Tag: IT Ride

  • ಐಟಿ ದಾಳಿಗೆ ಒಳಗಾಗಿರೋ ಡಿಕೆಶಿಗೆ ಹೊಸ ಸಂಕಷ್ಟ!

    ಐಟಿ ದಾಳಿಗೆ ಒಳಗಾಗಿರೋ ಡಿಕೆಶಿಗೆ ಹೊಸ ಸಂಕಷ್ಟ!

    ಬೆಂಗಳೂರು: ಐಟಿ ದಾಳಿಗೆ ಒಳಗಾಗಿರೋ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಅವರಿಗೆ ಹೊಸ ಕಂಟಕವೊಂದು ಶುರುವಾಗಿದೆ. ಡಿಕೆಶಿ ಅವ್ಯವಹಾರದ ಬೆನ್ನತ್ತಿರೋ ಐಟಿ ಅಧಿಕಾರಿಗಳಿಗೆ ದೆಹಲಿಯಲ್ಲಿರೋ ಪ್ಲ್ಯಾಟ್ ಒಂದು ಹೊಸ ಅಸ್ತ್ರವಾಗಿ ದೊರೆತಿದೆ.

    ಹೌದು. ದೆಹಲಿಯಲ್ಲಿ ಡಿಕೆಶಿ ಆಪ್ತರು 4 ಫ್ಲ್ಯಾಟ್ ಖರೀದಿ ಮಾಡಿದ್ದಂತೆ. ಹೈಕಮಾಂಡ್‍ನ ಪ್ರಭಾವಿಗಳು, ಅಧಿಕಾರಿಗಳನ್ನು ಖುಷಿ ಪಡಿಸೋಕೆ ಪ್ರತಿಷ್ಠಿತ ಸಪ್ದರ್‍ಜಂಗ್ ರಸ್ತೆಯಲ್ಲಿ ಡಿಕೆಶಿ ಆಪ್ತರ ಐಷಾರಾಮಿ ಫ್ಲ್ಯಾಟ್ ಗಳನ್ನು ಖರೀದಿಸಿದ್ದಾರೆ. ಆ ಫ್ಲ್ಯಾಟ್‍ಗೆ ಬರೋ ವಿವಿಐಪಿ ಅತಿಥಿಗಳಿಗೆ ಸ್ವರ್ಗವೇ ನಾಚುವಂತ ಆತಿಥ್ಯ, ಮನರಂಜನೆ ಸಿಗುತ್ತಿತ್ತಂತೆ. ತಮ್ಮ ಆಪ್ತರನ್ನು ಡಿಕೆಶಿ ಆ ಫ್ಲ್ಯಾಟ್‍ಗೆ ಕಳಿಸ್ತಿದ್ರಂತೆ. ಮನರಂಜನೆಗಾಗಿಯೇ ಫ್ಲ್ಯಾಟ್ ಖರೀದಿ ಮಾಡಲಾಗಿದೆ ಅಂತ ಐಟಿ ದಾಖಲಿಸಿರೋ ದೂರಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಡಿಕೆಶಿ ವಿಚಾರವಾಗಿ ಹೇಗೆ ನಡೆದುಕೊಳ್ಳಬೇಕು – ಎಚ್‍ಡಿಕೆ, ರೇವಣ್ಣಗೆ ದೇವೇಗೌಡರ ಕ್ಲಾಸ್!

    ಆದ್ರೆ ಅಲ್ಲಿ ಯಾವ ರೀತಿಯ ಮನರಂಜನೆ ಸಿಗ್ತಾ ಇತ್ತು ಅನ್ನೋ ಐಟಿ ಅಧಿಕಾರಿಗಳ ಪ್ರಶ್ನೆಗೆ ಡಿಕೆಶಿ ಅವರು ಇದೂವರೆಗೂ ಉತ್ತರ ಕೊಟ್ಟಿಲ್ಲ. ಐಟಿ ಇಲಾಖೆಯವರು ನಾನಾ ರೀತಿಯ ಪ್ರಶ್ನೆಗಳನ್ನು ಡಿಕೆಶಿ ಮುಂದೆ ಇಟ್ಟಿದ್ದರು. ಆದ್ರೆ ಇದ್ಯಾವುದಕ್ಕೂ ಡಿಕೆಶಿ ಹಾಗೂ ಅವರ ಆಪ್ತರು ಸ್ಪಷ್ಟ ಉತ್ತರ ನೀಡಿಲ್ಲ. ಇದನ್ನೂ ಓದಿ: ಹೆದರಿಸಿದರೆ ಡಿಕೆಶಿ ಹೆದರಲ್ಲ, ನನ್ನ ಹತ್ರನೂ ಕೆಲವರ ಡೈರಿಗಳಿವೆ : ಡಿಕೆ ಶಿವಕುಮಾರ್

    ದೆಹಲಿಯಲ್ಲಿ ಡಿಕೆಶಿ ಅವರ 4 ಪ್ಲ್ಯಾಟ್ ಗಳಿದ್ದು, ಅದರಲ್ಲಿ ಎರಡನ್ನು ಕೇವಲ ಹಣ ಇಡಲು ಬಳಸಿಕೊಳ್ಳಲಾಗಿತ್ತು ಅನ್ನೋ ಮಾಹಿತಿ ಲಭಿಸಿದೆ. ಇದರಲ್ಲಿ ಒಂದು ಆಪ್ತರದ್ದಾದ್ರೆ, ಇನ್ನೊಂದು ಡಿಕೆಶಿಯವರದ್ದಾಗಿತ್ತು ಎಂಬುದಾಗಿ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: ಹವಾಲ ವ್ಯವಹಾರದಲ್ಲಿ ಡಿಕೆ ಶಿವಕುಮಾರ್ ಭಾಗಿ?

  • ಹೆದರಿಸಿದರೆ ಡಿಕೆಶಿ ಹೆದರಲ್ಲ, ನನ್ನ ಹತ್ರನೂ ಕೆಲವರ ಡೈರಿಗಳಿವೆ : ಡಿಕೆ ಶಿವಕುಮಾರ್

    ಹೆದರಿಸಿದರೆ ಡಿಕೆಶಿ ಹೆದರಲ್ಲ, ನನ್ನ ಹತ್ರನೂ ಕೆಲವರ ಡೈರಿಗಳಿವೆ : ಡಿಕೆ ಶಿವಕುಮಾರ್

    ಬೆಂಗಳೂರು: ನಾನು ಕಾನೂನಿಗೆ ಬೆಲೆ ಕೊಡುವವನು. ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಹತ್ತಿರವೂ ಕೆಲವರ ಡೈರಿಗಳಿವೆ. ಈ ಕುರಿತು ಸಮಯ ಬಂದಾಗ ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಬಹಿರಂಗ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಆರ್ಥಿಕ ಅಪರಾಧಗಳ ನ್ಯಾಯಾಲಯದಿಂದ ಸಮನ್ಸ್ ವಿಚಾರ ಕುರಿತು ವಿಧಾನಸೌಧದಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನ್ಯಾಯಾಲಯದಿಂದ ಸಮನ್ಸ್ ಬರಬಹುದು. ಆದರೆ ಈಗ ಯಾವುದೋ ನೋಟಿಸ್ ಒಂದು ಬಂದಿದೆ. ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕೆಂದು ನನಗೆ, ತಾಯಿ ಹಾಗೂ ಸಹೋದರನಿಗೆ ನೋಟಿಸ್ ಬಂದಿದೆ. ನ್ಯಾಯಾಲಯದಿಂದ ಸಮನ್ಸ್ ಇನ್ನೆರಡು ದಿನಗಳಲ್ಲಿ ಬರಬಹುದು. ಪೋಸ್ಟಲ್ ಮೂಲಕ ಸಮನ್ಸ್ ಬರಬಹುದು. ವಿಚಾರಣೆಗೆ ಹಾಜರಾಗುತ್ತೇವೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಹೇಳಿದರು.   ಇದನ್ನು ಓದಿ: ಹವಾಲ ವ್ಯವಹಾರದಲ್ಲಿ ಡಿಕೆ ಶಿವಕುಮಾರ್ ಭಾಗಿ?

    ಇದೇ ಐಟಿ ದಾಳಿ ವೇಳೆ ಸಿಕ್ಕ ಡೈರಿ ಕುರಿತು ಪ್ರತಿಕ್ರಿಯೆ ನೀಡಿ, ನನ್ನ ಬಳಿಯೂ ಕೆಲವರ ಡೈರಿಗಳಿವೆ. ಯಾರು? ಯಾರಿಗೆ? ಏನೇನು? ಬರೆದಿದ್ದಾರೆ ಎಂಬುವುದ ಸಹ ಗೊತ್ತಿದೆ. ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಅದನ್ನು ಬಹಿರಂಗ ಮಾಡುತ್ತೇನೆ. ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಯಾವುದಕ್ಕೂ ಹೆದರುವುದಿಲ್ಲ. ನಾನು ಕಾನೂನಿಗೆ ಬೆಲೆ ಕೊಡುವವನು. ಕೋರ್ಟ್ ನಲ್ಲಿ ಪ್ರಕರಣ ಇರುವ ಕಾರಣ ಈ ಕುರಿತು ಏನು ಹೇಳುವುದಿಲ್ಲ ಎಂದರು.

    https://www.youtube.com/watch?v=ZbAbYdv64Ik

    ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ನಡೆಯುತ್ತಿರುವುದರಿಂದ ಇದಲ್ಲವಾಗಿದ್ದರೆ ನಾನೇನು ಅನ್ನೋದನ್ನ ತೋರಿಸುತ್ತಿದ್ದೆ. ತಮ್ಮ ಆಪ್ತರಿಗೆ ಹಲವರು ಸಾಕಷ್ಟು ಸಮಸ್ಯೆ ನೀಡುತ್ತಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿದ್ದಾರೆ. ಆದರೆ ಸಮನ್ಸ್ ಇನ್ನೂ ಯಾವುದು ಬಂದಿರುವ ಕುರಿತು ಮಾಹಿತಿ ಇಲ್ಲ. ಯಾರೋ ಏನೋ ಹೇಳಿಕೆ ನೀಡಿದ್ದಾರೆ ಎಂದ ತಕ್ಷಣ ನನ್ನನ್ನು ಪ್ರಕರಣದಲ್ಲಿ ಹೊಣೆ ಮಾಡಲು ಸಾಧ್ಯವಿಲ್ಲ. ಇದೆಲ್ಲಾ ಯಾಕೆ ಮಾಡುತ್ತಿದ್ದಾರೆ ಎಂಬುವುದು ನನಗೆ ಗೊತ್ತಿಗೆ ಎಂದು ಹೇಳಿದರು.

    ರಾಜೀನಾಮೆಗೆ ಒತ್ತಾಯ: ಬಿಜೆಪಿ ನಾಯಕರು ತಮ್ಮ ರಾಜೀನಾಮೆಗೆ ಒತ್ತಾಯ ಮಾಡಿದ್ದರೆ ಅವರ ನಾಯಕರ ಮೇಲೆ ಎಷ್ಟು ಪ್ರಕರಣಗಳಿದೆ ಎಂಬುವುದನ್ನು ಪ್ರಶ್ನೆ ಮಾಡಿದ್ದೀರಾ. ಅವರದ್ದೇ ಪಕ್ಷದ ಮುಖ್ಯಮಂತ್ರಿ ಆಗಿದ್ದವರ ಮೇಲೆ ಎಷ್ಟು ಕೇಸ್ ಗಳು ಇವೆ ಎಂಬುವುದು ಗೊತ್ತಿದೆ ಎಂದು ಹೇಳಿದ್ದಾರೆ.

  • ರಾಜ್ಯದ ಪವರ್ ಫುಲ್ ಸಚಿವರ ಗುಟ್ಟು ರಟ್ಟು – ಐಟಿ ಇಲಾಖೆ ಡಿಕೆಶಿ ಮೇಲೆ ಕೇಸ್ ಹಾಕಿದ್ದು ಯಾಕೆ?

    ರಾಜ್ಯದ ಪವರ್ ಫುಲ್ ಸಚಿವರ ಗುಟ್ಟು ರಟ್ಟು – ಐಟಿ ಇಲಾಖೆ ಡಿಕೆಶಿ ಮೇಲೆ ಕೇಸ್ ಹಾಕಿದ್ದು ಯಾಕೆ?

    ಬೆಂಗಳೂರು: ರಾಜ್ಯದ ಪವರ್ ಫುಲ್ ಮಿನಿಸ್ಟರ್ ಅಂತಾನೇ ಕರೆಸಿಕೊಳ್ಳುವ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಯಲ್ಲಿ ಏನಾಯಿತು? ಮತ್ತು ಯಾವ ಆಧಾರದ ಮೇಲೆ ಪ್ರಕರಣ ದಾಖಲು ಮಾಡಲಾಗ್ತಾಯಿದೆ ಎಂಬುದರ ಬಗ್ಗೆ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಮಾಹಿತಿಗಳು ಲಭ್ಯವಾಗಿವೆ.

    ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ವೇಳೆ ವಶಪಡಿಸಿಕೊಂಡ ಬಹುತೇಕ ಆಸ್ತಿ ಪತ್ರಗಳಿಗೆ ಸರಿಯಾದ ದಾಖಲೆಗಳಿಲ್ಲ. ಸಚಿವರು ದಾಖಲೆಯಿಲ್ಲದೇ ಹಲವು ಕಡೆ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೋಟ್ಯಂತರ ರುಪಾಯಿಗಳನ್ನು ಕೇವಲ ಚೀಟಿಗಳಲ್ಲಿ ಬರೆದುಕೊಳ್ಳಲಾಗಿತ್ತು ಮತ್ತು ಈ ಎಲ್ಲ ವ್ಯವಹಾರಗಳಿಗೆ ಯಾವುದೇ ರೀತಿಯಲ್ಲಿ ಸಚಿವರು ತೆರಿಗೆಯನ್ನು ಪಾವತಿ ಮಾಡಿಲ್ಲ. ದಾಳಿ ಸಮಯದಲ್ಲಿ ಸಚಿವರು ಕೆಲ ದಾಖಲೆಗಳನ್ನು ನಾಶಪಡಿಸಲು ಯತ್ನಿಸಿದ್ದರು ಎನ್ನಲಾಗಿದೆ.

    ಐಟಿ ದಾಳಿ ವೇಳೆ 5 ಕೋಟಿ ರೂಪಾಯಿಗಳ ವ್ಯವಹಾರಕ್ಕೆ ಟ್ಯಾಕ್ಸ್ ಕಟ್ಟದೆ ಇರುವುದು ಬೆಳಕಿಗೆ ಬಂದಿದೆ. ಇನ್ನೂ ಹಲವು ಕಂಪೆನಿಗಳ ಜೊತೆ ಡಿ.ಕೆ.ಶಿವಕುಮಾರ್ ಒಪ್ಪಂದ ಮಾಡಿಕೊಂಡಿದ್ದು, ಅರ್ಧ ಹಣವನ್ನು ಚೆಕ್ ಮೂಲಕ ಮತ್ತು ಇನ್ನರ್ಧ ಹಣವನ್ನು ಕ್ಯಾಶ್ ಮೂಲಕ ಪಡೆದಿದ್ದಾರೆ. ಕ್ಯಾಶ್ ನಲ್ಲಿ ಪಡೆದ ಹಣಕ್ಕೆ ಸಚಿವರು ತೆರಿಗೆ ಪಾವತಿ ಮಾಡಿಲ್ಲ. ಈ ರೀತಿಯ ವ್ಯವಹಾರದಲ್ಲಿ ಒಂದು ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು 7 ಕೋಟಿ ರೂಪಾಯಿಗೂ ಹೆಚ್ಚಿನ ಹಣಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ ಅಂತಾ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಡಿ.ಕೆ ಶಿವಕುಮಾರ್ ಗೌರವಾನ್ವಿತ ವ್ಯಕ್ತಿಯಾಗಿದ್ದು, ಪ್ರಸ್ತುತ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾರೆ. ಜವಬ್ದಾರಿಯುತ ಸಚಿವರಾಗಿ ಉದ್ದೇಶಪೂರ್ವಕವಾಗಿ ತೆರಿಗೆ ವಂಚನೆ ಮಾಡಿದ್ದಾರೆ. ಕಾನೂನಿನ ಬಗ್ಗೆ ಅರಿವಿದ್ರೂ ಮೋಸ ಮಾಡಿದ್ದು, ಹೀಗಾಗಿ ಇವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಐಟಿ ಇಲಾಖೆ ಕೋರ್ಟ್ ಗೆ ಮನವಿ ಮಾಡಿದೆ.

  • ಪವರ್ ಮಿನಿಸ್ಟರ್ ಗೆ ಐಟಿ ಇಲಾಖೆಯಿಂದ ಬಿಗ್ ಶಾಕ್!

    ಪವರ್ ಮಿನಿಸ್ಟರ್ ಗೆ ಐಟಿ ಇಲಾಖೆಯಿಂದ ಬಿಗ್ ಶಾಕ್!

    ಬೆಂಗಳೂರು: ರಾಜ್ಯದ ಪವರ್ ಅಂಡ್ ಪವರ್ ಪುಲ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅವರಿಗೆ ಸಂಕಷ್ಟ ಶುರುವಾಗಿದೆ. ಎಲೆಕ್ಷನ್ ನಿಂತು ಜಯಭೇರಿ ಬಾರಿಸಿ ಪಕ್ಷವನ್ನು ಮುನ್ನೆಡಸೋ ಉತ್ಸಾಹದಲ್ಲಿದ್ದ ಪವರ್ ಮಿನಿಸ್ಟರ್ ಈಗ ಬಂಧನದ ಭೀತಿ ಎದುರಿಸುತ್ತಿದ್ದಾರೆ.

    2017, ಆಗಸ್ಟ್ ತಿಂಗಳಲ್ಲಿ ಐಟಿ ರೇಡ್ ವೇಳೆ ದಾಖಲೆ ಹರಿದು ಹಾಕಿರೋ ಆರೋಪಕ್ಕೆ ಗುರಿಯಾಗಿರೋ ಪವರ್ ಮಿನಿಸ್ಟರ್ ಗೆ ಆರ್ಥಿಕ ಅಪರಾಧಗಳ ಕೋರ್ಟ್ ಎಫ್‍ಐಆರ್ ದಾಖಲಿಸಲು ಸೂಚನೆ ನೀಡಿದೆ. ದಾಖಲೆ ಹರಿದು ಹಾಕಿರುವ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡಿದ ಐಟಿ ಅಧಿಕಾರಿಗಳಿಗೆ ಕೂಡಲೇ ಅವರ ವಿರುದ್ಧ ದೂರು ದಾಖಲಿಸಿ ಅಂತ ಸೂಚನೆ ನೀಡಿ ಮಾರ್ಚ್ 22 ರೊಳಗೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿದೆ.

    ಕೋರ್ಟ್ ಸೂಚನೆ ನೀಡುತ್ತಿದ್ದಂತೆ ಘಟನೆ ನಡೆದ ಈಗಲ್ ಟನ್ ರೆಸಾರ್ಟ್ ವ್ಯಾಪ್ತಿಯ ಸ್ಥಳೀಯ ಪೊಲೀಸ್ ಸ್ಟೇಷನ್‍ನಲ್ಲಿ ಐಟಿ ಇಲಾಖೆ ಇಂದು ಐಪಿಸಿ ಸೆಕ್ಷನ್ 201 ಮತ್ತು 204 ಜೊತೆಗೆ ಐಟಿ ಸೆಕ್ಷನ್ 276 (ಸಿ)ಯ ಅಡಿಯಲ್ಲಿ ದೂರು ನೀಡಲು ಸಿದ್ದತೆ ಮಾಡಿಕೊಂಡಿದೆ. ದೂರು ದಾಖಲಾಗುತ್ತಿದ್ದಂತೆ ಎಫ್‍ಐಆರ್ ದಾಖಲಿಸಲಿರೋ ಪೊಲೀಸರು ಡಿ.ಕೆ.ಶಿವಕುಮಾರ್ ಅವರನ್ನ ಬಂಧಿಸೋ ಸಾಧ್ಯತೆಯನ್ನು ಸಹ ತಳ್ಳಿಹಾಕುವಂತಿಲ್ಲ.

    ಇನ್ನೊಂದು ಕಡೆ ಈಗಾಗಲೇ ಕೋರ್ಟ್ ಆದೇಶದಿಂದ ಬಂಧನದ ಭೀತಿ ಎದುರಿಸುತ್ತಿರೋ ಡಿ ಕೆ ಶಿವಕುಮಾರ್ ಇಂದು ಆರ್ಥಿಕ ಅಪರಾಧಗಳ ಕೋರ್ಟ್ ನೀಡಿರೋ ಆದೇಶದ ವಿರುದ್ದ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಬಗ್ಗೆ ತಮ್ಮ ವಕೀಲರ ಜೊತೆ ಮಾತುಕತೆ ನಡೆಸಿರೋ ಡಿ.ಕೆ.ಶಿವಕುಮಾರ್ ಯಾವುದಕ್ಕೂ ರೆಡಿ ಇರುವಂತೆ ವಕೀಲರಿಗೆ ಸೂಚನೆ ನೀಡಿದ್ದಾರೆ ಅಂತಾ ಎನ್ನಲಾಗಿದೆ.