Tag: it

  • ಅದೃಷ್ಟ ಖುಲಾಯಿಸುತ್ತೆ ಅಂತಾ ಹೊಸ ಮನೆ ನಿರ್ಮಿಸಿ ಬಾಡಿಗೆ ಮನೆಯಲ್ಲಿದ್ದ ಉಮೇಶ್‍ಗೆ ಐಟಿ ಶಾಕ್

    ಅದೃಷ್ಟ ಖುಲಾಯಿಸುತ್ತೆ ಅಂತಾ ಹೊಸ ಮನೆ ನಿರ್ಮಿಸಿ ಬಾಡಿಗೆ ಮನೆಯಲ್ಲಿದ್ದ ಉಮೇಶ್‍ಗೆ ಐಟಿ ಶಾಕ್

    – ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ
    – ಸರ್ಕಾರದ ಕಾರು ವಾಪಸ್

    ಬೆಂಗಳೂರು: ಅದೃಷ್ಟ ಖುಲಾಯಿಸುತ್ತೆ ಅಂತಾ ಹೊಸ ಮನೆ ಕಟ್ಟಿಸಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಪಿಎ ಉಮೇಶ್  ಮನೆ ಮೇಲೆ ನಡೆದ ಐಟಿ ದಾಳಿ ತಡರಾತ್ರಿ ಅಂತ್ಯಗೊಂಡಿದೆ.

    ಉಮೇಶ್ ನ ಸ್ವಾರಸ್ಯಕರ ಸಂಗತಿಯೆಂದರೆ ಹೊಸ ಮನೆ ಕಟ್ಟಿಸಿದ್ದರು ಕೂಡ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ 3 ಅಂತಸ್ತಿನ ಮನೆಯಲ್ಲಿ ಬಾಡಿಗೆಗಿದ್ದ. ಇದರ ಹಿಂದೆ ರೋಚಕ ಕಹಾನಿ ಇದ್ದು, ಮನೆಯ ಈಶಾನ್ಯ ಭಾಗದಲ್ಲಿ ಸ್ಟೇರ್ ಕೇಸ್ ಹೊಂದಿರುವುದು ಅದೃಷ್ಟ ತರುವುದೆಂದು ಈ ಮನೆಯಲ್ಲಿ ವಾಸವಿದ್ದ. ಇದೇ ಮನೆಯ ಕೆಳಭಾಗದಲ್ಲಿ ಈ ಹಿಂದೆ ರಿಯಲ್ ಎಸ್ಟೇಟ್ ಕಚೇರಿ ಇತ್ತು. 90ರ ದಶಕದಲ್ಲಿ ಕಾಮದೇನು ಎಂಟರ್ ಪ್ರೈಸಸ್ ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಕೃಷ್ಣಯ್ಯ ಶೆಟ್ಟಿ ಮತ್ತು ಸೋದರ ಪ್ರಭಾಕರ್ ಶೆಟ್ಟಿ ಇದೇ ಮನೆಯಲ್ಲಿ ವಾಸಿವದ್ದರು. ಅವರಿಗೆ ಅದೃಷ್ಟ ತಂದಿದ್ದ ಮನೆಯಲ್ಲಿ ಉಮೇಶ್  ವಾಸವಿದ್ದ. ಇದನ್ನೂ ಓದಿ: ಐಟಿ ದಾಳಿ ಬೆನ್ನಲ್ಲೇ ಸಿಎಂ ಕಚೇರಿಯಿಂದ ಉಮೇಶ್‍ಗೆ ಗೇಟ್‍ಪಾಸ್

    ಅದೃಷ್ಟ ತಂದಷ್ಟೇ ವೇಗವಾಗಿ ದುರದೃಷ್ಟ ತಂದೊಡ್ಡಿತಾ ಮನೆ
    ಕರ್ನಾಟಕ ರಾಜ್ಯ ಗೃಹ ಮಂಡಳಿ ಅವ್ಯವಹಾರದಲ್ಲಿ ಜೈಲು ಸೇರಿದ್ದ ಕೃಷ್ಣಯ್ಯ ಶೆಟ್ಟಿಗೆ ಅದೃಷ್ಟ ತಂದಷ್ಟೇ ವೇಗವಾಗಿ ದುರದೃಷ್ಟಕ್ಕೂ ಈ ಮನೆ ಕಾರಣವಾಗಿತ್ತು. ಕಾಕತಾಳಿಯವೋ, ಅದೃಷ್ಟದ ಲೆಕ್ಕಚಾರವೋ ಇದೀಗ ಬಿಎಸ್‍ವೈ ಪಿಎ ಉಮೇಶ್‍ಗೂ ಇದೇ ಸಂಕಷ್ಟ ಎದುರಾಗಿದೆ. ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ ಉಮೇಶ್, ಬಿಎಸ್‍ವೈ ಪಿಎ ಆದ ಬಳಿಕ ಕೋಟ್ಯಂತರ ಮೌಲ್ಯದ ಆಸ್ತಿ, ಪಾಸ್ತಿಗಳಿಸಿದ್ದಾನೆ. ಇದನ್ನೂ ಓದಿ: ಎರಡು ರಾಜ್ಯದ ಗುತ್ತಿಗೆದಾರರ ಮಧ್ಯೆ ಗಲಾಟೆ – ಬಿಎಸ್‌ವೈ ಪಿಎ ಮೇಲೆ ಐಟಿ ದಾಳಿ

    ಉಮೇಶ್ ಮನೆ ಮೇಲೆ ನಡೆದ ಐಟಿ ದಾಳಿಯನ್ನು ತಡ ರಾತ್ರಿ ಐಟಿ ಅಧಿಕಾರಿಗಳು ಅಂತ್ಯಗೊಳಿಸಿದರು. 7 ಮಂದಿ ಐಟಿ ಅಧಿಕಾರಿಗಳಿಂದ ತಡರಾತ್ರಿವರೆಗೂ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಬಳಿಕ ಉಮೇಶ್‍ಗೆ ಸೇರಿದ ಬ್ಯಾಂಕ್ ಖಾತೆಗಳ ವಿವರ, ಲ್ಯಾಪ್‍ಟಾಪ್, ಪೆನ್ ಡ್ರೈವ್, ನೀರಾವರಿ ಇಲಾಖೆಗೆ ಸಂಬಂಧಪಟ್ಟ ದಾಖಲಾತಿ ಸೇರಿದಂತೆ ಮಹತ್ವದ ದಾಖಲೆಗಳು ವಶಕ್ಕೆ ಪಡೆದಿದ್ದಾರೆ. ಮೇಲ್ನೋಟಕ್ಕೆ ದೊಡ್ಡ ಮಟ್ಟದ ತೆರಿಗೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದ್ದು, ಉಮೇಶ್‍ಗೆ ಇಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಬಿಎಂಟಿಸಿ ಟು ಪಿಎ ಜರ್ನಿ – ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವ ಕೋಟಿ ಕುಬೇರನಾದ ಕಥೆ ಓದಿ

    ಇದೀಗ ಐಟಿ ರೇಡ್ ಬೆನ್ನಲ್ಲೇ ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯಿಂದಲೂ ಸಹ ಉಮೇಶ್‍ನನ್ನು ಬಿಡುಗಡೆಗೊಳಿಸಲಾಗಿದೆ. ಸರ್ಕಾರದಿಂದ ಇನ್ನೋವಾ ಕಾರನ್ನು ಉಮೇಶ್‍ಗೆ ನೀಡಲಾಗಿತ್ತು. ಈ ಕಾರನ್ನು ರಾತ್ರೋರಾತ್ರಿ ಅಧಿಕಾರಿಗಳು ಕುಮಾರಕೃಪಗೆ ವಾಪಸ್ ತೆಗೆದುಕೊಂಡು ಬಂದಿದ್ದಾರೆ.

  • ಇಡಿ ಅಧಿಕಾರಿಗಳ ದಾಳಿಗೆ ಕಾರಣವಾಯ್ತಾ ಜಮೀರ್ ಮಗಳ ಮದುವೆ?

    ಇಡಿ ಅಧಿಕಾರಿಗಳ ದಾಳಿಗೆ ಕಾರಣವಾಯ್ತಾ ಜಮೀರ್ ಮಗಳ ಮದುವೆ?

    ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೆ ನಡೆದ ಇಡಿ ಅಧಿಕಾರಿಗಳ ಮ್ಯಾರಥಾನ್ ದಾಳಿ ಸತತ 23 ಗಂಟೆ ಗಳ ಬಳಿ ಅಂತ್ಯವಾಗಿದೆ. ಇಡಿ ದಾಳಿಗೆ ಪ್ರಮುಖ ಕಾರಣಗಳನ್ನು ನೋಡುತ್ತಾ ಹೋದರೆ ಮೊದಲಿಗೆ ಸಿಗೋದೆ ಜಮೀರ್ ಅಹ್ಮದ್ ಅವರ ಮಗಳ ಮದುವೆ ಎಂಬ ವದಂತಿ ಹರಿದಾಡುತ್ತಿದೆ.

    ಜಮೀರ್ ಅಹ್ಮದ್ ಮನೆ ಮೇಲಿನ ದಾಳಿ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಈ ದಾಳಿಗೆ ಮೊದಲ ಕಾರಣ ಜಮೀರ್ ಅವರ ಮಗಳ ಅದ್ದೂರಿ ಮದುವೆ ಎಂಬ ಮಾತು ಕೇಳಿಬರುತ್ತಿದೆ. ಕಳೆದ ಜುಲೈ 22 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದ ಆ ಅದ್ದೂರಿ ಮದುವೆ ಯಾವ ಮಹಾರಾಜರ ಮದುವೆ ಗೂ ಕಡಿಮೆ ಇರಲಿಲ್ಲ. ಬಾಲಿವುಡ್ ನಟ -ನಟಿಯರು, ರಾಜಕೀಯ ಮುಖಂಡರು, ಸೇರಿದಂತೆ ಉದ್ಯಮಿ ಗಳು ಆ ಮದುವೆ ಗೆ ಆಗಮಿಸಿದ್ದರು. ಮಗಳ ಮೈಮೇಲೆ ಕೆಜಿ, ಕೆಜಿ ಮೌಲ್ಯದ ಚಿನ್ನಾಭರಣ, ಲಕ್ಷಾಂತರ ರೂಪಾಯಿ ಬೆಲೆಯ ಬಟ್ಟೆಗಳು. ಅಣ್ಣ ಅಂದವರಿಗೆ ಕೈತುಂಬಾ ಕಾಸು, ಮದುವೆಗೆ ಬಂದವರಿಗೆ ಬೆಲೆಬಾಳುವ ವಸ್ತ್ರಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನೂ ಓದಿ: ಶಾಸಕ ಜಮೀರ್‌ಗೆ ಇಡಿ ಶಾಕ್ – ಸತತ 23 ಗಂಟೆಗಳ ಕಾಲ ನಡೆದ ದಾಳಿ ಅಂತ್ಯ

    ಮದುವೆಯ ಅಲಂಕಾರಕ್ಕೆ ವಿದೇಶದಿಂದ ಬಂದಿದ್ದ ವಸ್ತ್ರಗಳ ಅಲಂಕಾರಿಗರು, ಹೀಗೆ ಹಲವು ವಿಶೇಷತೆಯಿಂದ ಅದ್ದೂರಿಯಾಗಿ ಮದುವೆ ನಡೆದಿತ್ತು. ಐಎಂಎ ಸಂಸ್ಥಾಪಕ ಮಾನ್ಸೂರ್ ಖಾನ್ ಕೊಟ್ಟ ಕೋಟ್ಯಾಂತರ ಹಣ, ಕೆಜಿಗಟ್ಟಲೇ ಚಿನ್ನಾಭರಣವನ್ನು ಜಮೀರ್‍ ಗೆ ನೀಡಿರುವ ಬಗ್ಗೆ ಆರೋಪ ಕೂಡ ಕೇಳಿಬಂದಿತ್ತು. ಹಾಗಾಗಿ ಇಡಿ ದಾಳಿಗೆ ಇದು ಕೂಡ ಒಂದು ಕಾರಣವಾಗಿದೆ. ಇದರೊಂದಿಗೆ ಮಗಳ ಅದ್ದೂರಿ ಮದುವೆ ನಂತರ ಐಟಿ ಮತ್ತು ಇಡಿಗೆ ಸುಳ್ಳು ಲೆಕ್ಕ ತೋರಿಸಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.

  • ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಐಟಿ ದಾಳಿ

    ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಐಟಿ ದಾಳಿ

    ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್  ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಬೆಳಂಬೆಳಗ್ಗೆ ಐಟಿ ದಾಳಿ ನಡೆದಿದೆ.

    ಜಮೀರ್ ಅವರ ಮೇಲೆ ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪದಡಿ ಬೆಂಗಳೂರಿನಲ್ಲಿರುವ ನಿವಾಸ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮತ್ತು ಫ್ಲ್ಯಾಟ್ ಮೇಲೆ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಜಮೀರ್ ಅವರ ಬೆಂಗಳೂರಿ ಕಟೋಂನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯ ಹೊಸ ನಿವಾಸ ಮತ್ತು ಕಲಾಸಿಪಾಳ್ಯದಲ್ಲಿರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಜಮೀರ್ ಅಹ್ಮದ್ ನಿವಾಸದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಏಕಕಾಲದಲ್ಲಿ ಜಮೀರ್ ಅಹ್ಮದ್ ಅವರಿಗೆ ಸಂಬಂಧಿಸಿದ ನಿವಾಸ, ಕಚೇರಿ, ಫ್ಲ್ಯಾಟ್ ಮೇಲೆ 50 ಅಧಿಕಾರಿಗಳ ತಂಡ ದಾಳಿ ನಡೆಸಿದೆ ಎನ್ನಲಾಗಿದೆ.

  • ತಾಪ್ಸಿ ಪನ್ನು, ಅನುರಾಗ್ ಆದಾಯದಲ್ಲಿ 650 ಕೋಟಿ ವ್ಯತ್ಯಾಸ ಪತ್ತೆ ಹಚ್ಚಿದ ಐಟಿ ಅಧಿಕಾರಿಗಳು

    ತಾಪ್ಸಿ ಪನ್ನು, ಅನುರಾಗ್ ಆದಾಯದಲ್ಲಿ 650 ಕೋಟಿ ವ್ಯತ್ಯಾಸ ಪತ್ತೆ ಹಚ್ಚಿದ ಐಟಿ ಅಧಿಕಾರಿಗಳು

    – ಮೊಬೈಲ್‍ನಲ್ಲಿದ್ದ ದಾಖಲೆಗಳು ಡಿಲೀಟ್
    – 5 ಕೋಟಿ ನಗದು ಹಣ ಸ್ವೀಕರಿಸಿದ ತಾಪ್ಸಿ

    ಮುಂಬೈ: ನಿರ್ಮಾಪಕ ಅನುರಾಗ್ ಕಶ್ಯಪ್ ಹಾಗೂ ಜನಪ್ರಿಯ ನಟಿ ತಾಪ್ಸಿ ಪನ್ನು ಮನೆ ಮೇಲಿನ ಐಟಿ ದಾಳಿ ಬಾಲಿವುಡ್‍ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ನೂರಾರು ಕೋಟಿ ರೂ.ಗಳನ್ನು ಕಾನೂನುಬಾಹಿರವಾಗಿ ವರ್ಗಾವಣೆ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.

    ಎರಡು ದಿನಗಳ ಕಾಲ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸುಮಾರು 5 ಕೋಟಿ ರೂ.ಗಳಿಗೆ ಸಂಬಂಧಿಸಿದಂತೆ ಹಣದ ವ್ಯವಹಾರ ನಡೆಸಿರುವ ಬಗ್ಗೆ ನಮಗೆ ರಿಸಿಪ್ಟ್ ಸಿಕ್ಕಿದೆ. ಲೆಕ್ಕ ನೀಡುವಾಗ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು 20 ಕೋಟಿ ರೂ.ಗಳ ನಕಲಿ ಖರ್ಚು ತೋರಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

    ತಾಪ್ಸಿ ಪನ್ನು ಸುಮಾರು 5 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಸ್ವೀಕರಿಸಿದ್ದು, ಅವರ ಕಂಪನಿ ಸಹ ತೆರಿಗೆಯನ್ನು ವಂಚಿಸಿದೆ. ತಾಪ್ಸಿ ಪನ್ನು ಅವರ ವ್ಯವಹಾರಗಳು ಹಾಗೂ ಸಿನಿಮಾಗಳಿಗೆ ಸಹಿ ಹಾಕುವಾಗ ಪಡೆದ ಮೊತ್ತದ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲ ಸಿನಿಮಾಗಳಿಗೆ ಸಹಿ ಹಾಕುವಾಗ ಕೋಟಿ ರೂ.ಗಿಂತ ಕಡಿಮೆ ಹಣ ಪಡೆದಿದ್ದಾರೆ. ನಟಿಯ ಪ್ರಾಥಮಿಕ ಹೇಳಿಕೆಯನ್ನು ಮಾರ್ಚ್ 3ರಂದು ದಾಖಲಿಸಿದ್ದು, ಇಂದೂ ಸಹ ವಿವರವಾದ ಹೇಳಿಕೆಯನ್ನು ನಟಿ ತಾಪ್ಸಿ ಪನ್ನು ದಾಖಲಿಸಿದ್ದಾರೆ.

    ನಟಿಯ ಮೊಬೈಲ್‍ನಿಂದ ಕೆಲ ಡೇಟಾವನ್ನು ಡಿಲೀಟ್ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ. ಈ ಡೇಟಾ ಮರಳಿ ಪಡೆಯಲು ತಜ್ಞರನ್ನು ಸಂಪರ್ಕಿಸಲಾಗಿದೆ. ಮುಂಬರುವ ದಿನಗಳಲ್ಲಿ ನಟಿಯನ್ನು ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.

    ಅನುರಾಗ್ ಕಶ್ಯಪ್ ಒಡೆತನದ ಫ್ಯಾಂಟಮ್ ಫಿಲಂಸ್ ಷೇರುದಾರರು ಸುಮಾರು 600 ಕೋಟಿ ರೂ.ಗಳ ಆದಾಯ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಶಂಕಿಸಲಾಗಿದೆ. ಫ್ಯಾಂಟಮ್ ಫಿಲಂಸ್‍ನಿಂದ ಷೇರು ಮಾರಾಟ ನಡೆಸಿದ್ದು, ಇದರಿಂದ ಗಳಿಸಿದ ಹಣದಿಂದ ಆದಾಯ ತೆರಿಗೆ ಪಾವತಿಸಿಲ್ಲ ಎನ್ನಲಾಗಿದೆ.

    ಫ್ಯಾಂಟಮ್ ಫಿಲಂಸ್‍ನವರು ಸುಳ್ಳು ವೆಚ್ಚ ಹಾಗೂ ನಕಲಿ ಬಿಲ್‍ಗಳನ್ನು ಸೃಷ್ಟಿಸಿದ್ದಾರೆ. ಅನುರಾಗ್ ಕಶ್ಯಪ್ ಅವರ ಮೊಬೈಲ್‍ನ ಡೇಟಾಗಳನ್ನು ಸಹ ಡಿಲೀಟ್ ಮಾಡಿರುವುದು ಪತ್ತೆಯಾಗಿದೆ. ಫ್ಯಾಂಟಮ್ ಫಿಲಂಸ್‍ನಲ್ಲಿ ಅನುರಾಗ್ ಕಶ್ಯಪ್ ಸಹ ಶೇರ್ ಹೋಲ್ಡರ್ ಆಗಿದ್ದಾರೆ. ಅಲ್ಲದೆ 300 ಕೋಟಿ ರೂ.ಗಳ ವ್ಯವಹಾರದ ಕುರಿತು ಸಂಸ್ಥೆಯ ಅಧಿಕಾರಿಗಳು ವಿವರಿಸುವಲ್ಲಿ ವಿಫಲರಾಗಿದ್ದಾರೆ. ಬಾಕ್ಸ್ ಆಫಿಸ್ ಕಲೆಕ್ಷನ್‍ಗೆ ಹೋಲಿಸಿದರೆ ಪ್ರೊಡಕ್ಷನ್ ಹೌಸ್ ಆದಾಯವನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದಕ್ಕೆ ಪುರಾವೆಗಳು ಸಿಕ್ಕಿದೆ ಎಂದು ಐಟಿ ಹೇಳಿದೆ.

  • ಫುಟ್ಬಾಲ್ ಆಟಗಾರರು ಬರ್ತಾರೆ ಅಂತ 60 ಕಾರುಗಳನ್ನು ಬಾಡಿಗೆ ಪಡೆದು ಐಟಿ ಮಾಸ್ಟರ್ ಪ್ಲಾನ್!

    ಫುಟ್ಬಾಲ್ ಆಟಗಾರರು ಬರ್ತಾರೆ ಅಂತ 60 ಕಾರುಗಳನ್ನು ಬಾಡಿಗೆ ಪಡೆದು ಐಟಿ ಮಾಸ್ಟರ್ ಪ್ಲಾನ್!

    – ಮಂಗಳೂರಲ್ಲಿ ಉದ್ಯಮಿಗಳಿಗೆ ಐಟಿ ಶಾಕ್
    – ದಾಳಿ ವೇಳೆ ಮಾಲೀಕರೊಬ್ಬರ ತಂದೆ ಆರೋಗ್ಯದಲ್ಲಿ ಏರುಪೇರು
    – 5 ಕೋಟಿ ಹಣ ಪತ್ತೆಯ ಬಗ್ಗೆ ಮಾಹಿತಿ

    ಮಂಗಳೂರು: ಕರಾವಳಿಯಲ್ಲಿ ವಿವಿಧ ಉದ್ಯಮಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಇದಕ್ಕೂ ಮುನ್ನ ಅಧಿಕಾರಿಗಳು ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡಿದ್ದರು.

    ಹೌದು. ಮಂಗವಾರ ಸಂಜೆ 60 ಕಾರುಗಳನ್ನು ಅಧಿಕಾರಿಗಳು ಬಾಡಿಗೆಗೆ ಪಡೆದಿದ್ದರು. ಬಾಡಿಗೆ ಪಡೆಯುವ ವೇಳೆ ಕೇರಳಕ್ಕೆ ಹೋಗಬೇಕು. ಇಂಟರ್ ಸ್ಟೇಟ್ ಫುಟ್ಬಾಲ್ ಚಾಂಪಿಯನ್ ಶಿಪ್ ಇದೆ. ಕಾರಿನಲ್ಲಿ ಫುಟ್ಬಾಲ್ ಆಟಗಾರರು ಬರುತ್ತಾರೆ ಅಂತ ಅಧಿಕಾರಿಗಳು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ನಿನ್ನೆ ಸಂಜೆ ಕಾರುಗಳಿಗೆ ಸಿಬ್ಬಂದಿ ‘ಫುಟ್ಬಾಲ್’ ನ ಸ್ಟಿಕರ್ ಅಂಟಿಸಿದ್ದರು. ಈ ಮೂಲಕ ಆಪರೇಷನ್ ಗೌಪ್ಯವಾಗಿರಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದರು.

    ಇಂದು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಮಾಲೀಕರ ಮನೆ ಮೇಲೆ ಐಟಿ ದಾಳಿ ನಡೆಸಿದೆ. ಎಜೆ ಗ್ರೂಪ್ ಸಂಸ್ಥೆಯ ಮಾಲಕ ಎಜೆ ಶೆಟ್ಟಿ, ಯನಪೋಯ ಗ್ರೂಪ್ ಸಂಸ್ಥೆಯ ಮಾಲಕ ಅಬ್ದುಲ್ ಕುಂಞ, ಕಣಚೂರು ಗ್ರೂಪ್ ಸಂಸ್ಥೆಯ ಮಾಲಕ ಕಣಚೂರು ಮೋನು ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಮೂರೂ ಸಂಸ್ಥೆಗಳ ಮನೆ, ಆಸ್ಪತ್ರೆ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಅಲ್ಲದೆ ಶಿಕ್ಷಣ ಸಂಸ್ಥೆಗಳ ಮೇಲೂ ಏಳು ಮಂದಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ಐಟಿ ದಾಳಿ ನಡೆಸಿದೆ.

    ಮತ್ತೊಂದು ಮೆಡಿಕಲ್ ಕಾಲೇಜಿನ ಮೇಲೆ ಐಟಿ ದಾಳಿ ನಡೆದಿದೆ. ಮಂಗಳೂರಿನ ಶ್ರೀನಿವಾಸ ಗ್ರೂಪ್ ಆಫ್ ಎಜುಕೇಶನ್ ಇನ್ಸ್ಟಿಟ್ಯೂಷನ್ ಹಾಗೂ ಮಂಗಳೂರಿನ ಜೈಲು ರಸ್ತೆಯಲ್ಲಿರುವ ಮನೆ, ಕಚೇರಿ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಶ್ರೀನಿವಾಸ ರಾವ್ ತಂದೆ ಆರೋಗ್ಯದಲ್ಲಿ ಏರುಪೇರು ಉಂಟಾದ ಪ್ರಸಂಗವೂ ನಡೆದಿದೆ. ಕೂಡಲೇ ಶ್ರೀನಿವಾಸ ರಾವ್ ಅವರು ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ತರಿಸಿದ್ದಾರೆ. ಅಲ್ಲದೆ ವೈದ್ಯಕೀಯ ಸಿಬ್ಬಂದಿಯಿಂದ ತಪಾಸಣೆ ನಡೆಸಲಾಯಿತು. ಈ ವೇಳೆ ರಾಘವೇಂದ್ರ ರಾವ್ ಅನಾರೋಗ್ಯದಿಂದ ಐಟಿ ಅಧಿಕಾರಿಗಳು ಗಾಬರಿಗೊಂಡರು.

    ಮೆಡಿಕಲ್ ಕಾಲೇಜುಗಳ ಮಾಲೀಕರ ಮನೆಯಲ್ಲಿ ಐಟಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿರುವ ಮಾಹಿತಿ ದೊರೆತಿದೆ. ಒಂದೇ ಕಡೆ 5 ಕೋಟಿ ಹಣ ಪತ್ತೆಯಾಗಿರೋ ಬಗ್ಗೆ ಮಾಹಿತಿ ಸಿಕ್ಕಿದ್ದು, ಮನೆಯಲ್ಲಿ ಕೋಟಿ ಕೋಟಿ ಕ್ಯಾಶ್ ನೋಡಿ ಐಟಿ ಅಧಿಕಾರಿಗಳು ಸುಸ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕೂಡ ಆಗಮಿಸಿವ ಸಾಧ್ಯತೆ ಇದೆ ಎನ್ನಲಾಗಿದೆ.

  • ಮಂಗಳೂರಿನ ಪ್ರತಿಷ್ಠಿತ ಎಜೆ ಶೆಟ್ಟಿ, ಯೆನಪೋಯ ಆಸ್ಪತ್ರೆಗಳ ಮೇಲೆ ಐಟಿ ರೇಡ್

    ಮಂಗಳೂರಿನ ಪ್ರತಿಷ್ಠಿತ ಎಜೆ ಶೆಟ್ಟಿ, ಯೆನಪೋಯ ಆಸ್ಪತ್ರೆಗಳ ಮೇಲೆ ಐಟಿ ರೇಡ್

    ಮಂಗಳೂರು: ಬೆಳ್ಳಬೆಳಗ್ಗೆ ನಗರದ ಪ್ರತಿಷ್ಠಿತ ಆಸ್ಪತ್ರೆಯ ಆಸ್ಪತ್ರೆ ನಡೆಸುತ್ತಿರುವ ಮೂವರು ಉದ್ಯಮಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದಿದೆ.

    ಎಜೆ ಗ್ರೂಪ್ ಸಂಸ್ಥೆಯ ಮಾಲಕ ಎಜೆ ಶೆಟ್ಟಿ, ಯೆನಪೋಯ ಗ್ರೂಪ್ ಸಂಸ್ಥೆಯ ಮಾಲಕ ಅಬ್ದುಲ್ ಕುಂಞ ಹಾಗೂ ಕಣಚೂರು ಗ್ರೂಪ್ ಸಂಸ್ಥೆಯ ಮಾಲಕ ಕಣಚೂರು ಮೋನು ಅವರ ಕಚೇರಿ ಮತ್ತು ಮನೆಯ ಮೇಲೆ ದಾಳಿ ನಡೆಸಲಾಗಿದೆ.

    ಮೂರೂ ಸಂಸ್ಥೆಗಳ ಮನೆ,ಆಸ್ಪತ್ರೆ, ಕಚೇರಿ ಮೇಲೆ ಏಕಕಾಲದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಮೇಲೂ ಏಕಕಾಲದಲ್ಲಿ ಐಟಿ ದಾಳಿ ನಡೆದಿದ್ದೂ, ಏಳು ಮಂದಿ ಅಧಿಕಾರಿಗಳ ತಂಡದಿಂದ ಐಟಿ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

  • ಜೈಲಲ್ಲಿರುವ ಶಶಿಕಲಾಗೆ ಐಟಿ ಶಾಕ್ – 2 ಸಾವಿರ ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಜೈಲಲ್ಲಿರುವ ಶಶಿಕಲಾಗೆ ಐಟಿ ಶಾಕ್ – 2 ಸಾವಿರ ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಚೆನ್ನೈ: ಅಕ್ರಮ ಆಸ್ತಿಗಳಿಕೆ ಕೇಸ್‍ನಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಲ್ಲಿರುವ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್‍ಗೆ ಆದಾಯ ತೆರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ.

    ಶಶಿಕಲಾಗೆ ಸಂಬಂಧಿಸಿದ 2000 ಕೋಟಿ ಮೌಲ್ಯದ ಆಸ್ತಿಯನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇಳವರಸಿ, ಸುಧಾಕರನ್‍ಗೆ ಸೇರಿದ ಆಸ್ತಿಗಳನ್ನು ಸೀಜ್ ಮಾಡಲಾಗಿದೆ. ಸಿರುತ್ತಾವೂರ್, ಕೊಡನಾಡಿನಲ್ಲಿರುವ 300 ಕೋಟಿ ಮೌಲ್ಯದ ಆಸ್ತಿಯೂ ಇದ್ರಲ್ಲಿ ಸೇರಿದೆ. ಈ ಸಂಬಂಧ ಪ್ರಕಟಣೆ ಬಿಡುಗಡೆ ಮಾಡಿರುವ ಐಟಿ ಇಲಾಖೆ, ಜಯಲಲಿತಾ ಆಪ್ತೆ ಶಶಿಕಲಾ ಅವರಿಗೆ ಸೇರಿದ್ದ 2 ಸಾವಿರ ಕೋಟಿ ರೂ. ಮೌಲ್ಯಸ ಆಸ್ತಿ ಮಾಡಿಕೊಂಡಿರುವುದಾಗಿ ತಿಳಿಸಿದೆ.

    ತಮಿಳುನಾಡು, ಪುದುಚೇರಿಯಲ್ಲಿ ಶಶಿಕಲಾ, ಪತಿ ನಟರಾಜನ್ ಹಾಗೂ ಸಂಬಂಧಿಗಳಿಗೆ ಸೇರಿದ್ದ ಹಲವಾರು ಸ್ಥಳಗಳ ಮೇಲೆ 2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 1,500 ಕೋಟಿ ರೂಪಾಯಿ ಆದಾಯ ತೆರಿಗೆ ವಂಚನೆ ಪತ್ತೆಯಾಗಿತ್ತು. ಅಲ್ಲದೇ 7 ಕೋಟಿ ರೂಪಾಯಿ ನಗದು, 5 ಕೋಟಿ ಮೌಲ್ಯದ ಆಭರಣಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಇದನ್ನೂ ಓದಿ: ಪರಪ್ಪನ ಅಗ್ರಹಾರದಿಂದ ಶಶಿಕಲಾ ಬಿಡುಗಡೆ ದಿನಾಂಕ ಫಿಕ್ಸ್

    ಮುಂದಿನ ವರ್ಷದ ಜನವರಿಯಲ್ಲಿ ಶಶಿಕಲಾ ಜೈಲಿಂದ ರಿಲೀಸ್ ಆಗಲಿದ್ದಾರೆ. ಶಶಿಕಲಾ ಬಿಡುಗಡೆಯ ಕುರಿತು ನರಸಿಂಹ ಮೂರ್ತಿ ಅವರು ಸಲ್ಲಿಸಲಾಗಿದ್ದ ಆರ್‍ಟಿಐ ಅರ್ಜಿಗೆ ಜೈಲಾಧಿಕಾರಿಗಳು ಉತ್ತರ ನೀಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜೈಲು ಶಿಕ್ಷೆಯೊಂದಿಗೆ 10 ಕೋಟಿ ರೂ. ದಂಡ ವಿಧಿಸಿದೆ. ಈ ಮೊತ್ತವನ್ನು ಶಶಿಕಲಾ ಪಾವತಿ ಮಾಡಿದರೆ ಅವರ ಬಿಡುಗಡೆಗೆ ಅವಕಾಶವಿದೆ. ಇಲ್ಲವಾದರೆ ಮತ್ತೆ ಒಂದು ವರ್ಷ ಶಶಿಕಲಾ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಪೆರೋಲ್ ದಿನಗಳನ್ನು ಲೆಕ್ಕಾಚಾರ ಮಾಡಿದರೂ ಅವರ ಬಿಡುಗಡೆ ದಿನಾಂಕ ಬದಲಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಈ ಹಿಂದೆ ಲಭಿಸಿತ್ತು.

  • ಟ್ರಬಲ್ ಶೂಟರ್ ಇಂದು ಸಿಬಿಐಗೆ ಲಾಕ್ ಆಗಿದ್ದು ಹೇಗೆ?

    ಟ್ರಬಲ್ ಶೂಟರ್ ಇಂದು ಸಿಬಿಐಗೆ ಲಾಕ್ ಆಗಿದ್ದು ಹೇಗೆ?

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಡಿಕೆ ಬ್ರದರ್ಸ್ ಗೆ ಶಾಕ್ ನೀಡಿದ್ದು, ಅಣ್ಣ-ತಮ್ಮನ ಮನೆ ಮೇಲೆ ದಾಳಿ ಮಾಡಿದ್ದಾರೆ. ಹಾಗಾದರೆ ಕೆಪಿಸಿಸಿ ಸರದಾರನ ಮನೆಯ ಮೇಲೆ ಸಿಬಿಐ ದಾಳಿಗೆ ಸಿಬಿಐ ಕೊಟ್ಟ ಕಾರಣವೇನು, ಟ್ರಬಲ್ ಶೂಟರ್ ಲಾಕ್ ಆಗಿದ್ದು ಹೇಗೆ ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

    ಅಕ್ರಮ ಆಸ್ತಿ ಗಳಿಕೆ ಹಾಗೂ ಸಾರ್ವಜನಿಕ ಹಣದ ದುರುಪಯೋಗ ಈ ಎರಡು ಕಾರಣಗಳೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಲು ಪ್ರಮುಖ ಕಾರಣವಾಗಿದೆ. ಮೊದಲು ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಐಟಿಯ ಎರಡು ದಾಖಲೆಗಳನ್ನು ಸಿಬಿಐ ಕೂಲಂಕುಷವಾಗಿ ಪರಿಶೀಲನೆ ನಡೆಸಿದೆ.

    ಮನಿ ಲಾಂಡ್ರಿಂಗ್ ತೆರಿಗೆ ವಂಚನೆ ಸಿಬಿಐ ತನಿಖೆಯ ವ್ಯಾಪ್ತಿಗೆ ಬರಲ್ಲ. ಹೀಗಾಗಿ ಸಿಬಿಐಗೆ ಈ ಹಿಂದಿನ ಎರಡು ಮಂತ್ರಿ ಪಟ್ಟ ಟಾರ್ಗೆಟ್ ಆಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಪವರ್ ಮಿನಿಸ್ಟರ್ ಹುದ್ದೆಯಲ್ಲಿರುವಾಗ ಡಿಕೆ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿ ವ ಡಿಕೆಶಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಬಂದಿತ್ತು. ಇದನ್ನೂ ಓದಿ: ಮನೆಯ ಇಟ್ಟಿಗೆಗಳನ್ನೂ ತೆಗೆದುಕೊಂಡು ಹೋಗಲಿ – ಸಿಬಿಐ ದಾಳಿಗೆ ಡಿಕೆಶಿ ತಾಯಿ ಗರಂ

    ಇಂಧನ ಇಲಾಖೆಯಲ್ಲಿರುವಾಗ ಡಿಕೆಶಿಯ ಒಟ್ಟು 60 ಕೋಟಿ ಅಕ್ರಮ ಹಣದ ವಹಿವಾಟಿನ ಬಗ್ಗೆ ಇಡಿ ಹಾಗೂ ಐಟಿ ಲೆಕ್ಕ ಹಾಕಿದೆ. ವಿದ್ಯುತ್ ಇಲಾಖೆಯಲ್ಲಿ ಏಜೆನ್ಸಿ ಮೂಲಕ ಭಾರೀ ಅಕ್ರಮ ಹಣ ವಹಿವಾಟಿನ ಆರೋಪ ಇದ್ದು, ಇದಕ್ಕೆ ಪೂರಕ ಸಾಕ್ಷಿಯನ್ನು ಇಡಿ ಹಾಗೂ ಐಟಿ ಇಲಾಖೆ ಕಲೆ ಹಾಕಿವೆ. ಅದರ ಆಧಾರದ ಮೇಲೆ ಇಂದು ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. . ಇದನ್ನೂ ಓದಿ:  ಡಿಕೆಶಿ ಮನೆಯಲ್ಲಿದ್ದ 50 ಲಕ್ಷ ಹಣ ಸೀಜ್?

    ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಅಕ್ರಮವಾಗಿ ಭೂ ವ್ಯವಹಾರದ ಆರೋಪವೂ ಕೇಳಿಬಂದಿತ್ತು. ಈ ಕುರಿತು ದಾಖಲಾದ ಪ್ರಕರಣಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿ ಕೇಳಲಾಗಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಈ ಹಿಂದೆ ಜಾರಿ ನಿರ್ದೇಶನಾಲಯ ಮತ್ತು ಐಟಿ ಇಲಾಖೆ ವಿಚಾರಣೆ ನಡೆಸಿತ್ತು. ಹಲವು ಬಾರಿ ಅವರ ಮನೆ ಮೇಲೆ ದಾಳಿ ನಡೆಸಿತ್ತು. ಆ ಪ್ರಕರಣದಲ್ಲಿ ಡಿಕೆಶಿ ತಿಹಾರ್ ಜೈಲಿಗೂ ಹೋಗಿಬಂದಿದ್ದರು. ಇದನ್ನೂ ಓದಿ: ಡಿಕೆಶಿಗೆ ಮೊದಲ ಅಗ್ನಿ ಪರೀಕ್ಷೆಯಲ್ಲಿ ಬಿಗ್ ಶಾಕ್ ಕೊಟ್ಟ ಸಿಬಿಐ

  • ‘ಚಮಕ್’ ಹುಡ್ಗಿ ಮನೆ ಮೇಲೆ ಐಟಿ ರೇಡ್- ಅಧಿಕಾರಿಗಳಿಗೆ ನಿರಾಸೆ

    ‘ಚಮಕ್’ ಹುಡ್ಗಿ ಮನೆ ಮೇಲೆ ಐಟಿ ರೇಡ್- ಅಧಿಕಾರಿಗಳಿಗೆ ನಿರಾಸೆ

    – ಮದ್ವೆ ಮನೆಯ ಕುಟುಂಬಸ್ಥರಲ್ಲಿ ಆತಂಕ

    ಮಡಿಕೇರಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ವೀರಾಜಪೇಟೆ ನಿವಾಸದ ಮೇಲೆ ಐಟಿ ದಾಳಿಯಾಗಿರುವುದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಈ ದಾಳಿಯಿಂದ ಏನಾಗಿದೆ, ಏತಕ್ಕಾಗಿ ದಾಳಿ ನಡೆದಿದೆ, ಏನೇನು ಲಭ್ಯವಾಗಿದೆ ಎಂಬಿತ್ಯಾದಿ ಕುತೂಹಲಗಳು ಸಹಜವಾಗಿಯೇ ಸೃಷ್ಟಿಸಿದೆ.

    ಐಟಿ ದಾಳಿ ನಡೆದಿರುವುದು ನಟಿ ರಶ್ಮಿಕಾ ವಿರುದ್ಧ ಮಾತ್ರವೇ, ಆಕೆಯ ತಂದೆ ಉದ್ಯಮಿಯಾಗಿರುವ ಮದನ್ ಮಂದಣ್ಣ ಅವರ ಕುರಿತಾಗಿಯೇ ಅಥವಾ ಇವರಿಬ್ಬರ ಮೇಲಿನ ಜಂಟಿ ದಾಳಿಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಅಲ್ಲದೆ ಈ ಕುಟುಂಬಕ್ಕೆ ಕೆಲವು ರಾಜಕೀಯ ವ್ಯಕ್ತಿಗಳ ನಂಟು ಇದ್ದು, ಈ ಕಾರಣದಿಂದಾಗಿ ದಾಳಿ ನಡೆಯಿತೇ ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮಾಹಿತಿಗಳ ಪ್ರಕಾರ ರಾಜಕೀಯ ನಂಟಿನ ಥಳುಕಿನ ಹಿನ್ನೆಲೆಯಲ್ಲಿ ದಾಳಿ ನಡೆದಿಲ್ಲ ಎನ್ನಲಾಗಿದೆ.

    ರಶ್ಮಿಕಾರ ವ್ಯವಹಾರದ ಕುರಿತಾಗಿಯೇ ದಾಳಿಗೆ ಮುಂದಾಗಲಾಗಿದೆ. ಇದರೊಂದಿಗೆ ಅವರ ತಂದೆಯ ವಹಿವಾಟು ಸೇರಿಕೊಂಡಿರುವುದಾಗಿ ತಿಳಿದು ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ನಡೆದಿರುವ ಐಟಿ ದಾಳಿಗಳನ್ನು ಅವಲೋಕಿಸಿದಾಗ ಇದೊಂದು ಕೇವಲ ಸಣ್ಣ ಪ್ರಮಾಣ ವಿಚಾರವೆನ್ನಲಾಗುತ್ತಿದೆ. ಈ ತನಕ ನಡೆದಿರುವ ದಾಳಿಗಳೆಲ್ಲವೂ ಬಹುತೇಕ 10 ಕೋಟಿಗಳಿಗೆ ಮಿಗಿಲಾದದ್ದಾಗಿದೆ. ಐಟಿ ದಾಳಿಯಲ್ಲಿ ಹಣ ಹಾಗೂ ವ್ಯವಹಾರ ಕೇವಲ ನಾಲ್ಕೈದು ಕೋಟಿಗಳು ಎಂದು ಹೇಳಲಾಗಿದೆ. ಅದರಲ್ಲೂ ಈ ಮೊತ್ತ ಕೇವಲ ಒಬ್ಬರದ್ದಲ್ಲ. ತಂದೆ ಹಾಗೂ ಮಗಳದ್ದು ಸೇರಿ ಇಷ್ಟು ಮೊತ್ತವೆಂದು ಹೇಳಲಾಗುತ್ತಿದೆ.

    ದಾಳಿ ಸಂದರ್ಭದಲ್ಲಿ ಮನೆಯಲ್ಲಿ 25 ರೂ. ಲಕ್ಷ ನಗದು ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಣ ಕೂಡ ಮದನ್ ಮಂದಣ್ಣ ಅವರ ಒಡೆತನದ ಸೆರಿನಿಟಿ ಹಾಲ್ ನಲ್ಲಿ ನಾಲ್ಕು-ಐದು ಮದುವೆಗೆ ಮುಂಗಡವಾಗಿ ಹಣ ನೀಡಿದ್ದು ಮನೆಯಲ್ಲಿ ಇಟ್ಟಿದ್ದರು ಎಂದು ಹೇಳಲಾಗಿದೆ. ಮದುವೆಗೆ ಇಟ್ಟಿದ್ದ ಹಣವನ್ನು ಐಟಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಹಾಲ್ ಗೆ ಮುಂಗಡವಾಗಿ ಹಣ ನೀಡಿರುವ ಮದುವೆ ಮನೆಯ ಕುಟುಂಬಸ್ಥರು ಆಂತಕಕ್ಕೆ ಒಳಗಾಗಿದ್ದಾರೆ.

    21 ರಂದು ವಿಚಾರಣೆ ನಡೆಸುವುದಾಗಿ ಐಟಿ ಅಧಿಕಾರಿಗಳು ಹೇಳಿದ್ದಾರೆ.

  • ನಟಿ ರಶ್ಮಿಕಾ ನಿದ್ದೆಗೆಡಿಸಿದ ಐಟಿ, ಮಧ್ಯರಾತ್ರಿವರೆಗೂ ವಿಚಾರಣೆ

    ನಟಿ ರಶ್ಮಿಕಾ ನಿದ್ದೆಗೆಡಿಸಿದ ಐಟಿ, ಮಧ್ಯರಾತ್ರಿವರೆಗೂ ವಿಚಾರಣೆ

    – ಸಿನಿಮಾ ಸಂಭಾವನೆ, ಹೂಡಿಕೆ ಬಗ್ಗೆ ಪ್ರಶ್ನೆಗಳ ಮಳೆ
    – ಇಂದೂ ಸಾನ್ವಿ ಸಂಪತ್ತಿನ ತಲಾಶ್

    ಮಡಿಕೇರಿ: ತೆಲುಗು ಸಿನಿಮಾದಲ್ಲಿ ಹವಾ ಎಬ್ಬಿಸಿರುವ ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣಗೆ ಶಾಕ್ ಕೊಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಇಂದು ಕೂಡ ಸಾನ್ವಿ ಮತ್ತು ಆಕೆಯ ಕುಟುಂಬದ ಆಸ್ತಿಪಾಸ್ತಿಯ ತಲಾಶ್ ಮುಂದುವರಿಸಲಿದ್ದಾರೆ.

    ಗರುವಾರ ಕೊಡಗು ಜಿಲ್ಲೆಯ ವಿರಾಜಪೇಟೆಯ ಕುಕ್ಲೂರಿನ ನಿವಾಸದಲ್ಲಿ ಬೆಳಗ್ಗೆ 7 ಗಂಟೆಗೆ ಐಟಿ ಟೀಂ ದಾಳಿ ಮಾಡಿತ್ತು. ಅಭಿಮಾನಿಗಳ ಅವತಾರದಲ್ಲಿ ಬೇಟೆಗಿಳಿದಿದ್ದ ಐಟಿ ಟೀಂ, ರಾತ್ರಿ 9.30ಕ್ಕೆ ರಶ್ಮಿಕಾ ವಿಚಾರಣೆ ಆರಂಭಿಸಿ ಅಲ್ಲೇ ಉಳಿದುಕೊಂಡಿದೆ. ರೇಡ್ ವೇಳೆ ಚೆನ್ನೈನಲ್ಲಿದ್ದ ರಶ್ಮಿಕಾಗೆ ತಕ್ಷಣವೇ ಬಂದು ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ಸೂಚಿಸಿದ್ದರು. ಇದನ್ನೂ ಓದಿ: ನನ್ನ ಅಕೌಂಟ್‍ನಲ್ಲಿ ದುಡ್ಡೇ ಇಲ್ಲ ಎಂದಿದ್ದ 5 ದಿನದಲ್ಲೇ ರಶ್ಮಿಕಾಗೆ ಐಟಿ ಶಾಕ್

    ವಿರಾಜಪೇಟೆಯಲ್ಲಿ ಕುಕ್ಲೂರಲ್ಲಿ ಐಷಾರಾಮಿ ಬಂಗಲೆ ಇದ್ದು, ಮೈತಾಡಿ ಅನ್ನೋ ಗ್ರಾಮದಲ್ಲಿ ಮೂರು ಎಕರೆ ಕಾಫಿ ತೋಟವಿದೆ. ಇತ್ತೀಚೆಗಷ್ಟೇ ಬಿಟ್ಟಂಗಾಲದಲ್ಲಿ 5.50 ಎಕರೆ ಜಾಗ ಖರೀದಿಸಿದ್ದ ರಶ್ಮಿಕಾ ತಂದೆ ಮದನ್ ಮಂಜಣ್ಣ, ಪೆಟ್ರೋಲ್ ಬಂಕ್, ಶಾಲೆ ನಿರ್ಮಾಣಕ್ಕೆ ಯೋಚಿಸಿದ್ದರು. ವಿರಾಜಪೇಟೆಯಲ್ಲಿ ಸೆರಿನಿಟ್ ಹಾಲ್ ಹೆಸರಿನ ಐಷಾರಾಮಿ ಕಲ್ಯಾಣ ಮಂಟಪವಿದ್ದು ಇಲ್ಲಿನ ಒಂದು ದಿನದ ಬಾಡಿಗೆಯೇ ಒಂದೂವರೆ ಲಕ್ಷ ರೂಪಾಯಿ. ವರ್ಷದ ಹಿಂದೆಯಷ್ಟೇ ವಿರಾಜಪೇಟೆಯ ವಿಜಯನಗರದಲ್ಲಿರುವ ಮನೆಯನ್ನು ರಶ್ಮಿಕಾ ತಂದೆ ಒಂದೂವರೆ ಕೋಟಿ ರೂಪಾಯಿಗೆ ಮಾರಿದ್ದರು. ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಐಟಿ ಡ್ರಿಲ್- 10 ಜನ ಅಧಿಕಾರಿಗಳಿಂದ ವಿಚಾರಣೆ