Tag: italy

  • ಶೂಟಿಂಗ್ ಗಾಗಿ ಇಟಲಿಗೆ ಹಾರಲಿದ್ದಾರೆ ಗಣೇಶ್

    ಶೂಟಿಂಗ್ ಗಾಗಿ ಇಟಲಿಗೆ ಹಾರಲಿದ್ದಾರೆ ಗಣೇಶ್

    ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಇಟಲಿ ಮತ್ತು ಮಾಲ್ಟಾದಲ್ಲಿ ನಡೆಯಲಿದೆ. ಗೋಲ್ಡನ್ ಸ್ಟಾರ್ ಗಣೇಶ್, ಮಾಳವಿಕ ನಾಯರ್ ಹಾಗೂ ಶರಣ್ಯ ಶೆಟ್ಟಿ ಹಾಡುಗಳ ಚಿತ್ರೀಕರಣದಲ್ಲಿ ಪಾಲ್ಗೊಳಲಿದ್ದಾರೆ.

    ಹಾಡುಗಳ ಚಿತ್ರೀಕರಣಕ್ಕಾಗಿ ಮೂವತ್ತು ಜನರ ತಂಡ ಇಟಲಿಗೆ ಪ್ರಯಾಣ ಬೆಳಸಲಿದೆ. ಹೊಸವರ್ಷ ಆರಂಭದ ಸಂದರ್ಭದಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಎಲ್ಲರಿಗೂ ಚಿತ್ರತಂಡ ಹೊಸವರ್ಷದ ಶುಭಾಶಯ ತಿಳಿಸಿದೆ.

    ಯಶಸ್ವಿ ಚಿತ್ರಗಳ ನಿರ್ದೇಶಕ  ಶ್ರೀನಿವಾಸರಾಜು ನಿರ್ದೇಶನದ ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಜನ್ಯ  ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕಿದೆ.

    ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ  ನಿರ್ಮಾಣ ಮಾಡುತ್ತಿದ್ದಾರೆ. ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ,  ಶ್ರೀನಿವಾಸಮೂರ್ತಿ,  ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್,  ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಚೀನಾಗೆ ಬಿಗ್‌ ಶಾಕ್‌ – ಮಹತ್ವಾಕಾಂಕ್ಷೆಯ BRI ಯೋಜನೆಯಿಂದ ಹೊರಬಂದ ಇಟಲಿ

    ಚೀನಾಗೆ ಬಿಗ್‌ ಶಾಕ್‌ – ಮಹತ್ವಾಕಾಂಕ್ಷೆಯ BRI ಯೋಜನೆಯಿಂದ ಹೊರಬಂದ ಇಟಲಿ

    ರೋಮ್‌: ಚೀನಾಗೆ ಇಟಲಿ ಬಿಗ್‌ ಶಾಕ್‌ ನೀಡಿದೆ. ಚೀನಾದ (China) ಮಹತ್ವಾಕಾಂಕ್ಷೆಯ ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್ (BRI) ಯೋಜನೆಯಿಂದ ಹೊರಬರುವುದಾಗಿ ಇಟಲಿ (Italy) ಅಧಿಕೃತವಾಗಿ ತಿಳಿಸಿದೆ.

    ಈಗ ಇಟಲಿ ಅಧಿಕೃತವಾಗಿ ಈ ಯೋಜನೆಯಿಂದ ಹೊರಬರುವುದಾಗಿ ಚೀನಾಗೆ ತಿಳಿಸಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ. 2019ರಲ್ಲಿ ನಡೆದ ಒಪ್ಪಂದವು ಮಾರ್ಚ್ 2024 ರಲ್ಲಿ ಮುಕ್ತಾಯಗೊಳ್ಳುತ್ತದೆ. ರೋಮ್ ಕನಿಷ್ಠ ಮೂರು ತಿಂಗಳ ಮೊದಲೇ ಲಿಖಿತವಾಗಿ ತಿಳಿಸದೇ ಇದ್ದರೆ ಅದು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ. ಈಗ ಈ ಒಪ್ಪಂದವನ್ನು ನವೀಕರಿಸುವುದಿಲ್ಲಎಂದು ಇಟಲಿ ಚೀನಾಗೆ ಇತ್ತೀಚಿಗೆ ಪತ್ರದ ಮೂಲಕ ತಿಳಿಸಿದೆ ಎಂದು ವರದಿಯಾಗಿದೆ.

    ಚೀನಾದ ಈ ಯೋಜನೆಗೆ  2019ರಲ್ಲಿ ಇಟಲಿ ಸಹಿ ಹಾಕಿತ್ತು.  ಬಿಆರ್‌ಐ ಸೇರಿದ ಏಕೈಕ ಪಾಶ್ಚಿಮಾತ್ಯ ದೇಶ ಇಟಲಿಯಾಗಿತ್ತು. ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಇಟಲಿ ಈ ಯೋಜನೆಯಿಂದ ಹಿಂದಕ್ಕೆ ಸರಿಯಲಿದೆ ಎಂಬ ವಿಚಾರ ಕೆಲ ತಿಂಗಳಿಂದ ಸುದ್ದಿಯಾಗುತ್ತಿತ್ತು. ಇದನ್ನೂ ಓದಿ: ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ!

    ನಾವು ಇನ್ನು ಮುಂದೆ ಬಿಆರ್‌ಐ ಭಾಗವಾಗಿರದಿದ್ದರೂ ಸಹ ಚೀನಾದೊಂದಿಗೆ ಅತ್ಯುತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವ ಎಲ್ಲಾ ಉದ್ದೇಶವನ್ನು ನಾವು ಹೊಂದಿದ್ದೇವೆ. ಇತರ ಜಿ7 ರಾಷ್ಟ್ರಗಳು ಚೀನಾದೊಂದಿಗೆ ನಮಗಿಂತಲೂ ಉತ್ತಮ ಸಂಬಂಧವನ್ನು ಹೊಂದಿದ್ದರೂ ಆ ದೇಶಗಳು ಬಿಆರ್‌ಐ ಯೋಜನೆಯ ಭಾಗವಾಗಿಲ್ಲ ಎಂದು ಇಟಲಿಯ ಸರ್ಕಾರಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಕಳೆದ ವರ್ಷ ಪ್ರಧಾನಿಯಾಗಿ ಜಾರ್ಜಿಯಾ ಮೆಲೋನಿ (Giorgia Meloni) ಅಧಿಕಾರ ವಹಿಸಿಕೊಂಡ ಬಳಿಕ ಚೀನಾವನ್ನು ಪಶ್ಚಿಮಕ್ಕೆ ಸಂಪರ್ಕಿಸುವ ಈ ಯೋಜನೆಯಿಂದ ಇಟಲಿಗೆ ಯಾವುದೇ ಗಮನಾರ್ಹ ಲಾಭ ಇಲ್ಲ.  ಈ ಒಪ್ಪಂದದಿಂದ ಹಿಂದೆ ಸರಿಯಲು ಬಯಸುವುದಾಗಿ ಹೇಳಿದ್ದರು.  ಇದನ್ನೂ ಓದಿ: ಏನಿದು ಬಿಎಆರ್‌ಐ ಯೋಜನೆ? ಚೀನಾಗೆ ಲಾಭ ಹೇಗೆ? ಭಾರತ ಯಾಕೆ ಸೇರ್ಪಡೆಯಾಗಿಲ್ಲ? ಭಾರತದ ವಿರೋಧ ಯಾಕೆ? ಚೀನಾದ ಯೋಜನೆಗೆ ಪ್ರತಿಯಾಗಿ ಭಾರತ ಏನು ಮಾಡುತ್ತಿದೆ?

    ಏನಿದು ಈ ಯೋಜನೆ?
    ಸರಳವಾಗಿ ಹೇಳುವುದಾರೆ ರಸ್ತೆ, ರೈಲು, ಹಡಗಿನ ಮೂಲಕ ವಸ್ತುಗಳನ್ನು ಸಾಗಿಸಲು ಆರಂಭವಾದ ಯೋಜನೆ ಒನ್‌ ಬೆಲ್ಟ್‌, ಒನ್‌ ರೋಡ್‌ ಯೋಜನೆ. ಅಂದರೆ ಒಂದು ದೇಶದಲ್ಲಿ ಮೂಲಸೌಕರ್ಯವನ್ನು (Infrastructure) ಅಭಿವೃದ್ಧಿ ಪಡಿಸುವ ಈ ಯೋಜನೆ 2013ರಲ್ಲಿ ಆರಂಭಗೊಂಡಿತು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಕನಸಿನ ಯೋಜನೆ ಇದಾಗಿದ್ದು ಇದಕ್ಕೆ 30, 50 ದೇಶಗಳು ಸೇರಿಲ್ಲ. ರಷ್ಯಾ, ಸೌದಿ ಅರೇಬಿಯಾ, ಕತಾರ್‌, ಇರಾನ್‌, ಅರ್ಜೈಂಟಿನಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಸೇರಿದಂತೆ ಬರೋಬ್ಬರಿ 150 ದೇಶಗಳು ಈ ಮಹತ್ವಾಕಾಂಕ್ಷಿಯೋಜನೆಯ ಸದಸ್ಯ ರಾಷ್ಟ್ರಗಳಾಗಿವೆ. ರಸ್ತೆ, ರೈಲು, ಸೇತುವೆ, ವಿದ್ಯುತ್‌ ಸ್ಥಾವರ, ಬಂದರುಗಳನ್ನು ಈ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಸದಸ್ಯ ರಾಷ್ಟ್ರಗಳಲ್ಲ ಲ್ಯಾಟಿನ್‌ ಅಮೆರಿಕ, ಯುರೋಪ್‌, ಏಷ್ಯಾ, ಆಫ್ರಿಕಾ ದೇಶಗಳೇ ಅಧಿಕವಾಗಿವೆ.

     

    ಭಾರತ, ಅಮೆರಿಕ ವಿರೋಧ:
    ವಿಶ್ವದ ಹಲವು ರಾಷ್ಟ್ರಗಳು ಸೇರ್ಪಡೆಯಾದರೂ ಭಾರತ (India) ಮತ್ತು ಅಮೆರಿಕ (USA) ಈ ಯೋಜನೆಯನ್ನು ವಿರೋಧಿಸುತ್ತಾ ಬಂದಿದೆ. ಇದು ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸುವ ಯೋಜನೆ ಎಂದೇ ಭಾರತ ಬಣ್ಣಿಸಿದೆ. ಈ ಯೋಜನೆಯ ಭಾಗವಾಗಿದ್ದ ಪಾಕಿಸ್ತಾನ ಮತ್ತು ಶ್ರೀಲಂಕಾ ಈಗಾಗಲೇ ಸಮಸ್ಯೆ ಎದುರಿಸುತ್ತಿದೆ.

    ಚೀನಾ ಪಾಕಿಸ್ತಾನ ಎಕಾನಮಿಕ್‌ ಕಾರಿಡಾರ್‌ ಹೆಸರಿನಲ್ಲಿ ಸಾಲ ಪಡೆದುಕೊಂಡಿತ್ತು. ಸದ್ಯ ಅಂದಾಜು 30 ಬಿಲಿಯನ್‌ ಡಾಲರ್‌ ಹಣವನ್ನು ಪಾಕಿಸ್ತಾನ ಚೀನಾಗೆ ಪಾವತಿ ಮಾಡಬೇಕಿದೆ. ಚೀನಾ ಹಣವನ್ನು ಪಾವತಿ ಮಾಡಲು ಕನಿಷ್ಟ 40 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಶ್ರೀಲಂಕಾದ ಹಂಬನ್‌ತೋಟ ಬಂದರನ್ನು ಚೀನಾ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿ ಪಡಿಸಿದರೂ ನಿರೀಕ್ಷಿತ ಪ್ರಮಾಣದ ಲಾಭವಾಗಿಲ್ಲ. ಸಾಲ ಮರುಪಾವತಿ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ 2017ರಲ್ಲಿ 99 ವರ್ಷಗಳ ಕಾಲ ಚೀನಾದ ಚೀನಾ ಮರ್ಚೆಂಟ್‌ ಪೋರ್ಟ್‌ ಹೋಲ್ಡಿಂಗ್‌ ಲೀಸ್‌ಗೆ ನೀಡಲಾಗಿದೆ.

    ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಮಲೇಷ್ಯಾ, ಮಾಲ್ಡೀವ್ಸ್‌ ಸೇರಿದಂತೆ ಹಲವು ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಕಾರಣಕ್ಕೆ ಒನ್‌ ರೋಡ್‌, ಒನ್‌ ಬೆಲ್ಟ್‌ ಈಗ Debt-trap Diplomacy ಎಂದೇ ಕುಖ್ಯಾತಿ ಪಡೆದಿದೆ.

     

  • ಪ್ರಭಾಸ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ : ಹೈದರಾಬಾದ್ ಗೆ ವಾಪಸ್

    ಪ್ರಭಾಸ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ : ಹೈದರಾಬಾದ್ ಗೆ ವಾಪಸ್

    ತೆಲುಗಿನ ಖ್ಯಾತ ನಟ ಪ್ರಭಾಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಶಸ್ತ್ರ ಚಿಕಿತ್ಸೆಗಾಗಿ ಅವರು ಇಟಲಿಗೆ (Italy) ಹಾರಿದ್ದರು. ಇದೀಗ ಯಶಸ್ವಿ ಶಸ್ತ್ರ ಚಿಕಿತ್ಸೆ (Surgery) ನೆರವೇರಿದ್ದು, ಚಿಕಿತ್ಸೆ ನಂತರ ಹೈದರಾಬಾದ್ (Hyderabad) ಗೆ ವಾಪಸ್ಸು ಆಗಿದ್ದಾರೆ. ಆತಂಕದಲ್ಲಿದ್ದ ಅವರ ಅಭಿಮಾನಿಗಳು ನೆಚ್ಚಿನ ನಟ ಕಂಡು ಸಂಭ್ರಮಿಸಿದ್ದಾರೆ.

    ಕನಸಿನ ಸಿನಿಮಾ ರಿಲೀಸ್

    ಸಲಾರ್ (Salaar) ಸಿನಿಮಾದ ರಿಲೀಸ್ ಗೆ ದೊಡ್ಡಮಟ್ಟದಲ್ಲೇ ಪ್ಲ್ಯಾನ್ ಮಾಡಲಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ನಾನಾ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮಲಯಾಳಂ ಭಾಷೆಯ ಸಲಾರ್ ಸಿನಿಮಾಗೆ ಪೃಥ್ವಿರಾಜ್  (Prithviraj Sukumaran) ಸಾಥ್ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಸಿನಿಮಾದ ಪೋಸ್ಟರ್ ವೊಂದನ್ನು ಅವರು ರಿಲೀಸ್ ಮಾಡಿದ್ದಾರೆ.

    ಭಾರತೀಯ ಸಿನಿಮಾ ರಂಗ ಡಿಸೆಂಬರ್ ನಲ್ಲಿ ಮೆಗಾ ಕಾಳಗಕ್ಕೆ ಸಾಕ್ಷಿಯಾಗಲಿದೆ. ಚಿತ್ರೋದ್ಯಮದ ಮೂವರು ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿವೆ. ತೆಲುಗಿನ ಪ್ರಭಾಸ್, ಬಾಲಿವುಡ್ ಶಾರುಖ್ ಖಾನ್ ಮತ್ತು ಮಲಯಾಳಂ ಸಿನಿಮಾ ರಂಗದ ದಿಗ್ಗಜ ಮೋಹನ್ ಲಾಲ್ (Mohanlal) ನಟನೆಯ ಚಿತ್ರಗಳು ಒಂದೇ ದಿನದಲ್ಲಿ ರಿಲೀಸ್ ಆಗುವ ಮೂಲಕ ಭರ್ಜರಿ ಪೈಪೋಟಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೋಹನ್ ಲಾಲ್ ನಟನೆಯ ನೆರು ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆ ಆಗುತ್ತಿದೆ.

    ಅಂದುಕೊಂಡಂತೆ ಆಗಿದ್ದರೆ ನಿನ್ನೆಯೇ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ರಿಲೀಸ್ ಆಗಬೇಕಿತ್ತು. ನಾನಾ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ, ಸಲಾರ್ ಯಾವಾಗ ರಿಲೀಸ್ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಸ್ವತಃ ನಿರ್ಮಾಣ ಸಂಸ್ಥೆಯೇ (Hombale Films)  ಹೊಸ ದಿನಾಂಕವನ್ನು ಘೋಷಣೆ ಮಾಡಿದ್ದು, ಡಿಸೆಂಬರ್ 22 ರಂದು ವಿಶ್ವದಾದ್ಯಂತ ಸಲಾರ್ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

    ಭಾರತೀಯ ಸಿನಿಮಾ ರಂಗದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ ಶಾರುಖ್ (Shah Rukh Khan) ಚಿತ್ರದ ಎದುರು ವಿಶ್ವಮಟ್ಟದಲ್ಲಿ ಪ್ರಭಾಸ್ ಸಿನಿಮಾ ಎದುರಾಗಿದೆ. ಇಂಥದ್ದೊಂದು ಮಾಹಿತಿಯನ್ನು ಅಧಿಕೃತವಾಗಿ ಚಿತ್ರತಂಡಗಳೇ ಹೇಳಿಕೊಂಡಿವೆ.

     

    ಈಗಾಗಲೇ ಶಾರುಖ್ ಖಾನ್ ನಟನೆಯ ಡಂಕಿ (Dunki) ಸಿನಿಮಾವನ್ನು  ಕ್ರಿಸ್ ಮಸ್ ಹಬ್ಬಕ್ಕಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧ ಮಾಡಿಕೊಂಡಿದೆ. 22 ಡಿಸೆಂಬರ್ 2023ರಂದು ಡಂಕಿ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದೇ ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಸಲಾರ್’ ಚಿತ್ರವನ್ನೂ ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್ ರೆಡಿಯಾಗಿದೆ.

  • ನಟಿ ಗಾಯತ್ರಿ ಜೋಶಿ ಕಾರು ಅಪಘಾತ: ವೃದ್ಧ ದಂಪತಿ ಸಾವು

    ನಟಿ ಗಾಯತ್ರಿ ಜೋಶಿ ಕಾರು ಅಪಘಾತ: ವೃದ್ಧ ದಂಪತಿ ಸಾವು

    ಬಾಲಿವುಡ್ ಖ್ಯಾತ ನಟಿ ಗಾಯತ್ರಿ ಜೋಶಿ (Gayatri Joshi) ಮತ್ತು ಅವರ ಪತಿ ವಿಕಾಸ್ ಒಬೆರಾಯ್ ಪ್ರಯಾಣಿಸುತ್ತಿದ್ದ ಕಾರು ಇಟಲಿಯಲ್ಲಿ ಅಪಘಾತವಾಗಿದೆ. ವರದಿಗಳ ಪ್ರಕಾರ ಈ ರಸ್ತೆ ಅಪಘಾತದಲ್ಲಿ ವೃದ್ದ ದಂಪತಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿಯನ್ನು ಸ್ವತಃ ನಟಿಯೇ ಹಂಚಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ‘ನಾನು ಮತ್ತು ನನ್ನ ಪತಿ ವಿಕಾಸ್ ಇದೀಗ ಇಟಲಿಯಲ್ಲಿ ಇದ್ದೇವೆ. ನಾನು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಇದೊಂದು ಸರಣಿಯ ಅಪಘಾತವಾಗಿದ್ದು, ನಾನು ಸುರಕ್ಷಿತರಾಗಿದ್ದೇವೆ’ ಎಂದು ಗಾಯತ್ರಿ ಅವರು ಹೇಳಿಕೆ ನೀಡಿದ್ದಾರೆ.  ಈ ಸರಣಿಯ ಅಪಘಾತದಲ್ಲಿ ಫೆರಾರಿ ಕಾರಿಗೆ ಬೆಂಕಿ ಹೊತ್ತಿಕೊಂಡು ಸ್ವಿಸ್ ದಂಪತಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

     

    ಶಾರುಖ್ ಖಾನ್ ನಟನಯ ಸ್ವದೇಸ್ ಚಿತ್ರದಲ್ಲಿ ನಟಿಸಿದ್ದ ಗಾಯತ್ರಿ, ಆನಂತರ ಮಾಡಲಿಂಗ್ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮಿಸ್ ಇಂಡಿಯಾ ಸೇರಿದಂತೆ ಹಲವು ಸ್ಪರ್ಧೆಗಳಲ್ಲೂ ಭಾಗವಹಿಸಿದವರು. ನಂತರ ಸಿನಿಮಾ ರಂಗದಿಂದಲೇ ದೂರವಾಗಿ ಉದ್ಯಮಿ ವಿಕಾಸ್ ಒಬೆರಾಯ್ ಅವರನ್ನು ಮದುವೆಯಾದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬಸ್‌ – 21 ಮಂದಿ ಸಾವು

    ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬಸ್‌ – 21 ಮಂದಿ ಸಾವು

    ರೋಮ್: ಇಟಾಲಿಯನ್ (Italy) ನಗರದ ವೆನಿಸ್ ಬಳಿಯ ಮೇಲ್ಸೇತುವೆಯಿಂದ (Venice Bridge) ಬಸ್ ಕೆಳಗೆ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ.

    ಸೇತುವೆಯ ಮೂಲಕ ವೆನಿಸ್‌ಗೆ ಸಂಪರ್ಕ ಕಲ್ಪಿಸುವ ಮೆಸ್ಟ್ರೆ ಜಿಲ್ಲೆಯ ರೈಲ್ವೆ ಹಳಿಗಳ ಬಳಿ ತಡೆಗೋಡೆ ಮುರಿದು ಬಸ್ ಪಲ್ಟಿಯಾಗಿದೆ. ದುರಂತದಲ್ಲಿ ಮೃತಪಟ್ಟವರ ಪೈಕಿ ಐವರು ಉಕ್ರೇನಿಯನ್ನರು, ಒಬ್ಬ ಜರ್ಮನ್ ಮತ್ತು ಇಟಾಲಿಯನ್ ಚಾಲಕ ಸೇರಿದ್ದಾರೆ. ಇದನ್ನೂ ಓದಿ: Asian Games 2023: 5000 ಮೀ. ಓಟದಲ್ಲಿ ಪಾರುಲ್‌ ಪ್ರಚಂಡ ಗೆಲುವು – ವನಿತೆಯರ ಬಂಗಾರದ ಬೇಟೆ

    ವೆನಿಸ್ ಮತ್ತು ಹತ್ತಿರದ ಮಾರ್ಗೇರಾ ಜಿಲ್ಲೆಯ ಕ್ಯಾಂಪ್‌ಸೈಟ್ ನಡುವೆ ಪ್ರವಾಸಿಗರನ್ನು ಬಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ರಾತ್ರಿ 7:45 ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ದುರಂತಕ್ಕೆ ವೆನಿಸ್ ಮೇಯರ್ ಲುಯಿಗಿ ಬ್ರುಗ್ನಾರೊ ವಿಷಾದ ವ್ಯಕ್ತಪಡಿಸಿದ್ದಾರೆ.

    ಬಸ್ ಮಿಥೇನ್ ಅನಿಲದಿಂದ ಚಾಲಿತವಾಗಿದೆ. ಮೇಲ್ಸೇತುವೆಯಿಂದ ವಿದ್ಯುತ್ ತಂತಿಗಳ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಆಂತರಿಕ ಸಚಿವ ಮ್ಯಾಟಿಯೊ ಪಿಯಾಂಟೆಡೋಸಿ ತಿಳಿಸಿದ್ದಾರೆ. ಇದನ್ನೂ ಓದಿ: ಬಾಲಕರಿಗೆ ಚಾಕ್ಲೇಟ್‌ ಆಸೆ ತೋರಿಸಿ ಅತ್ಯಾಚಾರ; ಹುಬ್ಬಳ್ಳಿಯಲ್ಲಿ ವಿಕೃತ ಸಲಿಂಗಕಾಮಿ ಬಂಧನ

    ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಕರ್ತರು ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕನಿಷ್ಠ 18 ಜನರು ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೂರು ತಿಂಗಳು ಸೂರ್ಯ ಉದಯಿಸದ ಊರಿಗೆ, ಸೂರ್ಯನನ್ನು ತಂದ ಕಥೆ!

    ಮೂರು ತಿಂಗಳು ಸೂರ್ಯ ಉದಯಿಸದ ಊರಿಗೆ, ಸೂರ್ಯನನ್ನು ತಂದ ಕಥೆ!

    ಒಂದು ದಿನ ಸೂರ್ಯನೇ (Sun) ಉದಯಿಸುವುದಿಲ್ಲ. ನಿಮ್ಮ ಊರಿನಲ್ಲಿ ಹೀಗಾದರೆ ಒಮ್ಮೆ ಊಹಿಸಿ. ಈ ರೀತಿಯ ಒಂದು ಊರಿದೆ, ಅಲ್ಲಿ ವರ್ಷದ ಮೂರು ತಿಂಗಳು ಸೂರ್ಯನೇ ಉದಯಿಸುವುದಿಲ್ಲ. ಆದರೂ ಅವರು ಹರಸಾಹಸಪಟ್ಟು ಸೂರ್ಯನನ್ನು ಎಳೆದು ತಮ್ಮೂರಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಹೌದು!

    ವಿಗಾನೆಲ್ಲಾ (Viganella) ಇದು ಇಟಲಿಯ (Italy) ಒಂದು ಹಳ್ಳಿ. ಈ ಹಳ್ಳಿ ಮೂರು ತಿಂಗಳು ಸೂರ್ಯನನ್ನು ನೊಡುತ್ತಲೇ ಇರಲಿಲ್ಲ. ಯಾಕೆ ಗೊತ್ತಾ? ಈ ಗ್ರಾಮ ಆಳವಾದ ಕಣಿವೆಯ ಕೆಳಭಾಗದಲ್ಲಿದೆ. ಅಲ್ಲದೇ ಸೂರ್ಯ ತನ್ನ ಪಥವನ್ನು ಬದಲಿಸುವುದರಿಂದ ಚಳಿಗಾಲದಲ್ಲಿ ಸೂರ್ಯನ ಬೆಳಕು ಇಲ್ಲಿ ಬೀಳುತ್ತಲೇ ಇರಲಿಲ್ಲ. ಹೀಗಾಗಿ ಮೂರು ತಿಂಗಳು ಇಲ್ಲಿನ ಜನ ಕತ್ತಲೆಯಲ್ಲೇ ಕಳೆಯುತ್ತಿದ್ದರು.

    ಆದರೆ ಈಗ ಕೆಲವು ಬುದ್ದಿವಂತ ಎಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳು ಸೂರ್ಯನನ್ನು ತಮ್ಮೂರಿಗೆ ಕೊಂಡೊಯ್ಯುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಅದು ಹೇಗೆ ಗೊತ್ತಾ? ಅವರೆಲ್ಲ ಸೇರಿ ದೊಡ್ಡ ಕನ್ನಡಿಯನ್ನು ಬೆಟ್ಟದ ಮೇಲೆ ಇರಿಸಿ ಪ್ರತಿಫಲನದ ಮೂಲಕ ತಮ್ಮ ಹಳ್ಳಿಗೆ ಸೂರ್ಯನ ಬೆಳಕನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ವಿಚಾರದಿಂದ ಈ ಪುಟ್ಟ ಹಳ್ಳಿ ಜಗತ್ತಿಗೆ ಪರಿಚಯವಾಗಿದೆ.

    ಇತಿಹಾಸದ ದಾಖಲೆಗಳ ಪ್ರಕಾರ ಈ ಪ್ರದೇಶದಲ್ಲಿ 13 ನೇ ಶತಮಾನದಷ್ಟು ಹಿಂದೆಯೇ ಜನ ಇಲ್ಲಿ ನೆಲೆಸಿದ್ದಾರೆ. ಅಂದರೆ ಸ್ಥಳೀಯ ತಲೆಮಾರುಗಳು 800 ಕ್ಕೂ ಹೆಚ್ಚು ಚಳಿಗಾಲವನ್ನು ಕತ್ತಲೆಯಲ್ಲಿ ಕಳೆದಿವೆ. ಪ್ರತಿ ವರ್ಷ ಈ ಊರು ನವೆಂಬರ್ 11 ರಂದು ತನ್ನ ಕೊನೆಯ ಸೂರ್ಯಾಸ್ತವನ್ನು ನೋಡುತ್ತದೆ ಮತ್ತು ಫೆಬ್ರವರಿ 2 ರಂದು ಮತ್ತೆ ಸೂರ್ಯನ ಕಿರಣಗಳನ್ನು ಪಡೆದುಕೊಳಗ್ಳುತ್ತದೆ. ಆ ದಿನ ಅಲ್ಲಿನ ನಿವಾಸಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾರೆ. ಸೂರ್ಯನ ಆಗಮನವನ್ನು ಹಬ್ಬದಂತೆ ಆಚರಿಸುತ್ತಾರೆ.

    1999 ರಲ್ಲಿ ಸ್ಥಳೀಯ ವಾಸ್ತುಶಿಲ್ಪಿ ಜಿಯಾಕೊಮೊ ಬೊಂಜಾನಿ ಚರ್ಚ್ ಮುಂಭಾಗದಲ್ಲಿ ಕನ್ನಡಿಯನ್ನು ಸ್ಥಾಪಿಸಲು ಪ್ರಸ್ತಾಪಿಸಿದ್ದರು. ಆದರೆ ಆಗಿನ ಮೇಯರ್ ಫ್ರಾಂಕೊ ಮಿಡಾಲಿ ಈ ಕಲ್ಪನೆಯನ್ನು ತಳ್ಳಿಹಾಕಿದ್ದರು. ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಸಹಾಯಕ್ಕೆ ನಿಂತರು. ಬಳಿಕ ಕಲ್ಪನೆ 2006 ರ ಡಿಸೆಂಬರ್ 17 ರಂದು ರಂದು ವಾಸ್ತವವಾಗಿ ಎದುರು ನಿಂತಿತು. ಇಂಜಿನಿಯರ್ ಗಿಯಾನಿ ಫೆರಾರಿಯ ಸಹಾಯದಿಂದ ಕನ್ನಡಿಯನ್ನು ಬೋಜಾನಿ ಎಂಬುವವರು ವಿನ್ಯಾಸಗೊಳಿಸಿದ್ದಾರೆ. ಈ ಯೋಜನೆಗೆ ಸುಮಾರು 82 ಲಕ್ಷ ರೂ.ಗಳಷ್ಟು ವೆಚ್ಚ ತಗುಲಿದೆ. ಎಂಟು ಮೀಟರ್ ಅಗಲ ಮತ್ತು ಐದು ಮೀಟರ್ ಎತ್ತರ ಇರುವ ಇದು ದಿನಕ್ಕೆ ಆರು ಗಂಟೆಗಳ ಕಾಲ ಸೂರ್ಯನ ಬೆಳಕನ್ನು ನೀಡುತ್ತದೆ. ಪ್ರತಿಫಲಿತ ಬೆಳಕು ಸಹಜವಾಗಿ, ನೇರ ಸೂರ್ಯನ ಬೆಳಕಿನಂತೆ ಶಕ್ತಿಯುತವಾಗಿಲ್ಲ. ಆದರೆ ಊರನ್ನು ಬೆಚ್ಚಗಿಡಲು ಮತ್ತು ಮನೆಗಳಿಗೆ ನೈಸರ್ಗಿಕ ಸೂರ್ಯನ ಬೆಳಕನ್ನು ನೀಡಲು ಇದು ಸಾಕಾಗಿದೆ. ಈ ಕನ್ನಡಿಯನ್ನು ಚಳಿಗಾಲದಲ್ಲಿ ಮಾತ್ರ ಬಳಸಲಾಗುತ್ತದೆ. ಬಳಿಕ ವರ್ಷದ ಉಳಿದ ದಿನಗಳಲ್ಲಿ ಮುಚ್ಚಲಾಗುತ್ತದೆ.

    ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದ ನಾರ್ವೆಯ ರ್ಜುಕಾನ್ ಪಟ್ಟಣಕ್ಕೂ ಇದು ಮಾದರಿಯಾಗಿದೆ. 2013 ರಲ್ಲಿ ಇಂಜಿನಿಯರ್‌ಗಳ ಗುಂಪು ಇದನ್ನು ಅಧ್ಯಯನ ಮಾಡಲು ವಿಗಾನೆಲ್ಲಾಗೆ ಭೇಟಿ ನೀಡಿತ್ತು. ನಂತರ ಇದೇ ರೀತಿಯ ಕನ್ನಡಿಯನ್ನು ರ್ಜುಕಾನ್‌ನಲ್ಲಿ ಸ್ಥಾಪಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಗಸ್ಟ್ 24ಕ್ಕೆ ಇಟಲಿಯಲ್ಲಿ ವರುಣ್-ಲಾವಣ್ಯ ಮ್ಯಾರೇಜ್

    ಆಗಸ್ಟ್ 24ಕ್ಕೆ ಇಟಲಿಯಲ್ಲಿ ವರುಣ್-ಲಾವಣ್ಯ ಮ್ಯಾರೇಜ್

    ಟಾಲಿವುಡ್ ಹೆಸರಾಂತ ನಟ ವರುಣ್ ತೇಜ್ (Varun Tej) ಹಾಗೂ ಬಹುಕಾಲದ ಗೆಳತಿ ಲಾವಣ್ಯ (Lavanya) ಮದುವೆ (Marriage) ಆಗಸ್ಟ್ 24 ರಂದು ಇಟಲಿಯಲ್ಲಿ (Italy) ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇಟಲಿಯ ಸುಂದರವಾದ ಸ್ಥಳವನ್ನು ಈಗಾಗಲೇ ಗೊತ್ತು ಮಾಡಲಾಗಿದ್ದು, ಕುಟುಂಬಸ್ಥರು ಮತ್ತು ಆಪ್ತರಷ್ಟೇ ಈ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಮೊನ್ನೆಯಷ್ಟೇ ವರುಣ್ ಭಾವಿ ಪತ್ನಿಯ ಮನೆಗೆ ಕಾಫಿಗೆ ಹೋಗಿದ್ದರು. ಅಲ್ಲಷ್ಟು ವಿಷಯಗಳ ವಿನಿಮಯವಾಗಿವೆ.

    ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತುವ ಮೂಲಕ ಲಾವಣ್ಯ- ವರುಣ್ ತೇಜ್ ಎಂಗೇಜ್ ಆಗಿದ್ದರು. ಈಗ ಈ ಲವ್ ಬರ್ಡ್ಸ್ ಫಾರಿನ್‌ಗೆ ಹಾರಿದ್ದಾರೆ. ಭಾವಿ ಪತ್ನಿ ಲಾವಣ್ಯ ಜೊತೆ ವರುಣ್ ಕಾಫಿ ಡೇಟ್ ಮಾಡ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಬ್ಬರ ವೇಕೆಷನ್‌ಗೆ ವರುಣ್ ಸಹೋದರಿ ನಿಹಾರಿಕಾ ಕೂಡ ಸಾಥ್ ನೀಡಿದ್ದಾರೆ.

    ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2017ರಲ್ಲಿ ಇಬ್ಬರು `ಮಿಸ್ಟರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದರು. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ‘ಅಂತರಿಕ್ಷಂ’ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಇಬ್ಬರ ಡೇಟಿಂಗ್ ಸುದ್ದಿ ಚಾಲ್ತಿಗೆ ಬಂದಿತ್ತು. ಇದನ್ನೂ ಓದಿ:ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್

    ಆಗಾಗ ವರುಣ್, ಲಾವಣ್ಯ ಇಬ್ಬರೂ ಹಲವು ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದರು. ಇದು ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ವರುಣ್, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಹೀಗಾಗಿ ಡಿಸೆಂಬರ್ 15 ಲಾವಣ್ಯ ಹುಟ್ಟುಹಬ್ಬದಂದು ಮದುವೆಗೆ ಪ್ರಪೋಸ್ ಮಾಡಿದ್ದರು. ಎರಡೂ ಮನೆಯವರು ಒಪ್ಪಿದರೂ, ಈ ಜೋಡಿ ಮದುವೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

     

    ಯಂಗ್ ಜೋಡಿ ವರುಣ್- ಲಾವಣ್ಯ ಅವರು ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಎಂಗೇಜ್ ಆಗಿದ್ದಾರೆ. ಜೂನ್ 9ರ ರಾತ್ರಿ ಎರಡು ಕುಟುಂಬದವರು ಆಪ್ತರಷ್ಟೇ ಭಾಗಿಯಾಗಿದ್ದರು. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಅವರ ಇಡೀ ಕುಟುಂಬ, ಅಲ್ಲು ಅರ್ಜುನ್ ಫ್ಯಾಮಿಲಿ, ವೆಂಕಟೇಶ್ವರ ರಾವ್ ಕುಟುಂಬದವರಷ್ಟೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸದ್ಯ ಎಂಗೇಜ್ ಆಗಿರುವ ಈ ಜೋಡಿ ಈ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ. ಎಂಗೇಜ್‌ಮೆಂಟ್‌ನಲ್ಲಿ ನಟಿ ಲಾವಣ್ಯ ಗಿಳಿ ಹಸಿರು ಸೀರೆಯಲ್ಲಿ ಮಿಂಚಿದ್ರೆ, ವರುಣ್ ಗೋಲ್ಡನ್ ಬಣ್ಣದ ಶೆರ್ವಾನಿಯಲ್ಲಿ ಹೈಲೆಟ್ ಆಗಿದ್ದಾರೆ. ನನ್ನ ಪ್ರೀತಿಯನ್ನ 2016ರಲ್ಲಿಯೇ ಕಂಡುಕೊಂಡಿದ್ದೆ ಎಂದು ನಟಿ ನಿಶ್ಚಿತಾರ್ಥದ ಫೋಟೋ ಸಮೇತ ಪೋಸ್ಟ್ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 24 ವರ್ಷಗಳ ಸೇವೆಯಲ್ಲಿ ಬರೋಬ್ಬರಿ 20 ವರ್ಷ ರಜೆ ಹಾಕಿದ ಶಿಕ್ಷಕಿ ವಜಾ

    24 ವರ್ಷಗಳ ಸೇವೆಯಲ್ಲಿ ಬರೋಬ್ಬರಿ 20 ವರ್ಷ ರಜೆ ಹಾಕಿದ ಶಿಕ್ಷಕಿ ವಜಾ

    ರೋಮ್: 24 ವರ್ಷಗಳ ತಮ್ಮ ಸುದೀರ್ಘ ಸೇವೆಯಲ್ಲಿ ಬರೋಬ್ಬರಿ 20 ವರ್ಷ ಅನಾರೋಗ್ಯದ ನೆಪ ಹೇಳಿ ರಜೆ ಹಾಕಿರುವ ಶಿಕ್ಷಕಿಯನ್ನು ಕೊನೆಗೂ ವಜಾ ಮಾಡಲಾಗಿದೆ. ಅಲ್ಲದೆ ಈಕೆಗೆ ‘ಇಟಲಿಯ ಅತ್ಯಂತ ಕೆಟ್ಟ ಉದ್ಯೋಗಿ’ ಎಂಬ ಪಟ್ಟವನ್ನು ನೀಡಲಾಗಿದೆ.

    ಶಿಕ್ಷಕಿಯನ್ನು ಸಿಂಜಿಯಾ ಪಾವೊಲಿನಾ ಡಿ ಲಿಯೊ (Cinzia Paolina De Lio) ಎಂದು ಗುರುತಿಸಲಾಗಿದೆ. ಈಕೆ ವೆನಿಸ್ (Venice) ನಗರದ ಮಾಧ್ಯಮಿಕ ಶಾಲೆಯಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಇದನ್ನೂ ಓದಿ: France Shooting – ಕಾರು ನಿಲ್ಲಿಸಿದ್ದಕ್ಕೆ ಪೊಲೀಸರಿಂದ ಶೂಟೌಟ್‌ – ಹತ್ಯೆ ಖಂಡಿಸಿ ಹಿಂಸಾಚಾರ

    ಲಿಯೋ ತನ್ನ 24 ವರ್ಷಗಳ ಸೇವೆಯಲ್ಲಿ 20 ವರ್ಷ ಪಾಠ ಮಾಡಲು ತರಗತಿಗೆ ಹೋಗಿಲ್ಲ. ಮೊದಲ 10 ವರ್ಷ ಆಕೆ ಸಂಪೂರ್ಣವಾಗಿ ಗೈರುಹಾಜರಾಗಿದ್ದಳು. ಉಳಿದ 14 ವರ್ಷ ಆಕೆ ಅನಾರೋಗ್ಯ, ವೈಯಕ್ತಿಕ ಅಥವಾ ಕೌಟುಂಬಿಕ ಕಾರಣ ನೀಡಿ ರಜೆ ತೆಗೆದುಕೊಂಡಿದ್ದಳು. ವಿಶೇಷ ಅಂದರೆ ಕರ್ತವ್ಯಕ್ಕೆ ಗೈರುಹಾಜರಾಗಿರುವಾಗಲೂ ಆಕೆ ವೇತನವನ್ನು ಪಡೆದಿದ್ದಳು ಎಂದು ಇಟಲಿಯ ಶಿಕ್ಷಣ ಸಚಿವಾಲಯ ಹೇಳಿದೆ.

    ಮಕ್ಕಳ ಪರೀಕ್ಷೆ ಸಂದರ್ಭದಲ್ಲಿಯೂ ಶಾಲೆಗೆ ರಜೆ ಹಾಕುತ್ತಿದ್ದ ಲಿಯೋ, ವಿದ್ಯಾರ್ಥಿಗಳು ಗೋಗರೆದರೂ ಪಾಠ ಮಾಡುತ್ತಿರಲಿಲ್ಲ. ಅಲ್ಲದೆ ಈ ಬಗ್ಗೆ ಆಕೆಗೆ ಮೇಸೆಜ್ ಕಳುಹಿಸಿದರೆ ಪಠ್ಯವನ್ನು ತಾವೇ ಓದುವಂತೆ ವಿದ್ಯಾರ್ಥಿಗಳನ್ನು ಗದರುತ್ತಿದ್ದಳು. ಇನ್ನು ಪರೀಕ್ಷಾ ಮೌಲ್ಯಮಾಪನದ ವೇಳೆ ವಿದ್ಯಾರ್ಥಿಗಳಿಗೆ ಮನಬಂದಂತೆ ಅಂಕ ನೀಡಿದ್ದಳು. ಇದನ್ನೂ ಓದಿ: ಉಪ್ಪಿನ ಕಣಕ್ಕಿಂತ ಚಿಕ್ಕದಾದ ಹ್ಯಾಂಡ್‌ಬಾಗ್ ಬರೋಬ್ಬರಿ 51 ಲಕ್ಷ ರೂ.ಗೆ ಸೇಲ್

    ಶಿಕ್ಷಕಿಯ ವರ್ತನೆಯಿಂದ ಬೇಸತ್ತ ಶಾಲೆಯ ವಿದ್ಯಾರ್ಥಿಗಳು ಜೂನ್ 22ರಂದು ಮುಷ್ಕರ ನಡೆಸಿದ್ದರು. ಆ ಬಳಿಕ ಶಿಕ್ಷಕಿಯನ್ನು ವಜಾಗೊಳಿಸಲಾಗಿತ್ತು. ಆದರೆ ಲಿಯೋ, ಈ ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ತನ್ನ ಕೆಲಸವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೆ ಕೊನೆಗೆ ತೀರ್ಪನ್ನು ಮರುಪರಿಶೀಲಿಸಿದ ನ್ಯಾಯಾಲಯವು, ಶಿಕ್ಷಕಿಯ ಹಾಜರಿ ಪುಸ್ತಕ ಕಂಡು ತನ್ನ ತೀರ್ಪನ್ನು ಬದಲಿಸಿತು. ಆಕೆಯನ್ನು ಕೆಲಸದಿಂದ ತೆಗೆದು ಹಾಕುವಂತೆ ತಾಕೀತು ಮಾಡಿದೆ.‌

    ರಜೆಯ ಕಾರಣಗಳು: ಲಿಯೋ ಕಳೆದ 2 ವರ್ಷಗಳಲ್ಲಿ 67 ದಿನ ಅನಾರೋಗ್ಯ ರಜೆ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾಳೆ. ಅದರಲ್ಲಿ ಅಪಘಾತಗಳ ಕಾರಣದಿಂದಾಗಿ ಸುದೀರ್ಘ ರಜೆ ಜೊತೆಗೆ ತನ್ನ ಮಗುವನ್ನು ನೋಡಿಕೊಳ್ಳಲು ಮಾತೃತ್ವ ರಜೆ, ಮಗುವಿನ ಅನಾರೋಗ್ಯ, ವೃತ್ತಿಗೆ ಸಂಬಂಧಿಸಿದ ತರಬೇತಿ ಪಡೆಯಲು ರಜೆ ಇಷ್ಟು ಮಾತ್ರವಲ್ಲದೇ ಅಂಗವೈಕಲ್ಯ ಹೊಂದಿರುವ ಸಂಬಂಧಿಕರಿಗೆ ಸಹಾಯ ಮಾಡಲು ಸಹ ರಜೆಯನ್ನು ಪಡೆದಿದ್ದಳು. ಹೀಗಾಗಿ ಇಟಾಲಿಯನ್ ಸರ್ವೋಚ್ಚ ನ್ಯಾಯಾಲಯವು ಆಕೆ ಶಿಕ್ಷಕ ವೃತ್ತಿಗೆ ಯೋಗ್ಯವಾದ ವ್ಯಕ್ತಿಯಲ್ಲ ಎಂದು ಹೇಳಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆಯಲ್ಲಿ ಕಳ್ಳತನ: ವಿದೇಶ ಪ್ರವಾಸದಲ್ಲಿರುವ ಶಿಲ್ಪಾ ಶೆಟ್ಟಿಗೆ ಶಾಕ್

    ಮನೆಯಲ್ಲಿ ಕಳ್ಳತನ: ವಿದೇಶ ಪ್ರವಾಸದಲ್ಲಿರುವ ಶಿಲ್ಪಾ ಶೆಟ್ಟಿಗೆ ಶಾಕ್

    ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕಳ್ಳರು ಶಾಕ್ ನೀಡಿದ್ದಾರೆ. ವಿದೇಶ ಪ್ರವಾಸದಲ್ಲಿ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುವ ಶಿಲ್ಪಾ ಶೆಟ್ಟಿಗೆ ಕಳ್ಳರು ನಿದ್ದೆಗೆಡಿಸಿದ್ದಾರೆ.  ಮುಂಬೈನಲ್ಲಿರುವ (Mumbai) ಶಿಲ್ಪಾ ಶೆಟ್ಟಿ ನಿವಾಸಕ್ಕೆ ನುಗ್ಗಿದ ಕಳ್ಳರು (Theft) ಹಲವು ವಸ್ತುಗಳನ್ನು ತಗೆದುಕೊಂಡು ಪರಾರಿಯಾಗಿದ್ದಾರೆ.

    ಸದ್ಯ ಶಿಲ್ಪಾ ಶೆಟ್ಟಿ ಇಟಲಿ ಪ್ರವಾಸದಲ್ಲಿದ್ದಾರೆ. ಮೊನ್ನೆಯಷ್ಟೇ ತಾವು ಇಟಲಿ ಪ್ರವಾಸದಲ್ಲಿ ಇರುವ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಿಕಿನಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಶಿಲ್ಪಾ ಶೆಟ್ಟಿ ಮತ್ತು ಕುಟುಂಬ ವಿದೇಶದಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡ ಕಳ್ಳರು ಮನೆಗೆ ನುಗ್ಗಿ ವಸ್ತುಗಳನ್ನು ದೋಚಿದ್ದಾರೆ. ಇದನ್ನೂ ಓದಿ:ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್

    ಮುಂಬೈನ ಜುಹುವಿನಲ್ಲಿ (Juhu)  ಐಷಾರಾಮಿ ಮನೆ ಹೊಂದಿದ್ದಾರೆ ಶಿಲ್ಪಾ. ಅದೇ ಮನೆಯಲ್ಲೇ ಅವರು ಕುಟುಂಬ ಸಮೇತ ವಾಸವಿದ್ದಾರೆ. ಈ ಮನೆಯನ್ನು ಹೊಕ್ಕ ಕಳ್ಳರು ಬೆಲೆ ಬಾಳುವ ವಸ್ತುಗಳೊಂದಿಗೆ ಪರಾರಿ ಆಗಿದ್ದಾರೆ.  ಈ ಕುರಿತು ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಒಂದು ಕಡೆ ಮನೆ ಕಳ್ಳತನವಾಗಿದ್ದರೆ ಮತ್ತೊಂದು ಕಡೆ ಮೊನೊಕಿನಿ ತೊಟ್ಟು ಇಟಲಿ (Italy) ನೆಲದ ಮಹತ್ವವನ್ನು ಬರೆದಿರುವ ಶಿಲ್ಪಾ ಶೆಟ್ಟಿ, ‘ಇಟಲಿ ನೆಲವು ದೈವಿಕ ಸ್ಥಳವಾಗಿದೆ. 3000ದಷ್ಟು ಹಳೆಯದಾದ ಪವಿತ್ರ ನೀರು, ಭೂಮಿಯ ಆಳದಿಂದ ಚಿಮ್ಮುವ ಬಿಸಿ ನೀರಿನ ಬುಗ್ಗೆಗಳು. ಚಿಮ್ಮಿ ಬರುವ ನೀರಿನಲ್ಲಿವೆ ಆರೋಗ್ಯದ ಪ್ರಯೋಜನಗಳು. ಈ ನೆಲವನ್ನು ಸ್ಪರ್ಶಿಸುವವರೇ ಧನ್ಯ’ ಎನ್ನುವಂತೆ ಆ ನೆಲದ ವರ್ಣನೆಯನ್ನು ಮಾಡಿದ್ದಾರೆ. ಇದರ ಜೊತೆ ರಜೆಯ ಮೂಡ್ ನಲ್ಲೂ ಅವರು ಇದ್ದಾರೆ.

  • ಸ್ವಿಮ್ ಸೂಟ್ ತೊಟ್ಟು ಬಿಸಿ ನೀರಿನ ಬಗ್ಗೆ ಪಾಠ ಮಾಡಿದ ಶಿಲ್ಪಾ ಶೆಟ್ಟಿ

    ಸ್ವಿಮ್ ಸೂಟ್ ತೊಟ್ಟು ಬಿಸಿ ನೀರಿನ ಬಗ್ಗೆ ಪಾಠ ಮಾಡಿದ ಶಿಲ್ಪಾ ಶೆಟ್ಟಿ

    ಬಾಲಿವುಡ್ (Bollywood) ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಸದ್ಯ ಇಟಲಿ ಪ್ರವಾಸದಲ್ಲಿದ್ದಾರೆ. ಕನ್ನಡದ ಕೆಡಿ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಸೀದಾ ಇಟಲಿ ಫ್ಲೈಟ್ ಹತ್ತಿರುವ ಅವರು, ಇಟಲಿಯಲ್ಲಿ ಸ್ವಿಮ್ ಸೂಟ್ (Swim Suit) ತೊಟ್ಟು ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ತಾವು ಸ್ವಿಮ್ ಸೂಟ್ ತೊಟ್ಟು ನಿಂತಿರುವ ನೆಲದ ಮಹತ್ವವನ್ನು ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಮೊನೊಕಿನಿ ತೊಟ್ಟು ಇಟಲಿ (Italy) ನೆಲದ ಮಹತ್ವವನ್ನು ಬರೆದಿರುವ ಶಿಲ್ಪಾ ಶೆಟ್ಟಿ, ‘ಇಟಲಿ ನೆಲವು ದೈವಿಕ ಸ್ಥಳವಾಗಿದೆ. 3000ದಷ್ಟು ಹಳೆಯದಾದ ಪವಿತ್ರ ನೀರು, ಭೂಮಿಯ ಆಳದಿಂದ ಚಿಮ್ಮುವ ಬಿಸಿ ನೀರಿನ ಬುಗ್ಗೆಗಳು. ಚಿಮ್ಮಿ ಬರುವ ನೀರಿನಲ್ಲಿವೆ ಆರೋಗ್ಯದ ಪ್ರಯೋಜನಗಳು. ಈ ನೆಲವನ್ನು ಸ್ಪರ್ಶಿಸುವವರೇ ಧನ್ಯ’ ಎನ್ನುವಂತೆ ಆ ನೆಲದ ವರ್ಣನೆಯನ್ನು ಮಾಡಿದ್ದಾರೆ. ಇದರ ಜೊತೆ ರಜೆಯ ಮೂಡ್ ನಲ್ಲೂ ಅವರು ಇದ್ದಾರೆ.

    ಸದ್ಯ ಇಟಲಿ ಪ್ರವಾಸದಲ್ಲಿರುವ ಶಿಲ್ಪಾ ಶೆಟ್ಟಿ ಇತ್ತೀಚೆಗಷ್ಟೇ ಅವರು ಕರ್ನಾಟಕಕ್ಕೂ ಬಂದಿದ್ದರು. ತುಳುನಾಡಿನ ಕಟೀಲು ದುರ್ಗಾಪರಮೇಶ್ವರಿ (Kateel Durgaparameshwari Temple) ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದರು. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

    ಶಿಲ್ಪಾ ಶೆಟ್ಟಿ ಅವರು ಮೂಲತಃ ಮಂಗಳೂರಿನವರು, ಮುಂಬೈನಲ್ಲಿ ಸೆಟಲ್ ಆಗಿದ್ದರು ಕೂಡ ಇಂದಿಗೂ ದೈವ ಕೋಲ, ಇನ್ನಿತರ ಪೂಜೆ ಕಾರ್ಯಕ್ರಮಗಳಿಗೆ ಆಗಾಗ ಕುಟುಂಬ ಸಮೇತ ಮಂಗಳೂರಿಗೆ ಭೇಟಿ ನೀಡುತ್ತಾರೆ. ಅದರಂತೆಯೇ ಇದೀಗ ಶಿಲ್ಪಾ ಶೆಟ್ಟಿ ಕುಟುಂಬ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿತ್ತು. ಶಿಲ್ಪಾ ಜೊತೆ ಪತಿ ರಾಜ್‌ ಕುಂದ್ರಾ, ಶಮಿತಾ ಶೆಟ್ಟಿ, ಸುನಂದಾ ಶೆಟ್ಟಿ ಭಾಗಿಯಾಗಿದ್ದರು.  ದೇವಳದ ವತಿಯಿಂದ ಶಿಲ್ಪಾ ಶೆಟ್ಟಿಗೆ ದೇವರ ವಸ್ತ್ರ ಪ್ರಸಾದ ನೀಡಿ ಅಶೀರ್ವಾದ ಮಾಡಲಾಯಿತು

     

    ಕನ್ನಡದ ‘ಕೆಡಿ’ ಸಿನಿಮಾ ಮೂಲಕ 17 ವರ್ಷಗಳ ನಂತರ ಮತ್ತೆ ನಟಿ ಶಿಲ್ಪಾ ಶೆಟ್ಟಿ ಸ್ಯಾಂಡಲ್‌ವುಡ್ ಕಂಬ್ಯಾಕ್ ಆಗಿದ್ದಾರೆ. ಡೈರೆಕ್ಟರ್ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಪ್ರಮುಖ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ.