Tag: Israel

  • ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ನರೇಂದ್ರ ಮೋದಿ

    ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ನರೇಂದ್ರ ಮೋದಿ

    ನವದೆಹಲಿ/ಟೆಲ್‌ ಅವಿವ್‌: ಕಷ್ಟದ ಸಮಯದಲ್ಲಿ ಇಸ್ರೇಲ್‌ (Israel) ಜೊತೆಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

    ಎಕ್ಸ್‌ನಲ್ಲಿ ಮೋದಿ ಅವರು, ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ.  ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಬಲಿಯಾದ  ಮುಗ್ಧ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಒಳಗೆ ನುಗ್ಗಿದ ಉಗ್ರರು – ಸಾರ್ವಜನಿಕರ ಮೇಲೆ ಗುಂಡಿನ ಮಳೆ

    ಹಮಾಸ್‌ನಿಂದ ದಾಳಿ
    ಪ್ಯಾಲೆಸ್ಟೈನ್ ಹಮಾಸ್ ಉಗ್ರಗಾಮಿಗಳು (Hamas Terrorists) ಗಾಜಾಪಟ್ಟಿಯಿಂದ ಆಪರೇಷನ್ ಅಲ್-ಅಕ್ಸಾ ಫ್ಲಡ್ (Operation Al Aqsa Flood) ಹೆಸರಿನಲ್ಲಿ ನಿದ್ದೆಯಲ್ಲಿ ಮಲಗಿದ್ದ ಇಸ್ರೇಲಿಗರ ಮೇಲೆ 5 ಸಾವಿರ ರಾಕೆಟ್ ಮಳೆಗರೆದಿದ್ದಾರೆ. ಇಸ್ರೇಲ್‌ನ ದಕ್ಷಿಣ ಇಸ್ರೇಲ್, ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಅಪಾರ ಸಾವು-ನೋವಾಗಿದೆ.

    35 ಎಕರೆ ಭೂಭಾಗ ನಮಗೆ ಸೇರಿದ್ದು ಅಂತ ಘೋಷಣೆ ಮೊಳಗಿಸಿದ್ದಾರೆ. ಗಡಿ ಪಟ್ಟಣ ಸ್ಡೆರೊಟ್, ಮುಂದುವರಿಯುತ್ತಾ ರಾಜಧಾನಿ ಟೆಲ್ ಅವಿವ್ ಮೇಲೂ ಹಮಾಸ್ ಉಗ್ರರು ಕ್ಷಿಪಣಿ ದಾಳಿ ಮಾಡಿದ್ದಾರೆ.

    ಈ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನೆ ಕೂಡ ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ಮಾಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್‌ಯಹೂ (Benjamin Netanyahu) ಆಕ್ರೋಶಗೊಂಡಿದ್ದು, ಸ್ವೋರ್ಡ್ ಆಫ್ ಐರನ್ (Sword of Iron) ಹೆಸರಿನಲ್ಲಿ ಆಪರೇಷನ್ ಆರಂಭಿಸಿ, ಪ್ಯಾಲೆಸ್ತೀನ್‌ನ ಹಮಾಸ್ ಮೇಲೆ ಸಮರ ಸಾರಿದ್ದಾರೆ.

    ತನ್ನ ದೇಶದ ಜನತೆ ಸುರಕ್ಷಿತ ಬಂಕರ್‌ಗಳಿಗೆ ತೆರಳುವಂತೆ ಕರೆ ನೀಡಿದ್ದು, ನಮ್ಮನ್ನು ಕೆಣಕಿರುವ ಹಮಾಸ್ ಉಗ್ರರು ತಪ್ಪು ಮಾಡಿದ್ದಾರೆ. ಅವರು ತಕ್ಕ ಬೆಲೆ ತೆರಲೇಬೇಕು ಅಂತ ಗುಡುಗಿದ್ದಾರೆ. ಜೆರುಸಲೇಂನಲ್ಲಿ ದಾಳಿಯ ಸೈರನ್ ಮೊಳಗಿಸಲಾಗಿದೆ. ಹಮಾಸ್ ಬಂಡುಕೋರರ ದಾಳಿಯನ್ನು ವಿಶ್ವದ ರಾಷ್ಟ್ರಗಳು ಖಂಡಿಸಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್ ಒಳಗೆ ನುಗ್ಗಿದ ಉಗ್ರರು – ಸಾರ್ವಜನಿಕರ ಮೇಲೆ ಗುಂಡಿನ ಮಳೆ

    ಇಸ್ರೇಲ್ ಒಳಗೆ ನುಗ್ಗಿದ ಉಗ್ರರು – ಸಾರ್ವಜನಿಕರ ಮೇಲೆ ಗುಂಡಿನ ಮಳೆ

    ಟೆಲ್ ಅವಿವ್: ಇಸ್ರೇಲ್ (Israel) ಮೇಲೆ ದಾಳಿ ನಡೆಸಿರುವ ಹಮಾಸ್ ಉಗ್ರರು (Hamas Militants) ದೇಶದೊಳಗೆ ನುಗ್ಗಿ ಜನರತ್ತ ಗುಂಡು ಹಾರಿಸುತ್ತಿದ್ದಾರೆ. ಇದನ್ನು ಕಟ್ಟಡದ ಮೇಲಿಂದ ವ್ಯಕ್ತಿಯೊಬ್ಬರೂ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರ ಆರ್ಸೆನ್ ಒಸ್ಟ್ರೋವ್ಸ್ಕಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಉಗ್ರಗಾಮಿ ಸಂಘಟನೆ ಹಮಾಸ್ ಉಡಾವಣೆ ಮಾಡಿದ ಸಾವಿರಾರು ರಾಕೆಟ್‍ಗಳು ಇಸ್ರೇಲ್‍ನ ಪಟ್ಟಣಗಳು ಹೊತ್ತಿ ಉರಿಯುವಂತೆ ಮಾಡಿವೆ. ಉಗ್ರರ ದಾಳಿಯ ಬೆನ್ನಲ್ಲೇ ಯುದ್ಧವನ್ನು ಇಸ್ರೇಲ್ ಘೋಷಿಸಿದೆ. ಇದರ ನಡುವೆಯೇ ಉಗ್ರಗಾಮಿಗಳು ದೇಶದ ಕೆಲವು ಪ್ರಮುಖ ನಗರಗಳಿಗೆ ನುಗ್ಗಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿರುವ ಭಾರತೀಯರು ಎಚ್ಚರದಲ್ಲಿರಿ – ರಾಯಭಾರ ಕಚೇರಿ ಸೂಚನೆ

    ಈ ವೇಳೆ ಸಾರ್ವಜನಿಕರ ಮೇಲೆ ಮನಬಂದಂತೆ ಗುಂಡು ಹಾರಿಸುತ್ತಿದ್ದಾರೆ. ಇದನ್ನು ವ್ಯಕ್ತಿಯೋರ್ವ ವೀಡಿಯೋ ಮಾಡಿದ್ದಾನೆ. ಅಲ್ಲದೇ ಅವನೆಡೆಗೆ ಉಗ್ರರು ನೋಡಿದಾಗ ಆತ ಅಡಗಿಕೊಳ್ಳಲು ಓಡಿರುವುದು ಸಹ ವೀಡಿಯೋದಲ್ಲಿ ಕಾಣುತ್ತದೆ.

    ಗಾಜಾದಲ್ಲಿ ಉಗ್ರರು ಇಸ್ರೇಲ್ ಸೈನಿಕರ ಮೃತದೇಹಗಳನ್ನು ರಸ್ತೆಯಲ್ಲಿ ಎಳೆದಾಡಿ ಸಂಭ್ರಮಿಸುತ್ತಿರುವ ವೀಡಿಯೋ ಸಹ ವೈರಲ್ ಆಗುತ್ತಿದೆ. ಇದಕ್ಕೂ ಮೊದಲು ಉಗ್ರರು ಕೇವಲ 20 ನಿಮಿಷಗಳಲ್ಲಿ 5000 ರಾಕೆಟ್‍ಗಳಿಂದ (Rocket Attack) ದಾಳಿ ನಡೆಸಿದ್ದರು. ಇದನ್ನೂ ಓದಿ: ಗಾಜಾಪಟ್ಟಿಯಿಂದ 5,000 ರಾಕೆಟ್ ದಾಳಿ – ಯುದ್ಧ ಘೋಷಿಸಿದ ಇಸ್ರೇಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್‌ನಲ್ಲಿರುವ ಭಾರತೀಯರು ಎಚ್ಚರದಲ್ಲಿರಿ – ರಾಯಭಾರ ಕಚೇರಿ ಸೂಚನೆ

    ಇಸ್ರೇಲ್‌ನಲ್ಲಿರುವ ಭಾರತೀಯರು ಎಚ್ಚರದಲ್ಲಿರಿ – ರಾಯಭಾರ ಕಚೇರಿ ಸೂಚನೆ

    ನವದೆಹಲಿ: ಇಸ್ರೇಲ್‌ನಲ್ಲಿರುವ (Israel) ಭಾರತೀಯರು ಎಚ್ಚರಿಕೆಯಿಂದಿರಿ ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಗಮನ ಹರಿಸಲು ಭಾರತೀಯ ರಾಯಭಾರ ಕಚೇರಿ (Indian Embassy) ಸೂಚನೆ ನೀಡಿದೆ. ಇಸ್ರೇಲ್‌ ಮತ್ತು ಹಮಾಸ್ ಬಂಡುಕೋರರ‌ ನಡುವೆ ಯುದ್ಧ ಘೋಷಣೆಯಾದ ಮೇಲೆ ಈ ಸಲಹೆ ನೀಡಲಾಗಿದೆ.

    ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು (Indians) ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳು ಸೂಚಿಸಿದಂತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು, ಅನಗತ್ಯ ಓಡಾಟ ತಪ್ಪಿಸಬೇಕು ಮತ್ತು ಸುರಕ್ಷತಾ ಆಶ್ರಯಕ್ಕೆ ಹತ್ತಿರದಲ್ಲಿರಿ ಎಂದು ರಾಯಭಾರ ಕಚೇರಿ ಸಲಹೆ ನೀಡಿದೆ. ತುರ್ತು ಸಂದರ್ಭದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್‌ ಕಿರೀಟ ಧರಿಸಿದ ಭಾರತ

    ಘಾಜಾಪಟ್ಟಿಯಿಂದ ಹಮಾಸ್ ಬಂಡುಕೋರರು 5,000 ರಾಕೆಟ್‌ಗಳನ್ನು (Rocket Attack) ಇಸ್ರೇಲ್ ನತ್ತ ಉಡಾಯಿಸಿದ ಬಳಿಕ ಇಸ್ರೇಲ್ ಯುದ್ಧ ಘೋಷಣೆ ಮಾಡಿದೆ. ಹಮಾಸ್ ಬಂಡುಕೋರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿಯಲ್ಲಿನ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಪ್ರತಿ ದಾಳಿ ನಡೆಸಿದೆ. ಜೆರುಸಲೆಂನಲ್ಲಿ ವಾಯು ದಾಳಿ ಸೈರನ್ ಮೊಳಗಿಸಲಾಗಿದೆ. ಇದನ್ನೂ ಓದಿ: ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯ – ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಖಡಕ್ ಸೂಚನೆ

    ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವೀಡಿಯೊ ಹೇಳಿಕೆ ಬಿಡುಗಡೆ ಮಾಡಿ ನಾವು ಯುದ್ಧದಲ್ಲಿದ್ದೇವೆ, ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಶತ್ರುಗಳು ಸೂಕ್ತ ಬೆಲೆ ತೆರಲಿದ್ದಾರೆ ಎಂದು ತಮ್ಮ ನಾಗರಿಕರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನ ಚೀಪ್ ಯೋಜನೆಗಳಿಂದಾಗಿ ಸಿದ್ದರಾಮಯ್ಯನವ್ರು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ: ಸುರೇಶ್ ಗೌಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಾಜಾಪಟ್ಟಿಯಿಂದ 5,000 ರಾಕೆಟ್ ದಾಳಿ – ಯುದ್ಧ ಘೋಷಿಸಿದ ಇಸ್ರೇಲ್

    ಗಾಜಾಪಟ್ಟಿಯಿಂದ 5,000 ರಾಕೆಟ್ ದಾಳಿ – ಯುದ್ಧ ಘೋಷಿಸಿದ ಇಸ್ರೇಲ್

    ಟೆಲ್‌ ಅವಿವ್: ಹಮಾಸ್ ಉಗ್ರರ (Hamas Militants) ನಿಯಂತ್ರಣದಲ್ಲಿರುವ ಗಾಜಾಪಟ್ಟಿಯಿಂದ (Gaza Strip) ಇಸ್ರೇಲ್ (Israel) ಮೇಲೆ ಬರೋಬ್ಬರಿ 5,000 ರಾಕೆಟ್ ದಾಳಿ (Rocket Attack) ಮಾಡಲಾಗಿದ್ದು, ಇದೀಗ ಇಸ್ರೇಲ್ ಯುದ್ಧದ (War) ಘೋಷಣೆ ಮಾಡಿದೆ.

    ಶನಿವಾರ ಮುಂಜಾನೆ ಗಾಜಾಪಟ್ಟಿಯಿಂದ 5,000 ರಾಕೆಟ್‌ಗಳ ದಾಳಿ ನಡೆಸಲಾಗಿದ್ದು, ಹಮಾಸ್ ಬಂಡುಕೋರರು ಇಸ್ರೇಲ್ ಗಡಿಯೊಳಗೆ ನುಗ್ಗಿದ್ದಾರೆ. ಈ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧ ಘೋಷಿಸಿದ್ದಾರೆ.

    ಹಮಾಸ್ ಬಂಡುಕೋರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿಯಲ್ಲಿನ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಪ್ರತಿ ದಾಳಿ ನಡೆಸಿದೆ. ಜೆರುಸಲೆಂನಲ್ಲಿ ವಾಯು ದಾಳಿ ಸೈರನ್ ಮೊಳಗಿಸಲಾಗಿದೆ. ಇದನ್ನೂ ಓದಿ: ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ನಮ್ಮ ಬಲವನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು: ಹೆಚ್.ಆರ್ ರಂಗನಾಥ್

    ಪ್ರಧಾನಿ ಬೆಂಜಮಿನ್ ನೆತನ್ಯಾಹು ಶೀಘ್ರದಲ್ಲಿಯೇ ಭದ್ರತಾ ಮುಖ್ಯಸ್ಥರ ಸಭೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ತನ್ನ ಕೃತ್ಯಗಳಿಗಾಗಿ ಹಮಾಸ್ ಭಾರೀ ಬೆಲೆ ತೆರಬೇಕಾಗಲಿದೆ ಎಂದು ನೆತನ್ಯಾಹು ಸರ್ಕಾರ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ: ಪೂರ್ಣಾವಧಿ ಸಿಎಂ ಪ್ರಶ್ನೆಗೆ ಸಿದ್ದರಾಮಯ್ಯ ಮಾತು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Miracle: ಅಪಘಾತಕ್ಕೀಡಾಗಿ ಬೇರ್ಪಟ್ಟ ತಲೆಯನ್ನು ಜೋಡಿಸಿ ಯಶಸ್ವಿಯಾದ ವೈದ್ಯರು!

    Miracle: ಅಪಘಾತಕ್ಕೀಡಾಗಿ ಬೇರ್ಪಟ್ಟ ತಲೆಯನ್ನು ಜೋಡಿಸಿ ಯಶಸ್ವಿಯಾದ ವೈದ್ಯರು!

    ಜೆರುಸಲೆಂ: ಕೈ, ಕಾಲುಗಳು ಮುರಿದರೆ ಅದನ್ನು ವೈದ್ಯರು ಜೋಡಿಸಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಸ್ರೇಲ್‍ನ ವೈದ್ಯರು (Israel Doctor) ಪವಾಡವೆಂಬಂತೆ ಬಾಲಕನೊಬ್ಬನ ದೇಹಕ್ಕೆ ತಲೆಯನ್ನು (Reattached Boy’s Head) ಜೋಡಿಸುವ ಮೂಲಕ ಭಾರೀ ಸುದ್ದಿಯಾಗುವುದರ ಜೊತೆಗೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಸುಲೈಮನ್ ಹಾಸನ್ (Suleiman Hassan) ಎಂಬ 12 ವರ್ಷದ ಬಾಲಕ ಸೈಕಲ್‍ನಲ್ಲಿ ಹೋಗುತ್ತಿದ್ದ. ಈ ವೇಳೆ ಕಾರು ಅಪಘಾತಕ್ಕೀಡಾಗಿ (Car Accident) ಕುತ್ತಿಗೆ ಮುರಿದುಕೊಂಡಿದ್ದ. ಕೂಡಲೇ ಆತನನ್ನು ಹಡಸ್ಸಾ ವೈದ್ಯಕೀಯ ಕೇಂದ್ರಕ್ಕೆ ವಿಮಾನದಲ್ಲಿ (Airlift) ಸಾಗಿಸಲಾಯಿತು. ಅಲ್ಲಿ ಬಾಲಕನನ್ನು ಪರೀಕ್ಷೆ ನಡೆಸಿದ ವೈದ್ಯರು, ಬಾಲಕನ ತಲೆಯು ಕತ್ತಿನ ಬುಡದಿಂದ ಬಹುತೇಕ ಸಂಪೂರ್ಣವಾಗಿ ಬೇರ್ಪಟ್ಟಿದೆ ಎಂದು ಹೇಳಿದ್ದರು. ತಕ್ಷಣವೇ ಆತನನ್ನು ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು.

    ಚಿಕಿತ್ಸೆಯ ಮೇಲ್ವಿಚಾರಣೆ ವಹಿಸಿದ್ದ ಮೂಳೆ ಶಸ್ತ್ರಚಿಕಿತ್ಸಕ ಡಾ. ಓಹದ್ ಐನಾವ್ ಪ್ರತಿಕ್ರಿಯಿಸಿ, ಶಸ್ತ್ರಚಿಕಿತ್ಸೆ ನಡೆಸಲು ಹಲವಾರು ಗಂಟೆಗಳನ್ನು ತೆಗೆದುಕೊಳ್ಳಲಾಯಿತು. ಮಗುವನ್ನು ಉಳಿಸಿಕೊಳ್ಳಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಬಾಲಕನ ತಲೆಯನ್ನು ಮರು ಜೋಡಣೆ ಮಾಡಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

    ಅಪಘಾತಕ್ಕೀಡಾಗಿದ್ದ ಬಾಲಕ ಕೇವಲ 50% ನಷ್ಟು ಮಾತ್ರ ಬದುಕುಳಿಯುವ ಸಾಧ್ಯತೆಗಳಿತ್ತು. ಆದರೆ ಇದೀಗ ಶಸ್ತ್ರಚಿಕಿತ್ಸೆಯ ಮೂಲಕ ಬಾಲಕನಿಗೆ ಮರು ಜೀವ ಬಂದಿದೆ ಎಂದರೆ ನಿಜಕ್ಕೂ ಇದು ಪವಾಡ ಎಂದು ವೈದ್ಯರು ಬಣ್ಣಿಸಿದರು. ಇದನ್ನೂ ಓದಿ: ಟೆಸ್ಟಿಂಗ್‌ ವೇಳೆ ರಾಕೆಟ್‌ ಎಂಜಿನ್‌ ಸ್ಫೋಟ – ಜಪಾನ್‌ ಬಾಹ್ಯಾಕಾಶ ಸಂಸ್ಥೆಗೆ ಮತ್ತೆ ನಿರಾಸೆ

    ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಇಸ್ರೇಲ್‍ನ ಬೆರಳೆಣಿಕೆಯಷ್ಟು ಮಂದಿ ಮೂಳೆ ಶಸ್ತ್ರಚಿಕಿತ್ಸಕರು ಈ ಪ್ರಯೋಗ ಮಾಡಿದ್ದಾರೆ. ಇದು ಸಾಮಾನ್ಯವಾದ ಸರ್ಜರಿಯಾಗಿರಲಿಲ್ಲ. ಈ ಶಸ್ತ್ರಚಿಕಿತ್ಸೆಯನ್ನು ಮಾಡಲು ಒಬ್ಬ ಸರ್ಜನ್‍ಗೆ ಅತ್ಯದ್ಭುತ ಜ್ಞಾನ ಹಾಗೂ ಅನುಭವವಿರಬೇಕಾಗುತ್ತದೆ ಎಂದರು.

    ಶಸ್ತ್ರಚಿಕಿತ್ಸೆ ಕಳೆದ ತಿಂಗಳು ನಡೆದಿದೆ. ಆದರೆ ಬಾಲಕ ಪೂರ್ತಿ ಹುಷಾರಾಗುವವರೆಗೆ ಇದುವರೆಗೂ ಯಾವುದನ್ನೂ ವೈದ್ಯರು ಬಹಿರಂಗಪಡಿಸಿರಲಿಲ್ಲ. ಸದ್ಯ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಎಲ್ಲರಂತೆ ಆತ ಓಡಾಡುತ್ತಿದ್ದಾನೆ ಎಂದು ಹೇಳಿದರು.

    ಬಾಲಕನ ತಂದೆ ಪ್ರತಿಕ್ರಿಯಿಸಿ, ಮೊದಲು ಮಗನನ್ನು ಬದುಕಿಸಿದ ಆಸ್ಪತ್ರೆಯ ಸರ್ಜನ್‍ಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ವೈದ್ಯರ ವೃತ್ತಿಪರತೆ, ತಂತ್ರಜ್ಞಾನ ಹಾಗೂ ತಕ್ಷಣದ ನಿರ್ಧಾರದಿಂದ ಇಂದು ನನ್ನ ಮಗ ನಮ್ಮ ಕಣ್ಣ ಮುಂದೆ ಓಡಾಡುವಂತಾಗಿದೆ. ಇದಕ್ಕೆಲ್ಲಾ ಕಾರಣಕರ್ತರಾದ ಆಸ್ಪತ್ರೆಯ ಸಿಬ್ಬಂದಿ, ಸರ್ಜನ್‍ಗಳಿಗೆ ನನ್ನ ದೊಡ್ಡ ನಮಸ್ಕಾರ ಎಂದು ಹೇಳುತ್ತಾ ಆನಂದ ಭಾಷ್ಪ ಸುರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಸ್ತೆಯಲ್ಲಿ ಹಿಂಡು ಹಿಂಡಾಗಿ ಹಸುಗಳು – ಭಾರತದ ಭೇಟಿ ಮರೆಯಲಾಗದ ನೆನಪು ಎಂದ ಇಸ್ರೇಲ್ ಅಧಿಕಾರಿ

    ರಸ್ತೆಯಲ್ಲಿ ಹಿಂಡು ಹಿಂಡಾಗಿ ಹಸುಗಳು – ಭಾರತದ ಭೇಟಿ ಮರೆಯಲಾಗದ ನೆನಪು ಎಂದ ಇಸ್ರೇಲ್ ಅಧಿಕಾರಿ

    ನವದೆಹಲಿ: ಇಸ್ರೇಲ್‍ನ (Israel) ಸರ್ಕಾರಿ ಅಧಿಕಾರಿ ಲಿಯರ್ ಹೈಯತ್ ಅವರು ಭಾರತದ ಭೇಟಿ ಅವಿಸ್ಮರಣೀಯ ಎಂಬ ಶೀರ್ಷಿಕೆಯಡಿ ಹಸುಗಳ (Cows) ಗುಂಪಿನ ಫೋಟೋವನ್ನು ಹಂಚಿಕೊಂಡಿದ್ದ ಫೋಟೋ ವೈರಲ್ ಆಗುತ್ತಿದೆ.

    ಅವಿಸ್ಮರಣೀಯ ಭಾರತದ (India) ಭೇಟಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹೈಯತ್ ಸಾಮಾಜಿಕ ಜಾಲತಾಣದಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಚರ್ಚೆ ನಡೆಸುತ್ತಿರುವುದು ಹಾಗೂ ಎರಡನೇ ಫೋಟೋದಲ್ಲಿ ಇಂಡಿಯಾ ಗೇಟ್ ಬಳಿ ನಿಂತಿರುವುದು ಹಾಗೂ ಮೂರನೇ ಫೋಟೋದಲ್ಲಿ ನೆನಪಿನ ಕಾಣಿಕೆಯನ್ನು ಹಿಡಿದಿರುವ ಫೋಟೋ ಇದೆ. ಇದರ ಜೊತೆಗೆ ಇನ್ನೊಂದು ಫೋಟೋವಿದ್ದು, ಅದರಲ್ಲಿ ಹಸುಗಳ ಗುಂಪೊಂದು ಹೋಗುತ್ತಿದೆ. ಇದೀಗ ಫೋಟೋಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಭಾರತಕ್ಕೆ ಮರೆಯಲಾಗದ ಹಾಗೂ ಮಹತ್ವದ ಭೇಟಿಯಿಂದ ಹಿಂತಿರುಗಿ. ಶೀಘ್ರದಲ್ಲೇ ಈ ಅದ್ಭುತ ದೇಶಕ್ಕೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ.. ಆದ್ರೆ ಈ ಷರತ್ತು ಅನ್ವಯ – ಹೆಚ್‌ಡಿಕೆ

    ಒಂದು ಚಿತ್ರದಲ್ಲಿ ರಸ್ತೆಯಲ್ಲಿ ಹಿಂಡು ಹಿಂಡಾಗಿ ಹಸುಗಳು ಹೋಗುತ್ತಿದೆ. ಈ ಫೋಟೋವನ್ನು ನೋಡಿದ ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, ಪ್ರವಾಸಿಗರು ರಸ್ತೆಯಲ್ಲಿ ಹಸುಗಳು ಹೇಗೆ ಆಕರ್ಷವಾಗಿ ಕಾಣುತ್ತವೆ ಎಂಬುದು ತಮಾಷೆಯಾಗಿದೆ ಎಂದು ವ್ಯಂಗ್ಯವಾಡಿದ್ದಾನೆ. ಇನ್ನೊಬ್ಬ ಈತ ಭಾರತವನ್ನು ಟ್ರೋಲ್ ಮಾಡುತ್ತಿದ್ದಾನಾ ಎಂದು ಪ್ರಶ್ನಿಸಿದ್ದಾನೆ. ಇದನ್ನೂ ಓದಿ: ಹುಟ್ಟಿದ ಕೆಲ ಗಂಟೆಗಳಲ್ಲೇ ಶಿಶುವನ್ನು ಕತ್ತು ಹಿಸುಕಿ ಕೊಂದ ಪಾಪಿಗಳು!

  • ಗುಂಡಿನ ದಾಳಿ ನಡೆಸಿ 10 ಪ್ಯಾಲೆಸ್ಟೀನಿಯನ್ನರ ಹತ್ಯೆಗೈದ ಇಸ್ರೇಲ್‌ ಪಡೆ

    ಗುಂಡಿನ ದಾಳಿ ನಡೆಸಿ 10 ಪ್ಯಾಲೆಸ್ಟೀನಿಯನ್ನರ ಹತ್ಯೆಗೈದ ಇಸ್ರೇಲ್‌ ಪಡೆ

    ಟೆಲ್‌ ಅವೀವ್: ಇಸ್ರೇಲ್‌ ಪಡೆಗಳು (Israel Forces) ಪಶ್ಚಿಮ ದಂಡೆಯಲ್ಲಿ ಕಾರ್ಯಾಚರಣೆ ನಡೆಸಿ 10 ಮಂದಿ ಪ್ಯಾಲೆಸ್ಟೀನಿಯನ್ನರನ್ನು (Palestinians) ಹತ್ಯೆ ಮಾಡಿದ್ದಾರೆ. ಇದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಎಂದು ಇಸ್ರೇಲ್‌ ಮಿಲಿಟರಿ ಪಡೆ ಹೇಳಿಕೊಂಡಿದೆ.

    ಉತ್ತರದ ನಗರವಾದ ಜೆನಿನ್‌ನಲ್ಲಿ ಜನನಿಬಿಡ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಲಾಯಿತು. ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ 20 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದಿವಾಳಿ ಪಾಕಿಸ್ತಾನ ರೂಪಾಯಿ ಮೌಲ್ಯ ಪಾತಾಳಕ್ಕೆ- ಆಹಾರ ಪದಾರ್ಥಗಳ ಬೆಲೆ ಮತ್ತಷ್ಟೂ ದುಬಾರಿ.!

    “ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ತಂಡವನ್ನು ಬಂಧಿಸಲು, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಮಯದಲ್ಲಿ ಇಸ್ರೇಲಿ ಪಡೆಗಳು ಗುಂಡಿನ ದಾಳಿ ನಡೆಸಿತು. ಹಲವಾರು ಶತ್ರು ಹೋರಾಟಗಾರರನ್ನು ಹೊಡೆದುರುಳಿಸಿತು ಎಂದು ಮಿಲಿಟರಿ ತಿಳಿಸಿದೆ.

    ಮಿಲಿಟರಿ ದಾಳಿಯ ಸಮಯದಲ್ಲಿ ಮನೆಗಳಿಗೆ ಹಾನಿಯಾಗಿದೆ. ಕಿಟಕಿ, ಬಾಗಿಲು, ಗೋಡೆಗಳು ಹಾನಿಗೊಳಗಾಗಿವೆ ಎಂದು ಜೆನಿನ್ ನಿವಾಸಿ ಉಮ್ ಯೂಸೆಫ್ ಅಲ್-ಸಾವಾಲ್ಮಿ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ – ಬಿಬಿಸಿಯನ್ನು ಸಮರ್ಥಿಸಿಕೊಂಡ ಅಮೆರಿಕ

    ಇಸ್ರೇಲ್‌ ಸೇನಾಪಡೆಯು ಪ್ಯಾಲೆಸ್ಟೀನ್‌ ನಾಗರಿಕರು ಮತ್ತು ಹೋರಾಟಗಾರರು ಗುರಿಯಾಗಿ ದಾಳಿಗಳನ್ನು ನಡೆಸುತ್ತಿದೆ. ಹಲವು ವರ್ಷಗಳಿಂದ ಈ ರೀತಿಯ ದಾಳಿಗಳು ನಡೆಯುತ್ತಿವೆ. ಪ್ಯಾಲೆಸ್ಟೀನ್‌ ನಾಗರಿಕರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಇಸ್ರೇಲ್‌ ಸೇನಾಪಡೆ ಮೇಲೆ ಗಂಭೀರ ಆರೋಪ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಸ್ರೇಲ್ ಚುನಾವಣೆಯಲ್ಲಿ ಗೆದ್ದ ಬೆಂಜಮಿನ್ ನೆತನ್ಯಾಹು – ಪ್ರಧಾನಿ ಮೋದಿ ಅಭಿನಂದನೆ

    ಇಸ್ರೇಲ್ ಚುನಾವಣೆಯಲ್ಲಿ ಗೆದ್ದ ಬೆಂಜಮಿನ್ ನೆತನ್ಯಾಹು – ಪ್ರಧಾನಿ ಮೋದಿ ಅಭಿನಂದನೆ

    ಜೆರುಸಲೇಂ: ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ (Israeli General Elections) ಗೆದ್ದ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ.

    ಈ ಕುರಿತಂತೆ ಹೀಬ್ರೂ (Hebrew) ಭಾಷೆಯಲ್ಲಿ ಟ್ವೀಟ್ ಮಾಡಿರುವ ಮೋದಿ ಅವರು, ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸಲು ನಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ: ಸಚಿವೆ ಉಷಾ ಠಾಕೂರ್

    ಜೊತೆಗೆ ಭಾರತ ಮತ್ತು ಇಸ್ರೇಲ್‍ನ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನೀಡಿದ ಪ್ರಮುಖ ಕೊಡುಗೆಗಾಗಿ ಮೋದಿ ಅವರು, ನಿರ್ಗಮಿಸುತ್ತಿರುವ ಇಸ್ರೇಲಿ ಪ್ರಧಾನಿ ಯೈರ್ ಲ್ಯಾಪಿಡ್ ಅವರಿಗೆ ಕೂಡ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ “ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ನಮ್ಮ ಫಲಪ್ರದ ವಿಚಾರಗಳ ವಿನಿಮಯವನ್ನು ಮುಂದುವರಿಸಲು ನಾನು ಭಾವಿಸುತ್ತೇನೆ ಎಂದು ಸಹ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ದೂದ್ ಪೇಡ ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್

    ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಒಕ್ಕೂಟವು 120 ಸ್ಥಾನಗಳ ಸಂಸತ್ತಿನಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದಿದೆ. ಒಕ್ಕೂಟವು ಗೆದ್ದಿರುವ 120 ಸ್ಥಾನಗಳ ಸಂಸತ್ತಿನಲ್ಲಿ 64 ಸ್ಥಾನಗಳಲ್ಲಿ 32 ಸ್ಥಾನಗಳು ನೆತನ್ಯಾಹು ಅವರ ಪಕ್ಷದ್ದಾಗಿದೆ. ಈ ಮೂಲಕ ಗುರುವಾರ ಪ್ರಕಟವಾದ ಅಂತಿಮ ಚುನಾವಣಾ ಫಲಿತಾಂಶದಲ್ಲಿ ನೆತನ್ಯಾಹು ಮತ್ತು ಅವರ ಅಲ್ಟ್ರಾನ್ಯಾಶನಲಿಸ್ಟ್ ಮಿತ್ರರಾಷ್ಟ್ರಗಳನ್ನು ಮತ್ತೆ ಅಧಿಕಾರಕ್ಕೆ ತಂದಿದೆ.

    Live Tv
    [brid partner=56869869 player=32851 video=960834 autoplay=true]

  • ಇಸ್ರೇಲ್‌ನಲ್ಲಿ ಬರ್ತ್‌ಡೆ ಪಾರ್ಟಿ – ಭಾರತ ಮೂಲದ ಯುವಕ ಕೊಲೆ

    ಇಸ್ರೇಲ್‌ನಲ್ಲಿ ಬರ್ತ್‌ಡೆ ಪಾರ್ಟಿ – ಭಾರತ ಮೂಲದ ಯುವಕ ಕೊಲೆ

    ಜೆರುಸಲೇಂ: ಇಸ್ರೇಲ್‌ಗೆ (Israel) ವಲಸೆ ಹೋಗಿದ್ದ ಈಶಾನ್ಯ ಭಾರತದ ಯುವಕನನ್ನು ಬರ್ತ್‌ಡೆ ಪಾರ್ಟಿ (Birthday Party)ಯಲ್ಲಿ ಆದ ಜಗಳದಲ್ಲಿ ಇರಿದು ಕೊಂದಿರುವ ಘಟನೆ ಇಸ್ರೇಲ್‌ನಲ್ಲಿ ನಡೆದಿದೆ.

    ಇಸ್ರೇಲ್‌ನ ಕ್ರಿಯಾತ್ ಶ್ಮೋನಾ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ಮೃತ ಯುವಕ ಯೋಯೆಲ್ ಲೆಹಿಂಗಾಹೆಲ್ (18) ಎಂದು ಗುರುತಿಸಲಾಗಿದ್ದು, ಒಂದು ವರ್ಷದ ಹಿಂದೆಯಷ್ಟೇ ಈತ ಇಸ್ರೇಲ್‌ಗೆ ಹೋಗಿದ್ದ ಎಂದು ವರದಿಯಾಗಿದೆ. ಇದನ್ನೂ ಓದಿ: ಸಿಮ್ ಖರೀದಿಸಲು ಬಂದ ನಟಿಯನ್ನು ಕೂಡಿ ಹಾಕಿದ ಕಚೇರಿ ಸಿಬ್ಬಂದಿ

    ಈ ವರ್ಷದ ಆರಂಭದಲ್ಲಿ ಕುಟುಂಬದ ಜತೆ ಭಾರತದಿಂದ ಇಸ್ರೇಲ್‌ಗೆ ಹೋಗಿದ್ದ. ನಾಫ್ ಹಗಲಿಲ್ ಎಂಬಲ್ಲಿನ ತನ್ನ ಮನೆಯಿಂದ ಉತ್ತರಕ್ಕೆ ಸ್ನೇಹಿತನನ್ನು ಭೇಟಿ ಮಾಡುವ ಸಲುವಾಗಿ ಆಗಮಿಸಿದ್ದ. 20ಕ್ಕೂ ಹೆಚ್ಚು ಮಂದಿ ಯುವಕರಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಲಾಟೆ ನಡೆದಿದೆ. ಇದನ್ನೂ ಓದಿ: 60 ಸಾವಿರ ಹಸುಗಳನ್ನು ಬಲಿ ಪಡೆದ ಲಂಪಿ ವೈರಸ್ ಕರ್ನಾಟಕಕ್ಕೆ ಎಂಟ್ರಿ

    KILLING CRIME

    ಶುಕ್ರವಾರ ಮುಂಜಾನೆ 7 ಗಂಟೆ ಸುಮಾರಿಗೆ ಮೃತ ಯುವಕ ಸ್ನೇಹಿತ ಕರೆ ಮಾಡಿ ಹಿಂದಿನ ರಾತ್ರಿ ನಡೆದ ಗಲಾಟೆಯಲ್ಲಿ ಯೋಯೆಲ್ ಲೆಹಿಂಗಾಹೆಲ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾನೆ. ಆದರೆ ಕುಟುಂಬದವರು ಆಸ್ಪತ್ರೆಗೆ (Hospital) ತೆರಳುವ ಮುನ್ನವೇ ಆತ ಮೃತಪಟ್ಟಿದ್ದಾದ್ದಾನೆ ಎಂಬುದಾಗಿ ಯಹೂದಿ ಸಮುದಾಯದ ಜತೆ ಕೆಲಸ ಮಾಡುತ್ತಿರುವ ಮೀರ್ ಪಲ್ಟಿಯೆಲ್ ಹೇಳಿದ್ದಾರೆ.

    ಘಟನೆ ಸಂಬಂಧ ಪೊಲೀಸರು (Israel Police) 13 ರಿಂದ 15 ವರ್ಷದೊಳಗಿನ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ, ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಇಸ್ರೇಲ್‌ನಲ್ಲಿ ಬೆಳಗ್ಗೆ ಇಂತಹ ಘಟನೆಯಾದರೆ, ಸಂಜೆ ನೇಣಿಗೆ ಹಾಕ್ತಾರೆ: ಬಸವರಾಜ್ ಹೊರಟ್ಟಿ

    ಇಸ್ರೇಲ್‌ನಲ್ಲಿ ಬೆಳಗ್ಗೆ ಇಂತಹ ಘಟನೆಯಾದರೆ, ಸಂಜೆ ನೇಣಿಗೆ ಹಾಕ್ತಾರೆ: ಬಸವರಾಜ್ ಹೊರಟ್ಟಿ

    ಹಾವೇರಿ: ಕರಾವಳಿ ಭಾಗದಲ್ಲಿ ನಡೆದ ಘಟನೆ ಬಹಳ ನೋವು ತಂದಿದೆ. ಇಂತಹ ಕೃತ್ಯ ಮಾಡಿದವರಿಗೆ ಶಿಕ್ಷೆ ಆಗಿರುವುದು ಇವತ್ತಿನವರೆಗೂ ಗೊತ್ತಾಗಿಲ್ಲ. ಶಿಕ್ಷೆ ಆದರೆ ಮಾತ್ರ ಇಂತಹ ಘಟನೆಗಳು ಕಡಿಮೆ ಆಗುತ್ತವೆ. ಅದಕ್ಕೆ ನಮ್ಮಲ್ಲಿ ಆ ರಿಪೋರ್ಟ್, ಈ ರಿಪೋರ್ಟ್ ಎಂಬ 20 ಕಾನೂನುಗಳು ಇವೆ. 10-15 ವರ್ಷ ಆಗುವುದರಲ್ಲಿ ಜನರು ಅದನ್ನು ಮರೆತು ಬಿಡುತ್ತಾರೆ. ನಾನು ಸಹ ಇಸ್ರೇಲ್‌ಗೆ ಹೋಗಿದ್ದೆ. ಅಲ್ಲಿ ಬೆಳಗ್ಗೆ ಇಂತಹ ಘಟನೆಯಾದರೆ ಸಂಜೆ ಗಲ್ಲಿಗೆ ಹಾಕುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದರು.

    ಹಾವೇರಿಯಲ್ಲಿ ಮಾತನಾಡಿದ ಅವರು, ಇಂತಹ ಘಟನೆಗಳು ಆಗಬಾರದು. ಇಂತಹ ಸಮಯದಲ್ಲಿ ಇಂಟೆಲಿಜೆನ್ಸಿಯವರು ಪೊಲೀಸರಿಗಿಂತ ಹೆಚ್ಚಿನ ಕೆಲಸ ಮಾಡಿ ಸರ್ಕಾರಕ್ಕೆ ಮಾಹಿತಿ ಕೊಡಬೇಕು. ಇವೆಲ್ಲಾ ನಡೆಯಬಾರದಾದರೂ ನಡಿಯುತ್ತಿವೆ. ಯಾವುದೇ ಜಾತಿ ಇರಲಿ, ಏನೇ ಇರಲಿ. ತಪ್ಪಿತಸ್ಥರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೊರಟ್ಟಿ ಹೇಳಿದರು.

    ನಮ್ಮಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಶಿಕ್ಷೆ ಆಗಿದ್ದನ್ನು ಜನರಿಗೆ ಗೊತ್ತು ಮಾಡಿಕೊಡಬೇಕು. ಹಾಗಾದರೆ ಮಾತ್ರ ಇದನ್ನು ತಡೆಯಬಹುದು. ಇಲ್ಲದಿದ್ದರೆ ಇಂತಹ ಘಟನೆಗಳು ಮತ್ತಷ್ಟು ಆಗುತ್ತವೆ. ಇಂತಹ ಸಮಯದಲ್ಲಿ ಎಲ್ಲಾ ಪಕ್ಷಗಳು ಒಂದಾಗಿ ಶಾಂತಿ ಕಾಪಾಡಬೇಕು. ನಾ ಹಾಗೆ ಮಾಡಿದೆ, ನೀ ಹೀಗೆ ಮಾಡಿದೆ ಎಂದು ಒಬ್ಬರನ್ನೊಬ್ಬರು ಎತ್ತಿ ಕಟ್ಟುವ ಪರಿಸ್ಥಿತಿ ಆಗಬಾರದು. ವಿರೋಧ ಪಕ್ಷ ಬರೀ ಟೀಕೆ ಮಾಡುತ್ತಾ ಕುಳಿತರೆ ಸರಿಯಲ್ಲ. ಸಿಎಂ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆದು ಮುಂದೆ ಇಂತಹ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು. ಇದನ್ನೂ ಓದಿ: ಹಿಂದೂಗಳ ನರಮೇಧಕ್ಕೆ ಕಾರಣವೇ ಸಿದ್ದರಾಮಯ್ಯ – ಬಿಜೆಪಿ ಕಾರ್ಯಕರ್ತ ಚಂದ್ರಹಾಸ್

    ನಾನು ಯೋಗಿಯಂತೆ ಮತ್ತೊಬ್ಬರನ್ನು ನೋಡಿಲ್ಲ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಬೇಕು. ಅದನ್ನು ಮಾಧ್ಯಮದವರ ಮೂಲಕ ಜನರಿಗೆ ಗೊತ್ತು ಮಾಡಬೇಕು. ಹಾಗಾದಾಗ ಇಂತಹ ಘಟನೆಗಳು ನಡೆಯುವುದಿಲ್ಲ. ಯಾವುದೇ ಪಕ್ಷ, ಸಂಘದಲ್ಲಿದ್ದವರನ್ನು ಕೊಲೆ ಮಾಡುವುದು ಸರಿಯಲ್ಲ. ಬಹಳ ನೋವಿನ ಸಂಗತಿಯಿದು. ಕೋಳಿ, ಕುರಿಯಂತೆ ಮನುಷ್ಯನ ಜೀವನ ಹೋಗುತ್ತಿದೆ. ಸರ್ಕಾರ ಗಟ್ಟಿಯಾದ ನಿರ್ಧಾರ ತೆಗೆದುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹೈದರಾಬಾದ್‌ನಲ್ಲಿ ನಮ್ಮ ಸಜ್ಜನ ಶೂಟೌಟ್ ಮಾಡಲಿಲ್ಲವೇನು? ಇಂತಹ ಸಮಯದಲ್ಲಿ ಪೊಲೀಸರು ಸಣ್ಣ ತಪ್ಪು ಮಾಡಿದರೆ, ಇಂತಹ ಘಟನೆಗಳು ಆಗುವುದು ನಿಂತರೆ ನಾನೇನು ಅದನ್ನು ತಪ್ಪು ಎನ್ನುವುದಿಲ್ಲ ಎಂದು ಬಸವರಾಜ್ ಹೊರಟ್ಟಿ ಹೇಳಿದರು. ಇದನ್ನೂ ಓದಿ: ಮಂಗಳೂರಿನಲ್ಲಿ ರಾಜಕೀಯಕ್ಕಾಗಿ ಕೊಲೆ ನಡೆದಿವೆ: ಮಾಧುಸ್ವಾಮಿ

    Live Tv
    [brid partner=56869869 player=32851 video=960834 autoplay=true]