Tag: IT-ED

  • ಐಟಿ ಇಡಿ ಗೊತ್ತಿರಲಿಲ್ಲ, ಐಟಿಸಿ ಸಿಗರೇಟ್ ಮಾತ್ರ ಗೊತ್ತಿತ್ತು – ರೇವಣ್ಣ

    ಐಟಿ ಇಡಿ ಗೊತ್ತಿರಲಿಲ್ಲ, ಐಟಿಸಿ ಸಿಗರೇಟ್ ಮಾತ್ರ ಗೊತ್ತಿತ್ತು – ರೇವಣ್ಣ

    – ಹೆಚ್‌ಡಿಕೆ ಬೈದವರಿಗೆ ಈ ಸರ್ಕಾರ ಗಿಫ್ಟ್ ಕೊಡುತ್ತೆ

    ಬೆಂಗಳೂರು: ಲೋಕಸಭೆ ಚುನಾವಣೆಯವರೆಗೆ ಐಟಿ ಇಡಿ ಎಂದರೆ ನಮಗೆ ಗೊತ್ತೆ ಇರಲಿಲ್ಲ ಅದಕ್ಕೂ ಮುಂಚೆ ನನಗೆ ಐಟಿಸಿ ಸಿಗರೇಟ್ ಮಾತ್ರ ಗೊತ್ತಿತ್ತು ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಅವರು ವ್ಯಂಗ್ಯವಾಡಿದ್ದಾರೆ.

    ಇಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಟಿ ಇಡಿ ಇದೆ ಎಂದು ಗೊತ್ತಾಗಿದ್ದೆ ನಮಗೆ ಈ ಬಾರಿಯ ಲೋಕಸಭೆಯ ಚುನಾವಣೆಯ ವೇಳೆ. ಅದಕ್ಕೂ ಮುನ್ನಾ ನಮಗೆ ಐಟಿಸಿ ಸಿಗರೇಟ್ ಮಾತ್ರ ಗೊತ್ತಿತ್ತು. ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಐಟಿ ದಾಳಿ ಆದಗ ನಮ್ಮಲ್ಲಿ ಅವು ಇದೆ ಎನ್ನುವುದು ತಿಳಿಯಿತು ಎಂದು ಐಟಿ ಮತ್ತು ಇಡಿ ಸಂಸ್ಥೆಗಳ ಮೇಲೆ ಕಿಡಿಕಾರಿದರು.

    ಇದೇ ವೇಳೆ ಅಪೆಕ್ಸ್ ಬ್ಯಾಂಕ್ ನ ಅಕ್ರಮದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯ ಮಾಡಿ. ಸಹಕಾರ ಇಲಾಖೆಯಲ್ಲಿ ಅಕ್ರಮ ತುಂಬಿ ತುಳುಕುತ್ತಿದೆ. ಆದರೆ ಸಿಎಂ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನವಾಗಿದ್ದಾರೆ. ಇದೇ ಯಡಿಯೂರಪ್ಪ ಸಾಧನೆ ಎಂದು ಲೇವಡಿ ಮಾಡಿದರು. ಐಎಂಎ ಹಗರಣದಲ್ಲಿ ಅದರ ಅಂಗ ಸಂಸ್ಥೆಗಳಾದ ಐಎಂಎ ಹೌಸಿಂಗ್ ಸೊಸೈಟಿ, ಫೈನಾನ್ಸ್, ಕ್ರೆಡಿಟ್ ಕೊ ಆಪರೇಟೀವ್ ಸೊಸೈಟಿಯಿಂದ ಜನರಿಗೆ ಎರಡು ಸಾವಿರ ಕೋಟಿ ಅಕ್ರಮವಾಗಿದೆ. ಆದರೆ ಸರ್ಕಾರ ಈವೆಗೂ ಯಾವುದೇ ಕ್ರಮ ತಗೊಂಡಿಲ್ಲ ಎಂದು ಕಿಡಿಕಾರಿದರು.

    ಎರಡು ರಾಷ್ಟ್ರೀಯ ಪಕ್ಷಗಳು ದೇವೇಗೌಡರನ್ನ ಮುಗಿಸಲು ಕೆಲಸ ಮಾಡ್ತಿವೆ. ಚುನಾವಣೆಯಲ್ಲಿ ಸೋಲಿಸಿದ್ರು. ಸಹಕಾರ ಇಲಾಖೆ ನಡೆಸುತ್ತಿರೋರು ಸಹಕಾರಿ ಸಚಿವರು ಅಲ್ಲ. ಇಲಾಖೆ ಪ್ರಧಾನ ಕಾರ್ಯದರ್ಶಿ, ಮತ್ತು ದೇವೇಗೌಡರನ್ನ ಬೈದವರು ನಡೆಸುತ್ತಿದ್ದಾರೆ. ದೇವೇಗೌಡರಿಗೆ ಬೈದವರಿಗೆ ಈ ಸರ್ಕಾರ ಗಿಫ್ಟ್ ಕೊಡುತ್ತೆ. ದೇವೇಗೌಡರನ್ನು ಬೈಯುತ್ತಿರೋರು ಯಾರು ಎಂದು ನಿಮಗೆ ಗೊತ್ತು ನಾನು ಹೇಳೊಲ್ಲ ಅಂತ ಪರೋಕ್ಷವಾಗಿ ತುಮಕೂರಿನ ಮಾಜಿ ಶಾಸಕ ರಾಜಣ್ಣ ವಿರುದ್ಧ ರೇವಣ್ಣ ಕಿಡಿಕಾರಿದರು.

    ರೈತರಿಂದ ಸರ್ಕಾರ ನೇರವಾಗಿ ಜೋಳ ಖರೀದಿ ಮಾಡಬೇಕು ಎಂದು ರೇವಣ್ಣ ಸರ್ಕಾರವನ್ನು ಒತ್ತಾಯ ಮಾಡಿದರು. ಟೆಂಡರ್ ಇಲ್ಲದೆ ರೈತರಿಂದ ನೇರವಾಗಿ ಜೋಳ ಖರೀದಿ ಮಾಡಬೇಕು ಅಂತ ನಾನು ಸಿಎಂಗೆ ಪತ್ರ ಬರೆದಿದ್ದೆ. ಆದರೆ ಸಿಎಂ ನನ್ನ ಪತ್ರ ಕಾಸದ ಬುಟ್ಟಿಗೆ ಹಾಕಿದ್ದಾರೆ ಎಂದರು.

  • ಐಟಿ-ಇಡಿ ಕೊಲೆ ಮಾಡುವ ಉದ್ದೇಶ ಇಟ್ಕೊಂಡು ದಾಳಿ ಮಾಡಿರಲ್ಲ: ಎಸ್.ಮುನಿಸ್ವಾಮಿ

    ಐಟಿ-ಇಡಿ ಕೊಲೆ ಮಾಡುವ ಉದ್ದೇಶ ಇಟ್ಕೊಂಡು ದಾಳಿ ಮಾಡಿರಲ್ಲ: ಎಸ್.ಮುನಿಸ್ವಾಮಿ

    ಕೋಲಾರ: ಐಟಿ-ಇಡಿ ಕೊಲೆ ಮಾಡುವ ಉದ್ದೇಶ ಇಟ್ಟುಕೊಂಡು ದಾಳಿ ಮಾಡಿರಲ್ಲ. ಅವರು ನೂರಕ್ಕೆ ನೂರು ಸರಿಯಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಅವರು ಪರಮೇಶ್ವರ್ ಆಪ್ತ ಸಹಾಯಕನ ಸಾವಿಗೆ ಐಟಿಯೇ ಕಾರಣ ಎಂಬ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ರೀತಿಯಲ್ಲಿ ಎದುರಿಸಬೇಕಿತ್ತು ಅದು ಬಿಟ್ಟು ಹೀಗೆ ಮಾಡಿಕೊಳ್ಳುವುದು ತಪ್ಪು. ಅವರ ಪತ್ನಿ ಕೂಡ ಆತ್ಮಹತ್ಯೆ ಅಲ್ಲ ಕೊಲೆ ಎಂದಿದ್ದಾರೆ. ಐಟಿ ಉದ್ದೇಶ ಕೊಲೆ ಮಾಡುವುದಲ್ಲ ಎಂದು ಹೇಳಿದರು.

    ದೇಶದಲ್ಲಿ ಎಲ್ಲಾ ಕಡೆ ಐಟಿ ಇಡಿ ದಾಳಿ ನಡೆಯುತ್ತಿದೆ. ಲೆಕ್ಕ ಕೊಟ್ಟು ಸಾಧಿಸಬೇಕು. ಎಲ್ಲವೂ ಸರಿಯಾಗಿದ್ದರೆ ಭಯ ಪಡುವ ಅಗತ್ಯವಿಲ್ಲ. ಆತ್ಮಹತ್ಯೆ ಒಂದೇ ದಾರಿಯಲ್ಲ ಎಂದು ಸಲಹೆ ನೀಡಿದರು. ಇದೇ ವೇಳೆ ಕಾಂಗ್ರೆಸ್ ಮುಖಂಡ ಕೆ.ಎಚ್ ಮುನಿಯಪ್ಪ ಅವರ ದಲಿತರನ್ನ ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ದೇಶದಲ್ಲಿ ಕೆ.ಎಚ್ ಮುನಿಯಪ್ಪ ಒಬ್ಬರೇ ದಲಿತರಲ್ಲ, ದಲಿತರನ್ನೇ ಟಾರ್ಗೆಟ್ ಮಾಡುವ ಅಗತ್ಯ ಐಟಿಗಿಲ್ಲ ಎಂದರು.

    ಐಟಿ ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ. ಅವರೇನಾದರೂ ಅಕ್ರಮ ಹಣ ಸಂಪಾದಿಸಿ ತಪ್ಪಿಸಿಕೊಳ್ಳಲು ಹೀಗೆ ಮಾತನಾಡುತ್ತಿದ್ದಾರಾ ಗೊತ್ತಿಲ್ಲ ಎಂದು ಮುನಿಯಪ್ಪ ಅವರಿಗೆ ಟಾಂಗ್ ನೀಡಿದರು. ಕಾನೂನಿಗೆ ಎಲ್ಲರೂ ತಲೆ ಬಾಗಬೇಕು. ಬಿಜೆಪಿ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಿಸುತ್ತಿಲ್ಲ. ಐಟಿ ಅವರೇ ದಾಳಿ ಮಾಡುತ್ತಿರುವುದು ಎಂದು ತಿಳಿಸಿದರು.