Tag: Israel

  • ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?

    ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?

    ಟೆಲ್ ಅವಿವ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ (Israel-Hamas War) ಪ್ರಾರಂಭವಾಗಿ 10 ದಿನ ಕಳೆದಿದೆ. ಅಂದಿನಿಂದ ಅಲ್ಲಿನ ಸ್ಥಿತಿ ತೀವ್ರಗೊಳ್ಳುತ್ತಲೇ ಇದೆ. ಈ ನಡುವೆ ಇಸ್ರೇಲ್‌ನ ರಕ್ಷಣಾ ಪಡೆ ಯದ್ಧಕ್ಕಾಗಿ ಲೇಸರ್ ಶಸ್ತ್ರಾಸ್ತ್ರವನ್ನು ಬಳಕೆ ಮಾಡಲು ಯೋಜಿಸಿರುವುದಾಗಿ ವರದಿಯಾಗಿದೆ.

    ಇಲ್ಲಿಯವರೆಗೆ ಇಸ್ರೇಲ್ ಐರನ್ ಡೋಮ್ (Iron Dome) ಅನ್ನು ಬಳಸುತ್ತಿತ್ತು. ಇದೀಗ ಇಸ್ರೇಲ್ ಐರನ್ ಬೀಮ್ (Iron Beam) ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದು ವೇಗವಾಗಿ ತನ್ನತ್ತ ಚಲಿಸುವ ಕ್ಷಿಪಣಿ ಅಥವಾ ಸ್ಫೋಟಕಗಳನ್ನು ಶಕ್ತಿಯುತ ಲೇಸರ್ ಕಿರಣಗಳಿಂದ ನಾಶಪಡಿಸುವ ವ್ಯವಸ್ಥೆಯಾಗಿದೆ.

    ಐರನ್ ಬೀಮ್ ಅನ್ನು 2025 ರಲ್ಲಿ ಇಸ್ರೇಲ್‌ನಲ್ಲಿ ಅಳವಡಿಸಲು ಯೋಜಿಸಲಾಗಿತ್ತು. ಆದರೆ ಇದೀಗ ಹಮಾಸ್ ಉಗ್ರರೊಂದಿಗೆ ಭೀಕರ ಯುದ್ಧ ಪ್ರಾರಂಭವಾಗಿರುವುದರಿಂದ ಇಸ್ರೇಲಿ ರಕ್ಷಣಾ ಸಚಿವಾಲಯ ಅದನ್ನು ಶೀಘ್ರವಾಗಿ ನಿಯೋಜಿಸಲು ಯೋಜಿಸಿದೆ. ಇಸ್ರೇಲಿ ಪಡೆಗಳು ಈಗ ಐರನ್ ಬೀಮ್‌ನ ನಿಯೋಜನೆಯನ್ನು ವೇಗಗೊಳಿಸುತ್ತಿವೆ ಮತ್ತು ಪರೀಕ್ಷೆಗಳನ್ನು ಪ್ರಾರಂಭಿಸುತ್ತಿವೆ ಎಂದು ಇಸ್ರೇಲ್‌ನ ಸ್ಥಳೀಯ ಮಾಧ್ಯಮ ವರದಿ ಮಾಡಿವೆ.

    ಏನಿದು ಐರನ್ ಬೀಮ್?
    ಐರನ್ ಬೀಮ್ ಅನ್ನು ಮೊದಲ ಬಾರಿಗೆ 2014 ರಲ್ಲಿ ಅನಾವರಣಗೊಳಿಸಲಾಯಿತು. ಆದರೆ ಇಸ್ರೇಲ್‌ನಲ್ಲಿ ಇದನ್ನು ಇನ್ನೂ ಅಳವಡಿಸಲಾಗಿಲ್ಲ. ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ನಿರ್ಮಿಸಿದ ಐರನ್ ಬೀಮ್ ಸಿಸ್ಟಮ್ ಶಸ್ತ್ರಾಸ್ತ್ರ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು ಅದು ಶಕ್ತಿಯುತ ಬೆಳಕಿನ ಕಿರಣಗಳನ್ನು ಹಾಯಿಸುವ ಮೂಲಕ ಶತ್ರುಗಳ ಕ್ಷಿಪಣಿ ಅಥವಾ ಅಸ್ತ್ರಗಳನ್ನು ನಾಶಪಡಿಸುತ್ತದೆ. ಐರನ್ ಡೋಮ್ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ನಿರ್ಮಿಸಿದ ಇಸ್ರೇಲಿ ಮೊಬೈಲ್ ಆಲ್-ವೆದರ್ ಏರ್ ಡಿಫೆನ್ಸ್ ಸಿಸ್ಟಮ್ ಆಗಿದೆ. ಇದನ್ನೂ ಓದಿ: ಷರತ್ತು ಪಾಲಿಸಿದ್ರೆ ಒತ್ತೆಯಾಳುಗಳ ಬಿಡುಗಡೆ – ಇಸ್ರೇಲ್‌ ಜೊತೆ ಸಂಧಾನಕ್ಕೆ ಮುಂದಾದ ಇರಾನ್‌

    ಐರನ್ ಡೋಮ್‌ಗಿಂತ ಬೀಮ್ ಹೇಗೆ ಭಿನ್ನ?
    ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯೊಂದಿಗೆ ಕೆಲಸ ಮಾಡಲು ಐರನ್ ಬೀಮ್ ಅನ್ನು ಅಗ್ಗದ ಮತ್ತು ಹೊಂದಿಕೊಳ್ಳುವ ಪರ್ಯಾಯವೆಂದು ಪರಿಗಣಿಸಲಾಗಿದೆ. ಇಸ್ರೇಲಿ ರಕ್ಷಣಾ ಸಚಿವಾಲಯದ ಕ್ಷಿಪಣಿ ರಕ್ಷಣಾ ತಜ್ಞರ ಪ್ರಕಾರ ಐರನ್ ಡೋಮ್‌ನಿಂದ ಹಾರಿಸಲಾಗುವ ಪ್ರತಿ ಪ್ರತಿಬಂಧಕಗಳ ಬೆಲೆ 60,000 ಡಾಲರ್ ವೆಚ್ಚವಾಗುತ್ತದೆ. ಆದರೆ ಐರನ್ ಬೀಮ್ ಅಗ್ಗದ ಬೆಲೆಯಲ್ಲಿ ಲೇಸರ್ ಕಿರಣವನ್ನು ಕಳುಹಿಸಿ, ದಾಳಿಯನ್ನು ತಡೆಯಬಹುದು. ಐರನ್ ಬೀಮ್ ಐರನ್ ಡೋಮ್‌ಗಿಂತ ಚಿಕ್ಕದು ಮತ್ತು ಹಗುರವೂ ಆಗಿದೆ. ಇದನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸಲು ಹಾಗೂ ಮರೆಮಾಡಲು ಸುಲಭವಾಗುತ್ತದೆ.

    ಇಸ್ರೇಲ್-ಹಮಾಸ್ ಯುದ್ಧ:
    ಹಮಾಸ್ ಅಕ್ಟೋಬರ್ 7 ರಂದು ಶನಿವಾರ ಇಸ್ರೇಲ್ ಮೇಲೆ ದಾಳಿಯನ್ನು ಪ್ರಾರಂಭಿಸಿತು. ಸಾವಿರಾರು ಜನರನ್ನು ಕೊಂದಿದ್ದು ಮಾತ್ರವಲ್ಲದೇ ನೂರಾರು ಇಸ್ರೇಲ್ ನಾಗರಿಕರನ್ನು ಎಳೆದೊಯ್ದು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತು. ಅಂದಿನಿಂದ ದಾಳಿಗೆ ಇಸ್ರೇಲ್‌ನಲ್ಲಿ 1,300 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ಇಸ್ರೇಲ್ ಗಾಜಾ ಮೇಲೆ ಪ್ರತಿ ದಾಳಿ ನಡೆಸಿ 2,750 ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಇಸ್ರೇಲ್‌ನಲ್ಲಿ ಸುಮಾರು 1,500 ಹಮಾಸ್ ಉಗ್ರರು ಕೊಲ್ಲಲ್ಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಇಬ್ಬರು ಪ್ಯಾಲೆಸ್ತೀನ್ ವಿದ್ಯಾರ್ಥಿಗಳ ಮೇಲೆ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಷರತ್ತು ಪಾಲಿಸಿದ್ರೆ ಒತ್ತೆಯಾಳುಗಳ ಬಿಡುಗಡೆ – ಇಸ್ರೇಲ್‌ ಜೊತೆ ಸಂಧಾನಕ್ಕೆ ಮುಂದಾದ ಇರಾನ್‌

    ಷರತ್ತು ಪಾಲಿಸಿದ್ರೆ ಒತ್ತೆಯಾಳುಗಳ ಬಿಡುಗಡೆ – ಇಸ್ರೇಲ್‌ ಜೊತೆ ಸಂಧಾನಕ್ಕೆ ಮುಂದಾದ ಇರಾನ್‌

    ಟೆಹರಾನ್‌: ಇಸ್ರೇಲ್-ಹಮಾಸ್‌ (Israel – Hamas) ಯುದ್ಧ 10ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಇರಾನ್‌ (Iran) ಈಗ ಷರತ್ತು ವಿಧಿಸಿ ಸಂಧಾನ ಮಾಡಲು ಮುಂದಾಗಿದೆ.

    ಗಾಜಾಪಟ್ಟಿ (Gaza Strip) ಮೇಲೆ ಇಸ್ರೇಲ್‌ ನಡೆಸುತ್ತಿರುವ ಏರ್‌ಸ್ಟ್ರೈಕ್‌ (Air Strike) ನಿಲ್ಲಿಸಿದರೆ ಇಸ್ರೇಲ್‌ ಒತ್ತೆಯಾಳುಗಳನ್ನು (Hostages) ಬಿಡುಗಡೆ ಮಾಡಲು ಪ್ರಯತ್ನ ನಡೆಸಲಾಗುವುದು ಎಂದು ಹೇಳಿದೆ.

     

    ಟೆಹರಾನ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ, ಗಾಜಾಪಟ್ಟಿ ಮೇಲೆ ಇಸ್ರೇಲ್ ತನ್ನ ವೈಮಾನಿಕ ದಾಳಿ ನಿಲ್ಲಿಸಿದರೆ ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿರುವ ಇಸ್ರೇಲ್‌ ಪ್ರಜೆಗಳನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಎಂದು ಹೇಳಿದ್ದಾರೆ.  ಇದನ್ನೂ ಓದಿ: 199 ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡ ಹಮಾಸ್

    ಹಮಾಸ್‌ ಉಗ್ರರಿಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಇರಾನ್‌ ಹೇಳುತ್ತಾ ಬಂದಿದೆ. ಆದರೆ ಹಮಾಸ್‌ ಉಗ್ರರಿಗೆ ಶಸ್ತ್ರಾಸ್ತ್ರವನ್ನು ಇರಾನ್‌ ನೀಡಿದೆ ಎಂದು ಇಸ್ರೇಲ್‌ ನೇರವಾಗಿ ಹೇಳುತ್ತಾ ಬಂದಿದೆ.

    ತನ್ನ ಮೇಲೆ 5000 ರಾಕೆಟ್‌ ಉಡಾವಣೆ ಮಾಡಿದ ಬೆನ್ನಲ್ಲೇ ಇಸ್ರೇಲ್‌ ಹಮಾಸ್‌ ಉಗ್ರರನ್ನು ಸಂಪೂರ್ಣ ನಾಶ ಮಾಡಲು ಪಣತೊಟ್ಟಿದೆ. ಗಾಜಾ ಪಟ್ಟಿಯ ಮೇಲೆ ಬಾಂಬ್‌ ದಾಳಿ ನಡೆಸಿ ಉಗ್ರರ ಸಂಹಾರ ಮಾಡುತ್ತಿದೆ. ಯುದ್ಧವನ್ನು ಹಮಾಸ್‌ ಆರಂಭಿಸಿದರೂ ಈ ಯುದ್ಧವನ್ನು ನಾವೇ ನಿಲ್ಲಿಸುತ್ತೇವೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಿಸಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 199 ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡ ಹಮಾಸ್

    199 ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡ ಹಮಾಸ್

    ಟೆಲ್ ಅವಿವ್: ಹಮಾಸ್ ಬಂಡುಕೋರ (Hamas Militants) ಸಂಘಟನೆ 199 ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ಇಸ್ರೇಲಿ (Israel) ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಮಾಧ್ಯಮ ಸಭೆಯಲ್ಲಿ ಹೇಳಿದ್ದಾರೆ.

    ಇದಕ್ಕೂ ಮೊದಲು ಭಾನುವಾರ ಸುದ್ದಿಗೋಷ್ಠಿ ನಡೆಸಿದ್ದ ಅವರು, 155 ಜನರನ್ನು ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ಆರೋಪಿಸಿದ್ದರು. ಅಕ್ಟೋಬರ್ 7ರಂದು ಹಮಾಸ್ ರಾಕೆಟ್ ದಾಳಿ ನಡೆಸಿದ ಬಳಿಕ ಅಕ್ರಮವಾಗಿ ಇಸ್ರೇಲ್ ಗಡಿಯನ್ನು ನುಸುಳಿದೆ. ಇಲ್ಲಿ ಜನರ ಹತ್ಯೆ ಮಾಡುವುದಲ್ಲದೇ ಮಹಿಳೆಯರು ಮಕ್ಕಳು ಸೇರಿದಂತೆ ಇಸ್ರೇಲಿ ಪ್ರಜೆಗಳನ್ನು (Citizens) ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ಡೇನಿಯಲ್ ಹಗರಿ ವಿವರಿಸಿದರು. ಇದನ್ನೂ ಓದಿ: ಮಿಷನ್‌ ಗಗನಯಾನ; ಅ.21 ಕ್ಕೆ ಮೊದಲ ಪರೀಕ್ಷಾರ್ಥ ಉಡಾವಣೆ

    ಯುದ್ಧ ಆರಂಭವಾದ ಬಳಿಕ ಗುಂಡು ಹಾರಿಸಿ, ಇರಿದು ಮತ್ತು ಸುಟ್ಟು 1,400 ಕ್ಕೂ ಜನರನ್ನು ಹಮಾಸ್ ಹತ್ಯೆ ಮಾಡಿದೆ. ಏಳು ದಿನಗಳ ನಿರಂತರ ಬಾಂಬ್ ದಾಳಿಯು ಹಮಾಸ್ ನೆಲೆಗಳನ್ನು ನಾಶಪಡಿಸಿದೆ. ಎರಡೂ ಕಡೆಗಳಲ್ಲಿ ಒಟ್ಟು 3,000 ಜೀವಗಳನ್ನು ಯುದ್ಧ ಬಲಿ ತೆಗೆದುಕೊಂಡಿದೆ. ಇದನ್ನೂ ಓದಿ: ತೆಲಂಗಾಣ ಚುನಾವಣೆ – ‘ಕೈ’ ಪ್ರಣಾಳಿಕೆಯಲ್ಲಿ ವಧುವಿಗೆ 10 ಗ್ರಾಂ ಚಿನ್ನ, ಮಕ್ಕಳಿಗೆ ಉಚಿತ ಇಂಟರ್ನೆಟ್?

    ಯುದ್ಧ ಉಲ್ಬಣಗೊಳ್ಳುತ್ತಿದ್ದಂತೆ ಇಸ್ರೇಲಿ ಸೈನ್ಯವು ಗಾಜಾ ಪಟ್ಟಿಯ (Gaza Stripe) ಉತ್ತರದಲ್ಲಿ 1.1 ಮಿಲಿಯನ್ ಪ್ಯಾಲೆಸ್ತೀನಿಯಾದವರಿಗೆ ಸ್ಥಳಾಂತರಿಸುವ ಆದೇಶಗಳನ್ನು ನೀಡಿತು. ಅದರ 2.4 ಮಿಲಿಯನ್ ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟು ಜನರು ತಮ್ಮ ಸುರಕ್ಷತೆಗಾಗಿ ದಕ್ಷಿಣದ ಕಡೆಗೆ ಚಲಿಸುವಂತೆ ಒತ್ತಾಯಿಸಿದೆ ಎಂದರು. ಇದನ್ನೂ ಓದಿ: ದೆಹಲಿಗೆ ಬರ್ತಿದ್ದಂತೆ ಎಲ್ಲ ಭಾರ ಇಳಿದು ನೆಮ್ಮದಿ ಸಿಕ್ಕಿತು: ಇಸ್ರೇಲ್‌ ಯುದ್ಧ ಭೀಕರತೆ ಬಿಚ್ಚಿಟ್ಟ ಕನ್ನಡಿಗರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರ ಸಂಘರ್ಷಕ್ಕಿಂತ ಇಸ್ರೇಲ್ ಯುದ್ಧದ ಮೇಲೆ ಪ್ರಧಾನಿ ಮೋದಿಗೆ ಆಸಕ್ತಿ: ರಾಹುಲ್ ಗಾಂಧಿ ವಾಗ್ದಾಳಿ

    ಮಣಿಪುರ ಸಂಘರ್ಷಕ್ಕಿಂತ ಇಸ್ರೇಲ್ ಯುದ್ಧದ ಮೇಲೆ ಪ್ರಧಾನಿ ಮೋದಿಗೆ ಆಸಕ್ತಿ: ರಾಹುಲ್ ಗಾಂಧಿ ವಾಗ್ದಾಳಿ

    ಐಜ್ವಾಲ್: ಮಣಿಪುರದಲ್ಲಿ (Manipur) ನಡೆಯುತ್ತಿರುವ ಹಿಂಸಾಚಾರಕ್ಕಿಂತ ಇಸ್ರೇಲ್-ಹಮಾಸ್ ಯುದ್ಧದಲ್ಲಿ (Israel-Hamas War) ಪ್ರಧಾನಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸೋಮವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದರು.

    ಚುನಾವಣಾ ಕಣದಲ್ಲಿರುವ ಮಿಜೋರಾಂನಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮತ್ತು ಭಾರತ ಸರ್ಕಾರ ಇಸ್ರೇಲ್‌ನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಆದರೆ ಮಣಿಪುರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಆಸಕ್ತಿ ಇಲ್ಲ ಎಂಬುದು ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿದರು.

    ಜೂನ್‌ನಲ್ಲಿ ತಮ್ಮ ಮಣಿಪುರ ಭೇಟಿಯನ್ನು ಪ್ರಸ್ತಾಪಿಸಿದ ಅವರು ಮಣಿಪುರದ ಕಲ್ಪನೆಯನ್ನು ಬಿಜೆಪಿ ನಾಶಪಡಿಸಿದೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಉಲ್ಲೇಖಿಸಿ ಮಣಿಪುರ ಈಗ 2 ರಾಜ್ಯವಾಗಿದೆ, ಜನರನ್ನು ಹತ್ಯೆ ಮಾಡಲಾಗಿದೆ, ಮಹಿಳೆಯರಿಗೆ ಕಿರುಕುಳ ನೀಡಲಾಗಿದೆ ಮತ್ತು ಮಕ್ಕಳನ್ನು ಕೊಲ್ಲಲಾಗಿದೆ. ಆದರೆ ಪ್ರಧಾನಿ ಮಾತ್ರ ಅಲ್ಲಿಗೆ ಭೇಟಿ ನೀಡುತ್ತಿಲ್ಲ ಎಂದರು. ಇದನ್ನೂ ಓದಿ: ಹೈಕಮಾಂಡ್ ನಯಾ ಪೈಸೆ ಕೇಳಿಲ್ಲ- ಬಿಜೆಪಿ ಆರೋಪಕ್ಕೆ ಸಿಎಂ ಕಿಡಿ

    ಮೇ ತಿಂಗಳಲ್ಲಿ 2 ಸಮುದಾಯಗಳ ನಡುವೆ ಹಿಂಸಾಚಾರ ಪ್ರಾರಂಭವಾದಾಗಿನಿಂದ ಪ್ರಧಾನಿ ಮೋದಿ ಇನ್ನೂ ಮಣಿಪುರಕ್ಕೆ ಭೇಟಿ ನೀಡದಿರುವುದು ನಾಚಿಕೆಗೇಡಿನ ಸಂಗತಿ. ಮಣಿಪುರದ ಹಿಂಸಾಚಾರವು ಭಾರತದ ಕಲ್ಪನೆಯ ಮೇಲಿನ ಆಕ್ರಮಣ ಮತ್ತು ದೇಶದ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಭಾರತ್ ಜೋಡೊ ಮೂಲಕ ನಾವು ದೇಶವನ್ನು ಒಂದುಗೂಡಿಸುತ್ತಿದ್ದೇವೆ ಎಂದರು.

    ರಾಹುಲ್ ಗಾಂಧಿ ಅವರು ಸೋಮವಾರ ಐಜ್ವಾಲ್‌ನಲ್ಲಿ ಚನ್ಮರಿ ಜಂಕ್ಷನ್‌ನಿಂದ ರಾಜಭವನದವರೆಗೆ ಸುಮಾರು 2 ಕಿ.ಮೀ ಗಳಷ್ಟು ಪಾದಯಾತ್ರೆ ನಡೆಸಿದರು. ಎರಡು ದಿನಗಳ ಭೇಟಿಗಾಗಿ ಅವರು ಮಿಜೋರಾಂನಲ್ಲಿದ್ದಾರೆ. 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಮಿಷನ್‌ ಗಗನಯಾನ; ಅ.21 ಕ್ಕೆ ಮೊದಲ ಪರೀಕ್ಷಾರ್ಥ ಉಡಾವಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 10ನೇ ದಿನಕ್ಕೆ ಕಾಲಿಟ್ಟ ವಾರ್- ಇಸ್ರೇಲ್‌ ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು

    10ನೇ ದಿನಕ್ಕೆ ಕಾಲಿಟ್ಟ ವಾರ್- ಇಸ್ರೇಲ್‌ ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು

    ಟೆಲ್ ಅವಿವ್: ಇಸ್ರೇಲ್-ಪ್ಯಾಲೆಸ್ತೀನ್ (Israel-Palestine) ನಡುವಿನ ಘನಘೋರ ಯುದ್ಧ (War) 10ನೇ ದಿನಕ್ಕೆ ಕಾಲಿಟ್ಟಿದೆ. ನೆಲದ ದಾಳಿಗೆ ಇಸ್ರೇಲ್ ಭೂ ಸೇನೆ ಸಿದ್ಧವಾಗಿದ್ದು, ಸರ್ಕಾರದ ಆದೇಶಕ್ಕೆ ಇಸ್ರೇಲ್ ಸೈನಿಕರು ಕಾದುಕುಳಿತಿದ್ದಾರೆ. ಗಾಜಾ ಪಟ್ಟಿ (Gaza Strip) ಬಳಿ ನೂರಾರು ಟ್ಯಾಂಕರ್, ಲಕ್ಷಾಂತರ ಸೈನಿಕರು ಜಮಾವಣೆಗೊಂಡಿದ್ದಾರೆ. ಗಾಜಾದ ಉತ್ತರದಿಂದ ದಕ್ಷಿಣಕ್ಕೆ ತೆರಳಲು ಜನರಿಗೆ ಇಸ್ರೇಲ್ ಸೇನೆ ಸೂಚಿಸಿದೆ. ವಿದ್ಯುತ್, ನೀರು ಸೇರಿ ಎಲ್ಲ ಅಗತ್ಯ ವಸ್ತುಗಳ ಪೂರೈಕೆ ನಿಲ್ಲಿಸಲಾಗಿದ್ದು, ಅನ್ನ-ನೀರಿಲ್ಲದೆ ಹಮಾಸ್ ಸೇನೆ ಪರದಾಡುತ್ತಿದೆ.

    ಇಸ್ರೇಲ್-ಪ್ಯಾಲೆಸ್ತೀನ್ ರಣಭೀಕರ ಯುದ್ಧಕ್ಕೆ 20ಕ್ಕೂ ಹೆಚ್ಚು ಅಮೆರಿಕದ ಪ್ರಜೆಗಳು ಬಲಿಯಾಗಿದ್ದಾರೆ. ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳಲು ಇಸ್ರೇಲ್‌ಗೆ ವಿಶೇಷ ಹಡಗನ್ನು ಅಮೆರಿಕ ಕಳುಹಿಸಿದೆ. ನೂರಾರು ಅಮೆರಿಕನ್ನರನ್ನು ಹೊತ್ತ ಮೊದಲ ವಿಶೇಷ ಹಡಗು ಅಮೆರಿಕದತ್ತ ಪಯಣ ಬೆಳೆಸಿದೆ. ಮತ್ತೊಂದೆಡೆ ಗಾಜಾಪಟ್ಟಿಯ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್ ಮುಂದುವರೆದಿದೆ. ಹೆಣಗಳ ಅಂತ್ಯಕ್ರಿಯೆಗೂ ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಗಿದೆ. ಐಸ್‌ಕ್ರೀಮ್ ಟ್ರಕ್‌ಗಳಲ್ಲಿ ಮೃತ ದೇಹಗಳನ್ನು ಸಂಗ್ರಹಿಸಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಹಮಾಸ್ ವಿರುದ್ಧ ಇಸ್ರೇಲ್ ಮಿಲಿಟರಿ ಕಾರ್ಯಚರಣೆ ಮುಂದುವರೆದಿದೆ. ಗಡಿಯಲ್ಲಿ ಮಾರಣಹೋಮ ನಡೆಸುತ್ತಿದ್ದ 330ಕ್ಕೂ ಹೆಚ್ಚು ಬಂಡುಕೋರರನ್ನು ಇಸ್ರೇಲ್ ಸೈನಿಕರು ಬಂಧಿಸಿದ್ದಾರೆ. ಬಂಧಿತ ಬಂಡುಕೋರರಿಂದ ಭಾರೀ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ರೈಫಲ್, ಜೀವಂತ ಗುಂಡುಗಳು ವಶಕ್ಕೆ ಪಡೆದ ಫೋಟೋಗಳನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಇತ್ತ ಲೆಬನಾನಿನ ಗಡಿಯಿಂದ ಇಸ್ಲಾಮಿಕ್ ಗುಂಪುಗಳು ರಾಕೆಟ್ ಉಡಾಯಿಸಿದ್ದು, ವಾಯುವ್ಯ ಇಸ್ರೇಲ್‌ನಲ್ಲಿ ಹಲವರಿಗೆ ಗಂಭೀರ ಗಾಯವಾಗಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಸಾವು

    ಪ್ಯಾಲೆಸ್ತೀನ್ ನಿರ್ನಾಮಕ್ಕೆ ಇಸ್ರೇಲ್ ಪಣತೊಟ್ಟಿದೆ. ಇಸ್ರೇಲ್ ಸೈನಿಕರು ಗಾಜಾಪಟ್ಟಿ ಗಡಿಯಲ್ಲಿ ಹಮಾಸ್ ಉಗ್ರರ ಹೆಡೆಮುರಿ ಕಟ್ಟುತ್ತಿದ್ದಾರೆ. ಮತ್ತೊಂದುಕಡೆ ದಕ್ಷಿಣ ಗಾಜಾಕ್ಕೆ ಕುಡಿಯುವ ನೀರನ್ನು ನಿಲ್ಲಿಸಿದ್ದ ಇಸ್ರೇಲ್ ಸರ್ಕಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೂಚನೆ ಮೇರೆಗೆ ಮರಳಿ ನೀರು ಪೂರೈಕೆ ಮಾಡುತ್ತಿದೆ. ಉತ್ತರ ಗಾಜಾ ಖಾಲಿ ಮಾಡುವಂತೆ ಇಸ್ರೇಲ್ ಸೂಚಿಸಿದ್ದು, ಈ ಹಿನ್ನೆಲೆ ದಕ್ಷಿಣ ಇಸ್ರೇಲ್‌ಗೆ ಹಂತ ಹಂತವಾಗಿ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳನ್ನು ಹುಡುಕಿಕೊಂಡು ಜನರು ಹೋಗುವಂತೆ ಪ್ಲ್ಯಾನ್ ಮಾಡುತ್ತಿದೆ. ಇದನ್ನೂ ಓದಿ: ಪಾಕ್ ಕ್ರಿಕೆಟಿಗರಿಗೆ ಜೈ ಶ್ರೀರಾಮ್‌ ಘೋಷಣೆ: ಉದಯನಿಧಿ ಆಕ್ಷೇಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್-ಹಮಾಸ್ ಯುದ್ಧದಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಸಾವು

    ಇಸ್ರೇಲ್-ಹಮಾಸ್ ಯುದ್ಧದಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಸಾವು

    ಟೆಲ್ ಅವೀವ್: ಹಮಾಸ್ (Hamas) ಉಗ್ರರ ದಾಳಿಯಲ್ಲಿ ಭಾರತೀಯ (India) ಮೂಲದ ಕನಿಷ್ಠ ಇಬ್ಬರು ಇಸ್ರೇಲಿ (Israel) ಮಹಿಳಾ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

    ಅಶ್ಡೋಡ್‍ನ ಹೋಮ್ ಫ್ರಂಟ್ ಕಮಾಂಡ್‍ನಲ್ಲಿ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಓರ್ ಮೋಸೆಸ್ ಮತ್ತು ಪೊಲೀಸ್ ಸೆಂಟ್ರಲ್ ಡಿಸ್ಟ್ರಿಕ್ಟ್‍ನ ಬಾರ್ಡರ್ ಅಧಿಕಾರಿ ಕಿಮ್ ಡೋಕ್ರಾಕರ್ ಅವರು ಅಕ್ಟೋಬರ್ 7 ರಂದು ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇವರಿಬ್ಬರೂ ಯುದ್ಧದಲ್ಲಿ ಕರ್ತವ್ಯದ ವೇಳೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಯುದ್ಧ ಪೀಡಿತ ಇಸ್ರೇಲ್‍ನಿಂದ 197 ಜನರನ್ನು ಹೊತ್ತು ದೆಹಲಿಯೆಡೆಗೆ ಹಾರಿದ 3ನೇ ವಿಮಾನ

    ಇದುವರೆಗೆ 286 ಸೇನಾ ಯೋಧರು ಮತ್ತು 51 ಪೊಲೀಸ್ ಅಧಿಕಾರಿಗಳು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಸತ್ತವರ, ಕಾಣೆಯಾದ ಹಾಗೂ ಅಪಹರಣಕ್ಕೊಳಗಾದವರ ಹುಡುಕಾಟವನ್ನು ಮುಂದುವರೆಸುತ್ತಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಭಾನುವಾರ ತಿಳಿಸಿದೆ. ಯುದ್ಧದಲ್ಲಿ 2,670 ಪ್ಯಾಲೇಸ್ಟಿನಿಯನ್ನರು ಸಾವಿಗೀಡಾಗಿದ್ದಾರೆ. 9,600 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಅಖಾಡಕ್ಕಿಳಿದ ಇಸ್ರೇಲ್ ಪ್ರಧಾನಿ – ಹಮಾಸ್ ಬಂಡುಕೋರರಿಗೆ ನೇರ ಎಚ್ಚರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿಗೆ ಬರ್ತಿದ್ದಂತೆ ಎಲ್ಲ ಭಾರ ಇಳಿದು ನೆಮ್ಮದಿ ಸಿಕ್ಕಿತು: ಇಸ್ರೇಲ್‌ ಯುದ್ಧ ಭೀಕರತೆ ಬಿಚ್ಚಿಟ್ಟ ಕನ್ನಡಿಗರು

    ದೆಹಲಿಗೆ ಬರ್ತಿದ್ದಂತೆ ಎಲ್ಲ ಭಾರ ಇಳಿದು ನೆಮ್ಮದಿ ಸಿಕ್ಕಿತು: ಇಸ್ರೇಲ್‌ ಯುದ್ಧ ಭೀಕರತೆ ಬಿಚ್ಚಿಟ್ಟ ಕನ್ನಡಿಗರು

    ನವದೆಹಲಿ: ಆಪರೇಷನ್ ಅಜಯ್ ಮಿಷನ್ (Operation Ajay) ಮುಂದುವರಿದ್ದು, ಇಸ್ರೇಲ್‌ನಲ್ಲಿ (Israel) ಸಿಲುಕಿರುವ ಭಾರತೀಯರನ್ನು ಹೊತ್ತ 4ನೇ ವಿಮಾನ ಭಾರತಕ್ಕೆ ಬಂದಿಳಿದಿದೆ. 274 ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ.

    ಎಲ್ಲರನ್ನೂ ಕೇಂದ್ರ ಸಚಿವ ವಿ.ಕೆ. ಸಿಂಗ್ ಸ್ವಾಗತಿಸಿದ್ದಾರೆ. ಈ ಪೈಕಿ 8 ಮಂದಿ ಕನ್ನಡಿಗರು ತಮ್ಮ ಮನೆ ಸೇರಿಕೊಂಡಿದ್ದಾರೆ. ‘ಪಬ್ಲಿಕ್ ಟಿವಿ’ ಜೊತೆ ಇಸ್ರೇಲ್‌ನಿಂದ ಆಗಮಿಸಿದ ಕನ್ನಡಿಗರು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಅಖಾಡಕ್ಕಿಳಿದ ಇಸ್ರೇಲ್ ಪ್ರಧಾನಿ – ಹಮಾಸ್ ಬಂಡುಕೋರರಿಗೆ ನೇರ ಎಚ್ಚರಿಕೆ

    ನಂದಾ ಹಾಗೂ ರೇಣುಕಾ ದಂಪತಿ ಮಾತನಾಡಿ, ದೆಹಲಿ ಬರ್ತಿದ್ದಂತೆ ಎಲ್ಲ ಭಾರ ಇಳಿದು ಮಾನಸಿಕ ನೆಮ್ಮದಿ ಸಿಕ್ಕಿತು. ಇಸ್ರೇಲ್‌ನಿಂದ ಬಂದಿದ್ದು, ನಮಗೆ ಯುದ್ಧದ ಅನುಭವೇ ಆಯ್ತು. ಈಗಲೂ ಸೈರನ್ ಸೌಂಡ್, ಕಟ್ಟಡ ಅಲುಗಾಡಿದಂತೆ ಭಾಸವಾಗುತ್ತಿದೆ ಎಂದು ಯುದ್ಧದ ಭೀಕರತೆ ಬಗ್ಗೆ ಕನ್ನಡಿಗರು ಬಿಚ್ಚಿಟ್ಟಿದ್ದಾರೆ.

    ಅತ್ತ, ಹುಬ್ಬಳ್ಳಿಗೆ ಬಂದ ಡಾ. ಅಖಿಲೇಶ್ ಕಾರಗದ್ದೆ-ಕೃತಿ ದಂಪತಿ ಕನ್ನಡಿಗರಿಗೆ ಜಿಲ್ಲಾಡಳಿತ ಸ್ವಾಗತ ಕೋರಿದೆ. ಲೇಸರ್ ಟೆಕ್ನಾಲಜಿ ಪೋಸ್ಟ್ ಡಾಕ್ಟರಲ್ ಫೆಲೋ ವ್ಯಾಸಂಗಕ್ಕಾಗಿ ಕಳೆದ ಜೂನ್ ವೇಳೆ ದಂಪತಿ ಇಸ್ರೇಲ್‌ಗೆ ತೆರಳಿತ್ತು. ಇದನ್ನೂ ಓದಿ: ಯುದ್ಧ ಪೀಡಿತ ಇಸ್ರೇಲ್‍ನಿಂದ 197 ಜನರನ್ನು ಹೊತ್ತು ದೆಹಲಿಯೆಡೆಗೆ ಹಾರಿದ 3ನೇ ವಿಮಾನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಖಾಡಕ್ಕಿಳಿದ ಇಸ್ರೇಲ್ ಪ್ರಧಾನಿ – ಹಮಾಸ್ ಬಂಡುಕೋರರಿಗೆ ನೇರ ಎಚ್ಚರಿಕೆ

    ಅಖಾಡಕ್ಕಿಳಿದ ಇಸ್ರೇಲ್ ಪ್ರಧಾನಿ – ಹಮಾಸ್ ಬಂಡುಕೋರರಿಗೆ ನೇರ ಎಚ್ಚರಿಕೆ

    ಟೆಲ್ ಅವಿವ್: ಪ್ಯಾಲೆಸ್ತೀನ್ (Palestine) ಮತ್ತು ಇಸ್ರೇಲ್ (Israel) ನಡುವೆ ಯುದ್ಧ ಮುಂದುವರೆದಿದ್ದು, 9ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಸ್ವತಃ ಯುದ್ಧಭೂಮಿಗಿಳಿದಿದ್ದು, ಹಮಾಸ್ ಬಂಡುಕೋರರಿಗೆ (Hamas Militants) ನೇರ ಎಚ್ಚರಿಕೆಯನ್ನು ನೀಡಿದ್ದಾರೆ.

    ಗಾಜಾ ಪಟ್ಟಿಯಲ್ಲಿರುವ (Gaza Stripe) ಇಸ್ರೇಲ್ ರಕ್ಷಣಾ ಪಡೆಗಳನ್ನು ಖುದ್ದು ಭೇಟಿ ಮಾಡಿದ ನೆತನ್ಯಾಹು ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಿದ್ದಾರೆ. ಐಡಿಎಫ್ (IDF) ಸಿಬ್ಬಂದಿಯೊಂದಿಗಿನ ಸಂವಾದದ ದೃಶ್ಯಗಳನ್ನು ಇಸ್ರೇಲ್ ಪ್ರಧಾನಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯುದ್ಧ ಪೀಡಿತ ಇಸ್ರೇಲ್‍ನಿಂದ 197 ಜನರನ್ನು ಹೊತ್ತು ದೆಹಲಿಯೆಡೆಗೆ ಹಾರಿದ 3ನೇ ವಿಮಾನ

    ಆಟ ಇನ್ನು ಮುಗಿದಿಲ್ಲ, ಅಸಲಿ ಆಟ ಇನ್ನು ಶುರು ಎನ್ನುವ ಮೂಲಕ ಸೈನಿಕರ ಜೊತೆಗಿನ ಸಂವಾದದಲ್ಲಿ ಹಮಾಸ್ ಬಂಡುಕೋರರಿಗೆ ನೆತನ್ಯಾಹು ಬಿಸಿ ಮುಟ್ಟಿಸಿದ್ದಾರೆ. ನಾವೆಲ್ಲರೂ ಸಿದ್ಧ ಎಂದು ತೀವ್ರ ಪ್ರತಿದಾಳಿಯ ಸಂದೇಶ ನೀಡಿದ್ದಾರೆ.

    ಗಾಜಾಪಟ್ಟಿಯಲ್ಲಿ ಇಸ್ರೇಲ್ ಏರ್‌ಸ್ಟ್ರೈಕ್ (Air Strike) ಮುಂದುವರೆದಿದ್ದು, ಬಾಂಬ್ ದಾಳಿಗೆ ಹಲವು ಸ್ಥಳಗಳು ಧ್ವಂಸವಾಗಿದೆ. ಜಬಾಲಿಯಾ, ಬೀಚ್ ಕ್ಯಾಂಪ್‌ನಲ್ಲಿ ಶನಿವಾರ ಇಸ್ರೇಲ್ ದಾಳಿ ನಡೆಸಿದ್ದು, ಹತ್ತಾರು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ನೂರಾರು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಹಮಾಸ್‌ನ ವೈಮಾನಿಕ ಶ್ರೇಣಿಯ ಮುಖ್ಯಸ್ಥ ಅಬು ಮುರಾದ್ ಹತ್ಯೆ ಮಾಡಿದ ಇಸ್ರೇಲ್ ಭದ್ರತಾ ಪಡೆ

    ಇಸ್ರೇಲ್ ಹಮಾಸ್ ಉಗ್ರರ ವಿರುದ್ಧ ಪ್ರತಿಕಾರದ ಶಪಥ ಮಾಡಿದೆ. ಉತ್ತರ ಗಾಜಾದಲ್ಲಿ ವಾಯುಸೇನೆಯಿಂದ ಏರ್‌ಸ್ಟ್ರೈಕ್ ನಡೆದ ಪರಿಣಾಮ ಅಮಾಯಕ ಜೀವಗಳು ಬಲಿಯಾಗಿವೆ. ದಾಳಿಗೂ ಮುನ್ನ ಜನರು ಸ್ಥಳಾಂತರವಾಗುವಂತೆ ಸೂಚಿಸಿದ್ದು, ಸೇನೆ ಸ್ಥಳಾಂತರದ ಅವಧಿ ಮಧ್ಯೆ ಹಲವು ದಾಳಿ ನಡೆಸಿದೆ. ಮಕ್ಕಳ ಮೇಲೆ ಹಮಾಸ್ ವಿಕೃತಿ ಮೆರೆಯುತ್ತಿರುವ ವಿಡಿಯೋವನ್ನು ಇಸ್ರೇಲ್ ಭದ್ರತಾಪಡೆ ಹಂಚಿಕೊಂಡಿದ್ದು, ಇವರೇ ನಾವು ಸೋಲಿಸಲು ಹೊರಟಿರುವ ಭಯೋತ್ಪಾದಕರು ಎಂದು ಇಸ್ರೇಲ್ ಸೇನೆ ಹೇಳಿದೆ. ಗಾಯಗೊಂಡ ಮಕ್ಕಳನ್ನು ಒತ್ತೆಯಾಳಾಗಿಟ್ಟುಕೊಂಡ ಹಮಾಸ್ ವಿರುದ್ಧ ಪ್ರತಿಕಾರವನ್ನು ತೀರಿಸಿಕೊಳ್ಳಲು ಇಸ್ರೇಲ್ ಶಪಥ ಮಾಡಿದೆ.

    ಭೂ ಆಯ್ತು, ವಾಯುವಾಯ್ತು. ಇದೀಗ ಸಮುದ್ರ ಮಾರ್ಗದಲ್ಲೂ ಹಮಾಸ್ ಮತ್ತು ಇಸ್ರೇಲ್ ಮುಖಾಮುಖಿಯಾಗಿದ್ದು, ಇಸ್ರೇಲ್ ಗಡಿ ಪ್ರವೇಶಕ್ಕೆ ಪ್ರಯತ್ನಿಸಿದ ಹಮಾಸ್ ಮೇಲೆ ಇಸ್ರೇಲ್ ಗುಂಡಿನ ದಾಳಿ ನಡೆಸಿದೆ. ಸಮುದ್ರದಲ್ಲಿ ಹಮಾಸ್ ಮತ್ತು ಇಸ್ರೇಲ್ ನೇರಾನೇರಾ ಕಾದಾಡಿದ್ದು, ಭೀಕರ ಕಾಳಗದ ವಿಡಿಯೋ ಮೈ ಜುಮ್ ಎನ್ನಿಸುತ್ತದೆ. ಸಮುದ್ರ ಮಾರ್ಗದ ಮೂಲಕ ದಾಳಿಗೆ ಹಮಾಸ್ ಯತ್ನಿಸಿದ್ದು, ಹಮಾಸ್ ದೋಣಿಯನ್ನೇ ಇಸ್ರೇಲ್ ನಾಶ ಮಾಡಿದೆ. ಇದನ್ನೂ ಓದಿ: ಹಮಾಸ್ ಬಂಡುಕೋರರು ಶುದ್ಧ ದುಷ್ಠರು: ಬೈಡನ್ ಕೆಂಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುದ್ಧ ಪೀಡಿತ ಇಸ್ರೇಲ್‍ನಿಂದ 197 ಜನರನ್ನು ಹೊತ್ತು ದೆಹಲಿಯೆಡೆಗೆ ಹಾರಿದ 3ನೇ ವಿಮಾನ

    ಯುದ್ಧ ಪೀಡಿತ ಇಸ್ರೇಲ್‍ನಿಂದ 197 ಜನರನ್ನು ಹೊತ್ತು ದೆಹಲಿಯೆಡೆಗೆ ಹಾರಿದ 3ನೇ ವಿಮಾನ

    ಟೆಲ್ ಅವೀವ್: ಯುದ್ಧ ಪೀಡಿತ ಇಸ್ರೇಲ್‍ನಿಂದ (Israel) ಭಾರತೀಯರನ್ನು (India) ಹೊತ್ತ ಮೂರನೇ ವಿಮಾನ ನವದೆಹಲಿಗೆ ಹೊರಟಿದೆ ಎಂದು ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ.

    197 ಜನರನ್ನು ವಿಮಾನ ಹೊರಟಿದೆ ಎಂದು ಇಸ್ರೇಲ್‍ನಲ್ಲಿರುವ ರಾಯಭಾರ ಕಚೇರಿ ಮಾಹಿತಿ ನೀಡಿದೆ. `ಆಪರೇಷನ್ ಅಜಯ್’ (Operation Ajay) ಅಡಿಯಲ್ಲಿ ಇಸ್ರೇಲ್‍ನಿಂದ ಭಾರತೀಯರನ್ನು ಕರೆತರುವ ಕಾರ್ಯ ನಡೆಯುತ್ತಿದೆ. ಇಂದು ಬೆಳಗ್ಗೆ ಇಸ್ರೇಲ್‍ನ ಟೆಲ್ ಅವೀವ್‍ನಿಂದ 235 ಭಾರತೀಯ ಪ್ರಜೆಗಳನ್ನು ಹೊತ್ತ ಎರಡನೇ ವಿಮಾನವು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಇದಕ್ಕೂ ಮೊದಲು ಬಂದಿದ್ದ ವಮಾನದಲ್ಲಿ 230 ಜನ ಬಂದಿದ್ದರು.

    ಇಸ್ರೇಲ್‍ನಲ್ಲಿರುವ ಸುಮಾರು 18,000 ಭಾರತೀಯರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಅಜಯ್‍ನ್ನು ಪ್ರಾರಂಭಿಸಿದೆ. ಗುರುವಾರದಿಂದ ಭಾರತೀಯರ ನೋಂದಣಿ ಆರಂಭವಾಗಿದೆ. ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾರತೀಯ ಕಂಪನಿಗಳಿಗೆ ನೆರವು ನೀಡುತ್ತಿದೆ. ಸಹಾಯದ ಅಗತ್ಯವಿರುವ ಭಾರತೀಯರಿಗೆ ಸಹಾಯವಾಣಿಯನ್ನು ಸ್ಥಾಪಿಸಿದೆ…

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಮಾಸ್‌ನ ವೈಮಾನಿಕ ಶ್ರೇಣಿಯ ಮುಖ್ಯಸ್ಥ ಅಬು ಮುರಾದ್ ಹತ್ಯೆ ಮಾಡಿದ ಇಸ್ರೇಲ್ ಭದ್ರತಾ ಪಡೆ

    ಹಮಾಸ್‌ನ ವೈಮಾನಿಕ ಶ್ರೇಣಿಯ ಮುಖ್ಯಸ್ಥ ಅಬು ಮುರಾದ್ ಹತ್ಯೆ ಮಾಡಿದ ಇಸ್ರೇಲ್ ಭದ್ರತಾ ಪಡೆ

    ನವದೆಹಲಿ/ಟೆಲ್ ಅವಿವ್: ಹಮಾಸ್ ಬಂಡುಕೋರರ  (Hamas Militants) ಗುಂಪಿನ ಹಿರಿಯ ಸದಸ್ಯ, ಹಮಾಸ್‌ನ ವೈಮಾನಿಕ ಶ್ರೇಣಿಯ ಮುಖ್ಯಸ್ಥ (Senior Military Commander) ಅಬು ಮುರಾದ್‌ನನ್ನು (Abu Murad)  ಇಸ್ರೇಲ್ (Israel) ಭದ್ರತಾ ಪಡೆಗಳು ಹತ್ಯೆ ಮಾಡಿವೆ.

    ಶನಿವಾರ ಬೆಳಗ್ಗಿನ ಜಾವ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ವಾಯುಸೇನೆ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ (Air Strike) ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಪಟ್ಟಿಯಲ್ಲಿ ರಾತ್ರಿಯಿಡೀ ವೈಮಾನಿಕ ದಾಳಿ ನಡೆಸಿತು. ದಾಳಿಯು ಭಯೋತ್ಪಾದಕ ಗುಂಪು ತನ್ನ ವೈಮಾನಿಕ ಚಟುವಟಿಕೆಯನ್ನು ನಿರ್ವಹಿಸುತ್ತಿದ್ದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ದಾಳಿಯಲ್ಲಿ ಅಬು ಮುರಾದ್‌ನನ್ನು ಹತ್ಯೆಗೈಯಲಾಗಿದೆ ಎಂದು ವರದಿ ಮಾಡಿದೆ. ಇದನ್ನೂ ಓದಿ: ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ – ಬಸ್‌ಗೆ ಸಿಲುಕಿ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು

    ಅಬು ಮುರಾದ್ ಕಳೆದ ಶನಿವಾರ ನಡೆದ ರಾಕೆಟ್ ದಾಳಿ ಮತ್ತು ಇಸ್ರೇಲಿ ಪ್ರಜೆಗಳ ಹತ್ಯಾಕಾಂಡದ ಸಮಯದಲ್ಲಿ ಬಂಡುಕೋರರನ್ನು ನಿರ್ದೇಶಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಅಕ್ಟೋಬರ್ 7ರಂದು ಇಸ್ರೇಲ್‌ಗೆ ಒಳನುಸುಳುವಿಕೆಗೆ ಕಾರಣವಾದ ಹಮಾಸ್‌ನ ಕಮಾಂಡೋ ಪಡೆಗಳಿಗೆ ಸೇರಿದ ಹತ್ತಾರು ಸೈಟ್‌ಗಳನ್ನು ಪ್ರತ್ಯೇಕ ದಾಳಿಗಳಲ್ಲಿ ಹೊಡೆದಿದೆ ಎಂದು ಐಡಿಎಫ್ ಹೇಳಿದೆ. ಇದನ್ನೂ ಓದಿ: ಬೃಹತ್ ದಾಳಿಯ ಮುನ್ಸೂಚನೆ ನೀಡಿದ ಇಸ್ರೇಲ್

    ಹಮಾಸ್ ಶನಿವಾರ ಇಸ್ರೇಲ್ ಮೇಲೆ ದಾಳಿ ಅರಂಭಿಸಿದ ಬಳಿಕ ದಶಕಗಳಲ್ಲೇ ಸಂಘರ್ಷದ ಅತಿದೊಡ್ಡ ಸಂಘರ್ಷ ಉಲ್ಬಣವಾಗಿದೆ. ದಾಳಿಯಲ್ಲಿ ಇಸ್ರೇಲ್‌ನಲ್ಲಿ 1,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಪ್ರತಿ-ವೈಮಾನಿಕ ದಾಳಿಯಲ್ಲಿ ಗಾಜಾದಲ್ಲಿ 1,530ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಇಸ್ರೇಲ್‌ನಲ್ಲಿ ಸುಮಾರು 1,500 ಹಮಾಸ್ ಉಗ್ರಗಾಮಿಗಳು ಕೊಲ್ಲಲ್ಪಟ್ಟರು ಎಂದು ಇಸ್ರೇಲ್ ಹೇಳಿಕೊಂಡಿದೆ. ಇದನ್ನೂ ಓದಿ: ನಿಮ್ಮ ಜೀವ ಉಳಿಸಿಕೊಳ್ಳಲು ದಕ್ಷಿಣಕ್ಕೆ ತೆರಳಿ- ಗಾಝಾ ನಿವಾಸಿಗಳಿಗೆ ಇಸ್ರೇಲ್ ಮಹತ್ವದ ಸೂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]