ಬೆಂಗಳೂರು/ನವದೆಹಲಿ: ಕಾಂಗ್ರೆಸ್ ನಾಯಕರ ಮಾಲೀಕತ್ವದ ಡಿಸೈನ್ ಬಾಕ್ಸ್ ಪಿಆರ್ ಕಂಪನಿ ಮೇಲೆ ದೆಹಲಿ, ಬೆಂಗಳೂರಿನಲ್ಲಿ ಐಟಿ ರೇಡ್ ನಡೆದಿದೆ.
ದಾಳಿ ವೇಳೆ ಹಲವು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದು, ಬ್ಯಾಂಕ್ ಖಾತೆಗಳನ್ನು ಜಾಲಾಡಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮತ್ತು ಕಾರ್ತಿ ಚಿದಂಬರಂ ಸೇರಿ ಹಲವು ಕಾಂಗ್ರೆಸ್ ನಾಯಕರ ಕಂಪನಿಯನ್ನು ನಿರ್ವಹಿಸುತ್ತಿತ್ತು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ದೇಶದ ವಿವಿಧ ಪ್ರಮುಖ ನಾಯಕರ ಪರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಕೇವಲ ಒಂದೂವರೆ ತಿಂಗಳ ಹಿಂದೆ ಡಿಸೈನ್ ಬಾಕ್ಸ್ ಕಂಪನಿ ಜೊತೆಗಿನ ಒಪ್ಪಂದವನ್ನು ಡಿಕೆ ಶಿವಕುಮಾರ್ ರದ್ದು ಮಾಡಿದ್ದರು. ಇದನ್ನೂ ಓದಿ: ಬಿಎಸ್‍ವೈ ಆಪ್ತರ ಬಳಿ 765 ಕೋಟಿ ಅಕ್ರಮ ಆಸ್ತಿ
ಡಿಸೈನ್ ಬಾಕ್ಸ್ ಮೇಲಿನ ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಆ ಸಂಸ್ಥೆ ನನ್ನ ಸೋಷಿಯಲ್ ಮೀಡಿಯಾ ನೋಡಿಕೊಳ್ತಿರಲಿಲ್ಲ. ಅವರು ನನಗೆ ಸಹಾಯ ಮಾಡುತ್ತಿದ್ದರು. ನಿನ್ನೆ ನನ್ನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸಿದ್ದರು. ಕಂಪನಿ ವೃತ್ತಿಪರವಾಗಿದ್ದು ದಾಳಿಗೆ ಸಂಬಂಧಿಸಿದಂತೆ ಉತ್ತರ ಕೊಟ್ಟುಕೊಳ್ತಾರೆ ಎಂದು ತಿಳಿಸಿದರು.
ನವದೆಹಲಿ: ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.
ಮುಂಬೈ ಕಚೇರಿ ಮತ್ತು ಲಕ್ನೋದಲ್ಲಿರುವ ಕಂಪನಿ ಸೇರಿದಂತೆ ಒಟ್ಟು ಆರು ಕಡೆ ಈ ದಾಳಿ ನಡೆದಿದೆ. ಸೋನು ಸೂದ್ ಕಂಪನಿ ಮತ್ತು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವಿನ ಇತ್ತೀಚಿಗೆ ಒಪ್ಪಂದ ನಡೆದಿತ್ತು. ಈ ಒಪ್ಪಂದದ ವೇಳೆ ತೆರಿಗೆ ವಂಚನೆ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸೋನು ಸೂದ್ ಮೇಲೆ ಐಟಿ ದಾಳಿ ನಡೆಯುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆ 2012 ರಲ್ಲಿ ತೆರಿಗೆ ವಂಚನೆ ಆರೋಪದ ಮೇಲೆ ದಾಳಿ ನಡೆದಿತ್ತು.
ರಾಜಕೀಯ ಪಕ್ಷಗಳು ಸೋನು ಸೂದ್ ಮೇಲಿನ ಐಟಿ ದಾಳಿಯನ್ನು ಖಂಡಿಸಿವೆ. ಆಪ್ ನಾಯಕ ರಾಘವ್ ಚಡ್ಡಾ ಪ್ರತಿಕ್ರಿಯಿಸಿ, ಬಡವರಿಗೆ ಸಹಾಯ ಮಾಡಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಸೋನು ಸೂದ್ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮಾಜಿ ಗಂಡನ ಹೇಳಿಕೆಯಿಂದ ಚೀನಾದ ಖ್ಯಾತ ನಟಿಗೆ ಬಿತ್ತು 340 ಕೋಟಿ ರೂ. ದಂಡ
ರಾಜಕೀಯ ಪಕ್ಷಗಳ ಟೀಕೆ ಬಿಜೆಪಿ ವಕ್ತಾರ ಆಸಿಫ್ ಭಮ್ಲಾ ಪ್ರತಿಕ್ರಿಯಿಸಿ, ಐಟಿ ದಾಳಿಗೂ ಕೇಜ್ರಿವಾಲ್ ಜೊತೆಗಿನ ಭೇಟಿಗೂ ಯಾವುದೇ ಸಂಬಂಧವಿಲ್ಲ. ಯಾವುದೇ ವ್ಯಕ್ತಿ ಯಾರನ್ನೂ ಭೇಟಿ ಮಾಡಬಹುದು. ಆದಾಯ ತೆರಿಗೆ ಇಲಾಖೆ ಸ್ವತಂತ್ರವಾಗಿದ್ದು ತನ್ನದೇ ಆದ ಶಿಷ್ಟಾಚಾರವನ್ನು ಹೊಂದಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್
48 ವರ್ಷದ ಸೋನ್ ಸೂದ್ ಎರಡು ದಶಕಗಳಿಂದ ಚಲನ ಚಿತ್ರರಂಗದಲ್ಲಿದ್ದಾರೆ. ಕೋವಿಡ್ 19 ಸಮಯದಲ್ಲಿ ಅವರು ನೀಡಿದ ಸಹಾಯ ಕಾರ್ಯ ದೇಶದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿತ್ತು. ದೆಹಲಿ ಸರ್ಕಾರ ಕೆಲ ದಿನಗಳ ಹಿಂದೆ ಶಾಲಾ ವಿದ್ಯಾರ್ಥಿಗಳಿಗೆ ಆರಂಭಿಸಿರುವ ಮಾರ್ಗದರ್ಶನ ಕಾರ್ಯಕ್ರಮದ ರಾಯಭಾರಿಯಾಗಿ ಸೋನು ಸೂದ್ ಅವರನ್ನು ಆಯ್ಕೆ ಮಾಡಿತ್ತು.
ಚೆನ್ನೈ: ಸ್ವಯಂಘೋಷಿತ ದೇವಮಾನವ ಕಲ್ಕಿ ಭಗವಾನ್‍ಗೆ ಸೇರಿದ ಆಶ್ರಮಗಳು, ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕದ ಆಶ್ರಮಗಳು ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದೇಶ ವಿದೇಶಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಕಲ್ಕಿ ಭಗವಾನ್‍ಗೆ ಸೇರಿದ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆದಿದ್ದು, ಭಗವಾನ್ ಪುತ್ರ ಕೃಷ್ಣಾ ಮತ್ತು ಪತ್ನಿಯನ್ನು ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಕಲ್ಕಿ ಭಗವಾನ್ ಆಶ್ರಮದಲ್ಲಿ ಹಲವು ಅವ್ಯವಹಾರ ನಡೆಯುತ್ತಿದೆ. ಭಕ್ತರಿಗೆ ಲೈಂಗಿಕ ಕಿರುಕುಳ, ಬೆದರಿಕೆ ಒಡ್ಡಿದ್ದ ಆರೋಪಗಳು ಕೇಳಿಬಂದಿತ್ತು. ಆಶ್ರಮ ಸುತ್ತಮುತ್ತ ನೂರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿಗಗಳು, ಬೆನಾಮಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಖರೀದಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಎಲ್‍ಐಸಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಆಂಧ್ರಪ್ರದೇಶ ಮೂಲದ ವಿಜಯ್‍ಕುಮಾರ್ ನಾಯ್ಡು ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಅಲ್ಲಿಂದಲೂ ಹೊರಬಿದ್ದು ಚಿತ್ತೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದ. 1989ರಲ್ಲಿ ಶಿಕ್ಷಣ ಸಂಸ್ಥೆಗಳು ನಷ್ಟ ಅನುಭವಿಸಿದ ಬಳಿಕ ಕೆಲ ವರ್ಷ ಭೂಗತನಾಗಿದ್ದ ವಿಜಯ್‍ಕುಮಾರ್ ದಿಢೀರ್ ಸ್ವಾಮಿ ವೇಷದಲ್ಲಿ ಪ್ರತ್ರ್ಯಕ್ಷನಾಗಿ,” ನಾನು ವಿಷ್ಣುವಿನ 10ನೇ ಅವತಾರ. ನಾನು ಕಲ್ಕಿ ಭಗವಾನ್” ಎಂದು ಘೋಷಿಸಿಕೊಂಡಿದ್ದ.
ನನ್ನ ಪತ್ನಿಯೂ ದೇವರ ಅವತಾರ ಎಂದು ಘೋಷಿಸಿಕೊಂಡಿದ್ದ. ಕೆಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ದುಡ್ಡುಕೊಟ್ಟಂತೆ ಇವರ ಸಾಮಾನ್ಯ ದರ್ಶನಕ್ಕೆ ಭಕ್ತರು 5 ಸಾವಿರ ರೂ. ಮತ್ತು ವಿಶೇಷ ದರ್ಶನಕ್ಕೆ 25 ಸಾವಿರ ರೂ. ಪಾವತಿಸಬೇಕಿತ್ತು.
ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಲವು ಕಡೆ ಆಶ್ರಮ ಕಡೆ ಸ್ಥಾಪಿಸಿದ್ದ. ಈತನಿಗೆ ಅನಿವಾಸಿ ಭಾರತೀಯರು ಮತ್ತು ದೊಡ್ಡ ದೊಡ್ಡ ಉದ್ಯಮಿಗಳು ಭಕ್ತರಿದ್ದಾರೆ. ಭಕ್ತರು ಆಶ್ರಮಕ್ಕೆ ನೀಡಿದ ದೇಣಿಗೆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಭಾರೀ ತೆರಿಗೆ ವಂಚನೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.
ಕಲ್ಕಿ ಭಗವಾನ್ ಪುತ್ರ ಕೃಷ್ಣಾ ವಿವಿಧ ಉದ್ಯಮಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು ಲೆಕ್ಕ ಪತ್ರದಲ್ಲಿ ಗೋಲ್‍ಮಾಲ್ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. 2008 ರಲ್ಲಿ ಚಿತ್ತೂರು ಜಿಲ್ಲೆಯ ಕಲ್ಕಿ ಮಠದಲ್ಲಿ ಸಂಭವಿಸಿದ ದುರಂತದಲ್ಲಿ ಐದು ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡಿದ್ದರು.
ಬೆಂಗಳೂರು: ಮಾಜಿ ಡಿಸಿಎಂ, ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ ಬಹಿರಂಗಪಡಿಸದೇ ಬರೋಬ್ಬರಿ 103 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳು ಕಳೆದ ಎರಡ್ಮೂರು ದಿನಗಳಿಂದ ನಡೆಸಿದ ದಾಳಿಯಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಪರಮೇಶ್ವರ್ ಅವರು 100 ಕೋಟಿ ರೂ. ದಾಖಲೆ ಪತ್ರಗಳಿಗೆ ಯಾವುದೇ ಉತ್ತರ ನೀಡಿಲ್ಲ. ಈ ಮೂಲಕ ಕಾಲೇಜಿನಲ್ಲಿ ದುಡಿದ ಹಣವನ್ನು ಪಂಚತಾರಾ ಹೋಟೆಲ್ ಉದ್ಯಮದ ಮೇಲೆ ಹೂಡಿಕೆ ಮಾಡಿದ್ದು ಸಾಬೀತಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಸಿದ್ಧಾರ್ಥ್ ಮೆಡಿಕಲ್ ಕಾಲೇಜಿನ 8 ಜನ ಸಿಬ್ಬಂದಿಗೆ ಗೊತ್ತಾಗದಂತೆ ಅವರ ಹೆಸರಲ್ಲಿ ವಿವಿಧ ಪಂಚತಾರಾ ಹೋಟೆಲ್‍ಗಳ ಮೇಲೆ 4.6 ಕೋಟಿ ಹೂಡಿಕೆ ಮಾಡಲಾಗಿದೆ. ಎರಡು ದಿನದ ದಾಳಿಯಲ್ಲಿ ಆರ್.ಎಲ್.ಜಾಲಪ್ಪ ಹಾಗೂ ಪರಮೇಶ್ವರ್ ಮನೆ ಸೇರಿದಂತೆ 4.52 ಕೋಟಿ ರೂ. ಪತ್ತೆಯಾಗಿದೆ ಎಂಬ ಹೇಳಲಾಗುತ್ತಿದೆ.
ಕೋಟಿ ಕೋಟಿ ತೆರಿಗೆ ವಂಚನೆ ಆರೋಪ ಸಂಬಂಧ ಸತತ ಎರಡನೇ ದಿನವೂ ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಮನೆ, ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ರೇಡ್ ನಡೆದಿದೆ. ಜಿ. ಪರಮೇಶ್ವರ್, ಪತ್ನಿ ಕನ್ನಿಕಾ ಪರಮೇಶ್ವರ್ ಹಾಗೂ ಸಹೋದರನ ಪುತ್ರ ಆನಂದ್ ಸಿದ್ಧಾರ್ಥ್ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸೇರಿದ 120ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಐಟಿ ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪರಮೇಶ್ವರ್ ಮನೆಯ ಲಾಕರ್ ಓಪನ್ ಆಗದ ಹಿನ್ನೆಲೆಯಲ್ಲಿ ಕೀ ಮೇಕರ್ ಗಳನ್ನು ಕರೆಸಿ ಅಪಾರ ಪ್ರಮಾಣದ ಹಣ, ಚಿನ್ನಾಭರಣ ಹಾಗೂ ಹಲವು ದಾಖಲೆಗಳನ್ನೂ ಕೂಡ ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದಲೇ ಶೋಧ ಕಾರ್ಯ ಮುಂದುವರಿಸಿದ ಐಟಿ ಅಧಿಕಾರಿಗಳು, ಪರಮೇಶ್ವರ್ ಅವರಿಗೆ ಸೇರಿದ ಬೆಂಗಳೂರಿನ ಸದಾಶಿವನಗರದ ಮನೆ, ತುಮಕೂರು, ನೆಲಮಂಗಲ, ಟಿ.ಬೇಗೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಶೋಧ ನಡೆಸಿದ್ದಾರೆ.
ದಾಳಿಯ ವೇಳೆ ಸಿಕ್ಕ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ್ದ ದಾಖಲೆಗಳನ್ನೇ ಆಧರಿಸಿ ಹೆಚ್ಚುವರಿ ಆಯುಕ್ತೆ ನಿಶಿ ಪದ್ಮ ವಿಚಾರಣೆ ನಡೆಸುತ್ತಿದ್ದಾರೆ. ಪರಮೇಶ್ವರ್ ಅಣ್ಣನ ಮಗ ಆನಂದ್ ಬಳಿ ಸಿಕ್ಕ ಡೈರಿಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಸೀಟು ಹಂಚಿಕೆಯಲ್ಲಿ ಸಿಕ್ಕ ಹಣವನ್ನು ಸಿನಿಮಾಗಳ ಮೇಲೆ ಹೂಡಿಕೆ ಮಾಡಿರುವುದು ಕೂಡ ಪತ್ತೆಯಾಗಿದೆ. ಕಾರ್ಪೋರೇಟ್ ಸಂಸ್ಥೆಗಳಲ್ಲೂ ಹಣ ಹೂಡಿಕೆಯಾಗಿದ್ದು, ಮತ್ತೆ ಸೋಮವಾರ ವಿಚಾರಣೆ ಬರುವಂತೆ ಐಟಿ ಸಮನ್ಸ್ ಕೊಟ್ಟಿದೆ ಎಂಬ ಮಾಹಿತಿ ಲಭಿಸಿದೆ.
ಪರಮೇಶ್ವರ್ ಆಪ್ತಸಹಾಯಕ ರಮೇಶ್ ಅವರನ್ನು ಕೂಡ ವಿಚಾರಣೆ ಮಾಡಲಾಗಿದೆ. ಈ ನಡುವೆ ಪರಮೇಶ್ವರ್ ಭೇಟಿಗೆ ಬಂದ ಮಾಜಿ ಸಚಿವ ಯು.ಟಿ ಖಾದರ್ ಅವರಿಗೆ ಅವಕಾಶ ನಿರಾಕರಿಸಲಾಯಿತು. ಅಭಿಮಾನಿಗಳು ದೇವರ ಪ್ರಸಾದ ಹೊತ್ತು ತಂದಿದ್ದರು. ಪರಮೇಶ್ವರ್ ಅಭಿಮಾನಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಐಟಿ ಶೋಧ, ವಿಚಾರಣೆ ಮುಗಿದಿಲ್ಲ. ನಾಳೆಯೂ ಪರಮೇಶ್ವರ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ, ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ನೆಲಮಂಗಲದಲ್ಲಿಯೇ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೆ ಸೇರಿದ 150 ಎಕರೆ ಜಮೀನು ಇದೆ ಎಂದು ಹೇಳಲಾಗುತ್ತಿದೆ. 15 ದಿನಗಳ ಹಿಂದೆಯಷ್ಟೇ ಪರಮೇಶ್ವರ್ ನೆಲಮಂಗಲದ ಬೇಗೂರಲ್ಲಿ 3 ಎಕರೆ ಭೂಮಿ ಖರೀದಿಸಿದ್ದರು. ಭೂ ವ್ಯಾಜ್ಯವಿದ್ದರೂ ಮುನಿರಾಮಯ್ಯ ಅವರ ಆಸ್ತಿಯನ್ನ ಪರಮೇಶ್ವರ್ ಖರೀದಿಸಿದ್ದರು. ಭೂಮಿಯನ್ನ ನನಗೆ ಮಾರು. ನಿನ್ನ ಅಣ್ಣ-ತಮ್ಮಂದಿರ ಜೊತೆಗೆ ನಾನೇ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಅಂತ ಪರಮೇಶ್ವರ್ ಹೇಳಿದ್ದರು. ಈ ವ್ಯವಹಾರದ ಭಾಗವಾಗಿ 2 ಕೋಟಿ ರೂಪಾಯಿ ಹಾರ್ಡ್ ಕ್ಯಾಶ್ ಮತ್ತು 3 ಕೋಟಿ ರೂಪಾಯಿ ಚೆಕ್‍ನ್ನ ಮುನಿರಾಮಯ್ಯ ಅವರಿಗೆ ಕೊಟ್ಟಿದ್ದರು. ಆದರೆ ಗುರುವಾರ ನಡೆದ ಐಟಿ ದಾಳಿ ವೇಳೆ ಮುನಿರಾಮಯ್ಯ ಬಳಿ ಇದ್ದ 1 ಕೋಟಿ 60 ಲಕ್ಷ ರೂಪಾಯಿಯನ್ನ ಐಟಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಸೋಮವಾರ ವಿಚಾರಣೆಗೆ ಬರುವಂತೆ ಮುನಿರಾಮಯ್ಯ ಅವರಿಗೆ ಐಟಿ ಸಮನ್ಸ್ ನೀಡಿದೆ. ಇದಲ್ಲದೇ, ಕನ್ನಿಂಗ್ ಹ್ಯಾಮ್ ರೋಡ್‍ನಲ್ಲಿರುವ ಕಾವೇರಿ ಕಾಂಟಿನೆಂಟಲ್ ಹೋಟೆಲನ್ನು ಬೇರೊಬ್ಬರ ಹೆಸರಿನಲ್ಲಿ ಪರಮೇಶ್ವರ್ ಖರೀದಿ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರು: ಆದಾಯ ತೆರಿಗೆ (ಐಟಿ) ಇಲಾಖೆ ನಡೆಸಿರುವ ಪರಮೇಶ್ ಬಗ್ಗೆ ನನ್ನ ಹತ್ತಿರ ಯಾಕೆ ಪ್ರಶ್ನೆ ಕೇಳುತ್ತಿರುವಿರಿ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಪರಮೇಶ್ ಯಾರು? ಐಟಿ ದಾಳಿ ಆಗಿದ್ದಕ್ಕೆ ನಾನು ಏನು ಮಾಡಬೇಕು? ಅವರು ವ್ಯವಹಾರ ಮಾಡಿಕೊಂಡಿದ್ದರೆ ಅಧಿಕಾರಿಗಳು ಕಾನೂನು ರೀತಿಯ ಕ್ರಮಕೈಗೊಳುತ್ತಾರೆ ಎಂದು ಹೇಳಿದರು.
ಪರಮೇಶ್ 25 ವರ್ಷಗಳಿಂದ ಬಿಸಿನೆಸ್ ಮಾಡುತ್ತಿದ್ದಾರೆ. ಅವರೇನು ರಾಜಕೀಯ ವ್ಯಕ್ತಿನಾ? ಕಾನೂನಿನ ವಿರುದ್ಧವಾಗಿ ಯಾರೇ ಕೆಲಸ ಮಾಡಿದರು ತಪ್ಪೇ. ಐಟಿ ದಾಳಿಯ ವೇಳೆ ಪರಮೇಶ್ ಅವರ ಲಾಕರ್ ನಲ್ಲಿ ಸುಮಾರು 6.50 ಕೋಟಿ ರೂ. ಹಣ ಪತ್ತೆಯಾಗಿದ್ದು, ನನಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಪಕ್ಷದ ಅಭಿಮಾನಿಯೂ ಅಲ್ಲ. ದೂರದ ಸಂಬಂಧಿ ಅಷ್ಟೇ. ಅವರ ವಿರುದ್ಧ ಕ್ರಮ ತಗೆದುಕೊಳ್ಳಲು ನಾನೇನು ಬೇಡ ಅಂತ ಹೇಳಿಲ್ಲ ಎಂದು ತಿಳಿಸಿದರು.
ಏನಿದು ಪ್ರಕರಣ?:
ಶಿವಮೊಗ್ಗದ ಪರಮೇಶ್ ಅವರ ಮನೆ, ಶೋ ರೂಂ ಮೇಲೆ ಮಾರ್ಚ್ 28ರಂದು ಐಟಿ ದಾಳಿ ನಡೆಸಲಾಗಿತ್ತು. ಸತತ 20 ಗಂಟೆಗಳ ಸಮಯ 30 ಅಧಿಕಾರಿಗಳ ತಂಡ ಮನೆ ಶೋ ರೂಂನಲ್ಲಿ ಪರಿಶೀಲನೆ ನಡೆಸಿತ್ತು. ಈ ವೇಳೆ ಪತ್ತೆಯಾಗಿದ್ದ ಬ್ಯಾಂಕ್ ಲಾಕರಿನ ವಿವರಣೆ ಪಡೆದು ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದರು.
ಐಟಿ ಅಧಿಕಾರಿಗಳು ಗುರುವಾರ ರಾಷ್ಟ್ರೀಕೃತ ಬ್ಯಾಂಕಿಗೆ ತೆರಳಿ ಲಾಕರ್ ತೆರೆದ ಸಂದರ್ಭದಲ್ಲಿ ಕವರ್ ಗಳಲ್ಲಿ ತುಂಬಿದ್ದ ಹಣ ಪತ್ತೆಯಾಗಿದೆ. ಭಾರೀ ಹಣವನ್ನು ಕಂಡು ಐಟಿ ಆಧಿಕಾರಿಗಳು ಶಾಕ್ ಆಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಬ್ಯಾಂಕ್ ಲಾಕರ್ ಪಡೆದಿರುವ ಬಗ್ಗೆ ದಾಖಲೆ ಸಿಕ್ಕ ಬಳಿಕ ಅಧಿಕಾರಿಗಳ ಲಾಕರ್ ಕೀ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಕೀ ಕಳೆದು ಹೋಗಿದ್ದಾಗಿ ಪರಮೇಶ್ವರ್ ತಿಳಿಸಿದ್ದರು ಎನ್ನಲಾಗಿದೆ. ಸದ್ಯ ಹಣವನ್ನು ಜಪ್ತಿ ಮಾಡಿರುವ ಐಟಿ ಇಲಾಖೆ ಸೂಕ್ತ ದಾಖಲೆ ನೀಡುವಂತೆ ನೋಟಿಸ್ ನೀಡಿದೆ.
ಬೆಂಗಳೂರು: ಸ್ಯಾಂಡಲ್‍ವುಡ್ ಕೋಟಿಗಳಿಕೆಯ ನಟರ ಮೇಲೆ 3ನೇ ದಿನವೂ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಅದರಲ್ಲೂ ಶಿವರಾಜ್ ಕುಮಾರ್ ಮನೆಯಲ್ಲಿ ಇಂದು ಬೆಳಗ್ಗೆಯವರೆಗೂ ಪರಿಶೀಲನಾ ಕಾರ್ಯ ಮುಂದುವರಿಯಿತು.
ಪುನೀತ್ ರಾಜ್‍ಕುಮಾರ್ ಮನೆಯಲ್ಲಿನ ಶೋಧ ಕಾರ್ಯ ಶುಕ್ರವಾರ ರಾತ್ರಿ 11.30ಕ್ಕೆ ಅಂತ್ಯಗೊಂಡಿದೆ. ಆದರೆ ಯಶ್ ಮತ್ತು ಸುದೀಪ್ ಮನೆಯಲ್ಲಿ ಪರಿಶೀಲನೆ ಮುಂದುವರಿಯಲಿದೆ. ಜೊತೆಗೆ ನಿರ್ಮಾಪಕರಾದ ವಿಜಯ ಕಿರಗಂದೂರು, ಸಿ.ಆರ್.ಮನೋಹರ್, ರಾಕ್‍ಲೈನ್ ವೆಂಕಟೇಶ್, ಜಯಣ್ಣ ಮನೆಯಲ್ಲಿ ಪರಿಶೀಲನೆ ಮುಂದುವರಿಯಲಿದೆ. ಇದನ್ನೂ ಓದಿ: ಐಟಿ ರೇಡ್ ಹಿಂದಿನ ನಿಜವಾದ ಕಾರಣ ಬಿಚ್ಚಿಟ್ಟ ವಿತರಕ ಪ್ರಶಾಂತ್ ಸಂಬರ್ಗಿ
ಸ್ಟಾರ್ ನಟರ ಮನೆ ಮೇಲಿನ ರೇಡ್ ಒಂದು ಹಂತಕ್ಕೆ ಕ್ಲೋಸ್ ಆಗಿದ್ದರೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸ್ಟಾರ್ ನಟರ ಮನೆಯಲ್ಲಿ ಕೆಜಿಗಟ್ಟಲೆ ಬೆಳ್ಳಿ, ಚಿನ್ನ ಮತ್ತು ಹಣ ಪತ್ತೆಯಾಗಿದೆ. ಈ ಬಂಗಾರ ಮತ್ತು ಹಣಕ್ಕೆ ಸೂಕ್ತ ದಾಖಲೆ ತೋರಿಸಿದ ನಂತರವಷ್ಟೇ ಈ ಆಸ್ತಿಗಳು ಮನೆ ಸೇರಲಿದೆ. ಇದನ್ನೂ ಓದಿ: ನಾಲ್ವರು ಸ್ಟಾರ್‌ಗಳ ಮೇಲಿನ ಐಟಿ ದಾಳಿಗೆ ಜಿಎಸ್‍ಟಿ ಕಾರಣ?
ಇದರ ಜೊತೆ ಸಾಕಷ್ಟು ಬಿಸಿನೆಸ್‍ನಲ್ಲಿ ಹೂಡಿಕೆ ಮಾಡಿರುವ ಕಾರಣ ಎಲ್ಲದಕ್ಕೂ ದಾಖಲೆ ನೀಡಬೇಕಾಗುತ್ತದೆ. ಈ ಕಾರಣಕ್ಕೆ ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ಒಂದು ವಾರದ ಗಡುವನ್ನು ಸ್ಟಾರ್ ನಟರು ಕೇಳಿದ್ದಾರೆ ಎನ್ನುವ ಮಾಹಿತಿ ಐಟಿ ಮೂಲಗಳಿಂದ ಸಿಕ್ಕಿದೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಸ್ಟಾರ್ ನಟರು
ನಟರ ಬಳಿ ಸಿಕ್ಕಿದ ಆಸ್ತಿಗಿಂತಲೂ ನಿರ್ಮಾಪಕರ ಸಂಪಾದನೆ ಹೆಚ್ಚಿರುವ ಹಿನ್ನೆಲೆಯಲ್ಲಿ ಶನಿವಾರವೂ ದಾಖಲೆಗಳ ಪರಿಶೀಲನೆ ಮುಂದುವರಿಯಲಿದೆ. ಇದನ್ನೂ ಓದಿ: ಆ ಒಂದು ಡೈರಿಯಿಂದ ಸ್ಟಾರ್ ನಟರ ಮನೆ ಮೇಲೆ ದಾಳಿ!
ಚೆನ್ನೈ/ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಐಎಡಿಎಂಕೆ ನಾಯಕರ ನಿವಾಸ, ಜಯಾ ಟಿವಿ ಕಚೇರಿ ಸೇರಿದಂತೆ ಸೇರಿದಂತೆ ಒಟ್ಟು 187 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಶಶಿಕಲಾ ಸಂಬಂಧಿ ನಟರಾಜನ್, ಶಶಿಕಲಾ ಸೋದರ ಸೊಸೆ ಕೃಷ್ಣಪ್ರಿಯ, ಜಯಾ ಟಿವಿ, ಶಶಿಕಲಾ ಒಡೆತನದ ಜಾನ್ ಥಿಯೇಟರ್ ಕಾರ್ಯಾಲಯ, ಜಯಲಲಿತಾ ಅವರ ಕೊಡನಾಡು ಎಸ್ಟೇಟ್, ಬೆಂಗಳೂರಿನ ಶಶಿಕಲಾ ಆಪ್ತ ಮುರುಗೇಶ್ ಪಾಳ್ಯದಲ್ಲಿರುವ ಅಣ್ಣಾ ಡಿಎಂಕೆಯ ನಾಯಕ ಪುಗಳೇಂದಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
12ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಬೆಳಗ್ಗೆ 6 ಗಂಟೆಗೆ ಜಯಾ ಟಿವಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ದೆಹಲಿ ಸೇರಿದಂತೆ ಒಟ್ಟು 187 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಹಲವಾರು ಶೆಲ್ ಕಂಪೆನಿಗಳು ಹುಟ್ಟು ಹಾಕಿದ ಆರೋಪ ಜಯಾ ಟಿವಿ ಸಮೂಹದ ಮೇಲಿದೆ. ಆದಾಯದ ಮೂಲ ತೋರಿಸಿದೇ ಶೆಲ್ ಕಂಪೆನಿಗಳು ಹುಟ್ಟು ಹಾಕಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ನೋಟ್ ಬ್ಯಾನ್ ಬಳಿಕ ಭಾರೀ ಪ್ರಮಾಣದಲ್ಲಿ ಹಣವನ್ನು ನಕಲಿ ಕಂಪೆನಿಗಳ ಹೆಸರಿನಲ್ಲಿ ಹೂಡಿರುವ ಆರೋಪ ಜಯಾ ಟಿವಿ ಸಮೂಹದ ಮೇಲಿದೆ. ಜಯಾ ಟಿವಿ ನೆಟ್‍ವರ್ಕ್ ನ್ಯೂಸ್ ಚಾನೆಲ್, ಎಂಟರ್ ಟೈನ್‍ಮೆಂಟ್ ವಾಹಿನಿ ಮತ್ತು ಮೂವಿ ವಾಹಿನಿಯನ್ನು ಹೊಂದಿದೆ.
ಪ್ರಸ್ತುತ ಈಗ ಜಯಾ ಟಿವಿ ನಿಯಂತ್ರಣವನ್ನು ಶಶಿಕಲಾ ಸೋದರ ಸಂಬಂಧಿ ಟಿಟಿವಿ ದಿನಕರನ್ ಅವರ ಸಹೋದರ ದಿವಕರನ್ ಹೊಂದಿದ್ದಾರೆ.
ಜಯಲಲಿತಾ ಮುಖ್ಯಮಂತ್ರಿ ಆಗಿದ್ದ ವೇಳೆ ಜಯಾಟಿವಿ ಸರ್ಕಾರದ ಮುಖವಾಣಿಯಾಗಿ ಕೆಲಸ ಮಾಡುತಿತ್ತು. ಮುಖ್ಯಮಂತ್ರಿ ಪಳನಿಸ್ವಾಮಿ ಶಶಿಕಲಾ ವಿರುದ್ಧ ಬಂಡಾಯ ಎದ್ದ ಬಳಿಕ ಜಯಾ ಟಿವಿಯಲ್ಲಿ ಸರ್ಕಾರ ವಿರೋಧಿ ಸುದ್ದಿಗಳು ಹೆಚ್ಚು ಪ್ರಸಾರವಾಗುತ್ತಿದೆ.
ಕೊಡನಾಡಿನಲ್ಲಿರುವ ಎಸ್ಟೇಟ್ 900 ಎಕರೆಯದ್ದಾಗಿದ್ದು ಇಲ್ಲಿನ ರಾಜವೈಭವದ ಅರಮನೆಯಂತಹ ಬೃಹತ್ ಬಂಗಲೆಯಲ್ಲಿ ಜಯಲಲಿತಾ ಆಗಾಗ ಬಂದು ವಿಶ್ರಾಂತಿ ಪಡೆದು ಹೋಗುತ್ತಿದ್ದರು. ನಿಧನಕ್ಕೆ ಮುನ್ನ ಕೆಲವು ವರ್ಷಗಳ ಹಿಂದಿನಿಂದಲೇ ಜಯಾ ಈ ಬಂಗಲೆಯಲ್ಲಿ ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆಯುತ್ತಿದ್ದರು.
ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಪ್ರಕರಣದಲ್ಲಿ ಶಶಿಕಲಾ ದೋಷಿಯಾಗಿದ್ದು, ಪ್ರಸ್ತುತ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
AIADMK Karnataka in-charge, Pugazhendi's house being raided by Income Tax department in Bengaluru's Domlur pic.twitter.com/0d67gjIEgK