Tag: Israeli Airstrike

  • ಗಾಜಾದಲ್ಲಿ ಇಸ್ರೇಲ್ ವಾಯುದಾಳಿಗೆ ಹಮಾಸ್ ರಾಜಕೀಯ ನಾಯಕ ಬಲಿ

    ಗಾಜಾದಲ್ಲಿ ಇಸ್ರೇಲ್ ವಾಯುದಾಳಿಗೆ ಹಮಾಸ್ ರಾಜಕೀಯ ನಾಯಕ ಬಲಿ

    ಜೆರುಸಲೇಂ: ಗಾಜಾದ (Gaza) ಖಾನ್‌ ಯೂನಿಸ್‌ನಲ್ಲಿ ಇಸ್ರೇಲ್‌ (Israeli) ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ (Hamas) ರಾಜಕೀಯ ನಾಯಕ ಸಲಾಹ್‌ ಅಲ್‌-ಬರ್ದವೀರ್‌ ಹತ್ಯೆಯಾಗಿದೆ.

    ದಾಳಿಯಲ್ಲಿ ಸಲಾಹ್ ಅಲ್-ಬರ್ದವೀಲ್ ಅವರ ಪತ್ನಿಯೂ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಪರ ಮಾಧ್ಯಮಗಳನ್ನು ಉಲ್ಲೇಖಿಸಿ ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

    ಗಾಜಾ ಪಟ್ಟಿಯಾದ್ಯಂತ ಹಮಾಸ್ ಭದ್ರಕೋಟೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿತ್ತು. ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಮಾತುಕತೆಗಳು ಸಫಲವಾಗಿಲ್ಲ. ಮಾರ್ಚ್‌ 19 ರಿಂದ ಜಾರಿಯಲ್ಲಿದ್ದ ಕದನ ವಿರಾಮವನ್ನು ಮುರಿದ ನಂತರ ಮಿಲಿಟರಿ ಕಾರ್ಯಾಚರಣೆ ನಡೆದಿದೆ.

    ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲಿ ಸರ್ಕಾರವು, ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದೆ. ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಮಧ್ಯಸ್ಥಿಕೆಯಲ್ಲಿ ಪ್ರಸ್ತಾವನೆಗಳನ್ನು ತಿರಸ್ಕರಿಸಿದೆ.

    ಹಮಾಸ್ ವಿರುದ್ಧದ ದಾಳಿಗಳನ್ನು ತೀವ್ರಗೊಳಿಸುವಂತೆ ಇಸ್ರೇಲ್ ರಕ್ಷಣಾ ಪಡೆಗಳಿಗೆ (IDF) ನೆತನ್ಯಾಹು ನಿರ್ದೇಶನ ನೀಡಿದ್ದಾರೆ. ಇನ್ಮುಂದೆ ಇಸ್ರೇಲ್, ಹಮಾಸ್ ವಿರುದ್ಧ ಮಿಲಿಟರಿ ಬಲವನ್ನು ಹೆಚ್ಚಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ನೆತನ್ಯಾಹು ಕಚೇರಿ ತಿಳಿಸಿದೆ.

  • ಬೈರೂತ್‌ ಮೇಲೆ ಇಸ್ರೇಲ್‌ ಮತ್ತೊಂದು ದಾಳಿ; ಮೂರೇ ಸೆಕೆಂಡುಗಳಲ್ಲಿ ದೈತ್ಯ ಕಟ್ಟಡಗಳು ಧ್ವಂಸ

    ಬೈರೂತ್‌ ಮೇಲೆ ಇಸ್ರೇಲ್‌ ಮತ್ತೊಂದು ದಾಳಿ; ಮೂರೇ ಸೆಕೆಂಡುಗಳಲ್ಲಿ ದೈತ್ಯ ಕಟ್ಟಡಗಳು ಧ್ವಂಸ

    ಬೈರೂತ್‌: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗುತ್ತಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನಿವಾಸದ ಮೇಲೆ ಹಮಾಸ್‌ ಡ್ರೋನ್‌ ದಾಳಿ ನಡೆಸಿದ ಬಳಿಕ ಇಸ್ರೇಲ್‌ ತನ್ನ ದಾಳಿಯ ತೀವ್ರತೆಯನ್ನು ಹೆಚ್ಚು ಮಾಡಿದೆ. ಮಂಗಳವಾರವೂ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ (Israeli Airstrike) ಬೈರೂತ್‌ನ ಬೃಹತ್‌ ಕಟ್ಟಡಗಳು ಸೆಕೆಂಡುಗಳಲ್ಲಿ ನೆಲೆ ಕಚ್ಚಿವೆ.

    ಇಸ್ರೇಲಿ ಮಿಲಿಟರಿ ವಕ್ತಾರ ಅವಿಚಾಯ್‌ ಅಡ್ರೇ ಅವರು ಎಚ್ಚರಿಕೆ ನೀಡಿದ 40 ನಿಮಿಷಗಳ ಬಳಿಕ ದಾಳಿ ಸಂಭವಿಸಿದೆ. ದಾಳಿಗೆ ಒಳಗಾದ ಎರಡು ಬೃಹತ್‌ ಕಟ್ಟಡಗಳಲ್ಲಿ ಹಿಜ್ಬುಲ್ಲಾ ಸೌಲಭ್ಯಗಳನ್ನು ಅಡಗಿಸಿಡಲಾಗಿತ್ತು. ಅಲ್ಲದೇ ಲೆಬನಾನ್‌ನಿಂದ (Lebanon) ಸ್ಥಳಾಂತರಗೊಂಡಿದ್ದ ಕುಟುಂಬಗಳೂ ಆಶ್ರಯ ಪಡೆದಿದ್ದವು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸಂಘರ್ಷಗಳಿಗೆ ಶಾಂತಿಯುತ ಪರಿಹಾರಕ್ಕೆ ನಾವಿದ್ದೇವೆ: ಯುದ್ಧ ಕುರಿತು ಪುಟಿನ್‌ ಜೊತೆ ಮೋದಿ ಮಾತು

    ಇಸ್ರೇಲ್‌ ವಾಯುದಾಳಿಯ 32 ಸೆಕೆಂಡುಗಳ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉದ್ಯಾನ ಪಕ್ಕದಲ್ಲೇ ನಿರ್ಮಾಣಗೊಂಡಿದ್ದ ದೈತ್ಯ ಕಟ್ಟಡ ಮಿಸೈಲ್‌ ಬೀಳುತ್ತಿದ್ದಂತೆ ಕೇವಲ 3 ಸೆಕೆಂಡುಗಳಲ್ಲೇ ಧ್ವಂಸವಾಗಿದೆ. ಸಮೀಪದಲ್ಲೇ ಇದ್ದ ಸ್ಥಳೀಯರು ದಾಳಿ ಕಂಡು ಕಕ್ಕಾಬಿಕ್ಕಿಯಾಗಿರುವುದು ವೀಡಿಯೋದಲ್ಲಿ ತೋರಿಸಿದೆ. ಸದ್ಯ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

    ಹಿಜ್ಬುಲ್ಲಾ ಟಾಪ್‌ ಲೀಡರ್‌ ಸುದ್ದಿಗೋಷ್ಠಿ ದಿಢೀರ್‌ ರದ್ದು:
    ಇನ್ನೂ ಇಸ್ರೇಲ್‌ ದಾಳಿ ಸಮಯದಲ್ಲಿ ಉದ್ದೇಶಿತ ಪ್ರದೇಶದಿಂದ ನೂರು ಮೀಟರ್‌ಗಳಷ್ಟು ದೂರದಲ್ಲಿ ನಿಗದಿಯಾಗಿದ್ದ ಸುದ್ದಿಗೋಷ್ಠಿಯನ್ನು ಹಿಜ್ಬುಲ್ಲಾದ ಟಾಪ್‌ ಲೀಡರ್‌ ದಿಢೀರ್‌ ರದ್ದುಗೊಳಿಸಿದ್ದಾರೆ. ಇದನ್ನೂ ಓದಿ: ಯುದ್ಧಕ್ಕೆ ನಮ್ಮ ಬೆಂಬಲ ಇಲ್ಲ: BRICS ಶೃಂಗಸಭೆಯಲ್ಲಿ ಮೋದಿ ಸ್ಪಷ್ಟನೆ

    ಇನ್ನೂ ಜೆರುಸಲೆಮ್‌ನ ಮಾನವ ಹಕ್ಕುಗಳ ಗುಂಪಾದ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಅಲ್-ಕರ್ದ್ ಅಲ್-ಹಸನ್, ಇಸ್ರೇಲ್‌ ವಾಯುದಾಳಿಯನ್ನು ಖಂಡಿಸಿದೆ. ಹಿಜ್ಬುಲ್ಲಾದ ಸಂಯೋಜಿತ ಹಣಕಾಸು ಶಾಖೆಗಳನ್ನ ಇಸ್ರೇಲ್‌ ಗುರಿಯಾಗಿಸಿದೆ. ಇದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.

    ಒಂದು ದಿನದ ಹಿಂದೆಯಷ್ಟೇ ಇಸ್ರೇಲ್‌ ನಡೆಸಿದ ಲೆಬನಾನ್‌ನ ಬೈರೂತ್‌ನಲ್ಲಿ ದಾಳಿ ನಡೆಸಿತ್ತು. ಲೆಬನಾನ್‌ ರಾಜಧಾನಿ ಬೈರೂತ್‌ನ ಅಲ್‌ ಸಹೇಲ್‌ ಆಸ್ಪತ್ರೆಯ ಕೆಳಗೆ ಹಿಜ್ಬುಲ್ಲಾ ಉಗ್ರರು ಸಂಗ್ರಹಿಸಿಟ್ಟಿದ್ದ 4,200 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನದ ಸಂಗ್ರಹ ಪತ್ತೆ ಮಾಡಿತ್ತು ಇಸ್ರೇಲ್‌. ಇದನ್ನೂ ಓದಿ: ಶಾಂತಿ ಮಾತುಕತೆ ಯಶಸ್ವಿ – 5 ವರ್ಷದ ಬಳಿಕ ನಡೆಯಲಿದೆ ಮೋದಿ-ಜಿನ್‌ಪಿಂಗ್‌ ದ್ವಿಪಕ್ಷೀಯ ಸಭೆ

  • ನಸ್ರಲ್ಲಾ ಹತ್ಯೆ ಬಳಿಕ ಹಿಜ್ಬುಲ್ಲಾ ಪ್ರತೀಕಾರದ ದಾಳಿ – ಮೊಸಾದ್‌ ಹೆಡ್‌ಕ್ವಾರ್ಟಸ್‌ ಮೇಲೆ ಅಟ್ಯಾಕ್‌

    ನಸ್ರಲ್ಲಾ ಹತ್ಯೆ ಬಳಿಕ ಹಿಜ್ಬುಲ್ಲಾ ಪ್ರತೀಕಾರದ ದಾಳಿ – ಮೊಸಾದ್‌ ಹೆಡ್‌ಕ್ವಾರ್ಟಸ್‌ ಮೇಲೆ ಅಟ್ಯಾಕ್‌

    ಬೈರೂತ್‌: ಹಿಜ್ಬುಲ್ಲಾದ ದೀರ್ಘಕಾಲದ ಮುಖ್ಯಸ್ಥ ಶೇಖ್ ಹಸನ್ ನಸ್ರಲ್ಲಾ (Hassan Nasrallah) ಹಾಗೂ ಅವರ ಪುತ್ರಿ ಝೈನಾಬ್ ನಸ್ರಲ್ಲಾ ಹತ್ಯೆ ಬಳಿಕ ಲೆಬನಾನ್‌ನ ಹಿಜ್ಬುಲ್ಲಾ (Hezbollah) ಭಯೋತ್ಪಾದಕರ ಗುಂಪು ಮಂಗಳವಾರ ಇಸ್ರೇಲ್‌ ವಿರುದ್ಧ ಪ್ರತೀಕಾರದ ದಾಳಿ ನಡೆಸಿದೆ.

    ಟೆಲ್‌ ಅವೀವ್‌ ಬಳಿಯ ಗ್ಲಿಲೋಟ್‌ನ ಇಸ್ರೇಲಿ ಮಿಲಿಟರಿ ಗುಪ್ತಚರ ನೆಲೆಯನ್ನು (Israeli Military Base) ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ‌ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್‌ ಲೀಡರ್‌ ಟಾರ್ಗೆಟ್‌!

    ಮಿಲಿಟರಿ ಗುಪ್ತಚರ ಘಟಕ 8200 ಮತ್ತು ಟೆಲ್ ಅವೀವ್‌ನ ಹೊರವಲಯದಲ್ಲಿರುವ ಮೊಸಾದ್ ಪ್ರಧಾನ ಕಚೇರಿಯ ಗ್ಲಿಲೋಟ್ ಬೇಸ್‌ ಸೇನಾ ನೆಲೆಯ ಮೇಲೆ 4 ರಾಕೆಟ್‌ಗಳನ್ನ ಉಡಾಯಿಸಿದೆ ಎಂದು ಹೇಳಿಕೊಂಡಿದೆ. ಹಿಜ್ಬುಲ್ಲಾ ಮುಖ್ಯಸ್ಥನನ್ನು ಹತ್ಯೆಗೈದ ನಂತರ ಇಸ್ರೇಲ್‌ ವಿರುದ್ಧ ಇದು ಮೊದಲ ಪ್ರತೀಕಾರದ ದಾಳಿಯಾಗಿದೆ. ಇದನ್ನೂ ಓದಿ: ರೇಪ್‌ ಆರೋಪಿಗಳಿಗೆ ಪುರುಷತ್ವ ಹರಣ – ಇಟಲಿಯಲ್ಲಿ ಶೀಘ್ರವೇ ಬರಲಿದೆ ಹೊಸ ಕಾನೂನು

    ಇತ್ತೀಚೆಗೆ ಹಿಜ್ಜುಲ್ಲಾ ಉಗ್ರರ 800 ಸ್ಥಳಗಳ ಮೇಲೆ ಇಸ್ರೇಲ್ 200 ರಾಕೆಟ್‌ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಲೆಬನಾನ್‌ನ ಸುಮಾರು 492 ಮಂದಿ ಸಾವನ್ನಪ್ಪಿದ್ದರು. ಲೆಬನಾನ್‌ ಮೇಲೆ ರಾಕೆಟ್‌ ದಾಳಿ ನಡೆಸಿದ ಬಳಿಕ ಲೆಬನಾನ್‌ನ ಹೆಜ್ಬುಲ್ಲಾ (Lebanonʼs Hezbollah) ಭಯೋತ್ಪಾದಕ ಸಂಘಟನೆ ಹಾಗೂ ಇಸ್ರೇಲ್‌ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಬೆನ್ನಲ್ಲೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್‌ನಲ್ಲಿ ಕದನ ವಿರಾಮದ (Ceasefire) ಪ್ರಸ್ತಾಪವನ್ನು ತಿರಸ್ಕರಿಸಿ, ಇನ್ನೂ ಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸಲು ಕರೆ ನೀಡಿದ್ದರು. ಈ ಬೆಳಣಿಗೆ ನಡೆದ ಮೂರ್ನಾಲ್ಕು ದಿನಗಳಲ್ಲೇ ಇಸ್ರೇಲ್‌ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ, ಆತನ ಪುತ್ರಿ, ಮತ್ತೊಬ್ಬ ನಾಯಕನನ್ನು ಸಾಲು ಸಾಲಾಗಿ ಹತ್ಯೆ ಮಾಡಿತು.

    ಕಟ್ಟರ್ ಮೂಲಭೂತವಾದಿಯಾಗಿದ್ದ ನಸ್ರಲ್ಲಾ.. 1992ರಿಂದ ಹಿಜ್ಬುಲ್ಲಾದ ಮುಖ್ಯಸ್ಥನಾಗಿದ್ದು, ವಿಶ್ವದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿದ್ದ. ಹಿಜ್ಬುಲ್ಲಾ ಸಂಘಟನೆ ಸೇರಿದವರಿಗೆ ಉಗ್ರ ತರಬೇತಿ ನೀಡುತ್ತಿದ್ದ. ಇರಾನ್‌ನಿಂದ ಕ್ಷಿಪಣಿ ತಂದು ಇಸ್ರೇಲ್ ಮೇಲೆ ದಾಳಿ ಮಾಡ್ತಿದ್ದ. ನಸ್ರಲ್ಲಾ ಹತ್ಯೆ ಬೆನ್ನಲ್ಲೇ ಈವರೆಗೆ 11 ಉಗ್ರರನ್ನು ಹೊಡೆದಿರುವುದಾಗಿ ಇಸ್ರೇಲ್ ಸೇನೆಯೇ ಫೋಟೋ-ಹುದ್ದೆ ಸಮೇತ ಟ್ವೀಟ್ ಮಾಡಿದೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾ ಪುತ್ರಿ, ಹಿಜ್ಬುಲ್ಲಾದ ಕ್ಷಿಪಣಿ ಘಟಕದ ಕಮಾಂಡರ್ ಮೊಹಮ್ಮದ್ ಅಲಿ ಇಸ್ಮಾಯಿಲ್, ಉಪ ಕಮಾಂಡರ್ ಹುಸೇನ್ ಅಹ್ಮದ್ ಇಸ್ಮಾಯಿಲ್ ಕೂಡ ಸಾವಿಗೀಡಾಗಿದ್ದರು. ಇದನ್ನೂ ಓದಿ: ಮ್ಯಾಪ್‌ ತೋರಿಸಿ ಭಾರತ ವರ, ಇರಾನ್‌ ಶಾಪ ಎಂದ ಇಸ್ರೇಲ್‌ ಪ್ರಧಾನಿ ನೆತನ್ಯಾಹು 

  • ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ‌ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್‌ ಲೀಡರ್‌ ಟಾರ್ಗೆಟ್‌!

    ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ‌ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್‌ ಲೀಡರ್‌ ಟಾರ್ಗೆಟ್‌!

    – ಭದ್ರತೆಯೊಂದಿಗೆ ಅಜ್ಞಾತ ಸ್ಥಳಕ್ಕೆ ಹಾರಿದ ಇರಾನ್‌ ನಾಯಕ
    – ವೈಮಾನಿಕ ದಾಳಿ ಬೆನ್ನಲ್ಲೇ ಬೆಂಜಮಿನ್‌ ಅಮೆರಿಕ ಪ್ರವಾಸ ರದ್ದು

    ಬೈರೂತ್‌: ಲೆಬನಾನ್‌ನ ಹಮಾಸ್ ಬೆಂಬಲಿಸ್ತಿರೋ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಬಾಂಬ್ ಮಳೆ (Israeli Airstrike) ಸುರಿಸಿದೆ. ದಾಳಿಯಲ್ಲಿ ಹಿಜ್ಬುಲ್ಲಾದ ದೀರ್ಘಕಾಲದ ಮುಖ್ಯಸ್ಥ ಶೇಖ್ ಹಸನ್ ನಸ್ರಲ್ಲಾ (Hassan Nasrallah) ಹಾಗೂ ಅವರ ಪುತ್ರಿ ಝೈನಾಬ್ ನಸ್ರಲ್ಲಾ ಹತ್ಯೆಗೀಡಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಆಕೆಯ ಸಾವನ್ನು ವರದಿ ಮಾಡಿವೆ.

    ಇದರಿಂದ 32 ವರ್ಷಗಳ ಕಾಲ ಹಿಜ್ಬುಲ್ಲಾವನ್ನು ಮುನ್ನಡೆಸಿದ ನಸ್ರಲ್ಲಾನನ್ನ ಇಸ್ರೇಲ್‌ ಹತ್ಯೆಗೀಡಾಗಿದ್ದು, ಮುಂದೆ ಹಿಜ್ಬುಲ್ಲಾ ಗುಂಪಿನ ಮುಂದಾಳತ್ವ ಯಾರು ವಹಿಸುತ್ತಾರೆ ಎಂಬ ಆತಂಕದಲ್ಲಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಶಿಯಾ, ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ – 46 ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

    ಈ ಬಗ್ಗೆ ಇಸ್ರೇಲ್ ಸೇನೆ ಟ್ವೀಟ್ ಮಾಡಿದ್ದು, `ಹಸನ್ ನಸ್ರಲ್ಲಾ ಇನ್ನು ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲʼ ಅಂದಿದೆ. ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣದ ದಹಿಯೆಹ್‌ನಲ್ಲಿರುವ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಇಸ್ರೇಲ್ 5 ಗಂಟೆಗಳ ವೈಮಾನಿಕ ದಾಳಿಯಲ್ಲಿ ಸುಮಾರು ಟನ್‌ಗಳಷ್ಟು ಸ್ಫೋಟಕ ಬಾಂಬ್‌ಗಳನ್ನು ಬಳಸಿದೆ. ಇದನ್ನೂ ಓದಿ: ಮ್ಯಾಪ್‌ ತೋರಿಸಿ ಭಾರತ ವರ, ಇರಾನ್‌ ಶಾಪ ಎಂದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

    ಕಟ್ಟರ್ ಮೂಲಭೂತವಾದಿಯಾಗಿದ್ದ ನಸ್ರಲ್ಲಾ.. 1992ರಿಂದ ಹಿಜ್ಬುಲ್ಲಾದ ಮುಖ್ಯಸ್ಥನಾಗಿದ್ದು, ವಿಶ್ವದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿದ್ದ. ಹಿಜ್ಬುಲ್ಲಾ ಸಂಘಟನೆ ಸೇರಿದವರಿಗೆ ಉಗ್ರ ತರಬೇತಿ ನೀಡುತ್ತಿದ್ದ. ಇರಾನ್‌ನಿಂದ ಕ್ಷಿಪಣಿ ತಂದು ಇಸ್ರೇಲ್ ಮೇಲೆ ದಾಳಿ ಮಾಡ್ತಿದ್ದ. ನಸ್ರಲ್ಲಾ ಹತ್ಯೆ ಬೆನ್ನಲ್ಲೇ ಈವರೆಗೆ 11 ಉಗ್ರರನ್ನು ಹೊಡೆದಿರುವುದಾಗಿ ಇಸ್ರೇಲ್ ಸೇನೆಯೇ ಫೋಟೋ-ಹುದ್ದೆ ಸಮೇತ ಟ್ವೀಟ್ ಮಾಡಿದೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾ ಪುತ್ರಿ, ಹಿಜ್ಬುಲ್ಲಾದ ಕ್ಷಿಪಣಿ ಘಟಕದ ಕಮಾಂಡರ್ ಮೊಹಮ್ಮದ್ ಅಲಿ ಇಸ್ಮಾಯಿಲ್, ಉಪ ಕಮಾಂಡರ್ ಹುಸೇನ್ ಅಹ್ಮದ್ ಇಸ್ಮಾಯಿಲ್ ಕೂಡ ಸಾವಿಗೀಡಾಗಿದ್ದಾರೆ.

    ಅಲಿ ಇಸ್ಮಾಯಿಲ್ ಇಸ್ರೇಲ್ ವಿರುದ್ಧ ಹಲವಾರು ಭಯೋತ್ಪಾದಕ ದಾಳಿಗಳ ಹೊಣೆಗಾರನಾಗಿದ್ದ. ಇನ್ನು, ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಹಿಜ್ಬುಲ್ಲಾ ಉಗ್ರರ ವಿರುದ್ಧ ಗುಡುಗಿದ್ದಾರೆ. ಸಿರಿಯಾ, ಇರಾಕ್, ಇರಾನ್ ನಮಗೆ ಶಾಪ… ಭಾರತದ ಸ್ನೇಹ ನಮಗೆ ವರ ಅಂತ ಮ್ಯಾಪ್ ತೋರಿಸಿ ಮಾತಾಡಿದ್ದಾರೆ. ವೈಮಾನಿಕ ದಾಳಿ ಬೆನ್ನಲ್ಲೇ ಅಮೆರಿಕ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ. ಇದನ್ನೂ ಓದಿ: ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹತ್ಯೆ – ಇಸ್ರೇಲ್ ಸೇನೆಯಿಂದ ಘೋಷಣೆ

    ನಸ್ರಲ್ಲಾ ಹತ್ಯೆ ಒಪ್ಪಿಕೊಂಡಿರುವ ಹಿಜ್ಬುಲ್ಲಾ, ಗಾಜಾ, ಪ್ಯಾಲೆಸ್ತೀನ್‌ಗೆ ನಮ್ಮ ಬೆಂಬಲ ಮುಂದುರಿಯುತ್ತೆ. ನಮ್ಮ ವಿರೋಧಿಗಳ ವಿರುದ್ಧ ಹೋರಾಟ ಮುಂದುವರಿಸ್ತೇವೆ ಅಂತ ಇಸ್ರೇಲ್ ವಿರುದ್ಧ ಹಿಜ್ಬುಲ್ಲಾ ಶಪಥ ಮಾಡಿದೆ. ಬೆನ್ನಲ್ಲೇ, ಇಸ್ರೇಲ್‌ನಲ್ಲಿ ಹೈಅಲರ್ಟ್ ಕೈಗೊಳ್ಳಲಾಗಿದೆ. ಇತ್ತ, ಹಿಜ್ಬುಲ್ಲಾ ಲೀಡರ್ ನಸ್ರಲ್ಲಾ ಸಾವಿನ ಬೆನ್ನಲ್ಲೇ ಇರಾನ್‌ನ ನಾಯಕ ಅಲಿ ಖಮೇನೀ ಟೈಟ್‌ಸೆಕ್ಯೂರಿಟಿ ಜೊತೆಗೆ ಸುರಕ್ಷಿತ ಅಜ್ಞಾತ ಸ್ಥಳ ತಲುಪಿದ್ದಾನೆ. ಈ ಮಧ್ಯೆ, ಗುರುವಾರ ಇಸ್ರೇಲ್‌ನ ದಾಳಿಯಲ್ಲಿ ಹಿಜ್ಬುಲ್ಲಾ ಉಗ್ರರ ಮೊಹಮ್ಮದ್ ಸ್ರುರ್ ಕೂಡ ಹತನಾಗಿದ್ದ. ಹಾಗಾಗಿ, ಇಸ್ರೇಲ್ ವಿರುದ್ಧ ಹಮಾಸ್ ಬೆಂಬಲವಾಗಿ ಯೆಮೆನ್‌ನ ಹೌತಿ ಉಗ್ರರು ಕೂಡ ಕದನ ಪ್ರವೇಶ ಮಾಡಿದ್ದಾರೆ.

    ಹೌತಿ ಉಗ್ರರು ಗುರುವಾರ ರಾತ್ರಿ ನಡೆಸಿದ್ದ ಕ್ಷಿಪಣಿ ದಾಳಿಯನ್ನು ಗಡಿಯ ಹೊರಗೆ ನಮ್ಮ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಲಿಸಿದೆ ಎಂದು ಇಸ್ರೇಲ್ ಹೇಳಿದೆ.