Tag: istambul

  • ಲಿಫ್ಟೊಳಗೆ ಹಗ್ಗದಲ್ಲಿ ಸಿಲುಕಿಕೊಂಡ ತಮ್ಮನ ರಕ್ಷಿಸಿದ ಸಹೋದರಿ

    ಲಿಫ್ಟೊಳಗೆ ಹಗ್ಗದಲ್ಲಿ ಸಿಲುಕಿಕೊಂಡ ತಮ್ಮನ ರಕ್ಷಿಸಿದ ಸಹೋದರಿ

    ಅಂಕಾರಾ: ಪುಟ್ಟ ಬಾಲಕಿಯೊಬ್ಬಳು ಲಿಫ್ಟ್ ಒಳಗೆ ಕುಣಿಕೆಯಲ್ಲಿ ಸಿಲುಕಿಕೊಂಡ ತನ್ನ ಸಹೋದರರನ್ನು ರಕ್ಷಿಸಿ ಮೆಚ್ಚುಗೆಗೆ ಪಾತ್ರವಾದ ಘಟನೆ ಟರ್ಕಿಯ ಇಸ್ತಾಂಬುಲ್ ನಲ್ಲಿ ನಡೆದಿದೆ.

    ಲಿಫ್ಟ್ ಒಳಗೆ ಹೋದ 5 ವರ್ಷದ ಬಾಲಕನ ಕುತ್ತಿಗೆ ಏಕಾಏಕಿ ಕುಣಿಕೆಯಲ್ಲಿ ಸಿಲುಕಿಕೊಂಡು ನೇತಾಡಿದ್ದಾನೆ. ಕೂಡಲೇ ಆತನ ಸಹೋದರಿ ಆತನನ್ನು ಅಪಾಯದಿಂದ ಪಾರು ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲೇನಿದೆ?
    ಮೂವರು ಪುಟ್ಟ ಮಕ್ಕಳು ಲಿಫ್ಟ್ ಒಳಗೆ ಹೋಗಿದ್ದಾರೆ. ಹೀಗೆ ಹೋದವರಲ್ಲಿ ಬಾಲಕನ ಕುತ್ತಿಗೆ ಹಗ್ಗದಲ್ಲಿ ಸಿಲುಕಿಕೊಂಡು ಆತ ನೇತಾಡಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ಆತನ ಸಹೋದರಿ ಕೂಡಲೇ ಲಿಫ್ಟ್ ನಲ್ಲಿರುವ ಎಮೆರ್ಜೆನ್ಸಿ ಬಟನ್ ಒತ್ತಿದ್ದಾಳೆ. ಅಲ್ಲದೆ ಬಾಲಕನ ಕಾಲುಗಳನ್ನು ಎಳೆದು ನಿಧಾನವಾಗಿ ಆತನ ಕುತ್ತಿಗೆಯಿಂದ ಕುಣಿಕೆಯನ್ನು ಬಿಡಿಸಿದ್ದಾಳೆ.

    ಈ ದೃಶ್ಯ ಲಿಫ್ಟ್ ಒಳಗೆ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಕೆಲವರು ಬಾಲಕಿಯ ಕೆಲಸವನ್ನು ಮೆಚ್ಚಿ ಕೊಂಡಾಡಿದ್ದಾರೆ.