– ಹಮಾಸ್ ಮುಖ್ಯಸ್ಥ ಸಿನ್ವಾರ್ ಹತ್ಯೆ ಪ್ರತೀಕಾರಕ್ಕೆ ಮುಂದಾದ ಹಿಜ್ಬುಲ್ಲಾ
ಜೆರುಸಲೇಂ: ಹಮಾಸ್ (Hamas) ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆ ಪ್ರತೀಕಾರಕ್ಕೆ ಮುಂದಾಗಿರುವ ಹಿಜ್ಬುಲ್ಲಾ (Hezbollah), ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ನಿವಾಸದ ಮೇಲೆ ಡ್ರೋನ್ ದಾಳಿ ನಡೆಸಿದೆ.
A drone was launched from Lebanon and directly hit Benjamin Netanyahu’s home in Caesarea
The drone that hit Netanyahu’s home in Caesarea exploded despite Israeli military helicopters chasing it the… pic.twitter.com/f8L9hWE8kz
ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆಯ ಬೆನ್ನಲ್ಲೇ ಶನಿವಾರ ಇಸ್ರೇಲ್‌ನ ಸಿಸೇರಿಯಾ ಪಟ್ಟಣದಲ್ಲಿರುವ ನೆತನ್ಯಾಹು ಅವರ ನಿವಾಸದ ಕಡೆಗೆ ಡ್ರೋನ್ ಹಾರಿಸಲಾಯಿತು. ಲೆಬನಾನ್‌ನಿಂದ ಡ್ರೋನ್ ಉಡಾವಣೆ ಮಾಡಲಾಗಿದ್ದು, ಅದು ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಇಸ್ರೇಲ್ ಭೂಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದ ಇನ್ನೂ ಎರಡು ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಮಿಲಿಟರಿ ತಿಳಿಸಿದೆ.
ಜೆರುಸಲೇಂ: ಇಸ್ರೇಲಿ ಮಿಲಿಟರಿಯಿಂದ ಹತ್ಯೆಯಾದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ದೇಹ ಯಾವ ಸ್ಥಿತಿಯಲ್ಲಿತ್ತು ಎಂಬ ವಿವರ ಹೊರಬಿದ್ದಿದೆ.
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ದಕ್ಷಿಣ ಗಾಜಾದಲ್ಲಿ ಗುಪ್ತಚರ ಆಧಾರಿತ ದಾಳಿಯಲ್ಲಿ ಹತ್ಯೆಯಾದ. ಸಿನ್ವಾರ್ ಪ್ಯಾಲೇಸ್ಟಿನಿಯನ್ ಗುಂಪಿನ ಹಮಾಸ್‌ನ ಪಾಲಿಟ್‌ಬ್ಯೂರೋ ಮುಖ್ಯಸ್ಥನಾಗಿದ್ದ. ಇಸ್ರೇಲ್ ಗ್ರೌಂಡ್ ಫೋರ್ಸಸ್ (IDF) ನ 828 ಬ್ರಿಗೇಡ್ ರಾಫಾದ ಟೆಲ್ ಅಲ್-ಸುಲ್ತಾನ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿ ಸ್ಕ್ಯಾನ್ ಮಾಡುವಾಗ ಹಮಾಸ್ ಮುಖ್ಯಸ್ಥನ ದೇಹ ಪತ್ತೆಯಾಯಿತು. ಕಾರ್ಯಾಚರಣೆಯಲ್ಲಿ ಆತ ಹತ್ಯೆಯಾಗಿರುವುದನ್ನು ದೃಢಪಡಿಸಲಾಯಿತು. ಇದನ್ನೂ ಓದಿ: ಇಸ್ರೇಲ್‌ನಲ್ಲಿದ್ದ ವೈದ್ಯಕೀಯ ದಾಖಲೆಗಳಿಂದ ಹಮಾಸ್ ನಾಯಕ ಸಿನ್ವಾರ್ ಗುರುತು ಪತ್ತೆ!
ಇಸ್ರೇಲ್ ನ್ಯಾಷನಲ್ ಸೆಂಟರ್ ಆಫ್ ಫೊರೆನ್ಸಿಕ್ ಮೆಡಿಸಿನ್‌ನ ಮುಖ್ಯ ರೋಗಶಾಸ್ತ್ರಜ್ಞ ಚೆನ್ ಕುಗೆಲ್, ಸಿನ್ವಾರ್ ಇಲ್ಲಿ ಕೈದಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಹೊಂದಿದ್ದ ಪ್ರೊಫೈಲ್‌ನೊಂದಿಗೆ ಮೃತದೇಹವನ್ನು ಹೋಲಿಕೆ ಮಾಡಿದೆವು. ಡಿಎನ್‌ಎ ಮೂಲಕ ಸಿನ್ವಾರ್‌ನನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ದಾಳಿ ಆರಂಭದಲ್ಲಿ ಸಿನ್ವಾರ್ ಗಂಭೀರ ಗಾಯಗೊಂಡಿದ್ದ. ಆತನ ತಲೆಗೆ ಗುಂಡೇಟು ಬಿದ್ದಾಗ ಮೃತಪಟ್ಟಿದ್ದಾನೆ. ಸಿನ್ವಾರ್ ಮುಖಕ್ಕೆ ಗಂಭೀರ ಗಾಯಗಳಾಗಿರುವುದನ್ನು ವೀಡಿಯೋಗಳು ತೋರಿಸಿವೆ. ಭೀಕರ ದಾಳಿಗೆ ಆತನ ತಲೆಬುರುಡೆ ಭಾಗವು ಸೀಳಿಹೋಗಿದೆ.
ಟೆಲ್ ಅವೀವ್: ದಕ್ಷಿಣ ಗಾಜಾದಲ್ಲಿ (Gaza) ಇಸ್ರೇಲ್ (Israel) ಸೇನೆ ನಡೆಸಿದ ದಾಳಿಯಲ್ಲಿ ಹಮಾಸ್‌ನ ( Hamas )ನಾಯಕ ಯಾಹ್ಯಾ ಸಿನ್ವಾರ್ (Yahya Sinwar) ಹತ್ಯೆಯಾಗಿದ್ದಾನೆ.
ಸಿನ್ವಾರ್ ಇಸ್ರೇಲ್ ಮೇಲೆ ಕಳೆದ ವರ್ಷ ಅ.7ರಂದು ನಡೆದಿದ್ದ ದಾಳಿಯ ಸಂಚುಕೋರ. ಆತನಿಗಾಗಿ ಇಸ್ರೇಲ್ ಮಾಹಿತಿ ಕಲೆ ಹಾಕುತ್ತಿತ್ತು. ಈ ಸಂಬಂಧ ಹಲವಾರು ಅಡಗುದಾಣಗಳ ಮಾಹಿತಿ ಇಸ್ರೇಲ್‌ಗೆ ಸಿಕ್ಕಿತ್ತು. ಇಸ್ರೇಲ್ ಕಮಾಂಡರ್‌ಗಳ ಒಂದು ಘಟಕ ದಕ್ಷಿಣ ಗಾಜಾದಲ್ಲಿ ಕಾರ್ಯಾಚರಣೆಯಲ್ಲಿದ್ದಾಗ ಸಿನ್ವಾರ್‌ನನ್ನು ಅನಿರೀಕ್ಷಿತವಾಗಿ ಎದುರಿಸಿತ್ತು.
ಸಿನ್ವಾರ್ ಸಿಕ್ಕಿದ್ದೆಲ್ಲಿ?
ಇಸ್ರೇಲಿ ಘಟಕವು ಬುಧವಾರ ದಕ್ಷಿಣ ಗಾಜಾದಲ್ಲಿ ಗಸ್ತು ತಿರುಗುತ್ತಿದ್ದಾಗ ಇಸ್ರೇಲ್ ಪಡೆಗೆ ಹಮಾಸ್ ಉಗ್ರರ ಗುಂಪು ಎದುರಾಗಿದೆ. ಈ ವೇಳೆ ಡ್ರೋನ್‌ಗಳ ಸಹಾಯದಿಂದ ಉಗ್ರರ ಮೇಲೆ ದಾಳಿ ನಡೆದಿದೆ. ಈ ಸಮಯದಲ್ಲಿ ಸಿನ್ವಾರ್ ಪಾಳುಬಿದ್ದ ಕಟ್ಟಡದಲ್ಲಿ ಆಶ್ರಯ ಪಡೆದಿದ್ದ. ಇಸ್ರೇಲಿ ಪಡೆಗಳು ಕಟ್ಟಡವನ್ನು ಗುರಿಯಾಗಿಟ್ಟುಕೊಂಡು ಟ್ಯಾಂಕ್ ಶೆಲ್‌ಗಳು ಮತ್ತು ಕ್ಷಿಪಣಿ ದಾಳಿ ನಡೆಸಿದ್ದವು.
ದಾಳಿಯಲ್ಲಿ ಮೂವರು ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ಹತ್ಯೆಗೀಡಾಗಿದ್ದರು. ಈ ವೇಳೆ ಇಸ್ರೇಲ್ ಸೈನಿಕರು ಓರ್ವನ ಮೃತದೇಹವನ್ನು ಸಿನ್ವಾರ್‌ನದ್ದು ಎಂದು ಶಂಕಿಸಿದ್ದರು.
ವೈದ್ಯಕೀಯ ದಾಖಲೆಗಳಿಂದ ಗುರುತು
1980ರ ದಶಕದ ಅಂತ್ಯದಿಂದ 2011 ರವರೆಗೆ ಇಸ್ರೇಲ್‌ನಲ್ಲಿ ಸಿನ್ವಾರ್ ಸೆರೆವಾಸದಲ್ಲಿದ್ದ. ಈ ವೇಳೆ ಆತನ ಮೆದುಳಿನಲ್ಲಿ ಗಡ್ಡೆ ಕಾಣಿಸಿಕೊಂಡಿತ್ತು. ಈ ಸಮಯದಲ್ಲಿ ಒಬ್ಬ ಇಸ್ರೇಲಿ ಶಸ್ತ್ರಚಿಕಿತ್ಸಕ ಆತನಿಗೆ ಚಿಕಿತ್ಸೆ ನೀಡಿ ಜೀವ ಉಳಿಸಿದ್ದ. ಈ ವೇಳೆ ಕಲೆ ಹಾಕಿದ್ದ ವೈದ್ಯಕೀಯ ದಾಖಲೆಗಳು ಆತನ ಗುರುತನ್ನು ಪತ್ತೆಹಚ್ಚಲು ಸಹಕಾರಿಯಾಗಿವೆ. ಆತನ ಡಿಎನ್‌ಎ ಟೆಸ್ಟ್ ಬಳಿಕ ಸಾವನ್ನು ದೃಢಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿನ್ವಾರ್ ತನ್ನ ಸ್ವಂತ ಸುರಕ್ಷತೆಗಾಗಿ ಮತ್ತು ಹತ್ಯೆಯನ್ನು ತಪ್ಪಿಸಲು ಇಸ್ರೇಲಿ ಒತ್ತೆಯಾಳುಗಳೊಂದಿಗೆ ಭೂಗತನಾಗಿದ್ದ ಎಂದು ನಂಬಲಾಗಿತ್ತು. ಇಂದು (ಶುಕ್ರವಾರ) ಹಮಾಸ್ ಸಿನ್ವಾರ್ ಸಾವನ್ನು ದೃಢಪಡಿಸಿದೆ.
ಸಿನ್ವಾರ್‌ನ ಮೃತದೇಹದ ಫೋಟೋಗಳು ವೈರಲ್ ಆಗಿದ್ದು, ಅದರ ಮೇಲೆ ಹಲವಾರು ಗಾಯದ ಗುರುತುಗಳು ಪತ್ತೆಯಾಗಿದೆ. ಆತನ ಕಣ್ಣುಗಳ ಬಳಿ ಇರುವ ವಿಶಿಷ್ಟವಾದ ಮಚ್ಚೆಗಳು ಮತ್ತು ಬಾಗಿದ ಹಲ್ಲುಗಳನ್ನು ನೋಡಬಹುದಾಗಿದೆ.
ಇಸ್ರೇಲ್ (Israel) ಗುರುವಾರ ಗಾಜಾ ಕಾರ್ಯಾಚರಣೆಯಲ್ಲಿ 62 ವಯಸ್ಸಿನ ಸಿನ್ವಾರ್‌ನನ್ನು ಹತ್ಯೆ ಮಾಡಿತು. ‘ಎಲಿಮಿನೇಟೆಡ್: ಯಾಹ್ಯಾ ಸಿನ್ವಾರ್’ ಎಂದು ಐಡಿಎಫ್ (ಇಸ್ರೇಲಿ ಮಿಲಿಟರಿ) ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದೆ.
ಅಕ್ಟೋಬರ್ 7 ರ ಹತ್ಯಾಕಾಂಡ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ ಕೊಲೆಗಾರ ಯಾಹ್ಯಾ ಸಿನ್ವಾರ್ ಅನ್ನು ಐಡಿಎಫ್ (ಇಸ್ರೇಲಿ ಮಿಲಿಟರಿ) ಸೈನಿಕರು ನಿರ್ಮೂಲನೆ ಮಾಡಿದರು ಎಂದು ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಮುಖ್ಯಸ್ಥ ಹತ್ಯೆ – ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದ ಇಸ್ರೇಲ್
ಹತ್ಯೆಯಾದ ಸಿನ್ವಾರ್ ಅ.7 ರ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ಇದು ಇಸ್ರೇಲಿ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ಎನ್ನಲಾಗಿದೆ. ದಾಳಿಯು 1,206 ಜನರ ಸಾವಿಗೆ ಕಾರಣವಾಯಿತು.
ವಾಷಿಂಗ್ಟನ್: ಕಳೆದ ವರ್ಷ ಅಕ್ಟೋಬರ್ 7 ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಗೆ ಅಮೆರಿಕ ಸಂತಸ ವ್ಯಕ್ತಪಡಿಸಿದೆ. ‘ಇದು ಇಸ್ರೇಲ್ ಮತ್ತು ಜಗತ್ತಿಗೆ ಒಳ್ಳೆಯ ದಿನ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಪ್ರತಿಕ್ರಿಯಿಸಿದ್ದಾರೆ.
ಹಮಾಸ್ ನಾಯಕರನ್ನು ಬೆನ್ನಟ್ಟಲು ಅಮೆರಿಕದ ಗುಪ್ತಚರವು ಇಸ್ರೇಲ್ ರಕ್ಷಣಾ ಪಡೆಗಳಿಗೆ ಸಹಾಯ ಮಾಡಿದೆ ಎಂದು ಅಧ್ಯಕ್ಷ ಬೈಡೆನ್ ಉಲ್ಲೇಖಿಸಿದ್ದಾರೆ. ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಇಸ್ರೇಲ್‌ಗೆ ಎಲ್ಲ ಹಕ್ಕು ಇದೆ ಎಂದು ಅವರು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಮುಖ್ಯಸ್ಥ ಹತ್ಯೆ – ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದ ಇಸ್ರೇಲ್
ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಯ ಮಾಸ್ಟರ್‌ಮೈಂಡ್‌ನ ಹತ್ಯೆಯು, ಜಗತ್ತಿನಲ್ಲಿ ಎಲ್ಲಿಯೂ ಯಾವುದೇ ಭಯೋತ್ಪಾದಕರು ಎಷ್ಟು ಸಮಯ ತೆಗೆದುಕೊಂಡರೂ ನ್ಯಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಯುಎಸ್ ಅಧ್ಯಕ್ಷ ತಿಳಿಸಿದ್ದಾರೆ.
ನನ್ನ ಇಸ್ರೇಲಿ ಸ್ನೇಹಿತರಿಗೆ, ಇದು ನಿಸ್ಸಂದೇಹವಾಗಿ ಪರಿಹಾರ ಮತ್ತು ನೆನಪಿನ ದಿನವಾಗಿದೆ. 2011 ರಲ್ಲಿ ಒಸಾಮಾ ಬಿನ್ ಲಾಡೆನ್ ಅನ್ನು ಕೊಲ್ಲಲು ಅಧ್ಯಕ್ಷ ಒಬಾಮಾ ಅವರು ದಾಳಿಗೆ ಆದೇಶಿಸಿದ ನಂತರ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಸಾಕ್ಷಿಯಾದ ದೃಶ್ಯಗಳಂತೆಯೇ ಇದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿರುವ ಶೇಖ್ ಹಸೀನಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ
ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ (Isreal) ಮೇಲೆ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಉಗ್ರ ಸಂಘಟನೆಯ ನಾಯಕ (Hamas Leader) ಯಾಹ್ಯಾ ಸಿನ್ವಾರ್ (Yahya Sinwar) ಇಸ್ರೇಲ್ ನಡೆಸಿದ ದಾಳಿಗೆ ಬಲಿಯಾಗಿದ್ದಾನೆ.
ಬೈರುತ್: ದಕ್ಷಿಣ ಲೆಬನಾನ್‌ನ (South Lebanon) ಪುರಸಭೆ ಕಚೇರಿಯ ಮೇಲೆ ಇಸ್ರೇಲ್ (Israel) ದಾಳಿ ನಡೆಸಿದ್ದು, ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ದಕ್ಷಿಣ ಲೆಬನಾನ್‌ನ ನಬಾತಿಹ್ (Nabatiyeh) ಪುರಸಭೆ ಕಚೇರಿಯ ಮೇಲೆ ಇಸ್ರೇಲ್ ದಾಳಿ ನಡೆಸಿದ ದಾಳಿಗೆ 16 ಮಂದಿ ಬಲಿಯಾಗಿದ್ದು, 52 ಜನರು ಗಾಯಗೊಂಡಿದ್ದಾರೆ.ಇದನ್ನೂ ಓದಿ: CJI ಹುದ್ದೆಗೆ ನ್ಯಾ. ಸಂಜೀವ್ ಖನ್ನಾ ಹೆಸರು ಶಿಫಾರಸು
ಲೆಬನಾನ್ ಆರೋಗ್ಯ ಸಚಿವಾಲಯವು ನೀಡಿದ ವರದಿಯಲ್ಲಿ, ನಬಾತಿಹ್ ಪುರಸಭೆ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪುರಸಭೆಯ ಮೇಯರ್ ಕೂಡ ಮೃತಪಟ್ಟಿದ್ದಾರೆ. ಪುರಸಭೆಯ ಪ್ರಧಾನ ಕಚೇರಿ ಧ್ವಂಸಗೊಂಡಿದೆ.
ಇದಕ್ಕೂ ಮುನ್ನ ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದಾಗ 6 ಜನರನ್ನು ಬಲಿ ತೆಗೆದುಕೊಂಡಿದ್ದು, 43 ಜನರು ಗಾಯಗೊಂಡಿದ್ದರು. ನಬಾತಿಹ್ ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ಹಿಜ್ಬುಲ್ಲಾದ ಪ್ರಮುಖ ಭದ್ರಕೋಟೆಯನ್ನು ನಾಶಗೊಳಿಸಿದ್ದವು.
ಲೆಬನಾನ್ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2023ನಲ್ಲಿ ಆರಂಭವಾದ ಇಸ್ರೇಲ್-ಹಿಜ್ಬುಲ್ಲಾ ಯುದ್ಧದಲ್ಲಿ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಇದುವರೆಗೂ ಒಟ್ಟು 2,367 ಜನ ಸಾವನ್ನಪ್ಪಿದ್ದು, 11088 ಜನ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.ಇದನ್ನೂ ಓದಿ: ಕಲಬುರಗಿಯಲ್ಲಿ ಭೀಕರ ಸರಣಿ ಅಪಘಾತ – ನಾಲ್ವರು ಸಾವು
ಬೈರೂತ್: ಒಂದು ವರ್ಷ ಕಳೆದರೂ ಇಸ್ರೇಲ್-ಹಮಾಸ್-ಹಿಜ್ಬುಲ್ಲಾ ನಡುವಿನ ದಾಳಿಯ ತೀವ್ರತೆ ಹೆಚ್ಚುತ್ತಲೇ ಇದೆ. ಅ.7ಕ್ಕಿಂತ ಭೀಕರವಾಗಿ ದಾಳಿ ನಡೆಸಲು ಹಮಾಸ್ ಪ್ಲಾನ್ ಮಾಡಿದೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ ಇಸ್ರೇಲ್ ಮೇಲೆ ಭೀಕರ ದಾಳಿ ನಡೆದಿದೆ. ಲೆಬನಾನ್‌ನ ಗಡಿಯುದ್ಧಕ್ಕೂ ಬಾಂಬ್ ದಾಳಿಗಳನ್ನು ವಿಸ್ತರಿಸಿದೆ. ಉತ್ತರದ ನೆಲೆಗಳಲ್ಲಿ ಹಿಜ್ಬುಲ್ಲಾ ಡ್ರೋನ್‌ಗಳು (Hezbollah Drone Strike) ತನ್ನ ನಾಲ್ವರು ಸೈನಿಕರನ್ನು (Israeli Soldiers) ಹೊಡೆದುರುಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ.
ಹೈಫಾ ಬಳಿಯ ಬಿನ್ಯಾಮಿನಾದಲ್ಲಿನ ಮಿಲಿಟರಿ ತರಬೇತಿ ಶಿಬಿರದ ಮೇಲಿನ ದಾಳಿಯು ಸೆಪ್ಟೆಂಬರ್ 23 ನಂತರ ಇಸ್ರೇಲ್ ನೆಲೆಯ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್, ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ದಾಳಿ ನಡೆಸಿದ್ದು, ತುರ್ತು ಸೇವೆಗಳಲ್ಲಿ ವ್ಯತ್ಯಯವಾಗಿದ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್ ಭೀಕರ ವಾಯುದಾಳಿಗೆ 22 ಮಂದಿ ಬಲಿ – 117 ಮಂದಿಗೆ ಗಾಯ, ಹಿಜ್ಬುಲ್ಲಾ ಟಾಪ್ ಲೀಡರ್ ಸೇಫ್
ಈ ನಡುವೆ ಸ್ಥಳಾಂತರಗೊಂಡ ಜನರಿಗೆ ಆಶ್ರಯ ತಾಣವಾಗಿ ಬಳಸಲಾಗುತ್ತಿದ್ದ ಶಾಲೆಯ ಮೇಲೆ ಇಸ್ರೇಲಿ ನಡೆಸಿದ ದಾಳಿಯಿಂದ ಒಂದೇ ಕುಟುಂಬದ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಹರಾ ಮರುಭೂಮಿಯಲ್ಲಿ ಭಾರೀ ಮಳೆ – 50 ವರ್ಷದ ನಂತರ ಕೆರೆಗಳು ಭರ್ತಿ
ಇತ್ತೀಚೆಗಷ್ಟೇ ಇಸ್ರೇಲ್ ಸೇನೆಯು ಸೆಂಟ್ರಲ್ ಬೈರೂತ್‌ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ (Israeli Strikes) 22 ಮಂದಿ ಹತ್ಯೆಯಾಗಿ, ಸುಮಾರು 117 ಮಂದಿ ಗಾಯಗೊಂಡಿದ್ದರು. ಅದೃಷ್ಟವಶಾತ್ ಈ ದಾಳಿಯಲ್ಲಿ ಹಿಜ್ಬುಲ್ಲಾದ (Hezbollah) ಉನ್ನತ ಅಧಿಕಾರಿಯೊಬ್ಬರು ಬದುಕುಳಿದಿದ್ದರು. ಈ ಬೆನ್ನಲ್ಲೇ ಇಸ್ರೇಲ್ ವಿರುದ್ಧ ಅಕ್ಟೋಬರ್ 7ಕ್ಕಿಂತಲೂ ಭೀಕರ ದಾಳಿ ನಡೆಸುವುದಾಗಿ ಒಂದು ದಿನದ ಹಿಂದೆಯಷ್ಟೇ ಎಚ್ಚರಿಕೆ ನೀಡಿದರು. ಅದರಂತೆ ಲೆಬನಾನ್‌ನ ಉತ್ತರ ಗಡಿ ಭಾಗಗಳಲ್ಲಿ ಇಸ್ರೇಲ್ ಸೇನೆ ವಿರುದ್ಧ ದಾಳಿ ನಡೆಸಿದ್ದು ನಾಲ್ವರು ಸೈನಿಕರನ್ನು ಹತ್ಯೆಗೈದಿದೆ.
2.20 ಲಕ್ಷ ಮಂದಿ ಲೆಬನಾನ್‌ನಿಂದ ಸಿರಿಯಾಕ್ಕೆ ಪಲಾಯನ
ಇತ್ತೀಚಿನ ದಿನಗಳಲ್ಲಿ ಇಸ್ರೇಲ್‌ನ ಯುದ್ಧ ವಿಮಾನಗಳು (Israeli Fighter Jets) ಲೆಬನಾನ್‌ನ ಬೆಕಾ ಪ್ರದೇಶ ಮತ್ತು ಬೈರೂತ್‌ನಲ್ಲಿ ವ್ಯಾಪಕವಾದ ವೈಮಾನಿಕ ದಾಳಿಗಳನ್ನು ನಡೆಸಿದೆ. ಮೂಲಸೌಕರ್ಯ ತಾಣಗಳು, ಲಾಂಚರ್‌ಗಳು, ಕಮಾಂಡ್ & ಕಂಟ್ರೋಲ್ ಸೆಂಟರ್‌ಗಳು ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹಣಾ ಸೌಲಭ್ಯ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಸದ್ಯಕ್ಕೆ ಕದನ ವಿರಾಮ ಘೋಷಣೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ ಭಯಭೀತರಾಗಿರುವ 2.20 ಲಕ್ಷ ಮಂದಿ ಸಿರಿಯಾಕ್ಕೆ ಪಲಾಯನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟೆಲ್ ಅವೀವ್: ಇರಾನ್ ಬೆಂಬಲಿತ ಹಿಜ್ಬುಲ್ಲಾ ಭಯೋತ್ಪಾದಕ ಗುಂಪಿನೊಂದಿಗೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu), ಲೆಬನಾನ್‌ಗೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ದಕ್ಷಿಣ ಲೆಬನಾನ್ (Lebanon) ಮೇಲೆ ಇಸ್ರೇಲ್ ದಾಳಿ ನಡೆಸಿದ ಕೆಲ ಗಂಟೆಗಳ ನಂತರ ನೆತನ್ಯಾಹು ವೀಡಿಯೋವೊಂದರಲ್ಲಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಪ್ರಾಕೃತಿಕ ಸೌಂದರ್ಯ, ಸಹಿಷ್ಣುತೆಗೆ ಹೆಸರುವಾಸಿಯಾಗಿದ್ದ ಮಧ್ಯಪ್ರಾಚ್ಯ ಈಗ ಹಿಜ್ಬುಲ್ಲಾ (Hezbollah) ಮದ್ದು ಗುಂಡುಗಳನ್ನು ಸಂಗ್ರಹಿಸಿದ್ದು, ಇರಾನಿನ ಮಿಲಿಟರಿ ನೆಲೆಯಾಗಿ ಮಾರ್ಪಟ್ಟಿದೆ. ಹಾಗಾಗಿ ಕೂಡಲೇ ನಿಮ್ಮ ದೇಶವನ್ನು ಕೂಡಲೇ ಹಿಂತೆಗೆದುಕೊಳ್ಳಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ‘ಜೆನ್ನಾರಿಸ್ ಬಯೋನಿಕ್ ವಿಷನ್ ಸಿಸ್ಟಮ್’ – ಅಂಧರ ಪಾಲಿಗೆ ಭರವಸೆಯ ಬೆಳಕು!
ಇದು ಲೆಬನಾನ್ ಜನತೆಗೆ ನಮ್ಮ ಸಂದೇಶ. ನಿಮ್ಮ ದೇಶವನ್ನು ಮಧ್ಯಪ್ರಾಚ್ಯದ ಮುತ್ತು ಎಂದು ಕರೆಯುತ್ತಿದ್ದದ್ದು ನೆನಪಿದೆಯಾ? ಈಗ ಲೆಬನಾನ್‌ಗೆ ಏನಾಯಿತು? ನಿರಂಕುಶಾಧಿಕಾರಿಗಳು ಮತ್ತು ಭಯೋತ್ಪಾದಕರ ಗುಂಪು ಅದನ್ನು ನಾಶಪಡಿಸಿದರು. ಒಂದು ಕಾಲದಲ್ಲಿ ಲೆಬನಾನ್ ಸಹನೆ, ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ಇಂದು ಅದು ಅವ್ಯವಸ್ಥೆಯ ಸ್ಥಳವಾಗಿದೆ, ಯುದ್ಧದ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಕೆಣಕಿ ತಪ್ಪು ಮಾಡಿತೇ ಇರಾನ್? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!
ನಾವು ಗಾಜಾದಲ್ಲಿ ನೋಡುವಂತೆ ವಿನಾಶ ಮತ್ತು ದುಃಖಕ್ಕೆ ಕಾರಣವಾಗುವ ಸುದೀರ್ಘ ಯುದ್ಧದ ಪ್ರಪಾತಕ್ಕೆ ಬೀಳುವ ಮೊದಲು ಎಚ್ಚೆತ್ತುಕೊಳ್ಳಬೇಕು. ಈಗಲೂ ಲೆಬನಾನ್ ತಮ್ಮ ರಾಷ್ಟ್ರವನ್ನು ಉಳಿಸಿಕೊಳ್ಳಬಹುದು. ನೀವು ನಿಮ್ಮ ಹಿಂತಿರುಗಿದರೆ, ಯುದ್ಧವನ್ನು ನಿಲ್ಲಿಸಿದ್ರೆ, ಶಾಂತಿ ಸಮೃದ್ಧ ಹಾದಿಗೆ ಮರಳಬಹುದು. ನೀವು ಮಾಡದಿದ್ದರೆ, ಹಿಜ್ಬುಲ್ಲಾ ಮಂದುವರಿಯುತ್ತದೆ. ನಿಮ್ಮ ನೇತೃತ್ವ ಖರ್ಚು ವೆಚ್ಚದಲ್ಲಿ ಇಸ್ರೇಲ್ ವಿರುದ್ಧ ಹೋರಾಡಲು ಪ್ರಯತ್ನಿಸಿ, ಲೆಬನಾನ್ ಅನ್ನು ಯುದ್ಧಕ್ಕೆ ಎಳೆದು ತರುತ್ತಾರೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಳ್ಳಿ ಎಂದು ಖಡಕ್ಕಾಗಿ ಹೇಳಿದ್ದಾರೆ.
ಇಸ್ರೇಲ್ ಯುದ್ಧವನ್ನು ಕೊನೆಗಾಣಿಸಲು ನಿರ್ಧರಿಸಿದೆ. ನಮ್ಮ ಜನರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿಸಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಾವು ನಿರ್ಧರಿಸಿದ್ದೇವೆ. ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಇಸ್ರೇಲ್‌ಗೆ ಗೆಲ್ಲುವ ಛಲವೂ ಇದೆ, ಗೆಲ್ಲುತ್ತದೆ ಎಂದಿರುವ ಅವರು, ಹಿಜ್ಬುಲ್ಲಾವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಪ್ರತಿಜ್ಞೆ ಮಾಡಿದ್ದಾರೆ.
ಇಸ್ರೇಲ್ ಮೇಲಿನ ದಾಳಿಗೆ ಒಂದು ವರ್ಷ ಪೂರೈಸಿದೆ. ಗಾಜಾಪಟ್ಟಿಯಲ್ಲಿದ್ದ ಹಮಾಸ್ ಬಂಡುಕೋರರ ಗುಂಪು 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆಸಿದ ಅಪ್ರಚೋದಿತ ದಾಳಿ ಇಂದು ಲಕ್ಷಾಂತರ ಜನರ ನೆಮ್ಮದಿ ಕಸಿದಿದೆ. ಸಾವಿರಾರು ಜನರ ಜೀವ ತೆಗೆದಿದೆ. ಕಳೆದ ಒಂದು ವರ್ಷದಲ್ಲಿ ಇಸ್ರೇಲ್, ಹಮಾಸ್ ಹಾಗೂ ಹಿಜ್ಬುಲ್ಲಾ ನಡುವಿನ ಭೀಕರ ಯುದ್ಧದಲ್ಲಿ ಸುಮಾರು 50 ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ.
ಆ ದಿನ ಕೇವಲ 20 ನಿಮಿಷದ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಪುಂಖಾನುಪುಂಖವಾಗಿ 5 ಸಾವಿರ ರಾಕೆಟ್‌ಗಳನ್ನು ಹಾರಿಸಿದ್ದರು. ಇಸ್ರೇಲ್‌ನ ಬಲಾಢ್ಯ ಕ್ಷಿಪಣಿ ವಿರೋಧಿ ವ್ಯವಸ್ಥೆ ಐರನ್ ಡೋಮ್ ಇಷ್ಟು ಅಗಾಧ ಪ್ರಮಾಣದ ರಾಕೆಟ್ ಮಳೆಗೆ ನಿಷ್ಪರಿಣಾಮಕಾರಿ ಎನ್ನಿಸಿಕೊಂಡಿತು. ಅಲ್ಲದೇ, ಹಮಾಸ್ 1,000ಕ್ಕೂ ಅಧಿಕ ಉಗ್ರರೊಂದಿಗೆ ದಕ್ಷಿಣ ಇಸ್ರೇಲ್‌ನ ಅನೇಕ ಪ್ರದೇಶಗಳಲ್ಲಿ ಭೂದಾಳಿ ನಡೆಸಿತು. ಬುಲ್ಡೋಜರ್‌ನಿಂದ ಇಸ್ರೇಲ್‌ನ ಗಡಿಯನ್ನು ಛಿದ್ರಗೊಳಿಸಿತು. ಇನ್ನೂ ಹಲವು ಉಗ್ರರು ಸಮುದ್ರ ಮಾರ್ಗದಲ್ಲಿ ಸ್ಪೀಡ್ ಬೋಟ್‌ಗಳ ಮೂಲಕ ಇಸ್ರೇಲನ್ನು ನುಸುಳಿದರು ಕೆಲವರು ಪ್ಯಾರಾಗ್ಲೈಡಿಂಗ್ ಮೂಲಕ ಇಸ್ರೇಲೊಳಗಿಳಿದು ರಂಪಾಟ ಎಬ್ಬಿಸಿದರು. ಈ ಏಕಕಾಲದ ಆಕ್ರಮಣ ನಿಲ್ಲಿಸಲು ಇಸ್ರೇಲ್‌ಗೆ ಆ ಕ್ಷಣಕ್ಕೆ ಸಾಧ್ಯವಾಗಲೇ ಇಲ್ಲ.
ಪರಿಣಾಮ, ಇಸ್ರೇಲ್ ತನ್ನ 1200 ಪ್ರಜೆಗಳನ್ನು ಕಳೆದುಕೊಂಡಿತು. ಹಮಾಸ್‌ನ ಜೀಪುಗಳಲ್ಲಿ ಕೈಕಾಲು ಕಟ್ಟಿ ಕರೆದೊಯ್ದ 250 ಇಸ್ರೇಲಿಗರನ್ನು ಬಿಡಿಸಿಕೊಳ್ಳಲು ಇಸ್ರೇಲ್ ಅಂದು ಶುರುಮಾಡಿದ ಯುದ್ಧ ಇಂದಿಗೂ ಮುಗಿದಿಲ್ಲ. ಸದ್ಯಕ್ಕೆ ಮುಗಿಯುವ ಲಕ್ಷಣವೂ ಕಾಣಿಸುತ್ತಿಲ್ಲ. ಹಮಾಸ್ ಒಬ್ಬರಲ್ಲ ಅದರ ಹಿಂದೆ ಪ್ಯಾಲೆಸ್ತೀನ್, ಹಿಜ್ಬುಲ್ಲಾ, ಲೆಬನಾನ್, ಇರಾಕ್ ಹಾಗೂ ಸಿರಿಯಾದ ಉಗ್ರ ಸಂಘಟನೆಗಳು, ಹೌತಿ ಬಂಡುಕೋರರು… ಇಸ್ರೇಲನ್ನು ಕಟ್ಟಿಹಾಕಲು ಶತ್ರುಗಳೆಲ್ಲ ಒಗ್ಗೂಡುತ್ತಲೇ ಇದ್ದಾರೆ. ಇರಾನ್‌ನ ಸುಪ್ರೀಂ ಲೀಡರ್ ಕೂಡ ಇಸ್ರೇಲ್ ಸೋಲಿಸಲು ಇತ್ತೀಚೆಗೆ ಕರೆ ಕೊಟ್ಟಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಈಗ ಇಸ್ರೇಲ್ ದಿನದಿಂದ ದಿನಕ್ಕೆ ತನ್ನ ಆಕ್ರಮಣದ ತೀವ್ರತೆಯನ್ನು ಹೆಚ್ಚಿಸುತ್ತಲೇ ಇದೆ. ಭಾನುವಾರ (ಅ.6) ಕೂಡ ಕೇವಲ ಒಂದು ಗಂಟೆ ಅವಧಿಯಲ್ಲಿ 120 ಹಿಜ್ಬುಲ್ಲಾ ಉಗ್ರ ನೆಲೆಗಳನ್ನು ಧ್ವಂಸಮಾಡಿದೆ.
ಇರಾನ್ ಯುದ್ಧಕ್ಕೆ ಎಂಟ್ರಿಯಾಗಿದ್ದು ಹೇಗೆ?
ಹಿಜ್ಬುಲ್ಲಾ ಸೇನೆಯ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನೂ ಇಸ್ರೇಲ್ ಹತ್ಯೆಗೈದಾಗ ಪರೋಕ್ಷವಾಗಿ ಇವರನ್ನೆಲ್ಲ ಬೆಂಬಲಿಸುತ್ತಿದ್ದ ಇರಾನ್ ನೇರವಾಗಿ ಇಸ್ರೇಲ್ ವಿರುದ್ಧ ತೊಡೆ ತಟ್ಟಿತ್ತು. ಏಕಾಏಕಿ 180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿ, ಇಸ್ರೇಲನ್ನು ಗಾಬರಿಗೊಳಿಸಲೂ ಇರಾನ್ ಯತ್ನಿಸಿದ್ದು ಸ್ವತಃ ಇಸ್ರೇಲನ್ನು ಮತ್ತಷ್ಟು ಕೆರಳಿಸಿದೆ. ಆದ್ರೆ ಇಸ್ರೇಲ್ ಕ್ಷಿಪಣಿ ಹಾರಿಸುವುದಕ್ಕೆ 2 ಗಂಟೆ ಮುಂಚಿತವಾಗಿಯೇ ಅಮೆರಿಕ ದಾಳಿಯ ಸುಳಿವು ಕೊಟ್ಟಿತ್ತು ಎಂಬುದು ಗಮನಾರ್ಹ. ಹಾಗಾಗಿ ಈ ಯುದ್ಧದ ಬೆಂಕಿಗೆ ತುಪ್ಪ ಸವರುವಂತೆ ಅತ್ತ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ʻಇರಾನ್‌ನ ಅಣ್ವಸ್ತ್ರ ಕೇಂದ್ರದ ದಾಳಿ ಮಾಡಿ,ʼ ಎಂಬ ಸಲಹೆಯನ್ನು ಇಸ್ರೇಲ್‌ಗೆ ಕೊಟ್ಟಿರುವುದು ಯುದ್ಧದ ತೀವ್ರತೆಯನ್ನು ತೆರೆದಿಟ್ಟಿದೆ.
ಸ್ನೇಹಿತರಾಗಿದ್ದವರೀಗ ಬದ್ಧ ವೈರಿಗಳು
ಹೌದು. 1948ರ ಮೇ 14. ಪ್ಯಾಲೆಸ್ತೀನ್‌ನಿಂದ ಇಸ್ರೇಲ್ ಬೇರ್ಪಟ್ಟು ಹೊಸ ಯಹೂದಿ ದೇಶ ಉದಯವಾಯಿತು. ಆ ಸಮಯದಲ್ಲಿ ಇಸ್ರೇಲ್ ಎಂಬ ಶಿಶುವಿನ ಜತೆಗೆ ನಿಂತ ಏಕೈಕ ಇಸ್ಲಾಮಿಕ್ ರಾಷ್ಟ್ರ ಇರಾನ್. 1948ರಲ್ಲಿ ಅರಬ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಯುದ್ಧ ಆರಂಭಿಸಿದರೂ, ಆ ಯುದ್ಧದಲ್ಲಿ ಇರಾನ್ ಭಾಗವಹಿಸಲಿಲ್ಲ. ಇಸ್ರೇಲ್ ಗೆದ್ದ ಬಳಿಕ ಇರಾನ್ ಅದರೊಂದಿಗೆ ಸಂಬಂಧ ಬೆಸೆಯಿತು. ಇರಾನ್‌ನಲ್ಲಿ ಮೊಹಮ್ಮದ್ ರಜಾ ಶಾ ಪಹ್ಲವಿ ಆಳ್ವಿಕೆಯಲ್ಲಿ ಈ ಎರಡೂ ರಾಷ್ಟ್ರಗಳು ಮಿತ್ರರು. ಆ ವೇಳೆ, ಪಶ್ಚಿಮ ಏಷ್ಯಾದಲ್ಲಿ ಇರಾನ್ ಅತಿದೊಡ್ಡ ಯಹೂದಿ ಸಮುದಾಯಕ್ಕೆ ನೆಲೆ ಕಲ್ಪಿಸಿದ್ದ ರಾಷ್ಟ್ರ. ಉಭಯ ದೇಶಗಳ ನಡುವೆ ಆಮದು ಮತ್ತು ರಫ್ತು ವ್ಯವಹಾರ ಜೋರಾಗಿತ್ತು. ಇಸ್ರೇಲ್ ತನ್ನಲ್ಲಿನ ಶಸ್ತ್ರಾಸ್ತ್ರ ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳನ್ನು ಇರಾನ್‌ಗೆ ಕಳುಹಿಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ಇರಾನ್ ಶೇ.40ರಷ್ಟು ತೈಲವನ್ನು ಇಸ್ರೇಲ್‌ಗೆ ನೀಡುತ್ತಿತ್ತು. ಇಷ್ಟೇ ಅಲ್ಲ, ಇರಾನ್‌ನ ಗುಪ್ತಚರ ಸಂಸ್ಥೆ SAVAK, ತರಬೇತಿ ಪಡೆದಿದ್ದೇ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ನ ಕೈಯಲ್ಲಿ ಅನ್ನೋದು ವಿಶೇಷ.
ಆದ್ರೆ 1960ರ ದಶಕದಲ್ಲಿ, ಇರಾನ್‌ನಲ್ಲಿ ಇಸ್ಲಾಮಿಕ್ ರಾಷ್ಟ್ರದ ಬೇಡಿಕೆ ತೀವ್ರವಾಯಿತು. ಧಾರ್ಮಿಕ ನಾಯಕ ಅಯಾತೊಲ್ಲಾ ರುಹೊಲ್ಲಾ ಖಮೇನಿ ಇರಾನ್ ಅನ್ನು ಮುಸ್ಲಿಂ ರಾಷ್ಟ್ರವನ್ನಾಗಿಸಲು ಹೋರಾಟ ತೀವ್ರಗೊಳಿಸಿದ. 1964ರಲ್ಲಿ ಈ ಧ್ವನಿಗೆ ಅಪಾರ ಜನಬೆಂಬಲ ವ್ಯಕ್ತವಾದಾಗ ರಜಾ ಶಾ ಪಹ್ಲವಿಗೆ ಇರಾನನ್ನು ತೊರೆಯುವಂತೆ ಖಮೇನಿ ಆದೇಶಿಸಿದ. ಕಡೆಗೂ 1969ರಲ್ಲಿ ಪಹ್ಲವಿಯನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಇದರೊಂದಿಗೆ ಇರಾನ್‌ನಲ್ಲಿ ಇಸ್ಲಾಮಿಕ್ ರಾಜ್ಯ ಸ್ಥಾಪನೆಯಾಯಿತು. ಷರಿಯಾ ಕಾನೂನೂ ಜಾರಿಗೆ ಬಂತು. ಇದರೊಂದಿಗೆ ಇರಾನ್‌ನ ಖಮೇನಿ ಸರ್ಕಾರವು ಯಹೂದಿ ರಾಜ್ಯವಾದ ಇಸ್ರೇಲ್‌ನೊಂದಿಗೆ ಎಲ್ಲನಂಟನ್ನೂ ಕಡಿದುಕೊಂಡಿತು. ಉಭಯ ದೇಶಗಳ ನಡುವಿನ ವಿಮಾನ ಮಾರ್ಗವನ್ನೇ ಸಂಪೂರ್ಣವಾಗಿ ಮುಚ್ಚಲಾಯಿತು.
ಇಸ್ರೇಲ್-ಇರಾನ್ ಸೇನಾಬಲ ಮೈ ನಡುಗಿಸುತ್ತೆ
ಇಸ್ರೇಲ್ ಶಕ್ತಿಶಾಲಿ ರಾಷ್ಟ್ರವೇ ಆದರೂ ಇರಾನ್ ಸಹ ಸರಿಸಮನಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಹಾಗಾಗಿ ಮಿಲಿಟರಿ ಶಕ್ತಿಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಕಡಿಮೆಯೇನಿಲ್ಲ ಅಂತಲೇ ಹೇಳಬಹುದು. ಇತ್ತೀಚಿನ ಗ್ಲೋಬಲ್ ಫೈರ್ ವರದಿ ಪ್ರಕಾರ, ವಾಯು ಸೇನೆ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಇರಾನ್ 14ನೇ ಸ್ಥಾನದಲ್ಲಿದ್ದರೆ, ಇಸ್ರೇಲ್ 17ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.
ರಕ್ಷಣಾ ಬಲ ಹೇಗಿದೆ ನೋಡಿ?
ಇರಾನ್ 1996 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1397 ಪ್ರಸ್ತುತ ಯುದ್ಧಕ್ಕೆ ಸಿದ್ಧವಾಗಿವೆ. ಇಸ್ರೇಲ್ 1,370 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1,096 ಯುದ್ಧಕ್ಕೆ ಸಿದ್ಧವಾಗಿವೆ. ಇರಾನ್ 65,765 ಮಿಲಿಟರಿ ವಾಹನಗಳನ್ನು ಹೊಂದಿದ್ದು, ಅದರಲ್ಲಿ 46 ಸಾವಿರಕ್ಕೂ ಹೆಚ್ಚು ಸಕ್ರಿಯವಾಗಿವೆ. ಇನ್ನೂ ಇಸ್ರೇಲ್ 43,407 ಮಿಲಿಟರಿ ವಾಹನಗಳನ್ನು ಹೊಂದಿದೆ, ಅದರಲ್ಲಿ 34,736 ಸಕ್ರಿಯವಾಗಿವೆ. ಸ್ವಯಂ ಚಾಲಿತ ಪಿರಂಗಿಗಳ ಬಗ್ಗೆ ನೋಡಿದ್ರೆ, ಇರಾನ್ 580 ಫಿರಂಗಿ ಹೊಂದಿದ್ದು, ಅದರಲ್ಲಿ 406 ಸಕ್ರಿಯ ಸೇವೆಯಲ್ಲಿವೆ. ಇಸ್ರೇಲ್ 650 ಸ್ವಯಂ ಚಾಲಿತ ಫಿರಂಗಿಗಳನ್ನು ಹೊಂದಿದ್ದು, ಅದರಲ್ಲಿ 540 ಯುದ್ಧಕ್ಕೆ ಸಿದ್ಧವಾಗಿದೆ. ಸ್ವಯಂಚಾಲಿತವಲ್ಲದ ಫಿರಂಗಿಗಳಲ್ಲಿ ಇರಾನ್ 2050, ಇಸ್ರೇಲ್ ಕೇವಲ 300 ಹೊಂದಿದೆ. ಇಲ್ಲದೇ ಮಲ್ಟಿ ರಾಕೆಟ್ ಲಾಂಚರ್‌ಗಳ ಪೈಕಿ ಇರಾನ್ ಬಳಿ 775 ಮಲ್ಟಿ ಲಾಂಚರ್ ಇದ್ದರೆ, ಇಸ್ರೇಲ್ ಬಳಿ ಕೇವಲ 150 ರಾಕೆಟ್ ಲಾಂಚರ್‌ಗಳಿವೆ.
ಸೈನಿಕರ ಬಲದಲ್ಲಿ ಇರಾನ್ 11.80 ಲಕ್ಷ ಸೈನಿಕರನ್ನು ಹೊಂದಿದೆ. ಈ ಪೈಕಿ 3.50 ಲಕ್ಷ ಮೀಸಲು ಸೇನಾ ಪಡೆ, 2.20 ಲಕ್ಷ ಸೈನಿಕರ ಪ್ಯಾರಾ ಮಿಲಿಟರಿ ಪಡೆಯನ್ನು ಹೊಂದಿದೆ. ಇಸ್ರೇಲ್ 6.70 ಲಕ್ಷ ಸೈನಿಕರ ಬಲ ಹೊಂದಿದೆ. ಈ ಪೈಕಿ ಇಸ್ರೇಲ್ 4.65 ಲಕ್ಷ ಮೀಸಲು ಪಡೆ, 35 ಸಾವಿರ ಪ್ಯಾರಾ ಮಿಲಿಟರಿ ಪಡೆ ಸೈನಿಕರನ್ನು ಹೊಂದಿದೆ. ಇದಲ್ಲದೇ ಇರಾನ್ ಬಳಿ 42 ಸಾವಿರ ಜೆಟ್‌ಮೆನ್‌ಗಳಿದ್ದರೆ, ಇಸ್ರೇಲ್ 89 ಸಾವಿರ ಜೆಟ್‌ಮೆನ್ ಬಲ ಹೊಂದಿದೆ. ಜೊತೆಗೆ ಇರಾನ್ ಒಟ್ಟು 18,500 ನೌಕಾ ಸಿಬ್ಬಂದಿ ಹೊಂದಿದ್ದರೆ, ಇಸ್ರೇಲ್ 19,500 ನೌಕಾದಳ ಸಿಬ್ಬಂದಿಯನ್ನು ಹೊಂದಿದೆ.
ವಾಯುಪಡೆಯಲ್ಲಿ ಆನೆ ಬಲ
ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಇಸ್ರೇಲ್ ಇರಾನ್‌ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಇರಾನ್ ಬಳಿ 551 ವಿಮಾನಗಳನ್ನು ಹೊಂದಿದ್ದು, ಅದರಲ್ಲಿ 358 ಸಕ್ರಿಯವಾಗಿವೆ. ಆದ್ರೆ ಇಸ್ರೇಲ್ 612 ಮೀಸಲು ಹೊಂದಿದ್ದು, 490 ವಿಮಾನ ಸಕ್ರಿಯವಾಗಿದೆ. ಇರಾನ್ 186 ಯುದ್ಧ ವಿಮಾನ ಹೊಂದಿದ್ದು, ಈ ಪೈಕಿ 121 ಮಂದಿ ಸದಾ ದಾಳಿಗೆ ಸಿದ್ಧರಾಗಿದ್ದಾರೆ. ಇಸ್ರೇಲ್ 241 ಯುದ್ಧವಿಮಾನಗಳನ್ನು ಹೊಂದಿದ್ದು, ಅದರಲ್ಲಿ 193 ದಾಳಿಗೆ ಸಿದ್ಧವಾಗಿವೆ.
ಇಸ್ರೇಲ್‌ನ ಸೈಬರ್ ಅಸ್ತ್ರಗಳೇ ಇರಾನ್‌ಗೆ ಸವಾಲು
* 2010ರ ಸುಮಾರಿಗೆ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿರುವುದನ್ನು ಗಮನಿಸಿದ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್, ಶತ್ರುರಾಷ್ಟ್ರದ ಒಂದೊಂದು ಹೆಜ್ಜೆಯನ್ನು ವಿಫಲಗೊಳಿಸತೊಡಗಿತು. ಮುಖ್ಯವಾಗಿ ಇಸ್ರೇಲ್ ನೀಡಿದ ಸೈಬರ್ ದಾಳಿಯ ಏಟುಗಳಿಗೆ ಇರಾನ್ ಹೈರಾಣಾಯಿತು.
* 2010, ಜೂನ್: ಬುಶೆಹರ್ ಪರಮಾಣು ಸ್ಥಾವರ ಕಂಪ್ಯೂಟರ್‌ಗಳು ಸ್ಟಕ್ಸ್ನೆಟ್ ವೈರಸ್‌ನ ದಾಳಿಗೆ ಗುರಿಯಾದವು. ಇದು 14 ಸ್ಥಾವರಗಳ 30 ಸಾವಿರಕ್ಕೂ ಹೆಚ್ಚು ಕಂಪ್ಯೂಟರ್‌ಗಳ ಮೇಲೆ ಪರಿಣಾಮ ಬೀರಿತು. ಇದರ ಹಿಂದೆ ಮೊಸಾದ್ ಕೈವಾಡ ಇದೆಯೆನ್ನುವುದು ಇರಾನ್ ಆರೋಪ.
* 2011, ಏಪ್ರಿಲ್: ಇರಾನ್‌ನ ಭದ್ರತಾ ಸಂಸ್ಥೆಯ ಮುಖ್ಯಸ್ಥ ಘೋಲಮ್ರೆಜಾ ಜಲಾಲಿ ಪ್ರಕಾರ, ಇಸ್ರೇಲ್ ಸೃಷ್ಟಿಸಿದ ‘ಸ್ಟಾರ್ಸ್’ ಹೆಸರಿನ ವೈರಸ್ ಇರಾನ್‌ನ ಸರ್ಕಾರಿ ದಾಖಲೆಗಳನ್ನೇ ನಕಲು ಮಾಡಿತು.
* 2012, ಏಪ್ರಿಲ್: ವೈಪರ್ ಮಾಲ್ವೇರ್ ಇರಾನ್‌ನ ಪೆಟ್ರೋಲಿಯಂ ಸಚಿವಾಲಯ ಮತ್ತು ನ್ಯಾಷನಲ್ ಇರಾನಿಯನ್ ಆಯಿಲ್ ಕಂಪನಿಯ ಕಂಪ್ಯೂಟರ್‌ಗಳಲ್ಲಿದ್ದ ಡೇಟಾವನ್ನೆಲ್ಲ ಅಳಿಸಿಹಾಕಿತ್ತು. ಹೀಗೆ ಇನ್ನೂ ಅನೇಕ ಉದಾಹರಣೆಗಳಿವೆ.
ಕದನ ವಿರಾಮಕ್ಕೂ ಕ್ಯಾರೆ ಎನ್ನದೇ ಯುದ್ಧದಲ್ಲಿ ಮುನ್ನುಗ್ಗುತ್ತಿರುವ ಇಸ್ರೇಲ್ ಒಂದು ಕಡೆಯಾದ್ರೆ, ಇಸ್ರೇಲ್ ಅನ್ನೂ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಅದರ ಶತ್ರು ರಾಷ್ಟ್ರಗಳು ಮತ್ತೊಂದು ಕಡೆ ಇದೆ. ಇದರ ತಾರ್ಕಿತ ಅಂತ್ಯ ಎಲ್ಲಿಗೆ ಒಯ್ಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಬೈರೂತ್: ಒಂದು ವರ್ಷ ಕಳೆದರೂ ಇಸ್ರೇಲ್-ಹಮಾಸ್-ಹಿಜ್ಬುಲ್ಲಾ (Israel Hezbollah War) ನಡುವೆ ಸೇಡು, ಪ್ರತೀಕಾರದ ದಾಳಿಗಳು ತೀವ್ರಗೊಳ್ಳುತ್ತಿವೆ. ಬೈರೂತ್ ನಗರದ ಮೇಲೆ ಇಸ್ರೇಲ್‌ನ ಪಡೆಗಳು ವೈಮಾನಿಕ ದಾಳಿ ಮುಂದುವರಿಸಿವೆ. ಇರಾನ್ ಸುಪ್ರೀಂ ಲೀಡರ್ ಇಸ್ರೇಲ್ ವಿರುದ್ಧ ಗುಡುಗಿದ ಬಳಿಕ ಇಸ್ರೇಲ್ ತನ್ನ ವಾಯುದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಸೋಮವಾರ (ಅ.7) ಇಸ್ರೇಲ್ ಒಂದು ಗಂಟೆ ಅವಧಿಯಲ್ಲಿ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ನೆಲೆಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ದಕ್ಷಿಣ ಲೆಬನಾನ್‌ನಲ್ಲಿ ಒಂದು ಗಂಟೆಯೊಳಗೆ 120ಕ್ಕೂ ಹೆಚ್ಚು ಭಯೋತ್ಪಾದಕರ ಅಡಗುದಾಣಗಳನ್ನು ಧ್ವಂಸ ಮಾಡಲಾಗಿತ್ತು.
ಇದಕ್ಕೂ ಮುನ್ನಾದಿನ ಗಾಜಾದಲ್ಲಿನ (Gaza) ಮಸೀದಿಯ (Mosque) ಮೇಲೆ ಇಸ್ರೇಲ್ (Israel) ವಾಯುಪಡೆ ನಡೆಸಿದ್ದ ವೈಮಾನಿಕ ದಾಳಿಯಿಂದ 26 ಮಂದಿ ಸಾವಿಗೀಡಾಗಿದ್ದರು. ಈ ಬೆನ್ನಲ್ಲೇ ಹಮಾಸ್ ಕೂಡ ಕೌಂಟರ್ ಅಟ್ಯಾಕ್ ಮಾಡಿತ್ತು. ಇಸ್ರೇಲ್ ವೈಮಾನಿಕ ದಾಳಿ ಬೆನ್ನಲ್ಲೇ ಗಾಜಾದಿಂದ ರಾಕೆಟ್‌ಗಳನ್ನು (Rocket Fired) ಹಾರಿಸಿತ್ತು. ಇದನ್ನೂ ಓದಿ: ವಾಯುದಾಳಿಗೆ ಕೌಂಟರ್ ಅಟ್ಯಾಕ್ – ದಕ್ಷಿಣ ಇಸ್ರೇಲ್ ಕಡೆಗೆ ಹೊರಟ ಸ್ಫೋಟಕ ತುಂಬಿದ ರಾಕೆಟ್