Tag: Israeli strike

  • ಗಾಜಾ ಮೇಲೆ ಇಸ್ರೇಲ್‌ ದಾಳಿ – ಒಂದೇ ದಿನ 91 ಮಂದಿ ಸಾವು

    ಗಾಜಾ ಮೇಲೆ ಇಸ್ರೇಲ್‌ ದಾಳಿ – ಒಂದೇ ದಿನ 91 ಮಂದಿ ಸಾವು

    ಟೆಲ್‌ ಅವೀವ್: ಗಾಜಾ (Gaza) ಮೇಲೆ ಇಸ್ರೇಲ್‌ (Israel) ನಡೆಸಿದ ದಾಳಿಯಲ್ಲಿ ಒಂದೇ ದಿನ 91 ಸಾವು ಸಾವನ್ನಪ್ಪಿದ್ದಾರೆ. ಟೆಲ್ ಅವೀವ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.

    ಗಾಜಾದ ಅತಿದೊಡ್ಡ ನಗರ ಕೇಂದ್ರವನ್ನು ವಶಪಡಿಸಿಕೊಳ್ಳಲು ವಾಯು ಮತ್ತು ಭೂಸೇನಾ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಇಸ್ರೇಲಿ ಪಡೆಗಳು ಒಂದೇ ದಿನದಲ್ಲಿ ಗಾಜಾದಲ್ಲಿ 91 ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಿವೆ. ಪ್ರಮುಖ ವೈದ್ಯರ ಕುಟುಂಬ ಸದಸ್ಯರು ಮತ್ತು ಉತ್ತರ ಗಾಜಾ ನಗರದ ಹಲವಾರು ಜನರು ಮೃತಪಟ್ಟಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

    ವಸತಿ ಮನೆಗಳು, ಆಶ್ರಯ ತಾಣಗಳು ಹಾಗೂ ಗಾಜಾದಿಂದ ಬೇರೆಡೆಗೆ ನಾಗರಿಕರನ್ನು ಸಾಗಿಸುತ್ತಿದ್ದ ಟ್ರಕ್‌ನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಈ ದಾಳಿಗಳಲ್ಲಿ ಕನಿಷ್ಠ 76 ಮಂದಿ ಸಾವಿಗೀಡಾಗಿದ್ದಾರೆ.

    ಗಾಜಾ ನಗರದ ನಾಸ್ರ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ‘ನಿರಂತರ ಇಸ್ರೇಲಿ ಬಾಂಬ್ ದಾಳಿ, ಫಿರಂಗಿ ಶೆಲ್ ದಾಳಿ ಮತ್ತು ಕ್ವಾಡ್‌ಕಾಪ್ಟರ್ ಗುಂಡಿನ ದಾಳಿಗಳಿಗೆ ಬೇರೆಡೆ ಸ್ಥಳಾಂತರ ಆಗುತ್ತಿದ್ದ ಸಾವಿರಾರು ಜನರು ಬಲಿಯಾದವರು ಸೇರಿದ್ದಾರೆ’ ಎಂದು ಅಜ್-ಜವಾಯ್ದಾದಿಂದ ವರದಿ ಮಾಡುತ್ತಿರುವ ಅಲ್ ಜಜೀರಾದ ಹಿಂದ್ ಖೌದರಿ ಹೇಳಿದ್ದಾರೆ. ಇದನ್ನೂ ಓದಿ: ಸೈಬರ್ ಅಟ್ಯಾಕ್ | ಯೂರೋಪ್‌ನ ಪ್ರಮುಖ ಏರ್‌ಪೋರ್ಟ್‌ಗಳಿಂದ ವಿಮಾನಯಾನ ವಿಳಂಬ, ರದ್ದು

  • ಮತ್ತೆ ಕೆಣಕಿದ ಹಿಜ್ಬುಲ್ಲಾ – 250 ರಾಕೆಟ್‌,‌ ಡೆಡ್ಲಿ ಡ್ರೋನ್‌ಗಳಿಂದ ಇಸ್ರೇಲ್‌ ಮೇಲೆ ಭೀಕರ ದಾಳಿ

    ಮತ್ತೆ ಕೆಣಕಿದ ಹಿಜ್ಬುಲ್ಲಾ – 250 ರಾಕೆಟ್‌,‌ ಡೆಡ್ಲಿ ಡ್ರೋನ್‌ಗಳಿಂದ ಇಸ್ರೇಲ್‌ ಮೇಲೆ ಭೀಕರ ದಾಳಿ

    ಬೈರೂತ್: ಒಂದೆಡೆ ರಷ್ಯಾ-ಉಕ್ರೇನ್‌ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಇಸ್ರೇಲ್‌-ಹಿಜ್ಬುಲ್ಲಾ (Israel – Hezbollah) ನಡುವೆ ಯುದ್ಧದ ಭೀಕರತೆ ವ್ಯಾಪಿಸುತ್ತಿದೆ. ಇತ್ತೀಚೆಗೆ ಇಸ್ರೇಲ್‌ ಬೈರೂತ್‌ ನಗರದ ಮೇಲೆ ನಡೆಸಿದ ದಾಳಿಗೆ ಹಿಜ್ಬುಲ್ಲಾ ಪ್ರತೀಕಾರದ ದಾಳಿ ನಡೆಸಿದೆ. ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಸುಮಾರು 250 ರಾಕೆಟ್‌ (Rocket Strike), ಡೆಡ್ಲಿ ಡ್ರೋನ್‌ ಹಾಗೂ ಇತರ ಸ್ಫೋಟಕಗಳಿಂದ ಇಸ್ರೇಲ್‌ ಮೇಲೆ ಅಟ್ಯಾಕ್‌ ಮಾಡಿದೆ. ದಾಳಿಯಲ್ಲಿ ಸಾವು-ನೋವು ಸಂಭವಿಸದಿದ್ದರೂ 7-8 ಮಂದಿ ಗಂಭೀರ ಗಾಯಗೊಂಡಿದ್ದಾರೆ.

    ವರದಿಗಳ ಪ್ರಕಾರ, ಇಸ್ರೇಲ್‌ನ ಐರನ್‌ ಡೋಮ್‌ ಹಿಜ್ಬುಲ್ಲಾ ಹಾರಿಸಿದ ಕೆಲವು ರಾಕೆಟ್‌ಗಳನ್ನ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿವೆ. ಇನ್ನುಳಿದ ಕೆಲವು ರಾಕೆಟ್‌ಗಳು ಟೆಲ್‌ ಅವೀವ್‌ನಲ್ಲಿ (Tel Aviv) ಭಾರಿ ಕಟ್ಟಡಗಳನ್ನು ಧ್ವಂಸ ಮಾಡಿವೆ ಎನ್ನಲಾಗಿದೆ. ಇದನ್ನೂ ಓದಿ: 3ನೇ ಮಹಾಯುದ್ಧ ಎದುರಿಸೋಕೆ ಸಿದ್ಧರಾಗಿ.. ಆಹಾರ, ಔಷಧ ಸಂಗ್ರಹಿಸಿ ಇಟ್ಕೊಳ್ಳಿ – ಜನರಿಗೆ ಸ್ವೀಡನ್, ಫಿನ್‌ಲ್ಯಾಂಡ್ ಕರೆ

    ಮತ್ತೊಂದೆಡೆ ದಕ್ಷಿಣ ಇಸ್ರೇಲ್‌ನ ಅಶ್ಡೋಡ್ ನೌಕಾ ನೆಲೆ, ಗ್ಲಿಲೋಟ್ ಸೇನಾ ಗುಪ್ತಚರ ನೆಲೆ ಹಾಗೂ ಟೆಲ್‌ ಅವಿವ್‌ನ ಮಿಲಿಟರಿ ಕ್ಯಾಂಪ್‌ಗಳ ಮೇಲೆ ಇದೇ ಮೊದಲ ಬಾರಿಗೆ ಡ್ರೋಣ್‌ ಬಳಿ ವೈಮಾನಿಕ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಉಗ್ರರ ಗುಂಪು ಹೇಳಿಕೊಂಡಿದೆ. ಈ ಬೆನ್ನಲ್ಲೇ ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ಈವರೆಗೆ ನಡೆಸಿದ ದಾಳಿಗಳ ಪೈಕಿ ಅತಿದೊಡ್ಡ ದಾಳಿ ಎಂದು ಇಸ್ರೇಲಿ ಮಿಲಿಟರಿ ಪಡೆಗಳು ಖಚಿತಪಡಿಸಿವೆ. ಇದನ್ನೂ ಓದಿ: ಭಾರತದಲ್ಲಿ ಒಂದೇ ದಿನ 64 ಕೋಟಿ ಮತ ಎಣಿಕೆ – ಮಸ್ಕ್‌ ರಿಯಾಕ್ಷನ್‌ ಏನು?

    4,000 ಗಡಿ ಸಮೀಪಿಸಿದ ಸಾವಿನ ಸಂಖ್ಯೆ:
    2023ರ ಅಕ್ಟೋಬರ್‌ ನಿಂದ ಈವರೆಗೆ ಇಸ್ರೇಲ್‌ – ಲೆಬನಾನ್‌ ನಡುವಿನ ಯುದ್ಧದಲ್ಲಿ ಕನಿಷ್ಠ 3,754 ಜನ ಮೃತಪಟ್ಟಿದ್ದಾರೆ. ಇಸ್ರೇಲಿ ಭಾಗದಲ್ಲಿ, ಕನಿಷ್ಠ 82 ಸೈನಿಕರು ಮತ್ತು 47 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಮೂಲ ಸೌಕರ್ಯಗಳ ಮೇಲಿನ ಹಾನಿಯೂ ದೊಡ್ಡದಾಗಿಯೇ ನಡೆದಿದೆ. ಇದನ್ನೂ ಓದಿ: ಭಾರತದ ಒತ್ತಡಕ್ಕೆ ಮಣಿದ ಕೆನಡಾ – ಮೋದಿ ಹೆಸರನ್ನು ಉಲ್ಲೇಖಿಸಿ ಮಾಧ್ಯಮ ವರದಿಯನ್ನು ತಿರಸ್ಕರಿಸಿದ ಸರ್ಕಾರ

    ಮತ್ತೆ ಉದ್ವಿಗ್ನಗೊಂಡಿದ್ದೇಕೆ?
    ಇತ್ತೀಚೆಗೆ ಹಿಜ್ಬುಲ್ಲಾ ಉಗ್ರರ ಗುಂಪು ಇಸ್ರೇಲ್‌ನ ಹೈಫಾ ನಗರವನ್ನ (Haifa City) ಗುರಿಯಾಗಿಸಿಕೊಂಡು 150 ರಾಕೆಟ್‌ಗಳಿಂದ ದಾಳಿ ನಡೆಸಿತ್ತು. ಹಿಜ್ಬುಲ್ಲಾ ಕ್ಷಿಪಣಿ ದಾಳಿಗೆ ಇಸ್ರೇಲ್‌ನಲ್ಲಿ ಅನೇಕ ನಾಗರಿಕರು ಗಾಯಗೊಂಡಿದ್ದರು. ಇದರಿಂದ ಕೆರಳಿದ ಇಸ್ರೇಲ್‌ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿತ್ತು. ಆ ಬಳಿಕ ಸತತ 2 ಬಾರಿ ಕ್ಷಿಪಣಿ ದಾಳಿ ನಡೆಸಿ, 20ಕ್ಕೂ ಹೆಚ್ಚು ಮಂದಿಯನ್ನು ಕೊಂದಿತ್ತು.

  • ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಮುಖ್ಯ ವಕ್ತಾರ ಕಲ್ಲಾಸ್‌

    ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಮುಖ್ಯ ವಕ್ತಾರ ಕಲ್ಲಾಸ್‌

    ಬೈರೂತ್‌: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮತ್ತೆ ಯುದ್ಧದ ಕಾರ್ಮೋಡ ದಟ್ಟವಾಗಿ ಆವರಿಸಿದೆ. ಪ್ಯಾಲೆಸ್ತೀನ್‌ (Palestine) ವಿರುದ್ಧ ಸಮರ ಸಾರಿರುವ ಇಸ್ರೇಲ್ (Israel) ನೆರೆಯ ಲೆಬನಾನ್ (Lebanon) ಮೇಲೂ ದಾಳಿ ಮಾಡುತ್ತಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಟೇಕಾಫ್‌ಗೆ ಸಿದ್ಧವಾಗಿದ್ದ ವಿಮಾನದ ಮೇಲೆ ಗುಂಡಿನ ದಾಳಿ – ಕಿಡಿಗೇಡಿಗಳಿಗೆ ಶೋಧ

    ಎರಡು ದಿನಗಳ ಹಿಂದೆಯಷ್ಟೇ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಬೈರೂತ್‌ ನಗರದ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಭಾನುವಾರ (ನ.17) ಸಿರಿಯನ್ ಬಾತ್ ಪಕ್ಷದ ಲೆಬನಾನ್‌ನ ಶಾಖೆಯನ್ನು ಗುರಿಯಾಗಿಸಿಕೊಂಡು ಮಧ್ಯ ಬೈರೂತ್‌ ನಗರದ ಮೇಲೆ ದಾಳಿ ನಡೆಸಿದ ಇಸ್ರೇಲ್‌ ಹಿಜ್ಬುಲ್ಲಾದ ಮುಖ್ಯ ವಕ್ತಾರ (Hezbollah Spokesman)ಮೊಹಮ್ಮದ್ ಅಫೀಫ್‌ನನ್ನು ಹತ್ಯೆಗೈದಿದೆ ಎಂದು ಲೆಬನಾನಿನ ಭದ್ರತಾ ಪಡೆಯ ಮೂಲಗಳು ತಿಳಿಸಿವೆ ಎಂದು ವರದಿಗಳಿಂದ ತಿಳಿದುಬಂದಿದೆ.

    ಎರಡು ದಿನಗಳ ಹಿಂದೆಯಷ್ಟೇ ಇಸ್ರೇಲ್‌ ಬೈರೂತ್‌ ಮೇಲೆ ವಾಯು ದಾಳಿ ನಡೆಸಿ 12 ಜನರನ್ನು ಹತ್ಯೆಗೈದಿತ್ತು. ಇದನ್ನೂ ಓದಿ: ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?

    ಮತ್ತೆ ಉದ್ವಿಗ್ನಗೊಂಡಿದ್ದೇಕೆ?
    ಒಂದು ವಾರದ ಹಿಂದೆಯಷ್ಟೇ ಹಿಜ್ಬುಲ್ಲಾ ಉಗ್ರರ ಗುಂಪು ಇಸ್ರೇಲ್‌ನ ಇಸ್ರೇಲ್‌ನ ಹೈಫಾ ನಗರವನ್ನ (Haifa City) ಗುರಿಯಾಗಿಸಿಕೊಂಡು 150 ರಾಕೆಟ್‌ಗಳಿಂದ ದಾಳಿ ನಡೆಸಿತ್ತು. ಹಿಜ್ಬುಲ್ಲಾ ಕ್ಷಿಪಣಿ ದಾಳಿಗೆ ಇಸ್ರೇಲ್‌ನಲ್ಲಿ ಅನೇಕ ನಾಗರಿಕರು ಗಾಯಗೊಂಡಿದ್ದರು. ಇದರಿಂದ ಕೆರಳಿದ ಇಸ್ರೇಲ್‌ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿತ್ತು. ಇದನ್ನೂ ಓದಿ: ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್‌ ಪ್ರತಿ ಹರಿದು ಹಾಕಿದ ಸಂಸದೆ

  • ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹತ್ಯೆ – ಪ್ರತೀಕಾರ ತೀರಿಸಿಕೊಂಡ ಇಸ್ರೇಲ್‌

    ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹತ್ಯೆ – ಪ್ರತೀಕಾರ ತೀರಿಸಿಕೊಂಡ ಇಸ್ರೇಲ್‌

    ಟೆಲ್ ಅವಿವ್: ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್‌ನ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಹನಿಯೆಹ್ (Ismail Haniyeh) ಅವರ ಹತ್ಯೆಯಾಗಿದೆ. ಇದೇ ವೇಳೆ ಅವರ ಅಂಗರಕ್ಷಕರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೆ ಬಿಡುಗಡೆಮಾಡಿರುವುದಾಗಿ ವರದಿಯಾಗಿದೆ.

    ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಇರಾನ್‌ನ ಚುನಾಯಿತ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಟೆಹ್ರಾನ್‌ನಲ್ಲಿದ್ದರು. ಅವರೊಂದಿಗೆ ಓರ್ವ ಅಂಗರಕ್ಷಕರೂ ಇದ್ದರು. ಕಾರ್ಯಕ್ರಮದ ನಂತರ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್‌ (Hamas) ಹೇಳಿಕೆಯಲ್ಲಿ ತಿಳಿಸಿದೆ. ದಾಳಿಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ಫಲಿತಾಂಶವನ್ನು ನಂತರ ಪ್ರಕಟಿಸುವುದಾಗಿ ಹೇಳಿದೆ ಎಂದು ತಿಳಿದುಬಂದಿದೆ.

    ಕಳೆದ ಅಕ್ಟೋಬರ್ 7ರ ಇಸ್ರೇಲ್‌ (Israel)ಮೇಲೆ ನಡೆದ ದಾಳಿಯ ನಂತರ ಇಸ್ಮಾಯಿಲ್ ಹನಿಯೆಹ್ ಅವರನ್ನು ಕೊಂದು ಹಮಾಸ್ ಗುಂಪನ್ನು ನಾಶಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು. ಇದರ ಪರಿಣಾಮವಾಗಿ 1,195 ಜನರು ಸಾವನ್ನಪ್ಪಿದರು, ಹೆಚ್ಚಾಗಿ ನಾಗರಿಕರು ಮೃತಪಟ್ಟಿದ್ದರು. ಇದೀಗ ಇಸ್ರೇಲ್‌ ದಾಳಿಯಲ್ಲಿ ಹಮಾಸ್‌ ಮುಖ್ಯಸ್ಥನನ್ನ ಹತ್ಯೆಗೈದಿದ್ದು ಸೇಡು ತೀರಿಸಿಕೊಂಡಿದೆ ಎಂದು ವರದಿಗಳು ಉಲ್ಲೇಖಿಸಿವೆ. ಹಮಾಸ್‌ ನಾಯಕನ ಹತ್ಯೆಗೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತೀವ್ರ ಸಂತಾಪ ಸೂಚಿಸಿದೆ.

    ದಾಳಿಯಲ್ಲಿ ಸತ್ತಿದ್ದೆಷ್ಟು ಮಂದಿ?
    ಇಸ್ರೇಲ್‌-ಹಮಾಸ್‌ ನಡುವೆ ನಡೆದ ಭೀಕರ ದಾಳಿಯಲ್ಲಿ ಈವರೆಗೆ 40,000ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ 39,145 ಮಂದಿ ಪ್ಯಾಲೆಸ್ತೀನಿಯರು ಹಾಗೂ 1,478 ಮಂದಿ ಇಸ್ರೇಲಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. 108 ಪತ್ರಕರ್ತರು ತಮ್ಮ ಜೀವ ತೆತ್ತಿದ್ದಾರೆ ಎಂದು ಹೇಳಲಾಗಿದೆ.