Tag: IT Returns

  • ಹೊಸ ಆದಾಯ ತೆರಿಗೆ ನಿಯಮ ಜಾರಿ – ಸುಳ್ಳು ಮಾಹಿತಿ ನೀಡಿದ್ರೆ 200% ದಂಡ, ಜೈಲು

    ಹೊಸ ಆದಾಯ ತೆರಿಗೆ ನಿಯಮ ಜಾರಿ – ಸುಳ್ಳು ಮಾಹಿತಿ ನೀಡಿದ್ರೆ 200% ದಂಡ, ಜೈಲು

    ನವದೆಹಲಿ/ಬೆಂಗಳೂರು: ಆದಾಯ ತೆರಿಗೆ ರಿಟರ್ನ್ (IT Returns) ಸಲ್ಲಿಕೆಯಲ್ಲಿ ತಪ್ಪು ಮಾಹಿತಿ ನೀಡುವ ಅಥವಾ ಆದಾಯವನ್ನು ಮರೆಮಾಚುವ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ (Income Tax Department) ಕಠಿಣ ಎಚ್ಚರಿಕೆ ನೀಡಿದೆ.

    ಹೌದು. ಹೊಸ ಆದಾಯ ತೆರಿಗೆ ನಿಯಮಗಳು ಜಾರಿಯಾಗಿದ್ದು, ತೆರಿಗೆದಾರರು ಸುಳ್ಳು ಕಡತಗಳನ್ನು ತೋರಿಸಿದರೆ ಅಥವಾ ಆದಾಯ ಮರೆಮಾಚಿದರೆ ಶೇ. 200ರವರೆಗೆ ದಂಡ, ವಾರ್ಷಿಕ ಶೇ. 24ವರೆಗೆ ಬಡ್ಡಿ ವಿಧಿಸಲಾಗುತ್ತದೆ. ಅಲ್ಲದೇ ಸೆಕ್ಷನ್ 276 ಸಿ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆ. ಹಾಗಾಗಿ, ಇನ್ಮುಂದೆ ಸಣ್ಣ ತಪ್ಪುಗಳಿಗೂ ತೆರಿಗೆ ಪಾವತಿದಾರರು ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು – ಆದ್ರೆ ಅಂತಿಮ ಆದೇಶ ಬರಲಿಲ್ಲ

    ಒಂದು ವೇಳೆ ನಿಮ್ಮ ಲೆಕ್ಕ ಪರಿಶೋಧಕರು ಅಥವಾ ತೆರಿಗೆ ಸಲಹೆಗಾರರು ತಪ್ಪು ಮಾಡಿದರೂ, ಕಾನೂನಿನ ಪ್ರಕಾರ ತೆರಿಗೆದಾರರಾದ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಬೆಂಬಲಿಸಿದ ನಿವೃತ್ತ ಸಿಜೆಐ ಚಂದ್ರಚೂಡ್‌

    ಈ ಹೊಸ ಕಠಿಣ ನಿಯಮಗಳು ಯಾವುದೇ ವಿನಾಯಿತಿ ಇಲ್ಲದೇ ಎಲ್ಲರಿಗೂ ಅನ್ವಯಿಸುತ್ತವೆ. ಅಂದರೆ, ಸಂಬಳ ಪಡೆಯುವ ನೌಕರರು, ಫ್ರೀಲ್ಯಾನ್ಸರ್‌ಗಳು ಹಾಗೂ ಡಾಕ್ಟರ್, ವಕೀಲರು ಸೇರಿದಂತೆ ಇತರ ವೃತ್ತಿಪರರು ಮತ್ತು ಉದ್ಯಮಿಗಳಿಗೂ ಅನ್ವಯಿಸುತ್ತದೆ. ಇದನ್ನೂ ಓದಿ: ರಾಜ್ಯಾಧ್ಯಕ್ಷರ ಬದಲಿಸುವ ಪ್ರಸ್ತಾಪ ದೆಹಲಿಯಲ್ಲಿ ಕೇಳಿ ಬಂದಿಲ್ಲ: ಆರ್.ಅಶೋಕ್

  • ಐಟಿ ರಿಟರ್ನ್ಸ್ ಸಲ್ಲಿಸಲು ನಾಳೆ ಕೊನೆಯ ದಿನ: ತಪ್ಪಿದರೆ ದಂಡ

    ಐಟಿ ರಿಟರ್ನ್ಸ್ ಸಲ್ಲಿಸಲು ನಾಳೆ ಕೊನೆಯ ದಿನ: ತಪ್ಪಿದರೆ ದಂಡ

    ನವದೆಹಲಿ: ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದ್ದು, ಸಲ್ಲಿಸದೇ ಇದ್ದರೆ ದಂಡ ಪಾವತಿಸಬೇಕಾಗುತ್ತದೆ.

    ಈ ಹಿಂದಿನ 2 ವರ್ಷಗಳಲ್ಲಿ ವೆಬ್‌ಸೈಟ್‌ ಸಮಸ್ಯೆ, ಕೋವಿಡ್‌ ಅಲೆ ಇತ್ಯಾದಿ ಕಾರಣಗಳಿಂದ ರಿಟರ್ನ್ ಸಲ್ಲಿಕೆಯ ಅವಧಿಯನ್ನು ಹಲವು ಬಾರಿ ವಿಸ್ತರಣೆ ಮಾಡಲಾಗಿತ್ತು. ಕಳೆದ ವರ್ಷ ಡಿ.31 ಅಂತಿಮ ಡೆಡ್‌ಲೈನ್‌ ನೀಡಲಾಗಿತ್ತು. ಆದರೆ ಈ ವರ್ಷ ಗಡುವು ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಿಸಿದೆ. ಇದನ್ನೂ ಓದಿ: ಪ್ರವೀಣ್ ಕುಟುಂಬಕ್ಕೆ ಸಹಾಯದ ನೆಪದಲ್ಲಿ ಹಣ ವಸೂಲಿ: ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ

    ಕಳೆದ ವರ್ಷ ಒಟ್ಟು 5.89 ಕೋಟಿ ಜನ ರಿಟರ್ನ್‌ ಫೈಲ್ ಮಾಡಿದ್ದರು. ಈ ವರ್ಷ ಗುರುವಾರ ಸಂಜೆಯವರೆಗೆ 4 ಕೋಟಿ ಜನ ರಿಟರ್ನ್ಸ್ ಸಲ್ಲಿಕೆ ಮಾಡಿದ್ದು, ನಂತರ ನಿತ್ಯ 30 ಲಕ್ಷ ಜನರು ಸಲ್ಲಿಕೆ ಮಾಡುತ್ತಿದ್ದಾರೆ. ಜು.31ರ ಬಳಿಕವೂ ಸಲ್ಲಿಕೆ ಮಾಡಲು ಅವಕಾಶ ಇದೆಯಾದರೂ ದಂಡ ಪಾವತಿಸಬೇಕಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಆದಾಯ ತೆರಿಗೆ ಪಾವತಿಗೆ ಆಧಾರ್ ಕಡ್ಡಾಯ

    ಆದಾಯ ತೆರಿಗೆ ಪಾವತಿಗೆ ಆಧಾರ್ ಕಡ್ಡಾಯ

    ನವದೆಹಲಿ: ಆದಾಯ ತೆರಿಗೆ ಪಾವತಿಸಲು ಇನ್ನು ಮುಂದೆ ಪಾನ್ ಕಾರ್ಡಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.

    ದೆಹಲಿ ಹೈಕೋರ್ಟ್ ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಕಡ್ಡಾಯವಲ್ಲ ಎಂದು ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸರ್ಕಾರದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಐಟಿ ರಿಟರ್ನ್ಸ್ ಪಾವತಿ ಮಾಡಲು 2018-19 ಸಾಲಿಗೆ ಆಧಾರ್ ಕಡ್ಡಾಯ ಮಾಡಿ ಆದೇಶ ನೀಡಿದೆ.

    ಈಗಾಗಲೇ ಪಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ ಮಾಡಲಾಗಿದ್ದು, ಸದ್ಯ ಎಲ್ಲಾ ಆದಾಯ ತೆರಿಗೆ ಪಾವತಿ ಮಾಡುವವರು ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

    ಸುಪ್ರೀಂ ಕೋರ್ಟ್ ಆಧಾರ್ ಕಾರ್ಡಿಗೆ ಇರುವ ಸಂವಿಧಾನಿಕ ಮಾನ್ಯತೆಯನ್ನು ಸೆಪ್ಟೆಂಬರ್ ತೀರ್ಪಿನಲ್ಲಿ ಎತ್ತಿ ಹಿಡಿದಿತ್ತು. ಆದರೂ ಬ್ಯಾಂಕ್ ಖಾತೆ, ಮೊಬೈಲ್ ಫೋನ್ ಮತ್ತು ಶಾಲಾ ಪ್ರವೇಶಕ್ಕೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಹೇಳಿತ್ತು. ಆದರೆ ಈಗ ನ್ಯಾಯಾಲಯ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಲು ವೈಯಕ್ತಿಕ ಆಧಾರ್ ಸಂಖ್ಯೆಯನ್ನು ಒದಗಿಸುವುದನ್ನು ಕಡ್ಡಾಯ ಮಾಡಿದೆ.

    ಆಧಾರ್ ಕಾರ್ಡನ್ನು ಪಾನ್ ಕಾರ್ಡಿಗೆ ಲಿಂಕ್ ಮಾಡಲು 2019 ಮಾರ್ಚ್ 31 ರವರೆಗೂ ಸಮಯಾವಕಾಶವನ್ನು ನೀಡಿದೆ. 2018 ಏಪ್ರಿಲ್ 1 ರಂದು ಸರ್ಕಾರದ ನೀಡಿದ್ದ ಆದೇಶದ ಅನ್ವಯ ಐಟಿ ರಿಟರ್ನ್ಸ್ ಸಲ್ಲಿಕೆ ವಿಳಂಬವಾದರೆ ಕನಿಷ್ಠ 10 ಸಾವಿರ ರೂ. ಶುಲ್ಕವನ್ನು ವಿಧಿಸಬಹುದಾಗಿದೆ. ಅಲ್ಲದೇ ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ಸ್ ಸಲ್ಲಿಸದವರಿಗೆ ಸೆಕ್ಷನ್ 142(1) ಅನ್ವಯ ನೋಟಿಸ್ ಕಳುಹಿಸಲು ಅವಕಾಶವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv