Tag: it attack

  • ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

    ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

    ಧಾರವಾಡ: ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ ನಡೆದಿದೆ.

    ಧಾರವಾಡದ ಉದ್ಯಮಿ ಹಾಗೂ ಗುತ್ತಿಗೆದಾರರಾದ ಯುಬಿ ಶೆಟ್ಟಿಯ ಮನೆ ಮೇಲೆ ಗೋವಾ ಮೂಲದ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಹಾನಗಲ್ ಉಪಚುನಾವಣೆ ಹಿನ್ನೆಲೆ ಡಿಕೆಶಿಗೆ ಇರಸು ಮುರುಸು ಮಾಡಲು ಈ ಐಟಿ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್ ಮುಖಂಡ ಹಾಗೂ ಡಿಕೆಶಿ ಆಪ್ತರಾದ ರಾಬರ್ಟ್ ದದ್ದಾಪೂರಿ ಹಾನಗಲ್ ಉಪಚುನಾವಣೆಯಲ್ಲಿ ಯುಬಿ ಶೆಟ್ಟಿ ಭಾಗವಹಿಸಿಲ್ಲ ಎಂದಿದ್ದಾರೆ. ಅಲ್ಲದೇ ಯುಬಿ ಶೆಟ್ಟಿ ಅವರು ಉಡುಪಿ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ್ದಾರೆ. ಹೀಗಾಗಿ ಅವರ ಮೇಲೆ ಐಟಿ ದಾಳಿ ನಡೆದಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ:ಟಿ-20 ವಿಶ್ವಕಪ್‍ನಲ್ಲಿ ಪಾಕ್ ಗೆಲುವು ಆಚರಿಸೋರು ದೇಶದ್ರೋಹ ಆರೋಪ ಎದುರಿಸ್ಬೇಕಾಗಿರುತ್ತೆ: ಯೋಗಿ ಆದಿತ್ಯನಾಥ್

    ಓರ್ವ ಮಹಿಳಾ ಅಧಿಕಾರಿ ಸೇರಿ 5 ಜನರ ಐಟಿ ತಂಡದಿಂದ ಈ ದಾಳಿ ನಡೆದಿದ್ದು, ಹಲವು ದಾಖಲೆ ಪರಿಶೀಲನೆ ನಡೆದಿದೆ. ಸದ್ಯ ಯುಬಿ ಶೆಟ್ಟಿ ಗುತ್ತಿಗೆದಾರ ಕೆಲಸ ಬಿಟ್ಟು ಶಾಲಾ ಕಾಲೇಜ್ ಆರಂಭ ಮಾಡಿದ್ದರು ಎಂದು ಅವರ ಆಪ್ತರು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ವಿವಿಯ ನಿವೃತ್ತ ಪ್ರಾಧ್ಯಾಪಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

  • ಕಾರಿನಲ್ಲಿ RCB ಪಂದ್ಯ ವೀಕ್ಷಿಸಿದ ಮಾಜಿ ಸಿಎಂ ಬಿಎಸ್‍ವೈ

    ಕಾರಿನಲ್ಲಿ RCB ಪಂದ್ಯ ವೀಕ್ಷಿಸಿದ ಮಾಜಿ ಸಿಎಂ ಬಿಎಸ್‍ವೈ

    ಶಿವಮೊಗ್ಗ: ಜಿಲ್ಲಾ ಪ್ರವಾಸದಲ್ಲಿ ಇರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಶುಕ್ರವಾರ ರಾತ್ರಿ ನಡೆದ RCB ಪಂದ್ಯವನ್ನು ತಮ್ಮ ಕಾರಿನಲ್ಲಿ ಕುಳಿತು ಕುತೂಹಲದಿಂದ ಪಂದ್ಯ ವೀಕ್ಷಣೆ ಮಾಡಿದ್ದಾರೆ.

    ಶುಕ್ರವಾರ ರಾತ್ರಿ ಶಿವಮೊಗ್ಗದಿಂದ – ಶಿಕಾರಿಪುರಕ್ಕೆ ತೆರಳುವ ವೇಳೆ ಯಡಿಯೂರಪ್ಪ ಅವರು RCB ಹಾಗೂ ಡೆಲ್ಲಿ ನಡುವೆ ನಡೆದ ಪಂದ್ಯವನ್ನು ವೀಕ್ಷಿಸಿದರು. ಐಪಿಎಲ್ ತಂಡಗಳಲ್ಲಿ RCB ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದ್ದು, ಯಡಿಯೂರಪ್ಪ ಅವರು ಸಹ ಕ್ರೀಡಾ ಅಭಿಮಾನಿಗಳಾಗಿದ್ದಾರೆ. ಅದಕ್ಕೆ RCB ಪಂದ್ಯವನ್ನು ನಿನ್ನೆ ಸಂತಸದಿಂದ ವೀಕ್ಷಿಸುತ್ತಿದ್ದರು. ಇದನ್ನೂ ಓದಿ:  ಜ್ಯೋತಿರಾದಿತ್ಯ ಸಿಂಧಿಯಾರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

    ಯಡಿಯೂರಪ್ಪ ಅವರು ಉಪಚುನಾವಣೆಯ ಸಲುವಾಗಿ ಪ್ರವಾಸ ಕೈಗೊಂಡಿದ್ದು, ಪ್ರಸ್ತುತ ಶಿವಮೊಗ್ಗದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಈ ಬಾರಿಯೂ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಸಹ ಬಿಎಸ್‍ವೈ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗೆ ಯಡಿಯೂರಪ್ಪ ಅವರ ಆಪ್ತರ ಮೇಲೆ ಐಟಿ ದಾಳಿ ನಡೆಯುತ್ತಿದೆ. ಈ ಹಿನ್ನೆಲೆ ಪ್ರತಿಪಕ್ಷದ ನಾಯಕರು, ಈ ದಾಳಿಯನ್ನು ಬೇಕೆಂದು ಬಿಎಸ್‍ವೈ ಆಪ್ತರನ್ನೆ ಟಾರ್ಗೆಂಟ್ ಮಾಡಲಾಗುತ್ತಿದೆ ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ, ವಿಜಯೇಂದ್ರ ಆಪ್ತರೇ ಟಾರ್ಗೆಟ್- ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ಅನುಮಾನ

  • ಬಾಯಿಗೆ ಬಂದಂತೆ ಮಾತನಾಡಲು ಜನರು ನಮ್ಮನ್ನು ಆಯ್ಕೆ ಮಾಡಿಲ್ಲ: ಹಾಲಪ್ಪ

    ಬಾಯಿಗೆ ಬಂದಂತೆ ಮಾತನಾಡಲು ಜನರು ನಮ್ಮನ್ನು ಆಯ್ಕೆ ಮಾಡಿಲ್ಲ: ಹಾಲಪ್ಪ

    – RSS ದೇಶಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡ್ಕೊಂಡ ಸಂಘಟನೆ

    ಕೊಪ್ಪಳ: ಬಾಯಿಗೆ ಬಂದಂತೆ ಮಾತನಾಡಲು ಜನರು ನಮ್ಮನ್ನು ಆಯ್ಕೆ ಮಾಡಿಲ್ಲ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಕಿಡಿಕಾಡಿದ್ದಾರೆ.

    ಬಿಜೆಪಿ ಮುಖಂಡರು ಸತ್ತರೆ 1 ಕೋಟಿ ರೂ. ಕೊಡುತ್ತೇವೆ ಎಂಬ ಅಮರೇಗೌಡ ಬಯ್ಯಾಪೂರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರ ವಯಸ್ಸು ಮತ್ತು ಅನುಭವಕ್ಕೆ ತಕ್ಕ ಮಾತು ಇದಲ್ಲ. ಹಿರಿಯರು ಜವಾಬ್ದಾರಿಯಿಂದ ಮಾತನಾಡಬೇಕು. ಜನರು ವಿಶ್ವಾಸ ಇಟ್ಟು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಲು ಜನರು ನಮ್ಮನ್ನು ಆಯ್ಕೆ ಮಾಡಿಲ್ಲ. ಕೆಲವರು ಅಧಿಕಾರ ಕಳೆದುಕೊಂಡು, ಕೆಲವರು ಅಧಿಕಾರದಲ್ಲಿ ಇದ್ದು ಜವಾಬ್ದಾರಿ ಮರೆಯುತ್ತಿದ್ದಾರೆ. ಇದೇ ಕಾಂಗ್ರೆಸ್ ಸಂಸ್ಕೃತಿ ಎಂಬುದು ನನ್ನ ಅಭಿಪ್ರಾಯ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಮುಖಂಡರು ಯಾರೇ ಸಾಯ್ಲಿ ಕಾಂಗ್ರೆಸ್ಸಿನಿಂದ 1 ಕೋಟಿ ರೂ.: ಬಯ್ಯಾಪೂರ

    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ RSS ಕುರಿತು ಮಾತನಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, RSS ಎಂದರೆ ದೇಶಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಸಂಘಟನೆ. ಮಾಜಿ ಪಿಎಂ ಎಚ್.ಡಿ.ದೇವೆಗೌಡರಿಗೆ RSS ಬಗ್ಗೆ ಗೊತ್ತು. RSS ಬಗ್ಗೆ ಎಚ್‍ಡಿಡಿ ಒಳ್ಳೆಯ ಮಾತಾಡಿದ್ದಾರೆ. ಇದನ್ನೆಲ್ಲ ಕುಮರಸ್ವಾಮಿ ಅವರು ಮರೆಯುತ್ತಾರೆ ಎಂದರೆ ಅವರಿಗೆ ಏನೂ ಹೇಳೊಕ್ಕಾಗಲ್ಲ ಎಂದಿದ್ದಾರೆ.

    RSS ಅವರೇ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಆಯ್ಕೆಯಾಗುತ್ತಾರೆ ಎಂಬ ವಿಚಾರವಾಗಿ ಮಾತನಾಡಿ ಅವರು, ಕಾಂಗ್ರೆಸ್ ಅವರೂ ಹಿಂದೆ ಹೀಗೇ ಮಾಡಿದ್ರಾ? ನೀವು ನಿಮಗೆ ಬೇಕಾದವರನ್ನು ಆಯ್ಕೆ ಮಾಡಿದ್ರಾ? ಇವೆಲ್ಲ ಅಟೋನೊಮಸ್ ಬಾಡಿ ಇವೆ. ಇವು ದೇಶದ ಪ್ರತಿಷ್ಠೆ ಹೆಚ್ಚಿಸಿದ ಸಂಸ್ಥೆಗಳು. ಅಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಇದರ ಬಗ್ಗೆ ಈ ರೀತಿ ಮಾತಾಡಿದ್ರೆ ಏನು? ಮುಂದಿನ ಪೀಳಿಗೆಗೆ ನಾವು ಏನು ಕೊಡುತ್ತೇವೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ವಿರುದ್ಧ ಪ್ರಕರಣ ದಾಖಲು

    ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಉಮೇಶ್ ಮೇಲೆ ಐಟಿ ರೇಡ್ ವಿಚಾರಕ್ಕೆ ಹೆಚ್‍ಡಿಕೆ ಇದು ಟಾರ್ಗೆಟ್ ಬಿಎಸ್ ವೈ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಕಾಲಕಾಲಕ್ಕೆ ಐಟಿ ರೇಡ್ ಆಗಿವೆ. ಎಲ್ಲದಕ್ಕೂ ಒಂದು ಕಲ್ಪನೆ ಕಟ್ಟಿಕೊಂಡು ಬಂದರೆ ಏನೂ ಮಾಡೊಕ್ಕಾಗಲ್ಲ. ಐಟಿ ಅಧಿಕಾರಿಗಳು ತಮ್ಮ ಸಾಕ್ಷಾಧಾರ ಇಟ್ಟುಕೊಂಡು ದಾಳಿ ಮಾಡ್ತಾರೆ. ಇದು ಕುಮಾರಸ್ವಾಮಿ ಅವರ ಹೊಸ ನಾಟಕ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

  • ತಾಪ್ಸಿ ಪನ್ನು, ಅನುರಾಗ್ ಕಶ್ಯಪ್ ಮನೆ ಮೇಲೆ ಐಟಿ ದಾಳಿ

    ತಾಪ್ಸಿ ಪನ್ನು, ಅನುರಾಗ್ ಕಶ್ಯಪ್ ಮನೆ ಮೇಲೆ ಐಟಿ ದಾಳಿ

    ಮುಂಬೈ: ಬಾಲಿವುಡ್ ನಿರ್ಮಾಪಕರಾದ ಅನುರಾಗ್ ಕಶ್ಯಪ್, ವಿಕಾಸ್ ಬಹ್ಲ್ ಹಾಗೂ ಜನಪ್ರಿಯ ನಟಿ ತಾಪ್ಸಿ ಪನ್ನು ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

    ಅನುರಾಗ್ ಕಶ್ಯಪ್ ಅವರ ನಿರ್ಮಾಣ ಸಂಸ್ಥೆ ಫ್ಯಾಂಟಮ್ ಫಿಲಂಸ್‍ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ. ಈ ಮೂವರು ಸೆಲೆಬ್ರಿಟಿಗಳ ಮನೆಗಳು ಮಾತ್ರವಲ್ಲದೆ ಮುಂಬೈ ಹಾಗೂ ಪುಣೆಯಲ್ಲಿ 20 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಟ್ಯಾಲೆಂಟ್ ಮ್ಯಾನೇಜ್‍ಮೆಂಟ್ ಕಂಪನಿ ನಡೆಸುತ್ತಿರುವ ಸಿನಿಮಾ ನಿರ್ಮಾಪಕ ಮಧು ಮಂತೇನಾ ವರ್ಮಾ ಸಹ ಐಟಿ ಕಣ್ಗಾವಲಿನಲ್ಲಿದ್ದಾರೆ.

    ಅನುರಾಗ್ ಕಶ್ಯಪ್ ನಿರ್ಮಾಣದಲ್ಲಿ ಮುಂಬರುವ ಥ್ರಿಲ್ಲರ್ ‘ದೋಬಾರಾ’ಗಾಗಿ ನಟ ಪಾವೈಲ್ ಗುಲಾಟಿ ಅವರೊಂದಿಗೆ ಮತ್ತೆ ಒಂದಾಗುತ್ತಿರುವುದಾಗಿ ತಾಪ್ಸೀ ಪನ್ನು ಇತ್ತೀಚೆಗೆ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಫೆಬ್ರವರಿ 28ರಂದು ಥಪ್ಪಡ್ ಸಿನಿಮಾದ ಮೊದಲ ವರ್ಷದ ಆ್ಯನಿವರ್ಸರಿ ಆಚರಿಸುತ್ತಿರುವುದಾಗಿ ಸಹ ಪೋಸ್ಟ್ ಮಾಡಿದ್ದರು.

     

    View this post on Instagram

     

    A post shared by Taapsee Pannu (@taapsee)

    ದೋಬಾರಾ ಸಿನಿಮಾ ಒಪ್ಪಿಕೊಳ್ಳುವ ಮೂಲಕ ತಾಪ್ಸಿ ಪನ್ನು ಅವರು ಅನುರಾಗ್ ಕಶ್ಯಪ್ ಜೊತೆ ಮೂರನೇ ಬಾರಿ ಒಂದಾಗುತ್ತಿದ್ದಾರೆ. 2018ರಲ್ಲಿ ಹಿಟ್ ಆಗಿದ್ದ ಮನ್‍ಮರ್ಝಿಯಾನ್ ಹಾಗೂ ಸಂದ್ ಕಿ ಆಂಖ್ ಸಿನಿಮಾಗಳಲ್ಲಿ ಈ ಜೋಡಿ ಒಂದಾಗಿತ್ತು. ತಾಪ್ಸಿ ಪನ್ನು ಅವರು ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.

  • ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ

    ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ

    ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ನಟಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದಾರೆ.

    10ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಮನೆಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದೆ. ಶೂಟಿಂಗ್ ಗಾಗಿ ಹೊರ ಹೋಗಿರುವ ಕಾರಣ ಸದ್ಯ ರಶ್ಮಿಕಾ ಮನೆಯಲ್ಲಿಲ್ಲ. ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮನೆ ಮಾತಾಗಿರುವ ರಶ್ಮಿಕಾ ಮಂದಣ್ಣ ಆದಾಯದಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಅಪ್ಪಾ ಬೇಕು ಅಪ್ಪಾ ಬೇಕು ಎನ್ನುತ್ತಲೇ ತಂದೆ ಚಿತೆಗೆ ಪುತ್ರ ಅಗ್ನಿಸ್ಪರ್ಶ

    ಅಪ್ಪಾ ಬೇಕು ಅಪ್ಪಾ ಬೇಕು ಎನ್ನುತ್ತಲೇ ತಂದೆ ಚಿತೆಗೆ ಪುತ್ರ ಅಗ್ನಿಸ್ಪರ್ಶ

    ರಾಮನಗರ: ಐಟಿ ದಾಳಿಗೆ ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಮಾಜಿ ಡಿಸಿಎಂ ಜಿ.ಪರಮಶ್ವರ್ ಆಪ್ತ ಸಹಾಯಕ ರಮೇಶ್ ಅಂತ್ಯ ಸಂಸ್ಕಾರ ಇಂದು ನೆರವೇರಿತು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪರಮೇಶ್ವರ್ ಅವರನ್ನು ತಬ್ಬಿ ಅಪ್ಪ ಬೇಕು, ಅಪ್ಪ ಬೇಕು ಅಂತಾ ಗೋಳಾಡಿದ ರಮೇಶ್ ಮಗನ ಗೋಳು ಎಲ್ಲರ ಕರಳು ಹಿಂಡಿತ್ತು.

    ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಅಂತಿಮ ಸಂಸ್ಕಾರವನ್ನು ಅವರ ಸ್ವಗ್ರಾಮ ರಾಮನಗರ ಜಿಲ್ಲೆಯ ಮೆಳೇಹಳ್ಳಿಯ ಜಮೀನಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿಸಲಾಯಿತು. ರಮೇಶ್ ಅಂತ್ಯಕ್ರಿಯೆ ವೇಳೆ ಪುತ್ರ ಮೋಹಿತ್ ಅಪ್ಪಾ ಬೇಕು ಅಪ್ಪಾ ಬೇಕು ಎಂದು ಕಣ್ಣೀರು ಹಾಕಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ರಮೇಶ್ ಜೊತೆಗಿನ ಕೊನೆಯ ಮಾತನ್ನು ಬಿಚ್ಚಿಟ್ಟ ಪರಮೇಶ್ವರ್

    ಮೆಳೇಹಳ್ಳಿಯ ರಮೇಶ್ ನಿವಾಸದಿಂದ ಅಂತಿಮ ಯಾತ್ರೆ ಹೊರಟು ತಮ್ಮದೇ ಜಮೀನಿನಲ್ಲಿ ರಮೇಶ್ ಪಂಚಭೂತಗಳಲ್ಲಿ ಲೀನವಾದರು. ಇದಕ್ಕೂ ಮುನ್ನ ಮಾತನಾಡಿದ ರಮೇಶ್ ಸಹೋದರ ಸತೀಶ್ ಐಟಿ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮನೆಗೆ ಹೋಗಿ ವಿಚಾರಣೆ ನಡೆಸಿದ್ದಾರೆ. ಆದರೆ ಅವರು ದಾಳಿ ಮಾಡಿಲ್ಲೆಂದು ಸುಳ್ಳು ಹೇಳಿದ್ದಾರೆ. ಮನೆಗೆ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಐಟಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:  ಪರಂ ಪಿಎ ಆತ್ಮಹತ್ಯೆಗೆ ಟ್ವಿಸ್ಟ್- ರಮೇಶ್ ಮನೆಗೆ ಐಟಿಯವ್ರು ಹೋಗಿರೋ ಸಿಸಿಟಿವಿ ದೃಶ್ಯ ಲಭ್ಯ

    ತಮ್ಮ ತಂದೆ- ತಾಯಿಯನ್ನ, ಸಹೋದರನನ್ನು, ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಕಂಡಿದ್ದ ರಮೇಶ್ ತಾನೇ ಅರ್ಧಕ್ಕೆ ಜೀವನದ ಪಯಣ ಮುಗಿಸಿದ್ದಾರೆ. ಇದೀಗ ಮನೆಯ ಮಗ ಮರಳಿ ಬಾರದ ಊರಿಗೆ ತೆರಳಿರುವುದು ಕುಟುಂಬಸ್ಥರಿಗೇ ದಿಕ್ಕೆ ತೋಚದಂತಾಗಿದೆ. ರಮೇಶ್ ಅಂತ್ಯ ಸಂಸ್ಕಾರದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಬಾಲಕೃಷ್ಣ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

    https://www.youtube.com/watch?v=SImuqOBddA0

  • ನಮ್ಮ ಮನೆ ಮೇಲೆ ತಕ್ಷಣ ಐಟಿ ದಾಳಿ ಮಾಡ್ಲಿ- ಎಸ್.ಆರ್ ಪಾಟೀಲ್

    ನಮ್ಮ ಮನೆ ಮೇಲೆ ತಕ್ಷಣ ಐಟಿ ದಾಳಿ ಮಾಡ್ಲಿ- ಎಸ್.ಆರ್ ಪಾಟೀಲ್

    ಬಾಗಲಕೋಟೆ: ನಮ್ಮ ಮನೆ ಮೇಲೆ ಐಟಿ ಅಧಿಕಾರಿಗಳು ತಕ್ಷಣ ದಾಳಿ ಮಾಡಲಿ ಎಂದು ಪರಿಷತ್ ವಿಪಕ್ಷನಾಯಕ ಎಸ್.ಆರ್ ಪಾಟೀಲ್ ಸವಾಲು ಹಾಕಿದ್ದಾರೆ.

    ಐಟಿ ದಾಳಿ ಕುರಿತು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ಏನಿದೆ, ನಮ್ಮ ಮೇಲೆ ರೇಡ್ ಮಾಡಿದರೆ ಅವರೇ ನಮಗೆ ದುಡ್ಡು ಕೊಟ್ಟು ಹೋಗಬೇಕು. ಆ ರೀತಿಯ ಪರಿಸ್ಥಿತಿ ನಮ್ಮದು. ಹೀಗಾಗಿ ನಾಳೆಯೇ ನಮ್ಮ ಮನೆ ಮೇಲೆ ಐಟಿಯವರು ದಾಳಿ ಮಾಡಲಿ ಎಂದರು.

    ಯಾವ ರೀತಿಯ ಕಾನೂನು ಬಾಹಿರವಾಗಿ ಹಣ ಬಂದಿದೆ ಎಂದು ಪರಿಶೀಲಿಸಿ ಐಟಿ ಅಧಿಕಾರಿಗಳು ದಾಳಿ ಮಾಡಲ್ಲ. ಕೇವಲ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ಅವರ ನೈತಿಕ ಸ್ಥೈರ್ಯ ಕುಗ್ಗಿಸಬೇಕು ಎಂದು ದಾಳಿ ಮಾಡುತ್ತಾರೆ. ಆದರೆ ಇದು ಸಫಲವಾಗುತ್ತದೆ ಎಂಬುದು ಅವರ ತಿರುಕನ ಕನಸು ಎಂದು ಕಿಡಿಕಾರಿದರು.

    ಇದೇ ವೇಳೆ ಜಿ. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಹಾಗೂ ಅವರ ಪಿ.ಎ ರಮೇಶ್ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ಪ್ರೇರಿತವಾದ ದಾಳಿ. ದುರದ್ದೇಶದಿಂದ ಕಾಂಗ್ರೆಸ್ ನಾಯಕರ ನೈತಿಕ ಸ್ಥೈರ್ಯ ಕುಗ್ಗಿಸಬೇಕೆಂದು ದಾಳಿ ಮಾಡಲಾಗಿದೆ. ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲು. ಬಿಜೆಪಿ ನಾಯಕರು ಹೇಗಿದ್ದಾರೆಂದು ದೇಶದ 130 ಕೋಟಿ ಜನರಿಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಮೇಶ್ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಿಲ್ಲ. ಆದರೆ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯಾಗಬೇಕು. ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ಮಾಡಿದ್ದರೆ ಅದು ಸಹ ತಪ್ಪು. ಐಟಿ ಅಧಿಕಾರಿಗಳ ಕಿರುಕುಳ, ಕಾನೂನು ಬಾಹಿರವಾಗಿ ಬೆದರಿಕೆ ಹಾಕಿದ್ದರೆ, ಅದು ಅಪರಾಧವಾಗುತ್ತದೆ. ಅದಕ್ಕೆ ಐಟಿ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ ಎಂದರು.

    ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಪರ್ಯಟನೆ ಮಾಡಿದ್ದಾರೆ. ಮಂಗಳಲೋಕ, ಚಂದ್ರಲೋಕ ಎರಡೇ ಉಳಿದಿವೆ. ಅನೇಕ ರಾಷ್ಟ್ರಗಳಿಗೆ ಭೇಟಿ ನೀಡುವ ಪ್ರಧಾನಿ ಮೋದಿ, ಚಂದ್ರಯಾನ ವೀಕ್ಷಣೆಗಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ರಾಜ್ಯದಲ್ಲಿ ನೆರೆ ಬಂದು ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ಪರಿತಪಿಸುತ್ತಿದ್ದರು. ಆದರೂ ಮೋದಿಯವರು ಮಾತ್ರ ನೀವು ಇದ್ದೀರೋ ಸತ್ತಿದ್ದೀರೋ, ನೀರಲ್ಲಿ ಮುಳುಗಿದವರು ಹೊರಗಡೆ ಬಂದಿದ್ದೀರಾ ಎಂದೂ ಕೇಳಿಲ್ಲ. ರಾಜ್ಯ ರಾಜಧಾನಿಗೆ ಬಂದು ರಾಜ್ಯ ನಾಯಕರನ್ನು ಕರೆಸಿ ವಿಚಾರಿಸಿಲ್ಲ. ಕನಿಷ್ಟ ಪಕ್ಷ ಮುಖ್ಯಮಂತ್ರಿಯನ್ನು ಕರೆಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನೆರೆಯಿಂದ 38 ಸಾವಿರ ಕೋಟಿ ರೂ. ಹಾನಿಯಾಗಿದೆ ಎಂದು ವರದಿ ಕೊಟ್ಟರೆ ಕೇವಲ 1,200 ಕೋಟಿ ಬಿಡುಗಡೆ ಮಾಡಿದ್ದಾರೆ. 100 ರೂ.ಗೆ ಮೂರು ರೂಪಾಯಿ ಕೊಟ್ಟಿದ್ದಾರೆ. ಸಿಎಂಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡಬೇಕು. ಇಲ್ಲದಿದ್ದಲ್ಲಿ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ನೆರೆ ಪರಿಹಾರ ವಿಚಾರದಲ್ಲಿ ಕಣ್ಣು ಇಲ್ಲ, ಮೂಗಿಲ್ಲ, ಬಾಯಿ ಇಲ್ಲ, ಕಿವಿ ಇಲ್ಲ, ತ್ವಚೆ ಹೀಗೆ ಪಂಚೇಂದ್ರಿಯಗಳೇ ಇಲ್ಲದ ಸರ್ಕಾರ ಇದಾಗಿದೆ. ನನ್ನ 45 ವರ್ಷದ ಸಾರ್ವಜನಿಕ ಬದುಕಿನಲ್ಲಿ ಈ ರೀತಿಯ ಸರ್ಕಾರವನ್ನ ನಾನು ಎಂದೂ ನೋಡಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

    ಬಿಜೆಪಿ ಶಾಸಕರೇ ನೆರೆ ಪರಿಹಾರದ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜನಪರವಾಗಿ ಮಾತನಾಡಿದರು. ಪಕ್ಷ ಅವರಿಗೆ ನೋಟಿಸ್ ಕೊಟ್ಟಿದೆ. ನೆರೆ ಪರಿಹಾರದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರೆ ಅವರನ್ನೂ ದೇಶದ್ರೋಹಿ ಅಂದ ಸರ್ಕಾರ ಇದು. ಈ ಭಂಡ ಸರ್ಕಾರಕ್ಕೆ ಉಪಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. 15 ಸ್ಥಾನದಲ್ಲಿ ನಾವು ಕನಿಷ್ಟ ಹತ್ತು ಸ್ಥಾನ ಗೆಲ್ಲುತ್ತೇವೆ. ಬಿಜೆಪಿಯವರು 8 ಸ್ಥಾನಗಳನ್ನು ಗೆಲ್ಲಲೇಬೇಕು. ಅವರ ಸಂಖ್ಯೆ 113 ಆಗದಿದ್ರೆ ಏನಾಗುತ್ತೆ ನೋಡಿ, ಇದು ಅಂಕಿಗಳ ಆಟ ಎಂದು ಮಾರ್ಮಿಕವಾಗಿ ನುಡಿದರು.

    ಕಲಾಪಕ್ಕೆ ಮಾಧ್ಯಮದವರ ನಿರ್ಬಂಧದ ಕುರಿತು ಮಾತನಾಡಿದ ಅವರು, ಮಾಧ್ಯಮದವರ ಕಣ್ಣಿಗೆ ಬಟ್ಟೆ ಕಟ್ಟಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವನ್ನೇ ವಿಧಾಸಭೆ ಕಲಾಪದಿಂದ ಹೊರಗಿಟ್ಟಿದ್ದಾರೆ. ವಿಧಾನಸಭೆ ಕಲಾಪದ ದೃಶ್ಯ ಸೆರೆ ಹಿಡಿಯಬಾರದೆಂದು ಮಾಧ್ಯಮದವನ್ನು ಹೊರಹಾಕಿದ್ದಾರೆ. ಸಂವಿಧಾನದ ಮೂಲವೇ ಫ್ರೀಡಂ ಆಫ್ ಸ್ಪೀಚ್, ಅದನ್ನೇ ಹತ್ತಿಕ್ಕುವಂತಹ ಕೆಲಸ ಮಾಡಿದ್ದಾರೆ. ಇದು ನಾಚಿಗೇಡಿನ ಸರ್ಕಾರ ಎಂದು ಕಿಡಿಕಾರಿದರು.

  • ಇಬ್ಬರು ವಿದ್ಯಾರ್ಥಿಗಳಿಂದಾಗಿ ಪರಮೇಶ್ವರ್ ಮೇಲೆ ದಾಳಿ – ಸೀಟ್ ಬ್ಲಾಕ್ ಹೇಗೆ ಮಾಡಲಾಗುತ್ತೆ?

    ಇಬ್ಬರು ವಿದ್ಯಾರ್ಥಿಗಳಿಂದಾಗಿ ಪರಮೇಶ್ವರ್ ಮೇಲೆ ದಾಳಿ – ಸೀಟ್ ಬ್ಲಾಕ್ ಹೇಗೆ ಮಾಡಲಾಗುತ್ತೆ?

    ಬೆಂಗಳೂರು: ಇಬ್ಬರು ವಿದ್ಯಾರ್ಥಿಗಳಿಂದಾಗಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಹೌದು. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ(ನೀಟ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಇಬ್ಬರು ವಿದ್ಯಾರ್ಥಿಗಳ ಸೀಟ್ ಅನ್ನು ಬ್ಲಾಕ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿತ್ತು. ಈ ಸಂಬಂಧ ಆ ಇಬ್ಬರು ವಿದ್ಯಾರ್ಥಿಗಳನ್ನು ಐಟಿ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಸೀಟ್ ಬ್ಲಾಕ್ ಆಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದರು. ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಮಾಹಿತಿ ಕಲೆ ಹಾಕುತ್ತಿದ್ದ ಐಟಿ ಗುರುವಾರ ದಾಳಿ ನಡೆಸಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ:ಪರಮೇಶ್ವರ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ

    ಈ ಕಾರಣದ ಜೊತೆ ಮ್ಯಾನೇಜ್‍ಮೆಂಟ್ ಕೋಟಾದ ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಬಳಿಯಿಂದ ನಗದು ರೂಪದಲ್ಲಿ ಶುಲ್ಕವನ್ನು ಕಾಲೇಜ್ ಪಾವತಿಸಿಕೊಳ್ಳುತ್ತಿದೆ. ತೆರಿಗೆಯನ್ನು ವಂಚಿಸಲೆಂದೇ ಕಾಲೇಜಿನ ಆಡಳಿತ ಮಂಡಳಿ ನಗದು ರೂಪದಲ್ಲಿ ವ್ಯವಹಾರ ನಡೆಸಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಸೀಟ್ ಬ್ಲಾಕ್ ಹೇಗೆ?
    ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಎರಡು ರೀತಿಯಲ್ಲಿ ಸೀಟ್ ಗಳು ವಿದ್ಯಾರ್ಥಿಗಳಿಗೆ ಲಭ್ಯ ಇರುತ್ತದೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸರ್ಕಾರಿ ಸೀಟ್ ಸಿಕ್ಕುತ್ತದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯದವರು ಅಥವಾ ಪರೀಕ್ಷೆಯೇ ಬರೆಯದ ವಿದ್ಯಾರ್ಥಿಗಳು ಮ್ಯಾನೇಜ್‍ಮೆಂಟ್ ಕೋಟಾದ ಅಡಿ ಪ್ರವೇಶ ಪಡೆಯುತ್ತಾರೆ. ಇದನ್ನೂ ಓದಿ:ಶಿಕ್ಷಣ ಸಂಸ್ಥೆ ಬಿಟ್ಟು, ಯಾವುದೇ ವ್ಯವಹಾರ ನಡೆಸುತ್ತಿಲ್ಲ- ಪರಮೇಶ್ವರ್

    ನೀಟ್ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜುಗಳಲ್ಲಿ ಈ ಸೀಟ್ ಬ್ಲಾಕ್ ಅವ್ಯವಹಾರಕ್ಕೆ ಬಳಸಲಾಗುತ್ತದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಯೊಬ್ಬ ಯಾವುದೋ ರಾಜ್ಯದ ಕಾಲೇಜು ಸೇರುತ್ತೇನೆ ಎಂದು ಹೇಳುತ್ತಾನೆ. ಸರ್ಕಾರದ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ವಿದ್ಯಾರ್ಥಿ ಕಾಲೇಜಿಗೆ ದಿಢೀರ್ ಯಾವುದೋ ಕಾರಣ ನೀಡಿ ರದ್ದು ಪಡಿಸುವುದಾಗಿ ಮಾಹಿತಿ ನೀಡುತ್ತಾನೆ. ಈ ಹಂತದಲ್ಲಿ ರಾಜ್ಯ ಸರ್ಕಾರಕ್ಕೆ ಕೌನ್ಸಿಲಿಂಗ್ ನಡೆಸಿ ಮತ್ತೆ ಈ ಸೀಟ್ ಅನ್ನು ಹಂಚಿಕೆ ಮಾಡಲು ಸಾಧ್ಯವೇ ಇಲ್ಲ.

    ಈ ಸಂದರ್ಭದಲ್ಲಿ ಮ್ಯಾನೇಜ್‍ಮೆಂಟ್ ಈ ಸೀಟ್ ಅನ್ನು ಬೇರೊಬ್ಬ ವಿದ್ಯಾರ್ಥಿಗೆ ಲಕ್ಷ, ಕೋಟಿ ರೂ.ಗೆ ಮಾರಾಟ ಮಾಡುತ್ತದೆ. ಸೀಟ್ ಬ್ಲಾಕ್ ಮಾಡುವ ವಿಚಾರ ಮೊದಲೇ ಪೂರ್ವ ನಿರ್ಧಾರವಾಗಿರುತ್ತದೆ. ಅಂತಿಮವಾಗಿ ದಲ್ಲಾಳಿ, ವಿದ್ಯಾರ್ಥಿ ಮತ್ತು ಕಾಲೇಜಿನ ಆಡಳಿತ ಮಂಡಳಿ ಈ ತಮ್ಮ ತಮ್ಮ ಪಾಲನ್ನು ಹಂಚಿಕೊಳ್ಳುತ್ತಾರೆ. ಸೀಟ್ ಬ್ಲಾಕ್ ಅಕ್ರಮದ ಬಗ್ಗೆ ಹಿಂದೆಯೂ ಕೇಳಿ ಬಂದಿತ್ತು.

  • ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡುವಂತಹ ಸ್ಥಿತಿ ಕುಮಾರಸ್ವಾಮಿಯದ್ದು – ಜೋಶಿ

    ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡುವಂತಹ ಸ್ಥಿತಿ ಕುಮಾರಸ್ವಾಮಿಯದ್ದು – ಜೋಶಿ

    ಧಾರವಾಡ: ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುವಂತಹ ಸ್ಥಿತಿ ಕುಮಾರಸ್ವಾಮಿ ಅವರದ್ದು ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿ ಜಾಸ್ತಿ ಹಣ ಇದೆ ಎಂದು ಮೆಸೇಜ್ ಬರುತ್ತದೋ ಅಲ್ಲೆಲ್ಲ ಐಟಿ ದಾಳಿ ಆಗುತ್ತದೆ. ಬಿಜೆಪಿ ಪ್ರಮುಖ ನಾಯಕರು ಮತ್ತು ಜನಪ್ರತಿನಿಧಿಗಳ ಮನೆ ಮೇಲೂ ದಾಳಿ ಆಗಿದೆ ಎಂದು ಹೇಳಿದರು.

    ಚುನಾವಣೆಗೂ ಮುಂಚೆ ಜೆಡಿಎಸ್ ಪ್ರಮುಖರ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರದ್ದು ಕಳ್ಳನ ಜೀವ ಹುಳ್ಳುಳ್ಳಗೆ ಅನ್ನೋ ಪರಿಸ್ಥಿತಿ ಆಗಿದೆ. ಅವರು ಸರಿಯಾಗಿ ಇದ್ದಿದ್ದರೆ ಐಟಿ ದಾಳಿಗೆ ಏಕೆ ಹೆದರಬೇಕು? ನೀವು ಸರಿಯಾಗಿ ಇದ್ದರೆ ಐಟಿ ಅಧಿಕಾರಿಗಳು ಬರಲಿ ಬಿಡಿ ಎನ್ನಬೇಕಿತ್ತು. ನಿಮ್ಮ ಬಳಿ ಎಲ್ಲಾ ಸರಿ ಇರುವಾಗ ಯಾಕೆ ತೊಂದರೆ ಎನ್ನುತ್ತಿರಿ? ಹಾಗಾದರೆ ನಿಮ್ಮ ಮನೆಯಲ್ಲಿ ದುಡ್ಡು ಇದೆ. ಅದಕ್ಕೆ ನಿಮಗೆ ಹಾಗೆ ಅನಿಸುತ್ತಿದೆ ಎಂದು ವಾಗ್ದಾಳಿ ಮಾಡಿದರು.

    ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಬರ ಪರಿಹಾರದ ಕಾಮಗಾರಿಗಳು ನಡೆಯುತ್ತಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ನಿರ್ಮಾಣವಾಗಿದೆ. ಮಲೆನಾಡಿನ ಪ್ರದೇಶಗಳಲ್ಲಿಯೂ ನೀರಿನ ಅಭಾವ ಉಂಟಾಗಿದೆ. ರಾಜ್ಯ ಸರ್ಕಾರ ನಾಯಕರು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಪಕ್ಷದಲ್ಲಿರುವ ಬಂಡಾಯ ಶಮನ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ ಎಂದು ಮೈತ್ರಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

    ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದ ಬಗ್ಗೆ ಮಾತನಾಡಿ, ಈ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಬೇಕು. ಜಿಂದಾಲ್‍ನವರು ಇಷ್ಟು ಭೂಮಿ ತೆಗೆದುಕೊಂಡು ಏನು ಮಾಡುತ್ತಾರೆ. ಮೈತ್ರಿ ಸರ್ಕಾರ ಕಮೀಷನ್ ಪಡೆದು ಟೆಂಡರ್‍ ಗಳನ್ನು ನೀಡುತ್ತಿದ್ದಾರೆ. ಟೆಂಡರ್ ಕರೆದು ಕಮೀಷನ್ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಮೋದಿ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ಇಲ್ಲಿ ಇಷ್ಟು ಪ್ರಮಾಣದಲ್ಲಿ ನಿಮ್ಮದೇ ಮೈತ್ರಿ ಸರ್ಕಾರ ಲೂಟಿ ಮಾಡುತ್ತಿದೆ. ಈ ಬಗ್ಗೆ ರಾಹುಲ್ ಗಾಂಧಿ ಬಾಯಿ ತೆರೆಯಬೇಕು. ಈ ಬಗ್ಗೆ ನಾನು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಪತ್ರ ಬರೆಯುತ್ತೇನೆ ಅವರಿಂದ ಪ್ರತಿಕ್ರಿಯೆ ಕೇಳುವೆ ಎಂದು ಹೇಳಿದರು.

  • ಬೆಳ್ಳಂಬೆಳಗ್ಗೆ ಜೆಡಿಎಸ್ ನಾಯಕರಿಗೆ ಐಟಿ ಶಾಕ್

    ಬೆಳ್ಳಂಬೆಳಗ್ಗೆ ಜೆಡಿಎಸ್ ನಾಯಕರಿಗೆ ಐಟಿ ಶಾಕ್

    ಹಾಸನ/ಮಂಡ್ಯ: ಲೋಕಸಭಾ ಚುನಾವಣೆಗೆ ಇನ್ನೂ ಎರಡು ದಿನ ಇರುವಾಗಲೇ ಮತ್ತೆ ಬೆಳ್ಳಂಬೆಳಗ್ಗೆ ಆದಾಯ ಇಲಾಖೆಯವರು ಜೆಡಿಎಸ್ ನಾಯಕರು ಮತ್ತು ಅವರ ಆಪ್ತರ ಮನೆಯ ಮೇಲೆ ದಾಳಿ ಮಾಡಿದ್ದಾರೆ.

    ಹಾಸನದ ಹರದನಹಳ್ಳಿಯಲ್ಲಿ ಇಂದು ಬೆಳಿಗ್ಗೆ 7:15ಕ್ಕೆ ಐಟಿ ಅಧಿಕಾರಿಗಳು ಸಚಿವ ರೇವಣ್ಣ ಆಪ್ತರ ಮನೆ ಮೇಲೆ ಮತ್ತೆ ಐಟಿ ದಾಳಿ ಮಾಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ತಮ್ಮನ ಮಗ ಪಾಪಣ್ಣಿ ಅವರ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಪಾಪಣ್ಣಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿದ್ದಾರೆ. ಮೂರು ಇನ್ನೋವಾ ಕಾರಿನಲ್ಲಿ 15 ಜನರ ತಂಡ ಬಂದು ಪರಿಶೀಲನೆ ನಡೆಸುತ್ತಿದೆ.

    ಇತ್ತ ಮಂಡ್ಯದಲ್ಲೂ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಸಚಿವ ಪುಟ್ಟರಾಜು ಬೆಂಬಲಿಗನ ಮನೆ ಮೇಲೆ ರೇಡ್ ಮಾಡುತ್ತಿದ್ದಾರೆ. ತಿಮ್ಮೇಗೌಡ ಎಂಬವರ ಪಾಂಡವಪುರ ಪಟ್ಟಣದಲ್ಲಿರುವ ಮನೆ, ಪೆಟ್ರೋಲ್ ಬಂಕ್, ಕಚೇರಿ ಮೂರು ಕಡೆ ದಾಳಿ ಮಾಡಿದ್ದಾರೆ.

    ಮಂಡ್ಯದ ಮದ್ದೂರಿನಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರ ಪತಿ ಶ್ರೀನಿಧಿ ಪ್ರತಿಷ್ಠಾನದ ಅಧ್ಯಕ್ಷ ಎಸ್‍ಪಿ ಸ್ವಾಮಿ ಅವರು ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗೆಸ್ಟ್ ಹೌಸ್‍ನಲ್ಲಿ ತಂಗಿದ್ದರು. ಇಂದು ಬೆಳಗಿನ ಜಾವ ಸುಮಾರು 5.30 ಸಮಯದಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.