Tag: Israeli Soldiers

  • ನಾಲ್ವರು ಇಸ್ರೇಲ್‌ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದ ಹಮಾಸ್‌ ಉಗ್ರರು

    ನಾಲ್ವರು ಇಸ್ರೇಲ್‌ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದ ಹಮಾಸ್‌ ಉಗ್ರರು

    ಜೆರುಸಲೇಂ: ಒತ್ತೆಯಾಳಾಗಿ (Hostages) ಇಟ್ಟುಕೊಂಡಿದ್ದ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು (Israeli Soldiers) ಹಮಾಸ್‌ (Hamas) ಉಗ್ರರು ಬಿಡುಗಡೆ ಮಾಡಿದ್ದಾರೆ. ಒತ್ತೆಯಾಳುಗಳನ್ನು ರೆಡ್ ಕ್ರಾಸ್ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಬಳಿಕ ಅವರನ್ನು ಗಾಜಾದಿಂದ ವಾಹನದಲ್ಲಿ ಕರೆದೊಯ್ಯಲಾಯಿತು.

    ನಾಲ್ವರನ್ನು ಅಕ್ಟೋಬರ್ 7, 2023ರಲ್ಲಿ ಗಾಜಾ ಗಡಿಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ನಹಲ್ ಓಜ್ ಮಿಲಿಟರಿ ನೆಲೆಯಲ್ಲಿ ಸೆರೆಹಿಡಿಯಲಾಗಿತ್ತು. ಅವರನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಶುಕ್ರವಾರ ಹೇಳಿತ್ತು. ಇಸ್ರೇಲ್ ಮತ್ತು ಗಾಜಾ ನಡುವಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಇದು ಎರಡನೇ ವಿನಿಮಯವಾಗಿದೆ.

    ಒಪ್ಪಂದದ ಪ್ರಕಾರ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರ ಬಿಡುಗಡೆಯ ನಂತರ, ಇಸ್ರೇಲ್ ಪ್ಯಾಲೆಸ್ತೇನಿಯನ್ ಕೈದಿಗಳನ್ನು ಬಿಡುಗಡೆ ಮಾಡಬೇಕು. ಆದರೆ ಈ ಬಗ್ಗೆ ಎರಡೂ ಕಡೆಯಿಂದ ನಿಖರವಾದ ಕೈದಿಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಲಾಗಿಲ್ಲ.

    ಕದನ ವಿರಾಮ ಒಪ್ಪಂದದ ಪ್ರಕಾರ, ಇನ್ನೂ ಜೀವಂತವಾಗಿದ್ದಾರೆ ಎಂದು ನಂಬುವ 33 ಒತ್ತೆಯಾಳುಗಳನ್ನು ಹಮಾಸ್‌ ಉಗ್ರರು ಬಿಡುಗಡೆ ಮಾಡಬೇಕು. ಇದಕ್ಕೆ ಬದಲಾಗಿ ಇಸ್ರೇಲ್ ಜೈಲುಗಳಲ್ಲಿ ಇರಿಸಲಾಗಿರುವ 1900 ಪ್ಯಾಲೆಸ್ತೇನಿಯನ್ ಕೈದಿಗಳನ್ನು ಬಿಡುಗಡೆ ಮಾಡಬೇಕು.

    ಕದನ ವಿರಾಮ ಘೋಷಣೆಯ ನಂತರ, ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ನಿರಂತರ ಯುದ್ಧದಿಂದ ಸ್ಥಳಾಂತರಗೊಂಡ ಅನೇಕ ಗಾಜಾ ನಿವಾಸಿಗಳು ಮನೆಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆ ಮನೆಗಳು ಸಂಪೂರ್ಣ ನಾಶವಾಗಿವೆ ಎಂದು ವರದಿಯಾಗಿದೆ.

  • ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ಅಟ್ಯಾಕ್‌ – 4 ಇಸ್ರೇಲ್‌ ಸೈನಿಕರು ಬಲಿ

    ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ಅಟ್ಯಾಕ್‌ – 4 ಇಸ್ರೇಲ್‌ ಸೈನಿಕರು ಬಲಿ

    ಬೈರೂತ್‌: ಒಂದು ವರ್ಷ ಕಳೆದರೂ ಇಸ್ರೇಲ್‌-ಹಮಾಸ್‌-ಹಿಜ್ಬುಲ್ಲಾ ನಡುವಿನ ದಾಳಿಯ ತೀವ್ರತೆ ಹೆಚ್ಚುತ್ತಲೇ ಇದೆ. ಅ.7ಕ್ಕಿಂತ ಭೀಕರವಾಗಿ ದಾಳಿ ನಡೆಸಲು ಹಮಾಸ್‌ ಪ್ಲಾನ್‌ ಮಾಡಿದೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ ಇಸ್ರೇಲ್‌ ಮೇಲೆ ಭೀಕರ ದಾಳಿ ನಡೆದಿದೆ. ಲೆಬನಾನ್‌ನ ಗಡಿಯುದ್ಧಕ್ಕೂ ಬಾಂಬ್‌ ದಾಳಿಗಳನ್ನು ವಿಸ್ತರಿಸಿದೆ. ಉತ್ತರದ ನೆಲೆಗಳಲ್ಲಿ ಹಿಜ್ಬುಲ್ಲಾ ಡ್ರೋನ್‌ಗಳು (Hezbollah Drone Strike) ತನ್ನ ನಾಲ್ವರು ಸೈನಿಕರನ್ನು (Israeli Soldiers) ಹೊಡೆದುರುಳಿಸಿದೆ ಎಂದು ಇಸ್ರೇಲ್‌ ಮಿಲಿಟರಿ ಹೇಳಿಕೊಂಡಿದೆ.

    ಹೈಫಾ ಬಳಿಯ ಬಿನ್ಯಾಮಿನಾದಲ್ಲಿನ ಮಿಲಿಟರಿ ತರಬೇತಿ ಶಿಬಿರದ ಮೇಲಿನ ದಾಳಿಯು ಸೆಪ್ಟೆಂಬರ್ 23 ನಂತರ ಇಸ್ರೇಲ್ ನೆಲೆಯ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್, ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ದಾಳಿ ನಡೆಸಿದ್ದು, ತುರ್ತು ಸೇವೆಗಳಲ್ಲಿ ವ್ಯತ್ಯಯವಾಗಿದ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್‌ ಭೀಕರ ವಾಯುದಾಳಿಗೆ 22 ಮಂದಿ ಬಲಿ – 117 ಮಂದಿಗೆ ಗಾಯ, ಹಿಜ್ಬುಲ್ಲಾ ಟಾಪ್‌ ಲೀಡರ್‌ ಸೇಫ್‌

    ಈ ನಡುವೆ ಸ್ಥಳಾಂತರಗೊಂಡ ಜನರಿಗೆ ಆಶ್ರಯ ತಾಣವಾಗಿ ಬಳಸಲಾಗುತ್ತಿದ್ದ ಶಾಲೆಯ ಮೇಲೆ ಇಸ್ರೇಲಿ ನಡೆಸಿದ ದಾಳಿಯಿಂದ ಒಂದೇ ಕುಟುಂಬದ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಹರಾ ಮರುಭೂಮಿಯಲ್ಲಿ ಭಾರೀ ಮಳೆ – 50 ವರ್ಷದ ನಂತರ ಕೆರೆಗಳು ಭರ್ತಿ

    ಇತ್ತೀಚೆಗಷ್ಟೇ ಇಸ್ರೇಲ್‌ ಸೇನೆಯು ಸೆಂಟ್ರಲ್‌ ಬೈರೂತ್‌ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ (Israeli Strikes) 22 ಮಂದಿ ಹತ್ಯೆಯಾಗಿ, ಸುಮಾರು 117 ಮಂದಿ ಗಾಯಗೊಂಡಿದ್ದರು. ಅದೃಷ್ಟವಶಾತ್‌ ಈ ದಾಳಿಯಲ್ಲಿ ಹಿಜ್ಬುಲ್ಲಾದ (Hezbollah) ಉನ್ನತ ಅಧಿಕಾರಿಯೊಬ್ಬರು ಬದುಕುಳಿದಿದ್ದರು. ಈ ಬೆನ್ನಲ್ಲೇ ಇಸ್ರೇಲ್‌ ವಿರುದ್ಧ ಅಕ್ಟೋಬರ್‌ 7ಕ್ಕಿಂತಲೂ ಭೀಕರ ದಾಳಿ ನಡೆಸುವುದಾಗಿ ಒಂದು ದಿನದ ಹಿಂದೆಯಷ್ಟೇ ಎಚ್ಚರಿಕೆ ನೀಡಿದರು. ಅದರಂತೆ ಲೆಬನಾನ್‌ನ ಉತ್ತರ ಗಡಿ ಭಾಗಗಳಲ್ಲಿ ಇಸ್ರೇಲ್‌ ಸೇನೆ ವಿರುದ್ಧ ದಾಳಿ ನಡೆಸಿದ್ದು ನಾಲ್ವರು ಸೈನಿಕರನ್ನು ಹತ್ಯೆಗೈದಿದೆ.

    2.20 ಲಕ್ಷ ಮಂದಿ ಲೆಬನಾನ್‌ನಿಂದ ಸಿರಿಯಾಕ್ಕೆ ಪಲಾಯನ
    ಇತ್ತೀಚಿನ ದಿನಗಳಲ್ಲಿ ಇಸ್ರೇಲ್‌ನ ಯುದ್ಧ ವಿಮಾನಗಳು (Israeli Fighter Jets) ಲೆಬನಾನ್‌ನ ಬೆಕಾ ಪ್ರದೇಶ ಮತ್ತು ಬೈರೂತ್‌ನಲ್ಲಿ ವ್ಯಾಪಕವಾದ ವೈಮಾನಿಕ ದಾಳಿಗಳನ್ನು ನಡೆಸಿದೆ. ಮೂಲಸೌಕರ್ಯ ತಾಣಗಳು, ಲಾಂಚರ್‌ಗಳು, ಕಮಾಂಡ್ & ಕಂಟ್ರೋಲ್ ಸೆಂಟರ್‌ಗಳು ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹಣಾ ಸೌಲಭ್ಯ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಸದ್ಯಕ್ಕೆ ಕದನ ವಿರಾಮ ಘೋಷಣೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ ಭಯಭೀತರಾಗಿರುವ 2.20 ಲಕ್ಷ ಮಂದಿ ಸಿರಿಯಾಕ್ಕೆ ಪಲಾಯನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

  • ರಫಾದಲ್ಲಿ ವಿನಾಶಕಾರಿ ಸ್ಫೋಟ; 8 ಇಸ್ರೇಲಿ ಸೈನಿಕರು ಸಾವು

    ರಫಾದಲ್ಲಿ ವಿನಾಶಕಾರಿ ಸ್ಫೋಟ; 8 ಇಸ್ರೇಲಿ ಸೈನಿಕರು ಸಾವು

    ಟೆಲ್‌ ಅವೀವ್‌: ದಕ್ಷಿಣ ಗಾಜಾದ (Gaza) ರಫಾದಲ್ಲಿ (Rafah) ವಿನಾಶಕಾರಿ ಸ್ಫೋಟ ಸಂಭವಿಸಿ ಎಂಟು ಮಂದಿ ಇಸ್ರೇಲಿ (Israeli Soldiers) ಸೈನಿಕರು ಮೃತಪಟ್ಟಿದ್ದಾರೆ.

    ಮೃತರಲ್ಲಿ ಬೀಟ್ ಜಾನ್‌ನಿಂದ ಯುದ್ಧ ಎಂಜಿನಿಯರಿಂಗ್ ಕಾರ್ಪ್ಸ್‌ನ 601 ನೇ ಬೆಟಾಲಿಯನ್‌ನ ಡೆಪ್ಯೂಟಿ ಕಂಪನಿ ಕಮಾಂಡರ್ ಸಿಪಿಟಿ ವಾಸೆಮ್ ಮಹಮೂದ್ (23) ಕೂಡ ಒಬ್ಬರು ಎಂದು ಗುರುತಿಸಲಾಗಿದೆ. ಉಳಿದ ಏಳು ಸೈನಿಕರ ಹೆಸರನ್ನು ಕುಟುಂಬದವರಿಗೆ ಮಾಹಿತಿ ನೀಡಿದ ನಂತರ ಬಹಿರಂಗಪಡಿಸಲಾಗುವುದು ಎಂದು ಐಡಿಎಫ್‌ ತಿಳಿಸಿದೆ. ಇದನ್ನೂ ಓದಿ: ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ

    IDF ತನಿಖೆಯ ಆರಂಭಿಕ ಸಂಶೋಧನೆಗಳು, ಸ್ಫೋಟ ಸಂಭವಿಸಿದಾಗ ಸೈನಿಕರು ನೇಮರ್ ಶಸ್ತ್ರಸಜ್ಜಿತ ಯುದ್ಧ ಎಂಜಿನಿಯರಿಂಗ್ ವಾಹನ (CEV) ಒಳಗೆ ಇದ್ದರು ಎಂದು ತಿಳಿಸಿದೆ. ರಫಾದ ಟೆಲ್ ಸುಲ್ತಾನ್ ನೆರೆಹೊರೆಯಲ್ಲಿ ಹಮಾಸ್ ವಿರುದ್ಧ ತಡರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು. ನಂತರ ಬೆಳಗ್ಗೆ 5 ಗಂಟೆಗೆ ಈ ಘಟನೆ ಸಂಭವಿಸಿದೆ.

    ಬೆಂಗಾವಲು ಪಡೆಯಲ್ಲಿ ಐದನೇ ಅಥವಾ ಆರನೇ ವಾಹನವಾಗಿ ಇರಿಸಲಾದ ನೇಮರ್ ಸಿಇವಿ ಸ್ಫೋಟಕ್ಕೆ ಒಳಗಾಗಿದೆ. ಸ್ಫೋಟವು ಪೂರ್ವ-ಸ್ಥಾಪಿತ ಬಾಂಬ್‌ನಿಂದ ಉಂಟಾಗಿದೆಯೇ ಅಥವಾ ಹಮಾಸ್ ಉಗ್ರರು ನೇರವಾಗಿ ವಾಹನದ ಮೇಲೆ ಸ್ಫೋಟಕ ಸಾಧನವನ್ನು ಇರಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ತನಿಖಾಧಿಕಾರಿಗಳು ಸಿಇವಿ ಹೊರಗೆ ಸಂಗ್ರಹಿಸಲಾದ ಸ್ಫೋಟಕಗಳು ಸ್ಫೋಟದ ತೀವ್ರತೆಗೆ ಕಾರಣವಾಗಿವೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕಕ್ಕೆ ಸೌದಿ ಶಾಕ್‌, ಪೆಟ್ರೋಡಾಲರ್ ಒಪ್ಪಂದಕ್ಕೆ ಗುಡ್‌ಬೈ – ಡಾಲರ್‌ ವಿಶ್ವದ ಕರೆನ್ಸಿಯಾದ ಕಥೆ ಓದಿ

    ಘಟನೆಯ ಸಮಯದಲ್ಲಿ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ. ಸ್ಫೋಟದ ಸಮಯದಲ್ಲಿ ವಾಹನವು ಚಲಿಸುತ್ತಿತ್ತು ಎಂದು ಐಡಿಎಫ್‌ ತಿಳಿಸಿದೆ. ಹಮಾಸ್‌ ಬಂಡುಕೋರರ ವಿರುದ್ಧ ಇದುವರೆಗೆ ನಡೆದ ಕಾರ್ಯಾಚರಣೆಯಲ್ಲಿ ಇಸ್ರೇಲಿ ಸೈನಿಕರ ಸಾವಿನ ಸಂಖ್ಯೆ 307 ಕ್ಕೆ ಏರಿಕೆಯಾಗಿದೆ.