ನವದೆಹಲಿ: ಇರಾನ್ – ಇಸ್ರೇಲ್ ಯುದ್ಧದಿಂದ (Iran Israel War) ಭಾರತ ನಷ್ಟ ಅನುಭವಿಸುತ್ತಿದೆ. ಕಚ್ಚಾ ತೈಲ ಹಾಗೂ ಅಡುಗೆ ಎಣ್ಣೆಯಲ್ಲಿ ಒಂದಿಷ್ಟು ಸಮಸ್ಯೆ ಉಂಟಾದರೆ ಭಾರತದಿಂದ (India) ರಫ್ತಾಗುತ್ತಿದ್ದ ಚಹಾ(Tea) ರಫ್ತು ಈಗ ಸ್ಥಗಿತಗೊಂಡಿದೆ.
ರಷ್ಯಾ ರಷ್ಯಾ ನಂತರ ಎರಡನೇ ಅತೀ ಹೆಚ್ಚು ಚಹಾ ಇರಾನ್‌ಗೆ ಭಾರತದಿಂದ ಹೋಗುತ್ತಿತ್ತು. ಈಗ ಇರಾನ್ ಇಸ್ರೇಲ್ ಯುದ್ಧದಿಂದಾಗಿ ರಫ್ತು ನಿಂತಿದೆ. 2024 ರಲ್ಲಿ 31 ಮಿಲಿಯನ್ ಕೆಜಿ ಚಹಾವನ್ನು ಇರಾನ್‌ಗೆ ಭಾರತ ರಫ್ತು ಮಾಡಿತ್ತು. ಈ ವರ್ಷ ಹೆಚ್ಚಿನ ರಫ್ತು ಮಾಡುವ ಸಾಧ್ಯತೆ ಇತ್ತು. ಆದರೆ ದಿಢೀರ್ ಬೆಳವಣಿಗೆಯಿಂದ ರಫ್ತು ಸ್ಥಗಿತವಾಗಿದೆ. ಇದನ್ನೂ ಓದಿ: ಟ್ರಂಪ್‌ಗೆ ಎಚ್ಚರಿಕೆ ಕೊಟ್ಟು ಆತಂಕ ಹೊರಹಾಕಿದ ಮುನೀರ್
2024 ರಲ್ಲಿ ಭಾರತ ಒಟ್ಟು 7,111 ಕೋಟಿ ರೂ. ಮೌಲ್ಯದ 255 ಮಿಲಿಯನ್ ಕೆಜಿ ಚಹಾವನ್ನು ರಫ್ತು ಮಾಡಿದೆ. ಇದರಲ್ಲಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳವು 4,833 ಕೋಟಿ ರೂ. ಮೌಲ್ಯದ 154.81 ಮಿಲಿಯನ್ ಕೆಜಿ ರಫ್ತು ಮಾಡಿದರೆ ದಕ್ಷಿಣ ಭಾರತದಿಂದ 2,278 ಕೋಟಿ ರೂ. ಮೌಲ್ಯದ 99.86 ಮಿಲಿಯನ್ ಕೆಜಿ ರಫ್ತು ಮಾಡಿದೆ. ಈ ಒಟ್ಟು ಉತ್ಪಾದನೆಯಲ್ಲಿ ಇರಾನ್‌ಗೆ ರಫ್ತಾಗುವ ಒಟ್ಟು ಟೀಯಲ್ಲಿ ಅಸ್ಸಾಂನಿಂದ ಶೇ.80 ರಷ್ಟು, ಬಂಗಾಳದಿಂದ ಶೇ.20 ರಷ್ಟು ರಫ್ತಾಗುತ್ತದೆ.
2022 ರಲ್ಲಿ 22 ಮಿಲಿಯನ್ ಕೆಜಿ, 2023 ರಲ್ಲಿ 5.9 ಮಿಲಿಯನ್ ಕೆಜಿ, 2024 ರಲ್ಲಿ 31 ಮಿಲಿಯನ್ ಕೆಜಿ ಚಹಾವನ್ನು ಭಾರತ ಇರಾನ್‌ಗೆ ರಫ್ತು ಮಾಡಿದೆ.
ವಾಷಿಂಗ್ಟನ್: ಇರಾನ್‌ನಲ್ಲಿರುವ (Iran) ಪ್ರಭುತ್ವ ಬದಲಾದರೆ ಪಾಕಿಸ್ತಾನ-ಇರಾನ್ ಗಡಿಯಲ್ಲಿರುವ ಪ್ರತ್ಯೇಕತಾವಾದಿ ಮತ್ತು ಜಿಹಾದಿ ಗುಂಪುಗಳು ಲಾಭ ಪಡೆಯಬಹುದು ಎಂದು ಪಾಕಿಸ್ತಾನ (Pakistan) ಸೇನಾ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗಿನ ಸಭೆಯಲ್ಲಿ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ (Israel-Iran) ನಡುವಿನ ಘರ್ಷಣೆ ತೀವ್ರಗೊಳ್ಳುತ್ತಿದ್ದಂತೆ ಟ್ರಂಪ್ ತಮ್ಮ ಅಧಿಕೃತ ನಿವಾಸ ಶ್ವೇತ ಭವನದಲ್ಲಿ (White House) ಮುನೀರ್ ಜೊತೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಇರಾನ್ ಅಸ್ಥಿರಗೊಂಡರೆ ಉಗ್ರ ಸಂಘಟನೆಗಳು ಲಾಭ ಪಡೆಯುವ ಸಾಧ್ಯತೆಯಿದೆ. ಇದು ಗಡಿ ಭಾಗದಲ್ಲಿ ಭಯವನ್ನುಂಟುಮಾಡಿದೆ ಎಂದು ಮುನೀರ್ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಮುನೀರ್‌ಗೆ ಟ್ರಂಪ್ ಡಿನ್ನರ್ – ಪಾಕ್ ನೆಲದಿಂದ ಅಮೆರಿಕ ಇರಾನ್ ಮೇಲೆ ದಾಳಿ ಮಾಡುತ್ತಾ?
ಪಾಕಿಸ್ತಾನ ಮತ್ತು ಇರಾನ್ 900 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. ಇಲ್ಲಿ ದೀರ್ಘಕಾಲದಿಂದ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದೆ. ಇರಾನ್ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ಸಂಘಟನೆಗಳು ಗಡಿಯ ಎರಡೂ ಬದಿಗಳಲ್ಲಿ ಕಾರ್ಯನಿರ್ವಹಿಸುತ್ತವೆ.
ಈಗ ಅಮೆರಿಕದ ಪರ ವಾಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಮೇ 27ಕ್ಕೆ ಇರಾನ್‌ಗೆ ಭೇಟಿ ನೀಡಿದ್ದರು. ಇರಾನ್‌ಗೆ ಭೇಟಿ ನೀಡಿದ ಮೂರು ವಾರದ ಬಳಿಕ ಅಮೆರಿಕಕ್ಕೆ ಭೇಟಿ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಪಾಕಿಸ್ತಾನವು ಇಸ್ರೇಲ್‌ನ ದಾಳಿಯನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಖಂಡಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಶಫ್ಕತ್ ಅಲಿ ಖಾನ್, ಇದು ಇಡೀ ಪ್ರಾದೇಶಿಕ ಭದ್ರತಾ ರಚನೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ಇದು ನಮ್ಮ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಟೆಹ್ರಾನ್/ಟೆಲ್ ಅವೀವ್: ಇರಾನ್ (Iran) ಮತ್ತು ಇಸ್ರೇಲ್ (Israel) ನಡುವಿನ ಯುದ್ಧದ ಭೀಕರತೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಅಮೆರಿಕದ (America) ಎಂಟ್ರಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು, ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುತ್ತಾ ಎನ್ನುವಂತಾಗಿದೆ.
ಇಷ್ಟು ದಿನ ಇಸ್ರೇಲ್ ಬೆನ್ನಿಗೆ ನಿಂತು ಬಲ ನೀಡಿದ್ದ ಅಮೆರಿಕ, ಈಗ ಒಂದು ಹೆಜ್ಜೆ ಮುಂದೆ ಬಂದು ನೇರವಾಗಿಯೇ ಇರಾನ್‌ಗೆ ಹೋರಾಟದ ಎಚ್ಚರಿಕೆ ನೀಡಿದೆ. ಇದು ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುತ್ತಾ ಎನ್ನುವ ಟೆನ್ಷನ್ ಹೆಚ್ಚಿಸಿದೆ. ಈ ಮಧ್ಯೆ ಟ್ರಂಪ್‌ನ ಆ ಒಂದು ಹೇಳಿಕೆ ಮೂರನೇ ಮಹಾಯುದ್ಧ ಶುರುವಾದರೂ ಅಚ್ಚರಿಪಡಬೇಕಿಲ್ಲ ಎನ್ನುವ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಇರಾನ್‌ಗೆ ಎರಡು ದಿನದ ಹಿಂದಷ್ಟೇ ಟ್ರಂಪ್ ನೇರ ಎಚ್ಚರಿಕೆ ನೀಡುವ ಮೂಲಕ ಹಿಂದೆ ಸರಿಯುವಂತೆ ಹೇಳಿದ್ದರು. ಆದರೆ ಇದಕ್ಕೆ ಬಗ್ಗದ ಇರಾನ್ ಸರ್ವೋಚ್ಛ ನಾಯಕ ಖಮೇನಿ ನೀವು ಕೂಡ ನಿಮ್ಮ ಪಾಡಿಗೆ ಸೈಲೆಂಟ್ ಆಗಿದ್ರೆ ಒಳ್ಳೆಯದು, ಇಲ್ಲದಿದ್ದರೆ ಅಮೆರಿಕ ಕೂಡ ಪರಿಣಾಮ ಎದುರಿಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದೆ. ಅದಾದ ಬೆನ್ನಲ್ಲೇ ನಿನ್ನೆ ಮತ್ತೆ ಇರಾನ್ ವಿರುದ್ಧ ಟ್ರಂಪ್ ಗುಡುಗಿದರು. ತಾವು ಕೂಡ ಇರಾನ್ ವಿರುದ್ಧ ಸಮರಕ್ಕಿಳಿಯುವ ಮುನ್ಸೂಚನೆ ನೀಡಿದರು. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಟ್ರಂಪ್ ಬಳಿ ಕೇಳಿದಾಗ ಯಾವುದೇ ಷರತ್ತುಗಳಿಲ್ಲದೆ ಇರಾನ್ ತನ್ನ ಪರಮಾಣು ಯೋಜನೆಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ವಾರ್ನಿಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ: Rain Alert | ಕರ್ನಾಟಕದ ಕರಾವಳಿಯಲ್ಲಿ ಜೂನ್ 26ರ ವರೆಗೂ ಭಾರೀ ಮಳೆ
ಟ್ರಂಪ್ ಹೇಳಿಕೆ ಬೆನ್ನಲ್ಲೇ ಅಮೆರಿಕವು ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಮಿಲಿಟರಿ ಪಡೆಗಳನ್ನು ಸ್ಥಳಾಂತರಿಸುತ್ತಿದೆ. ಮೂರನೇ ನೌಕಾ ವಿಧ್ವಂಸಕ ನೌಕೆ ಪೂರ್ವ ಮೆಡಿಟರೇನಿಯನ್ ಸಮುದ್ರವನ್ನು ಪ್ರವೇಶಿಸಿದೆ. ಮತ್ತೊಂದು ವಿಮಾನವಾಹನ ನೌಕೆ ಗುಂಪು ಅರೇಬಿಯನ್ ಸಮುದ್ರಕ್ಕೆ ತೆರಳುತ್ತಿದೆ ಎನ್ನಲಾಗ್ತಿದೆ. ಇದು ಕೇವಲ ರಕ್ಷಣಾತ್ಮಕ ಕ್ರಮವಾಗಿದೆ ಎಂಬ ಚರ್ಚೆ ಇದೆ. ಇರಾನ್ ಇಸ್ರೇಲ್ ಮೇಲೆ ಬಹುದೊಡ್ಡ ದಾಳಿ ನಡೆಸಿದರೆ ಅಮೆರಿಕ ರಣರಂಗಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ
ಅಮೆರಿಕದ ಎಚ್ಚರಿಕೆ ನಡುವೆ ಈಗ, ರಷ್ಯಾ (Russia) ಕೂಡ ಎಂಟ್ರಿ ಕೊಟ್ಟಿದ್ದು, ಅಮೆರಿಕಾಕ್ಕೆ ಸೈಲೆಂಟಾಗಿರುವಂತೆ ವಾರ್ನಿಂಗ್ ಕೊಟ್ಟಿದೆ. ಈ ಮೂಲಕ ಆಯಾ ದೇಶಗಳ ಪರ ಒಂದೊಂದೆ ದೇಶಗಳು ಎಂಟ್ರಿ ಆರಂಭವಾದಂತಿದ್ದು, ಒಂದೊಮ್ಮೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಇಡೀ ಪ್ರಪಂಚ ಮತ್ತೆ ಮತ್ತೊಂದು ಮಹಾಯುದ್ಧದ ಭೀಕರತೆಗೆ ಸಿಲುಕಲಿದೆ.ಇದನ್ನೂ ಓದಿ: ಇಂದಿನಿಂದ ಭಾರತ-ಇಂಗ್ಲೆಂಡ್ ಟೆಸ್ಟ್ – ಗಿಲ್ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ
ವಾಷಿಂಗ್ಟನ್: ಇಸ್ರೇಲ್-ಇರಾನ್ (Israel- Iran) ಮಧ್ಯೆ ನಡೆಯುತ್ತಿರುವ ಸಂಘರ್ಷದಲ್ಲಿ ಪಾಕಿಸ್ತಾನ (Pakistan) ಅಮೆರಿಕಕ್ಕೆ (USA) ಸಹಕಾರ ನೀಡುವ ಸಾಧ್ಯತೆಯಿದೆ.
ಇಸ್ರೇಲ್- ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಈಗಾಗಲೇ ಅಧಿಕೃತವಾಗಿ ಎಂಟ್ರಿಯಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು (Iran’s Supreme Leader Ali Khamenei) ಎಲ್ಲಿ ಅಡಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಸದ್ಯಕ್ಕೆ ನಾವು ಹತ್ಯೆ ಮಾಡುವುದಿಲ್ಲ. ಬದಲಾಗಿ ಖಮೇನಿ ಶರಣಾಗಬೇಕು ಎಂದು ಡೊನಾಲ್ಡ್ ಟ್ರಂಪ್ (Donald Trump) ಧಮ್ಕಿ ಹಾಕಿದ್ದರು.
ಇರಾನ್ ಜೊತೆಗಿನ ಕಾದಾಟದ ಸಮಯದಲ್ಲೇ ಇಬ್ಬರು ಮಾತುಕತೆ ನಡೆಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಒಂದು ವೇಳೆ ಅಮೆರಿಕ ನೇರವಾಗಿ ಯುದ್ಧದಲ್ಲಿ ತೊಡಗಿದರೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್ ನೆಲೆಗಳ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆಯಿದೆ.
ಪಾಕಿಸ್ತಾನ ಇರಾನ್ ಜೊತೆ ಗಡಿಯನ್ನು ಹಂಚಿಕೊಂಡಿದೆ. ಗಡಿಯನ್ನು ಹಂಚಿಕೊಂಡಿದ್ದರೂ ಮತ್ತು ಎರಡೂ ಮುಸ್ಲಿಮ್ ದೇಶಗಳಾಗಿದ್ದರೂ ಪಾಕ್ ಮತ್ತು ಇರಾನ್ ನಡುವಿನ ಸಂಬಂಧ ಅಷ್ಟಕಷ್ಟೇ. ಈ ಹಿಂದೆ ಹಲವು ಬಾರಿ ಈ ದೇಶಗಳು ಪರಸ್ಪರ ಕಿತ್ತಾಟ ನಡೆಸಿವೆ. ಈ ಕಿತ್ತಾಟದ ಲಾಭವನ್ನು ಪಡೆದು ಅಮೆರಿಕ ಪಾಕ್ ಸಹಾಯದಿಂದ ಇರಾನ್ ಮೇಲೆ ಮುಂದಿನ ದಿನಗಳಲ್ಲಿ ದಾಳಿ ಮಾಡಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಪಾಕಿಸ್ತಾನ ಈಗಾಗಲೇ ದಿವಾಳಿಯಗಿದ್ದು ವಿಶ್ವ ಬ್ಯಾಂಕ್ ನೀಡುತ್ತಿರುವ ಸಾಲದಿಂದ ಉಸಿರಾಡುತ್ತಿದೆ. ಉದ್ಯಮಿಯಾಗಿರುವ ಟ್ರಂಪ್ ಮುನಿರ್‌ಗೆ ಹಲವಾರು ಆಫರ್ ನೀಡಿರುವ ಸಾಧ್ಯತೆಯಿದೆ. ಟ್ರಂಪ್ ಆಫರ್ ಮುನೀರ್ ಒಪ್ಪಿದರೆ ಇರಾನ್ ಮೇಲೆ ಪಾಕ್ ನೆಲದಿಂದ ದಾಳಿ ನಡೆಸಲು ಅಮೆರಿಕಕ್ಕೆ ಸಹಾಯವಾಗಲಿದೆ.
ಅಮೆರಿಕಕ್ಕೆ ಸಹಕಾರ ನೀಡಿತ್ತು ಪಾಕ್
ಪಾಕ್ ಭೂಮಿಯನ್ನು ಬಳಸಿ ಅಮೆರಿಕ ತನ್ನ ಕೆಲಸ ಮಾಡಿಸುವುದು ಹೊಸದೆನಲ್ಲ. ಎರಡನೇ ವಿಶ್ವಯುದ್ಧದ ಬಳಿಕ ಅಫ್ಘಾನಿಸ್ತಾನ (Afghanistan) ಸೋವಿಯತ್ ಯೂನಿಯನ್ ಜೊತೆ ಉತ್ತಮ ಸಂಬಂಧ ಹೊಂದಿತ್ತು. ಸೋವಿಯತ್ ಯೂನಿಯನ್ (Soviet Union) ಆರ್ಥಿಕ, ಮಿಲಿಟರಿ, ಸಹಕಾರವನ್ನು ನೀಡಿತ್ತು. ಶೀತಲ ಸಮರದ ಸಮಯದಲ್ಲಿ ಅಫ್ಘಾನ್- ಯುಎಸ್‌ಎಸ್‌ಆರ್ ಸಂಬಂಧ ಉತ್ತಮವಾಗುತ್ತಿರುವುದನ್ನು ಸಹಿಸದ ಅಮೆರಿಕ (America) ಪಾಕಿಸ್ತಾದಲ್ಲಿ ಮುಜಾಹಿದ್ದೀನ್‌ಗಳ ಕೈಗೆ ಶಸ್ತ್ರಾಸ್ತ್ರ ನೀಡಿ ಬೆಳೆಸತೊಡಗಿತು. ಅಮೆರಿಕದ ಈ ತಂತ್ರಕ್ಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಾಥ್ ನೀಡಿತ್ತು.
ಈ ನಿರ್ಧಾರದಿಂದ ಅಮೆರಿಕಕ್ಕೆ ಎರಡು ಲಾಭವಿತ್ತು. ಒಂದನೇಯದಾಗಿ ಅಮೆರಿಕದ ಸೈನಿಕರು ಅಫ್ಘಾನಿಸ್ತಾನಕ್ಕೆ ಹೋಗಿ ನೇರವಾಗಿ ಯುದ್ಧ ಮಾಡದ ಕಾರಣ ಸೈನಿಕರ ಸಾವು, ನೋವು ಸಂಭವಿಸುತ್ತಿರಲಿಲ್ಲ. ಎರಡನೇಯದಾಗಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪವೂ ಬರುವುದಿಲ್ಲ. ಅಮೆರಿಕ ಕೃಪಾಪೋಷಿತ ಉಗ್ರರು ಸೋವಿಯತ್ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದರು. ಗೆರಿಲ್ಲಾ ಯುದ್ಧಗಳನ್ನು ಮಾಡಲು ಆರಂಭಿಸಿದರು. ಕೊನೆಗೆ 1989 ರಲ್ಲಿ ಸೋವಿಯತ್ ಯೂನಿಯನ್ ಅಫ್ಘಾನಿಸ್ತಾನದಲ್ಲಿದ್ದ ಎಲ್ಲ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತು. 1991ರಲ್ಲಿ ಯುಎಸ್‌ಎಸ್‌ಆರ್ ಛಿದ್ರಗೊಳ್ಳುವ ಮೂಲಕ ಅಮೆರಿಕದ ತಂತ್ರ ಯಶಸ್ವಿಯಾಗಿತ್ತು.
ವಿಶ್ವ ವಾಣಿಜ್ಯ ಅವಳಿ ಕಟ್ಟಡದ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ ಬಳಿಕ ಅಮೆರಿಕ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿತ್ತು. ಅಫ್ಘಾನಿಸ್ತಾನ ಭೂಮಿಯಿಂದ ಅವೃತವಾದ ದೇಶಗಿದ್ದ ಕಾರಣ ಸುಲಭವಾಗಿ ನುಗ್ಗಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಅಮೆರಿಕ ಪಾಕಿಸ್ತಾನದ ಮೂಲಕ ತನ್ನ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿತ್ತು. ಅಮೆರಿಕದ ಹಡಗುಗಳು ಕರಾಚಿ ಬಂದರಿಗೆ ಬಂದು ಅಲ್ಲಿಂದ ನೆಲ ಮಾರ್ಗದ ಮೂಲಕ ಶಸ್ತ್ರಾಸ್ತ್ರಗಳನ್ನು ಅಫ್ಘಾನಿಸ್ತಾನದಲ್ಲಿರುವ ಮಿಲಿಟರಿ ಕ್ಯಾಂಪ್‌ಗಳಿಗೆ ಸಾಗಿಸುತ್ತಿತ್ತು. ನೇರವಾವಿ ಪಾಕ್ ಅಫ್ಘಾನ್ ಯುದ್ಧದಲ್ಲಿ ಭಾಗಿಯಾಗದೇ ಇದ್ದರೂ ಅಮೆರಿಕಕ್ಕೆ ಸಹಕಾರ ನೀಡುವ ಮೂಲಕ ಪರೋಕ್ಷವಾಗಿ ಭಾಗಿಯಾಗಿತ್ತು. ಪಾಕ್ ಸಹಕಾರಕ್ಕೆ ಅಮೆರಿಕ ಎಫ್ 16 ಯುದ್ಧ ವಿಮಾನ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ನೀಡಿತ್ತು.
ನವದೆಹಲಿ: ಇರಾನ್ ಹಾಗೂ ಇಸ್ರೇಲ್ ಸಂಘರ್ಷದಿಂದ (Israel-Iran Conflict) ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವ ಕೆಲಸ ಆರಂಭಗೊಂಡಿದೆ. ಇಂದು (ಜೂ.19) ಮುಂಜಾನೆ ಇರಾನ್‍ನಿಂದ ಹೊರಟಿದ್ದ 110 ವಿದ್ಯಾರ್ಥಿಗಳು ದೆಹಲಿ ತಲುಪಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ್ದವರನ್ನು ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಸಿಂಧು (Operation Sindhu) ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ವಿದ್ಯಾರ್ಥಿಗಳು ಇರಾನ್‍ನಿಂದ ಅರ್ಮೇನಿಯಾದ ಮೂಲಕ ಭಾರತಕ್ಕೆ ಹೊರಟಿದ್ದರು. ಉತ್ತರ ಭಾರತದ ಹಲವು ರಾಜ್ಯಗಳ ವಿದ್ಯಾರ್ಥಿಗಳು ದೆಹಲಿಗೆ ಬಂದಿದ್ದಾರೆ. ಆಪರೇಷನ್ ಸಿಂಧು ಭಾಗವಾಗಿ ಎರಡನೇ ವಿಮಾನ ಸಹ ಹೊರಟಿದ್ದು, ಅದರಲ್ಲಿ ಐದು ಮಂದಿ ಕನ್ನಡಿಗರಿದ್ದಾರೆ. ಅದರಲ್ಲಿರುವ ಕನ್ನಡಿಗರು ಬೆಳಿಗ್ಗೆ 9 ಗಂಟೆಗೆ ದೆಹಲಿ ತಲುಪಲಿದ್ದಾರೆ. ಇದನ್ನೂ ಓದಿ: ʼYou Are The Bestʼ – ಜಿ-7 ಶೃಂಗಸಭೆಯಲ್ಲಿ ಮೆಲೋಡಿ ಮೊಮೆಂಟ್
ಸಂಘರ್ಷದಿಂದ ಇಸ್ರೇಲ್‍ನಲ್ಲಿ ಸಿಲುಕಿದ್ದ 18 ಕನ್ನಡಿಗರು ಸಹ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಗಳೂರಿಗೆ ತಲುಪುವ ಸಾಧ್ಯತೆ ಇದೆ.
ಬಿ-ಪ್ಯಾಕ್ ಸದಸ್ಯರ ಕನ್ನಡಿಗರ ತಂಡ ಅಧ್ಯಯನ ಪ್ರವಾಸಕ್ಕೆ ಹೋಗಿತ್ತು. ಇಸ್ರೇಲ್‍ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಹಿನ್ನೆಲೆ ಅಲ್ಲೇ ಉಳಿದಿದ್ದರು. ಬುಧವಾರ (ಜೂ.18) ರಾತ್ರಿ ಕುವೈತ್ ತಲುಪಿದ್ದರು. ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕನ್ನಡಿಗರ ತಂಡ ಬರಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ದಾಳಿ ಮಾಡಿ ಇಸ್ರೇಲ್ ದೊಡ್ಡ ತಪ್ಪು ಮಾಡಿದೆ, ನಾವು ಶರಣಾಗಲ್ಲ: ಟ್ರಂಪ್‌ಗೆ ಖಮೇನಿ ವಾರ್ನಿಂಗ್
ಟೆಹ್ರಾನ್: ನಮ್ಮ ಮೇಲೆ ದಾಳಿ ಮಾಡುವ ಮೂಲಕ ಇಸ್ರೇಲ್ (Israel) ಅತೀ ದೊಡ್ಡ ತಪ್ಪು ಮಾಡಿದೆ. ಈ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಎಂದು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಹೇಳಿದ್ದಾರೆ.
ಇಸ್ರೇಲ್‌ಗೆ ಅಮೆರಿಕ (USA) ಶಸ್ತ್ರಾಸ್ತ್ರಗಳ ನೆರವು ನೀಡಬಾರದು. ನೆರವು ನೀಡಿದ್ದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಖಮೇನಿ ಎಚ್ಚರಿಕೆ ನೀಡಿದ್ದಾರೆ.
ಟೆಹ್ರಾನ್: ಇಸ್ರೇಲ್ (Israel) ಹಾಗೂ ಇರಾನ್ (Iran) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಏಕಾಂಗಿಯಾಗಿದ್ದಾರೆ. ಇರಾನ್‌ನ ಪ್ರಮುಖ ಸೇನಾ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಹತ್ಯೆ ಮಾಡುತ್ತಿದೆ.
ಈಗಾಗಲೇ ಇಸ್ರೇಲ್ ಇರಾನಿನ ಉನ್ನತ ಕಮಾಂಡರ್ ಅಲಿ ಶಾದ್ಮಾನಿ, ಮೇಜರ್ ಜನರಲ್ ಗುಲಾಮ್ ಅಲಿ ರಶೀದ್, ಇರಾನ್‌ನ ಪ್ರತಿಷ್ಠಿತ ಮಿಲಿಟರಿ ಘಟಕ ಕಮಾಂಡರ್ ಹುಸೇನ್ ಸಲಾಮಿ, ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ ಮತ್ತು ವಾಯು ಪ್ರದೇಶದ ಮುಖ್ಯಸ್ಥ ಅಮೀರ್ ಅಲಿ ಹಾಜಿಜಾದೆ, ಗುಪ್ತಚರ ಮುಖ್ಯಸ್ಥ ಮೊಹಮ್ಮದ್ ಕಜ್ಮಿಯನ್ನೂ ಹತ್ಯೆ ಮಾಡಿದೆ.ಇದನ್ನೂ ಓದಿ:ಆ ನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 6ರ ಮಗು ಸಾವು?
ಖಮೇನಿಯ ಅನೇಕ ಪ್ರಮುಖ ಮಿಲಿಟರಿ ಮತ್ತು ಭದ್ರತಾ ಸಲಹೆಗಾರರು ಇಸ್ರೇಲ್‌ನ ವಾಯು ದಾಳಿಗಳಲ್ಲಿ ಸಾವನ್ನಪ್ಪಿದ್ದಾರೆ. ಸರಣಿ ಹತ್ಯೆಗಳಿಂದ ಖಮೇನಿ ಆಂತರಿಕ ಸಲಹಾ ತಂಡದಲ್ಲಿ ಜನರ ಕೊರತೆಯಾಗಿದೆ. ಈ ನಡುವೆ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಕೊಲ್ಲುವುದಾಗಿ ಇಸ್ರೇಲ್ ನಾಯಕರು ಬೆದರಿಕೆ ಹಾಕಿದ್ದಾರೆ.
ಇತ್ತೀಚಿಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಖಮೇನಿ ಅವರನ್ನು ಕೊಲ್ಲುವುದರಿಂದ ಇಸ್ರೇಲ್ ಮತ್ತು ಇರಾನ್ ನಡುವಿನ ದೀರ್ಘಕಾಲದ ದ್ವೇಷವನ್ನು ಕೊನೆಗೊಳಿಸಬಹುದು ಎಂದು ಸೂಚಿಸಿದರು. ಒಂದು ದಿನದ ನಂತರ, ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಖಮೇನಿ ಮಾಜಿ ಇರಾಕಿ ನಾಯಕ ಸದ್ದಾಂ ಹುಸೇನ್‌ನಂತೆಯೇ ಅದೇ ಗತಿಯನ್ನು ಎದುರಿಸಬಹುದು ಎಂದು ಎಚ್ಚರಿಕೆ ನೀಡಿದರು.
ಈ ಹಿನ್ನೆಲೆ ಖಮೇನಿ ನಂತರದ ಇರಾನ್ ಬಗ್ಗೆ ಚರ್ಚೆ ತೀವ್ರಗೊಂಡಿದೆ. ವಿಶೇಷವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ನಾಯಕನನ್ನು ಹತ್ಯೆ ಮಾಡುವ ಇಸ್ರೇಲ್ ಯೋಜನೆಯನ್ನು ತಡೆದಿದ್ದಾರೆ ಎಂದು ವರದಿಯಾಗಿತ್ತು. ತಮ್ಮ ಸಂದರ್ಶನದಲ್ಲಿ ಯೋಜನೆಯನ್ನು ಸಮರ್ಥಿಸಿಕೊಂಡ ನೆತನ್ಯಾಹು, ಅಂತಹ ಕ್ರಮವು ಉದ್ವಿಗ್ನತೆಯನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಸಂಘರ್ಷವನ್ನು ಕೊನೆಗೊಳಿಸುತ್ತದೆ ಎಂದು ವಾದಿಸಿದರು.ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್ ಹಾಕುತ್ತಾ?
ಸಂಭಾವ್ಯ ಸರ್ವೋಚ್ಛ ಉತ್ತರಾಧಿಕಾರಿಗಳು ಯಾರು?
ಸಂಭಾವ್ಯ ಉತ್ತರಾಧಿಕಾರಿಗಳಲ್ಲಿ, ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಎರಡನೇ ಮಗ ಮೊಜ್ತಬಾ ಖಮೇನಿ ಪ್ರಮುಖ ಸ್ಪರ್ಧಿಯಾಗಿ ಎದ್ದು ಕಾಣುತ್ತಾರೆ. 1969ರಲ್ಲಿ ಜನಿಸಿದ ಮೊಜ್ತಬಾ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Iಖಉಅ) ಮತ್ತು ಇರಾನ್‌ನ ಕ್ಲೆರಿಕಲ್ ಸ್ಥಾಪನೆ ಎರಡರೊಂದಿಗೂ ಆಳವಾದ ಸಂಬಂಧವನ್ನು ಹೊಂದಿದ್ದಾರೆ. ಅವರು ಇರಾನ್-ಇರಾಕ್ ಯುದ್ಧದ ಅಂತಿಮ ಹಂತದಲ್ಲಿ ಸೇವೆ ಸಲ್ಲಿಸಿದರು ಮತ್ತು ಈಗ ತೆರೆಮರೆಯಲ್ಲಿ ಬಲವಾದ ಪ್ರಭಾವ ಹೊಂದಿರುವ ಮಧ್ಯಮ ಶ್ರೇಣಿಯ ಧರ್ಮಗುರುವಾಗಿದ್ದಾರೆ.
ಮತ್ತೊಂದು ಪ್ರಮುಖ ಹೆಸರು ಅಲಿರೆಜಾ ಅರಾಫಿ. ಇವರು ಖಮೇನಿಯ ವಿಶ್ವಾಸಾರ್ಹ ಸಹಾಯಕರು. ಅರಾಫಿ ತಜ್ಞರ ಸಭೆಯ ಉಪಾಧ್ಯಕ್ಷರು, ಗಾರ್ಡಿಯನ್ ಕೌನ್ಸಿಲ್ ಸದಸ್ಯರು ಮತ್ತು ಕೋಮ್‌ನಲ್ಲಿ ಶುಕ್ರವಾರದ ಪ್ರಾರ್ಥನಾ ನಾಯಕ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ಇರಾನ್‌ನ ಅಧಿಕಾರ ರಚನೆಯೊಳಗಿನ ಅವರ ವ್ಯಾಪಕ ಅರ್ಹತೆಗಳು ಅವರನ್ನು ಉತ್ತರಾಧಿಕಾರಕ್ಕೆ ಗಂಭೀರ ಅಭ್ಯರ್ಥಿಯನ್ನಾಗಿ ಮಾಡುತ್ತವೆ.
ನ್ಯಾಯಾಂಗ ಮತ್ತು ಗುಪ್ತಚರ ವಲಯಗಳಲ್ಲಿ ದಶಕಗಳನ್ನು ಕಳೆದಿರುವ ಘೋಲಮ್ ಹೊಸೇನ್ ಮೊಹ್ಸೇನಿ ಎಜೈ ಮತ್ತೊಬ್ಬ ಸಂಭಾವ್ಯ ಉತ್ತರಾಧಿಕಾರಿ. ಅವರು ಈ ಹಿಂದೆ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರ ಅಡಿಯಲ್ಲಿ ಇರಾನ್‌ನ ಗುಪ್ತಚರ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಅಟಾರ್ನಿ ಜನರಲ್ ಮತ್ತು ನ್ಯಾಯಾಂಗ ವಕ್ತಾರರು ಸೇರಿದಂತೆ ವಿವಿಧ ಹಿರಿಯ ಕಾನೂನು ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಇತರ ಸಂಭಾವ್ಯ ಸ್ಪರ್ಧಿಗಳಲ್ಲಿ ಖಮೇನಿ ಕಚೇರಿಯ ದೀರ್ಘಕಾಲದಿಂದ ಮುಖ್ಯಸ್ಥರಾಗಿರುವ ಮೊಹಮ್ಮದ್ ಗೋಲ್ಪಾಯೆಗಾನಿ. ಮಾಜಿ ವಿದೇಶಾಂಗ ಸಚಿವರಾದ ಅಲಿ ಅಕ್ಬರ್ ವೆಲಾಯತಿ, ಕಮಲ್ ಖರಾಜಿ ಮತ್ತು ಮಾಜಿ ಸಂಸತ್ತಿನ ಸ್ಪೀಕರ್ ಅಲಿ ಲಾರಿಜಾನಿ ಸೇರಿದ್ದಾರೆ. ಎಲ್ಲರೂ ದೇಶೀಯ ಆಡಳಿತ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ, ವಿಶೇಷವಾಗಿ ಪರಮಾಣು ಮಾತುಕತೆಗಳಲ್ಲಿ ಆಳವಾದ ಅನುಭವ ಹೊಂದಿರುವ ಅನುಭವಿಗಳಾಗಿದ್ದಾರೆ.ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿಕೆ
ಇರಾನ್ ಸರ್ವೋಚ್ಛ ನಾಯಕನ ಆಯ್ಕೆ ಹೇಗೆ?
ಇರಾನ್‌ನ ಸರ್ವೋಚ್ಛ ನಾಯಕ ನಿಧನರಾದಾಗ, ಅನರ್ಹರಾದಾಗ ಅಥವಾ ರಾಜೀನಾಮೆ ನೀಡಿದ ನಂತರ, ನಾಯಕತ್ವದಲ್ಲಿನ ನಿರ್ವಾತವನ್ನು ತುಂಬಲು ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ತಜ್ಞರ ಸಭೆಯನ್ನು ಕರೆಯಲಾಗುತ್ತದೆ. ಸಭೆಯು ಸಾರ್ವಜನಿಕರಿಂದ ಆಯ್ಕೆಯಾದ ಇರಾನ್‌ನ ಗಾರ್ಡಿಯನ್ ಕೌನ್ಸಿಲ್‌ನಿಂದ ಪರಿಶೀಲಿಸಲ್ಪಟ್ಟ ಹಿರಿಯ ಧರ್ಮಗುರುಗಳಿಂದ ಕೂಡಿದೆ.
ಇದು ಎಂಟು ವರ್ಷಗಳ ಅವಧಿಗೆ ಸೇವೆ ಸಲ್ಲಿಸುವ 88 ಸದಸ್ಯರನ್ನು ಒಳಗೊಂಡಿರುವ ಒಂದು ಸಂಸ್ಥೆಯಾಗಿದೆ. ಅವರು ಮುಚ್ಚಿದ ಅಧಿವೇಶನದಲ್ಲಿ ಸಭೆ ಸೇರಿ ಸಾರ್ವಜನಿಕ ಪಾರದರ್ಶಕತೆ ಇಲ್ಲದ ರಹಸ್ಯ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುತ್ತಾರೆ ಮತ್ತು ಮತ ಚಲಾಯಿಸುತ್ತಾರೆ.
ಅವರು ಪ್ರತಿಯೊಬ್ಬ ಅಭ್ಯರ್ಥಿಯ ಧಾರ್ಮಿಕ ರುಜುವಾತುಗಳು, ರಾಜಕೀಯ ನಿಷ್ಠೆ ಮತ್ತು ಆಡಳಿತ ಸ್ಥಿರತೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಚರ್ಚಿಸುತ್ತಾರೆ ಮತ್ತು ನಿರ್ಣಯಿಸುತ್ತಾರೆ. ಹೊಸ ಸುಪ್ರೀಂ ನಾಯಕನನ್ನು ನೇಮಿಸಲು 88 ಮತಗಳಲ್ಲಿ ಕನಿಷ್ಠ 45 ಮತಗಳ ಸರಳ ಬಹುಮತದ ಅಗತ್ಯವಿದೆ. ಬಣ ವಿವಾದಗಳನ್ನು ತಪ್ಪಿಸಲು ಸಭೆಯು ಒಮ್ಮತವನ್ನು ಬಯಸುತ್ತದೆ.
1989ರಲ್ಲಿ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ನಂತರ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅಧಿಕಾರಕ್ಕೆ ಬಂದರು. ಎರಡೂವರೆ ದಶಕಗಳಿಗೂ ಹೆಚ್ಚು ಕಾಲ, ಇರಾನ್ ಅನ್ನು ಅವರ ಮುಷ್ಟಿಯಿಂದ ಆಳಲಾಗಿದೆ. ಅಯತೊಲ್ಲಾ ಅಲಿ ಖಮೇನಿ ಇರಾನ್‌ನ ನ್ಯಾಯಾಂಗ, ಸಶಸ್ತ್ರ ಪಡೆಗಳು, ರಾಜ್ಯ ಮಾಧ್ಯಮ, ಗಾರ್ಡಿಯನ್ ಕೌನ್ಸಿಲ್ ಮತ್ತು ಎಕ್ಸ್ಪೆಡಿಯೆನ್ಸಿ ಡಿಸರ್ನ್ಮೆಂಟ್ ಕೌನ್ಸಿಲ್‌ನಂತಹ ಪ್ರಮುಖ ಸಂಸ್ಥೆಗಳ ಮೇಲೆ ಅಂತಿಮ ಅಧಿಕಾರ ಹೊಂದಿದ್ದಾರೆ. ಅವರ ಮಾತುಗಳೇ ಇರಾನ್‌ಗೆ ಕಾನೂನು ಆಗಿರುತ್ತದೆ.ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ
ಟೆಹ್ರಾನ್/ಟೆಲ್ ಅವೀವ್: ಇರಾನ್ (Iran) ಹಾಗೂ ಇಸ್ರೇಲ್ (Israel) ನಡುವಿನ ಸಂಘರ್ಷ ದಿನೇ ದಿನೇ ತಾರಕಕ್ಕೇರುತ್ತಿದೆ. ಇದರ ನಡುವೆಯೂ ಭಾರತ (India) ತಟಸ್ಥವಾಗಿದೆ. ಆದರೆ ಯುದ್ಧದ ಪರಿಣಾಮದಿಂದಾಗಿ ದಿನಗಳೆದಂತೆ ಭಾರತಕ್ಕೆ ಆತಂಕ ಹೆಚ್ಚಾಗುತ್ತಿದೆ.
ಈ ಕುರಿತು ಬೆಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಪಕರು ಎಸ್.ಆರ್ ಕೇಶವ ಮಾತನಾಡಿ, ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದಾಗಿ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಕುರಿತು ವಿವರಿಸಿದ್ದಾರೆ.
ಪರಿಣಾಮಗಳೇನು?
– ಹರಿಯಾಣ, ಪಂಜಾಬ್‌ನಿಂದ 30%-35%ರಷ್ಟು ಬಾಸುಮತಿ ಅಕ್ಕಿ ಇರಾನ್‌ಗೆ ರಫ್ತಾಗುತಿತ್ತು. ಸದ್ಯ ಇದಕ್ಕೆ ತಡೆಯಾಗುವ ಸಾಧ್ಯತೆಯಿದ್ದು, ಹಣದ ವಹಿವಾಟಿಗೆ ಇನ್ನೂ 6 ತಿಂಗಳು ಬೇಕಾಗಬಹುದು.
– ಗಲ್ಫ್ ಆಫ್ ಉಮಾನ್, ರೆಡ್ ಸೀ, ಹರ್ಮೂಜ್ ಜಲಸಂಧಿಯಲ್ಲಿ ಸಬ್‌ಮರೀನ್ ಕೇಬಲ್‌ಗಳನ್ನು ಹಾಕಲಾಗಿದೆ. ಇದರಿಂದಲೇ 95% ಗ್ಲೋಬಲ್ ಇಂಟರ್‌ನೆಟ್ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಇವುಗಳಿಂದ ಸೌತ್‌ಈಸ್ಟ್ ದೇಶಗಳಿಗೆ ಡಿಫೆನ್ಸ್, ಬ್ಯಾಂಕಿಂಗ್‌ನಲ್ಲಿ ಸಮಸ್ಯೆಯುಂಟಾಗುತ್ತದೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಈ ಕೇಬಲ್‌ಗಳಿಗೆ ಸಮಸ್ಯೆ ಆದರೆ ದೊಡ್ಡಮಟ್ಟದ ಹಾನಿಯಾಗುವ ಆತಂಕ ಉಂಟಾಗಿದೆ.
– ಇರಾನ್ ಪೋರ್ಟ್‌ನಲ್ಲಿ ಭಾರತ 80 ಬಿಲಿಯನ್ ಹೂಡಿಕೆ ಮಾಡಿದ್ದು, ಆತಂಕ ಹೆಚ್ಚಾಗಿದೆ.
ಇರಾನ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯ ಬಳಿಕ ಇರಾನ್ ಸಿಡಿದೆದ್ದಿದೆ. 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಟೆಲ್ ಅವೀವ್ ನಗರಕ್ಕೂ ಹಾನಿಯಾಗಿದೆ. ಎರಡು ರಾಷ್ಟ್ರಗಳಿಗೂ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದೆ. ಎರಡು ರಾಷ್ಟಗಳಿಂದ ಭಾರತ ಆಮದು ರಫ್ತನ್ನು ಹೊಂದಿದ್ದು, ಬೆಂಬಲ ಮಾತ್ರ ಯಾವುದೇ ರಾಷ್ಟ್ರಕ್ಕೂ ಘೋಷಿಸಿಲ್ಲ.ಇದನ್ನೂ ಓದಿ: ಗಾಳಿ ಇಲ್ಲ, ಮಳೆ ಇಲ್ಲ – ಸಿಎಂ ನಿವಾಸದ ಮುಂದೆ ಧರೆಗುರುಳಿದ ಬೃಹತ್ ಮರ
-ಯಾವುದೇ ರಾಷ್ಟ್ರಕ್ಕೆ ಬೆಂಬಲ ಸೂಚಿಸಿದ್ರೂ ಆರ್ಥಿಕ ಹೊಡೆತ ಪಕ್ಕಾ
ನವದೆಹಲಿ: ಇರಾನ್ (Iran) ಹಾಗೂ ಇಸ್ರೇಲ್ (Israel) ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಭಾರತ ಎರಡು ರಾಷ್ಟ್ರಗಳ ವಿಚಾರದಲ್ಲಿ ತನ್ನ ನಿಲುವನ್ನು ತಟಸ್ಥವಾಗಿರಿಸಿದೆ. ಯಾವುದೇ ದೇಶಕ್ಕೆ ಬೆಂಬಲ ಸೂಚಿಸಿದರೂ ಅಷ್ಟೇ, ಯುದ್ಧ ನಡೆದರೂ ಅಷ್ಟೇ ಭಾರತಕ್ಕೆ ಆರ್ಥಿಕ ಹೊಡೆತ ಆಗುವ ಸಾಧ್ಯತೆಯಿದೆ.
ಕಳೆದ ನಾಲ್ಕು ದಿನಗಳಿಂದ ಯುದ್ಧದ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದೆ. ಇರಾನ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯ ಬಳಿಕ ಇರಾನ್ ಸಿಡಿದೆದ್ದಿದೆ. 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಟೆಲ್ ಅವೀವ್ ನಗರಕ್ಕೂ ಹಾನಿಯಾಗಿದೆ. ಎರಡು ರಾಷ್ಟ್ರಗಳಿಗೂ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದೆ. ಭಾರತ ಮಾತ್ರ ಬೆಂಬಲ ಸೂಚಿಸದೇ ತಟಸ್ಥ ನಿಲುವನ್ನ ತಾಳಿದೆ. ಎರಡು ರಾಷ್ಟಗಳಿಂದ ಆಮದು ರಫ್ತನ್ನು ಭಾರತ ಹೊಂದಿದ್ದು, ಬೆಂಬಲ ಮಾತ್ರ ಯಾವುದೇ ರಾಷ್ಟ್ರಕ್ಕೂ ಘೋಷಿಸಿಲ್ಲ. ಪರೋಕ್ಷವಾಗಿ ಇಸ್ರೇಲ್ ಅನ್ನು ಬೆಂಬಲಿಸಬಹುದು ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ: ಇರಾನ್‌ನ 2 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದ ಇಸ್ರೇಲ್
ಭಾರತ ಬೆಂಬಲದ ವಿಚಾರದಲ್ಲಿ ಸ್ಪಷ್ಟ ನಿಲುವನ್ನ ತೆಗೆದುಕೊಳ್ಳಬೇಕು. ಇರಾನ್ ಅಥವಾ ಇಸ್ರೇಲ್‌ಗೆ ಬೆಂಬಲ ಘೋಷಿಸಬೇಕು. ಹೀಗಾಗಿ ತಟಸ್ಥ ನಿಲುವು ಸೂಕ್ತ ಅಲ್ಲ ಎಂದು ಎರಡು ರಾಷ್ಟ್ರಗಳ ಜೊತೆ ಟ್ರೇಡ್ ಅನ್ನು ಭಾರತ ಇಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಎಫೆಕ್ಟ್ ತಟ್ಟಲಿದೆ ಎಂದು ನಿವೃತ್ತ ಯೋಧರು ತಿಳಿಸಿದ್ದಾರೆ.
ಎರಡು ರಾಷ್ಟ್ರಗಳ ಮಧ್ಯೆ ಯುದ್ಧ ನಡೆದರೆ ಏನೆಲ್ಲಾ ಆರ್ಥಿಕ ಹೊಡೆತ:
1.ಇರಾನ್, ಇಸ್ರೇಲ್ ಯುದ್ಧ ಭಾರತದ ಕಾರ್ಯತಂತ್ರದ ಆಯಾಮದ ಮೇಲೆ ಪರಿಣಾಮ
2.ಇರಾನ್‌ಗಿಂತ ಇಸ್ರೇಲ್ ಜೊತೆಗಿನ ಸಂಬಂಧ ಮೂರು ಪಟ್ಟು ಭಾರತಕ್ಕಿದೆ.
3.ಭಾರತವು ಇಸ್ರೇಲ್ ಸಹಯೋಗದೊಂದಿಗೆ ಜಂಟಿ ರಕ್ಷಣಾ ಉತ್ಪಾದನಾ ಉದ್ಯಮಗಳನ್ನ ಆರಂಭಿಸಿದೆ
4.2019ರ ಬಳಿಕ ಇರಾನ್ ಜೊತೆಗಿನ ಭಾರತದ ವ್ಯಾಪಾರ ಭಾರೀ ಕುಸಿತ
5.ಇರಾನ್ ಭಾರತಕ್ಕೆ ರಾಸಾಯನಿಕಗಳು, ಎಲ್‌ಪಿಜಿ ಮತ್ತು ಪೆಟ್ರೋಲಿಯಂ ಕೋಕ್‌ಗಳನ್ನ ಆಮದು ಮಾಡ್ತಿದೆ
6. ತೈಲ ರಾಷ್ಟ್ರಗಳು ಇರಾನ್‌ಗೆ ಬೆಂಬಲ ಕೊಟ್ಟರೆ ತೈಲ ಪೂರೈಕೆಯಲ್ಲಿ ಸಮಸ್ಯೆ ಆಗಲಿದೆ
ಬೆಂಬಲ ಕೊಟ್ಟರೂ, ಕೊಡದೇ ಇದ್ದರೂ ಆರ್ಥಿಕತೆ ಮೇಲೆ ಯಾವ ರೀತಿ ಹೊಡೆತ:
1 ತೈಲ ದರ, ಪೆಟ್ರೋಲ್ ದರ ಹೆಚ್ಚಾಗಲಿದೆ
2.ಆಮದು ದರ ಹೆಚ್ಚಾಗಿ ರೂಪಾಯಿ ದುರ್ಬಲಗೊಳ್ಳಲಿದೆ
3. ಹಣದುಬ್ಬರ ಹೆಚ್ಚುವ ಸಾಧ್ಯತೆ
4. ಚಿನ್ನದ ಬೆಲೆ ಹೆಚ್ಚಾಗುವ ಸಾಧ್ಯತೆ
5. ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ
6.ಭಾರತದಲ್ಲೂ ಪೆಟ್ರೋಲ್ ಸೇರಿದಂತೆ ಹಲವು ವಸ್ತುಗಳ ದರ ಹೆಚ್ಚಾಗಲಿದೆ.ಇದನ್ನೂ ಓದಿ: Iran-Israel Conflict | ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್ ಸಪ್ಲೈ ಬಂದ್
ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇರಾನ್ (Iran) ಮತ್ತು ಇಸ್ರೇಲ್ (Israel) ನಡುವಿನ ಯುದ್ಧದ ಆತಂಕ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ಎರಡು ರಾಷ್ಟ್ರಗಳು ತುರ್ತು ಪರಿಸ್ಥಿತಿ ಘೋಷಣೆ ಮಾಡಿವೆ. ಜೊತೆಗೆ ತಮ್ಮ ವಾಯು ಹಾಗೂ ನೌಕಾ ನೆಲೆಗಳನ್ನು ಬಂದ್ ಮಾಡಿವೆ. ಹೀಗಾಗಿ ಇರಾನ್‌ನಿಂದ ಕರ್ನಾಟಕಕ್ಕೆ ಬರುತ್ತಿದ್ದ ಐಟಮ್ಸ್ಗಳ ಸರಬರಾಜು ನಿಂತಿದ್ದು, ವ್ಯಾಪಾರಿಗಳಲ್ಲಿ ಆತಂಕವನ್ನುಂಟು ಮಾಡಿದೆ.
ಹೌದು, ಇರಾನ್ ದೇಶ ಮಧ್ಯಪ್ರಾಚ್ಯ ದೇಶಗಳಲ್ಲಿಯೇ ಹಣ್ಣಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಕೇವಲ ಹಣ್ಣುಗಳು ಮಾತ್ರವಲ್ಲ, ಡ್ರೈಫ್ರೂಟ್ಸ್ ಹಾಗೂ ಮಸಾಲೆ ಪದಾರ್ಥಗಳು ಅತ್ಯಂತ ಗುಣಮಟ್ಟದಿಂದ ಕೂಡಿರುತ್ತವೆ. ಈ ಹಿನ್ನೆಲೆ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳು ಇರಾನ್‌ನಿಂದ ಡ್ರೈಫ್ರೂಟ್ಸ್ ಆಮದು ಮಾಡಿಕೊಳ್ಳುತ್ತವೆ. ಇದೀಗ ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮ ಭಾರತದ ಮೇಲೆ ತಟ್ಟಿದೆ. ಪ್ರಮುಖವಾಗಿ ಇರಾನ್ ಬಂಡಾರ್ ಅಬ್ಬಾಸ್ ಬಂದರು ಬ್ಲಾಸ್ಟ್ ಆದ ಹಿನ್ನೆಲೆ ಇರಾನ್‌ನ ಸೇಬು, ಮಸಾಲೆ ಐಟಮ್ಸ್, ಡ್ರೈಫ್ರೂಟ್ಸ್‌ಗಳು ಬೆಂಗಳೂರಿಗೆ ರಫ್ತಾಗುವುದು ಬಂದ್ ಆಗಿದೆ.ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ – ಫಲ್ಗುಣಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ನೆರೆ
ಏನೆಲ್ಲ ರಫ್ತು ಬಂದ್:
ಇರಾನ್ ಸೇಬು
ಮಸಾಲೆ ಪದಾರ್ಥ
ಗಸಗಸೆ
ಡ್ರೈಫ್ರೂಟ್ಸ್
ಖರ್ಜೂರ
ನೆಟಾಲ್ ಒಣದ್ರಾಕ್ಷಿ
ಪಿಸ್ತಾ
ಪೈನಾಬೀಜ
ಇರಾನ್‌ನಿಂದ ಮುಸ್ಲಿಮರು ಹೆಚ್ಚಾಗಿ ಬಳಸುವ ಮುಜಪತಿ ಖರ್ಜೂರ, ಗಸಗಸೆ, ನೆಟಾಲ್ ಒಣದ್ರಾಕ್ಷಿ, ಪಿಸ್ತಾ, ಪೈನಾಬೀಜ, ಅಂಜೂರ, ಮೇಥಿ, ಮಾರ್ಮಾ ಬಾದಾಮಿ ಬೆಂಗಳೂರಿಗೆ ಸಪ್ಲೈ ಆಗುತ್ತಿಲ್ಲ. ಈ ಸರಬರಾಜು ಸ್ಥಗಿತದಿಂದ ಡಿಮ್ಯಾಂಡ್ ಹೆಚ್ಚಾಗಿದ್ದು, ಇವುಗಳ ಬೆಲೆ ಗಗನಕ್ಕೇರಲಿದೆ. ಪ್ರಮುಖವಾಗಿ ಕೆ.ಜಿ ಗಸಗಸಗೆ 2,500 ರೂ. ಆಗಿದೆ. ಪೈನಾಬೀಜಾ ಸಹ ಹತ್ತು ಸಾವಿರದ ಗಡಿ ದಾಟಿದೆ. ಇರಾನ್ ಸೇಬು ಪ್ರತಿದಿನ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ 70-80 ಕಂಟೇನರ್ ಬರುತ್ತಿತ್ತು. ಆದರೆ ಕಳೆದು ಮೂರು-ನಾಲ್ಕು ದಿನದಿಂದ ಬರುತ್ತಿಲ್ಲ ಎಂದು ಹಣ್ಣಿನ ವ್ಯಾಪಾರಿಗಳು ಹೇಳುತ್ತಿದ್ದಾರೆ.