Tag: it

  • ಚೀಟಿ ಹರಿದ ಪ್ರಕರಣದಲ್ಲಿ ಜಾಮೀನು ಮಂಜೂರು- ಸಚಿವ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್

    ಚೀಟಿ ಹರಿದ ಪ್ರಕರಣದಲ್ಲಿ ಜಾಮೀನು ಮಂಜೂರು- ಸಚಿವ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್

    ಬೆಂಗಳೂರು: ಐಟಿ ದಾಳಿಗೆ ಸಂಬಂಧಿಸಿದಂತೆ ಈಗಲ್‍ ಟನ್ ರೆಸಾರ್ಟ್‍ನಲ್ಲಿ ಸಾಕ್ಷ್ಯ ನಾಶ ಮಾಡಿದ ಪ್ರಕರಣದಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

    25 ಸಾವಿರ ರೂ. ಶ್ಯೂರಿಟಿ, ಸಾಕ್ಷಿ ನಾಶ ಮಾಡಬಾರದು, ತನಿಖಾಧಿಕಾರಿಗಳ ಮುಂದೆ ಸರಿಯಾಗಿ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತುಗಳೊಂದಿಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಇಬ್ಬರು ಶ್ಯೂರಿಟಿಗೆ ಕೋರ್ಟ್ ಸೂಚನೆ ನೀಡಿದೆ.

    ಡಿಕೆಶಿ ಪರ ವಕೀಲರ ವಾದವೇನು?: ಡಿಕೆ ಶಿವಕುಮಾರ್ ಅವರಿಗೆ ಸಾಕ್ಷ್ಯ ನಾಶ ಮಾಡುವ ಯಾವುದೇ ಉದ್ದೇಶ ಇರಲಿಲ್ಲ. ಈ ವಿಚಾರವಾಗಿ ಐಡಿಯಾಲಜಿ ಅಧಿಕಾರಿಗಳ ಮುಂದೆ ಈಗಾಗಲೇ ಹೇಳಿಕೆ ನೀಡಿದ್ದಾರೆ. ಆ ವಿಚಾರದಲ್ಲಿ ಹೇಳಿಕೆ ನೀಡಲು ಕಾಲಾವಕಾಶ ಕೇಳಿದ್ದಾರೆ. ದಾಳಿ ವೇಳೆ ಸಿಕ್ಕಿರೋ ಯಾವ ದಾಖಲೆಗಳಲ್ಲಿಯೂ ಡಿಕೆಶಿ ಹೆಸರಿಲ್ಲ. ದೂರಿಗೂ ಮತ್ತು ತನಿಖೆ ನಡೆಸುತ್ತಿರುವ ವಿಧಾನಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಈಗಲ್‍ ಟನ್ ರೆಸಾರ್ಟ್ ನಲ್ಲಿ ಸಿಕ್ಕಿದ್ದ ಚೀಟಿ ಇಟ್ಟುಕೊಂಡು ತನಿಖೆ ದಾರಿ ತಪ್ಪಿಸುತ್ತಿದ್ದಾರೆ. ಆ ಚೀಟಿ ಕೇವಲ 20 ರೂಪಾಯಿ ಮೌಲ್ಯದ್ದು. ಡಿಕೆಶಿಗೆ ಸಂಬಂಧ ಇಲ್ಲದ ವ್ಯಕ್ತಿಗಳನ್ನು ತಳುಕು ಹಾಕಿ ತನಿಖೆ ದಾರಿ ತಪ್ಪಿಸುತ್ತಿದ್ದಾರೆ. ಡಿಕೆಶಿ ವಿರುದ್ಧ ದಾಖಲಾಗಿರುವ ಎಲ್ಲಾ ಐಟಿ ಸೆಕ್ಷನ್‍ಗಳೂ ಜಾಮೀನು ಕೇಸುಗಳೇ ಎಂಬುದು ಡಿಕೆಶಿ ಪರ ವಕೀಲರ ವಾದವಾಗಿತ್ತು.

    ಐಟಿ ಪರ ವಕೀಲರ ವಾದವೇನು?: ಡಿಕೆಶಿ ವಿರುದ್ಧ ಹಲವು ತನಿಖೆಗಳು ಅಗಬೇಕು. ಈಗಾಗಲೇ ಸಾಕ್ಷಿ ನಾಶಪಡಿಸುವ ಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ಡಿಕೆಶಿಗೆ ಬೇಲ್ ನೀಡಬೇಡಿ. ಇದೇನೂ ರಾಜಕೀಯ ಪ್ರೇರಿತ ದಾಳಿ ಅಲ್ಲ. ಉದ್ದೇಶ ಇಟ್ಕೊಂಡು ದಾಳಿಯನ್ನು ನಡೆಸಿಲ್ಲ. ಎಲ್ಲದಕ್ಕೂ ಸರಿಯಾದ ಸಾಕ್ಷ್ಯಗಳಿವೆ. ಪ್ರಶ್ನೆ ಕೇಳಿದರೆ ಹಾರಿಕೆ ಉತ್ತರ ಬರುತ್ತೆ. ಭಯದಿಂದ ಚೀಟಿ ಹರಿದಿದ್ದೇನೆ ಎಂದಿದ್ದಾರೆ. ಅಕ್ರಮ ಮಾಡಿಲ್ಲ ಅಂದ್ರೆ ಭಯ ಪಡುವ ಅವಶ್ಯಕತೆ ಇರಲಿಲ್ಲ. ಐಟಿ ಅಧಿಕಾರಿಗಳ ಮುಂದೆ ಡಿಕೆ ತಪ್ಪೊಪ್ಪಿಗೆಯೂ ಆಗಿದೆ. ಡಿಕೆಶಿ ವಿರುದ್ದ ಇನ್ನಷ್ಟು ತನಿಖೆ ಆಗಬೇಕಿದೆ ಎಂದು ಐಟಿ ಪರ ವಕೀಲರು ವಾದ ಮಾಡಿದ್ದರು.

    ಆರೋಪಿಯ ಕಸ್ಟೋಡಿಯಲ್ ಇಂಟ್ರಾಗೇಷನ್ ಅಗತ್ಯ ಇದೆ.ಯಾವುದೇ ಕಾರಣಕ್ಕೂ ಜಾಮೀನು ನೀಡಬೇಡಿ. ಆರೋಪಿ ಪ್ರಬಲ ಆಗಿರೋದ್ರಿಂದ ಜಾಮೀನು ನೀಡಿದ್ರೆ ಪ್ರಕರಣ ಹಾಳಾಗುತ್ತೆ. ಡಿಕೆಶಿಗೆ ಐಟಿ ಅಧಿಕಾರಿಗಳ ದಾಳಿ ಬಗ್ಗೆ ಮುನ್ಸೂಚನೆ ಇತ್ತು. ಐಟಿ ಅಧಿಕಾರಿ ಎದುರೇ ಚೀಟಿ ಹರಿದು ಹಾಕಿದ್ರು. ದಾಖಲೆ ಹರಿದು ಹಾಕಿದ್ದು ಸಾಕ್ಷ್ಯ ನಾಶ ಅಲ್ಲದೆ ಮತ್ತೇನು? ನೀವು ಸಾಕ್ಷಿ ಏಕೆ ನಾಶ ಮಾಡಿದ್ರಿ ಎಂಬ ಪ್ರಶ್ನೆಗೆ ಆಗತಾನೆ ನಿದ್ದೆಯಿಂದ ಎದ್ದಿದ್ದೆ, ಗಾಬರಿಯಲ್ಲಿ ಹರಿದೆ ಅಂತ ಹಾರಿಕೆಯ ಉತ್ತರ ನೀಡಿದ್ದಾರೆ. ಪದೇ ಪದೇ ಕೇಳಿದ್ರೂ ಯಾವುದೇ ಉತ್ತರ ಕೊಡಲಿಲ್ಲ ಎಂದು ವಾದಿಸಿದ್ದರು.

    ಕೆಲವೊಂದು ಸೆಕ್ಷನ್ ಗಳು ಜಾಮೀನಿನ ಕೇಸಾಗಿದ್ದರೂ ತನಿಖೆಯ ಅಗತ್ಯವಿದೆ. ಈಗಲ್ ಟನ್ ರೆಸಾರ್ಟ್ ನಲ್ಲಿ ಸಿಕ್ಕಂತಹ ಚೀಟಿ ಕೇವಲ 20 ರುಪಾಯಿ ಬೆಲೆ ಬಾಳುವ ದಾಖಲೆಯಲ್ಲ. ಅದು 10 ಕೋಟಿಗು ಹೆಚ್ಚು ಬೆಲೆ ಬಾಳೋ ಚೀಟಿಯಾಗಿದೆ. ಅದರಲ್ಲಿ ಹಲವು ಕಂಪನಿಗಳ ಜೊತೆ ಕೋಟ್ಯಂತರ ರುಪಾಯಿ ವ್ಯವಹಾರದ ಕುರುಹುಗಳಿವೆ. ಹಾಗಾಗಿ ಜಾಮೀನು ನೀಡಬೇಡಿ ಎಂದು ಐಟಿ ಪರ ವಕೀಲರು ಮನವಿ ಮಾಡಿದ್ದರು.

    ಆದ್ರೆ ಇದೀಗ ಕೋರ್ಟ್ ಸಚಿವ ಡಿಕೆ ಶಿವಕುಮಾರ್ ಗೆ ಜಾಮೀನು ಮಂಜೂರು ಮಾಡಿದ್ದು, ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇನ್ನೊಂದು ಕಡೆ ಐಟಿ ಇಲಾಖೆ ಡಿಕೆಶಿಗೆ ಇನ್ನೊಮ್ಮೆ ಡ್ರಿಲ್ ಮಾಡಲು ನಿರ್ಧಾರ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಐಟಿ ಇಲಾಖೆಗೆ ನೀಡಿದ್ದ ಹೇಳಿಕೆಗಳು ಗೊಂದಲಕಾರಿಯಾಗಿರೋದ್ರಿಂದ ಡಿಕೆಶಿ ಅವರನ್ನು ಇನ್ನಷ್ಟು ಪ್ರಶ್ನೆ ಮಾಡಲು ಸಕಲ ತಯಾರಿ ನಡೆಸಿದೆ ಎಂದು ಹೇಳಲಾಗಿದೆ.

  • ಜನಾಶೀರ್ವಾದ ಯಾತ್ರೆ ಶುರುಮಾಡಿದ್ದಕ್ಕೆ ಐಟಿ ಕಾಟ, ಇಡಿ- ಸಿಬಿಐಗೆ ರೆಫರ್ ಮಾಡ್ಲಿ, ಪರಪ್ಪನ ಅಗ್ರಹಾರಕ್ಕಾದ್ರೂ ಕಳಿಸಲಿ ಹೆದ್ರಲ್ಲ- ಡಿಕೆಶಿ

    ಜನಾಶೀರ್ವಾದ ಯಾತ್ರೆ ಶುರುಮಾಡಿದ್ದಕ್ಕೆ ಐಟಿ ಕಾಟ, ಇಡಿ- ಸಿಬಿಐಗೆ ರೆಫರ್ ಮಾಡ್ಲಿ, ಪರಪ್ಪನ ಅಗ್ರಹಾರಕ್ಕಾದ್ರೂ ಕಳಿಸಲಿ ಹೆದ್ರಲ್ಲ- ಡಿಕೆಶಿ

    ಬೆಂಗಳೂರು: ಐಟಿ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಜನಾಶೀರ್ವಾದ ಯಾತ್ರೆ ಶುರುಮಾಡಿದ್ದಕ್ಕೆ ಐಟಿ ಕಾಟ ಶುರುವಾಗಿದೆ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಜಾರಿ ನಿರ್ದೇಶನಾಲಯ(ಇಡಿ), ಸಿಬಿಐಗಾದ್ರೂ ರೆಫರ್ ಮಾಡಲಿ, ಪರಪ್ಪನ ಅಗ್ರಹಾರಕ್ಕಾದ್ರೂ ಕಳುಹಿಸಲಿ, ಇದಕ್ಕೆಲ್ಲಾ ಈ ಡಿಕೆ ಶಿವಕುಮಾರ್ ಜಗ್ಗೋ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

    ಬೆಂಗಳೂರಲ್ಲಿ ಮಾತನಾಡಿದ ಅವರು, ಆಗಸ್ಟ್ 2 ರಂದು ಐಟಿ ದಾಳಿ ಆಗಿತ್ತು. ಪಕ್ಷ ನೀಡಿದ ಜವಾಬ್ದಾರಿಯಂತೆ ಗುಜರಾತ್ ಶಾಸಕರು ನಮ್ಮ ಆಶ್ರಯದಲ್ಲಿದ್ದರು. ಆಗ ಐಟಿ ರೇಡ್ ಆಗಿತ್ತು. ಸಹಜವಾಗಿ ಕೆಲವು ಪೇಪರ್ ಗಳು ಇದ್ದವು. ಐಟಿಯವರು ಏನೇನು ತಗೊಂಡು ಹೋಗಿದ್ದಾರೆ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿದ ನಂತರ ನಿನ್ನೆ ಇದು ನನಗೆ ಗೊತ್ತಾಗಿದೆ. ಜನಾಶಿರ್ವಾದ ಯಾತ್ರೆ ಶುರು ಮಾಡಿದ್ದಕ್ಕೆ ಇದು ಶುರು ಆಗಿದೆ. ನಾನು ನಂಬಿರುವ ದೇವರು, ಜನ ಹಾಗೂ ಶಕ್ತಿ ನನ್ನನ್ನು ಕಾಪಾಡುತ್ತೆ. ಸದ್ಯಕ್ಕೆ ಏನು ಜಾಸ್ತಿ ಮಾತಾಡಲ್ಲ ಎಂದು ಹೇಳಿದ್ರು.

    ಅಲ್ಲಿ ಏನು ಹರಿದು ಹಾಕಿದೆ ಅಂತ ಯಾರು ನೋಡಿದ್ದಾರೆ? ಆ ಮಾಹಿತಿ ಕೇಂದ್ರ ಸಚಿವರಿಗೆ, ಪಾರ್ಲಿಮೆಂಟ್‍ಗೆ ಹೇಗೆ ಹೋಯ್ತು? ಯಾರ್ಯಾರಿಗೆ ಖುಷಿ ಆಗಿದೆಯೋ ಆಗಲಿ. ನಾನು ಯಾವುದಕ್ಕೂ ಬಗ್ಗಲ್ಲ ಅಂತ ಹೇಳಿದ್ರು.

    ಬೇರೆ ಬೇರೆ ಪಕ್ಷದವರು ಬೇರೆ ಬೇರೆ ಮಾತಾಡಿದ್ದಾರೆ, ಎಲ್ಲಾ ಗೊತ್ತು. ಅವನು ಚುನಾವಣೆ ಟೈಮಲ್ಲಿ ಜೈಲಿಗೆ ಹೋಗ್ತಾನೆ ಅಂದಿದ್ದಾರೆ. ಎಲ್ಲಾ ನನಗೆ ಗೊತ್ತು, ನಾನು ಅದರ ಬಗ್ಗೆ ಮಾತಾಡಲ್ಲ. ನಾನು ಧರ್ಮದಿಂದ ನಡೆಯುವವನು. ಧರ್ಮದ ಹಾದಿಯಲ್ಲೇ ರಾಜಕಾರಣ ಮಾಡುವವನು. ಬಿಜೆಪಿ ಐಟಿ ಬಳಸುತ್ತಿದೆ ಎಂಬುದರಲ್ಲಿ ತೆರೆ ಮರೆ ಏನು ಇಲ್ಲ. ನಾನು ಡಿಸಿಪ್ಲಿನ್ಡ್ ಟ್ಯಾಕ್ಸ್ ಪೇಯರ್. ನನ್ನ ಎಲ್ಲಾ ವ್ಯವಹಾರ ಪಾರದರ್ಶಕ. ಜೈಲು, ಸಿಬಿಐ, ಇಡಿ, ವಿರೋಧ ಪಕ್ಷ ಇದಕ್ಕೆಲ್ಲಾ ಟೆನ್ಸ್ ಆಗಲ್ಲ. ನಾನು ಯಾರು ಅಂತ ನಿಮಗೆ ಗೊತ್ತಿಲ್ಲ. ಹಳ್ಳಿಯಿಂದ ನಡೆದುಕೊಂಡು ಬಂದಿದ್ದೇನೆ. ರಾಜಕಾರಣ ಮಾಡಬೇಕು ಅಂತಲೇ ಬೆಂಗಳೂರಿಗೆ ಬಂದಿದ್ದೇನೆ ಎಂದರು.

    ನಾನು ಏನನ್ನು ಹರಿದು ಹಾಕಿದ್ದೀನೋ ಇಲ್ಲವೋ. ಆದರೆ ಕೇಸ್ ಹಾಕಲು 7 ತಿಂಗಳು ಬೇಕೇನ್ರಿ? ನನ್ನ ವಿರುದ್ಧ ಬಿಜೆಪಿ ನಾಯಕರು ತೆರೆ ಮರೆಯಲ್ಲಿ ಅಲ್ಲ ಬಹಿರಂಗವಾಗೇ ಷಡ್ಯಂತ್ರ ಮಾಡುತ್ತಿರೋದು ಎಲ್ಲರಿಗೂ ಗೊತ್ತೇ ಇದೆ. ನಾನು ನೇರವಾಗಿ ಯಾರ ವಿರುದ್ಧ ಏನೂ ಹೇಳಲ್ಲ. ಐಟಿ ಪಂಚನಾಮೆಯ ವರದಿಯೇ ಇನ್ನೂ ಬಂದಿಲ್ಲ. ನನಗೂ ಕಾನೂನು ಗೊತ್ತಿದೆ. ನಾನು ಕಾನೂನು ಉಲ್ಲಂಘಿಸಿಲ್ಲ ಎಂದು ಡಿಕೆಶಿ ಹೇಳಿದ್ರು. ಇದನ್ನೂ ಓದಿ: ಪವರ್ ಮಿನಿಸ್ಟರ್ ಗೆ ಐಟಿ ಇಲಾಖೆಯಿಂದ ಬಿಗ್ ಶಾಕ್!

     

  • ಐಟಿ ಉದ್ಯೋಗಕ್ಕೆ ಗೂಗಲ್ ಆರಂಭಿಸಿದೆ ಕೋರ್ಸ್: ಏನಿದು ಆನ್‍ಲೈನ್ ಕೋರ್ಸ್? ಶುಲ್ಕ ಎಷ್ಟು? ಇಲ್ಲಿದೆ ವಿವರ

    ಐಟಿ ಉದ್ಯೋಗಕ್ಕೆ ಗೂಗಲ್ ಆರಂಭಿಸಿದೆ ಕೋರ್ಸ್: ಏನಿದು ಆನ್‍ಲೈನ್ ಕೋರ್ಸ್? ಶುಲ್ಕ ಎಷ್ಟು? ಇಲ್ಲಿದೆ ವಿವರ

    ನವದೆಹಲಿ: ಎಂಜಿನಿಯರಿಂಗ್ ಪದವಿ ಓದಿರುವ ವಿದ್ಯಾರ್ಥಿಗಳು ಕೇವಲ ಪಠ್ಯದಲ್ಲಿ ಮಾತ್ರ ಪರಿಣಿತರಾಗಿದ್ದು ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳು ಅವರಲ್ಲಿ ಇಲ್ಲ ಎನ್ನುವ ಆರೋಪಗಳನ್ನು ಐಟಿ ಕಂಪೆನಿಗಳು ಮಾಡುವುದು ನಿಮಗೆ ಗೊತ್ತೆ ಇದೆ. ಈ ಆರೋಪದಿಂದ ಮುಕ್ತರನ್ನಾಗಿಸಲು ಗೂಗಲ್ ಮುಂದಾಗಿದ್ದು ಆನ್ ಲೈನ್ ಕೋರ್ಸ್ ಆರಂಭಿಸಿದೆ.

    ಸಂಪೂರ್ಣವಾಗಿ ಆನ್‍ಲೈನ್ ಮೂಲಕವೇ ನಡೆಯುವ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಲಭ್ಯವಾಗಲಿದೆ. ಈ ಮೂಲಕ ಪ್ರಸಿದ್ಧ ಐಟಿ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಅವಕಾಶ ಸಿಗಲಿದೆ.

    ಗೂಗಲ್ ಅನುಭವಿ ತಜ್ಞರು ಕೋರ್ಸ್ ಪಠ್ಯವನ್ನು ಸಿದ್ಧಪಡಿಸಿದ್ದು, ಈ ಕೋರ್ಸ್‍ನಲ್ಲಿ 6 ವಿಷಯಗಳು ಲಭ್ಯವಿದೆ. ಅಭ್ಯರ್ಥಿಗಳು ತಮಗೇ ಇಷ್ಟವಾದ ವಿಷಯವನ್ನು ಆಯ್ಕೆ ಮಾಡವಬಹುದಾಗಿದೆ. ಅಲ್ಲದೇ 6 ವಿಷಯಗಳನ್ನು ಏಕಕಾಲದಲ್ಲಿ ಆಯ್ಕೆ ಮಾಡುವ ವಿಶೇಷ ಅವಕಾಶವನ್ನು ನೀಡಲಾಗಿದೆ.

    ಸಾಂದರ್ಭಿಕ ಚಿತ್ರ

    ಈ ತರಬೇತಿಯಲ್ಲಿ ಮೂಲಭೂತ ಕಂಪ್ಯೂಟರ್ ತಾಂತ್ರಿಕ ಅಂಶಗಳಾದ ಬೇಸಿಕ್ ಕಂಪ್ಯೂಟರ್ ಹಾರ್ಡ್‍ವೇರ್, ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್ಸ್, ಸಿಸ್ಟಮ್ ಅಡ್ಮಿನಿಸ್ಟ್ರೇಷನ್, ಐಟಿ ಅಟೊಮೇಷನ್ ಮತ್ತು ಸೆಕ್ಯೂರಿಟಿ ಅಂಶಗಳ ತರಬೇತಿ ನೀಡಲಾಗುತ್ತದೆ.

    ಪ್ರತಿ ವಿದ್ಯಾರ್ಥಿಗೆ ಉತ್ತಮ ತರಬೇತಿ ನೀಡುವ ಮೂಲಕ ಐಟಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಲು ಬೇಕಾದ ಕೌಶಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಆನ್ ಲೈನ್ ಕೋರ್ಸ್ ಮುಕ್ತಾಯವಾದ ಬಳಿಕ ಉದ್ಯೋಗಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೈತ್ಯ ಕಂಪನಿಗಳಾಗಿರುವ ಬ್ಯಾಂಕ್ ಆಫ್ ಆಮೆರಿಕ, ವಾಲ್‍ಮಾರ್ಟ್, ಸ್ಪ್ರಿಂಟ್, ಜಿಇ ಡಿಜಿಟಲ್, ಪಿಎನ್‍ಸಿ ಬ್ಯಾಂಕ್, ಇನ್ಫೋಸಿಸ್, ಟಿಇಕೆ ಸಿಸ್ಟಮ್ಸ್, ಯುಪಿಸಿ ಸೇರಿದಂತೆ ವಿವಿಧ ಐಟಿ ಕಂಪೆನಿ ಹಾಗೂ ಗೂಗಲ್ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

    ಸಾಂದರ್ಭಿಕ ಚಿತ್ರ

    ಕೋರ್ಸ್ ಅವಧಿ: ಈ ತರಬೇತಿ ಕಾರ್ಯಕ್ರಮದಲ್ಲಿ 6 ವಿಷಯಗಳಿಗೂ ಸೇರಿ 64 ತರಗತಿಗಳು, ಪ್ರಾಜೆಕ್ಟ್ ಗಳನ್ನು ಹೊಂದಿದೆ. ಪ್ರತಿ ಅಭ್ಯರ್ಥಿಯು ವಾರದಲ್ಲಿ 8 ರಿಂದ 10 ಗಂಟೆಗಳ ಕಾಲ ಭಾಗವಹಿಸಿದರೆ 8 ರಿಂದ 12 ತಿಂಗಳುಗಳಲ್ಲಿ ತರಬೇತಿಯನ್ನು ಪೂರ್ಣಗೊಳಿಸಬಹುದು. ಅವಶ್ಯಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅವಧಿಯಲ್ಲಿ ನೀಡಲಾಗುವ ವಿಷಯದಲ್ಲಿ ಪ್ರಾವಿಣ್ಯತೆ ಹೊಂದಿದ್ದರೆ ಅಂತಹ ವಿಷಯಗಳನ್ನು ಸ್ಕಿಪ್ ಮಾಡುವ ಅವಕಾಶಗಳನ್ನು ನೀಡಲಾಗಿದೆ.

    ಕೋರ್ಸ್ ವೆಚ್ಚ: ಒಂದು ಕೋರ್ಸ್ ಪೂರ್ಣಗೊಳಸಿಲು 49 ಅಮೆರಿಕನ್ ಡಾಲರ್ (ಅಂದಾಜು 3,100 ರೂ.) ವೆಚ್ಚವಾಗುತ್ತದೆ. ಕೋರ್ಸ್‍ನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ಆರ್ಥಿಕ ಸಹಾಯವನ್ನು ಸಂಸ್ಥೆ ನೀಡುವುದಿಲ್ಲ. ಅಲ್ಲದೇ ಕೋರ್ಸ್ ಕುರಿತ ತೆರಿಗೆ, ಸೇವಾ ಶುಲ್ಕಗಳು ಅನ್ವಯವಾಗುತ್ತದೆ. ಮೊದಲಿಗೆ ಒಂದು ಕೋರ್ಸ್ ಆಯ್ಕೆ ಮಾಡಿಕೊಂಡು ನಂತರ ಬೇರೆ ವಿಷಯಗಳ ಆಯ್ಕೆಗೆ ಅವಕಾಶ ನೀಡಲಾಗಿದೆ.

    ಶುಲ್ಕ ಪಾವತಿ ಹೇಗೆ? ಕೋರ್ಸ್ ಬಗ್ಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಸ್ಥೆಯ coursera.org ವೆಬ್‍ಸೈಟ್ ಗೆ ಭೇಟಿ ತಮ್ಮ ಗೂಗಲ್ ಅಕೌಂಟ್‍ಗಳ ಮೂಲಕ ಲಾಗಿನ್ ಮಾಡಬಹುದಾಗಿದೆ. ಅಲ್ಲದೇ ಅಭ್ಯರ್ಥಿಗಳು ತಮ್ಮ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಶುಲ್ಕ ಪಾವತಿ ಮಾಡಬಹುದು. ಜನವರಿ 24 ರಿಂದ ಈ ಕೋರ್ಸ್‍ಗಳು ಆರಂಭವಾಗಿದೆ.

    ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕ್ಲಿಕ್ ಮಾಡಿ: www.coursera.org

    ಸಾಂದರ್ಭಿಕ ಚಿತ್ರ
  • ಎಂಜಿನಿಯರಿಂಗ್ ಓದುತ್ತಿರೋ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್: ಜಾಬ್‍ಗೆ ಚಿಂತೆ ಮಾಡಬೇಡಿ

    ಎಂಜಿನಿಯರಿಂಗ್ ಓದುತ್ತಿರೋ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್: ಜಾಬ್‍ಗೆ ಚಿಂತೆ ಮಾಡಬೇಡಿ

    ನವದೆಹಲಿ: ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ/ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. 2018ರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಯುವ ಜನತೆಗೆ ಉದ್ಯೋಗವಕಾಶ ರೂಪಿಸುವ ದೃಷ್ಟಿಯಲ್ಲಿ 2017ನೇ ವರ್ಷವು ನಿರಾಸೆ ಮೂಡಿಸಿದ್ದರೂ, 2018 ರಲ್ಲಿ ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಗಳು ಲಭ್ಯವಾಗಲಿದೆ. ಹಾಗೆಯೇ ಐಟಿ ಕ್ಷೇತ್ರಕ್ಕೆ ಕಾಲಿಡುವ ಹೊಸ ಉದ್ಯೋಗಿಗಳ ಸಂಖ್ಯೆಯು ಶೇ. 20 ರಷ್ಟು ಹೆಚ್ಚಳವಾಗಲಿದೆ ಎಂದು ಟೀಮ್‍ಲೀಸ್ ಸರ್ವಿಸ್ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಕೆಯಲ್ಲಿ ಉಂಟಾಗಿರುವ ಹೆಚ್ಚಳವೇ ಕಾರಣವಾಗಿದೆ. ಅಲ್ಲದೇ ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಪಡೆದು ಮುಂದುವರೆಯಬೇಕಾದರೆ ಹೊಸ ಕೌಶಲ್ಯಗಳನ್ನು ಕಲಿಯುವುದು ಕಡ್ಡಾಯ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: 6 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ತೆಗೆಯಲಿದೆ ಕಾಗ್ನಿಜೆಂಟ್! 

    ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾದರೆ, ಆಟೋಮೆಷನ್ ಬಳಕೆಯಿಂದಾಗಿ ಮೊಬೈಲ್ ತಯಾರಿಕಾ ಕ್ಷೇತ್ರ, ಸ್ಪಾರ್ಟ್ ಆಪ್, ಫಿನೆಟೆಕ್ ಸ್ಪಾರ್ಟ್ ಆಪ್ (ಫಿನ್‍ಟೆಕ್) ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಕಡಿತಗೊಳ್ಳುವ ಸಾಧ್ಯತೆಗಳಿವೆ. ಆರ್ಥಿಕ ಕ್ಷೇತ್ರ, ಡಿಜಿಟಲ್ ವ್ಯವಹಾರ, ಡಿಜಿಟಲ್ ಸೇವೆಗಳಲ್ಲಿ ಉಂಟಾಗಿರುವ ಹೊಸ ಆರ್ಥಿಕ ಹೂಡಿಕೆಗಳು ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಟೀಮ್‍ಲೀಸ್ ಸರ್ವಿಸ್ ಕಂಪೆನಿಯ ಜನರಲ್ ಮ್ಯಾನೇಜರ್ ಆಲ್ಕಾ ಧಿಂಗ್ರಾ ಹೇಳಿದ್ದಾರೆ. ಇದನ್ನೂ ಓದಿ:  ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    ಭಾರತದ ಐಟಿ ಕ್ಷೇತ್ರವೊಂದರಲ್ಲೇ ಸುಮಾರು 1.8 ರಿಂದ 2 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ. ಡಿಜಿಟಲ್ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ನವ ತಂತ್ರಜ್ಞಾನದ ಪ್ರಾವೀಣ್ಯತೆಯುಳ್ಳ ಶೇ.50 ಮಂದಿ ಹೆಚ್ಚುವರಿಯಾಗಿ ಅಗತ್ಯವಿದ್ದು, 2020ರ ವೇಳೆಗೆ ಅಂತಾರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಕ್ಷೇತ್ರ ಒಂದರಲ್ಲೇ ವಿಶ್ವದಲ್ಲಿ 23 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: ಐಟಿ ಕಂಪೆನಿಗಳಲ್ಲಿ ಭಾರೀ ವೇತನ ಏರಿಕೆ ಬೇಡ: ನಾರಾಯಣ ಮೂರ್ತಿ

    ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?

    ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

    ಇದನ್ನೂ ಓದಿ: ಟೆಕ್ಕಿಗಳನ್ನು ಮನೆಗೆ ಕಳುಹಿಸಬೇಡಿ, ಸಮಸ್ಯೆಗೆ ಪರಿಹಾರವಿದೆ: ಕಂಪೆನಿಗಳಿಗೆ ಇನ್ಫಿ ಮೂರ್ತಿ ಸಲಹೆ

  • ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ

    ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ

    ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

     

    ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದಲ್ಲಿರೋ ಲಾವಣ್ಯ ಎಂಬುವರ ಮನೆಯಲ್ಲಿ ದರೋಡೆ ನಡೆದಿದೆ. ಕಳೆದ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಇನ್‍ಕಮ್ ಟ್ಯಾಕ್ಸ್ ನವರು ಎಂದು ಹೇಳಿ ಮನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ಲಾವಣ್ಯ ಅವರ ಮಗ ಜಗನ್ ಕೈಕಾಲು ಕಟ್ಟಿ ದರೋಡೆ ಮಾಡಿದ್ದಾರೆ.

    ಈ ಬಗ್ಗೆ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕರ್ನಾಟಕದಿಂದ ಕೇರಳಕ್ಕೆ ರಾತ್ರಿ ಬಸ್ಸಲ್ಲಿ ಅಕ್ರಮವಾಗಿ 4 ಬ್ಯಾಗಲ್ಲಿ ಸಾಗಾಟವಾಗ್ತಿತ್ತು 34 ಕೆಜಿ ಚಿನ್ನ!

    ಕರ್ನಾಟಕದಿಂದ ಕೇರಳಕ್ಕೆ ರಾತ್ರಿ ಬಸ್ಸಲ್ಲಿ ಅಕ್ರಮವಾಗಿ 4 ಬ್ಯಾಗಲ್ಲಿ ಸಾಗಾಟವಾಗ್ತಿತ್ತು 34 ಕೆಜಿ ಚಿನ್ನ!

    ಬೆಂಗಳೂರು: ಕರ್ನಾಟಕದಿಂದ ಕೇರಳಕ್ಕೆ 34 ಕೆಜಿ ಚಿನ್ನವನ್ನು ಅಕ್ರಮವಾಗಿ ಬಸ್ ನಲ್ಲಿ ಸಾಗಿಸುತ್ತಿದ್ದ ತಂಡವನ್ನು ಕೇರಳದ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಚಿನ್ನ ಹಾಗೂ ಮಾದಕ ವಸ್ತು ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಕೇರಳದ ವಯನಾಡಿನ ಅಬಕಾರಿ ಗುಪ್ತ ದಳದ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಸ್ ನಲ್ಲಿ ತಪಾಸಣೆ ನಡೆಸಿದ ವೇಳೆ 4 ಬ್ಯಾಗ್ ಗಳಲ್ಲಿ 34 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿನ ತೋಲ್ಪೆಟ್ಟಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ 11 ಕೋಟಿ ಮೌಲ್ಯದ 34 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಇಂಟೆಲಿಜೆನ್ಸ್ ಇನ್ಸ್ ಪೆಕ್ಟರ್ ಎ.ಜೆ.ಶಾಜಿ ಹೇಳಿದ್ದಾರೆ. ಅಕ್ರಮ ಚಿನ್ನ ಹಾಗೂ ಮಾದಕ ವಸ್ತುಗಳ ಸಾಗಾಟ ರಾತ್ರಿಕಾಲದಲ್ಲೇ ನಡೆಯುತ್ತವೆ. ಕೇರಳ ಹಾಗೂ ಕರ್ನಾಟಕ ಗಡಿಯಲ್ಲಿ ರಾತ್ರಿ ವೇಳೆಯಲ್ಲಿ ತೆರೆದಿರುವ ಚೆಕ್ ಪೋಸ್ಟ್ ತೋಲ್ಪೆಟ್ಟಿ ಮಾತ್ರ. ಹೀಗಾಗಿ ಯಾವುದೇ ಅಕ್ರಮ ಸಾಗಾಟ ನಡೆದರೂ ಈ ಚೆಕ್ ಪೋಸ್ಟ್ ಮೂಲಕವೇ ನಡೆಯಬೇಕು. ಮುಂಜಾನೆ 4 ಗಂಟೆಗೆ ಈ ದಾರಿಯಲ್ಲಿ ಸಂಚರಿಸುತ್ತಿದ್ದ ಲಕ್ಷುರಿ ಬಸ್ ತಪಾಸಣೆ ವೇಳೆ ನಮಗೆ 34 ಕೆಜಿ ಚಿನ್ನ ಸಿಕ್ಕಿದೆ ಎಂದು ಹೇಳಿದ್ದಾರೆ.

    ಬಂಧಿತರನ್ನು ಶಂಕೇಶ್ ಬಿ ಜೈನ್, ಅಭಯ್ ಎಂ ಜೈನ್, ಚಾಂಬರಂ ದೇವಸಿ, ಮದನ್ ಲಾಲ್ ದೇವಸಿ, ವಿಕ್ರಮ್ ಸಿ ಹಾಗೂ ಕಮಲೇಶ್ ಜೈನ್ ಎಂದು ಗುರುತಿಸಲಾಗಿದೆ. ಆರೋಪಿಗಳು 2 ಕಾಲೇಜ್ ಬ್ಯಾಗ್ ಹಾಗೂ 2 ಟ್ರಾವೆಲ್ ಬ್ಯಾಗ್ ಸೇರಿ ಒಟ್ಟು 4 ಬ್ಯಾಗ್ ಗಳಲ್ಲಿ ಯಾರಿಗೂ ಸಂಶಯ ಬಾರದಂತೆ ಪ್ಯಾಕ್ ಮಾಡಿದ್ದರು. ಬಂಧಿತರಲ್ಲಿ ಓರ್ವ ಬೆಂಗಳೂರಿನ ಜ್ಯುವೆಲ್ಲರಿ ಮಳಿಗೆಯೊಂದರ ಮಾಲೀಕರ ಪುತ್ರ ಎಂದು ತನಿಖೆ ವೇಳೆ ಬಯಲಾಗಿದೆ ಎಂದು ಇನ್ಸ್ ಪೆಕ್ಟರ್ ಶಾಜಿ ಹೇಳಿದ್ದಾರೆ.

    ಬಂಧಿತರು ಮಾದಕ ವಸ್ತುಗಳನ್ನು ಕೂಡಾ ಅಕ್ರಮವಾಗಿ ಸಾಗಿಸುತ್ತಿದ್ದರು. ಸದ್ಯ ಬಂಧಿತರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿಗೂ ಮಾಹಿತಿ ನೀಡಿದ್ದೇವೆ ಎಂದು ಶಾಜಿ ಹೇಳಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಚಿನ್ನದ ಅಕ್ರಮ ಸಾಗಾಟ ಕೇರಳದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ಚಿನ್ನವನ್ನು ಈ ರೀತಿ ಅಕ್ರಮವಾಗಿ ಸಾಗಾಟ ಮಾಡುತ್ತಾರೆ. 11 ಕೋಟಿ ಮೌಲ್ಯದ ಚಿನ್ನಕ್ಕೆ ಸುಮಾರು 65 ಲಕ್ಷ ತೆರಿಗೆ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರೆಸಲಿದ್ದಾರೆ.

     

  • ಬೇನಾಮಿದಾರರ ಮಾಹಿತಿ ಕೊಟ್ರೆ 1 ಕೋಟಿ ರೂ. ಬಹುಮಾನ!

    ಬೇನಾಮಿದಾರರ ಮಾಹಿತಿ ಕೊಟ್ರೆ 1 ಕೋಟಿ ರೂ. ಬಹುಮಾನ!

    ನವದೆಹಲಿ: ಕೇಂದ್ರ ಸರ್ಕಾರ ಕಾಳಧನಿಕರ ವಿರುದ್ಧ ತನ್ನ ಹೋರಾಟವನ್ನು ಮುಂದುವರೆಸುವ ಸೂಚನೆಯನ್ನು ನೀಡಿದೆ. ಸರ್ಕಾರವು ಈಗಾಗಲೇ ಕಾಳಧನಿಕರ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು ಪೂರ್ಣ ಪ್ರಮಾಣದಲ್ಲಿ ಬೇನಾಮಿ ಅಸ್ತಿಯ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಸರ್ಕಾರ ಹೊಸ ಹೊಸ ಮಾರ್ಗಗಳ ಮೂಲಕ ಬೇನಾಮಿ ಅಸ್ತಿಯ ಮಾಹಿತಿಯನ್ನು ಸಂಗ್ರಹಿಸುವ ಯೋಜನೆಗಳನ್ನು ಸಿದ್ಧಪಡುಸುತ್ತಿದೆ. ಅದರಂತೆ ಬೇನಾಮಿ ಅಸ್ತಿ ಕುರಿತು ಮಾಹಿತಿ ನೀಡಿದವರಿಗೆ ನಗದು ರೂಪದ ಬಹುಮಾನವನ್ನು ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭಿಸಿದೆ.

    ಈ ನಗದು ಬಹುಮಾನ ಯೋಜನೆಯನ್ನು ಮುಂದಿನ ತಿಂಗಳು ಜಾರಿಗೆ ತರುವ ಸಾಧ್ಯತೆಗಳಿವೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿಬಿಡಿಟಿ)ನ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಬೇನಾಮಿ ಅಸ್ತಿ ಕುರಿತ ಮಾಹಿತಿಯನ್ನು ನೀಡಿದ ವ್ಯಕ್ತಿಗೆ ಕನಿಷ್ಟ 15 ಲಕ್ಷ ರೂ. ನಿಂದ 1 ಕೋಟಿ ರೂ. ಗಳವರೆಗೆ ಬಹುಮಾನ ಸಿಗುತ್ತದೆ. ಅಲ್ಲದೇ ಬೇನಾಮಿ ಅಸ್ತಿಯ ಕುರಿತು ಮಾಹಿತಿ ನೀಡಿದ ವ್ಯಕ್ತಿಯ ಗುರುತನ್ನು ಇಲಾಖೆಯು ಗೌಪ್ಯವಾಗಿಡುತ್ತದೆ. ಆ ವ್ಯಕ್ತಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಮಾಹಿತಿ ನೀಡಿದ ವ್ಯಕ್ತಿಯ ಗುರುತು ಹೊರಬರುವುದಿಲ್ಲ ಎಂಬ ಆಶ್ವಾಸನೆಯನ್ನು ನೀಡಿದೆ.

    2016ರಲ್ಲಿ ಪರಿಚಯಿಸಲಾದ ಬೇನಾಮಿ ಅಸ್ತಿ ಕಾಯ್ದೆ ಅಡಿಯಲ್ಲಿ ಈ ಅವಕಾಶ ಇರಲಿಲ್ಲ. ಆದರೂ ಬೇನಾಮಿ ಅಸ್ತಿ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ರೂಢಿಯನ್ನು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ಪಾಲಿಸಿಕೊಂಡು ಬಂದಿದೆ. ಆದರೂ ಇದರಿಂದ ಅಷ್ಟೇನೂ ಲಾಭವಾಗಿಲ್ಲ.

    ಆದಾಯ ತೆರಿಕೆ ಇಲಾಖೆಗೆ ಬೇನಾಮಿ ಆಸ್ತಿಯನ್ನು ಹೊಂದಿರುವವರ ಮಾಹಿತಿ ಸಂಗ್ರಹಿಸುವುದೇ ಬಹುದೊಡ್ಡ ಕಷ್ಟದ ಕೆಲಸವಾಗಿದೆ. ಹೀಗಾಗಿ ಮಾಹಿತಿದಾರರ ಸಹಾಯ ಪಡೆದರೆ ಮತ್ತಷ್ಟು ವೇಗವಾಗಿ, ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಬೇನಾಮಿದಾರರನ್ನು ಪತ್ತೆ ಮಾಡಬಹುದು ಎಂದು ಸಿಬಿಡಿಟಿ ಅಧಿಕಾರಿ ಹೇಳಿದ್ದಾರೆ.

    ಈ ಯೋಜನೆಗೆ ಹಣಕಾಸು ಸಚಿವಾಲಯದದಿಂದ ಅನುಮತಿ ಸಿಗಬೇಕಿದೆ. ಹಣಕಾಸು ಸಚಿವರು ಒಪ್ಪಿಗೆ ಸೂಚಿಸಿದ ಕೂಡಲೇ ಸಿಬಿಡಿಟಿ ಇದನ್ನು ಘೋಷಸಿದಲಿದೆ. ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿದೆ.

  • ಗುಜರಾತ್ ಕಾಂಗ್ರೆಸ್ ಶಾಸಕರಿದ್ದ ರೆಸಾರ್ಟ್ ಮೇಲೆ ಐಟಿ ದಾಳಿ – ಸಚಿವ ಡಿಕೆಶಿ ನಿವಾಸಗಳ ಮೇಲೂ ರೇಡ್

    ಗುಜರಾತ್ ಕಾಂಗ್ರೆಸ್ ಶಾಸಕರಿದ್ದ ರೆಸಾರ್ಟ್ ಮೇಲೆ ಐಟಿ ದಾಳಿ – ಸಚಿವ ಡಿಕೆಶಿ ನಿವಾಸಗಳ ಮೇಲೂ ರೇಡ್

    – ಸಿಆರ್‍ಪಿಎಫ್ ಭದ್ರತೆಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ

    ಬೆಂಗಳೂರು: ಆಪರೇಷನ್ ಕಮಲದ ಭೀತಿಯಿಂದ ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿ ಬೀಡುಬಿಟ್ಟಿರುವ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

    ಬೆಳ್ಳಂಬೆಳಗ್ಗೆ ರೆಸಾರ್ಟ್‍ಗೆ ಬಂದ ಅಧಿಕಾರಿಗಳು ಪ್ರತಿಯೊಬ್ಬ ಶಾಸಕರ ರೂಂಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ರೆಸಾರ್ಟ್‍ನಿಂದ ಹೊರಹೋಗುವ ಪ್ರತಿಯೊಂದು ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ. ಸಿಆರ್‍ಪಿಎಫ್ ಭದ್ರತೆಯಲ್ಲಿ ದಾಳಿ ನಡೆಸಿದ್ದಾರೆ. 5 ಇನೋವಾ ಕಾರ್ ಗಳಲ್ಲಿ ಆಗಮಿಸಿರುವ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.

    ಗುಜರಾತ್ ಕಾಂಗ್ರೆಸ್ ಶಾಸಕರ ಉಸ್ತುವಾರಿ ಹೊತ್ತಿರುವ ರಾಜ್ಯದ ಪವರ್ ಮಿನಿಸ್ಟರ್‍ಗೂ ಕೂಡ ಐಟಿ ಬೃಹತ್ ಶಾಕ್ ನೀಡಿದೆ. ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ಬೆಂಗಳೂರಿನ ಸದಾಶಿವನಗರದ ಡಿ.ಕೆ ಶಿವಕುಮಾರ್ ನಿವಾಸ, ರಾಮನಗರ, ಕನಕಪುರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಕೆಶಿ ಅಷ್ಟೇ ಅಲ್ಲ ಸಹೋದರ ಡಿ.ಕೆ ಸುರೇಶ್ ಕನಕಪುರ ನಿವಾಸ, ಡಿಕೆಶಿ ಆಪ್ತ ಎಂಎಲ್‍ಸಿ ರವಿ ನಿವಾಸ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 7 ಗಂಟೆಯಿಂದ 20 ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

    ಸಚಿವ ಎಂಬಿ ಪಾಟೀಲ್, ಸಚಿವ ಕೆಜೆ ಜಾರ್ಜ್, ಸಚಿವ ಮಹದೇವಪ್ಪ ಹಾಗೂ ಎಂಎಲ್‍ಸಿ ಗೋವಿಂದರಾಜು ನಿವಾಸಗಳ ಮೇಲೂ ಐಟಿ ದಾಳಿ ನಡೆಯೋ ಸಾಧ್ಯತೆ ಇದೆ.

  • ಗುಜರಾತ್ ಕೈ ಪಡೆಗೆ ರೆಸಾರ್ಟ್ ಭಾಗ್ಯದ ಎಫೆಕ್ಟ್ – ಸಚಿವ ಡಿಕೆಶಿ ಮೇಲೆ ಐಟಿ ಕಣ್ಣು

    ಗುಜರಾತ್ ಕೈ ಪಡೆಗೆ ರೆಸಾರ್ಟ್ ಭಾಗ್ಯದ ಎಫೆಕ್ಟ್ – ಸಚಿವ ಡಿಕೆಶಿ ಮೇಲೆ ಐಟಿ ಕಣ್ಣು

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಐಟಿ ಆಟ ಶುರುವಾಗುವಂತಿದೆ. ಗುಜರಾತ್ ಕೈ ಶಾಸಕರಿಗೆ ರೇಸಾರ್ಟ್‍ನಲ್ಲಿ ಸೌಕರ್ಯ ಕಲ್ಪಿಸಿರುವ ಕಾಂಗ್ರೆಸ್ ನಾಯಕರಿಗೆ ಐಟಿ ಬಿಸಿ ತಟ್ಟೋ ಸಾಧ್ಯತೆ ಇದೆ.

    ಪ್ರಮುಖವಾಗಿ ಗುಜರಾತ್ ಕೈ ಶಾಸಕರನ್ನು ಸೇಫ್ ಗಾರ್ಡ್ ಮಾಡ್ತಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತವರ ಸಹೋದರ ಕಮ್ ಸಂಸದ ಡಿಕೆ ಸುರೇಶ್ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣು ಬಿದ್ದಿದೆ. ಗುಜರಾತ್ ಕೈ ಶಾಸಕರ ರೆಸಾರ್ಟ್ ಖರ್ಚು ವೆಚ್ಚದ ವಿವರಗಳನ್ನ ಮೊನ್ನೆ ಡಿಕೆ ಶಿವಕುಮಾರ್ ಬಯಲು ಮಾಡಿದ್ದರು. ಇದನ್ನೇ ನೆಪ ಮಾಡಿಕೊಂಡು ರೇಡ್ ಮಾಡಲು ಐಟಿ ಇಲಾಖೆ ಸಜ್ಜಾಗುತ್ತಿದೆ.

    ಅಲ್ಲದೇ, ಗೋವಿಂದರಾಜು ಡೈರಿಯಲ್ಲಿ ಸಿಕ್ಕ ಎಂಬಿಪಿ, ಕೆಜೆಜೆ, ಆರ್‍ವಿಡಿ, ಡಿಕೆಎಸ್, ಹೆಚ್‍ಸಿಎಂ ಇನಿಷಿಯಲ್‍ಗಳ ಜಾಡು ಹಿಡಿದು ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೂ ಮುನ್ನವೇ ಐಟಿ ರೇಡ್ ನಡೆಯುತ್ತೆ ಎನ್ನಲಾಗುತ್ತಿದೆ.

    ಅತ್ತ ಸತತ 5ನೇ ದಿನವೂ ರೆಸಾರ್ಟ್‍ನಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರು ಆರಾಮಾಗಿ ಇದ್ದಾರೆ.

    ಡಿಕೆ ಸುರೇಶ್

  • ಗೋವಿಂದರಾಜು ಡೈರಿ ಪಡೆಯಲು ಬೆಂಗಳೂರು ಪೊಲೀಸರಿಂದ ಕಾನೂನು ಸಮರ ಆರಂಭ!

    ಗೋವಿಂದರಾಜು ಡೈರಿ ಪಡೆಯಲು ಬೆಂಗಳೂರು ಪೊಲೀಸರಿಂದ ಕಾನೂನು ಸಮರ ಆರಂಭ!

    ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ ಸದ್ದಿಲ್ಲದೆ ಸುದ್ದಿ ಮಾಡಿದ್ದ ಗೋವಿಂದರಾಜು ಡೈರಿ ಈಗ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಡೈರಿಯ ಹಿಂದೆ ದುಂಬಾಲು ಬಿದ್ದಿರೋ ಪೊಲೀಸ್ರು ಕಾನೂನು ಸಮರ ಈಗ ಆರಂಭಿಸಿದ್ದಾರೆ.

    ಕಾಂಗ್ರೆಸ್ ಎಂಎಲ್‍ಸಿ ಗೋವಿಂದರಾಜು ಡೈರಿ ಪುರಾಣ ನಿಮಗೆಲ್ಲಾ ಗೊತ್ತೇ ಇದೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯದಿಂದ ಕಳುಹಿಸಿದ ಹಣದ ಬಗ್ಗೆ ಪಿನ್ ಟು ಪಿನ್ ಮಾಹಿತಿ ಉಲ್ಲೇಖವಾಗಿದೆ. ಆದ್ರೆ ಅದೆಲ್ಲವನ್ನು ಎಂಎಲ್‍ಸಿ ಗೋವಿಂದರಾಜು ತಳ್ಳಿಹಾಕಿದ್ರು. ಡೈರಿ ನನ್ನದಲ್ಲ ಐಟಿ ಅಧಿಕಾರಿಗಳೇ ನನ್ನ ಮನೆಗೆ ತಂದು ಇಟ್ಟು ಆ ಬಳಿಕ ಲೀಕ್ ಮಾಡಿದ್ದಾರೆ ಅಂತಾ ಇಂದಿರಾನಗರ ಪೊಲೀಸರಿಗೆ ಗೋವಿಂದ ರಾಜು ದೂರು ನೀಡಿದ್ರು. ಇದೀಗ ಡೈರಿ ಪರಿಶೀಲನೆ ಮಾಡ್ಬೇಕು ನಮಗೆ ಹಸ್ತಾಂತರ ಮಾಡಿ ಅಂತಾ ಸಿಆರ್‍ಪಿಸಿ ಕಾನೂನಿನ ಅನ್ವಯ ಐಟಿ ಅಧಿಕಾರಿಗಳ ವಿರುದ್ಧ ಪೊಲೀಸರೇ ಹೋರಾಟಕ್ಕೆ ಇಳಿದಿದ್ದಾರೆ. ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಸಿಕ್ಕಿದ್ದ ಡೈರಿಯನ್ನ ಬೆಂಗಳೂರು ಪೊಲೀಸರು ತನಿಖೆಗೆ ಬೇಕೆಂದು ಐಟಿಗೆ ಕಾನೂನು ವ್ಯಾಪ್ತಿಯಲ್ಲೇ ಲಿಖಿತವಾಗಿ ಬೇಡಿಕೆ ಇಟ್ಟಿದ್ದಾರೆ.

    ಇದನ್ನೂ ಓದಿ:  ಕಾಂಗ್ರೆಸ್ – ಬಿಜೆಪಿ ನಡುವಿನ ಡೈರಿ ಜಗಳಕ್ಕೆ ಮೋದಿ ಎಂಟ್ರಿ!

    ನಾವೂ ತನಿಖೆ ಮಾಡ್ಬೇಕು: ಮೌಖಿಕವಾಗಿ ಕೇಳಿದ್ರೂ ಪ್ರಯೋಜನವಾಗದಿದ್ದಾಗ ಕಾನೂನು ವ್ಯಾಪ್ತಿಯಲ್ಲೇ ಲಿಖಿತವಾಗಿ ಬೇಡಿಕೆ ಇಟ್ಟಿದ್ದಾರೆ. ಇಷ್ಟು ದಿನ ನೀವು ತನಿಖೆ ನಡೆಸುತ್ತಿದ್ದ ಕಾರಣಕ್ಕೆ ಡೈರಿ ಕೊಡೋದು ಸೂಕ್ತವಲ್ಲ ಎಂದಿದ್ದೀರಿ. ಆ ವೇಳೆ ನಾವು ತೊಂದರೆ ಕೊಡೋದು ಸರಿಯಲ್ಲ ನಾವೂ ಕೂಡ ಸುಮ್ಮನೆ ಇದ್ವಿ. ತನಿಖೆಯ ನೆಪದಲ್ಲಿ ಕಾಲ ತಳ್ಳುತ್ತಿರುವ ನೀವು ನಮ್ಮ ತನಿಖೆಯನ್ನು ಹಳ್ಳ ಹಿಡಿಸುತ್ತಿದ್ದೀರಿ ಇದು ಸರಿಯಲ್ಲ ಅಂತಾ ಪೊಲೀಸರು ಆದಾಯ ಇಲಾಖೆಗೆ ಖಾರವಾಗಿ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂಓದಿ:  ಡೈರಿಯಲ್ಲಿರೋದು ಗೋವಿಂದರಾಜ್ ಹಸ್ತಾಕ್ಷರ!

    ಡೈರಿ ಸಿಕ್ಕ ದಿನದಿಂದಲೂ ನನ್ನದಲ್ಲ ಅಂತಾ ವಾದಿಸುತ್ತಿರುವ ಎಂಎಲ್‍ಸಿ ಗೋವಿಂದರಾಜುಗೆ ಐಟಿ ಅಧಿಕಾರಿಗಳು ಇದು ನಿಮ್ಮದೇ ಕೈ ಬರಹ ಅಂತ ಹೇಳುವ ಮೂಲಕ ಶಾಕ್ ಕೊಟ್ಟಿತ್ತು. ಇದೀಗ ಬೆಂಗಳೂರು ಪೊಲೀಸ್ರು ಅದೇ ಡೈರಿ ಕೇಸ್ ತನಿಖೆ ಮಾಡಲು ಮುಂದಾಗಿರೋದ್ರಿಂದ ಮುಂದೆ ಯಾವ ತಿರುವು ಪಡೆಯುತ್ತೆ ಅನ್ನೋದಷ್ಟೆ ಈಗಿರುವ ಕುತೂಹಲ.

    ಇದನ್ನೂ ಓದಿ: ಯಾರಿಗೆ ಎಷ್ಟು ಹಣ ಎಂಬ ಸೀಕ್ರೆಟ್ ಮಾಹಿತಿ ನೀಡಿದ್ದು ಡೈರಿ ಎ/ಕೆಜಿ/03

    ಇದನ್ನೂ ಓದಿ: ಡೈರಿ ಡೈನಮೈಟ್ ಸ್ಫೋಟಕ್ಕೆ ಊಹಿಸಲಸಾಧ್ಯ ಟ್ವಿಸ್ಟ್: ಗೋವಿಂದರಾಜು ಹೇಳಿಕೆಯಿಂದಲೇ ಸರ್ಕಾರಕ್ಕೆ ಕಂಟಕ!