Tag: it

  • ರಾತ್ರೋರಾತ್ರಿ ಪುನೀತ್ ಮನೆ ಮುಂದೆ ಡಿಕೆಶಿ ಪ್ರತ್ಯಕ್ಷ

    ರಾತ್ರೋರಾತ್ರಿ ಪುನೀತ್ ಮನೆ ಮುಂದೆ ಡಿಕೆಶಿ ಪ್ರತ್ಯಕ್ಷ

    ಬೆಂಗಳೂರು: ಗುರುವಾರ ಸ್ಯಾಂಡಲ್‍ವುಡ್ ಸ್ಟಾರ್ ಗಳ ಮನೆಗೆ ಲಗ್ಗೆ ಇಟ್ಟ ಐಟಿ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದು, ಇಂದೂ ಮಂದುವರಿದಿದೆ. ಆದರೆ ಅಚ್ಚರಿ ಎಂಬಂತೆ ನಿನ್ನೆ ರಾತ್ರಿ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ನಟ ಪುನೀತ್ ರಾಜ್‍ಕುಮಾರ್ ಮನೆ ಮುಂದೆ ಪ್ರತ್ಯಕ್ಷವಾಗಿದ್ದರು.

    ಪುನೀತ್ ರಾಜ್‍ಕುಮಾರ್ ಮನೆ ಬಳಿಯೇ ಸಚಿವರು ತಮ್ಮ ಕಾರಿನಿಂದ ಇಳಿದಿದ್ದಾರೆ. ಬಳಿಕ ಇನ್ನೂ ಮುಗಿದಿಲ್ವಾ ಅಂತ ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ. ನಂತರ ಏನೂ ಆಗೋದಿಲ್ಲ ತಲೆ ಕೆಡಿಸಿಕೊಳ್ಳಬೇಡಿ ಅಂತ ಅಪ್ಪು ಅಭಿಮಾನಿಗಳಲ್ಲಿ ಧೈರ್ಯ ತುಂಬಿ ನಡೆದುಕೊಂಡೇ ಮನೆಗೆ ಹೋಗಿದ್ದಾರೆ. ಇದಕ್ಕೂ ಮುನ್ನ ಡಿ.ಕೆ ಶಿವಕುಮಾರ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಇದನ್ನೂ ಓದಿ: ಶಿವಣ್ಣ, ಪುನೀತ್, ಸುದೀಪ್, ಯಶ್, ರಾಧಿಕಾ ಮನೆಯಲ್ಲಿ ಐಟಿ ರೇಡ್ ಆಗಿದ್ದು ಯಾಕೆ?

    ಕನ್ನಡ ಚಿತ್ರರಂಗದಲ್ಲಿ ಬಹುಕೋಟಿ ಸಿನಿಮಾ ಮಾಡುವ ನಿರ್ಮಾಪಕರ ಮನೆಗಳ ಮೇಲೂ ಐಟಿ ರೇಡ್ ಮಾಡಿದ್ದರು. ಗುರುವಾರ ಬೆಳಗ್ಗೆ 6 ಗಂಟೆಗೆ ಶುರುವಾದ ದಾಳಿ, ರಾತ್ರಿ 11 ಗಂಟೆವರೆಗೂ ಮುಂದುವರಿದಿತ್ತು. ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ನಡುಗಿಸಿದ ಐಟಿ ದಾಳಿಗೆ ಹೈ ಬಜೆಟ್ಟಿನ ಮೂರು ಸಿನಿಮಾಗಳೇ ಕಾರಣ ಎನ್ನಲಾಗಿದೆ.

    ಇತ್ತ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಡಿಕೆಶಿ ಮನೆ ಹಾಗೂ ಕೋಡಿಹಳ್ಳಿಯ ಡಿ.ಕೆ ಸುರೇಶ್ ಮನೆಗೆ ನಾಲ್ಕು ಜನ ಅಧಿಕಾರಿಗಳು ಬುಧವಾರ ಭೇಟಿ ನೀಡಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಚಿವ ಡಿ.ಕೆ ಶಿವಕುಮಾರ್ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದ್ದರು. ಮನೆಯ ಬಾಗಿಲ ಮೇಲೆ ಐಟಿ ಅಧಿಕಾರಿಗಳು ನೋಟಿಸ್ ಅಂಟಿಸಿರುವ ಹಿನ್ನೆಲೆಯಲ್ಲಿ ಸಚಿವ ಡಿಕೆಶಿ ತಾಯಿ ಗೌರಮ್ಮ ಅವರು ಬೆಂಗಳೂರಿಗೆ ತೆರಳಿದ್ದು, ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಸಚಿವರ ಆಪ್ತ ವಲಯದಿಂದ ಮಾಹಿತಿ ತಿಳಿದು ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ನಟರಿಗೆ ಕಾರಿನ ಕಾಟ!

    ಸ್ಯಾಂಡಲ್‍ವುಡ್ ನಟರಿಗೆ ಕಾರಿನ ಕಾಟ!

    ಬೆಂಗಳೂರು: ಸ್ಯಾಂಡಲ್‍ವುಡ್ ನಟರಿಗೆ ಒಂಡು ಕಡೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಯುತ್ತಿದ್ದು, ಮೊತ್ತೊಂದೆಡೆ ಅವರ ಐಷಾರಾಮಿ ಕಾರುಗಳಿಂದ ಕಾಟ ಶುರುವಾಗಿದೆ.

    ಚಂದನವನದ ಸ್ಟಾರ್ ನಟರು ಕಳೆದ ಒಂದು ವರ್ಷದಿಂದ ಸಾಕಷ್ಟು ಬಾರಿ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದ್ದರು. ಈ ಹಿಂದೆ ನಟ ಯಶ್ ಪತ್ನಿ ರಾಧಿಕಾ ಮತ್ತು ಅಪ್ಪ-ಅಮ್ಮನಿಗೆ ಮೂರು ಭರ್ಜರಿ ಕಾರುಗಳನ್ನು ಗಿಫ್ಟ್ ಮಾಡಿದ್ದರು. ನಟ ಸುದೀಪ್ ಕೂಡ ಐಷಾರಾಮಿ ಕಾರು ಖರೀದಿ ಮಾಡಿದ್ದರು. ಈಗಾಗಲೇ ಸುದೀಪ್ ಬಳಿ ಆಡಿ, ರೇಂಜ್ ರೋವರ್, ಪೋರ್ಶೆ ಕಾರುಗಳು ಇವೆ.

    ಪುನೀತ್ ರಾಜ್‍ಕುಮಾರ್ ಬಳಿ ಕೂಡ ರೇಂಜ್ ರೋವರ್ ಹಾಗೂ ಬೆಂಜ್ ಕಾರುಗಳಿವೆ. ಈ ಹಿನ್ನೆಲೆಯಲ್ಲಿ ಕಾರನ್ನು ಖರೀದಿ ಮಾಡುವಾಗ ಹಣವನ್ನು ಯಾವ ಮೂಲದಿಂದ ಸಂದಾಯ ಮಾಡಿದ್ದೀರಿ? ಮತ್ತು ವಿದೇಶ ಪ್ರವಾಸದ ಬಗ್ಗೆಯೂ ಮಾಹಿತಿಯನ್ನು ಅಧಿಕಾರಿಗಳು ಕೇಳುತ್ತಿದ್ದಾರೆ ಎನ್ನಲಾಗಿದೆ.

    ಅಷ್ಟೇ ಅಲ್ಲದೇ ನಟರ ಮನೆಯಲ್ಲಿ ನಡೆಯುವಂತಹ ದೊಡ್ಡ ಕಾರ್ಯಕ್ರಮಗಳ ಕುರಿತು ದಾಖಲೆಗಳನ್ನು ಕೇಳುತ್ತಿದ್ದು, ಕಾರ್ ಮತ್ತು ಇತರೆ ರಶೀದಿಗಳ ಬಗ್ಗೆ ಮಾಹಿತಿ ಐಟಿ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಡಿಕೆ ಶಿವಕುಮಾರ್ ತಾಯಿಗೆ ಐಟಿ ನೋಟಿಸ್ – ವಿಚಾರಣೆಗೆ ಆಗಮಿಸಿದ ಡಿಕೆಶಿ

    ಸಚಿವ ಡಿಕೆ ಶಿವಕುಮಾರ್ ತಾಯಿಗೆ ಐಟಿ ನೋಟಿಸ್ – ವಿಚಾರಣೆಗೆ ಆಗಮಿಸಿದ ಡಿಕೆಶಿ

    ಬೆಂಗಳೂರು/ರಾಮನಗರ: ಸಚಿವ ಡಿ.ಕೆ ಶಿವಕುಮಾರ್ ಗೆ ಮತ್ತೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ಡಿಕೆಶಿ ಅವರ ತಾಯಿ ಗೌರಮ್ಮ ರವರಿಗೆ ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಡಿಕೆಶಿ ಮನೆ ಹಾಗೂ ಕೋಡಿಹಳ್ಳಿಯ ಡಿ.ಕೆ ಸುರೇಶ್ ಮನೆಗೆ ನಾಲ್ಕು ಜನ ಅಧಿಕಾರಿಗಳು ಬುಧವಾರ ಭೇಟಿ ನೀಡಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಚಿವ ಡಿಕೆ ಶಿವಕುಮಾರ್ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದ್ದರು. ಮನೆಯ ಬಾಗಿಲ ಮೇಲೆ ಐಟಿ ಅಧಿಕಾರಿಗಳು ನೋಟಿಸ್ ಅಂಟಿಸಿರುವ ಹಿನ್ನೆಲೆಯಲ್ಲಿ ಸಚಿವ ಡಿಕೆಶಿ ತಾಯಿ ಗೌರಮ್ಮ ರವರು ಬೆಂಗಳೂರಿಗೆ ತೆರಳಿದ್ದು ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಸಚಿವರ ಆಪ್ತ ವಲಯದಿಂದ ಮಾಹಿತಿ ತಿಳಿದು ಬಂದಿದೆ.

    ಮೊದಲಿಗೆ ಐಟಿ ಅಧಿಕಾರಿಗಳು ಕನಕಪುರದಲ್ಲಿನ ಮನೆಗೆ ಭೇಟಿ ನೀಡಿ ನಂತರ ಕೋಡಿಹಳ್ಳಿಯ ಮನೆ ಹಾಗೂ ದೊಡ್ಡ ಆಲಹಳ್ಳಿಯ ಮನೆಗೆ ತೆರಳಿದ್ದಾರೆ. ಆದರೆ ಎಲ್ಲೂ ಕೂಡಾ ಡಿಕೆಶಿ ತಾಯಿ ಗೌರಮ್ಮನವರು ಸಿಗದ ಹಿನ್ನೆಲೆಯಲ್ಲಿ ನೋಟಿಸನ್ನು ಬಾಗಿಲಿಗೆ ಅಂಟಿಸಿ ಹೋಗಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ಗೆ ಐಟಿ ಶಾಕ್, ಇತ್ತ ಡಿಕೆಶಿ ತಾಯಿಗೂ ಶಾಕ್

    ಸದ್ಯ ವಿಚಾರಣೆಗೆ ಐಟಿ ಪ್ರಧಾನ ಕಚೇರಿಗೆ ಹಾಜರಾಗಿರುವ ಸಚಿವ ಡಿ.ಕೆ ಶಿವಕುಮಾರ್ ಅವರ ವಿಚಾರಣೆ ನಡೆಸುತ್ತಿರುವ ಐಟಿ ಅಧಿಕಾರಿಗಳು ಮಧ್ಯಾಹ್ನ ಊಟಕ್ಕೆ ಬಿಡದೆ ಮಾಹಿತಿ ಪಡೆದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಐಟಿ ಕಚೇರಿಗೆ ತೆರಳುವ ಮುನ್ನವೇ ಡಿಕೆ ಶಿವಕುಮಾರ್ ಅವರು ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದರು. ಇತ್ತ ಐಟಿ ಕಚೇರಿಗೆ ಡಿಕೆಶಿ ಆಪ್ತ, ಉದ್ಯಮಿ ಸಚಿನ್ ನಾರಾಯಣ್ ಕೂಡ ಆಗಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಟಿ ದಾಳಿ ನಡೆದಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ಸುದೀಪ್

    ಐಟಿ ದಾಳಿ ನಡೆದಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ಸುದೀಪ್

    ಬೆಂಗಳೂರು: ನನಗೆ ಏನು ಗೊತ್ತಿಲ್ಲ. ಈಗಷ್ಟೇ ಬಂದಿದ್ದೇನೆ ಎಂದು ಐಟಿ ದಾಳಿಗೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ನಿವಾಸದ ಬಳಿ ಇದ್ದ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ವೈಯಕ್ತಿಕ ಕಾರಣದಿಂದ ಐಟಿ ದಾಳಿ ನಡೆದಿಲ್ಲ. ದಿ ವಿಲನ್, ಕೆಜಿಎಫ್ ಮತ್ತು ನಟಸಾರ್ವಭೌಮ ಸಿನಿಮಾಗಳು ಬಿಗ್ ಬಜೆಟ್ ಚಿತ್ರಗಳಾಗಿದೆ. ಆದ್ದರಿಂದ ಮೂರು ಬಿಗ್ ಬಜೆಟ್ ಕಾರಣಕ್ಕೆ ಐಟಿ ದಾಳಿ ಮಾಡಿರಬಹುದು. ಈ ಮೂರು ಸಿನಿಮಾಗೆ ಸಂಬಂಧಿಸಿದ ನಿರ್ಮಾಪಕರ ಮನೆ ಮೇಲೂ ಐಟಿ ರೇಡ್ ಆಗಿದೆ ಎಂದು ಹೇಳಿದ್ದಾರೆ.

    ನಾವು ಏನೇ ಮಾತನಾಡಬೇಕಾದರೂ ಸಾಕ್ಷಿ ಸಮೇತ ಮಾತನಾಡಬೇಕು. ಅದು ಯಾವುದೇ ಪಕ್ಷ ಮತ್ತು ಇನ್ನೊಬ್ಬರ ಬಗ್ಗೆ ಆಗಲಿ ಮಾತನಾಡಬಾರದು. ತೆರಿಗೆ ಇಲಾಖೆ ಯಾವುದೇ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಅದಕ್ಕೆ ತನ್ನದೇ ಆದಂತಹ ನಿಯಮಗಳಿರುತ್ತವೆ. ಅವರಿಗೆ ಆ ನಿಯಮವನ್ನು ಪಾಲಿಸಿಲ್ಲ ಎಂಬ ಮಾಹಿತಿ ಸಿಕ್ಕಿರುತ್ತದೆ. ಆದ್ದರಿಂದ ದಾಳಿ ಮಾಡಿದ್ದಾರೆ. ನಾವು ಅಧಿಕಾರಿಗಳಿಗೆ ಸಹಕರಿಸಬೇಕು ಅಲ್ಲವೇ? ನಮ್ಮ ತಾಯಿ ಒಬ್ಬರೆ ಇದ್ದಾರೆ. ಅದಕ್ಕಾಗಿ ನಾನು ಮನೆಗೆ ಬಂದಿದ್ದೇನೆ. ಇಲ್ಲ ಅಂದಿದ್ದರೆ ನಾನು ಅಲ್ಲೆ ಕುಳಿತುಕೊಂಡು ಇದೆಲ್ಲವನ್ನು ನಿಭಾಯಿಸಬಹುದಿತ್ತು ಎಂದು ತಿಳಿಸಿದರು.

    ಬೆಳಗ್ಗೆ ಐಟಿ ದಾಳಿ ನಡೆದಾಗ ಸುದೀಪ್ ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳು ಸುದೀಪ್ ಅವರಿಗೆ ಮನೆಗೆ ಬರಲು ಸೂಚಿಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್ ರದ್ದುಗೊಳಿಸಿ ಮಧ್ಯಾಹ್ನ ಬೆಂಗಳೂರಿಗೆ ಹಿಂತಿರುಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಟಿ ಶಾಕ್ ನೀಡಿದ್ರೂ ಕಿಚ್ಚ ಸುದೀಪ್ ಕೂಲ್!

    ಐಟಿ ಶಾಕ್ ನೀಡಿದ್ರೂ ಕಿಚ್ಚ ಸುದೀಪ್ ಕೂಲ್!

    ಬೆಂಗಳೂರು: ಬೆಳ್ಳಂಬೆಳ್ಳಗೆ ಐಟಿ ಅಧಿಕಾರಿಗಳು ಮನೆಗೆ ದಾಳಿ ಮಾಡಿ ಶಾಕ್ ನೀಡಿದ್ದರೂ ಸುದೀಪ್ ಕೂಲ್ ಆಗಿ ಇದ್ದಾರೆ.

    ಐಟಿ ರೇಡ್ ಆಗಿದ್ದರೂ ಕಿಚ್ಚ ಕೂಲ್ ಆಗಿ ಟ್ವೀಟ್ ಮಾಡಿದ್ದಾರೆ. ‘ಲವ್ ಮೋಕ್ ಟೈಲ್’ ಸಿನಿಮಾದ ಪೋಸ್ಟರ್ ಶೇರ್ ಮಾಡಿ ಸುದೀಪ್ ಶುಭಾಶಯ ತಿಳಿಸಿದ್ದಾರೆ.

    ಬೆಳಗ್ಗೆ 9.55ಕ್ಕೆ ಸುದೀಪ್ ಟ್ವೀಟ್ ಮಾಡಿದ್ದು, ಈ ಟ್ವೀಟ್ ನ್ನು 350ಕ್ಕೂ ಹೆಚ್ಚು ಮಂದಿ ರೀ-ಟ್ವೀಟ್ ಮಾಡಿದ್ದರೆ, 2 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಕಿಚ್ಚನ ಟ್ವೀಟ್ ಗೆ ಸ್ಯಾಂಡಲ್‍ವುಡ್ ಸ್ಟಾರ್ ನಟರಾದ ನಿಮ್ಮ ಮನೆ ಮೇಲೆ, ಯಶ್ ಹಾಗೂ ಶಿವರಾಜ್ ಕುಮಾರ್ ಮನೆ ಮೇಲೆ ಐಟಿ ರೇಡ್ ಆಗಿದೆಯಂತೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

    ಬೆಳಗ್ಗೆ ಐಟಿ ದಾಳಿ ನಡೆದಾಗ ಸುದೀಪ್ ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳು ಸುದೀಪ್ ಅವರಿಗೆ ಮನೆಗೆ ಬರಲು ಸೂಚಿಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್ ರದ್ದುಗೊಳಿಸಿ ಮಧ್ಯಾಹ್ನ ಬೆಂಗಳೂರಿಗೆ ಹಿಂತಿರುಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್‍ಗೆ ಶಾಕ್ ಕೊಡಲು ಐಟಿ ಅಧಿಕಾರಿಗಳ ಮಾಸ್ಟರ್ ಪ್ಲಾನ್ ಹೀಗಿತ್ತು!

    ಸ್ಯಾಂಡಲ್‍ವುಡ್‍ಗೆ ಶಾಕ್ ಕೊಡಲು ಐಟಿ ಅಧಿಕಾರಿಗಳ ಮಾಸ್ಟರ್ ಪ್ಲಾನ್ ಹೀಗಿತ್ತು!

    – ಕಳೆದ ಒಂದು ವಾರದಿಂದ ದಾಳಿಗೆ ಐಟಿ ಅಧಿಕಾರಿಗಳು ಪ್ಲಾನ್
    – ಅಧಿಕಾರಿಗಳಿಗೆ ನಾವು ನಟರ ಮನೆ ಹೋಗ್ತಿದ್ದೇವೆ ಅನ್ನೋದು ತಿಳಿದಿರಲಿಲ್ಲ
    – ಮುಂಚಿತವಾಗಿ 150 ದೊಡ್ಡ ಪೆಟ್ಟಿಗೆಯನ್ನು ಸಿದ್ಧಪಡಿಸಿದ್ದ ಐಟಿ

    ಬೆಂಗಳೂರು: ಒಂದು ವಾರದ ಹಿಂದೆ ಮಾಸ್ಟರ್ ಪ್ಲಾನ್ ಮಾಡಿ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಬೆಳಗ್ಗೆ ಸ್ಯಾಂಡಲ್‍ವುಡ್‍ಗೆ ಶಾಕ್ ಕೊಟ್ಟಿದ್ದಾರೆ.

    ಐಟಿ ಅದಿಕಾರಿಗಳು ಮೂರು ದಿನಗಳಿಂದ ನಟರು ಮತ್ತು ನಿರ್ಮಾಪಕರ ಲೊಕೇಷನ್ ಮೇಲೆ ಕಣ್ಣಿಟ್ಟಿದ್ದು, ನಟರ, ನಿರ್ಮಾಪಕರ ಆದಾಯದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದ್ದರು. ಅಷ್ಟೇ ಅಲ್ಲದೇ ಮೊದಲೇ ಐಟಿ ಅಧಿಕಾರಿಗಳು 50 ಕಡೆ ಏಕಕಾಲಕ್ಕೆ ದಾಳಿಗೆ ಸ್ಕೆಚ್ ಕೂಡ ಹಾಕಿದ್ದರು. ಪ್ಲಾನ್ ಪ್ರಕಾರವಾಗಿ ಇಂದು ಏಕಾಕಾಲದಲ್ಲಿ ನಟರು, ನಿರ್ಮಾಪಕರು, ಆಪ್ತರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್ ನೀಡಿದ್ದು ಯಾಕೆ? – ನಿರ್ಮಾಪಕರು, ನಟರ ಮನೆ ಮೇಲಿನ ದಾಳಿಗೆ ಕಾರಣ ಇಲ್ಲಿದೆ

    ಐಟಿ ಅಧಿಕಾರಿಗಳು ಸರ್ಕಾರಿ ಕಾರನ್ನು ಬಳಸದೇ ದಾಳಿಗೆ ಬಾಡಿಗೆ ಕಾರನ್ನು ಬಳಸಿದ್ದಾರೆ. ಬೇರೆ ಬೇರೆ ಟ್ರಾವೆಲ್ ಏಜೆನ್ಸಿಗಳ ಮೂಲಕ 150 ಇನ್ನೋವಾ ಕಾರ್ ಬುಕ್ ಮಾಡಿ ಈ ದಾಳಿ ನಡೆಸಲಾಗಿದೆ. ದಾಳಿ ಹಿನ್ನೆಲೆಯಲ್ಲಿ 200 ಸಶಸ್ತ್ರ ಪಡೆ ಸ್ಟೆನ್ ಗನ್ ಸಮೇತ ಬರುವಂತೆ ಪೊಲೀಸರಿಗೆ ಮೊದಲೇ ಸೂಚನೆ ನೀಡಲಾಗಿತ್ತು. ನಟರ ಮನೆಯ ಮೇಲೆ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಆಗಮಿಸಿ ಅಹಿತಕರ ಘಟನೆ ನಡೆದರೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನು ಅಧಿಕಾರಿಗಳು ತೆಗೆದುಕೊಂಡಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಇತಿಹಾಸದಲ್ಲಿ ಅತಿ ದೊಡ್ಡ ಐಟಿ ದಾಳಿ – ಯಾರ ಮನೆ ಮೇಲೆ ದಾಳಿ ನಡೆದಿದೆ?

    ಅಧಿಕಾರಿಗಳಿಗೆ ತಿಳಿದಿರಲಿಲ್ಲ:
    ನಟರು ಮತ್ತು ನಿರ್ಮಾಪಕರ ಮನೆ ಮೇಲಿನ ದಾಳಿ ನಡೆಸುವ ಬಗ್ಗೆ ಅಧಿಕಾರಿಗಳಿಗೂ ತಿಳಿದಿರಲಿಲ್ಲ. ಆದರೆ ದಾಳಿಗೆ 200ಕ್ಕೂ ಹೆಚ್ಚು ಅಧಿಕಾರಿಗಳನ್ನು ಸಜ್ಜು ಮಾಡಿದ್ದರು. ಅವರನ್ನು ಐಟಿ ಕಚೇರಿ ಇರುವ ಕ್ವೀನ್ಸ್ ರಸ್ತೆಗೆ ಬರುವಂತೆ ಸೂಚಿಸಿದ್ದರು.

    ಕೆಲ ನಿರ್ಮಾಪಕರು ಚಾರ್ಟೆಡ್ ಅಕೌಂಟ್‍ಗಳೊಂದಿಗೆ ಸಂಪರ್ಕದಲ್ಲಿರುವ ಸಂಶಯದಿಂದ ಹಿರಿಯ ಐಟಿ ಅಧಿಕಾರಿಗಳು ಮಾಹಿತಿ ಬಿಟ್ಟಕೊಟ್ಟಿರಲಿಲ್ಲ. ಆದರೆ ನಾಳೆ ಬೆಳಗ್ಗೆ ದಾಳಿ ಇದ್ದರೆ ಇರುತ್ತದೆ. ಇಲ್ಲ ಅಂದರೆ ಇಲ್ಲ ಅಂತಲೂ ಹೇಳಿದ್ದರು. ಮೆಸೇಜ್ ಕಳುಹಿಸಿದ 30 ನಿಮಿಷದಲ್ಲಿ ಕಚೇರಿಗೆ ಬರುವಂತೆ ಸೂಚಿಸಿದ್ದರು.

    ಅದರಂತೆಯೇ ಬೆಳಗ್ಗೆ 4.30ಕ್ಕೆ ಅಧಿಕಾರಿಗಳಿಗೆ ಮೆಸೇಜ್ ಕಳುಹಿಸಿದ್ದಾರೆ. ಮೆಸೇಜ್ ಬಂದ ತಕ್ಷಣ ಅವರು ಹೇಳಿದ್ದ ಸ್ಥಳಕ್ಕೆ ಬಂದಿದ್ದರು. ಬಳಿಕ ಅವರಿಗೆ ಸೀಲ್ಡ್ ಕವರ್ ನಲ್ಲಿ ಸ್ಥಳ ನಿಯೋಜನೆ ಮಾಹಿತಿ ನೀಡಿ ಕಳುಹಿಸಿದ್ದರು. ಪಿನ್ ಲೊಕೇಷನ್ ನೋಡಿ ದಾಳಿ ಮಾಡುವಂತೆ ಅಧಿಕಾರಿಗಳಿಗೆ ಇಲಾಖೆ ಸೂಚಿಸಿತ್ತು. ಅಷ್ಟೇ ಅಲ್ಲದೇ ಮುಂಚಿತವಾಗಿ 150 ದೊಡ್ಡ ಪೆಟ್ಟಿಗೆಗಳೊಂದಿಗೆ ಅಧಿಕಾರಿಗಳ ತಂಡ ಸಜ್ಜಾಗಿತ್ತು. ಯಾಕೆಂದರೆ ದಾಳಿಯಲ್ಲಿ ವಶಪಡಿಸಿಕೊಳ್ಳುವ ಆಸ್ತಿ ಪತ್ರ ತರಲು ಪೆಟ್ಟಿಗೆಗಳನ್ನು ಸಿದ್ಧಪಡಿಸಲಾಗಿತ್ತು ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ಇತಿಹಾಸದಲ್ಲಿ ಅತಿ ದೊಡ್ಡ ಐಟಿ ದಾಳಿ – ಯಾರ ಮನೆ ಮೇಲೆ ದಾಳಿ ನಡೆದಿದೆ?

    ಸ್ಯಾಂಡಲ್‍ವುಡ್ ಇತಿಹಾಸದಲ್ಲಿ ಅತಿ ದೊಡ್ಡ ಐಟಿ ದಾಳಿ – ಯಾರ ಮನೆ ಮೇಲೆ ದಾಳಿ ನಡೆದಿದೆ?

    ಬೆಂಗಳೂರು: ಸ್ಯಾಂಡಲ್‍ವುಡ್ ಮೇಲೆ ಅತಿ ದೊಡ್ಡ ಐಟಿ ದಾಳಿ ನಡೆದಿದೆ. ಬೆಳ್ಳಂಬೆಳ್ಳಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ಕನ್ನಡದ ಹಲವು ಕಲಾವಿದರು, ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಬೆಳ್ಳಂಬೆಳಗ್ಗೆ ಇಂದು 50ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆದಿದ್ದು, 200ಕ್ಕೂ ಹೆಚ್ಚು ಅಧಿಕಾರಿಗಳು ಕಲಾವಿದರ, ನಿರ್ಮಾಪಕರ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ‘ಕೆಜಿಎಫ್’ ಸಕ್ಸಸ್ ಗುಂಗಿನಲ್ಲಿದ್ದ ನಟ ಯಶ್ ಅವರಿಗೆ ಐಟಿ ಶಾಕ್ ನೀಡಿದೆ. ಬನಶಂಕರಿ ಮೂರನೇ ಹಂತದಲ್ಲಿರುವ ಯಶ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದು ಇನ್ನೋವಾ ಗಾಡಿಯಲ್ಲಿ ನಾಲ್ವರು ಅಧಿಕಾರಿಗಳು ಬಂದು ಮನೆ ಪರಿಶೀಲನೆ ಮಾಡುತ್ತಿದ್ದಾರೆ. ಮನೆಯಲ್ಲಿ ತಂದೆ-ತಾಯಿ ಸಮ್ಮುಖದಲ್ಲಿ ಐಟಿ ಅಧಿಕಾರಿಗಳು ಮುಂಜಾನೆಯಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಜೊತೆಯಲ್ಲೇ ಮಲ್ಲೇಶ್ವರಂನಲ್ಲಿರುವ ರಾಧಿಕಾ ಪಂಡಿತ್ ಅವರ ತಂದೆಯ ನಿವಾಸ ಮತ್ತು ಯಶ್ ಸಹೋದರಿ ಮನೆ ಮೇಲೂ ದಾಳಿ ನಡೆದಿದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್- ಪುನೀತ್, ಯಶ್ ಸೇರಿದಂತೆ ನಿರ್ಮಾಪಕರ ಮನೆ ಮೇಲೆ ದಾಳಿ

    ಸದಾಶಿವ ನಗರದಲ್ಲಿರುವ ಪುನೀತ್ ರಾಜ್‍ಕುಮಾರ್, ನಟಸಾರ್ವಭೌಮ ನಿರ್ಮಾಪಕರಾಗಿರುವ ರಾಕ್ ಲೈನ್ ವೆಂಕಟೇಶ್ ನಿವಾಸ, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ನಿವಾಸದ ಮೇಲೂ ದಾಳಿ ನಡೆದಿದೆ. ನಟರಾದ ಶಿವರಾಜ್‍ಕುಮಾರ್, ಸುದೀಪ್ ನಿವಾಸದ ಮನೆ ಮೇಲೂ ಐಟಿ ದಾಳಿ ನಡೆದಿದೆ.

    ವಿಲನ್ ಚಿತ್ರದ ನಿರ್ಮಾಪಕ, ವಿಧಾನಪರಿಷತ್ ಸದಸ್ಯ ಸಿ.ಆರ್.ಮನೋಹರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸಿ.ಆರ್. ಮನೋಹರ್ ಮೇಲೆ ನಡೆದ ಎರಡನೇ ದಾಳಿ ಇದಾಗಿದ್ದು, ವಿಲನ್ ಚಿತ್ರ ಘೋಷಣೆಯಾದ ಬಳಿಕ ಈ ಹಿಂದೆ ಐಟಿ ದಾಳಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಬಿಐಗೆ ಶಾಕ್ ನೀಡಿದ ಚಂದ್ರಬಾಬು ನಾಯ್ಡು

    ಸಿಬಿಐಗೆ ಶಾಕ್ ನೀಡಿದ ಚಂದ್ರಬಾಬು ನಾಯ್ಡು

    ಹೈದರಾಬಾದ್: ಕೇಂದ್ರ ಸರ್ಕಾರವೂ ರಾಜ್ಯಗಳಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಒಪ್ಪಿಗೆಯ ಅನುಮತಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹಿಂತೆಗೆದುಕೊಂಡಿದ್ದು, ಈ ಮೂಲಕ ಕೇಂದ್ರ ಸರ್ಕಾರ ರಾಜ್ಯದಲ್ಲಿ ನಡೆಸುತ್ತಿದ್ದ ತನಿಖೆಗಳಿಗೆ ಬ್ರೇಕ್ ಹಾಕಿದ್ದಾರೆ.

    ದೆಹಲಿ ವಿಶೇಷ ಪೊಲೀಸ್ ಸಂಸ್ಥೆಯ ಕಾಯಿದೆ (1946) ಅಡಿಯಲ್ಲಿ ಬರುವ ಸೆಕ್ಷನ್ 6ರ ಅನುಸಾರ ರೂಪಿಸಲಾಗಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸಿಬಿಐ ಗೆ ನೀಡಿದ್ದ ಅಧಿಕಾರವನ್ನು ಹಿಂಪಡೆಯಲಾಗಿದ್ದು, ಆಂಧ್ರ ಪ್ರದೇಶದಲ್ಲಿ ಸಿಬಿಐ ಅಧಿಕಾರಿಗಳು ಇನ್ನು ಮುಂದೆ ಯಾವುದೇ ರೀತಿಯ ತನಿಖೆ, ದಾಳಿ ನಡೆಸಿದರೂ ಅದಕ್ಕೆ ರಾಜ್ಯ ಸರ್ಕಾರದ ಅನುಮತಿ ಪಡೆಯವುದು ಕಡ್ಡಾಯವಾಗಿದೆ. ಇದರ ಪರಿಣಾಮ ಆಂಧ್ರಪ್ರದೇಶದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಸಿಬಿಐ ತನಿಖೆ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

    ಆಂಧ್ರಪ್ರದೇಶದ ಮುಖ್ಯಮಂತ್ರಿಯಾದ ಚಂದ್ರಬಾಬು ನಾಯ್ಡು ಅವರು ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ), ಅದಾಯ ತೆರಿಗೆ ಇಲಾಖೆ (ಐಟಿ) ತನಿಖಾಧಿಕಾರಿಗಳು ತಮ್ಮ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು, ತಮ್ಮ ರಾಜಕೀಯ ವೈರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ, ರಾಜ್ಯದಲ್ಲಿ ಸಿಬಿಐ ಅಧೀನದಲ್ಲಿರುವ ಎಲ್ಲಾ ಪ್ರಕರಣಗಳ ತನಿಖೆಯನನ್ನು ನಡೆಸಲು ಸಿಬಿಐ ಬದಲಾಗಿ ಎಸಿಬಿ (ಭ್ರಷ್ಟಚಾರ ನಿಗ್ರಹ ದಳ)ಗೆ ಜವಾಬ್ದಾರಿಯನ್ನ ವರ್ಗಾವಣೆ ಮಾಡಲಾಗಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    ಇದೇ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸುವ ದಾಳಿಗಳಿಗೆ ರಾಜ್ಯ ಸರ್ಕಾರವೂ ಯಾವುದೇ ಪೊಲೀಸ್ ಭದ್ರತೆಯನ್ನು ಒದಗಿಸುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರೆಡ್ಡಿ ಅರೆಸ್ಟ್ ಆದ ಬೆನ್ನಲ್ಲೇ ಡಿಕೆಶಿಗೆ ಬಿಗ್ ಶಾಕ್!

    ರೆಡ್ಡಿ ಅರೆಸ್ಟ್ ಆದ ಬೆನ್ನಲ್ಲೇ ಡಿಕೆಶಿಗೆ ಬಿಗ್ ಶಾಕ್!

    ಬೆಂಗಳೂರು: ಆಂಬಿಡೆಂಟ್ ಕಂಪನಿ ಜೊತೆ 20 ಕೋಟಿ ಡೀಲ್ ಕೇಸಲ್ಲಿ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಜೈಲಿಗೆ ಹೋದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

    ನಿಮ್ಮ ವಿರುದ್ಧದ ಆರೋಪಗಳಿಗೆ ತ್ವರಿತ ಸ್ಪಷ್ಟೀಕರಣ ನೀಡಿ ಎಂದು ಡಿ.ಕೆ ಶಿವಕುಮಾರ್ ಗೆ ಗುರುವಾರ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಜಾರಿಯಾಗಿದೆ. ಉನ್ನತ ಪದವಿಗೆ ತೆರಳಿದ ಮೇಲೆ ಘನತೆಯಿಂದ ನಡೆದುಕೊಳ್ಳಬೇಕು. ದ್ವೇಷದ ರಾಜಕಾರಣ ಬಿಜೆಪಿ ನಾಯಕರಿಂದ ಹೆಚ್ಚಾಗುತ್ತಿದೆ. ಜನರು ಎಲ್ಲವನ್ನು ಅವಲೋಕಿಸಿ ಸೂಕ್ತ ಬೈ ಎಲೆಕ್ಷನ್ ನಂತೆ ಲೋಕಸಭೆ ಫಲಿತಾಂಶ ಇರಲಿದೆ ಎಂದು ಸಂಸದ ಉಗ್ರಪ್ಪ ನವದೆಹಲಿಯಲ್ಲಿ ತಿಳಿಸಿದ್ದಾರೆ.

    ಹವಾಲ ದಂಧೆಕೋರ ಆರೋಪ ಇರುವ ಚೆನ್ನೈನ ಸೆಲ್ವಂ ಕುಮಾರ್ ಅವರಿಗೂ ಈ ವಿಚಾರಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿಯಾಗಿದೆ. ಡಿ.ಕೆ. ಶಿವಕುಮಾರ್ ಜೊತೆ ಲಿಂಕ್ ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಸೆಲ್ವಂ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಿತ್ತು.

    ಸಚಿವ ಶಿವಕುಮಾರ್ ಐಟಿ ಇಲಾಖೆಯ ಮೇಲೆ ಕಾನೂನು ಹೋರಾಟ ನಡೆಸುತ್ತಿದ್ದು, ಪ್ರಕರಣದಿಂದ ಕೈ ಬಿಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

    ಐಟಿ ಅಧಿಕಾರಿಗಳು ಪೂರ್ವಾಗ್ರಹ ಪೀಡಿತರಾಗಿ ದಾಳಿ ನಡೆಸಿದ್ದಾರೆ. ಸಚಿವರೊಬ್ಬರ ಮನೆಯ ಮೇಲೆ ದಾಳಿ ನಡೆಸುವಾಗ ಕಾನೂನು ಪ್ರಕ್ರಿಯೆಗಳು ಮಾಡಿಲ್ಲ. ಮಾಧ್ಯಮದ ಮುಂದೆಯೇ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಹೀಗಾಗಿ ಪ್ರಕರಣದಿಂದ ನನ್ನ ಹೆಸರನ್ನು ಕೈ ಬಿಡಬೇಕೆಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

    ಈ ನಡುವೆ ಇದೇ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನೋಟಿಸ್ ನೀಡಿರುವವರು ಅದಕ್ಕೆ ಉತ್ತರ ನೀಡುತ್ತಾರೆ. ಇದಕ್ಕೂ ರಾಜ್ಯ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. ಡಿ.ಕೆ. ಶಿವಕುಮಾರ್ ಗೆ ಇಡಿ ನೋಟಿಸ್ ದ್ವೆಷದ ರಾಜಕಾರಣ ಎಂದು ಹೇಳಲ್ಲ. ಕಾನೂನಿನ ಅಡಿ ಕೆಲಸ ನಡೆಯುತ್ತವೆ. ಯಾರು ಆತಂಕಕ್ಕೆ ಒಳಗಾಗೋದು ಬೇಡ, ಅದಕ್ಕೆ ಅವರು ಉತ್ತರ ಕೊಡುತ್ತಾರೆ. ರಾಜ್ಯ ಸರ್ಕಾರಕ್ಕೂ ಇಡಿ ನೋಟಿಸಿಗೆ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಡಿಕೆಶಿ ಮೇಲಿನ ಐಟಿ ವಿಚಾರಣೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಆರೋಪಿ ನಲಪಾಡ್ ಪ್ರತ್ಯಕ್ಷ!

    ಡಿಕೆಶಿ ಮೇಲಿನ ಐಟಿ ವಿಚಾರಣೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಆರೋಪಿ ನಲಪಾಡ್ ಪ್ರತ್ಯಕ್ಷ!

    ಬೆಂಗಳೂರು: ಕಾಂಗ್ರೆಸ್ಸಿನಿಂದ ಉಚ್ಚಾಟನೆಯಾದರೂ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಯೂತ್ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ.

    ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮೇಲಿನ ಆದಾಯ ತೆರಿಗೆ ಇಲಾಖೆಯ ವಿಚಾರಣೆಯನ್ನು ವಿರೋಧಿಸಿ ನೂರಕ್ಕೂ ಹೆಚ್ಚು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇಂದು ಆದಾಯ ತೆರಿಗೆ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ಈ ಪ್ರತಿಭಟನೆಯಲ್ಲಿ ನಲಪಾಡ್ ಭಾಗಿಯಾಗಿದ್ದರು.

    ಪ್ರತಿಭಟನೆಯಲ್ಲಿ ಭದ್ರತೆಗೆ ಹಾಕಲಾಗಿದ್ದ ಬ್ಯಾರಿಕೇಡ್ ಮೇಲೆ ಹತ್ತಿ ನಲಪಾಡ್ ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ಪ್ರತಿಭಟನೆಯನ್ನು ತಡೆದು ನಲಪಾಡ್ ಸೇರಿದಂತೆ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ಆರೋಪಿ ನಲಪಾಡ್ ಮಿಂಚಿಂಗ್!

    ಮುಂಜಾಗೃತ ಕ್ರಮವಾಗಿ ಆದಾಯ ತೆರಿಗೆ ಕಚೇರಿಗೆ ಪೊಲೀಸ್ ಬಿಗಿ ಭದ್ರತೆ ಕೂಡ ಆಯೋಜನೆ ಮಾಡಲಾಗಿತ್ತು. ಸುಮಾರು 30ಕ್ಕೂ ಹೆಚ್ಚು ಪೊಲೀಸರು ಒಂದು ಕೆಎಸ್‍ಆರ್ ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು.

    ಬಿಜೆಪಿ ಐಟಿಯನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ವಿರುದ್ಧ ಐಟಿ ಅಸ್ತ್ರ ಉಪಯೋಗಿಸುತ್ತಿದೆ. ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಇದು ತೆರಿಗೆದಾರರ ಹಣ, ಈ ಹಣವನ್ನ ಲೂಟಿ ಮಾಡಿದ್ದಾರೆ ಅಂತಾ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದು, ಈ ಪ್ರಕರಣದಲ್ಲಿ ಅನಿಲ್ ಅಂಬಾನಿ ಭಾಗಿಯಾಗಿದ್ದು, ಅವರ ಮೂಲಕ ಯುದ್ಧ ವಿಮಾನಗಳನ್ನು ಖರೀದಿ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಬಳಿಕ ನಲಪಾಡ್ ನನ್ನು ಬೆಂಗಳೂರು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಮತ್ತು ಪಕ್ಷದ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಕೆ. ಪರಮೇಶ್ವರ್ ಈ ಕುರಿತು ನಿರ್ಣಯ ತೆಗೆದುಕೊಂಡಿದ್ದು, ಪಕ್ಷದ ನಿರ್ಧಾರವನ್ನು ಕರ್ನಾಟಕ ಕಾಂಗ್ರೆಸ್ ಫೆ.18ರಂದು ಟ್ವೀಟ್ ಮಾಡಿ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Yf6tfu3N7BY