Tag: Israel

  • I2U2 ಶೃಂಗಸಭೆ – 6 ಕ್ಷೇತ್ರಗಳಲ್ಲಿ 4 ದೇಶಗಳು ಜಂಟಿಯಾಗಿ ಹೂಡಿಕೆ

    I2U2 ಶೃಂಗಸಭೆ – 6 ಕ್ಷೇತ್ರಗಳಲ್ಲಿ 4 ದೇಶಗಳು ಜಂಟಿಯಾಗಿ ಹೂಡಿಕೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು I2U2(ಭಾರತ, ಇಸ್ರೇಲ್, ಅಮೆರಿಕ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್) ಮೊದಲ ವರ್ಚುವಲ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ ಪಿಎಂ ಯೈರ್ ಲ್ಯಾಪಿಡ್ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್‌ನ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸಭೆಯಲ್ಲಿ ಭಾಗಿಯಾಗಿದ್ದಾರೆ.

    ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಮೊದಲ ಶೃಂಗಸಭೆಯಿಂದಲೇ I2U2 ಸಕಾರಾತ್ಮಕ ಕಾರ್ಯಸೂಚಿಯನ್ನು ಸ್ಥಾಪಿಸಿದೆ. ನಾವು ವಿವಿಧ ವಲಯಗಳಲ್ಲಿ ಜಂಟಿ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದೇವೆ ಹಾಗೂ ಮುಂದುವರಿಯಲು ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದೇವೆ ಎಂದು ಹೇಳಿದರು.

    I2U2 ಚೌಕಟ್ಟಿನ ದೇಶಗಳು ನೀರು, ಇಂಧನ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ ಹಾಗೂ ಆಹಾರ ಭದ್ರತೆಯಂತಹ 6 ಪ್ರಮುಖ ಕ್ಷೇತ್ರಗಳಲ್ಲಿ ಜಂಟಿಯಾಗಿ ಹೂಡಿಕೆಯನ್ನು ಹೆಚ್ಚಿಸಲು ಒಪ್ಪಿಕೊಂಡಿದ್ದೇವೆ. I2U2ನ ದೃಷ್ಟಿ ಮತ್ತು ಕಾರ್ಯಸೂಚಿ ಪ್ರಗತಿಪರ ಮತ್ತು ಪ್ರಾಯೋಗಿಕವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಮೋದಿ ತಿಳಿಸಿದರು. ಇದನ್ನೂ ಓದಿ: ಇತಿಹಾಸದ ಪುಟ ಸೇರಲಿದೆ ನೂರು ವರ್ಷಗಳ ಇತಿಹಾಸವುಳ್ಳ ಸಂಸತ್ ಭವನ – ಕೊನೆಯ ಅಧಿವೇಶನಕ್ಕೆ ಸಿದ್ಧತೆ

    ಹೆಚ್ಚುತ್ತಿರುವ ಜಾಗತಿಕ ಅನಿಶ್ಚಿತತೆಯ ನಡುವೆ ನಮ್ಮ ಚೌಕಟ್ಟು ಪ್ರಾಯೋಗಿಕ ಸಹಕಾರಕ್ಕೆ ಉತ್ತಮ ಮಾದರಿಯಾಗಿದೆ. ನಮ್ಮ ಪರಸ್ಪರ ಸಹಕಾರ, ಶಕ್ತಿ, ಬಂಡವಾಳಗಳಿಂದ ನಮ್ಮ ಕಾರ್ಯಸೂಚಿಯನ್ನು ವೇಗಗೊಳಿಸಬಹುದು ಹಾಗೂ ಜಾಗತಿಕ ಆರ್ಥಿಕತೆಗೆ ಪ್ರಮುಖ ಕೊಡುಗೆಗಳನ್ನು ನೀಡಬಹುದು ಎಂದರು.

    ಈ ವೇಳೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಂದು ನಾವು ಎದುರಿಸುತ್ತಿರುವ ಬಹಮುಖ್ಯ ಸವಾಲುಗಳೆಂದರೆ ಹವಾಮಾನ ವೈಪರಿತ್ಯ ಹಾಗೂ ಬೆಳೆಯುತ್ತಿರುವ ಆಹಾರ ಕೊರತೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯಿಂದ ಇಂಧನ ಮಾರುಕಟ್ಟೆಯೂ ಹದಗೆಟ್ಟಿದೆ ಎಂದರು. ಇದನ್ನೂ ಓದಿ: ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ – ಕೇರಳದ ವ್ಯಕ್ತಿಯೋರ್ವನಲ್ಲಿ ಕಾಣಿಸಿಕೊಂಡ ಸೋಂಕು

    ಇದೀಗ I2U2 ಗುಂಪು ಮುಂದಿನ 3 ವರ್ಷಗಳಲ್ಲಿ ಜಂಟಿಯಾಗಿ ಹೂಡಿಕೆ ಮಾಡಿ, ಒಟ್ಟಿಗೆ ಅಭಿವೃದ್ಧಿಪಡಿಸಬಹುದಾದ ಯೋಜನೆಗಳಲ್ಲಿ ಕೆಲಸ ಮಾಡಲಿವೆ. ನಾವೆಲ್ಲರೂ ಜೊತೆಯಾಗಿ ದೊಡ್ಡ ಸಾಧನೆಯನ್ನು ಮಾಡಬಹುದಾಗಿದೆ ಎಂದು ಬೈಡನ್ ಹೇಳಿದರು.

    ಇಸ್ರೇಲ್ ಪ್ರಧಾನಿ ಯೈರ್ ಲ್ಯಾಪಿಡ್ ಮಾತನಾಡಿ, ನಾವು ಜಗತ್ತನ್ನು ಉತ್ತಮವಾಗಿ ಬದಲಿಸಲು ಬಯಸುತ್ತೇವೆ. ಇದನ್ನು ಸಾಧಿಸಲು ಸಂಪನ್ಮೂಲಗಳನ್ನು ಹೇಗೆ ಒಟ್ಟುಗೂಡಿಸಬೇಕು ಎಂದು ತಿಳಿದಿರುವ ದೇಶಗಳಿಂದ ಮಾತ್ರವೇ ಪರಿಹಾರ ಸಿಗಲು ಸಾಧ್ಯ ಎಂದರು.

    ಖಾಸಗಿ ಮಾರುಕಟ್ಟೆಯನ್ನು ಪಾಲುದಾರರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. 4 ವಿಭಿನ್ನ ದೇಶಗಳಾಗಿದ್ದರೂ ಮೂಲಸೌಕರ್ಯ ಅಭಿವೃದ್ಧಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪರಿಸರದ ಮೇಲೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವುದು ಸೇರಿದಂತೆ ನಾವೆಲ್ಲರೂ ಒಂದೇ ಗುರಿಯನ್ನು ಹೊಂದಿದ್ದೇವೆ ಎಂಬುದು ಸ್ಪಷ್ಟವಾಗಿದೆ ಎಂದು ಇಸ್ರೇಲ್ ಪ್ರಧಾನಿ ತಿಳಿಸಿದರು.

    ಒಟ್ಟಿನಲ್ಲಿ I2U2 ಮೊದಲ ನಾಯಕರ ಸಭೆಯಲ್ಲಿ ಭಾರತ, ಇಸ್ರೇಲ್, ಅಮೆರಿಕ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್ ದೇಶಗಳು ಜಂಟಿಯಾಗಿ ನೀರು, ಶಕ್ತಿ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ ಹಾಗೂ ಆಹಾರಕ್ಕಾಗಿ ಹೂಡಿಕೆ ಮಾಡುವ ಬಗ್ಗೆ ನಿರ್ಧರಿಸಿವೆ.

    Live Tv
    [brid partner=56869869 player=32851 video=960834 autoplay=true]

  • ರಷ್ಯಾ ವಿದೇಶಾಂಗ ಸಚಿವನ ವಿವಾದಿತ ಹೇಳಿಕೆ – ಇಸ್ರೇಲ್ ಪ್ರಧಾನಿಗೆ ಪುಟಿನ್ ಕ್ಷಮೆ

    ರಷ್ಯಾ ವಿದೇಶಾಂಗ ಸಚಿವನ ವಿವಾದಿತ ಹೇಳಿಕೆ – ಇಸ್ರೇಲ್ ಪ್ರಧಾನಿಗೆ ಪುಟಿನ್ ಕ್ಷಮೆ

    ಮಾಸ್ಕೋ: ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್ ಲಾವ್ರೋನ ವಿವಾದಿತ ಹೇಳಿಕೆಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಕ್ಷಮೆ ಕೋರಿದ್ದಾರೆ.

    ನಫ್ತಾಲಿ ಬೆನೆಟ್ ಉಕ್ರೇನ್ ಮೇಲಿನ ತಮ್ಮ ಕಾರ್ಯಾಚರಣೆ ಕುರಿತು ವಿವರಿಸುವ ಸಂದರ್ಭ ಹಿಟ್ಲರ್ ಯಹೂದಿ ಪರಂಪರೆಯನ್ನು ಹೊಂದಿದ್ದ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ಸಂಬಂಧ ಹದಗೆಡಬಾರದೆಂದು ಪುಟಿನ್ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ನಮಗೆ ನಿಮ್ಮ ಸಲಹೆ ಬೇಡ: ನೆದರ್ಲೆಂಡ್‌ಗೆ ತಿರುಗೇಟು ನೀಡಿದ ಭಾರತ

    ಸರ್ಗೇಯ್ ಲಾವ್ರೋ ಸಂದರ್ಶನವೊಂದರಲ್ಲಿ ಯುದ್ಧದ ಬಗ್ಗೆ ರಷ್ಯಾದ ನಿಲುವನ್ನು ವಿವರಿಸುತ್ತಿರುವಾಗ ಹಿಟ್ಲರ್‌ನಲ್ಲಿ ಯಹೂದಿಗಳ ರಕ್ತವಿತ್ತು ಎಂದು ವಿವಾದಿತ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಗೆ ಇಸ್ರೇಲ್ ಸೇರಿದಂತೆ ಹಲವಾರು ಪಾಶ್ಚಿಮಾತ್ಯ ದೇಶಗಳು ಲಾವ್ರೋ ಹೇಳಿಕೆಯನ್ನು ಖಂಡಿಸಿದ್ದವು. ಇದನ್ನೂ ಓದಿ: ಟ್ವಿಟ್ಟರ್‌ಗೆ ಎಲಾನ್‌ ಮಸ್ಕ್‌ ತಾತ್ಕಾಲಿಕ CEO?

    ಇಸ್ರೇಲ್ ತನ್ನ 74ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆನೆಟ್ ಹಾಗೂ ಪುಟಿನ್ ನಡುವೆ ಮಾತುಕತೆ ನಡೆದಿದ್ದು, ಈ ವೇಳೆ ಪುಟಿನ್ ಕ್ಷಮೆ ಕೋರಿದ್ದಾರೆ. ರಷ್ಯಾ ಹಾಗೂ ಇಸ್ರೇಲ್ ಉತ್ತಮ ಸಂಬಂಧ ಹೊಂದಿದ್ದು, ಬೆನೆಟ್ ಮಾಸ್ಕೋ ಪ್ರವಾಸದಲ್ಲಿ ಉಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.

  • ಏಪ್ರಿಲ್ 28 ರಂದು ಇಸ್ರೇಲ್‍ನಲ್ಲಿ ಬಿಡುಗಡೆಯಾಗಲಿದೆ ‘ದಿ ಕಾಶ್ಮೀರ್ ಫೈಲ್ಸ್’

    ಏಪ್ರಿಲ್ 28 ರಂದು ಇಸ್ರೇಲ್‍ನಲ್ಲಿ ಬಿಡುಗಡೆಯಾಗಲಿದೆ ‘ದಿ ಕಾಶ್ಮೀರ್ ಫೈಲ್ಸ್’

    ಬಾಲಿವುಡ್‍ನ ಈ ವರ್ಷದ ಸೂಪರ್ ಹಿಟ್ ಮೂವೀ ‘ದಿ ಕಾಶ್ಮೀರ್ ಫೈಲ್ಸ್’. ಈ ಸಿನಿಮಾ ರಿಲೀಸ್ ಆದಾಗಿನಿಂದ ಒಂದಲ್ಲ ಒಂದು ವಿವಾದ ಸೃಷ್ಟಿಯಾಗುತ್ತಿದೆ. ಆದರೂ ಅದನ್ನೆಲ್ಲ ಮೀರಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಎಲ್ಲರ ಮುಂದೆ ನಿಂತಿದೆ. ಅಲ್ಲದೇ ಈ ಸಿನಿಮಾಗೆ ರಾಜಕೀಯ ಮುಖಂಡರಿಂದಲ್ಲೇ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಚಿತ್ರತಂಡ ಮತ್ತೊಂದು ಖುಷಿಯಲ್ಲಿದೆ.

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕೇವಲ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿದ್ದು, ಬೇರೆ ಭಾಷೆಗಳಲ್ಲಿಯೂ ಡಬ್ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿದೆ. ಈ ನಡುವೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಇಸ್ರೇಲ್‍ನಲ್ಲಿ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಏಪ್ರಿಲ್ 28ರಂದು ಈ ಸಿನಿಮಾ ಇಸ್ರೇಲ್‍ನಲ್ಲಿ ರಿಲೀಸ್ ಆಗುತ್ತಿದೆ. ಈ ಸಂತೋಷದ ವಿಷಯವನ್ನು ಚಿತ್ರತಂಡ ಅಭಿಮಾನಿಗಳಿಗೆ ತಿಳಿಸಿದ್ದು, ಅವರು ಫುಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ:  ಖ್ಯಾತ ನಿರ್ದೇಶಕ ಎನ್.ಟಿ.ರಾಮರಾವ್ ವಿಧಿವಶ 

    ಕಾಶ್ಮೀರ ಪಂಡಿತರ ಹತ್ಯಾಕಾಂಡದ ಘಟನೆಯನ್ನು ಇಟ್ಟುಕೊಂಡು ಮಾಡಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ದೇಶಾದ್ಯಂತ ಸಾಕಷ್ಟು ಸಂಚಲನ ಮೂಡಿಸಿತ್ತು. ಸ್ವತಃ ಕೇಂದ್ರ ಸರ್ಕಾರವೇ ಈ ಸಿನಿಮಾದ ಬೆನ್ನಿಗೆ ನಿಂತು ಜನರಿಗೆ ತಲುಪವಲ್ಲಿ ಸಹಕರಿಸಿತ್ತು. ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಈ ಸಿನಿಮಾಗೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದವು. ಅಲ್ಲದೇ, ಕೆಲ ಸಂಘಟನೆಗಳು ಕೂಡ ಸ್ವಯಂ ಪ್ರೇರಿತರಾಗಿ ಈ ಸಿನಿಮಾವನ್ನು ಜನರಿಗೆ ತೋರಿಸಿದರು.

  • ಜೆರುಸಲೇಮ್ ಮಸೀದಿಯಲ್ಲಿ ಹಿಂಸಾಚಾರ – 150ಕ್ಕೂ ಹೆಚ್ಚು ಮಂದಿಗೆ ಗಾಯ

    ಜೆರುಸಲೇಮ್ ಮಸೀದಿಯಲ್ಲಿ ಹಿಂಸಾಚಾರ – 150ಕ್ಕೂ ಹೆಚ್ಚು ಮಂದಿಗೆ ಗಾಯ

    ಜೆರುಸಲೇಮ್: ಶುಕ್ರವಾರ ಜೆರುಸಲೇಮ್‌ನ ಅಲ್-ಅಕ್ಸಾ ಮಸೀದಿ ಆವರಣದಲ್ಲಿ ಪ್ಯಾಲಸ್ಟೈನ್ ಮಂದಿ ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

    ಇಸ್ರೇಲ್ ಹಾಗೂ ಪ್ಯಾಲೆಸ್ಟಿನ್ ಸಂಘರ್ಷ ತಲೆಮಾರುಗಳಷ್ಟು ಹಳೆಯ ಇತಿಹಾಸ ಹೊಂದಿದೆ. ಶುಕ್ರವಾರ ನಡೆದ ಘಟನೆಯಿಂದಾಗಿ ಹಿಂಸಾಚಾರ ಇನ್ನೂ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ. ಇದನ್ನೂ ಓದಿ: 6 ತಿಂಗಳ ಬಾಹ್ಯಾಕಾಶ ಯಾನ ಮುಗಿಸಿ ಬರಲಿದ್ದಾರೆ ಭಾರತೀಯ ಮೂಲದ ಗಗನಯಾತ್ರಿ

    ಶುಕ್ರವಾರ ನಡೆದ ಘರ್ಷಣೆಯಲ್ಲಿ ರಬ್ಬರ್ ಬುಲೆಟ್, ಸ್ಟನ್ ಗ್ರೆನೇಡ್, ಲಾಠಿ ಏಟಿನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಲಸ್ಟೈನ್‌ನವರು ಗಾಯಗೊಂಡಿದ್ದಾರೆ ಎಂದು ರೆಡ್ ಕ್ರೆಸೆಂಟ್ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ – ಭಾರತದಿಂದ ಈಜಿಪ್ಟ್‌ಗೆ ರಫ್ತು ಆಗಲಿದೆ ಗೋಧಿ

    ಅಲ್-ಅಕ್ಸಾ ಮಸೀದಿ ಆವರಣ ಪೂರ್ವ ಜೆರುಸೆಲೇಮ್‌ನ ಓಲ್ಡ್ ಸಿಟಿ ಪ್ರದೇಶದಲ್ಲಿದೆ. ಇದನ್ನು ಇಸ್ರೇಲ್ 1967ರಲ್ಲಿ ಯುದ್ಧದಲ್ಲಿ ವಶಪಡಿಸಿಕೊಂಡಿದೆ.

    ಕಳೆದ 2 ವಾರಗಳ ಹಿಂದೆ ನಡೆದ ಇಸ್ರೇಲ್‌ನ ಅರಬ್ ಸ್ಟ್ರೀಟ್ ದಾಳಿಯ ಬಳಿಕ ದೇಶಾದ್ಯಂತ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದೆ.

  • ಏಪ್ರಿಲ್‍ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಇಸ್ರೇಲ್ ಪ್ರಧಾನಿ

    ಏಪ್ರಿಲ್‍ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಇಸ್ರೇಲ್ ಪ್ರಧಾನಿ

    ನವದೆಹಲಿ: ಇಂಡೋ-ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 30ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ.

    ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ 2022ರ ಏಪ್ರಿಲ್ 2ರಂದು ಭಾರತಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ನಫ್ತಾಲಿ ಬೆನೆಟ್ ಅವರು ವಿದೇಶಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಭೇಟಿಯು ಎರಡು ದೇಶಗಳ ನಾಯಕರ ನಡುವಿನ ಪ್ರಮುಖ ಸಂಪರ್ಕವನ್ನು ಪುನರುಚ್ಚರಿಸುತ್ತದೆ ಮತ್ತು ಇಸ್ರೇಲ್ ಮತ್ತು ಭಾರತದ ನಡುವಿನ ಸಂಬಂಧಗಳ ಸ್ಥಾಪನೆಯ 30 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

    ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಮೈತ್ರಿಯನ್ನು ಮುನ್ನಡೆಸುವುದು. ಬಲಪಡಿಸುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ. ಬೆನೆಟ್ ಮತ್ತು ಮೋದಿ ಅವರು ನಾವೀನ್ಯತೆ, ಆರ್ಥಿಕತೆ, ಸಂಶೋಧನೆ ಮತ್ತು ಅಭಿವೃದ್ಧಿ, ಕೃಷಿ ಮತ್ತು ಹೆಚ್ಚಿನವು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ. ಇದನ್ನೂ ಓದಿ: ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ

  • ಪೆಗಾಸಸ್‌ ಕುತಂತ್ರಾಂಶ ಖರೀದಿಗೆ ಆಫರ್‌ ಬಂದಿತ್ತು, ನಾವು ರಿಜೆಕ್ಟ್‌ ಮಾಡಿದ್ದೆವು: ಕೇಂದ್ರಕ್ಕೆ ಚಾಟಿ ಬೀಸಿದ ಬ್ಯಾನರ್ಜಿ

    ಪೆಗಾಸಸ್‌ ಕುತಂತ್ರಾಂಶ ಖರೀದಿಗೆ ಆಫರ್‌ ಬಂದಿತ್ತು, ನಾವು ರಿಜೆಕ್ಟ್‌ ಮಾಡಿದ್ದೆವು: ಕೇಂದ್ರಕ್ಕೆ ಚಾಟಿ ಬೀಸಿದ ಬ್ಯಾನರ್ಜಿ

    ಕೋಲ್ಕತ್ತಾ: ಪೆಗಾಸಸ್‌ ಸ್ಪೈವೇರ್‌ ಕುತಂತ್ರಾಂಶ ಖರೀದಿಸುವಂತೆ ಐದು ವರ್ಷಗಳ ಹಿಂದೆಯೇ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ನವರು ನಮ್ಮ ಬಳಿ ಬಂದಿದ್ದರು. ಆದರೆ ನಾವು ಅದನ್ನು ನಿರಾಕರಿಸಿದ್ದೆವು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸ ಬಾಂಬ್‌ ಸಿಡಿಸಿದ್ದಾರೆ.

    ಪೆಗಾಸಸ್‌ ಕುತಂತ್ರಾಂಶ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ, ಟೀಕೆಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ಅಚ್ಚರಿದಾಯಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸಚಿವರನ್ನು ಜೈಲಿನಿಂದ ಬಿಡುಗಡೆ ಮಾಡಲು 3 ಕೋಟಿಗೆ ಬೇಡಿಕೆ- ಪುತ್ರನಿಂದ ದೂರು ದಾಖಲು

    ಕಳೆದ ಐದು ವರ್ಷಗಳ ಹಿಂದೆಯೇ 25 ಕೋಟಿ ರೂ.ಗೆ ಪೆಗಾಸಸ್‌ ತಂತ್ರಾಂಶ ಖರೀದಿಸುವಂತೆ ಎನ್‌ಎಸ್‌ಒ ಗ್ರೂಪ್‌ ನಮ್ಮ ಪೊಲೀಸ್‌ ಇಲಾಖೆಗೆ ಆಫರ್‌ ನೀಡಿತ್ತು. ಆದರೆ ನಾವು ಅದನ್ನು ತಿರಸ್ಕರಿಸಿದೆವು. ಸ್ಪೈವೇರ್‌ ಅನ್ನು ರಾಜಕೀಯವಾಗಿ ಬಳಸಿಕೊಳ್ಳಬಹುದಿತ್ತು. ನ್ಯಾಯಾಧೀಶರು, ಪತ್ರಕರ್ತರು, ಅಧಿಕಾರಿಗಳನ್ನು ಇದಕ್ಕೆ ಗುರಿಯಾಗಿಸಬಹುದು ಎಂಬುದು ಸ್ವೀಕಾರಾರ್ಹವಲ್ಲ ಎಂದು ನಾವು ಈ ಆಫರ್‌ ತಿರಸ್ಕರಿಸಿದ್ದೆವು ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

    ಪತ್ರಕರ್ತರು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಇತರರ ಫೋನ್‌ಗಳನ್ನು ಗುರಿಯಾಗಿಸಲು ಮಿಲಿಟರಿ ದರ್ಜೆಯ ಇಸ್ರೇಲಿ ಸ್ಪೈವೇರ್ ಅನ್ನು ಬಳಸುತ್ತಿದ್ದಾರೆ ಎಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಬ್ಯಾನರ್ಜಿ ಅವರು ಟೀಕಿಸಿದ್ದರು. ಇದನ್ನೂ ಓದಿ: ಯಾರೇ ಲಂಚ ಕೇಳಿದರೂ ಆಡಿಯೋ – ವೀಡಿಯೋ ನನಗೇ ಕಳುಹಿಸಿ: ಪಂಜಾಬ್ ಸಿಎಂ

    ಕಳೆದ ವರ್ಷ ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಪೆಗಾಸಸ್ ಸ್ಪೈವೇರ್‌ ವಿವಾದದ ಬಗ್ಗೆ ತನಿಖೆಗೆ ಬಂಗಾಳ ಸರ್ಕಾರ ಆದೇಶಿಸಿತ್ತು. ಹಾಗೆ ಮಾಡಿದ ಮೊದಲ ರಾಜ್ಯ ಪಶ್ಚಿಮ ಬಂಗಾಳ. ಆಯೋಗದ 3ನೇ ಪರಿಚ್ಛೇದ ನೀಡಿರುವ ಅಧಿಕಾರವನ್ನು ಚಲಾಯಿಸಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ, ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಲೋಕೂರ್ ಮತ್ತು ಕೋಲ್ಕತ್ತಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ನಿವೃತ್ತ ನ್ಯಾಯಮೂರ್ತಿ ಜ್ಯೋತಿರ್ಮಯ್ ಭಟ್ಟಾಚಾರ್ಯ ಅವರನ್ನು ಒಳಗೊಂಡ ತನಿಖಾ ಆಯೋಗವನ್ನು ನೇಮಿಸಲು ಸಂಪುಟ ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳ ರಾಜ್ಯದ ಅನೇಕರ ಮೊಬೈಲ್ ಫೋನ್‌ಗಳ ಅಕ್ರಮ ಹ್ಯಾಕಿಂಗ್, ಮೇಲ್ವಿಚಾರಣೆ, ಕಣ್ಗಾವಲು, ಟ್ರ್ಯಾಕಿಂಗ್, ರೆಕಾರ್ಡಿಂಗ್ ಇತ್ಯಾದಿಗಳ ವಿಷಯದಲ್ಲಿ ವ್ಯಾಪಕವಾಗಿ ವರದಿಯಾಗಿದೆ ಎಂದು ಆಗ ಬ್ಯಾನರ್ಜಿ ಹೇಳಿದ್ದರು.

  • ರಷ್ಯಾ, ಉಕ್ರೇನ್ ಯುದ್ಧ – ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರಲು ಪುಟಿನ್‌ಗೆ ಝೆಲೆನ್ಸ್ಕಿ ಕರೆ

    ರಷ್ಯಾ, ಉಕ್ರೇನ್ ಯುದ್ಧ – ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರಲು ಪುಟಿನ್‌ಗೆ ಝೆಲೆನ್ಸ್ಕಿ ಕರೆ

    ಕೀವ್: ಭೀಕರ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್‌ಗೆ ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರುವಂತೆ ಕರೆ ನೀಡಿದ್ದಾರೆ.

    ಉಕ್ರೇನ್-ರಷ್ಯಾ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಮಾತುಕತೆ ನಡೆಸಿ ಪರಿಹರಿಸಲು ಝೆಲೆನ್ಸ್ಕಿ, ಪುಟಿನ್‌ಗೆ ಆಫರ್ ನೀಡಿದ್ದು, ಇದರಲ್ಲಿ ಮಧ್ಯವರ್ತಿಯಾಗಿ ಮಾತುಕತೆ ಮುನ್ನಡೆಸಲು ಝೆಲೆನ್ಸ್ಕಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಮನವಿಯಿಟ್ಟಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ 200 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದ ಅಮೆರಿಕ

    ವರದಿಗಳ ಪ್ರಕಾರ ಝೆಲೆನ್ಸ್ಕಿ ಸಂಘರ್ಷವನ್ನು ಪರಿಹರಿಸಲು ರಷ್ಯಾ ಅಥವಾ ಉಕ್ರೇನ್‌ನಲ್ಲಿ ಮಾತುಕತೆ ನಡೆಸುವುದು ಸೂಕ್ತವಲ್ಲ. ಹೀಗಾಗಿ ನಾನು ಇಸ್ರೇಲ್‌ನ ಜೆರುಸಲೇಮ್ ಅನ್ನು ಆಯ್ದುಕೊಂಡಿದ್ದೇನೆ. ಎರಡು ಶತ್ರು ರಾಷ್ಟ್ರಗಳ ಮಾತುಕತೆಗೆ ಮಧ್ಯವರ್ತಿಯಾಗಲು ಬೆನೆಟ್‌ಗೆ ತಿಳಿಸಿದ್ದೇನೆ ಎಂದಿದ್ದಾರೆ.

    ನಿನ್ನೆ ಇಸ್ರೇಲ್ ಪ್ರಧಾನಿ ಎರಡು ರಾಷ್ಟ್ರಗಳ ಮಧ್ಯವರ್ತಿಯಾಗಿ ಭಾಗವಹಿಸಿದ್ದು, ಈ ಹಿಂದೆಯೂ ಪುಟಿನ್ ಹಾಗೂ ಝೆಲೆನ್ಸ್ಕಿಯೊಂದಿಗೆ ಪ್ರತ್ಯೇಕವಾಗಿ ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನನ್ನು ವಶಪಡಿಸಿಕೊಳ್ಳುವಷ್ಟು ಶಕ್ತಿ ರಷ್ಯಾಕ್ಕಿಲ್ಲ: ಝೆಲೆನ್ಸ್ಕಿ

    ಉಕ್ರೇನ್-ರಷ್ಯಾ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್‌ನ 1,300ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದು, ರಷ್ಯಾದ ಸೈನಿಕರ ಸಾವಿನ ಸಂಖ್ಯೆ ಇದಕ್ಕಿಂತಲೂ ಹೆಚ್ಚಿದೆ ಎಂದು ಉಕ್ರೇನ್ ತಿಳಿಸಿದೆ. ರಷ್ಯಾ ಉಕ್ರೇನ್‌ನ ಅತೀ ಹೆಚ್ಚು ಜನಸಂಖ್ಯೆಯಿರುವ ನಗರ ಮೆಲಿಟೊಪೊಲ್ ಅನ್ನು ಶನಿವಾರ ವಶಪಡಿಸಿಕೊಂಡಿದೆ. ರಷ್ಯಾ ಉಕ್ರೇನ್‌ನ ನಾಗರಿಕರ ಮೇಲೂ ದಾಳಿ ನಡೆಸುತ್ತಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರೂ ಸಾವನ್ನಪ್ಪುತ್ತಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.

  • ಇಸ್ರೇಲ್ ಮಾದರಿ ಕೃಷಿಯಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭ: ಶೋಭಾ ಕರಂದ್ಲಾಜೆ

    ಇಸ್ರೇಲ್ ಮಾದರಿ ಕೃಷಿಯಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭ: ಶೋಭಾ ಕರಂದ್ಲಾಜೆ

    ಮಂಗಳೂರು: ಇಸ್ರೇಲ್ ಮಾದರಿ ಕೃಷಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಇಸ್ರೇಲ್ ಮಾದರಿ ಕೃಷಿಯಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭವಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

    ರಾಜ್ಯಮಟ್ಟದ ಕೃಷಿ ಸಮ್ಮೇಳನ ಮಂಗಳೂರಿನ ಮುಲ್ಕಿ ಸಂಜೆ ಶ್ರೀರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಕೃಷಿ ಸಿರಿ-2022 ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಸಭಾ ಕಾರ್ಯಕ್ರಮವನ್ನು ತುಳಸಿ ಗಿಡಕ್ಕೆ ನೀರೆರೆದು ತುಳುನಾಡಿನ ಸಾಂಪ್ರದಾಯಿಕ ಬಲಿಂದ್ರ ಕಂಬಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಇದನ್ನೂ ಓದಿ: ತಂತ್ರಜ್ಞಾನ ಈಗ ಭದ್ರತಾ ವ್ಯವಸ್ಥೆಯಲ್ಲಿ ಸಂಭಾವ್ಯ ಅಸ್ತ್ರವಾಗಿದೆ: ಮೋದಿ

    ಕೃಷಿ ಮೇಳ ಉದ್ಘಾಟಿಸಿ ಮಾತಾಡಿದ ಶೋಭಾ ಕರಂದ್ಲಾಜೆ, ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಕೃಷಿಗೆ ಹೆಸರುವಾಸಿಯಾಗಿತ್ತು. ನಮ್ಮ ಆಹಾರ, ತರಕಾರಿಯನ್ನು ನಾವೇ ಉತ್ಪಾದನೆ ಮಾಡುತ್ತಿದ್ದೆವು. ಆದರೆ ಈಗ ತಿರುಗಿ ನೋಡಿದರೆ ನಾವು ಒಂದು ಹಿಡಿ ಭತ್ತಕ್ಕಾಗಿ ಬೇರೆ ಜಿಲ್ಲೆಯನ್ನು ಅವಲಂಬನೆ ಮಾಡಿದರೆ ತರಕಾರಿಗಾಗಿ ಘಟ್ಟವನ್ನು ಆಶ್ರಯಿಸಿದ್ದೇವೆ. ನಮ್ಮ ಭತ್ತದ ಗದ್ದೆಯನ್ನು ಹಡಿಲು ಬಿಟ್ಟು ಕೃಷಿ ಲಾಭವಿಲ್ಲ ಎಂದು ಬೇರೆ ಉದ್ಯೋಗವನ್ನು ಅರಸಿಕೊಂಡೆವು. ಕಳೆದ ಎರಡು ವರ್ಷಗಳ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಊರಿಗೆ ವಾಪಾಸ್ ಆದ ಅನೇಕ ಕೃಷಿಕರು ಮತ್ತೆ ಹಡಿಲು ಗದ್ದೆಯಲ್ಲಿ ಕೃಷಿ ಚಟುವಟಿಕೆ ಕೈಗೊಂಡೆವು. ಇದು ಖುಷಿಯ ವಿಚಾರ. ಯುವಕರು ಮತ್ತೆ ಕೃಷಿಯತ್ತ ನೋಡುತ್ತಿರುವ ಈ ವೇಳೆಯಲ್ಲಿ ಯುವಕರಲ್ಲಿ ಕೃಷಿ ಮೇಳದಂತಹ ಕಲ್ಪನೆ ಹುಟ್ಟುವ ಮೂಲಕ ಇಂದಿಲ್ಲಿ ಸಾಕಾರಗೊಳ್ಳುತ್ತಿದೆ ಎಂದರು. ಇದನ್ನೂ ಓದಿ: ಅಷ್ಟು ದೂರದಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದರೂ ಸರ್ಕಾರ ಏನೂ ಮಾಡಿಲ್ಲ ಅಂತಿದ್ದಾರೆ: ಸೂರ್ಯ ಅಸಮಾಧಾನ

    ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ರೈತರು ಸ್ವಾವಲಂಬಿಯಾಗಬೇಕು. ರೈತವರ್ಗ ಮತ್ತೆ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ಬಯಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರು ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿಲ್ಲ. ಇದಕ್ಕಾಗಿ ಬೀಜ ಮತ್ತು ಗೊಬ್ಬರ ಖರೀದಿಗೆಂದು ವಾರ್ಷಿಕ 6 ಸಾವಿರ ರೂ. ಅನ್ನು ರೈತರ ಖಾತೆಗೆ ಜಮಾ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಇಸ್ರೇಲ್ ಮಾದರಿ ಕೃಷಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಪಾಲಿ ಹೌಸ್, ಗ್ರೀನ್ ಹೌಸ್ ಫಾರ್ಮಿಂಗ್ ಮೂಲಕ ಕಡಿಮೆ ಕೀಟನಾಶಕ ಬಳಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು. ಸಾವಯವ ಕೃಷಿಗೆ ಇಂದು ಪ್ರಪಂಚದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಮಣಿಪುರ, ನಾಗಾಲ್ಯಾಂಡ್, ತ್ರಿಪುರ ಮತ್ತಿತರ ಸಣ್ಣಪುಟ್ಟ ರಾಜ್ಯಗಳಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಮಹತ್ವವಿದ್ದು ಅಲ್ಲಿನ ರೈತರ ಬೆಳೆಗಳನ್ನು ಖರೀದಿ ಮಾಡಲು ಅಮೆರಿಕ ಮತ್ತಿತರ ದೇಶಗಳಿಂದ ಕಂಪೆನಿಗಳು ಬರುತ್ತವೆ. ಇಂತಹ ಲಾಭದಾಯಕ ಕೃಷಿ ಕುರಿತು ನಾವಿಂದು ಚಿಂತಿಸಬೇಕಿದೆ ಎಂದು ಮಾಹಿತಿ ಹಂಚಿಕೊಂಡರು.

    ಈ ಹಿಂದೆ 2013-14ರಲ್ಲಿ ದೇಶದಲ್ಲಿ 70% ಜನ ಕೃಷಿ ಆಧರಿಸಿದ್ದರೂ ಅಂದಿನ ಸರ್ಕಾರ ಬಜೆಟ್‍ನಲ್ಲಿ ಕೃಷಿಗಾಗಿ ಇಟ್ಟಿದ್ದು 23,000 ಕೋಟಿ ರೂ. ಮಾತ್ರ. ಈ ವರ್ಷ ಬಜೆಟ್‍ನಲ್ಲಿ ಕೃಷಿಗಾಗಿ 1.33 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ. ಐಟಿ ಕಲಿತವರಿಗೆ ಕೃಷಿ ಮಾಡಿ ಎಂದರೆ ಮಾಡಲ್ಲ ಅದರ ಬದಲು ಕೃಷಿ ಎಕ್ಸ್‌ಪೋರ್ಟ್‌ ಕೃಷಿ ಮಾರ್ಕೆಟ್, ಕೃಷಿ ಬ್ಯುಸಿನೆಸ್, ಫುಡ್ ಪ್ರೋಸೆಸಿಂಗ್ ಇತ್ಯಾದಿ ಮಾಡಲು ಪ್ರೆರೇಪಿಸಿ. ಯುವಜನತೆ ಇಂತಹ ಉದ್ಯಮಗಳಲ್ಲಿ ತೊಡಗಿಕೊಂಡರೆ ದೇಶದ ಕೃಷಿ ಸ್ವಾವಲಂಬಿಯಾಗಲು ಸಾಧ್ಯವಿದೆ. ಕೊರೊನಾದಿಂದಾಗಿ ಇಂದು ದೇಶದ ಕೃಷಿ ಎಕ್ಸ್‌ಪೋರ್ಟ್‌ನಲ್ಲಿ 9 ನೇ ಸ್ಥಾನದಲ್ಲಿದೆ. ನಾವು ಈ ಎಲ್ಲವನ್ನೂ ಪ್ರೇರೇಪಣೆಯಾಗಿ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ದೇಶವನ್ನು ಕೃಷಿಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಸಹಕರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಕ್ರೇನ್‍ನಿಂದ ಬಂದಿರೋದು ಮೋದಿ ಮಗ, ನನ್ನ ಮಗನಲ್ಲ: ವಿದ್ಯಾರ್ಥಿ ತಂದೆ ಕಣ್ಣೀರು

    ಬಳಿಕ ಮಾತಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳೆಪಾಡಿ ಗುತ್ತು, ದೇಶದಲ್ಲಿ 65-70 ಶೇ. ಜನರು ಇಂದಿಗೂ ಕೃಷಿಯನ್ನು ಅವಲಂಬಿಸಿದ್ದಾರೆ. ದೇಶದಲ್ಲಿ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲಾ ಉದ್ಯಮಗಳು ನಿಂತರೂ ಕೃಷಿಕ ಮಾತ್ರ ತನ್ನ ಕೃಷಿಭೂಮಿಯಲ್ಲಿ ನಿರಂತರ ದುಡಿದು ನಮ್ಮ ಹಸಿವನ್ನು ನೀಗಿಸಿದ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಒಂದೆರಡು ಎಕರೆ ಮಾತ್ರ ಕೃಷಿಭೂಮಿ ಹೊಂದಿದ್ದಾರೆ. ಇಸ್ರೇಲ್ ನಂತಹ ಪುಟ್ಟ ರಾಷ್ಟ್ರ ಇಂದು ಕೃಷಿಯಲ್ಲಿ ಪ್ರಗತಿ ಸಾಧಿಸಿದ್ದರೆ ನಮಗೆ ಏಕೆ ಸಾಧ್ಯವಾಗುವುದಿಲ್ಲ. ಕೃಷಿ ಯಾವತ್ತೂ ನಷ್ಟದ ಉದ್ಯಮವಲ್ಲ. ಆದರೆ ನಮಗಿರುವ ಸಣ್ಣ ಕೃಷಿ ಭೂಮಿಯೇ ನಮ್ಮ ಸಮಸ್ಯೆಯಾಗಿದೆ. ಆದರೆ ನಾವು ಎರಡು ತಿಂಗಳು ಕೆಲಸ ಮಾಡಿದರೆ ವರ್ಷದ 12 ತಿಂಗಳು ಊಟ ಮಾಡುತ್ತೇವೆ. ಇದು ಕೃಷಿ ಕ್ಷೇತ್ರದ ಸಾಧನೆ ಎಂದರು.

    ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಬೂಬಕರ್ ಸಿದ್ದಿಕ್ ಹೈನುಗಾರಿಕೆ, ರಘುರಾಮ ಕುಲಾಲ್ ಗುಡಿಕೈಗಾರಿಕೆ, ವಿಶ್ವೇಶ್ವರ ಸಜ್ಜನ ಬಳ್ಳಾರಿ, ನಿತ್ಯಾನಂದ ಕರ್ಕೇರ ಉಡುಪಿ ಮೀನು ಕೃಷಿ, ಶ್ರೀನಿವಾಸ್ ಗಾಣಿಗ ಅವರನ್ನು ಅತಿಥಿಗಳು ಶಾಲು ಹೊದಿಸಿ ಪೇಟಾ ತೊಡಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಕೃಷಿ ಇಲಾಖೆಯ ಎಸ್‍ಎಂಎಎಂ ಯೋಜನೆಯ 8 ಲಕ್ಷ ಸಹಾಯ ಧನದಿಂದ ವಿನಯ ಕೃಷಿ ಬೆಳೆಗಾರರ ಸಂಘಕ್ಕೆ ಟ್ರ್ಯಾಕ್ಟರ್ ವಿತರಣೆ ಮಾಡಲಾಯಿತು.

    ವೇದಿಕೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ, ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಶಾಸಕ ಉಮಾನಾಥ್ ಕೋಟ್ಯಾನ್, ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯಕ್ ಉಳೆಪಾಡಿಗುತ್ತು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಶ್ರೀನಿವಾಸ್ ವಿಶ್ವವಿದ್ಯಾನಿಲಯ ಮಂಗಳೂರು ಇದರ ಉಪಕುಲಪತಿ ಪಿ. ರಮಣ್ ಐತಾಳ್, ಕೃಷಿ ಸಿರಿ ಸಂಚಾಲಕ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಪಟ್ಲ ಫೌಂಡೇಶನ್ ಇದರ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ, ಉದ್ಯಮಿ ಮನೋಹರ್ ಶೆಟ್ಟಿ, ಕೃಷಿ ಸಿರಿ ಸಂಚಾಲಕ ಕೃಷ್ಣ ಶೆಟ್ಟಿ ತಾರೆಮಾರ್, ಕೃಷಿ ಸಿರಿ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಕೃಷಿ ಮೇಳ ಆಯೋಜನೆಯ ಹಿನ್ನೆಲೆ, ರೂಪುರೇಷೆ ಕುರಿತು ಕೃಷಿ ಸಿರಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಪ್ರಸ್ತಾವಿಕ ಮಾತನ್ನಾಡಿದರು. ಕೃಷಿ ಸಿರಿ ಸಂಚಾಲಕ ಪ್ರಶಾಂತ್ ಪೈ ಅತಿಥಿಗಳನ್ನು ಸ್ವಾಗತಿಸಿದರು. ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

  • 290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ

    290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ

    ಜೆರುಸಲೇಮ್: ಸಾಮಾನ್ಯವಾಗಿ ಸ್ಟ್ರಾಬೆರಿ ತೂಕ ಎಷ್ಟಿರುತ್ತದೆ? 10 ರಿಂದ 20 ಗ್ರಾಂ? ಇನ್ನೂ ಹೆಚ್ಚೆಂದರೆ 30 ಗ್ರಾಂ ಇರಬಹುದು. ಆದರೆ ಇಲ್ಲಿ ಒಬ್ಬ ವ್ಯಕ್ತಿ ಬರೋಬ್ಬರಿ 290 ಗ್ರಾಂನ ಸ್ಟ್ರಾಬೆರಿ ಬೆಳೆದು ದಾಖಲೆ ಬರೆದಿದ್ದಾನೆ.

    290 ಗ್ರಾಂ ತೂಕದ ದೈತ್ಯ ಸ್ಟ್ರಾಬೆರಿ ಬೆಳೆದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿರುವ ಘಟನೆ ಇಸ್ರೇಲ್ ದೇಶದ ಕಡಿಮಾ-ಜೋರಾನ್‌ನಲ್ಲಿ ನಡೆದಿದೆ. ಏರಿಯಲ್ ಚಾಹಿ ಈ ದೈತ್ಯ ಸ್ಟ್ರಾಬೆರಿ ಬೆಳೆದ ವ್ಯಕ್ತಿ.

    ಇಸ್ರೆಲ್‌ನ ವ್ಯಕ್ತಿ ಬೆಳೆದಿರುವ ಸ್ಟ್ರಾಬೆರಿ 290 ಗ್ರಾಂ ತೂಗಿದ್ದು, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇದನ್ನು ವಿಶ್ವದ ಅತ್ಯಂತ ಭಾರವಾದ ಸ್ಟ್ರಾಬೆರಿ ಎಂದು ತಿಳಿಸಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಅಲಿಗಢ ಕಾಲೇಜಿನಲ್ಲಿ ಹಿಜಬ್‌ ಬ್ಯಾನ್‌

    ಈ ದೈತ್ಯ ಸ್ಟ್ರಾಬೆರಿಇಲಾನ್ ಪ್ರಬೇಧಕ್ಕೆ ಸೇರಿದ್ದು, ಏರಿಯಲ್‌ನ ಕುಟುಂಬದ ವ್ಯಾಪಾರ ಸಂಸ್ಥೆ ಸ್ಟ್ರಾಬೆರಿ ಇನ್ ದ ಫೀಲ್ಡ್ ಎಂಬಲ್ಲಿಂದ ಬೆಳೆಸಲಾಗಿದೆ. ಇದನ್ನೂ ಓದಿ: ನೀವು ಮನಸ್ಸು ಬದಲಾಯಿಸುವಿರಿ ಎಂಬ ನಂಬಿಕೆ ಇದೆ – ಲಸಿಕೆ ಬಗ್ಗೆ ಜೊಕೊವಿಕ್‍ಗೆ ಪೂನಾವಾಲ ಸಂದೇಶ

    ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ದೈತ್ಯ ಸ್ಟ್ರಾಬೆರಿಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ ಮೊದಲಿಗೆ ಐಫೋನ್ ಎಕ್ಸ್ಆರ್‌ನ ತೂಕವನ್ನು ನೋಡಿ ಬಳಿಕ ಸ್ಟ್ರಾಬೆರಿಯ ತೂಕವನ್ನು ನೋಡಲಾಗಿದೆ. ಐಫೋನ್ ಕೇವಲ 194 ಗ್ರಾಂ ತೂಗಿದೆ. ಬಳಿಕ ಸ್ಟ್ರಾಬೆರಿಯ ಉದ್ದ, ಅಗಲ ಹಾಗೂ ಸುತ್ತಳತೆ ನೋಡಿದ್ದು ಅದು ಕ್ರಮವಾಗಿ 18 ಸೆಂ.ಮೀ, 4 ಸೆಂ.ಮೀ, ಹಾಗೂ 34 ಸೆಂ.ಮೀ ಇರುವುದನ್ನು ತೋರಿಸಲಾಗಿದೆ.

  • ಕೋವಿಡ್‌ನ ಮೂರು ತಳಿಗೂ ತುತ್ತಾದ ಬಾಲಕ!

    ಕೋವಿಡ್‌ನ ಮೂರು ತಳಿಗೂ ತುತ್ತಾದ ಬಾಲಕ!

    ಜೆರುಸಲೇಂ: ಬಾಲಕನೊಬ್ಬ ಕೋವಿಡ್-19ನ ಮೂರು ತಳಿಗಳಿಗೂ ಒಳಗಾಗಿದ್ದ ಪ್ರಕರಣವೊಂದು ದಾಖಲಾಗಿದೆ. ಈ ಅಪರೂಪದ ಪ್ರಕರಣ ಇಸ್ರೆಲ್ ಮೂಲದ 11 ವರ್ಷದ ಬಾಲಕನಲ್ಲಿ ಕಂಡುಬಂದಿದೆ.

    ಅಲೋನ್ ಹೆಲ್ಫ್ಗಾಟ್ ಎಂಬ ಬಾಲಕ ಈ ಹಿಂದೆ ಆಲ್ಫಾ ಹಾಗೂ ಡೆಲ್ಟಾ ಸೋಂಕಿಗೆ ಒಳಗಾಗಿದ್ದ. ಇದೀಗ ಅದೇ ಬಾಲಕನಲ್ಲಿ ಓಮಿಕ್ರಾನ್ ರೂಪಾಂತರಿ ಕಂಡುಬಂದಿದೆ. ಶಾಲೆ ಪ್ರಾರಂಭವಾದಾಗಿನಿಂದ ಬಾಲಕನನ್ನು 3-4 ಬಾರಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಬಿಡೋರ ಲಿಸ್ಟ್, ಬಿಜೆಪಿ ಬಿಡೋರ ಲಿಸ್ಟ್ ನನ್ನ ಬಳಿ ಇದೆ: ಯತ್ನಾಳ್

    ಕಳೆದ 2 ಬಾರಿ ಸೋಂಕು ತಗುಲಿದ್ದಾಗ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರಾಗಿತ್ತು. ಆದರೆ ಈಗ ಅನಾರೋಗ್ಯದ ಅನುಭವ ಆಗುತ್ತಿಲ್ಲ ಎಂದು ಬಾಲಕ ತಿಳಿಸಿದ್ದಾನೆ. ಸದ್ಯ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಲಾಭಕ್ಕಾಗಿ ಮದ್ಯ ಮಾರಾಟಕ್ಕೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ: ಅಣ್ಣಾ ಹಜಾರೆ