕೆ ಹೋಗಿದ್ದರು.

    ಸಿಎಂ ಪೆಮಾ ಖಂಡು ತವಾಂಗ್ ಜಿಲ್ಲೆಯ ಮುಕ್ತೋ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲುಗುಥಾಂಗ್ ಗ್ರಾಮ ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿನ ಕುಗ್ರಾಮವಾಗಿದೆ. ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿರುವ ಈ ಗ್ರಾಮದಲ್ಲಿ 10 ಮನೆಗಳಿದ್ದು, ಅದರಲ್ಲಿ 50 ಜನರು ವಾಸ ಮಾಡುತ್ತಿದ್ದಾರೆ.

    ಲುಗುಥಾಂಗ್ ಗ್ರಾಮಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ. ಹೀಗಾಗಿ ಸಿಎಂ ಖಂಡು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಅರಿಯಲೆಂದು 3 ದಿನಗಳ ಹಿಂದೆ ಪ್ರವಾಸ ಕೈಗೊಂಡಿದ್ದರು. ಬಸ್ ಇಲ್ಲದ ಕಾರಣ ಸುಮಾರು 11 ಗಂಟೆಗಳ ಕಾಲ ನಿರಂತರವಾಗಿ ನಡೆದುಕೊಂಡು 24 ಕಿ.ಮೀ. ದೂರವನ್ನು ಕಾಲ್ನಡಿಗೆಯ ಮೂಲಕ ತಲುಪಿದ್ದರು. ನಂತರ ಎರಡು ದಿನ ಗ್ರಾಮದಲ್ಲೇ ಉಳಿದುಕೊಂಡು ಅವರ ಸಮಸ್ಯೆಗಳನ್ನು ಆಲಿಸಿ ವಾಪಸ್ ಬಂದಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಖಂಡು, “24 ಕಿ.ಮೀ. ಕಾಲ್ನಡಿಗೆ. 11 ಗಂಟೆಗಳ ತಾಜಾ ಗಾಳಿ ಮತ್ತು ಪ್ರಕೃತಿ ಅತ್ಯುತ್ತಮ. ತವಾಂಗ್ ಜಿಲ್ಲೆಯ ಕಾರ್ಪು-ಲಾ (16,000 ಅಡಿ) ದಿಂದ ಲುಗುಥಾಂಗ್ (14,500 ಅಡಿ) ದಾಡಿದೆ. ಸ್ವರ್ಗ ಸ್ಪರ್ಶಿಸಿದ ಅನುಭವವಾಗಿದೆ” ಎಂದು ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿ ಜೊತೆ ತವಾಂಗ್ ಶಾಸಕ, ಗ್ರಾಮಸ್ಥರು ಮತ್ತು ಒಬ್ಬ ಭದ್ರತಾ ಸಿಬ್ಬಂದಿ ಇದ್ದರು.

  • ತುಂಬು ಗರ್ಭಿಣಿಯನ್ನು ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದು, ಮಾನವೀಯತೆ ಮೆರೆದ ಗವರ್ನರ್

    ತುಂಬು ಗರ್ಭಿಣಿಯನ್ನು ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದು, ಮಾನವೀಯತೆ ಮೆರೆದ ಗವರ್ನರ್

    ಇಟಾನಗರ: ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನು ಸ್ವತಃ ಅರುಣಾಚಲ ಪ್ರದೇಶದ ರಾಜ್ಯಪಾಲ ಹಾಗೂ ನಿವೃತ್ತ ಬ್ರಿಗೇಡಿಯರ್ ಆರ್.ಡಿ.ಮಿಶ್ರಾರವರು ತಮ್ಮ ಹೆಲಿಕಾಪ್ಟರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಬುಧವಾರ ಅರುಣಾಚಲ ಪ್ರದೇಶದ ತವಾಂಗ್ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಆರ್.ಡಿ. ಮಿಶ್ರಾ ಆಗಮಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಪೇಮಾ ಖಂಡು ಹಾಗೂ ಸ್ಥಳೀಯ ಶಾಸಕರ ಜೊತೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಗರ್ಭಿಣಿಯೊಬ್ಬರು ತೀವ್ರ ನೋವಿನಿಂದ ಬಳಲುತ್ತಿದ್ದಲ್ಲದೇ, ಚಿಂತಾಜನಕ ಸ್ಥಿತಿಯಲ್ಲಿರುವುದು ಅವರ ಗಮನಕ್ಕೆ ಬಂದಿತ್ತು. ಅಲ್ಲದೇ ಮುಂದಿನ ಮೂರು ದಿನಗಳ ಕಾಲ ತವಾಂಗ್ ಮತ್ತು ಗುವಾವಟಿ ಮಧ್ಯೆ ಹೆಲಿಕಾಪ್ಟರ್ ಸೇವೆ ಇಲ್ಲವೆಂಬ ಮಾಹಿತಿಯನ್ನು ಶಾಸಕರಿಂದ ಪಡೆದ ಅವರು, ಕೂಡಲೇ ತಮ್ಮ ಇಬ್ಬರು ಅಧಿಕಾರಿಗಳೊಂದಿಗೆ ಮಾತನಾಡಿ ತಮ್ಮ ಹೆಲಿಕಾಪ್ಟರಿನಲ್ಲೇ ಗರ್ಭಿಣಿ ಹಾಗೂ ಪತಿಯನ್ನು ಕರೆದೊಯ್ಯವ ವ್ಯವಸ್ಥೆ ಮಾಡಿದ್ದರು.

    ಗವರ್ನರ್ ಹಾಗೂ ತುಂಬು ಗರ್ಭಿಣಿ ಹೊರಟಿದ್ದ ಹೆಲಿಕಾಪ್ಟರ್ ಇಂಧನ ತುಂಬಿಸಿಕೊಳ್ಳಲು ತೇಜ್ಪುರದಲ್ಲಿ ಇಳಿದಿತ್ತು. ಆದರೆ ಇಂಧನ ತುಂಬಿಸಿಕೊಂಡ ಬಳಿಕ ಹೆಲಿಕಾಪ್ಟರಿನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಕೂಡಲೇ ಎಚ್ಚೆತ್ತ ಗವರ್ನರ್ ವಾಯುಪಡೆಯ ಹೆಲಿಕಾಪ್ಟರಿಗೆ ಮನವಿ ಮಾಡಿ, ಗರ್ಭಿಣಿ ಹಾಗೂ ಆಕೆಯ ಪತಿಯನ್ನು ಮೊದಲು ರಾಜಧಾನಿ ತಲುಪುವಂತೆ ಮಾಡಿದ್ದರು. ಅಲ್ಲದೇ ತಮ್ಮ ರಾಜಭವನದ ಹೆಲಿಪ್ಯಾಡ್ ನಲ್ಲಿ ಪ್ರಸೂತಿ ತಜ್ಞರನ್ನು ಒಳಗೊಂಡ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದರು. ಆಸ್ಪತ್ರೆಗೆ ಕರೆದೊಯ್ಯಲು ತೊಂದರೆಯಾಗದಂತೆ ನೋಡಿಕೊಂಡು, ನಂತರ ಬೇರೆ ವಿಮಾನದಲ್ಲಿ ಇಟಾನಗರಕ್ಕೆ ತೆರಳಿದ್ದರು.

    ಇಟಾನಗರದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ, ಸಿಸೇರಿಯನ್ ಮೂಲಕ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿದ್ದಾರೆ. ಸದ್ಯ ಮಹಿಳೆ ಮತ್ತು ಮಗು ಆರೋಗ್ಯವಾಗಿದ್ದು, ಗವರ್ನರ್ ಅವರ ಕಾರ್ಯಕ್ಕೆ ಆಕೆಯ ಕುಟುಂಬಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

    ತವಾಂಗ್ ಪಟ್ಟಣದಿಂದ ಇಟಾನಗರಕ್ಕೆ ಸುಮಾರು 200 ಕಿ.ಮೀ. ಅಂತರವಿದ್ದು, ಬೆಟ್ಟ-ಗುಡ್ಡ ಹಾಗೂ ಕಣಿವೆಗಳ ಮೂಲಕ ರಸ್ತೆ ಮಾರ್ಗವಾಗಿ ತಲುಪಲು ಸುಮಾರು 15 ತಾಸುಗಳು ಬೇಕಾಗುತ್ತದೆ. ಇದನ್ನು ಅರಿತ ಗವರ್ನರ್ ತಮ್ಮ ಹೆಲಿಕಾಪ್ಟರ್ ಮೂಲಕ ಮಹಿಳೆಯನ್ನು 2 ಗಂಟೆಯೊಳಗೆ ಆಸ್ಪತ್ರೆಗೆ ದಾಖಲು ಮಾಡಲು ಸಹಕರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv