Tag: italy

  • ವಿಶ್ವಕಪ್‍ನಿಂದ ಇಟಲಿ ಔಟ್: ಅಂತಾರಾಷ್ಟ್ರೀಯ ಫುಟ್‍ಬಾಲ್‍ಗೆ ಬಫನ್ ಕಣ್ಣೀರ ವಿದಾಯ

    ವಿಶ್ವಕಪ್‍ನಿಂದ ಇಟಲಿ ಔಟ್: ಅಂತಾರಾಷ್ಟ್ರೀಯ ಫುಟ್‍ಬಾಲ್‍ಗೆ ಬಫನ್ ಕಣ್ಣೀರ ವಿದಾಯ

    ಮಿಲಾನ್: ನಾಲ್ಕು ಬಾರಿಯ ವಿಶ್ವಕಪ್ ಚಾಂಪಿಯನ್ ಇಟಲಿ, 2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಲು ವಿಫಲವಾಗಿದೆ.

    ಸ್ಯಾನ್ ಸಿರೋ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದ 70 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಎರಡನೇ ಹಂತದ ಪ್ಲೇ ಆಫ್ ಪಂದ್ಯದಲ್ಲಿ ಇಟಲಿ, ಸ್ವೀಡನ್ ವಿರುದ್ಧ ಗೋಲು ರಹಿತ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿತು.

    ಮೂರು ದಿನಗಳ ಹಿಂದೆ ಸ್ಟಾಕ್‍ಹಾಲ್ಮ್ ನಲ್ಲಿ ನಡೆದಿದ್ದ ಮೊದಲ ಲೆಗ್‍ನ ಹಣಾಹಣಿಯನ್ನು ಸ್ವೀಡನ್ 1-0 ಅಂತರದಲ್ಲಿ ಗೆದ್ದುಕೊಂಡಿತ್ತು. ಹೀಗಾಗಿ 1-0 ಗೋಲಿನ ಸರಾಸರಿಯೊಂದಿಗೆ ಸ್ವೀಡನ್ ವಿಶ್ವಕಪ್‍ಗೆ ಅರ್ಹತೆ ಪಡೆದರೆ, 1958ರ ಬಳಿಕ ಇದೇ ಮೊದಲ ಬಾರಿಗೆ ಇಟಲಿ, ವಿಶ್ವಕಪ್‍ನ ಅರ್ಹತಾ ಸುತ್ತಿನಲ್ಲೇ ತನ್ನ ಅಭಿಯಾನ ಕೊನೆಗೊಳಿಸಿದೆ.

    ಇಟಲಿಯ ಸ್ಟಾರ್ ಆಟಗಾರರಾದ ಚೆಲಿನಿ, ಆ್ಯಂಡ್ರಿಯಾ ಬರ್ಝಗಿ ಹಾಗೂ ಜೇಕಬ್ ಜಾನ್ಸನ್ ಪಂದ್ಯದ ಮೊದಲಾರ್ದದಲ್ಲಿಯೇ ಹಳದಿ ಕಾರ್ಡ್ ಪಡೆದಿದ್ದರಿಂದ ಇಟಲಿ ತನ್ನ ಆಕ್ರಮಣಕಾರಿ ಆಟದ ಶೈಲಿಯಿಂದ ಹಿಂದೆ ಸರಿಯಿತು. ಇದರಿಂದಾಗಿ ಸ್ವೀಡನ್‍ನ ರಕ್ಷಣಾ ವಿಭಾಗವನ್ನು ದಾಟಲು ಇಟಲಿಗೆ ಸಾಧ್ಯವಾಗಲಿಲ್ಲ.

    2006ರ ಬಳಿಕ ಸ್ವೀಡನ್ ವಿಶ್ವಕಪ್‍ಗೆ ಅರ್ಹತೆ ಪಡೆಯುತ್ತಿದೆ. ವಿಶೇಷವೆಂದರೆ 2006ರಲ್ಲಿ ಇಟಲಿ ವಿಶ್ವಕಪ್ ಚಾಂಪಿಯನ್ ಆಗಿತ್ತು. ವಿಶ್ವಕಪ್‍ನಿಂದ ಇಟಲಿ ಹೊರನಡೆದಿರುವುದು ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟುಮಾಡಿದೆ.

    ಇದಕ್ಕೂ ಮೊದಲು ಬಲಿಷ್ಠ ತಂಡಗಳಾದ ನೆದಲ್ರ್ಯಾಂಡ್, ದಕ್ಷಿಣ ಅಮೆರಿಕ ಚಾಂಪಿಯನ್ ಚಿಲಿ ಹಾಗೂ ಅಮೆರಿಕ ತಂಡಗಳು 2018ರ ವಿಶ್ವಕಪ್ ಅರ್ಹತಾ ಸುತ್ತಿನಲ್ಲೆ ಹೊರನಡೆದಿದ್ದವು.

    ಕಳೆದ 7 ಟೂರ್ನಿಗಳಲ್ಲಿ ಈ ನಾಲ್ಕು ತಂಡಗಳು ಅಂತಿಮ 8ರ ಘಟ್ಟದ ಹೋರಾಟದಲ್ಲಿ ಭಾಗಿಯಾಗಿದ್ದವು. ಈ ಸೋಲಿನೊಂದಿಗೆ ಇಟಲಿ ಪರ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿರುವ ಹಾಗೂ ವಿಶ್ವ ಫುಟ್ಬಾಲ್‍ನಲ್ಲಿ ಗೋಡೆಯೆಂದೇ ಖ್ಯಾತಿವೆತ್ತ ಗಿಯಾನ್ಲುಗಿ ಬಫನ್ ತನ್ನ ವರ್ಣರಂಜಿತ ಅಂತರಾಷ್ಟ್ರೀಯ ಫುಟ್‍ಬಾಲ್ ವೃತ್ತಿ ಜೀವನಕ್ಕೆ ಕಣ್ಣೀರ ವಿದಾಯ ಹೇಳಿದ್ದಾರೆ.

    ಸ್ವೀಡನ್ ವಿರುದ್ಧದ ಪಂದ್ಯದ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ಬಫನ್, ವಿಶ್ವಕಪ್‍ಗೆ ಅರ್ಹತೆ ಪಡೆಯದೆ, ಸೋಲಿನೊಂದಿಗೆ ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿರುವುದು ನನಗೆ ನಾಚಿಕೆಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಇಟಲಿ ಪರ ಸುದೀರ್ಘ 20 ವರ್ಷಗಳಲ್ಲಿ 175 ಪಂದ್ಯಗಳನ್ನು ಆಡಿರುವ ಬಫನ್, 2006ರಲ್ಲಿ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

     

  • ಏರ್ ಶೋ ವೇಳೆ ಸಾವಿರಾರು ಜನರ ಮುಂದೆಯೇ ಸಮುದ್ರಕ್ಕೆ ಬಿತ್ತು ಮಿಲಿಟರಿ ವಿಮಾನ

    ಏರ್ ಶೋ ವೇಳೆ ಸಾವಿರಾರು ಜನರ ಮುಂದೆಯೇ ಸಮುದ್ರಕ್ಕೆ ಬಿತ್ತು ಮಿಲಿಟರಿ ವಿಮಾನ

    ರೋಮ್: ಇಟಲಿಯಲ್ಲಿ ಭಾನುವಾರ ಏರ್ಪಡಿಸಿದ್ದ ಏರ್ ಶೋನಲ್ಲಿ ಮಿಲಿಟರಿ ವಿಮಾನವೊಂದು ಜನರ ಕಣ್ಣ ಮುಂದೆಯೇ ಸಮುದ್ರಕ್ಕೆ ಉರುಳಿ ಬಿದ್ದಿದೆ.

    ಇಟಲಿಯಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಟೆರಿಸಿನಾ ನಗರದಲ್ಲಿ ಯುರೋಫೈಟರ್ ಜೆಟ್ ಹೆಸರಿನ ವಿಮಾನ ತನ್ನ ಪ್ರದರ್ಶನವನ್ನು ತೋರಿಸಲು ಭಾಗವಹಿಸಿತ್ತು. ಆಕಾಶದಲ್ಲಿ ಪ್ರದರ್ಶನ ನೀಡುತ್ತಿದ್ದ ವಿಮಾನ ಒಮ್ಮೆಗೆ ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದಿದೆ. ಈ ದುರಂತದಲ್ಲಿ ಪೈಲೆಟ್ ಮೃತಪಟ್ಟಿದ್ದಾರೆ.

    ವಿಮಾನ ಪತನಗೊಳ್ಳಲು ನಿಖರ ಕಾರಣಗಳು ಏನು ಎನ್ನುವುದು ತಿಳಿದು ಬಂದಿಲ್ಲ. ಘಟನೆಯ ಕುರಿತು ತನಿಖೆಯನ್ನು ಮುಂದುವರೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಶೋಗೆ ಸಾವಿರಾರು ಜನ ಭಾಗವಹಿಸಿದ್ದು, ಪತನ ಗೊಳ್ಳುತ್ತಿರುವ ದೃಶ್ಯವನ್ನು ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಮಗನಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೇಳಿದ ನಟಿ ಸುಹಾಸಿನಿ

    ಮಗನಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೇಳಿದ ನಟಿ ಸುಹಾಸಿನಿ

    ಬೆಂಗಳೂರು: ಬಹುಭಾಷ ನಟಿ ಸುಹಾಸಿನಿಯ ಮಗ ನಂದನ್ ಅವರನ್ನ ಇಟಲಿಯ ಬೆಲ್ಯುನೊ ನಗರದಲ್ಲಿ ದರೋಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಹಾಸಿನಿ ತನ್ನ ಮಗನಿಗಾಗಿ ಸಹಾಯ ಕೇಳಿದ್ದರು.

    ವೆನಿಸ್ ಏರ್‍ಪೋರ್ಟ್ ಹತ್ತಿರ ಯಾರಾದರೂ ಇದ್ದರೆ ನನ್ನ ಮಗನಿಗೆ ಸಹಾಯ ಮಾಡಲು ಆಗುತ್ತಾ? ಬೆಲ್ಯುನೊ ನಗರದಲ್ಲಿ ಆತನನ್ನು ದರೋಡೆ ಮಾಡಲಾಗಿದೆ. ಮಗ ಏರ್‍ಪೋರ್ಟ್‍ಗೆ ಹೋಗಲು ಸಹಾಯ ಮಾಡಿ ಎಂದು ಟ್ವೀಟ್ ಮಾಡುತ್ತಾ ನಂದನ್‍ಯಿರುವ ಜಾಗವನ್ನು ವಿವರಿಸಿದ್ದರು. ವೆನಿಸ್ ಸ್ಟ ಮಾರ್ಕ್ ಸ್ಕ್ವೇರ್ ಪೊಲೀಸ್ ಸ್ಟೇಷನ್ ಹತ್ತಿರ ಇರುವವರು ಅವನಿಗೆ ಸಹಾಯ ಮಾಡಿ ಎಂದು ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದರು.

    ಸಹಾಯ ಮಾಡುವ ಬದಲು ಜನರು ಸುಹಾಸಿನಿಯವರ ಮಗನಿಗೆ ಅನಾವಶ್ಯಕವಾಗಿ ಕರೆಗಳನ್ನು ಮಾಡುತ್ತಿದ್ದರು. ಕರೆ ಮಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡುತ್ತಾ ವೆನಿಸ್‍ನಲ್ಲಿರುವ ಜನರು ಸಹಾಯ ಮಾಡಲು ಆಗುವುದ್ದಿಲ್ಲ ಎಂದರೆ ನಾನು ಮೊದಲು ಪೋಸ್ಟ್ ಮಾಡಿದ ನಂಬರ್‍ಗೆ ಕರೆ ಮಾಡಬೇಡಿ. ಅವನ ಮೊಬೈಲ್ ಬ್ಯಾಟರಿ ಕಡಿಮೆಯಾಗುತ್ತಿದೆ. ಹೀಗಾಗಿ ಅವನು ಎಲ್ಲರ ಕಾಂಟ್ಯಾಕ್ಟ್ ಕಳೆದುಕೊಳುತ್ತಾನೆ. ಈಗಾಗಲೇ ತೊಂದರೆಯಲ್ಲಿ ಇರುವ ವ್ಯಕ್ತಿಗೆ ಅನಾವಶ್ಯಕವಾಗಿ ಕರೆ ಮಾಡುವ ಮೂಲಕ ತೊಂದರೆ ನೀಡುವುದನ್ನು ನಿಲ್ಲಿಸಿ ಎಂದು ಮತ್ತೆ ಟ್ವೀಟ್‍ನಲ್ಲಿ ಬರೆದುಕೊಂಡಿದ್ದರು.

    ಬಹಳ ಬೇಗ ವ್ಯಕ್ತಿಯೊಬ್ಬ ನಂದನ್‍ಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ. ನಂತರ ಸಹಾಯಕ್ಕಾಗಿ ಬಂದ ಜನರಿಗೆ ಸುಹಾಸಿನಿ ಧನ್ಯವಾದ ತಿಳಿಸಿದ್ದಾರೆ. ನಮ್ಮ ಮಗ ಇಂದು ರಾತ್ರಿ ಸುರಕ್ಷಿತವಾಗಿ ಹೋಟೆಲ್ ತಲುಪಿದ್ದಾನೆ ಎಂದು ಸುಹಾಸಿನಿ ತಮ್ಮ ಕೊನೆಯ ಟ್ವೀಟ್ ಪೋಸ್ಟ್ ಮಾಡಿದ್ದರು.

     

  • ವೀಡಿಯೋ: 1 ನಿಮಿಷದಲ್ಲಿ 32 ಬಾರಿ ನಾಲಗೆಯಲ್ಲಿ ಫ್ಯಾನ್ ರೆಕ್ಕೆ ನಿಲ್ಲಿಸಿ ದಾಖಲೆ ಬರೆದ ಮಹಿಳೆ!

    ವೀಡಿಯೋ: 1 ನಿಮಿಷದಲ್ಲಿ 32 ಬಾರಿ ನಾಲಗೆಯಲ್ಲಿ ಫ್ಯಾನ್ ರೆಕ್ಕೆ ನಿಲ್ಲಿಸಿ ದಾಖಲೆ ಬರೆದ ಮಹಿಳೆ!

    ರೋಮ್: ಜಗತ್ತಿನಲ್ಲಿ ಹಲವು ಮಂದಿ ವಿಚಿತ್ರವಾದ ಸವಾಲುಗಳನ್ನು ಎದುರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಅಂಥವರ ಸಾಲಿಗೆ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಸೇರ್ಪಡೆಯಾಗಿದ್ದಾರೆ.

    ಹೌದು ಆಸ್ಟ್ರೇಲಿಯಾದ ಸರ್ಕಸ್ ಪ್ರದರ್ಶಕಿ ಝಿಯೋ ಎಲ್ಲಿಸ್, ತನ್ನ ನಾಲಿಗೆಯಿಂದ ಜೋರಾಗಿ ತಿರುಗುತ್ತಿರುವ ಫ್ಯಾನ್ ರೆಕ್ಕೆಗಳನ್ನು ನಿಲ್ಲಿಸುವ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಇತ್ತೀಚೆಗೆ ಇಟಾಲಿಯನ್ ಶೋ `ಲೊ ಶೋ ಡೈ ರೆಕಾರ್ಡ್’ ನಲ್ಲಿ ಅತ್ಯದ್ಭುತ ಸಾಹಸ ಮಾಡಿ ಗಿನ್ನಿಸ್ ರೆಕಾರ್ಡ್ ಪುಟ ಸೇರಿದ್ದಾರೆ.

    ಜೋರಾಗಿ ತಿರುಗುವ ಎರಡು ಫ್ಯಾನ್‍ಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ಫ್ಯಾನ್‍ನ ರೆಕ್ಕೆಗಳನ್ನು 1 ನಿಮಿಷದಲ್ಲಿ 32 ಬಾರಿ ನಾಲಗೆಯಿಂದ ನಿಲ್ಲಿಸೋ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಝಿಯೋ ಇತಿಹಾಸ ಬರೆದಿರೋದು ಇದು ಮೊದಲೇನಲ್ಲ. ಈ ಹಿಂದೆ 1 ನಿಮಿಷದಲ್ಲಿ 20 ಬಾರಿ ಫ್ಯಾನ್ ರೆಕ್ಕೆ ನಿಲ್ಲಿಸಿದ್ದು, ಆ ರೆಕಾರ್ಡನ್ನ ಈ ಬಾರಿ ಮುರಿದಿದ್ದರು.

    ಆದ್ರೆ ಶೋದಲ್ಲಿ ತನ್ನ ಮೊದಲಿನ ರೆಕಾರ್ಡನ್ನ ಮುರಿದು ಮತ್ತೊಂದು ದಾಖಲೆ ಬರೆದ ಝಿಯೋ ದಾಖಲೆಯನ್ನು ಮತ್ತೊಬ್ಬ ಮಹಿಳೆ ಅರ್ಶಿಟಾ ಫರ್ಮನ್ ಮುರಿದಿದ್ದಾರೆ. ಅರ್ಶಿಟಾ 1 ನಿಮಿಷದಲ್ಲಿ 35 ಬಾರಿ ಫ್ಯಾನ್ ರೆಕ್ಕೆ ನಿಲ್ಲಿಸುವ ಮೂಲಕ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

    https://www.youtube.com/watch?v=Lf814UKG0fk