Tag: Israel

  • ಇಸ್ರೇಲ್‌-ಹಮಾಸ್ ಉಗ್ರರ ನಡುವೆ ವಾರ್‌; ತೈಲ ಬೆಲೆ ಏರಿಕೆ

    ಇಸ್ರೇಲ್‌-ಹಮಾಸ್ ಉಗ್ರರ ನಡುವೆ ವಾರ್‌; ತೈಲ ಬೆಲೆ ಏರಿಕೆ

    ಟೆಲ್‌ ಅವಿವ್‌: ಹಮಾಸ್ (Hamas) ಬಂಡುಕೋರರು ಮತ್ತು ಇಸ್ರೇಲ್‌ (Israel) ನಡುವಿನ ಮಿಲಿಟರಿ ಘರ್ಷಣೆಗಳು ಮಧ್ಯಪ್ರಾಚ್ಯದಾದ್ಯಂತ ರಾಜಕೀಯ ಅನಿಶ್ಚಿತತೆ ಸೃಷ್ಟಿಸಿದೆ. ಉತ್ಪನ್ನಗಳ ಸರಬರಾಜಿನಲ್ಲಿ ಸಮಸ್ಯೆ ಎದುರಾಗಿದ್ದು, ತೈಲ ಬೆಲೆಯಲ್ಲಿ (Oil Price) ಹೆಚ್ಚಳವಾಗಿದೆ.

    ಇಸ್ರೇಲ್ ಮತ್ತು ಗಾಜಾದಲ್ಲಿನ ಪರಿಸ್ಥಿತಿಯು ಮಧ್ಯಪ್ರಾಚ್ಯದ ಉತ್ಪಾದನೆಗಳಿಗೆ ಅಡ್ಡಿಪಡಿಸಿದೆ. ಹೀಗಾಗಿ ತೈಲ ಬೆಲೆಗಳು ಸೋಮವಾರ 4% ರಷ್ಟು ಜಿಗಿತ ಕಂಡಿದೆ. ತೈಲ ಬೆಲೆಯು ಬ್ಯಾರಲ್‌ಗೆ 249.67 ರೂ. ಏರಿಕೆಯಾಗಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಭೀಕರ ಸಂಘರ್ಷ – 1,100 ಸಾವು, ಸಂಗೀತ ಉತ್ಸವದಲ್ಲಿ 260 ಶವ ಪತ್ತೆ

    US ತೈಲದ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI), ಒಂದು ಬ್ಯಾರೆಲ್‌ಗೆ 86 ಡಾಲರ್‌ ಅಂದರೆ 7,157 ರೂ. ಗಿಂತ ಹೆಚ್ಚಾಗಿದೆ. ಏಷ್ಯಾದ ಆರಂಭಿಕ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಕೂಡ ಏರಿತು.

    ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಪ್ರದೇಶಗಳು ತೈಲ ಉತ್ಪಾದಕರಲ್ಲ. ಆದರೆ ಮಧ್ಯಪ್ರಾಚ್ಯ ಪ್ರದೇಶವು ಜಾಗತಿಕ ಪೂರೈಕೆಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ. ಇರಾನ್ ಮತ್ತು ಸೌದಿ ಅರೇಬಿಯಾದಂತಹ ಹತ್ತಿರದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಿಗೆ ಯುದ್ಧದ ಪರಿಣಾಮ ತಟ್ಟಲಿದ್ದು, ತೈಲದ ಮೇಲಿನ ದರ ಹೆಚ್ಚಾಗಿದೆ. ಇದನ್ನೂ ಓದಿ: ಇಸ್ರೇಲ್ ಮೇಲೆ ದಾಳಿ – ಹಮಾಸ್ ಉಗ್ರರ ಅಟ್ಟಹಾಸಕ್ಕೆ 1 ಸಾವಿರ ಮಂದಿ ಬಲಿ

    ಗಲ್ಫ್ ಪ್ರದೇಶದಲ್ಲಿನ ಪ್ರಮುಖ ತೈಲ ರಫ್ತುದಾರರಿಗೆ ಹಾರ್ಮುಜ್ ಜಲಸಂಧಿಯು ನಿರ್ಣಾಯಕವಾಗಿದೆ. ಅವರ ಆರ್ಥಿಕತೆಯು ತೈಲ ಮತ್ತು ಅನಿಲ ಉತ್ಪಾದನೆ ಕೇಂದ್ರೀಕರಿಸಲ್ಪಟ್ಟಿದೆ. ರಷ್ಯಾ-ಉಕ್ರೇನ್‌ ಯುದ್ಧದಲ್ಲೂ ತೈಲ ಬೆಲೆ ಏರಿಕೆಯಾಗಿತ್ತು. 2022 ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ನಂತರ ತೈಲ ಬೆಲೆಗಳು ಗಗನಕ್ಕೇರಿತ್ತು. ಕಳೆದ ವರ್ಷ ಜೂನ್‌ನಲ್ಲಿ ಬ್ಯಾರೆಲ್‌ಗೆ 9,988 ರೂ.ಗೆ ತಲುಪಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್-ಹಮಾಸ್ ಯುದ್ಧ; ಚಿನ್ನ, ಬೆಳ್ಳಿ ದರದ ಮೇಲೆ ಎಫೆಕ್ಟ್

    ಇಸ್ರೇಲ್-ಹಮಾಸ್ ಯುದ್ಧ; ಚಿನ್ನ, ಬೆಳ್ಳಿ ದರದ ಮೇಲೆ ಎಫೆಕ್ಟ್

    ನವದೆಹಲಿ: ಇಸ್ರೇಲ್ ಮತ್ತು ಹಮಾಸ್ (Israel – Hamas) ಯುದ್ಧದ (War) ಪರಿಣಾಮ ಚಿನ್ನ (Gold) ಮತ್ತು ಬೆಳ್ಳಿ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

    ನವರಾತ್ರಿ ಸಮಯದಲ್ಲಿ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗುತ್ತಿದ್ದು, ಕಚ್ಚಾತೈಲದ ದರವೂ ಏರಿಕೆಯಾಗುವ ಸಾಧ್ಯತೆಯಿದೆ. ಭಾನುವಾರ ಚಿನ್ನ ಪ್ರತಿ ಗ್ರಾಂಗೆ 50 ರೂ. ಹೆಚ್ಚಳವಾಗಿದೆ.

    ಕಳೆದ 2 ವಾರದಿಂದ ಬಹುತೇಕ ಇಳಿಮುಖವಾಗುತ್ತಿದ್ದ ಚಿನ್ನದ ಬೆಲೆ ಯುದ್ಧದ ಕರಿಛಾಯೆ ಬೆನ್ನಲ್ಲೇ ಹೆಚ್ಚಳವಾಗುತ್ತಿದೆ. ಯುದ್ಧದ ಪರಿಣಾಮ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ, ಮ್ಯಾನಿಪುಲೇಟ್ ಮಾಡಲ್ಲ- ಪಬ್ಲಿಕ್ ಟಿವಿಗೆ ಸಿಎಂ EXCLUSIVE ಸಂದರ್ಶನ

    ನಿನ್ನೆ ಚಿನ್ನದ ದರ 22 ಕ್ಯಾರೆಟ್ – 5,329 ರೂ. ಹಾಗೂ 24 ಕ್ಯಾರೆಟ್ – 5,759 ರೂ. ಆಗಿದೆ. ಮಾತ್ರವಲ್ಲದೆ ಇಸ್ರೇಲ್-ಹಮಾಸ್ ಯುದ್ಧದ ಎಫೆಕ್ಟ್ ಕಚ್ಚಾತೈಲದ ದರದ ಮೇಲೆಯೂ ಬೀಳುವ ಸಾಧ್ಯತೆಯಿದೆ. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಿಲುಕಿದ್ದ 18,000 ಭಾರತೀಯರು ಸೇಫ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್-ಹಮಾಸ್ ಭೀಕರ ಸಂಘರ್ಷ – 1,100 ಸಾವು, ಸಂಗೀತ ಉತ್ಸವದಲ್ಲಿ 260 ಶವ ಪತ್ತೆ

    ಇಸ್ರೇಲ್-ಹಮಾಸ್ ಭೀಕರ ಸಂಘರ್ಷ – 1,100 ಸಾವು, ಸಂಗೀತ ಉತ್ಸವದಲ್ಲಿ 260 ಶವ ಪತ್ತೆ

    ಟೆಲ್ ಅವಿವ್: ಹಮಾಸ್ (Hamas) ಉಗ್ರರು ಗಾಜಾ ಪಟ್ಟಿಯಿಂದ ಇಸ್ರೇಲ್ (Israel) ಮೇಲೆ ಆಕ್ರಮಣ ನಡೆಸಿ ಇಲ್ಲಿಗೆ 3 ದಿನ ಕಳೆದಿದೆ. ಇದರ ಬೆನ್ನಲ್ಲೇ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧ (War) ಘೋಷಿಸಿದೆ. ಈ 3 ದಿನಗಳ ಸಂಘರ್ಷದಲ್ಲಿ ಎರಡೂ ಕಡೆಗಳಿಂದ ಬರೋಬ್ಬರಿ 1,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

    ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700ಕ್ಕೂ ಹೆಚ್ಚು ಜನರನ್ನು ಕೊಲ್ಲಲಾಗಿದೆ. ಹಮಾಸ್ ಆಕ್ರಮಣದ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಾಗೂ ಉಗ್ರಗಾಮಿ ಗುಂಪುಗಳ ಅಡಗುತಾಣಗಳನ್ನು ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಭಾನುವಾರ ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಇದರಲ್ಲಿ 413 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಇದನ್ನೂ ಓದಿ: ಊಟಿಯಂತಾದ ಬೆಂಗಳೂರು- 4 ದಿನ ಮಳೆ ಸಾಧ್ಯತೆ

    ಹಮಾಸ್ ಇಸ್ರೇಲ್‌ನ ಮೇಲೆ ಸಾವಿರಾರು ರಾಕೆಟ್‌ಗಳ ದಾಳಿಯನ್ನು ನಡೆಸಿ ನಾಗರಿಕರನ್ನು ಕೊಂದಿದೆ. 100ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇಟ್ಟಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜಾಗತಿಕವಾಗಿ ಜನರು ಬೆಚ್ಚಿ ಬೀಳುವಂತೆ ಮಾಡಿದೆ.

    ಮ್ಯೂಸಿಕ್ ಫೆಸ್ಟ್‌ನಲ್ಲಿ 260 ಶವ ಪತ್ತೆ:
    ಹಮಾಸ್ ದಾಳಿಗೆ ಒಳಗಾದ ಸಂಗೀತ ಉತ್ಸವದ ಪ್ರದೇಶದಿಂದ ಸುಮಾರು 260 ಶವಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲಿ ರಕ್ಷಣಾ ಸೇವೆ ಝಾಕಾ ತಿಳಿಸಿದೆ. ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್‌ನ್ಯೂಸ್- ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್ ಮೇಲೆ ದಾಳಿ – ಹಮಾಸ್ ಉಗ್ರರ ಅಟ್ಟಹಾಸಕ್ಕೆ 1 ಸಾವಿರ ಮಂದಿ ಬಲಿ

    ಇಸ್ರೇಲ್ ಮೇಲೆ ದಾಳಿ – ಹಮಾಸ್ ಉಗ್ರರ ಅಟ್ಟಹಾಸಕ್ಕೆ 1 ಸಾವಿರ ಮಂದಿ ಬಲಿ

    ಟೆಲ್ ಅವಿವ್: ಇಸ್ರೇಲ್ ಮೇಲೆ ಪ್ಯಾಲೆಸ್ಟೈನ್ ಹಮಾಸ್ ಉಗ್ರರ ಅಟ್ಟಹಾಸ (Israel-Gaza War) ಮುಂದುವರಿದಿದೆ. ಇಸ್ರೇಲ್ ಮೇಲೆ ನಡೆಸಿದ 5 ಸಾವಿರ ರಾಕೆಟ್ ದಾಳಿಯಲ್ಲಿ ಎರಡೂ ಕಡೆ ಸುಮಾರು 1 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 600ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರೆ, ಇಸ್ರೇಲ್ ನಡೆಸಿದ ಪ್ರತಿದಾಳಿಗೆ ಗಾಜಾಪಟ್ಟಿಯಲ್ಲಿ ಕನಿಷ್ಠ 370 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಈ ಬೆನ್ನಲ್ಲೇ ಲೆಬನಾನ್‌ನ ಹೆಜ್ಬುಲ್ಲಾ ಭಯೋತ್ಪಾದಕ ಸಂಘಟನೆ ಕೂಡ ಯಹೂದಿ ರಾಷ್ಟ್ರದ ಮೇಲೆ ರಾಕೆಟ್, ಶೆಲ್ ದಾಳಿ (Missiles Attack) ಆರಂಭಿಸಿದೆ. ಎರಡೂ ಕಡೆಯಲ್ಲೂ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದ್ದು, ಪ್ಯಾಲೆಸ್ಟೈನ್ (Palestinian) ಕೂಡ ತತ್ತರಿಸಿ ಹೋಗಿದೆ. ಗಾಜಾಪಟ್ಟಿ, ಟೆಲ್ ಟವೀವ್ ಸ್ಮಶಾನ ಸದೃಶವಾಗಿ ಮಾರ್ಪಟ್ಟಿವೆ. ಹಮಾಸ್ ಪ್ರಧಾನ ಕಚೇರಿ ನಾಶ ಮಾಡಿದ ಇಸ್ರೇಲ್ 400ಕ್ಕೂ ಹೆಚ್ಚು ಉಗ್ರರನ್ನ ಕೊಂದಿರೋದಾಗಿ ಹೇಳಿಕೊಂಡಿದೆ. ಇದನ್ನೂ ಓದಿ: Bigg Boss Kannada 10: ಕಿರುತೆರೆ ನಟ ಸ್ನೇಹಿತ್ ಗೌಡ 2ನೇ ಸ್ಪರ್ಧಿಯಾಗಿ ದೊಡ್ಮೆನೆಗೆ ಎಂಟ್ರಿ

    ಪ್ಯಾಲೆಸ್ಟೈನ್‌ ಪ್ರಕಾರ ಕನಿಷ್ಠ 370 ಮಂದಿ ಪ್ಯಾಲಿಸ್ತೇನಿಗಳು ಸಾವನ್ನಪ್ಪಿದ್ದು, 2000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಮಾಸ್ ದಾಳಿಯಲ್ಲಿ 600ಕ್ಕೂ ಹೆಚ್ಚು ಇಸ್ರೇಲಿಗಳು ಸಾವನ್ನಪ್ಪಿದ್ದು, 2000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈವರೆಗೂ ಎರಡು ಕಡೆಯೂ ಕನಿಷ್ಠ 1,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಗಡಿ ದಾಟುವ ಮೂಲಕ, ಪ್ಯಾರಾ ಗ್ಲೈಡಿಂಗ್‌ ಮೂಲಕ ಇಸ್ರೇಲ್‌ಗೆ ನುಗ್ಗಿದ ನೂರಾರು ಹಮಾಸ್ ಉಗ್ರರನ್ನು ಇಸ್ರೇಲ್ ಸೇನೆ ವಶಕ್ಕೆ ಪಡೆದಿದೆ. ಇದಕ್ಕೆ ಪ್ರತಿಯಾಗಿ ಹಮಾಸ್ ಕೂಡ ಕನಿಷ್ಠ 100 ಮಂದಿ ಇಸ್ರೇಲ್ ಸೈನಿಕರು, ಮಕ್ಕಳು, ಮಹಿಳೆಯರು ಸೇರಿ ನಾಗರಿಕರನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದೆ. ಇದನ್ನೂ ಓದಿ: Bigg Boss Kannada 10 : ಕಣ್ಣೀರಿಡುತ್ತಲೇ ದೊಡ್ಮನೆಗೆ ಕಾಲಿಟ್ಟ 3ನೇ ಸ್ಪರ್ಧಿ ರ‍್ಯಾಪರ್ ಇಶಾನಿ

    ಇಸ್ರೇಲ್‌ನ 22 ಪಟ್ಟಣ, ನಗರಗಳಲ್ಲಿ ಹಮಾಸ್ ಉಗ್ರರು ಮತ್ತು ಇಸ್ರೇಲಿ ಸೈನಿಕರ ನಡುವೆ ರಣಭೀಕರ ಕದನ ನಡೆಯುತ್ತಿದೆ. ಕ್ಷಣಕ್ಷಣಕ್ಕೂ ಪರಸ್ಪರ ದಾಳಿಗಳು ಭೀಕರ ಸ್ವರೂಪ ಪಡೆಯುತ್ತಿದ್ದು, ಸಾವು ನೋವು ಹೆಚ್ಚುತ್ತಿದೆ. ಬೃಹತ್ ಕಟ್ಟಡಗಳು ಕಣಮಾತ್ರದಲ್ಲಿ ಧ್ವಂಸವಾಗುತ್ತಿವೆ. ಯುದ್ಧದ ಕಾರಣ ಭಾರತ ಅಕ್ಟೋಬರ್ 14 ರ ವರೆಗೂ ವಿಮಾನ ಸೇವೆ ರದ್ದು ಮಾಡಿದೆ. ಅಮೆರಿಕ ಹಣದಿಂದ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದೆ ಎಂದು ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: Bigg Boss Kannada10 : ಬಿಗ್ ಬಾಸ್ ಶುರುವಾಗುವ ಮುನ್ನವೇ ಶಾಕ್ ಕೊಟ್ಟ ಕಿಚ್ಚ ಸುದೀಪ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುದ್ಧ ಪೀಡಿತ ಇಸ್ರೇಲ್‍ನಲ್ಲಿ ಸಿಲುಕಿದ ಮೇಘಾಲಯದ 27 ಮಂದಿ

    ಯುದ್ಧ ಪೀಡಿತ ಇಸ್ರೇಲ್‍ನಲ್ಲಿ ಸಿಲುಕಿದ ಮೇಘಾಲಯದ 27 ಮಂದಿ

    ಟೆಲ್ ಅವಿವ್: ಇಸ್ರೇಲ್‍ಗೆ (Israel) ತೆರಳಿದ್ದ ಮೇಘಾಲಯದ (Meghalaya) 27 ಮಂದಿ ಬೆಥ್‍ಲೆಹೆಮ್‍ನಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಅವರು ಅಲ್ಲಿಂದ ಹೊರಡಲು ಸಿದ್ಧತೆ ನಡೆಸುತ್ತಿದ್ದಾರೆ. ಭಾರತಕ್ಕೆ ಹಿಂದಿರುಗಲು ಈಜಿಪ್ಟ್ ರಾಜಧಾನಿ ಕೈರೋಗೆ ಪ್ರಯಾಣಿಸಲು ತಯಾರಾಗಿದ್ದಾರೆ ಎಂದು ವರದಿಯಾಗಿದೆ.

    ಗಾಜಾದಿಂದ ಹಮಾಸ್ ಉಗ್ರರು (Hamas Terrorist) ನಡೆಸಿದ ದಾಳಿಯ ನಂತರ ಇಸ್ರೇಲ್‍ನ ಒಳಗೂ ಉಗ್ರರು ಪ್ರವೇಶಿಸಿದ್ದಾರೆ. ಅಲ್ಲದೇ ಅಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಯುದ್ಧ ಘೋಷಣೆ ಸಹ ಆಗಿದ್ದು, ಸಿಲುಕಿರುವ ಜನರ ಸಂಚಾರಕ್ಕೆ ತೊಡಕಾಗುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ದಾಳಿ – ಅ.14 ರವರೆಗೆ ಏರ್ ಇಂಡಿಯಾ ವಿಮಾನ ರದ್ದು

    ಈಗ ಬಂದಿರುವ ಮಾಹಿತಿ ಪ್ರಕಾರ, ಸಿಲುಕಿರುವ ಭಾರತೀಯರು ಸುರಕ್ಷಿತರಾಗಿದ್ದಾರೆ. ಆದರೆ ಯುದ್ಧ ಮುಂದುವರೆಯುತ್ತಿದೆ. ಉಗ್ರರು ವಶಪಡಿಸಿಕೊಂಡ ಕೆಲವು ಗ್ರಾಮಗಳನ್ನು ಸೇನೆ ಮರಳಿ ಪಡೆದುಕೊಂಡಿದೆ. ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ. ಜನರಿಗೆ ಮನೆಯೊಳಗೆ ಇರಲು ಮತ್ತು ಬಾಂಬ್ ಶೆಲ್ಟರ್‌ಗಳಲ್ಲಿ ಹತ್ತಿರ ಇರಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

    ಸಿಲುಕಿರುವವರನ್ನು ಸೈನ್ಯವು ಸೂಯೆಜ್ ಕಾಲುವೆಯವರೆಗೂ ಬೆಂಗಾವಲು ಮಾಡಲಿದೆ. ಇದು ಸುಮಾರು 10 ಗಂಟೆಗಳ ಪ್ರಯಾಣ ಆಗಲಿದೆ. ಮೇಘಾಲಯ ಸರ್ಕಾರ ಜನರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ಜೊತೆ ಚರ್ಚಿಸುತ್ತಿದೆ ಎಂದು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಲಾಕ್ ಆಗಿದ್ದ ನಟಿ ನುಶ್ರತ್ ಭಾರತದತ್ತ?- ಆಗಿದ್ದೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ದಾಳಿ – ಅ.14 ರವರೆಗೆ ಏರ್ ಇಂಡಿಯಾ ವಿಮಾನ ರದ್ದು

    ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ದಾಳಿ – ಅ.14 ರವರೆಗೆ ಏರ್ ಇಂಡಿಯಾ ವಿಮಾನ ರದ್ದು

    ಟೆಲ್ ಅವಿವ್: ಇಸ್ರೇಲ್‌ನಲ್ಲಿ (Israel) ಹಮಾಸ್ ಉಗ್ರರು (Hamas Militants) ದಾಳಿ ನಡೆಸಿರುವ ಹಿನ್ನೆಲೆ ಅಕ್ಟೋಬರ್ 14 ರವರೆಗೆ ಟೆಲ್ ಅವಿವ್‌ಗೆ (Tel Aviv) ಮತ್ತು ಅಲ್ಲಿಂದ ಹೊರಡುವ ವಿಮಾನವನ್ನು ರದ್ದುಗೊಳಿಸಿರುವುದಾಗಿ ಏರ್ ಇಂಡಿಯಾ (Air India) ಭಾನುವಾರ ತಿಳಿಸಿದೆ.

    ಶನಿವಾರ ಇಸ್ರೇಲ್‌ನಲ್ಲಿ ಹಮಾಸ್ ಉಗ್ರರು ದಾಳಿ ನಡೆಸಿದ್ದು, ಅನೇಕ ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ವಿಮಾನಯಾನವನ್ನು ರದ್ದುಗೊಳಿಸಲಾಗಿದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ 2023ರ ಅಕ್ಟೋಬರ್ 14 ರವರೆಗೆ ಟೆಲ್ ಅವಿವ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಸಾಯಿಸ್ಬೇಡಿ- ಬೇಡಿಕೊಂಡ್ರೂ ಬಿಡದೆ ಯುವತಿ ಅಪಹರಿಸಿದ ಹಮಾಸ್ ಉಗ್ರರು

    ಅಲ್ಲದೇ ಈ ಅವಧಿಯಲ್ಲಿ ಯಾವುದೇ ವಿಮಾನದಲ್ಲಿ ಬುಕ್ಕಿಂಗ್ ದೃಢಪಡಿಸಿದ ಪ್ರಯಾಣಿಕರಿಗೆ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಮಾಸ್ ಉಗ್ರರಿಂದ ಮಗಳ ಬೆತ್ತಲೆ ಮೆರವಣಿಗೆ- ಸಾರ್ವಜನಿಕರಲ್ಲಿ ತಾಯಿ ಮನವಿ

    ಏರ್ ಇಂಡಿಯಾ ರಾಷ್ಟ್ರೀಯ ರಾಜಧಾನಿಯಿಂದ ಟೆಲ್ ಅವಿವ್‌ಗೆ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಸೇವೆಯನ್ನು ಒದಗಿಸುತ್ತದೆ. ಇದನ್ನೂ ಓದಿ: ತೆರೆದ ಟ್ರಕ್‌ನಲ್ಲಿ ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿದ ಹಮಾಸ್ ಉಗ್ರರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಮಾಸ್ ಉಗ್ರರಿಂದ ಮಗಳ ಬೆತ್ತಲೆ ಮೆರವಣಿಗೆ- ಸಾರ್ವಜನಿಕರಲ್ಲಿ ತಾಯಿ ಮನವಿ

    ಹಮಾಸ್ ಉಗ್ರರಿಂದ ಮಗಳ ಬೆತ್ತಲೆ ಮೆರವಣಿಗೆ- ಸಾರ್ವಜನಿಕರಲ್ಲಿ ತಾಯಿ ಮನವಿ

    ಟೆಲ್ ಅವಿವ್: ಇಸ್ರೇಲ್‌ನ ಯುವತಿಯೊಬ್ಬಳ (Israel Woman) ಬೆತ್ತಲೆ ದೇಹವನ್ನು ಹಮಾಸ್ ಉಗ್ರರು (Hamas Militants) ತೆರೆದ ಟ್ರಕ್‌ನಲ್ಲಿ ಮೆರವಣಿಗೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಕುರಿತು ಆಕೆಯ ತಾಯಿ ಸಾರ್ವಜನಿಕರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

    ಇಸ್ರೇಲ್ (Israel) ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ದಾಳಿ ವೇಳೆ ಹಮಾಸ್ ಉಗ್ರರು ಇಸ್ರೇಲ್ ಯುವತಿಯ ಬೆತ್ತಲೆಯನ್ನಾಗಿ ಮಾಡಿ ತೆರೆದ ಟ್ರಕ್‌ನಲ್ಲಿ (Open Truck) ಮೆರವಣಿಗೆ ಮಾಡಿ ಕ್ರೌರ್ಯ ಮೆರೆದಿದ್ದಾರೆ. ದಾಳಿ ವೇಳೆ ಹುತಾತ್ಮರಾದ ಅಮಾಯಕ ನಾಗರಿಕರ ಮೃತದೇಹಗಳನ್ನು ತೆರೆದ ಟ್ರಕ್‌ನಲ್ಲಿ ಇರಿಸಿ ಮೆರವಣಿಗೆ ಮಾಡಿದ್ದು, ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ತೆರೆದ ಟ್ರಕ್‌ನಲ್ಲಿ ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿದ ಹಮಾಸ್ ಉಗ್ರರು

    ಪ್ಯಾಲೇಸ್ಟಿನಿಯನ್ ಭಯೋತ್ಪಾದಕರು ಗಾಜಾಕ್ಕೆ ಓಡಿಸುತ್ತಿದ್ದ ಪಿಕ್-ಅಪ್ ಟ್ರಕ್‌ನ ಹಿಂಭಾಗದಲ್ಲಿ ಶನಿ ಲೌಕ್ ಅವರ ದೇಹವನ್ನು ಮೆರವಣಿಗೆ ಮಾಡುತ್ತಿದ್ದ ವೀಡಿಯೋವನ್ನು ನೋಡಿದ ಮಹಿಳೆಯ ತಾಯಿ ವೀಡಿಯೋದಲ್ಲಿ ಇರುವುದು ತಮ್ಮ ಮಗಳೆಂದು ದೃಢಪಡಿಸಿದ್ದಾರೆ. ಅಲ್ಲದೇ ಮಗಳ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಸಾರ್ವಜನಿಕರ ಬಳಿ ಅಂಗಲಾಚಿದರು. ಇದನ್ನೂ ಓದಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ – 300ಕ್ಕೂ ಹೆಚ್ಚು ಜನ ಸಾವು

    ಪ್ಯಾಲೆಸ್ಟಿನಿಯನ್ ನಾಗರೀಕರು ಮಹಿಳೆಯ ಮೃತದೇಹವನ್ನು ನಿಂದಿಸಿ ಬಳಿಕ ಉಗುಳುವುದನ್ನು ಈ ವೀಡಿಯೋದಲ್ಲಿ ನೋಡಬಹುದು. ನಂತರ ಕಪಾಳಮೋಕ್ಷ ಮಾಡುವುದನ್ನು ಸಹಾ ವೀಡಿಯೋದಲ್ಲಿ ಕಾಣಬಹುದು. ಕ್ಷಿಪಣಿ ದಾಳಿಯ ಬಳಿಕ ಪ್ಯಾಲೆಸ್ಟಿನಿಯಾದವರು ದಕ್ಷಿಣ ಇಸ್ರೇಲ್‌ಗೆ ನುಸುಳಿದ್ದು, ತೆರೆದ ಟ್ರಕ್‌ಗಳಲ್ಲಿ ಬೀದಿ ಬೀದಿ ಸುತ್ತುತ್ತಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ನಾಗರಿಕರನ್ನು ಕೊಲ್ಲುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇಸ್ರೇಲ್, ಪ್ಯಾಲೆಸ್ಟೈನ್‌ ಮಧ್ಯೆ ಕಾದಾಟ ಯಾಕೆ? 6 ದಿನ ನಡೆದ ಯುದ್ಧದಲ್ಲಿ ಏನಾಯ್ತು? – ಇಲ್ಲಿದೆ ಪೂರ್ಣ ಮಾಹಿತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆರೆದ ಟ್ರಕ್‌ನಲ್ಲಿ ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿದ ಹಮಾಸ್ ಉಗ್ರರು

    ತೆರೆದ ಟ್ರಕ್‌ನಲ್ಲಿ ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿದ ಹಮಾಸ್ ಉಗ್ರರು

    ಟೆಲ್ ಅವಿವ್: ಇಸ್ರೇಲ್ (Israel) ಮೇಲೆ ಹಮಾಸ್ ಉಗ್ರರು (Hamas Militants) ನಡೆಸಿದ ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ದಾಳಿ ವೇಳೆ ಹಮಾಸ್ ಉಗ್ರರು ಇಸ್ರೇಲಿ ಮಹಿಳೆಯೊಬ್ಬರ (Israeli Woman) ಬೆತ್ತಲೆ ದೇಹವನ್ನು ತೆರೆದ ಟ್ರಕ್‌ನಲ್ಲಿ (Open Truck) ಮೆರವಣಿಗೆ (Parade) ಮಾಡಿ ಕ್ರೌರ್ಯ ಮೆರೆದಿದ್ದಾರೆ.

    ದಾಳಿ ವೇಳೆ ಹುತಾತ್ಮರಾದ ಅಮಾಯಕ ನಾಗರಿಕರ ಮೃತದೇಹಗಳನ್ನು ತೆರೆದ ಟ್ರಕ್‌ನಲ್ಲಿ ಇರಿಸಿ ಮೆರವಣಿಗೆ ಮಾಡಿದ್ದು, ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ – 300ಕ್ಕೂ ಹೆಚ್ಚು ಜನ ಸಾವು

    ಪ್ಯಾಲೆಸ್ಟಿನಿಯನ್ ನಾಗರೀಕರು ಮಹಿಳೆಯ ಮೃತದೇಹವನ್ನು ನಿಂದಿಸಿ ಬಳಿಕ ಉಗುಳುವುದನ್ನು ಈ ವೀಡಿಯೋದಲ್ಲಿ ನೋಡಬಹುದು. ನಂತರ ಕಪಾಳಮೋಕ್ಷ ಮಾಡುವುದನ್ನು ಸಹಾ ವೀಡಿಯೋದಲ್ಲಿ ಕಾಣಬಹುದು. ಕ್ಷಿಪಣಿ ದಾಳಿಯ ಬಳಿಕ ಪ್ಯಾಲೆಸ್ಟಿನಿಯಾದವರು ದಕ್ಷಿಣ ಇಸ್ರೇಲ್‌ಗೆ ನುಸುಳಿದ್ದು, ತೆರೆದ ಟ್ರಕ್‌ಗಳಲ್ಲಿ ಬೀದಿ ಬೀದಿ ಸುತ್ತುತ್ತಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ನಾಗರಿಕರನ್ನು ಕೊಲ್ಲುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇಸ್ರೇಲ್, ಪ್ಯಾಲೆಸ್ಟೈನ್‌ ಮಧ್ಯೆ ಕಾದಾಟ ಯಾಕೆ? 6 ದಿನ ನಡೆದ ಯುದ್ಧದಲ್ಲಿ ಏನಾಯ್ತು? – ಇಲ್ಲಿದೆ ಪೂರ್ಣ ಮಾಹಿತಿ

    ಹಮಾಸ್ ಉಗ್ರರು 5ಂಕ್ಕೂ ಹೆಚ್ಚು ಇಸ್ರೇಲ್ ಸೈನಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ತಿಳಿದುಬಂದಿದೆ. ಹಲವು ವರ್ಷಗಳಲ್ಲಿ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಅತ್ಯಂತ ಬೃಹತ್ ದಾಳಿ ಇದಾಗಿದೆ ಎಂದು ಹೇಳಲಾಗುತ್ತಿದೆ. ಈ ದಾಳಿಯಲ್ಲಿ ಪ್ರಾಣ ಕಳೆದಕೊಂಡವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ. ಇದನ್ನೂ ಓದಿ: ಇಸ್ರೇಲ್ ಒಳಗೆ ನುಗ್ಗಿದ ಉಗ್ರರು – ಸಾರ್ವಜನಿಕರ ಮೇಲೆ ಗುಂಡಿನ ಮಳೆ

    ಶನಿವಾರ ಬೆಳಗ್ಗೆ ಗಾಜಾ ಪಟ್ಟಿಯಿಂದ ಇಸ್ರೇಲ್‌ಗೆ ಸುಮಾರು 5,000 ರಾಕೆಟ್‌ಗಳನ್ನು ಹಾರಿಸಿ ದಾಳಿ ನಡೆಸಲಾಯಿತು. ಕ್ಷಿಪಣಿ ದಾಳಿಯ ನೆಪದಲ್ಲಿ ಹಮಾಸ್ ಉಗ್ರರು ಇಸ್ರೇಲ್ ಗಡಿಯೊಳಗೆ ನುಸುಳಿದ್ದಾರೆ. ಸುಮಾರು 50-60 ಉಗ್ರರು ಇಸ್ರೇಲ್ ಗಡಿಯನ್ನು ಪ್ರವೇಶಿಸಿ ವಿಧ್ವಂಸಕತೆಯನ್ನು ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಗಾಜಾಪಟ್ಟಿಯಿಂದ 5,000 ರಾಕೆಟ್ ದಾಳಿ – ಯುದ್ಧ ಘೋಷಿಸಿದ ಇಸ್ರೇಲ್

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ – 300ಕ್ಕೂ ಹೆಚ್ಚು ಜನ ಸಾವು

    ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ – 300ಕ್ಕೂ ಹೆಚ್ಚು ಜನ ಸಾವು

    ಟೆಲ್ ಅವಿವ್: ಇಸ್ರೇಲ್ (Israel) ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ (Hamas Attack) 300ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಇಸ್ರೇಲ್ ಸೇನೆ ನಡೆಸಿದ ಪ್ರತಿ ದಾಳಿಯಲ್ಲಿ 230ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

    ಉಗ್ರರ ದಾಳಿಯ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕರಾಳ ದಿನ ಎಂದು ಘೋಷಿಸಿದ್ದಾರೆ. ಬಳಿಕ ಉಗ್ರರ ಮೇಲೆ ಯುದ್ಧ ಘೋಷಿಸಲಾಗಿದ್ದು, ದೇಶದಲ್ಲಿ ತರ್ತು ಪರಿಸ್ಥಿತಿ ಜಾರಿ ಮಾಡಲಾಗಿದೆ. ಅಲ್ಲದೇ ಉಗ್ರರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್, ಪ್ಯಾಲೆಸ್ಟೈನ್‌ ಮಧ್ಯೆ ಕಾದಾಟ ಯಾಕೆ? 6 ದಿನ ನಡೆದ ಯುದ್ಧದಲ್ಲಿ ಏನಾಯ್ತು? – ಇಲ್ಲಿದೆ ಪೂರ್ಣ ಮಾಹಿತಿ

    ಹಮಾಸ್ ಉಗ್ರರು 5ಂಕ್ಕೂ ಹೆಚ್ಚು ಇಸ್ರೇಲ್ ಸೈನಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ. ಅಲ್ಲದೇ ದೇಶದ ಒಳಗೆ ನುಗ್ಗಿ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕರ ಕಗ್ಗೊಲೆ ಮಾಡುತ್ತಿದ್ದಾರೆ. ಅವರ ವಿರುದ್ಧ ಸೇನೆ ಹೋರಾಡುತ್ತಿದೆ ಎಂದು ಸೇನಾ ವಕ್ತಾರ ರಿಚರ್ಡ್ ಹೆಚ್ಟ್ ಹೇಳಿದ್ದಾರೆ.

    ಯುದ್ಧ ಘೋಷಣೆಯ ಬಳಿಕ ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರನ್ನು ಜಾಗರೂಕರಾಗಿರುವಂತೆ ಎಚ್ಚರಿಸಿದೆ. ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ. ಅನಗತ್ಯವಾಗಿ ಮನೆಯಿಂದ ಹೊರಗೆ ಬರದಿರುವಂತೆ ಸಲಹೆ ನೀಡಲಾಗಿದೆ.

    ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್‍ಗೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಸಭೆ ಕರೆದು ಇದು ಇಸ್ರೇಲ್ ಮೇಲಿನ ಅತಿ ದೊಡ್ಡ ಆಕ್ರಮಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಹಮಾಸ್ ಉಗ್ರರ ನಾಯಕ ಒಸಾಮಾ ಹಮ್ದಾನ್ ಪ್ರತಿಕ್ರಿಯಿಸಿ, ಇಸ್ರೇಲ್‍ನ ಬೇಡಿಕೆಗಳನ್ನು ಒಪ್ಪಿಕೊಳ್ಳುವುದು ಶಾಂತಿಯನ್ನು ತರುವುದಿಲ್ಲ ಎಂದು ಅರಬ್ ರಾಷ್ಟ್ರಗಳು ಅರಿತುಕೊಳ್ಳಬೇಕು. ಪ್ಯಾಲೆಸ್ಟೈನ್‍ನ (Palestine) ಸ್ಥಿರತೆ ಮತ್ತು ಶಾಂತಿಯನ್ನು ತರಲು ಇಸ್ರೇಲ್ ಆಕ್ರಮಣವನ್ನು ಕೊನೆಗೊಳಿಸುವುದು ಆರಂಭಿಕ ಹಂತವಾಗಿರಬೇಕು ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ನರೇಂದ್ರ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್, ಪ್ಯಾಲೆಸ್ಟೈನ್‌ ಮಧ್ಯೆ ಕಾದಾಟ ಯಾಕೆ? 6 ದಿನ ನಡೆದ ಯುದ್ಧದಲ್ಲಿ ಏನಾಯ್ತು? – ಇಲ್ಲಿದೆ ಪೂರ್ಣ ಮಾಹಿತಿ

    ಇಸ್ರೇಲ್, ಪ್ಯಾಲೆಸ್ಟೈನ್‌ ಮಧ್ಯೆ ಕಾದಾಟ ಯಾಕೆ? 6 ದಿನ ನಡೆದ ಯುದ್ಧದಲ್ಲಿ ಏನಾಯ್ತು? – ಇಲ್ಲಿದೆ ಪೂರ್ಣ ಮಾಹಿತಿ

    ಸ್ರೇಲ್ ಹಾಗೂ ಪ್ಯಾಲೆಸ್ಟೈನ್‌ (Palestine) 2021ರಲ್ಲಿ ಭೀಕರ ಕಾಳಗ ನಡೆಸಿದ ನಂತರ ಈಗ ಮತ್ತೊಮ್ಮೆ ಎದುರು ಬದುರಾಗಿವೆ. ವೈಮಾನಿಕ ದಾಳಿ ಹಾಗೂ ಗುಂಡಿನ ಚಕಮಕಿ ಬಳಿಕ ಮತ್ತೊಮ್ಮೆ 2 ರಾಷ್ಟ್ರಗಳ ನಡುವೆ ಘನಘೋರ ಕಾದಾಟ ನಡೆಯುತ್ತಿದೆ.

    ಹಮಾಸ್‌ ಉಗ್ರರು ಇಸ್ರೇಲ್‌ (Israel) ನಗರದ ಒಳಗಡೆ ನುಗ್ಗಿ ಸೈನಿಕರ ಜನರ ಪ್ರಾಣ ತೆಗೆಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ದಾಳಿ ನಡೆಸುತ್ತಿದೆ.

    ಕಿತ್ತಾಟ ಯಾಕೆ?
    ಇಸ್ರೇಲ್‌ ಮತ್ತು ಪ್ಯಾಲೆಸ್ಟೈನ್‌ ಮಧ್ಯೆ ಕಾಳಗ ಯಾಕೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ 77 ವರ್ಷಗಳ ಹಿಂದಕ್ಕೆ ಹೋಗಬೇಕು. ಎರಡನೇ ವಿಶ್ವಯುದ್ಧ ಬಳಿಕ 1945ರಲ್ಲಿ ಬ್ರಿಟನ್ ವಿಶ್ವಸಂಸ್ಥೆಗೆ ಒಟ್ಟೋಮಾನ್ ಸಾಮ್ರಾಜ್ಯವನ್ನ ಒಪ್ಪಿಸಿತು.   ಇದನ್ನೂ ಓದಿ: ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ನರೇಂದ್ರ ಮೋದಿ

    1947ರಲ್ಲಿ ವಿಶ್ವಸಂಸ್ಥೆ ಅರಬ್ ರಾಜ್ಯ ಹಾಗೂ ಇಸ್ರೇಲ್ ಎಂದು ಆ ಭೂಭಾಗವನ್ನ ವಿಂಗಡಿಸಿತು. ಇದಾದ ಒಂದು ವರ್ಷದ ಬಳಿಕ 1948ರಲ್ಲಿ ಇಸ್ರೇಲ್ ತಾನೊಂದು ಸ್ವತಂತ್ರ ದೇಶ ಎಂದು ಘೋಷಣೆ ಮಾಡಿತು. ಈ ಮೂಲಕ ವಿಶ್ವದ ಮೊದಲ ಯಹೂದಿ ದೇಶವಾಗಿ ಅಸ್ತಿತ್ವಕ್ಕೂ ಬಂತು. ಯಹೂದಿ ದೇಶವಾಗಿ ಅಸ್ತಿತ್ವಕ್ಕೆ ಬಂದರೂ ಜೆರುಸಲೇಂ ಸೇರಿದಂತೆ ಹಲವು ಪ್ರದೇಶಗಳು ನನ್ನದು. ಅದು ತನಗೆ ಸೇರಬೇಕೆಂದು ಹೇಳುತ್ತಿತ್ತು. ಇಸ್ರೇಲ್‌ ದೇಶವಾಗಿದ್ದನ್ನು ಪ್ಯಾಲೆಸ್ಟೈನ್‌ ಸೇರಿದಂತೆ ಅರಬ್‌ ರಾಷ್ಟ್ರಗಳು ವಿರೋಧಿಸುತ್ತಲೇ ಇವೆ. ವಿಶೇಷ ಏನೆಂದರೆ ಮೂರು ಧರ್ಮಗಳ ಪವಿತ್ರ ಸ್ಥಳ ಜೆರುಸಲೇಂ (Jerusalem) ಆಗಿದೆ. ಈಗ ಕಿತ್ತಾಟ ನಡೆಯುತ್ತಿರುವ ಜೆರುಸಲೇಂ ಯಹೂದಿ, ಮುಸ್ಲಿಮ್‌ ಮತ್ತು ಕ್ರೈಸ್ತರ ಪವಿತ್ರ ಸ್ಥಳವಾಗಿದೆ.

    ಯಹೂದಿಗಳಿಗೆ ಯಾಕೆ?
    ಟೆಂಪಲ್ ಮೌಂಟ್ ಯಹೂದಿಗಳ (Jews) ಅತ್ಯಂತ ಪವಿತ್ರ ಸ್ಥಳವೆಂದು ಕರೆಯಲಾಗುತ್ತದೆ. ಯಹೂದಿ ದಂತಕಥೆಯ ಪ್ರಕಾರ ಅಬ್ರಹಾಂ ತನ್ನ ಧರ್ಮ ಮತ್ತು ನಂಬಿಕೆಯನ್ನು ಸಾಬೀತುಪಡಿಸಲು ದೇವರ ಬೇಡಿಕೆಯ ಮೇರೆಗೆ ತನ್ನ ಮಗ ಐಸಾಕ್‌ನನ್ನು ತ್ಯಾಗ ಮಾಡಲು ಹೋಗುತ್ತಾನೆ. ಈ ಸಂದರ್ಭದಲ್ಲಿ ಮೇಲಿನಿಂದ ಕುರಿ ಕಾಣಿಸಿಕೊಂಡಿತು ಮತ್ತು ಅವನ ಮಗನನ್ನು ಬಿಡುಗಡೆ ಮಾಡಿತು ಎಂಬ ಕಥೆಯಿದೆ.

    ಯಹೂದಿಗಳ ಮೊದಲ ಮತ್ತು ಎರಡನೆಯ ಪವಿತ್ರ ದೇವಾಲಯಗಳು ಇಲ್ಲಿದೆ. ಜೆರುಸಲೇಂನಲ್ಲಿ ಅನೇಕ ಯಹೂದಿ ಪ್ರವಾದಿಗಳು ಬೋಧಿಸಿದ್ದಾರೆ. ಜಗತ್ತನ್ನು ಸೃಷ್ಟಿಸಿದ ಅಡಿಪಾಯದ ಸ್ಥಳ ಇದು ಎಂದು ಯಹೂದಿಗಳು ನಂಬುತ್ತಾರೆ. ಅನೇಕ ಯಹೂದಿಗಳು ಡೋಮ್ ಆಫ್ ದಿ ರಾಕ್ ಅನ್ನು ಪವಿತ್ರ ಸ್ಥಳವೆಂದು ನಂಬುತ್ತಾರೆ. ವಾರ್ಷಿಕವಾಗಿ ಲಕ್ಷಾಂತರ ಮಂದಿ ಈ ಪವಿತ್ರ ಗೋಡೆಯನ್ನು ವೀಕ್ಷಿಸಲು ಭೇಟಿ ನೀಡುತ್ತಾರೆ.

    ಮುಸ್ಲಿಮರಿಗೆ ಯಾಕೆ?
    ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ಇಸ್ಲಾಂ ಧರ್ಮದ ಮೂರನೇ ಪವಿತ್ರ ಸ್ಥಳ ಜೆರುಸಲೇಂ ಆಗಿದೆ. ಪ್ರವಾದಿ ಮುಹಮ್ಮದ್ (Prophet Muhammad) ಮೆಕ್ಕಾದಿಂದ (Mecca) ಈ ಜಾಗಕ್ಕೆ ಬಂದು ಸ್ವರ್ಗಕ್ಕೆ ಏರಿದರು ಎಂದು ಮುಸ್ಲಿಮರು (Muslims) ನಂಬುತ್ತಾರೆ. ಇಲ್ಲಿ ಡೋಮ್ ಆಫ್ ರಾಕ್ ಮತ್ತು ಅಲ್-ಅಕ್ಸಾ ಮಸೀದಿಯ ಇದ್ದು 1,300 ವರ್ಷಗಳ ಹಿಂದೆ ಸ್ಥಾಪನೆಯಾಗಿದೆ ಎಂದು ನಂಬಲಾಗುತ್ತದೆ. ಅಲ್ ಅಕ್ಸಾ ಮಸೀದಿಗೆ (Al Aqsa Mosque) ಮುಸ್ಲಿಮರು ವರ್ಷಪೂರ್ತಿ ಭೇಟಿ ನೀಡುತ್ತಾರೆ. ಆದರಲ್ಲೂ ರಂಜಾನ್ ತಿಂಗಳಲ್ಲಿ ಪ್ರತಿ ಶುಕ್ರವಾರ ಲಕ್ಷಾಂತರ ಮುಸ್ಲಿಮರು ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಆಗಮಿಸುತ್ತಾರೆ.

    ಕ್ರೈಸ್ತರಿಗೆ ಯಾಕೆ?
    ಕ್ರಿಶ್ಚಿಯನ್ (Christian) ಕಥೆಗಳ ಪ್ರಕಾರ ಏಸುವನ್ನು (Jesus) ಗೋಲ್ಗೊಥಾ ಅಥವಾ ಕ್ಯಾಲ್ವರಿ ಬೆಟ್ಟದ ಮೇಲೆ ಶಿಲುಬೆಗೇರಿಸಲಾಯಿತು. ಈ ಕಾರಣಕ್ಕೆ ಯೇಸುವಿನ ಖಾಲಿ ಸಮಾಧಿಗೆ ಭೇಟಿ ನೀಡಲು ಮತ್ತು ಆ ಭೂಮಿಯಲ್ಲಿ ಪ್ರಾರ್ಥನೆ ಮಾಡಲು ಲಕ್ಷಾಂತರ ಕ್ರೈಸ್ತರು ಈ ಜಾಗಕ್ಕೆ ಬರುತ್ತಾರೆ.

    1967ರ ಯುದ್ಧದಲ್ಲಿ ಏನಾಯ್ತು?
    ಸಿರಿಯಾದ ಬೆಂಬಲದೊಂದಿಗೆ ಪ್ಯಾಲೆಸ್ಟೈನ್‌ ಗೆರಿಲ್ಲಾ ಪಡೆ ಇಸ್ರೇಲ್‌ ಮೇಲೆ ದಾಳಿ ಮಾಡಿತು. ಇದಕ್ಕೆ ಅರಬ್‌ ರಾಷ್ಟ್ರಗಳು ಬೆಂಬಲ ನೀಡಿದವು. ಇದರಿಂದ ಕೆರಳಿದ ಇಸ್ರೇಲ್‌ ಭಾರೀ ಪ್ರತಿದಾಳಿ ನಡೆಸಿತು. 1967ರಲ್ಲಿ 6 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಇಸ್ರೇಲ್ ಪೂರ್ವ ಜೆರುಸಲೇಂ ಹಾಗೂ ವೆಸ್ಟ್ ಬ್ಯಾಂಕ್ ಅನ್ನು ವಶಕ್ಕೆ ಪಡೆದಿತ್ತು. ಈ ಕಾರಣಕ್ಕೆ ಜೆರುಸಲೇಂನ ವಶಕ್ಕೆ ಪಡೆಯಲು ಇಸ್ರೇಲ್ ವಿರುದ್ಧ ಆಗಾಗ ಪ್ಯಾಲೆಸ್ಟೈನ್‌ ಸಂಘರ್ಷ ನಡೆಸುತ್ತಿರುತ್ತದೆ. ಈಗಲೂ ಇದೇ ವಿಚಾರಕ್ಕೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಸಮರ ಆರಂಭಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಒಳಗೆ ನುಗ್ಗಿದ ಉಗ್ರರು – ಸಾರ್ವಜನಿಕರ ಮೇಲೆ ಗುಂಡಿನ ಮಳೆ

    ಹಮಾಸ್‌ ಉಗ್ರರು ಪವಿತ್ರ ಮಸೀದಿಯಾದ ಅಲ್ ಅಕ್ಸಾ ಮಸೀದಿ ಹೆಸರಿನಲ್ಲಿ ಆಪರೇಷನ್ ಅಲ್-ಅಕ್ಸಾ ಫ್ಲಡ್ (Operation Al Aqsa Flood) ಹೆಸರನ್ನು ಇರಿಸಿದೆ. ಅಂದರೆ ಆಪರೇಷನ್ ಅಲ್-ಅಕ್ಸಾ ನೆರೆ ರೂಪದಲ್ಲಿ ಬಂದು ಇಸ್ರೇಲ್‌ ಅನ್ನು ಕೊಚ್ಚಿಕೊಂಡು ಹೋಗುತ್ತೇವೆ ಎಂದು ಉಗ್ರರು ಘೋಷಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]