Tag: italy

  • ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ

    ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ

    ರೋಮ್: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ (86) (Silvio Berlusconi) ನಿಧನರಾಗಿದ್ದಾರೆ.

    ಸಿಲ್ವಿಯೊ ಬೆರ್ಲುಸ್ಕೋನಿ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 2016 ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2020ರಲ್ಲಿ ಕೊರೊನಾ ವೈರಸ್‍ (Corona Virus) ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. 6 ವಾರಗಳ ಹಿಂದೊಮ್ಮೆ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆಗಿದ್ದರು. ಅದಾದ ಬಳಿಕ ಕಳೆದ ಶುಕ್ರವಾರ ಮಾಜಿ ಪ್ರಧಾನಿಯನ್ನು ಮಿಲನ್ ಆಸ್ಪತ್ರೆ (Milan Hospital) ಗೆ ದಾಖಲಿಸಲಾಗಿತ್ತು. ಈ ವೇಳೆ ಅಪರೂಪದ ರಕ್ತದ ಕ್ಯಾನ್ಸರ್ (Blood Cancer) ಇದೆ ಎಂದು ವೈದ್ಯರು ಬಹಿರಂಗಪಡಿಸಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    1994 ಮತ್ತು 2011 ರ ನಡುವೆ ಒಟ್ಟು 9 ವರ್ಷಗಳ ಕಾಲ ಮೂರು ಬಾರಿ ಇಟಲಿಯ ಪ್ರಧಾನ ಮಂತ್ರಿಯಾದರು. ಆದರೆ ಲೈಂಗಿಕ ಹಗರಣಗಳು ಮತ್ತು ಭ್ರಷ್ಟಾಚಾರ ಆರೋಪಗಳಿಂದಾಗಿ ಪ್ರಧಾನಿ ಹುದ್ದೆಯಿಂದ ಹಿಂದೆ ಸರಿದಿದ್ದರು. ಸದ್ಯ ಅವರು ತಮ್ಮ 33 ವರ್ಷದ ಗೆಳತಿ ಮಾರ್ಟಾ ಫಾಸಿನಾ, ಇಬ್ಬರು ಮಾಜಿ ಪತ್ನಿಯರು ಮತ್ತು ಐದು ಮಕ್ಕಳನ್ನು ಅಗಲಿದ್ದಾರೆ.

    ಸಿಲ್ವಿಯೊ ಬೆರ್ಲುಸ್ಕೋನಿ ಅವರ ಸಾವು ದೊಡ್ಡ ನಷ್ಟವನ್ನು ಉಂಟುಮಾಡಿದೆ. ಅವರು ಒಬ್ಬ ಮಹಾನ್ ವ್ಯಕ್ತಿ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ ಎಂದು ಇಟಾಲಿಯನ್ ರಕ್ಷಣಾ ಸಚಿವ ಗಿಡೋ ಕ್ರೊಸೆಟ್ಟೊ ಟ್ವಿಟರ್‍ನಲ್ಲಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿದ್ದ ಪುಂಡ ಅರೆಸ್ಟ್‌

     

  • ಟರ್ಕಿ ಹಡಗು ಹೈಜಾಕ್- ಕಾರ್ಯಾಚರಣೆಗಿಳಿದ ಇಟಲಿ ಸೇನಾ ಪಡೆ

    ಟರ್ಕಿ ಹಡಗು ಹೈಜಾಕ್- ಕಾರ್ಯಾಚರಣೆಗಿಳಿದ ಇಟಲಿ ಸೇನಾ ಪಡೆ

    ರೋಮ್: ದುಷ್ಕರ್ಮಿಗಳಿಂದ ಹೈಜಾಕ್  (Hijack) ಆಗಿದ್ದ ಟರ್ಕಿಶ್ ಹಡಗನ್ನು (Turkish Ship) ಇಟಾಲಿಯನ್ ವಿಶೇಷ ಸೇನಾ ಪಡೆ (Italian Forces) ನಿಯಂತ್ರಣಕ್ಕೆ ಪಡೆದಿದೆ.

    ಅಕ್ರಮ ವಲಸಿಗರು ಹಡಗನ್ನು ಹೈಜಾಕ್ ಮಾಡಿದ್ದು, ಹಡಗನ್ನು ನಿಯಂತ್ರಣಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಹಡಗಿನಲ್ಲಿ 22 ಸಿಬ್ಬಂದಿಯಿದ್ದು, ಅವರ ಸುರಕ್ಷತೆಯ ವಿಚಾರವನ್ನು ಶೀಘ್ರದಲ್ಲೇ ದೃಢಪಡಿಸಲಾಗುವುದು ಎಂದು ಇಟಲಿಯ (Italy) ರಕ್ಷಣಾ ಸಚಿವ ಗೈಡೊ ಕ್ರೊಸೆಟ್ಟೊ ತಿಳಿಸಿದ್ದಾರೆ.

    ವಾಹನಗಳನ್ನು ಸಾಗಿಸುವ ಮತ್ತು ನೌಕಾಯಾನದ ಹಡಗು ಜೂನ್ 7 ರಂದು ಟರ್ಕಿಯ (Turkey) ಟೊಪ್ಯುಲರ್‌ನಿಂದ ಹೊರಟು ದಕ್ಷಿಣ ಫ್ರಾನ್ಸ್‍ನ ಸೆಟೆಗೆ ಹೊರಟಿತ್ತು. ಅದನ್ನು ಅಕ್ರಮ ವಲಸಿಗರು ಅಪಹರಿಸಿದ್ದರು. ಶೀಘ್ರದಲ್ಲೇ ದುಷ್ಕರ್ಮಿಗಳಿಂದ ಹಡಗನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಹಡಗನ್ನು ಮುಕ್ತಗೊಳಿಸಲು ಇಟಾಲಿಯನ್ ವಿಶೇಷ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಭಾರೀ ಸ್ಫೋಟ – ಬೆಂಕಿಗೆ ಕಾರುಗಳು ಆಹುತಿ

    ಭಾರೀ ಸ್ಫೋಟ – ಬೆಂಕಿಗೆ ಕಾರುಗಳು ಆಹುತಿ

    ರೋಮ್‌: ಆಕ್ಸಿಜನ್ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು ಸಾಗಿಸುತ್ತಿದ್ದ ವ್ಯಾನ್‌ ಸ್ಫೊಟಗೊಂಡು ಹಲವಾರು ವಾಹನಗಳು (Vehicles) ಬೆಂಕಿಗೆ (Fire) ಆಹುತಿಯಾದ ಘಟನೆ ಉತ್ತರ ಇಟಲಿಯ (Italy )ಮಧ್ಯಭಾಗದಲ್ಲಿ ನಡೆದಿದೆ.

    ಸ್ಫೋಟದಿಂದಾಗಿ ಸ್ಥಳದಲ್ಲಿ ದಟ್ಟನೆಯ ಹೊಗೆ ತುಂಬಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿದ್ದಾರೆ. ಹೊತ್ತಿ ಉರಿಯುತ್ತಿದ್ದ ಕಾರುಗಳನ್ನು ನಂದಿಸಿದಾಗ, ಹತ್ತಿರದ ಕಟ್ಟಡಗಳ ಕಿಟಕಿಗಳಿಂದ ದಟ್ಟನೆಯ ಹೊಗೆಯು ಕಾಣಿಸಿತು. ಘಟನೆಯಲ್ಲಿ ಯಾವುದೇ ಸಾವು ಈವರೆಗೂ ಸಂಭವಿಸಿಲ್ಲ. ಬದಲಿಗೆ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಗೇಮ್ಸ್‌ಕ್ರಾಫ್ಟ್ ಜಿಎಸ್‍ಟಿ ಶೋಕಾಸ್ – ರದ್ದುಗೊಳಿಸಿದ ಹೈಕೊರ್ಟ್

    ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಲಾ ರಿಪಬ್ಲಿಕಾ, ಮಿಲನ್‌ನ ಪೋರ್ಟಾ ರೊಮಾನಾ ಪ್ರದೇಶದಲ್ಲಿ ವಸಾರಿ ಮೂಲಕ ಮೂಲೆಯಲ್ಲಿ ಪಿಯರ್ ಲೊಂಬಾರ್ಡೊ ಮೂಲಕ ವಾಹನ ಸ್ಫೋಟಿಸಿದೆ. ಕಾರುಗಳಿಗೆ ಆವರಿಸಿದ್ದ ಬೆಂಕಿಯನ್ನು ತಕ್ಷಣ ನಂದಿಸಲಾಯಿತು. ಆದರೆ ಸ್ಥಳದಲ್ಲಿ ಹೊಗೆ ಆವರಿಸಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಚಾಲಕನ ಬರ್ಬರ ಹತ್ಯೆ

  • ಇಟಲಿಯಲ್ಲಿ ಇಂಗ್ಲಿಷ್ ಭಾಷೆ ಬ್ಯಾನ್ – ಸಂವಹನ ನಡೆಸಿದರೆ ಭಾರೀ ದಂಡ

    ಇಟಲಿಯಲ್ಲಿ ಇಂಗ್ಲಿಷ್ ಭಾಷೆ ಬ್ಯಾನ್ – ಸಂವಹನ ನಡೆಸಿದರೆ ಭಾರೀ ದಂಡ

    ರೋಮ್: ಇನ್ನು ಮುಂದೆ ಸರ್ಕಾರಿ ಸಂವಹನ ಇಟಲಿ ಭಾಷೆಯಲ್ಲಿ (Italy language) ನಡೆಯಬೇಕು. ಒಂದು ವೇಳೆ ಇಂಗ್ಲಿಷ್ (English) ಅಥವಾ ಬೇರೆ ಯಾವುದೇ ವಿದೇಶಿ ಭಾಷೆಯಲ್ಲಿ ನಡೆದರೆ ದಂಡವನ್ನು ವಿಧಿಸುವ ಪ್ರಸ್ತಾಪ ಇರುವ ಚರ್ಚೆಗೆ ಗ್ರಾಸವಾಗುವ ಮಸೂದೆಯೊಂದನ್ನು ಮಂಡನೆ ಮಾಡಲು ಇಟಲಿ ಸರ್ಕಾರ ಮುಂದಾಗಿದೆ.

    ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಯ (Giorgia Meloni) ಅವರ ಬ್ರದರ್ಸ್ ಆಫ್ ಇಟಲಿ (Brothers of Italy) ಪಕ್ಷ ಕರಡು ಮಸೂದೆಯನ್ನು ಸಿದ್ದಪಡಿಸಿದೆ. ಇದರ ಪ್ರಕಾರ ದೇಶದಲ್ಲಿ ಅಧಿಕೃತ ಸಂವಹನಕ್ಕೆ ಇಟಲಿ ಭಾಷೆಯಲ್ಲಿ ನಡೆಯಬೇಕು. ಯಾವುದೇ ವಿದೇಶಿ ಭಾಷೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಮಾಡುವಂತಿಲ್ಲ ಎಂಬ ನಿಯಮವನ್ನು ಒಳಗೊಂಡಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 100,000 ಯುರೋ (ಸುಮಾರು 90 ಲಕ್ಷ ರೂ.) ವರೆಗೆ ದಂಡವನ್ನು ವಿಧಿಸಲಾಗುವ ಪ್ರಸ್ತಾಪವನ್ನು ಒಳಗೊಂಡಿದೆ.

    ಈ ಮಸೂದೆ ಈಗ ಸಂಸತ್ತಿನ ಚರ್ಚೆಯ ಹಾದಿಯಲ್ಲಿದೆ. ಇಟಾಲಿಯನ್ ಭಾಷೆಯನ್ನೇ ಲಿಖಿತ ಹಾಗೂ ಮೌಖಿಕವಾಗಿ ಬಳಸಲು ಹಾಗೂ ಸಾರ್ವಜನಿಕರಿಗೆ ಈ ಭಾಷೆಯ ಜ್ಞಾನ ಹಾಗೂ ಪಾಂಡಿತ್ಯವನ್ನು ಹೆಚ್ಚಿಸಲು ಈ ನಿರ್ಧಾರ ಮಾಡಲಾಗಿದೆ. ಇದೀಗ ವಿದೇಶಿ ಭಾಷೆಗಳ ಬ್ಯಾನ್ ಇಟಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳಲ್ಲಿ ಅಧಿಕೃತ ದಾಖಲೆಗಳಲ್ಲಿರುವ ಇಂಗ್ಲಿಷ್ ಬಳಕೆಯನ್ನು ನಿಷೇಧಿಸುತ್ತದೆ. ಇದನ್ನೂ ಓದಿ: ಚೀನಾದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲವ್‌ ಮಾಡಲು ಒಂದು ವಾರ ರಜೆ

    ಇಷ್ಟು ಮಾತ್ರವಲ್ಲದೇ ದೇಶದಲ್ಲಿ ಸಾರ್ವಜನಿಕ ಸರಕು ಹಾಗೂ ಸೇವೆಗಳ ಪ್ರಚಾರ ಮತ್ತು ಬಳಕೆಗೆ ಈ ನಿಯಮ ಕಡ್ಡಾಯವಾಗಿದೆ. ಒಂದು ವೇಳೆ ಉಲ್ಲಂಘನೆಯಾದರೆ 5,000 ಯುರೋದಿಂದ 100,000 ಯುರೋ ವರೆಗೆ ದಂಡ ವಿಧಿಸುವ ಪ್ರಸ್ತಾಪವನ್ನು ಒಳಗೊಂಡಿದೆ.

    ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಯುವ ಜನತೆ ಬೀಳುತ್ತಿದ್ದರೆ. ಇದರಿಂದಾಗಿ ಇಟಲಿಯ ಸಂಸ್ಕೃತಿ ಮತ್ತು ಆರ್ಥಿಕತೆಗೆ ಸಮಸ್ಯೆಯಾಗುತ್ತದೆ. ಈ ಕಾರಣಕ್ಕೆ ಈ ಇಂಗ್ಲಿಷ್ ಬಳಕೆಯ ಮೇಲೆ ನಿರ್ಬಂಧ ಹೇರುವ ಮಸೂದೆ ಮಂಡನೆ ಮಂಡಲಾಗಿದೆ ಎಂದು ಬ್ರದರ್ಸ್ ಆಫ್ ಇಟಲಿ ಪಕ್ಷ ಸಮರ್ಥನೆ ಮಾಡಿಕೊಂಡಿದೆ.  ಇದನ್ನೂ ಓದಿ: ಭಾರತದಿಂದ 85 ದೇಶಗಳಿಗೆ ರಕ್ಷಣಾ ಸಾಮಾಗ್ರಿ ರಫ್ತು – 1,5920 ಕೋಟಿ ದಾಖಲೆ

  • ವಿಸ್ತಾರ ವಿಮಾನದಲ್ಲಿ ಅರೆಬೆತ್ತಲಾಗಿ ಓಡಾಡಿದ ಮಹಿಳೆ – ಗಲಾಟೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ

    ವಿಸ್ತಾರ ವಿಮಾನದಲ್ಲಿ ಅರೆಬೆತ್ತಲಾಗಿ ಓಡಾಡಿದ ಮಹಿಳೆ – ಗಲಾಟೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ

    ಮುಂಬೈ: ಅಬುಧಾಬಿಯಿಂದ ಮುಂಬೈಗೆ (Mumbai) ಆಗಮಿಸಿದ ವಿಸ್ತಾರಾ ವಿಮಾನದಲ್ಲಿ (Vistara Airlines) ಸೋಮವಾರ ಇಟಲಿಯ ಮಹಿಳಾ (Italian Woman) ಪ್ರಯಾಣಿಕೆ ಅರೆಬೆತ್ತಲಾಗಿ ಓಡಾಡಿದ್ದಲ್ಲದೇ ಗಲಾಟೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದಕ್ಕೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

    ವರದಿಗಳ ಪ್ರಕಾರ ಮಹಿಳೆ ಎಕನಾಮಿ ಟಿಕೆಟ್ ಪಡೆದಿದ್ದರೂ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕುಳಿತುಕೊಳ್ಳಲು ಹಠ ಮಾಡಿದ್ದಾಳೆ. ಇದನ್ನು ತಡೆಯಲು ಪ್ರಯತ್ನಿಸಿದ ಕ್ಯಾಬಿನ್ ಸಿಬ್ಬಂದಿ ಮೇಲೆ ಆಕೆ ಹಲ್ಲೆ ನಡೆಸಿದ್ದಾಳೆ. ಮಾತ್ರವಲ್ಲದೇ ತಾನು ಧರಿಸಿದ್ದ ಕೆಲವು ಬಟ್ಟೆಗಳನ್ನು ಕಳಚಿ ಅರೆಬೆತ್ತಲಾಗಿ ಓಡಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 25ಕ್ಕೂ ಹೆಚ್ಚು ಜ್ಯುವೆಲ್ಲರಿ ಶಾಪ್‌ಗಳ ಮೇಲೆ ಐಟಿ ದಾಳಿ

     

    ವಿಮಾನದಲ್ಲಿ ಗದ್ದಲ ಸೃಷ್ಟಿಸಿದ ಮಹಿಳೆ ಇಟಲಿಯ ಪಾವೊಲಾ ಪೆರುಸಿಯೋ ಎಂದು ಗುರುತಿಸಲಾಗಿದೆ. ಆಕೆ ಕುಡಿದ ಮತ್ತಿನಲ್ಲಿದ್ದಳು ಎನ್ನಲಾಗಿದೆ. ಆಕೆಯ ವಿರುದ್ಧ ಏರ್ ವಿಸ್ತಾರ ಯುಕೆ-256 ವಿಮಾನದಲ್ಲಿದ್ದ ಸಿಬ್ಬಂದಿ ದೂರು ನೀಡಿದ್ದಾರೆ. ಮಹಿಳೆಯ ಹಿಂಸಾತ್ಮಕ ಹಾಗೂ ಅಶಿಸ್ತಿನ ವರ್ತನೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಯುವಕನ ಜೊತೆಗೆ ಪಾರ್ಕ್‍ನಲ್ಲಿ ಕೂತಿದ್ದಕ್ಕೆ 1 ಸಾವಿರ ವಸೂಲಿ- ಪೇದೆ ವಿರುದ್ಧ ಯುವತಿ ದೂರು

    ಮಹಿಳೆಯ ಬಂಧನದ ಬಳಿಕ ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಟಲಿಯ ಇಶಿಯಾ ದ್ವೀಪದಲ್ಲಿ ಭೂಕುಸಿತ – 3 ವಾರದ ಶಿಶು ಸೇರಿ 7 ಸಾವು

    ಇಟಲಿಯ ಇಶಿಯಾ ದ್ವೀಪದಲ್ಲಿ ಭೂಕುಸಿತ – 3 ವಾರದ ಶಿಶು ಸೇರಿ 7 ಸಾವು

    ರೋಮ್: ಇಟಲಿಯ (Italy) ಇಶಿಯಾ ದ್ವೀಪದಲ್ಲಿರುವ (Ischia Island) ಜನನಿಬಿಡ ಬಂದರು ನಗರದಲ್ಲಿ ಭಾನುವಾರ ಭೂಕುಸಿತ (Landslide) ಉಂಟಾಗಿ 7 ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಇಶಿಯಾ ದ್ವೀಪದ ಉತ್ತರ ಭಾಗದಲ್ಲಿರುವ ಕ್ಯಾಂಪನಿಯಾದ ಮೆಟ್ರೋಪಾಲಿಟನ್ ಸಿಟಿ ಆಫ್ ನೇಪಲ್ಸ್‌ನಲ್ಲಿರುವ ಕಮ್ಯೂನ್ ಕ್ಯಾಸಮಿಸಿಯೋಲಾದಲ್ಲಿ ಭೂಕುಸಿತ ಉಂಟಾಗಿದ್ದು, ಹಲವರು ಇನ್ನೂ ಅವಶೇಷಗಳಡಿ ಸಿಲುಕಿರುವುದಾಗಿ ಶಂಕಿಸಲಾಗಿದೆ. ಈಗಾಗಲೇ 3 ವಾರದ ಮಗು, ಒಂದು ಜೋಡಿ ಒಡಹುಟ್ಟಿದ ಮಕ್ಕಳು ಸೇರಿದಂತೆ 7 ಜನರ ಶವಗಳನ್ನು ಹೊರತೆಗೆಯಲಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ನೋಡಲು ಮುಗಿಬಿದ್ದ ಜನ – ಬಿದ್ದು ಕೈ ಮುರಿದುಕೊಂಡ ಕೆ.ಸಿ ವೇಣುಗೋಪಾಲ್

    ಭಾರೀ ಭೂಕುಸಿತದಿಂದಾಗಿ ಅನೇಕ ಕಟ್ಟಡಗಳು ಕುಸಿದಿದ್ದು, ಹಲವು ವಾಹನಗಳು ಸಮುದ್ರ ಪಾಲಾಗಿದೆ ಎಂದು ವರದಿಗಳು ತಿಳಿಸಿವೆ. ಇಟಲಿಯ ಅಗ್ನಿಶಾಮಕದಳ ಸ್ಥಳ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎನ್ನಲಾಗಿದೆ. ಇದನ್ನೂ ಓದಿ: ಮಾರೊಕ್ಕೂ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

    ವರದಿಗಳ ಪ್ರಕಾರ, ಇಶಿಯಾ ದ್ವೀಪದಲ್ಲಿ 6 ಗಂಟೆಗೆ 126 ಮಿ.ಮೀ (ಸುಮಾರು 5 ಇಂಚು) ಮಳೆ ಸುರಿದಿದೆ. ಇದು ಕಳೆದ 20 ವರ್ಷಗಳಲ್ಲೇ ಸುರಿದ ಅತ್ಯಂತ ಹೆಚ್ಚಿನ ಪ್ರಮಾಣದ್ದಾಗಿದೆ. ಈ ಹಿನ್ನೆಲೆ ಭಾರೀ ಭೂಕುಸಿತ ಉಂಟಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪುರುಷರೊಂದಿಗೆ ಸೆಕ್ಸ್ – ವ್ಯಕ್ತಿಗೆ ಒಂದೇ ಬಾರಿಗೆ ಕೊರೊನಾ, ಮಂಕಿಪಾಕ್ಸ್, HIV ಪಾಸಿಟಿವ್‌

    ಪುರುಷರೊಂದಿಗೆ ಸೆಕ್ಸ್ – ವ್ಯಕ್ತಿಗೆ ಒಂದೇ ಬಾರಿಗೆ ಕೊರೊನಾ, ಮಂಕಿಪಾಕ್ಸ್, HIV ಪಾಸಿಟಿವ್‌

    ರೋಮ್: ಇಟಲಿಯ ವ್ಯಕ್ತಿಯೋರ್ವನಿಗೆ ಒಂದೇ ಬಾರಿಗೆ ಮಂಕಿಪಾಕ್ಸ್, ಕೊರೊನಾ, ಎಚ್‍ಐವಿ ಸೋಂಕು ತಗುಲಿದೆ. ಅನೇಕ ಪುರುಷರೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದರಿಂದ ವ್ಯಕ್ತಿ ಸೋಂಕು ತಗುಲಿರುವುದು ದೃಢವಾಗಿದೆ.

    ಸ್ಪೇನ್ ಪ್ರವಾಸಕ್ಕೆ ಹೋಗಿದ್ದ ವ್ಯಕ್ತಿ ನಂತರ ಹಿಂದಿರುಗಿದ ನಂತರ ಜ್ವರ, ಆಯಾಸ ಮತ್ತು ನೋಯುತ್ತಿರುವ ಗಂಟಲು ಸೇರಿದಂತೆ ಹಲವಾರು ರೋಗಲಕ್ಷಣಗಳು ಕಾಣಿಸಿಕೊಂಡಿದೆ. ಬಳಿಕ ಪರೀಕ್ಷೆಗೆ ಒಳಪಡಿಸಿದಾಗ ವ್ಯಕ್ತಿಗೆ ಮಂಕಿಪಾಕ್ಸ್, ಕೋವಿಡ್-19 ಮತ್ತು ಎಚ್‍ಐವಿ ರೋಗ ಪಾಸಿಟಿವ್ ಬಂದಿದೆ. ಇದನ್ನೂ ಓದಿ: ಉತ್ತರ ಪ್ರದೇಶ, ತ್ರಿಪುರ ಬಳಿಕ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ?

    36 ವರ್ಷದ ಈ ವ್ಯಕ್ತಿ ಜೂನ್ 16 ರಿಂದ ಜೂನ್ 20ರವರೆಗೆ ಐದು ದಿನಗಳ ಕಾಲ ಸ್ಪೇನ್‍ನಲ್ಲಿ ತಂಗಿದ್ದನು. ಈ ವೇಳೆ ಅನೇಕ ಪುರುಷರೊಂದಿಗೆ ಅಸುರಕ್ಷಿತವಾದ ಲೈಂಗಿಕ ಸಂಬಂಧವನ್ನು ಹೊಂದಿದ್ದನು. ಮನೆಗೆ ಹಿಂತಿರುಗಿದ ಕೆಲವೇ ದಿನಗಳಲ್ಲಿ ಅಂದರೆ ಜುಲೈ 2 ರಂದು ಕೋವಿಡ್ ಪರೀಕ್ಷೆಗೆ ಒಳಗಾದನು. ಅಂದೇ ಮಧ್ಯಾಹ್ನ ಆತನ ಎಡಗೈಯಲ್ಲಿ ರ‌್ಯಾಶಸ್ ಕಂಡುಬಂದಿದೆ. ಮರುದಿನ ವ್ಯಕ್ತಿಯ ತಲೆ, ಕೈ ಕಾಲುಗಳು, ಮುಖ ಮತ್ತು ಹಿಂಭಾಗದಲ್ಲಿ ಸಣ್ಣ ಸಣ್ಣ ನೋವಿನ ಗುಳ್ಳೆಗಳು ಕಾಣಿಸಿಕೊಂಡಿದೆ. ನಂತರ ಗುಳ್ಳೆಗಳಲ್ಲಿ ಕೀವು ತುಂಬಿಕೊಂಡು ಅದು ದೇಹದ ತುಂಬೆಲ್ಲ ಹರಡಲಾರಂಭಿಸಿದೆ. ಕೂಡಲೇ ವ್ಯಕ್ತಿಯನ್ನು ಇಟಲಿಯ ಕ್ಯಾಟಾನಿಯಾದ ಸ್ಯಾನ್ ಮಾರ್ಕೊ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಕರೆದೊಯ್ದು ಸಾಂಕ್ರಾಮಿಕ ರೋಗಗಳ ಘಟಕಕ್ಕೆ ವರ್ಗಾಯಿಸಲಾಯಿತು.

    ನಂತರ ವ್ಯಕ್ತಿಗೆ ಅನೇಕ ಪರೀಕ್ಷೆಗಳನ್ನು ನಡೆಸಿದಾಗ ಮಂಕಿಪಾಕ್ಸ್ ಪಾಸಿಟಿವ್ ಬಂದಿದೆ. ಈ ವೇಳೆ ತಾನು ಸ್ಪೇನ್ ಪ್ರವಾಸದಲ್ಲಿದ್ದಾಗ ಪುರುಷರೊಂದಿಗೆ ಅಸುರಕ್ಷಿತ ಸಂಭೋಗ ನಡೆಸಿದ್ದಾಗಿ ಆತ ಬಹಿರಂಗಪಡಿಸಿದ್ದಾನೆ. ಕೂಡಲೇ ಮಂಕಿಪಾಕ್ಸ್ ಟೆಸ್ಟ್ ಮಾಡಲಾಗಿತ್ತು. ಅದರಲ್ಲಿಯೂ ಪಾಸಿಟಿವ್ ಬಂದಿತ್ತು. 20 ದಿನಗಳ ನಂತರವೂ ಮಂಕಿಪಾಕ್ಸ್ ಟೆಸ್ಟ್ ಪಾಸಿಟಿವ್ ಬರುತ್ತಲೇ ಇತ್ತು. ಚಿಕಿತ್ಸೆಯ ಬಳಿಕ ಹಲವು ದಿನಗಳವರೆಗೂ ಸೋಂಕು ಹಾಗೇ ಇರಬಹುದು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ವ್ಯಕ್ತಿ 2019ರಲ್ಲಿ ಸಿಫಿಲಿಸ್‍ಗೆ ಚಿಕಿತ್ಸೆ ಪಡೆದಿದ್ದ. ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದ. 2011ರಲ್ಲಿ ಕೋವಿಡ್-19 ಲಸಿಕೆಯ ಎರಡು ಡೋಸ್ ಪಡೆದಿದ್ದ. ಆದರೆ ಜನವರಿ 2022ರಲ್ಲಿ ಆತನಿಗೆ ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಗೆ ದಾಖಲಾದ ನಂತರ ವೈರಲ್ ಹೆಪಟೈಟಿಸ್, ಹರ್ಷಿಸ್ ಸಿಂಪ್ಲೆಕ್ಸ್, ಗೊನೊರಿಯಾ, ಕ್ಲಮೈಡಿಯ ಮತ್ತು ಲಿಂಫೋಗ್ರಾನುಲೋಮಾ ವೆನೆರಿಯಮ್(ಎಲ್‍ಜಿವಿ)ಗಾಗಿ ನಡೆಸಲಾದ ಸೆರಾಲಜಿ ಪರೀಕ್ಷೆಗಳು ನೆಗೆಟಿವ್ ಬಂದಿದೆ. ಹೆಚ್‍ಐವಿ ಪರೀಕ್ಷೆ ಮಾತ್ರ ಪಾಸಿಟಿವ್ ಬಂದಿದೆ. ಒಂದೇ ಬಾರಿಗೆ ಮೂರು ಸೋಂಕುಗಳು ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವುದರಿಂದ ಇದೀಗ ಅವರನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ.  ಇದನ್ನೂ ಓದಿ: ಶಿವಮೊಗ್ಗ SDPI ಕಚೇರಿ ಮೇಲೆ ಪೊಲೀಸರ ದಾಳಿ – ಮಹತ್ವದ ದಾಖಲೆ ವಶಕ್ಕೆ

    ಇತ್ತೀಚೆಗೆ ಅತೀ ಬೇಗ ಹರಡುತ್ತಿರುವ ಸೋಂಕು ಮಂಕಿಪಾಕ್ಸ್ ಆಗಿದೆ. ಚರ್ಮದ ಗಾಯ, ವೈರಸ್‍ನಿಂದ ಕಲುಷಿತಗೊಂಡ ವಸ್ತುಗಳು, ಸೆಮಿನಲ್ ದ್ರವಗಳು ಮತ್ತು ಗಂಟಲಿನ ಸ್ರವಿಸುವಿಕೆ, ಸಾಂಗ್ರಾಮಿಕ ವಸ್ತುಗಳೊಂದಿಗೆ ನಿಕಟ ಸಂಪರ್ಕದಿಂದ ಮಂಕಿಪಾಕ್ಸ್ ಹರಡುತ್ತದೆ. ಅದರಲ್ಲಿಯೂ ಸಂಭೋಗ ನಡೆಸುವುದರಿಂದ ಮಂಕಿಪಾಕ್ಸ್ ಅತೀ ವೇಗವಾಗಿ ಹರಡುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ಸುಷ್ಮಿತಾ ಸೇನ್ ಈಜುಡುಗೆ ಕಂಡು ‘ಲುಕ್ಕಿಂಗ್ ಹಾಟ್’ ಎಂದ ಲಲಿತ್ ಮೋದಿ

    ಸುಷ್ಮಿತಾ ಸೇನ್ ಈಜುಡುಗೆ ಕಂಡು ‘ಲುಕ್ಕಿಂಗ್ ಹಾಟ್’ ಎಂದ ಲಲಿತ್ ಮೋದಿ

    ಲಿತ್ ಮೋದಿ ಮತ್ತು ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಸ್ವತಃ ಲಲಿತ್ ಮೋದಿ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಾಗ ಎಲ್ಲರೂ ಅಚ್ಚರಿ ಆಗಿದ್ದಂತೂ ನಿಜ. ಅದರಲ್ಲೂ ಮಾಜಿ ವಿಶ್ವಸುಂದರಿಯ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿದಾಗಲಂತೂ ಅದೇ ನ್ಯಾಷನಲ್ ನ್ಯೂಸ್ ಆಯಿತು. ಆನಂತರ ಏನೆಲ್ಲ ಬೆಳವಣಿಗೆಗಳು ನಡೆದವು.

    ತಾವಿಬ್ಬರೂ ಡೇಟಿಂಗ್ ಮಾಡುತ್ತಿಲ್ಲ ಎನ್ನುವಂತೆ ಸುಷ್ಮಿತಾ ಸೇನ್ ಬರೆದುಕೊಂಡರು. ತಾವಿಬ್ಬರೂ ಸ್ನೇಹಿತರು ಎನ್ನುವ ಅರ್ಥದಲ್ಲೂ ಬಿಂಬಿಸಲು ಹೊರಟರು. ಆದರೆ, ಲಲಿತ್ ಮೋದಿ ಮಾತ್ರ, ತಮ್ಮಿಬ್ಬರ ಮಧ್ಯೆ ಪ್ರೀತಿ ಇದೆ ಎನ್ನುವುದನ್ನು ಪದೇ ಪದೇ ಸಾಬೀತು ಮಾಡಲು ಹೊರಟರು. ಹಾಗಾಗಿ ಸುಷ್ಮಿತಾ ಸೇನ್ ಬಗ್ಗೆ ಸಲ್ಲದ ಆರೋಪಗಳನ್ನೂ ಕೆಲವರು ಮಾಡಿದರು. ದುಡ್ಡಿನ ಹಿಂದೆ ಬಿದ್ದವಳು ಎಂದು ಸ್ವತಃ ಮಾಜಿ ಬಾಯ್ ಫ್ರೆಂಡ್ ಹೇಳಿಕೆ ಕೊಟ್ಟ.

    ನಿತ್ಯ ಟ್ರೋಲ್ ಆಗುವುದನ್ನು ತಪ್ಪಿಸಲು ಸುಷ್ಮಿತಾ ಸೇನ್ ಇಟಲಿ ಪ್ರವಾಸ ಕೈಗೊಂಡರು. ಈ ಪ್ರವಾಸದ ಕೆಲವು ಫೊಟೋ ಮತ್ತು ವಿಡಿಯೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಅದರಲ್ಲೂ ಈಜುಡುಗೆಯಲ್ಲಿ ಸಮುದ್ರಕ್ಕೆ ಹಾರುವಂತಹ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಸಖಯ್ ವೈರಲ್ ಕೂಡ ಆಗಿದೆ. ಸಖತ್ ಸೆಕ್ಸಿಯಾಗಿಯೂ ಸುಷ್ಮಿತಾ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ಈ ವಿಡಿಯೋವನ್ನು ಸುಷ್ಮಿತಾ ಸೇನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆಯೆ ಲಲಿತ್ ಮೋದಿ ಅದಕ್ಕೆ ಕಾಮೆಂಟ್ ಮಾಡಿದ್ದಾರೆ. ಲುಕ್ಕಿಂಗ್ ಹಾಟ್ ಎಂದು ಬರೆದಿದ್ದಾರೆ. ಈ ಬರಹ ಕೂಡ ಇದೀಗ ಚರ್ಚೆಗೆ ಕಾರಣವಾಗಿದೆ. ಸುಷ್ಮಿತಾ ಸೇನ್ ಜೊತೆ ಇವರಿಗಿದ್ದ ಪ್ರೇಮವನ್ನು ಈ ರೀತಿಯಲ್ಲಿ ಸಾರಲಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಒಕ್ಕೂಟದ ಪತನದ ನಂತರ ರಾಜೀನಾಮೆ ನೀಡಲು ಮುಂದಾದ ಇಟಲಿ ಪಿಎಂ

    ಒಕ್ಕೂಟದ ಪತನದ ನಂತರ ರಾಜೀನಾಮೆ ನೀಡಲು ಮುಂದಾದ ಇಟಲಿ ಪಿಎಂ

    ರೋಮ್: ಒಕ್ಕೂಟದ ಪತನದ ಹಿನ್ನೆಲೆ ಇಟಲಿ ಪಿಎಂ ಮಾರಿಯೋ ದ್ರಾಘಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

    ಸಂಸತ್ತಿನಲ್ಲಿ ಪ್ರಮುಖ ಮಸೂದೆಗೆ ಮತ ಚಲಾಯಿಸಲು ಜನಪ್ರಿಯ ಒಕ್ಕೂಟದ ಪಾಲುದಾರರು ನಿರಾಕರಿಸಿದ ನಂತರ ಮಾರಿಯೋ ದ್ರಾಘಿ ಅವರು ಗುರುವಾರ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಅಧ್ಯಕ್ಷರು ರಾಜೀನಾಮೆ ನೀಡದಂತೆ ಒತ್ತಾಯಿಸಿದ್ದಾರೆ.

    ರಾಜೀನಾಮೆಯ ನಿರಾಕರಣೆಯು ದ್ರಾಘಿ ಅವರ 17-ತಿಂಗಳ ಸರ್ಕಾರದ ಭವಿಷ್ಯವನ್ನು ಅಸ್ತವ್ಯಸ್ತಗೊಳಿಸಿತು. ಒಕ್ಕೂಟದೊಳಗೆ ಹೆಚ್ಚುತ್ತಿರುವ ತೀಕ್ಷ್ಣವಾದ ಭಿನ್ನಾಭಿಪ್ರಾಯಗಳಿಂದ ಸರ್ಕಾರದ ಉಳಿವಿನ ಬಗ್ಗೆ ತೀವ್ರವಾಗಿ ಚರ್ಚೆಯಾಗುತ್ತಿದೆ. ಇದನ್ನೂ ಓದಿ:  ಜೇಮ್ಸ್ ವೆಬ್ ಟೆಲಿಸ್ಕೋಪ್‍ನಲ್ಲಿ ಸೆರೆ ಸಿಕ್ಕ ಗುರು-ಚಂದ್ರನ ಬೆರಗುಗೊಳಿಸುವ ಫೋಟೋ 

    ಕಾರಣವೇನು?
    ದ್ರಾಘಿ ಅವರ ವಿಶಾಲ ಸಮ್ಮಿಶ್ರ ಸರ್ಕಾರವು ಕೇಂದ್ರ ಮತ್ತು ಜನಪ್ರಿಯ 5-ಸ್ಟಾರ್ ಮೂವ್‍ಮೆಂಟ್‍ನ ಪಕ್ಷಗಳನ್ನು ಒಳಗೊಂಡಿದೆ. ಈ ರೀತಿ ಸರ್ಕಾರವನ್ನು ಇಟಲಿಯ ಜನರು ಕೊರೊನಾ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳಲು ಸಹಾಯವಾಗಬೇಕು ಎಂದು ವಿನ್ಯಾಸಗೊಳಿಸಲಾಗಿತ್ತು.

    ಇಟಲಿ ನೂತನ ಪ್ರಧಾನಿ ಮಾರಿಯೋ ದ್ರಾಘಿ- Kannada Prabha

    ಗುರುವಾರ ದ್ರಾಘಿ ಅವರ ಸರ್ಕಾರವು ಸೆನೆಟ್‍ನಲ್ಲಿ ವಿಶ್ವಾಸ ಮತವನ್ನು ಗೆದ್ದುಕೊಂಡಿತು. 5-ಸ್ಟಾರ್ ಮೂವ್‍ಮೆಂಟ್ ಮಸೂದೆಯನ್ನು ಬೆಂಬಲಿಸಲು ನಿರಾಕರಿಸಿ 26 ಬಿಲಿಯನ್ ಯುರೋಗಳನ್ನು(20,84,89,73,56,620) ಬೇಡಿಕೆ ಇಟ್ಟಿತ್ತು. ಈ ಹಿನ್ನೆಲೆ ಡ್ರಾಘಿ ರಾಜೀನಾಮೆಯ ನಿರ್ಧಾರಕ್ಕೆ ಬಂದಿದ್ದಾರೆ.

    ರಾಜೀನಾಮೆಯನ್ನು ಸಲ್ಲಿಸಲು ಕ್ವಿರಿನಾಲ್ ಅಧ್ಯಕ್ಷೀಯ ಅರಮನೆಗೆ ತೆರಳುವ ಸ್ವಲ್ಪ ಸಮಯದ ಮೊದಲು ದ್ರಾಘಿ ಅವರು, ಈ ಸರ್ಕಾರದ ರಚನೆಯನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ಏಕತೆಯ ಬಹುಪಾಲು ಸ್ಥಾನಗಳು ಅಸ್ತಿತ್ವದಲ್ಲಿಲ್ಲ ಎಂದು ಘೋಷಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಇಟಲಿಯಲ್ಲಿ ಹೆಲಿಕಾಪ್ಟರ್ ಪತನ – 7 ಮೃತದೇಹ ಪತ್ತೆ

    ಇಟಲಿಯಲ್ಲಿ ಹೆಲಿಕಾಪ್ಟರ್ ಪತನ – 7 ಮೃತದೇಹ ಪತ್ತೆ

    ರೋಮ್: ಇಟಲಿಯಲ್ಲಿ ಹೆಲಿಕಾಪ್ಟರ್ ಒಂದು 2 ದಿನಗಳ ಹಿಂದೆ ರಾಡಾರ್‌ನಿಂದ ಕಣ್ಮರೆಯಾಗಿತ್ತು. ಪತನವಾಗಿದ್ದ ಹೆಲಿಕಾಪ್ಟರ್‌ನಿಂದ ಇದೀಗ 7 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೆಲಿಕಾಪ್ಟರ್ ಗುರುವಾರ ಟಸ್ಕನಿಯ ಲುಕ್ಕಾದಿಂದ ಟೇಕ್ ಆಫ್ ಆಗಿದ್ದು, ಟ್ರೆವಿಸೊ ನಗರದ ಕಡೆಗೆ ಹೋಗುತ್ತಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಪತನವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಎನ್‍ಕೌಂಟರ್ – ಮೂವರು ಲಷ್ಕರ್ ಉಗ್ರರ ಹತ್ಯೆ

    ಹೆಲಿಕಾಪ್ಟರ್‌ನಲ್ಲಿದ್ದ 7 ಪ್ರಯಾಣಿಕರು ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ವರು ಟರ್ಕಿ ಮೂಲದವರು ಹಾಗೂ ಇಬ್ಬರು ಲೆಬನಾನಿಯವರು ಇದ್ದು, ಒಬ್ಬ ಇಟಲಿ ಮೂಲದ ಪೈಲಟ್ ಸೇರಿದಂತೆ ಎಲ್ಲರೂ ಮೃತಪಟ್ಟಿದ್ದಾರೆ. ಪ್ರಯಾಣಿಕರು ಇಟಲಿಗೆ ವ್ಯಾಪಾರದ ಹಿನ್ನೆಲೆ ಪ್ರಯಾಣಿಸುತ್ತಿದ್ದರು ಎಂದು ಮೊಡೆನಾ ನಗರದ ಪ್ರಿಫೆಕ್ಟ್ ಕಚೇರಿ ತಿಳಿಸಿದೆ. ಇದನ್ನೂ ಓದಿ: ಬೂದಿಮುಚ್ಚಿದ ಕೆಂಡದಂತೆ ಭಾರತ – ಯುಪಿಯಲ್ಲಿ 250ಕ್ಕೂ ಗಲಭೆಕೋರರು ಅರೆಸ್ಟ್

    ಟಸ್ಕನಿ ಹಾಗೂ ಎಮಿಲಿಯಾ ರೋಮ್ಯಾಗ್ನಾ ಪ್ರದೇಶದ ಗಡಿಯಲ್ಲಿರುವ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತ್ತೆಯಾಗಿದೆ. ಹೆಲಿಕಾಪ್ಟರ್ ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ಎಲ್ಲರೂ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.