Tag: isro president

  • ಇಸ್ರೋ ಅಧ್ಯಕ್ಷ, ಚಂದ್ರಯಾನ-3 ತಂಡದವರಿಗೆ ರಾಜ್ಯಪಾಲರಿಂದ ಸನ್ಮಾನ

    ಇಸ್ರೋ ಅಧ್ಯಕ್ಷ, ಚಂದ್ರಯಾನ-3 ತಂಡದವರಿಗೆ ರಾಜ್ಯಪಾಲರಿಂದ ಸನ್ಮಾನ

    ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಇಸ್ರೋಗೆ (ISRO) ಭೇಟಿ ನೀಡಿ ಅಧ್ಯಕ್ಷ ಎಸ್ ಸೋಮನಾಥ್ ಮತ್ತು ಅವರ ತಂಡದ ಮುಖ್ಯ ಸದಸ್ಯರನ್ನು ಶುಕ್ರವಾರ ಸನ್ಮಾನಿಸಿದರು.

    ಅಧ್ಯಕ್ಷ ಎಸ್. ಸೋಮನಾಥ್ (S Somanath) ಮತ್ತು ಅವರ ಸಮರ್ಪಿತ ತಂಡವನ್ನು ಬಾಹ್ಯಾಕಾಶ ಪರಿಶೋಧನೆ ಮತ್ತು ಸಂಶೋಧನೆಯನ್ನು ಮುಂದುವರಿಸುವ ನಿರಂತರ ಅನ್ವೇಷಣೆಗಾಗಿ ಹಾಗೂ ಅವರ ಅಚಲ ಬದ್ಧತೆಯು ರಾಷ್ಟ್ರಕ್ಕೆ ಹೆಮ್ಮೆ ತಂದಿದೆ. ಮಾತ್ರವಲ್ಲದೆ ಜಾಗತಿಕ ಬಾಹ್ಯಾಕಾಶ ವೇದಿಕೆಯಲ್ಲಿ ಭಾರತದ ಪರಾಕ್ರಮವನ್ನು ಪ್ರದರ್ಶಿಸುತ್ತದೆ ಎಂದು ರಾಜ್ಯಪಾಲರು ಶ್ಲಾಘಿಸಿದರು. ಇದನ್ನೂ ಓದಿ: ಕಾಲಹರಣ ಮಾಡದೆ ಬರಪೀಡಿತ ತಾಲೂಕುಗಳನ್ನು ಘೋಷಿಸಿ- ಸರ್ಕಾರಕ್ಕೆ ಬಿಎಸ್‍ವೈ ಆಗ್ರಹ

    ಈ ತಂಡದ ನಿರಂತರ ಪ್ರಯತ್ನಗಳು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲಿ ಮತ್ತು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವನ್ ಜೊತೆ ವಿಮಾನದ ಸಿಬ್ಬಂದಿ ಸೆಲ್ಫಿ- ಇಸ್ರೋ ಅಧ್ಯಕ್ಷರ ವಿಡಿಯೋ ವೈರಲ್

    ಶಿವನ್ ಜೊತೆ ವಿಮಾನದ ಸಿಬ್ಬಂದಿ ಸೆಲ್ಫಿ- ಇಸ್ರೋ ಅಧ್ಯಕ್ಷರ ವಿಡಿಯೋ ವೈರಲ್

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ ಶಿವನ್ ಅವರು ಇಡೀ ದೇಶದ ಜನರ ಮನಸ್ಸನ್ನು ಗೆದ್ದಿದ್ದು, ಯಾವುದೇ ಸೆಲೆಬ್ರಿಟಿಗಳಿಗೆ ಕಮ್ಮಿ ಇಲ್ಲ. ಚಂದ್ರಯಾನ 2 ಉಡಾವಣೆಯ ಸಂದರ್ಭದಲ್ಲಿ ಶಿವನ್ ಹಾಗೂ ಅವರ ತಂಡ ಪಟ್ಟ ಶ್ರಮಕ್ಕೆ ದೇಶವೇ ಹೆಮ್ಮೆ ವ್ಯಕ್ತಪಡಿಸಿದೆ.

    ಶಿವನ್ ಅವರ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಮೂಲಕ ಅವರು ಜನರ ಹೀರೋ ಎನಿಸಿಕೊಂಡಿದ್ದಾರೆ. ಶಿವನ್ ಅವರ ಸಿಂಪ್ಲಿಸಿಟಿ ಬಗ್ಗೆ ವಿಡಿಯೋವೊಂದನ್ನು ಶೆಫಾಲಿ ವೈದ್ಯ ಎಂಬವರು ತಮ್ಮ ಟ್ವಿಟ್ಟರ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ಇಸ್ರೋ ಅಧ್ಯಕ್ಷ ಶಿವನ್ ಅವರನ್ನು ನೋಡಿ ಹೃದಯ ತುಂಬಿ ಬಂತು ಎಂದು ಬರೆದುಕೊಂಡಿದ್ದಾರೆ.

    ವಿಡಿಯೋದಲ್ಲೇನಿದೆ..?
    90 ಸೆಕೆಂಡಿನ ಈ ವಿಡಿಯೋದಲ್ಲಿ ಶಿವನ್ ಅವರು ಇಂಡಿಗೋ ವಿಮಾನದಲ್ಲಿರುವುದನ್ನು ಕಾಣಬಹುದು. ಶಿವನ್ ಅವರನ್ನು ಗಮನಿಸಿದ ಸಿಬ್ಬಂದಿ ಅವರನ್ನು ಮುಂಬಾಗಕ್ಕೆ ಕರೆದುಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ. ಅಲ್ಲದೆ ಸಿಬ್ಬಂದಿ ಕೈಕುಲುಕಿದ್ದಾರೆ. ಈ ವೇಳೆ ಸಿಬ್ಬಂದಿ ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ನಂತರ ತನ್ನ ಸೀಟ್ ಗೆ ಬಂದು ಕುಳೀತುಕೊಂಡಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ಸಿಬ್ಬಂದಿ ಚಪ್ಪಾಳೆ ತಟ್ಟಿ ಇಸ್ರೋ ಅಧ್ಯಕ್ಷರ ಸಿಂಪ್ಲಿಸಿಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಈ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ಇಸ್ರೋ ಅಧ್ಯಕ್ಷ ಸರಳತೆಯನ್ನು ಕೊಂಡಾಡಿದ್ದಾರೆ.