Tag: it attack

  • ಐಟಿ ಅಧಿಕಾರಿಗಳ ನಿಜ ಬಣ್ಣ ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ: ಡಿ.ಕೆ.ಸುರೇಶ್

    ಐಟಿ ಅಧಿಕಾರಿಗಳ ನಿಜ ಬಣ್ಣ ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ: ಡಿ.ಕೆ.ಸುರೇಶ್

    ಬೆಂಗಳೂರು: ಹವಾಲ ಅಂದ್ರೆ ಏನು ಅಂತಾ ನನಗೆ ಗೊತ್ತಿಲ್ಲ. ಆರೋಪ ಮಾಡಿದರೆ ಅಷ್ಟೇ ಸಾಲದು ಸೂಕ್ತ ಸಾಕ್ಷಿ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

    ಐಟಿ ದಾಳಿಯ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳು ನ್ಯಾಯಸಮ್ಮತವಾಗಿ ಕೆಲಸ ಮಾಡುತ್ತಿದ್ದಾರೋ? ಇಲ್ಲವೋ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ನಾನು ತಪ್ಪು ಮಾಡಿದ್ದರೆ ಹೆದರಬೇಕು. ಆದರೆ ಅಧಿಕಾರ ಇದೆ ಎನ್ನುವ ಕಾರಣಕ್ಕೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಹಾಕಿ ಬಂಧಿಸಬಹುದೇ ವಿನಃ ಏನು ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.

    ರಾಜ್ಯದಲ್ಲಿ ಕಾಂಗ್ರೆಸ್ ಗೆ ಬಲ ತುಂಬುತ್ತಿರುವ ನನ್ನನ್ನು ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹತ್ತಿಕ್ಕಲು ಬಿಜೆಪಿ ನಾಯಕರು ಐಟಿ ದಾಳಿ ತಂತ್ರ ಬಳಸುತ್ತಿದ್ದಾರೆ. ಇದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬಲಿಷ್ಠ ನಾಯಕರನ್ನು ಹತ್ತಿಕ್ಕಲು ಬಿಜೆಪಿ ರಾಷ್ಟ್ರೀಯ ನಾಯಕರು ಐಟಿ ದಾಳಿ ಬಳಸುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು.

    ಯಾರದ್ದೋ ಮನೆಯಲ್ಲಿ ಹಣ ಸಿಕ್ಕಿರುವ ಹಣಕ್ಕೆ ನಾವು ಹೇಗೆ ಸಂಬಂಧ ಪಡುತ್ತೇವೆ. ಯಾರ ಮನೆಯಲ್ಲಿ ಹಣ ದೊರೆತಿದೆಯೋ ಅವರ ವಿರುದ್ಧ ಐಟಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಅಲ್ಲದೇ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ನಡೆಸಿದ ವೇಳೆ ದೊರೆತ ಹಣ ಹಾಗೂ ಆಸ್ತಿಗಳಿಗೆ ಸೂಕ್ತ ದಾಖಲೆಯನ್ನು ಅವರು ನೀಡುತ್ತಾರೆ. ಇದನ್ನು ಹೊರತು ಪಡಿಸಿ ಯಾವುದೇ ಪ್ರಕರಣಗಳು ನಮಗೆ ಸಂಬಂಧಿಸಿದಲ್ಲ ಎಂದು ಸ್ಪಷ್ಟನೆ ನೀಡಿದರು.

    ಹವಾಲ ಆರೋಪ ಸಾಬೀತು ಮಾಡಲು, ಹಣ ನೀಡಿದವರು ಹಾಗೂ ಪಡೆದವರು ಬೇಕಾಗುತ್ತದೆ. ಐಟಿ ಅಧಿಕಾರಿಗಳು ದಾಳಿ ಮಾಡಿರುವ ಮನೆ ಹಾಗೂ ಹಣ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ್ದಲ್ಲ. ಅವರಿಗೆ ಸೇರಿರುವ ಆರೋಪಗಳಿಗೆ ಸೂಕ್ತ ದಾಖಲೆ ನೀಡುತ್ತಾರೆ ಎಂದು ಸಂಸದರು ಪ್ರತಿಕ್ರಿಯಿಸಿದರು.

    ಐಟಿ ದಾಳಿಯ ವೇಳೆ ದೊರೆತ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗ ಪಡಿಸುತ್ತಾರೆ. ಅಂತೆ ಡಿ.ಕೆ.ಶಿವಕುಮಾರ್ ಮನೆ ಮೇಲಿನ ದಾಳಿಯ ವೇಳೆ ದೊರೆತಿರುವ ದಾಖಲೆಗಳನ್ನು ಬಹಿರಂಗ ಪಡೆಸಬೇಕು. ಏಕೆಂದರೆ ಅದರಲ್ಲಿ ಬಿಜೆಪಿ ನಾಯಕರ ಹಗರಣಗಳ ಪಟ್ಟಿಯೇ ಇದೆ ಎಂದರು.

  • ಮುನಿರತ್ನಗೆ ಗೆಲುವು ಜನರು ಕೊಟ್ಟಿದ್ದಲ್ಲ, ಅಧಿಕಾರಿಗಳು ಕೊಟ್ಟಿದ್ದು- ಶೆಟ್ಟರ್

    ಮುನಿರತ್ನಗೆ ಗೆಲುವು ಜನರು ಕೊಟ್ಟಿದ್ದಲ್ಲ, ಅಧಿಕಾರಿಗಳು ಕೊಟ್ಟಿದ್ದು- ಶೆಟ್ಟರ್

    ಧಾರವಾಡ: ಮುನಿರತ್ನ ಅವರಿಗೆ ಇದು ಜನರು ಕೊಟ್ಟ ಗೆಲ್ಲುವಲ್ಲ, ಅಧಿಕಾರಿಗಳು ಕೊಟ್ಟ ಗೆಲುವು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮುನಿರತ್ನ ಅವರು ಗೆಲುವು ಸಾಧಿಸಲು ಕಾಂಗ್ರೆಸ್ ಅಧಿಕಾರಿಗಳನ್ನು ದುರುಪಯೋಗ ಪಡೆಸಿಕೊಂಡಿದೆ ಎಂದು ಆರೋಪಿಸಿದರು.

    ಐಟಿ ಅಧಿಕಾರಿಗಳು ಸೂಕ್ತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸುತ್ತಾರೆ. ಉದ್ದೇಶಪೂರ್ವಕವಾಗಿ ದಾಳಿ ಮಾಡುವುದಿಲ್ಲ. ಕೆಲವರು ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ, ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎನ್ನುವ ಆರೋಪ ವ್ಯಕ್ತಪಡಿಸುತ್ತಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇನ್ನು ಹದಿನೈದು ದಿನ ಕಳೆದರೂ ರೈತರ ಸಾಲ ಮನ್ನಾ ಮಾಡುವುದಿಲ್ಲ. ಭರವಸೆ ನೀಡುತ್ತ ಸಮಸ್ಯೆಯಿಂದ ಪಲಾಯನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ: ಸಿಎಂ ಕುಮಾರಸ್ವಾಮಿ

    ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ: ಸಿಎಂ ಕುಮಾರಸ್ವಾಮಿ

    ಬೆಂಗಳೂರು: ಶಾಸಕ ಡಿ.ಕೆ.ಶಿವಕುಮಾರ್ ಅವರ ಮೇಲಿನ ಸಿಬಿಐ ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಡಿಕೆಶಿ ಆಪ್ತರಾದ 11 ಜನರ ವಿರುದ್ಧ ಸಿಬಿಐ ಸರ್ಚ್ ವಾರೆಂಟ್ ಜಾರಿಯಾಗಿರುವ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯದ ಕುರಿತು ಹಲವಾರು ಬಾರಿ ಚರ್ಚೆ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ತಾವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಾಗಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

    ಪ್ರಕರಣವು ಕೇಂದ್ರ ಹಾಗೂ ಡಿಕೆಶಿ ಅವರಿಗೆ ಸಂಬಂಧಿಸಿದ್ದು, ನನ್ನ ವ್ಯಾಪ್ತಿಗೆ ಬರಲ್ಲ. ಅವರು ಸಮರ್ಥರಿದ್ದಾರೆ, ಐಟಿ ದಾಳಿಯನ್ನು ಎದುರಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

    ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಜಯಗಳಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಆರ್ ಆರ್ ನಗರದ ಚುನಾವಣೆ ಬಗ್ಗೆ ಏನೂ ತಲೆ ಕೆಡಿಸಿಕೊಂಡಿಲ್ಲ. ನಾವು ಅಥವಾ ಕಾಂಗ್ರೆಸ್ ಗೆಲ್ಲಬೇಕಿತ್ತು. ಅಲ್ಲಿ ಈಗ ಕಾಂಗ್ರೆಸ್ ಗೆದ್ದಿದೆ ಎಂದು ತಿಳಿಸಿದರು.

    ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ 11 ಮಂದಿ ಆಪ್ತರ ಮೇಲೆ ಸಿಬಿಐ ಕೋರ್ಟ್ ಸರ್ಚ್ ವಾರೆಂಟ್ ಹೊರಡಿಸಿದೆ. ಆದಾಯ ತೆರಿಗೆ ಪ್ರಕರಣದಲ್ಲಿ ಸಿಬಿಐ 82ನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಾಂಜಲಿ ದೇವಿ ಅವರು ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ನಿನ್ನೆ ಕೋರ್ಟ್ ನಲ್ಲಿ ಡಿ.ಕೆ.ಶಿವಕುಮಾರ್ ಹಾಜರಾಗಿದ್ದರು. 11 ಜನರಲ್ಲಿ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಇಬ್ಬರ ಹೆಸರಿಲ್ಲ.

    ಸರ್ಚ್ ವಾರೆಂಟ್ ಹೊರಡಿಸಿದ ವಿಚಾರ ತಿಳಿದು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ತುರ್ತು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಐಟಿ, ಇಡಿ ಮೂಲಕ ನಮ್ಮನ್ನು ಸದೆಬಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಇಲಾಖೆಗಳನ್ನು ದುರಪಯೋಗ ಮಾಡಿಕೊಂಡ ಕೇಂದ್ರ ಸರ್ಕಾರ ನಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ 11 ಜನರ ಮೇಲೆ ಸಿಬಿಐ ಮತ್ತು ಇಡಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ಬಿಜೆಪಿಯ ಬೆದರಿಕೆ ಮತ್ತು ಆಮಿಷಗಳಿಗೆ ನಾವು ಬಗ್ಗಲ್ಲ. ಈ ಸಂಬಂಧ ಕಾನೂನು ರೀತಿಯಲ್ಲಿ ನಾವು ಹೋರಾಡುತ್ತೇವೆ. ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿರೋದನ್ನು ನಾವು ಜನರಿಗೆ ತಿಳಿಸಿದ್ದೇವೆ. ಅಧಿಕಾರಿಗಳು ಯಾವ ಪ್ರಕರಣದಡಿಯಲ್ಲಿ ನಮ್ಮನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂಬುವುದು ನಮಗೆ ಗೊತ್ತಾಗಿಲ್ಲ ಎಂದು ಹೇಳಿದ್ದರು.

  • ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮ ಕೊಟ್ರೆ ತಪ್ಪೇನಿಲ್ಲ: ಎಂ.ಬಿ.ಪಾಟೀಲ್

    ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮ ಕೊಟ್ರೆ ತಪ್ಪೇನಿಲ್ಲ: ಎಂ.ಬಿ.ಪಾಟೀಲ್

    ವಿಜಯಪುರ: ಬ್ರಾಹ್ಮಣರಿಗೂ ಪ್ರತೇಕ ಧರ್ಮ ಕೊಟ್ರೆ ತಪ್ಪೇನಿಲ್ಲ. ಆದ್ರೆ ಅವರು ಹಿಂದೂ ಧರ್ಮದಿಂದ ಹೇಗೆ ಭಿನ್ನ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ ಅಂತಾ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ಬ್ರಾಹ್ಮಣರು ಸರ್ಕಾರಕ್ಕೆ ದಾಖಲಾತಿ ಸಲ್ಲಿಸಿ ತಾವು ಹಿಂದೂಗಳಿಗಿಂತ ಭಿನ್ನ ಅಂತ ಸಾಬೀತುಪಡಿಸಲಿ. ಒಂದು ವೇಳೆ ಸಾಬೀತುಪಡಿಸಿದ್ರೆ ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮ ಕೊಡೋದ್ರಲ್ಲಿ ತಪ್ಪೇನಿಲ್ಲ. ನಾವು ಲಿಂಗಾಯತರು ಪ್ರತ್ಯೇಕ ಅಂತಾ ಸಾಬೀತು ಮಾಡಿದ್ದೇವೆ. ಕೇಂದ್ರ ಸರ್ಕಾರ ಶೇ.99ರಷ್ಟು ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ಸೂಚಿಸುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದೇವೆ. ಒಂದು ವೇಳೆ ಕೇಂದ್ರ ಸರ್ಕಾರ ಆರ್‍ಎಸ್‍ಎಸ್ ಹಾಗು ಇತರೆ ಒತ್ತಡಗಳಿಂದ ಲಿಂಗಾಯತ ಪ್ರತೇಕ ಧರ್ಮಕ್ಕೆ ಒಪ್ಪಿಗೆ ನೀಡದೇ ಹೋದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತವೆ. ಜೈನರು ಸಹ ಸುಪ್ರೀಂ ಕೋರ್ಟ್ ಗೆ ತೆರಳಿ ತಮ್ಮದು ಪ್ರತ್ಯೇಕ ಧರ್ಮ ಅಂತಾ ತೆಗೆದುಕೊಂಡಿದ್ದಾರೆ ಅಂತಾ ಎಂ.ಬಿ.ಪಾಟೀಲ್ ಅಂದ್ರು.

    ನನ್ನ ಫೋನ್ ಹಾಗು ಪತ್ನಿ, ಮಗ ಸೇರಿದಂತೆ ನನ್ನ ಜೊತೆಯಲ್ಲಿ ಗುರುತಿಸಿಕೊಂಡಿರುವ 12 ಜನರ ಫೋನ್ ಟ್ಯಾಪ್ ಆಗಿದೆ. ಮಂಗಳವಾರ ಹಾಗೂ ಇವತ್ತು ಬೆಳಗ್ಗೆ ನನಗೆ ಇದರ ಮಾಹಿತಿ ಸಿಕ್ಕಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲು ನನ್ನ ಮೇಲೆ ದೊಡ್ಡ ಐಟಿ ರೇಡ್ ಆಗಲಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ ಎಂದು ಎಂ ಬಿ ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದರು.

    ನಾಳೆ ಅಥವಾ ಹತ್ತು ದಿನಗಳ ಒಳಗೆ ನನ್ಮೇಲೆ ಐಟಿ ಆಗುವ ಸುಳಿವು ಸಿಕ್ಕಿದೆ ಎಂದಿದ್ದಾರೆ. ಇನ್ನು ಬಹಳ ವಿಶ್ವಾಸರ್ಹ ಅಧಿಕಾರಿಗಳ ಮೂಲಕ ಮಾಹಿತಿ ಸಿಕ್ಕಿದ್ದು, ನನ್ಮೇಲೆ ಐಟಿ ರೇಡ್ ಮಾಡಲು ತಯಾರಿ ಮಾಡ್ತಿದ್ದಾರೆ. ಐಟಿಯನ್ನು ಹೀಗೆ ದುರುಪಯೋಗ ಮಾಡಿಕೊಂಡ್ರೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದಿಂದ ಹೋರಾಟ ಮಾಡಲಾಗುವುದು ಎಂದು ಎಂ.ಬಿ.ಪಾಟೀಲ್ ಎಚ್ಚರಿಕೆ ನೀಡಿದರು.

  • ಬೆಳ್ಳಂಬೆಳಗ್ಗೆ ಸಿಎಂ, ಡಿಕೆಶಿ ಆಪ್ತನ ಮನೆ ಮೇಲೆ ಐಟಿ ದಾಳಿ

    ಬೆಳ್ಳಂಬೆಳಗ್ಗೆ ಸಿಎಂ, ಡಿಕೆಶಿ ಆಪ್ತನ ಮನೆ ಮೇಲೆ ಐಟಿ ದಾಳಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಧನ ಸಚಿವ ಡಿ.ಕೆ. ಶಿವಕುಮಾರ್ ಆಪ್ತ ಲಕ್ಷ್ಮಣ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.

    ಈ ಹಿಂದೆ ಡಿಕೆ ಶಿವಕುಮಾರ್ ಮನೆಯ ಮೇಲೆ, ಅವರ ಸಂಬಂಧಿಕರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ ಈಗ ಮತ್ತೆ ಅವರ ಆಪ್ತರಾದ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ಸದಾಶಿವ ನಗರದಲ್ಲಿರುವ ಅವರ ಮನೆ ಮತ್ತು ಬಸವೇಶ್ವರ ನಗದಲ್ಲಿರುವ ಕಚೇರಿ ಸೇರಿದಂತೆ 5 ಕಡೆಗಳಲ್ಲಿ ಸುಮಾರು 50 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಲಕ್ಷ್ಮಣ್ ಸಿಎಂ ಹಾಗೂ ಡಿಕೆಶಿಗೆ ಆಪ್ತರಾಗಿದ್ದು, ಅವರ ಮನೆಯ ಮೇಲೆ ನಡೆಯುತ್ತಿರುವ 2ನೇ ದಾಳಿ ಇದಾಗಿದೆ.

  • ಟಾಯ್ಲೆಟ್‍ನಲ್ಲಿ 7 ಕೋಟಿ ರೂ. ಹಣ, 3 ಕೆಜಿ ಚಿನ್ನ ಪತ್ತೆ

    ಟಾಯ್ಲೆಟ್‍ನಲ್ಲಿ 7 ಕೋಟಿ ರೂ. ಹಣ, 3 ಕೆಜಿ ಚಿನ್ನ ಪತ್ತೆ

    ನವದೆಹಲಿ: ನಗರದ ಪ್ರತಿಷ್ಠಿತ ಆಟೋ ಉತ್ಪಾದನಾ ಮತ್ತು ಜೈ ಭಾರತ್ ಮಾರುತಿ (ಜೆಬಿಎಂ) ಗ್ರೂಪ್ ಆಫ್ ಕಂಪೆನಿಯ ಮೇಲೆ ನಡೆದ ಐಟಿ ದಾಳಿ ವೇಳೆ ಟಾಯ್ಲೆಟ್ ನಲ್ಲಿ ಸುಮಾರು 3 ಕೆಜಿ ಚಿನ್ನ ಮತ್ತು ಬೆಳ್ಳಿ ಹಾಗೂ 7 ಕೋಟಿ ರೂ. ನಗದು ಹಣ ಪತ್ತೆಯಾಗಿದೆ.

    ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ ಇಲಾಖೆಯು ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ (ಎನ್‍ಸಿಆರ್) ದಾಳಿ ನಡೆಸುತ್ತಿದೆ. ಗುರುವಾರ 50 ಕಡೆಗಳಲ್ಲಿ ಏಕಕಾಲದಲ್ಲಿ ಐಟಿ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.

    ಜೈ ಭಾರತ್ ಮಾರುತಿ ಕಂಪೆನಿಯ ಮುಖ್ಯಸ್ಥ ಎಸ್.ಕೆ ಆರ್ಯ ಅವರ ಮನೆಯ ಫರ್ನಿಚರ್, ಹಾಸಿಗೆ ಕೆಳಗೆ ಹಾಗೂ ಟಾಯ್ಲೆಟ್‍ನಲ್ಲಿ 7 ಕೋಟಿ ನಗದು ಹಣವನ್ನು ಬಚ್ಚಿಟ್ಟಿದ್ದರು. ಅಷ್ಟೇ ಅಲ್ಲದೇ ಸಂಸ್ಥೆಯು ಹಲವಾರು ಅಕ್ರಮ ವ್ಯವಹಾರವನ್ನು ನಡೆಸುತ್ತಿದೆ. ಆದರೆ ಅದ್ಯಾವುದನ್ನು ಸರಿಯಾದ ದಾಖಲೆ ಮಾಡಿಲ್ಲ. ಇನ್ನೂ ತನಿಖೆ ನಡೆಯುತ್ತಿದೆ ಎಂದು ಐಟಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಐಟಿ ಇಲಾಖೆಗೆ ದೊರಕಿರುವ ಆಸ್ತಿ,ಹಣ, ಚಿನ್ನ ಮತ್ತು ದಾಖಲೆಗೆ ಯಾವುದೇ ರೀತಿಯ ಉತ್ತರವನ್ನು ನೀಡುತ್ತಿಲ್ಲ. ಕಂಪೆನಿಯ ವೆಬ್‍ಸೈಟ್ ಪ್ರಕಾರ, ಜೆಬಿಎಂ ಗ್ರೂಪ್ ನ ವಹಿವಾಟು ಸುಮಾರು 18.33 ಸಾವಿರ ಕೋಟಿ ರೂ. (1.2 ಬಿಲಿಯನ್ ಡಾಲರ್) ಇದೆ. ಜೊತೆಗೆ ವಿವಿಧ ವಾಹನ, ಎಂಜಿನಿಯರಿಂಗ್, ವಿನ್ಯಾಸ ಸೇವೆ, ನವಿಕರಿಸಬಹುದಾದ ಶಕ್ತಿ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮಾರುತಿ ಮತ್ತು ಅಶೋಕ್ ಲೇಲ್ಯಾಂಡ್ ಕಂಪೆನಿಂತಹ ದೊಡ್ಡ ಕಂಪನಿಗಳಿಗೆ ಆಟೋ ಬಿಡಿಭಾಗಗಳನ್ನು ಪೂರೈಕೆ ಮಾಡುತ್ತದೆ. ಒಟ್ಟಾರೆ 18 ಸ್ಥಳಗಳಲ್ಲಿ 35 ಉತ್ಪಾದನಾ ಘಟಕಗಳು ಮತ್ತು 4 ಎಂಜಿಯರಿಂಗ್ ಮತ್ತು ವಿನ್ಯಾಸ ಕೇಂದ್ರಗಳನ್ನು ಹೊಂದಿದೆ.

  • ಹುಬ್ಬಳ್ಳಿಯಲ್ಲಿ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

    ಹುಬ್ಬಳ್ಳಿಯಲ್ಲಿ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

    ಹುಬ್ಬಳ್ಳಿ: ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಚಿನ್ನಾಭರಣ ವ್ಯಾಪಾರಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಏಕಕಾಲದಲ್ಲೇ ನಾಲ್ಕು ಕಡೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಸ್ಯಾನ್ ಸಿಟಿ ಡೆವಲಪರ್ ಮಾಲೀಕ ನಾರಾಯಣ ಆಚಾರ್ಯ ಮನೆ, ಚಿನ್ನದ ವ್ಯಾಪಾರಿ ಎನ್‍ಎಚ್ ಪಟಾಡಿಯಾ, ಸೇರಿ 4 ಮನೆ, ಕಛೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ಗೋವಾ, ಚೆನ್ನೈ, ಆಂಧ್ರ ಮೂಲದ ಐಟಿ ಅಧಿಕಾರಿಗಳು, ಕೋಪ್ಪಿಕರಸ್ತೆ, ಶಿವಗಂಗಾ ಲೇಔಟ್, ಆಫಿಸ್ ಮನೆಗಳ ಮೇಲೆ ದಾಳಿ ನಡೆಸಿ ಅಲ್ಲಿನ ಎಲ್ಲಾ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ.

  • ಐಟಿ, ಇಡಿ ದಾಳಿಗೊಳಗಾದ ಸಿಎಂ ಆಪ್ತರಿಗಿಲ್ಲ ರಿ-ಪೋಸ್ಟಿಂಗ್ ಭಾಗ್ಯ!

    ಐಟಿ, ಇಡಿ ದಾಳಿಗೊಳಗಾದ ಸಿಎಂ ಆಪ್ತರಿಗಿಲ್ಲ ರಿ-ಪೋಸ್ಟಿಂಗ್ ಭಾಗ್ಯ!

    ಬೆಂಗಳೂರು: ಐಟಿ ದಾಳಿ, ಇಡಿ ಶಾಕ್‍ನಿಂದ ನಲುಗಿ ಹೋಗಿದ್ದ ಸಿಎಂ ಆಪ್ತರಿಗೆ ಈಗ ಮತ್ತೆ ರೀ-ಪೋಸ್ಟಿಂಗ್ ಇಲ್ಲವಾಗಿದೆ. ದಾಳಿ ಮುಗಿದು ವರ್ಷವಾದ್ರೂ ಮತ್ತೆ ನೌಕರಿ ಕೊಡೋಕೆ ಯಾರು ಸಿದ್ಧರಿಲ್ಲ.

    ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಯೋಜನಾಧಿಕಾರಿ ಜಯಚಂದ್ರ ಹಾಗು ಕಾವೇರಿ ನಿಗಮದ ಮುಖ್ಯಸ್ಥರಾಗಿದ್ದ ಚಿಕ್ಕರಾಯಪ್ಪ ಇಬ್ಬರು ಅಧಿಕಾರಿಗಳು ನೋಟು ಬ್ಯಾನ್ ವೇಳೆ ಐಟಿ ಮತ್ತು ಇಡಿ ರೇಡ್ ಗೆ ತುತ್ತಾಗಿದ್ದರು. ಜೈಲಿಗೆ ಹೋಗಿ, ಮತ್ತೆ ಹೊರಗಡೆ ಬಂದು ಐದಾರು ತಿಂಗಳು ಕಳೆದರು ಮತ್ತೆ ನೌಕರಿ ಭಾಗ್ಯ ಸಿಗುತ್ತಿಲ್ಲ.

    ಈ ಇಬ್ಬರು ಅಧಿಕಾರಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬಹುದೇ ಅಂತ ಡಿಪಿಎಆರ್ ಇಲಾಖೆ, ಐಟಿ, ಇಡಿಗೆ ಪತ್ರ ಬರೆದಿದೆ. ಆದರೆ ಐಟಿ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಈ ಬಗ್ಗೆ ಯಾವುದೇ ಉತ್ತರ ಸಿಕ್ಕಿಲ್ಲ. ಇದನ್ನೆಲ್ಲಾ ಗಮನಿಸ್ತಿರೋ ಡಿಪಿಎಆರ್ ಇಲಾಖೆ, ಸಿಎಂ ಕಚೇರಿಗೆ ಫೈಲ್ ಕಳುಹಿಸಿದೆ. ಇತ್ತ ಇಬ್ಬರು ಆರೋಪಿಗಳಿಗೆ ಮತ್ತೆ ನೌಕರಿ ಭಾಗ್ಯ ಕೊಟ್ಟರೆ ಮುಜುಗರ ಅನುಭವಿಸಬೇಕಾಗುತ್ತದೆ ಅಂತ ಸಿಎಂ ಕಚೇರಿಯ ಮೂಲಗಳು ತಿಳಿಸಿವೆ.

  • ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್ ನಿವಾಸದ ಮೇಲೆ ಐಟಿ ದಾಳಿ

    ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್ ನಿವಾಸದ ಮೇಲೆ ಐಟಿ ದಾಳಿ

    ಚಿತ್ರದುರ್ಗ: ಕೇಂದ್ರ ಮಾಜಿ ಸಚಿವ ಸಿದ್ದೇಶ್ವರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಚಿತ್ರದುರ್ಗದ ಭೀಮಸಂದ್ರದಲ್ಲಿರುವ ತೋಟದ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಜಿಎಂ ಸಿದ್ದೇಶ್ವರ್ ಗೆ ಸೇರಿದ ಮೂರು ಫ್ಯಾಕ್ಟರಿ ಮತ್ತು ಜಿಎಂ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕಿನ ಮೇಲೂ ದಾಳಿ ನಡೆದಿದೆ.

    ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರವಾಗಿರುವ ಜಿಎಂ ಸಿದ್ದೇಶ್ವರ್ ಈ ಹಿಂದೆ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವರಾಗಿದ್ದರು. ಮೋದಿ ಸಂಪುಟದ ಪುನಾರಚನೆ ವೇಳೆ ಅವರನ್ನು ಕೈಬಿಡಲಾಗಿತ್ತು.