Tag: IT Officer

  • ವಕೀಲೆಗೆ ಲೈಂಗಿಕ ಕಿರುಕುಳ ಆರೋಪ – ಐಟಿ ಅಧಿಕಾರಿ ವಿರುದ್ಧ ಎಫ್‍ಐಆರ್

    ವಕೀಲೆಗೆ ಲೈಂಗಿಕ ಕಿರುಕುಳ ಆರೋಪ – ಐಟಿ ಅಧಿಕಾರಿ ವಿರುದ್ಧ ಎಫ್‍ಐಆರ್

    ಬೆಂಗಳೂರು: ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ (Sexual Harassment) ಎಸಗಿದ ಆರೋಪದ ಮೇಲೆ ನಗರದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ (IT Officer) ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ.

    ಐಟಿ ಅಧಿಕಾರಿ ವರುಣ್ ಮಲ್ಲಿಕ್ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ಹಲ್ಲೆ ನಡೆಸಿದ್ದಾರೆ ಎಂದು ವಕೀಲೆಯೊಬ್ಬರು ಆರೋಪಿಸಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಆರೋಪಿಗೆ ಪೊಲೀಸರು 2 ನೋಟಿಸ್ ನೀಡಿದ್ದಾರೆ.

    ಈ ಸಂಬಂಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

  • 5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಐಟಿ ಅಧಿಕಾರಿ

    5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಐಟಿ ಅಧಿಕಾರಿ

    ಬೆಳಗಾವಿ: ಚಿನ್ನಾಭರಣದ ಅಂಗಡಿ ಮಾಲೀಕನಿಂದ 5 ಲಕ್ಷ ರೂ. ಹಣ ಪಡೆಯುತ್ತಿದ್ದ ವೇಳೆ ಐಟಿ ಅಧಿಕಾರಿಯೊಬ್ಬನನ್ನು (IT Officer) ರೆಡ್‍ಹ್ಯಾಂಡ್ ಆಗಿ ಪೊಲೀಸರು (Police) ವಶಕ್ಕೆ ಪಡೆದಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

    ಐಟಿ ಅಧಿಕಾರಿ ಅವಿನಾಶ್ ಟೊನಪೆ ಎಂಬಾತ ಚಿಕ್ಕೋಡಿಯ (Chikkodi) ಅಂಕಲಿಯ ಪರಶುರಾಮ್ ಬಂಕಾಪುರ ಎಂಬವರ ಬಳಿ 10 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಪರಶುರಾಮ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಯೋಜನೆ ರೂಪಿಸಿದ್ದ ಪೊಲೀಸರು, ಖಾಸಗಿ ಡೆಂಟಲ್ ಕಾಲೇಜ್ ಮೈದಾನದಲ್ಲಿ ಅಧಿಕಾರಿ ಹಣ ಪಡೆಯುತ್ತಿದ್ದ ವೇಳೆ ಸಿನಿಮೀಯ ರೀತಿ ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಬಂಧನ

    ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರು ಅಧಿಕಾರಿಯನ್ನು ಬೆಳಗಾವಿಯ ಎಸಿಪಿ ಕಚೇರಿಗೆ ಕರೆದೊಯ್ದಿದ್ದಾರೆ.

    ನಾಲ್ಕು ದಿನಗಳ ಹಿಂದೆಯಷ್ಟೇ ಐಟಿ ಅಧಿಕಾರಿ ಅವಿನಾಶ್ ಟೋನಪಿ ನೇತೃತ್ವದ ತಂಡ ಅಂಕಲಿ ಗ್ರಾಮದಲ್ಲಿರುವ ಬಂಕಾಪುರ ಚಿನ್ನದಂಗಡಿ ಮೇಲೆ ದಾಳಿ ಮಾಡಿತ್ತು. ಪೊಲೀಸರು ಅಧಿಕಾರಿಯನ್ನು ವಶಕ್ಕೆ ಪಡೆದಿರುವ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಾಡಹಗಲೇ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಕೊಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಟಿ ಅಧಿಕಾರಿ ಎಂದು ವಂಚಿಸಿ ಹಣ ದೋಚುತ್ತಿದ್ದವ ಅರೆಸ್ಟ್

    ಐಟಿ ಅಧಿಕಾರಿ ಎಂದು ವಂಚಿಸಿ ಹಣ ದೋಚುತ್ತಿದ್ದವ ಅರೆಸ್ಟ್

    – ರಾಜ್ಯದ ಹಲವು ಜಿಲ್ಲೆಗಳಲ್ಲಿ ವಂಚನೆ

    ಕಾರವಾರ: ತಾನೊಬ್ಬ ಐಟಿ ಅಧಿಕಾರಿ ಎಂದು ಹೇಳಿಕೊಂಡು ರಾಜ್ಯದ ನಾನಾ ಪ್ರದೇಶದ ಜನರಿಗೆ ಲಕ್ಷಾಂತರ ರುಪಾಯಿ ಪಂಗನಾಮ ಹಾಕಿದ ವ್ಯಕ್ತಿಯನ್ನು ಕಾರವಾರ ನಗರ ಪೊಲೀಸರು ಹಣದ ಸಮೇತ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಹಾವೇರಿ ಮೂಲದ ಪ್ರಶಾಂತ್ ಎಂದು ಹೇಳಿಕೊಂಡಿರುವ ವ್ಯಕ್ತಿಯೇ ಪೊಲೀಸರಿಂದ ಬಂಧನಕ್ಕೊಳಗಾದವನು. ಈತ ಕಾರವಾರದ ವಿನೋದ್ ನಾಯ್ಕ ಎಂಬವರಿಗೆ ತಾನೊಬ್ಬ ಐಟಿ ಅಧಿಕಾರಿ ಪೆಪ್ಸಿ ಕಂಪನಿಯಲ್ಲಿ ಡಿಸ್ಟ್ರಿಬೂಶನ್ ಕೆಲಸ ಕೊಡಿಸುತ್ತೇನೆ. 15 ಲಕ್ಷ ಕಂಪನಿಗೆ ಕಟ್ಟಬೇಕಾಗುತ್ತದೆ ಎಂದು ಹೇಳಿ ಒಂದು ಲಕ್ಷ ಹಣ ಮುಂಗಡ ಪಡೆದು ಮೋಸ ಮಾಡಿರುತ್ತಾನೆ.

    ಕಾರವಾರದಲ್ಲಿ ಹಲವರಿಗೆ ಮೋಸ ಮಾಡಿದ್ದಲ್ಲದೇ ಕೊಪ್ಪಳ, ಮಂಗಳೂರು, ಉಡುಪಿ, ಮೈಸೂರು, ಹಾವೇರಿ, ಶಿವಮೊಗ್ಗಗಳಲ್ಲಿ ಸಹ ಜನರಿಗೆ ಸೈಟ್, ಡಿಸ್ಟ್ರಿಬ್ಯೂಷನ್ ಕೊಡಿಸುವುದಾಗಿ ಹೇಳಿ ಮೋಸ ಮಾಡಿ ಪರಾರಿಯಾಗಿದ್ದ. ಈತ ಕಾರವಾರದಲ್ಲಿ ಹಲವರಿಂದ ದೋಚಿದ ಹಣವನ್ನು ಕೊಂಡೊಯ್ಯುತ್ತಿರುವ ವೇಳೆ ಕಾರವಾರ ನಗರದ ಪಿಎಸ್‍ಐ ಸಂತೋಷ್ ಕುಮಾರ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತನಿಂದ 5,95,000 ರೂ. ನಗದು, 13,00,000 ಮೌಲ್ಯದ 327 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ ದುಬಾರಿ ಫೋರ್ಡ್ ಕಾರ್ ವಶಕ್ಕೆ ಪಡೆಯಲಾಗಿದೆ.

  • ಪರಮೇಶ್ವರ್ ಆಪ್ತ ರಮೇಶ್ ಐಟಿಗೆ ಬೆದರಿದ್ರಾ? ಕೊನೆ ಕ್ಷಣ ಹೇಗಿತ್ತು?

    ಪರಮೇಶ್ವರ್ ಆಪ್ತ ರಮೇಶ್ ಐಟಿಗೆ ಬೆದರಿದ್ರಾ? ಕೊನೆ ಕ್ಷಣ ಹೇಗಿತ್ತು?

    ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಆಪ್ತ ರಮೇಶ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಬೆದರಿಕೆಯಿಂದ ಆತ್ಮಹತ್ಯೆಗೆ ಶರಣಾದ್ರಾ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.

    ಆತ್ಮಹತ್ಯೆಗೂ ಮುನ್ನ ರಮೇಶ್ ಕುಟುಂಬಸ್ಥರ ಜೊತೆಗೆ ಭಾವನಾತ್ಮಕ ಕ್ಷಣ ಕಳೆದಿದ್ದರು. ಕುಟುಂಬಸ್ಥರು ಧೈರ್ಯ ನೀಡಿದ್ದರೂ ರಮೇಶ್ ಮನೆಯಿಂದ ತೆರಳಿ ಜ್ಞಾನಭಾರತಿ ಕ್ಯಾಂಪಸ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಮನೆಯಿಂದ ತೆರಳುತ್ತಿದ್ದಾಗ ಕುಟುಂಬಸ್ಥರಿಗೆ ಕೈಬಿಸಿ ಬರುತ್ತೇನೆ ಎಂದು ಹೇಳಿದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪರಮೇಶ್ವರ್ ಪಿಎ ರಮೇಶ್ ವಿಚಾರಣೆ ನಡೆಸಿಲ್ಲ: ಐಟಿ ಸ್ಪಷ್ಟನೆ

    ಐಟಿ ವಿಚಾರಣೆಯಿಂದ ಹೆದರಿದ್ದ ರಮೇಶ್ ಅವರನ್ನು ಮನೆಗೆ ಕರೆಸಿದ್ದ ಪರಮೇಶ್ವರ್ ಧೈರ್ಯ ಹೇಳಿದ್ದರು. ಅಲ್ಲಿಂದ ಉಲ್ಲಾಳದ ತಮ್ಮ ಮನೆಗೆ ವಾಪಸ್ ಆಗಿದ್ದ ರಮೇಶ್ ಕುಟುಂಬಸ್ಥರನ್ನು ಭೇಟಿಯಾಗಿದ್ದರು. ಬಳಿಕ ಉಪಾಹಾರ ಸೇವಿಸಿದ ರಮೇಶ್ ಮನೆಯಿಂದ ಹೊರಡುವಾಗ ಕುಟುಂಬಸ್ಥರಿಗೆ ಟಾಟಾ ಮಾಡಿದ್ದರು. ವಿದಾಯದ ಅರಿವಿಲ್ಲದೆ ಕುಟುಂಬಸ್ಥರು ಕೂಡ ಸಂತೋಷದಿಂದಲೇ ರಮೇಶ್‍ರನ್ನು ಕಳುಹಿಸಿಕೊಟ್ಟಿದ್ದರು. ಉಲ್ಲಾಳ ಮನೆಯಿಂದ ಬೆಳಗ್ಗೆ 9:02 ಗಂಟೆಗೆ ಹೊರಟ ರಮೇಶ್ ಜ್ಞಾನಭಾರತಿ ಕ್ಯಾಂಪಸ್‍ಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದೇನೆ, ಪತ್ನಿ-ಮಕ್ಕಳಿಗೆ ಟಾರ್ಚರ್ ಕೊಡ್ಬೇಡಿ: ರಮೇಶ್

    ಈ ಪ್ರಕರಣಕ್ಕೆ ಸಂಬಂಧಿದಂತೆ ಐಟಿ ಅಧಿಕಾರಿಗಳು ಗುರುವಾರ ಮಧ್ಯಾಹ್ನ 1:15ಕ್ಕೆ ರಮೇಶ್ ಅವರ ನಿವಾಸಕ್ಕೆ ಬಂದಿದ್ದರು. ಈ ದೃಶ್ಯವು ರಮೇಶ್ ಅವರ ಮನೆಯ ಹೊರಗೆ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂದು ಐಟಿ ಅಧಿಕಾರಿಗಳು ರಮೇಶ್ ಅವರನ್ನು ವಿಚಾರಣೆ ಒಳಪಡಿಸಿದ್ದರು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಪರಮೇಶ್ವರ್ ನಿವಾಸಲ್ಲಿ ಸಿಕ್ಕಿದ್ದ ಹಣಕ್ಕೆ ಸಾಕ್ಷಿಯಾಗಿದ್ದ ರಮೇಶ್‍ರನ್ನು ಪಂಚನಾಮೆ ಮಾಡುವಾಗ ಐಟಿ ಅಧಿಕಾರಿಗಳು ಬೆದರಿಸಿದ್ದ ಹಾಕಿದ್ದರು. ಆರೋಪಿಯ ರೀತಿ ಎಲ್ಲಾ ಕಡೆ ಕರೆದುಕೊಂಡು ಹೋಗಿದ್ದರು. ಅಷ್ಟೇ ಅಲ್ಲದೆ ಪಂಚನಾಮೆ ಮಾಡೋವಾಗಲೇ ಹವಾಲದ ಬಗ್ಗೆ ಮಾತನಾಡಿಸಿದ್ದರು ಎಂದು ಹೇಳಲಾಗುತ್ತಿದೆ.

    ಮೆಡಿಕಲ್ ಸೀಟ್‍ಗಳನ್ನು ಎಷ್ಟಕ್ಕೆ ಮಾರಾಟ ಮಾಡುತ್ತಿರಿ ಎಂದು ಐಟಿ ಅಧಿಕಾರಿಗಳು ರಮೇಶ್‍ರನ್ನು ಪ್ರಶ್ನಿಸಿದ್ದರು. ಜೊತೆಗೆ ಅವರ ಮನೆಯಲ್ಲಿ ಕೆಲವೊಂದು ದಾಖಲೆಗಳು ಸಿಕ್ಕಿದ್ದವು. ಅವುಗಳನ್ನು ವಶಕ್ಕೆ ಪಡೆದು ಪಂಚನಾಮೆ ಮಾಡಿದ್ದರು. ಇದನ್ನೆಲ್ಲಾ ನೋಡುತ್ತಾ ಇದ್ದ ರಮೇಶ್ ಅವರಿಗೆ ಭಯ ಎದುರಾಗಿತ್ತು. ಇವತ್ತು ನಮ್ಮನ್ನು ಸಾಕ್ಷಿಯನ್ನಾಗಿ ಮಾಡಿದ್ದಾರೆ. ಮುಂದಿನ ದಿನ ನಾನು ಆರೋಪಿ ಆಗಬಹುದು ಎಂಬ ಭಯ ಕಾಡ ತೊಡಗಿತ್ತು. ಹೀಗಾಗಿ ರಮೇಶ್ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    https://www.youtube.com/watch?v=U7jgbwAAatQ

  • ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಸಿಕ್ಕಿ ಬಿದ್ದ ಜೆಡಿಎಸ್ ಮುಖಂಡನ ಪುತ್ರ

    ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಸಿಕ್ಕಿ ಬಿದ್ದ ಜೆಡಿಎಸ್ ಮುಖಂಡನ ಪುತ್ರ

    – 1.39 ಲಕ್ಷ ರೂ. ನಗದು ಜಪ್ತಿ ಮಾಡಿದ ಐಟಿ ಅಧಿಕಾರಿಗಳು

    ಶಿವಮೊಗ್ಗ: ಮಾಜಿ ಶಾಸಕ, ಜೆಡಿಎಸ್ ಮುಖಂಡ ಅಪ್ಪಾಜಿ ಗೌಡ ಅವರ ಪುತ್ರ ಅಜಿತ್ ಕುಮಾರ್ ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಭದ್ರಾವತಿಯ ಎಂಪಿಎಂ – ಸುರಗಿ ತೋಪಿನಲ್ಲಿ ಅಜಿತ್ ಕುಮಾರ್ ಹಣ ಹಂಚುತ್ತಿದ್ದರು. ಈ ಕುರಿತು ಐಟಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಹೀಗಾಗಿ ಎಂಪಿಎಂ ಠಾಣೆಯ ಪೊಲೀಸರ ಸಹಕಾರದಿಂದ ದಾಳಿ ಮಾಡಿದ ಅಧಿಕಾರಿಗಳು 1.39 ಲಕ್ಷ ರೂ. ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಇದನ್ನು ಓದಿ: ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನ ಸ್ಟೆಪ್ನಿಯಲ್ಲಿತ್ತು 2.30 ಕೋಟಿ ರೂ.!

    ಅಜಿತ್ ಕುಮಾರ್ ಬೆಳಗ್ಗೆಯಿಂದಲೇ ಭದ್ರಾವತಿಯ ವಿವಿಧ ಗ್ರಾಮಗಳಿಗೆ ತೆರಳಿ ಮತದಾರರಿಗೆ ಹಣ ಹಂಚುತ್ತಿದ್ದರು. ಮಧ್ಯಾಹ್ನ ಎಂಪಿಎಂ- ಸುರಗಿ ತೋಪಿಗೆ ಬಂದಾಗ ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

    ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮತದಾನ ಮಂಗಳವಾರ ನಡೆಯಲಿದ್ದು, ಕುರುಡು ಕಾಂಚಣ ಭಾರೀ ಸದ್ದು ಮಾಡುತ್ತಿದೆ. ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ಭದ್ರಾವತಿಗೆ ಕಾರಿನ ಸ್ಟೆಪ್ನಿ ಟೈರ್ ಒಳಗಡೆ ಸಾಗಿಸುತ್ತಿದ್ದ 2.30 ಕೋಟಿ ರೂ.ವನ್ನು ಶನಿವಾರ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ಅವರಿಗೆ ಐಟಿಯಿಂದ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಶಾಸಕರ ಓರ್ವ ಆಪ್ತನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

  • ಹೊಳೆನರಸೀಪುರದಲ್ಲಿ ಲಕ್ಷ ಲಕ್ಷ ಹಣದ ಬ್ಯಾಗ್ ಸಮೇತ ಸಿಕ್ಕಿಬಿದ್ದ ಯುವಕ

    ಹೊಳೆನರಸೀಪುರದಲ್ಲಿ ಲಕ್ಷ ಲಕ್ಷ ಹಣದ ಬ್ಯಾಗ್ ಸಮೇತ ಸಿಕ್ಕಿಬಿದ್ದ ಯುವಕ

    ಹಾಸನ: ದ್ವಿಚಕ್ರ ವಾಹನದಲ್ಲಿ ಸುಮಾರು 25 ಲಕ್ಷ ರೂ. ಹಣದೊಂದಿಗೆ ತೆರಳುತ್ತಿದ್ದ ಯುವಕನನ್ನು ಐಟಿ ಅಧಿಕಾರಿಗಳು ಹೊಳೆನರಸೀಪುರ ಪಟ್ಟಣದಲ್ಲಿ ವಶಕ್ಕೆ ಪಡೆದಿದ್ದಾರೆ.

    ಹಳೇ ಮೈಸೂರು ಕಡೆಯಿಂದ 30 ವರ್ಷದ ಯುವಕೊಬ್ಬ ಹೊಳೆನರಸೀಪುರ ಕಡೆಗೆ ಭಾರೀ ಹಣದೊಂದಿಗೆ ತೆರಳುತ್ತಿರುವ ಖಚಿತ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭಿಸಿತ್ತು. ಮಾಹಿತಿ ಲಭಿಸುತ್ತಿದಂತೆ ಕಾರ್ಯಾಚರಣೆಗೆ ಇಳಿದ ಐಟಿ ಅಧಿಕಾರಿಗಳ ತಂಡ ಯುವಕನನ್ನು ಅಡ್ಡಗಟ್ಟಿ ವಶಕ್ಕೆ ಪಡೆದಿದೆ. ಆ ವೇಳೆ ಯುವಕನ ಬಳಿ 25 ಲಕ್ಷ ರೂ. ಹಣ ಪತ್ತೆಯಾಗಿದೆ.

    ಬೆಂಗಳೂರು ಮೂಲದ ರಿಜಿಸ್ಟರ್ ನಂಬರ್ ಇರುವ ಬೈಕಿನಲ್ಲಿ ಯುವಕ ತೆರಳುತ್ತಿದ್ದ. ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹಣದ ಮೂಲದ ಬಗ್ಗೆ ಪ್ರಶ್ನಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ ಯುವಕ ಇದು ಅಡಿಕೆ ಮಾರಾಟ ಮಾಡಿದ ಹಣ ಎಂದು ಮಾಹಿತಿ ನೀಡಿದ್ದಾನೆ. ಆದರೆ ಅದಕ್ಕೆ ಸೂಕ್ತ ದಾಖಲೆ ನೀಡಿಲ್ಲ. ಇಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಹಾಸನ ಜಿಲ್ಲಾಧಿಕಾರಿ, ಎಸ್‍ಪಿ ವರ್ಗಾವಣೆ ಮಾಡಿದ ಬಳಿಕ ಜೆಡಿಎಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅವರ ವಿರುದ್ಧ ಮಾತನಾಡುವ ನಾಯಕರನ್ನೇ ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರದ ದಾಳಿ ನಡೆಸಿದೆ. ಬಿಜೆಪಿ ಹೇಳಿದಂತೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಇತ್ತ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು , ಹಾಸನದಲ್ಲಿ ರಾಜ್ಯ ಸರ್ಕಾರದ ಯೋಜನೆಗಳು ಪೂರ್ಣಗೊಳ್ಳದೆಯೇ ಹಣ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಐಟಿ ದಾಳಿ ನಡೆಸಿದೆ ವಿನಃ ಬಿಜೆಪಿ ಯಾವುದೇ ರೀತಿಯಲ್ಲಿ ಇದರಲ್ಲಿ ತೊಡಗಿಲ್ಲ. ಸಂಸ್ಥೆಗಳು ಸ್ವತಂತ್ರ ತನಿಖೆ ನಡೆಸಲು ಅರ್ಹವಾಗಿದೆ. ಅದರಂತೆ ದಾಳಿ ನಡೆದಿದೆ ಎಂದು ಅಷ್ಟೇ ಎಂದು ಹೇಳಿದ್ದರು.

  • ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೇಳಿದ ಪುನೀತ್

    ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೇಳಿದ ಪುನೀತ್

    ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಇಂದು ಕೂಡ ರೇಡ್ ಮುಂದುವರಿದಿದ್ದು, ಸುಮಾರು 9 ಗಂಟೆಯಿಂದ ಪುನೀತ್ ಮತ್ತು ಪತ್ನಿ ಅಶ್ವಿನಿ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅವರು ಐಟಿ ಅಧಿಕಾರಿಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದು, ನನ್ನ ವ್ಯವಹಾರದ ಬಗ್ಗೆ ನನ್ನ ಬಳಿ ದಾಖಲೆ ಇವೆ. ಆದರೆ ದಾಖಲೆ ಸಲ್ಲಿಸಲು ಸ್ವಲ್ಪ ಸಮಯ ಬೇಕು. ಸಾಕಷ್ಟು ವ್ಯವಹಾರ ಮಾಡಿರುವುದರಿಂದ ಸ್ವಲ್ಪ ಗೊಂದಲವಿದೆ. ಪ್ರತಿಯೊಂದಕ್ಕೂ ರಶೀದಿ ಇಟ್ಟಿದ್ದೀನಿ. ಹೀಗಾಗಿ ದಾಖಲೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಕೊಡಿ ಎಂದು ನಟ ಪುನೀತ್ ಸಮಾಧಾನವಾಗಿಯೇ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಪುನೀತ್ ವಿರುದ್ಧ ತೆರಿಗೆ ವಂಚನೆ ಮಾಡಿರುವ ಆರೋಪ- ಮುಂದುವರಿದ ಐಟಿ ದಾಳಿ

    ಗುರುವಾರ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾಗ ಚಿನ್ನಾಭರಣಗಳ ಮೌಲ್ಯ, ಕೆಲವೊಂದು ಆಸ್ತಿ ಪತ್ರಗಳ ಮೌಲ್ಯ ಮಾಡಲಾಗಿತ್ತು. ಇಂದು ಆಸ್ತಿ ಪತ್ರಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಪುನೀತ್ ರಾಜ್‍ಕುಮಾರ್ ದಂಪತಿಯ ಬ್ಯಾಂಕ್ ಅಕೌಂಟ್‍ಗಳ ಮಾಹಿತಿಯನ್ನು ಐಟಿ ಅಧಿಕಾರಿಗಳು ಪಡೆದುಕೊಂಡಿದ್ದು, ಮನೆಯಿಂದ ಬ್ಯಾಂಕ್ ಡಿಟೈಲ್ಸ್ ನೊಂದಿಗೆ ಅಕೌಂಟ್ ಡಿಟೈಲ್ಸ್ ತೆಗೆಯಲು ಅಧಿಕಾರಿಗಳು ಬ್ಯಾಂಕ್ ಗಳಿಗೆ ತೆರಳಿದ್ದಾರೆ.

    ಬಿಗ್ ಬಜೆಟ್ ಸಿನಿಮಾಗಳಿಂದ ಪುನೀತ್ ರಾಜ್‍ಕುಮಾರ್ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದರು. ಆದರೆ ಆದಾಯ ತೆರಿಗೆ ಕಟ್ಟದೇ ವಂಚಿಸಿದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಪುನೀತ್ ಅವರು ಮನೆಗೆ ಹೋಗಿದ್ದಾರೆ. ತಡರಾತ್ರಿ ಪರಿಶೀಲನೆ ಮುಗಿತು ಎಂದು ಐಟಿ ಅಧಿಕಾರಿಗಳು ತೆರಳಿದ್ದರು. ಆದರೆ ಬಳಿಕ ಮಧ್ಯರಾತ್ರಿ ಮತ್ತೆ ಪುನೀತ್ ಮನೆಗೆ ಎಂಟ್ರಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv