Tag: it act

  • ಬೆಂಗ್ಳೂರಲ್ಲಿ ಪೋರ್ನ್‌ ದಂಧೆ; ಹಣಕ್ಕಾಗಿ ತಮ್ಮದೇ ವೀಡಿಯೋಗಳನ್ನ ಪೋರ್ನ್‌ ಸೈಟ್‌ನಲ್ಲಿ ಅಪ್ಲೋಡ್‌ ಮಾಡ್ತಿದ್ದ ಜೋಡಿ!

    ಬೆಂಗ್ಳೂರಲ್ಲಿ ಪೋರ್ನ್‌ ದಂಧೆ; ಹಣಕ್ಕಾಗಿ ತಮ್ಮದೇ ವೀಡಿಯೋಗಳನ್ನ ಪೋರ್ನ್‌ ಸೈಟ್‌ನಲ್ಲಿ ಅಪ್ಲೋಡ್‌ ಮಾಡ್ತಿದ್ದ ಜೋಡಿ!

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಣ ಗಳಿಸುವ ಸಲುವಾಗಿ ಎಂತಹ ಕೆಲಸಗಳನ್ನ ಮಾಡ್ತಾರೆ ಅನ್ನೋದು ಬೆಂಗಳೂರು (Bengaluru) ಮಹಾನಗರದಲ್ಲಿ ಆಗಾಗ್ಗೆ ಬೆಳಕಿಗೆ ಬರುತ್ತಿದೆ. ಅದೇ ರೀತಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಲೈಂಗಿಕ ಚಟುವಟಿಕೆ ನಡೆಸಿ, ಚಿತ್ರೀಕರಿಸಿದ ವೀಡಿಯೋವನ್ನು ಪೋರ್ನ್‌ ವೆಬ್‌ಸೈಟ್‌ಗೆ ಅಪ್ಲೋಡ್‌ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

    ಈ ಬಗ್ಗೆ ಗುತ್ತಿಗೆದಾರ ಅಮರ್‌ನಾಥ್‌ ಎಂಬವರು ಐಟಿ ಆಕ್ಟ್ (ಮಾಹಿತಿ ತಂತ್ರಜ್ಞಾನ ಕಾಯ್ದೆ) (IT Act) ಅಡಿಯಲ್ಲಿ ದೂರು ನೀಡಿದ್ದು, ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ (Jnanabharathi Police Station) ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಕೆಫೆ ಬ್ಲಾಸ್ಟ್ ಪ್ರಕರಣ – ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ

    ಹಣಗಳಿಸುವ ಉದ್ದೇಶದಿಂದ ಮಹಿಳೆ ಸೌಮ್ಯ ಆಕೆಯ ಪ್ರಿಯಕರ ರವಿ ರಾಮನಗರ ಎಂಬಾತನೊಂದಿಗೆ ಸೇರಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿದ್ದಾಳೆ. ಈ ಸೀಕ್ರೇಟ್‌ ಕೆಲಸಕ್ಕಾಗಿಯೇ ಉಲ್ಲಾಳ ಉಪನಗರದ ಬಳಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಅಲ್ಲಿ ತಾವೇ ಲೈಂಗಿಕ ಚಟುವಟಿಕೆ ನಡೆಸಿ, ಅದನ್ನು ಚಿತ್ರೀಕರಿಸಿ ಪೋರ್ನ್ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಇದರ ವೀಡಿಯೋ ಚಿತ್ರೀಕರಣಕ್ಕೆ ಮತ್ತೊಂದು ಜೋಡಿ ಸಹಕಾರ ನೀಡಿದೆ. ಆದ್ದರಿಂದ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅಮರನಾಥ್‌ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸುತ್ತಿದ್ದಂತೆ ಅಮರಮಾಥ್‌ಗೆ ಖತರ್ನಾಕ್‌ ಜೋಡಿಗಳು ಧಮ್ಕಿ ಹಾಕಿದ್ದು, ಪೊಲೀಸರ ಬಳಿ ದೂರುದಾರರು ರಕ್ಷಣೆ ಕೋರಿದ್ದಾರೆ.

    ಎಫ್‌ಐಆರ್‌ನಲ್ಲಿ ಏನಿದೆ?
    ಸೌಮ್ಯ ಎಂಬಾಕೆ ಮತ್ತು ಆಕೆಯ ಪ್ರಿಯಕರ ರವಿ ರಾಮನಗರ ಇಬ್ಬರೂ ಸೇರಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡಿ ಪೋರ್ನ್‌ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಿದ್ದಾರೆ. ಇದು ಐಟಿ ಆಕ್ಟ್‌ ಸೆಕ್ಷನ್‌ 67 ಮತ್ತು 67A ಅನ್ವಯ ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ದೂರಿನೊಂದಿಗೆ ನೀಡಿದ್ದೇನೆ. ಇದನ್ನೂ ಓದಿ: ಅಮೇಥಿಯಿಂದ ರಾಹುಲ್‌ ಗಾಂಧಿ, ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?

    ಈ ಅಶ್ಲೀಲ ಚಿತ್ರೀಕರಣಕ್ಕಾಗಿ ಉಲ್ಲಾಳ ಉಪನಗರದ ಮುಖ್ಯರಸ್ತೆಯ 5ನೇ ಮೇನ್‌ನಲ್ಲಿ ಮನೆಯೊಂದನ್ನ ಭೋಗ್ಯಕ್ಕೆ ಪಡೆದುಕೊಂಡಿದ್ದಾರೆ. ಇಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ಕೃತ್ಯಕ್ಕೆ ರೇಣುಕಾ ಚೊಟ್ಟನಹಳ್ಳಿ, ರಮೇಶ್‌ ಪಾಂಡವಪುರ ಸಹಕರಿಸಿದ್ದಾರೆ. ಈ ನಾಲ್ವರು ಹಣ ಮಾಡುವ ಉದ್ದೇಶದಿಂದ ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ವಿಷಯ ತಿಳಿಸಿದ ನನ್ನ ಮೇಲೆ ಯಾವುದೇ ಹಲ್ಲೆ ಆಗದಂತೆ ಸೂಕ್ಷ ರಕ್ಷಣೆ ನೀಡಬೇಕು ಎಂದು ಅಮರನಾಥ್‌ ಮನವಿ ಮಾಡಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

  • ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯ – ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಖಡಕ್ ಸೂಚನೆ

    ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯ – ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಖಡಕ್ ಸೂಚನೆ

    ನವದೆಹಲಿ: ಯೂಟ್ಯೂಬ್ (YouTube), ಎಕ್ಸ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಚಾರಗಳನ್ನು ತೆಗೆದುಹಾಕುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚನೆ ನೀಡಿದೆ.

    ಈ ಬಗ್ಗೆ ಅಗತ್ಯ ಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಸಂಸ್ಥೆಗಳು ತೆಗೆದುಕೊಳ್ಳದಿದ್ದಲ್ಲಿ ಐಟಿ ಕಾಯಿದೆಯ (IT Act) ಸೆಕ್ಷನ್ 79ರ ಅಡಿಯಲ್ಲಿ ನೋಟಿಸ್ ನೀಡುವ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲದೇ ನಿಯಮಗಳನ್ನು ಅನುಸರಿಸದಿರುವುದು ಐಟಿ ಕಾಯ್ದೆ 2021ರ 3(1) (ಬಿ) ಮತ್ತು ನಿಯಮ 4 (4)ರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಗಾಜಾಪಟ್ಟಿಯಿಂದ 5,000 ರಾಕೆಟ್ ದಾಳಿ – ಯುದ್ಧ ಘೋಷಿಸಿದ ಇಸ್ರೇಲ್

    ಐಟಿ ಕಾಯಿದೆಯ ಸೆಕ್ಷನ್ 66ಇ, 67ಎ ಮತ್ತು 67ರ ಅಡಿಯಲ್ಲಿ ಅಶ್ಲೀಲ ವಿಷಯವನ್ನು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಿದರೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ. ಅಲ್ಲದೇ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ.

    ಅಪ್ರಾಪ್ತ ವಯಸ್ಕರಿಗೆ ಅಪಾಯವನ್ನುಂಟು ಮಾಡುವ ಯಾವುದೇ ರೀತಿಯ ವಿಷಯವನ್ನು ನಾವು ಸಹಿಸುವುದಿಲ್ಲ. ಆನ್‍ಲೈನ್‍ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ಹೋರಾಡಲು ನಾವು ತಂತ್ರಜ್ಞಾನ ಮತ್ತು ತಂಡಗಳ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದೇವೆ. ಸಾಧ್ಯವಾದಷ್ಟು ಬೇಗ ಇದರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವಾಲಯ ತಿಳಿಸಿದೆ.

    ಈ ನಿಯಮದ ಉಲ್ಲಂಘನೆಗಾಗಿ ನಾವು 94,000 ಚಾನಲ್‍ಗಳು ಮತ್ತು 20.5 ಲಕ್ಷ ವೀಡಿಯೊಗಳನ್ನು ತೆಗೆದುಹಾಕಿದ್ದೇವೆ. ಅಪ್ರಾಪ್ತ ವಯಸ್ಕರು ಮತ್ತು ಕುಟುಂಬಗಳಿಗೆ ಸಾಧ್ಯವಾದಷ್ಟು ಉತ್ತಮ ರಕ್ಷಣೆಯನ್ನು ಒದಗಿಸಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಯೂಟ್ಯೂಬ್ ವಕ್ತಾರರು ಸಚಿವಾಲಯದ ಸೂಚನೆಗೆ ಪ್ರತಿಕ್ರಿಯಿಸಿದ್ದಾರೆ.

    ಅಕ್ಟೋಬರ್ ಮೊದಲ ಐದು ದಿನಗಳಲ್ಲಿ 8,198 ಗುಂಪುಗಳು ಮತ್ತು ಚಾನೆಲ್‍ಗಳನ್ನು ನಿಷೇಧಿಸಲಾಗಿದೆ ಎಂದು ಟೆಲಿಗ್ರಾಮ್ ವಕ್ತಾರ ರೆಮಿ ವಾಘನ್ ತಿಳಿಸಿದ್ದಾರೆ. ಇದನ್ನೂ ಓದಿ: LAM ರೀಸರ್ಚ್, ಲಿಯೋ ಲ್ಯಾಬ್ಸ್, ಟೆಕಾಂಡ್ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಎಂ.ಬಿ ಪಾಟೀಲ್‌ ಚರ್ಚೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫೇಕ್ ನ್ಯೂಸ್‍ಗಳಿಗೆ ಕಡಿವಾಣ-ಶೀಘ್ರವೇ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ

    ಫೇಕ್ ನ್ಯೂಸ್‍ಗಳಿಗೆ ಕಡಿವಾಣ-ಶೀಘ್ರವೇ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ

    ನವದೆಹಲಿ: ಸಾಮಾಜಿಕ ಜಾಲತಾಣಗಲ್ಲಿ ಅನಧಿಕೃತ ಪೋಸ್ಟ್ ಗಳ ಹಾವಳಿ ಹೆಚ್ಚುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ಸಕಲ ಸಿದ್ಧತೆ ಮಾಡಿಕೊಂಡಿದೆ.

    ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಶೀಘ್ರ ಈ ಕುರಿತು ಅಧಿಸೂಚನೆ ಹೊರಡಿಸಲಿದೆ. ಈ ಮೂಲಕ ಮಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್, ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿನ ಕಾನೂನು ಬಾಹಿರ ಪೋಸ್ಟ್ ಗಳಿಗೆ ಕಡಿವಾಣ ಹಾಕಲು ಚಿಂತಿಸಿದೆ. ಸುಳ್ಳು ಸುದ್ದಿ, ಪೋಸ್ಟ್‍ಗಳನ್ನು ಪತ್ತೆ ಹಚ್ಚಿ ಡಿಲೀಟ್ ಮಾಡುವುದು ಮಾತ್ರವಲ್ಲದೆ, ಪೋಸ್ಟ್ ಮಾಡಿದ ಮೂಲ ವ್ಯಕ್ತಿಯನ್ನು ಪತ್ತೆ ಹಚ್ಚಲು ಈ ಕಾಯ್ದೆಯಲ್ಲಿ ತಿಳಿಸಲಾಗಿದೆ.

    ಮಾರ್ಗಸೂಚಿ ಸಿದ್ಧ: ಕಾಯ್ದೆ ತಿದ್ದುಪಡಿ ಕುರಿತು ಈಗಾಗಲೇ ಮಾರ್ಗ ಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಡಿಸೆಂಬರ್‍ನಲ್ಲಿ ಸರ್ಕಾರ ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶ ನೀಡಿತ್ತು. ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯುವ ಐಟಿ ಕಾಯ್ದೆಯ ಕರಡು ತಿದ್ದುಪಡಿಗಳ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಅಭಿಪ್ರಾಯ ಸಂಗ್ರಹದ ನಂತರ ಸಂದೇಶ ಕಳುಹಿಸಿದ ಮೂಲ ವ್ಯಕ್ತಿಯನ್ನು ಟ್ರೇಸ್ ಮಾಡುವುದು ಹಾಗೂ ಕಾನೂನು ಬಾಹಿರ ಪೋಸ್ಟ್‍ಗಳನ್ನು 24 ಗಂಟೆಗಳಲ್ಲಿ ಜಾಲತಾಣದಿಂದ ತೆಗೆದು ಹಾಕುವುದರ ಕುರಿತು ಕರಡು ನಿಯಮಗಳನ್ನು ಸಲ್ಲಿಸಲಾಗಿದೆ.

    ತಿದ್ದುಪಡಿಗೆ ವಿರೋಧ: ಕರಡು ನಿಯಮಗಳ ಕುರಿತು ಕೆಲ ತಜ್ಞರು ಪೋಸ್ಟ್, ಸಂದೇಶಗಳ ಮೇಲೆ ‘ನಿಗಾ ವಹಿಸುಸುವ ಹಾಗೂ ಸೆನ್ಸಾರ್‍ಶಿಪ್’ (“Surveillance And Censorship”) ಭಯದ ಕುರಿತು ಟೀಕೆ ವ್ಯಕ್ತವಾಗಿವೆ. ಅಲ್ಲದೆ, ಪೋಸ್ಟ್‍ನ ಮೂಲವನ್ನು ಪತ್ತೆ ಹಚ್ಚುವ ವಿಷಯದಲ್ಲಿ ವಾಟ್ಸಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳು ವಿರೋಧ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ.

    2018ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಕಲಿ ಸುದ್ದಿಗಳಿಂದ ಹಲವಾರು ಸಾವು-ನೋವುಗಳು ಸಂಭವಿಸಿವೆ ಎಂಬುದು ಸರ್ಕಾರದ ವಾದವಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳು ಭಯೋತ್ಪಾದನಾ ಚಟುವಟಿಕೆ, ಅಶ್ಲೀಲ ವಿಷಯಗಳ ಪ್ರಸಾರ, ಸುಳ್ಳು ಸುದ್ದಿಗಳನ್ನು ಹರಡುವುದು, ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಸೇರಿದಂತೆ ವಿವಿಧ ರೀತಿಯ ಅಕ್ರಮಗಳನ್ನು ತಡೆಯಲು ಕಾನೂನು ಜಾರಿ ಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣಗಳು ಸವಾಲಾಗಿ ಪರಿಣಮಿಸಿವೆ ಎಂದು ಸರ್ಕಾರ ವಿವರಿಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]